Homeಮುಖಪುಟಭಯೋತ್ಪಾದನೆಯ ಹಿಂದಿರುವುದು ಧರ್ಮವೋ... ತೈಲವೋ....? - ರಾಂ‌ ಪುನಿಯಾನಿ ಭಾಷಣ

ಭಯೋತ್ಪಾದನೆಯ ಹಿಂದಿರುವುದು ಧರ್ಮವೋ… ತೈಲವೋ….? – ರಾಂ‌ ಪುನಿಯಾನಿ ಭಾಷಣ

ಜಗತ್ತಿನಲ್ಲಿ ಭಯೋತ್ಪಾದನೆಯಿಂದಾಗಿ ಅತೀ ಹೆಚ್ಚು ಸಾಯುತ್ತಿರುವುದು ಹಿಂದೂಗಳೋ, ಕ್ರೈಸ್ತರೋ ಅಲ್ಲ. ಬದಲಾಗಿ ಮುಸಲ್ಮಾನರೇ ಆಗಿದ್ದಾರೆ.

- Advertisement -
- Advertisement -

ಮೂಲ : ರಾಂ‌ ಪುನಿಯಾನಿ
ಕನ್ನಡಕ್ಕೆ : ಇಸ್ಮತ್ ಪಜೀರ್

ಒಂದು ವೇಳೆ ಇಸ್ಲಾಮಿನ ಕಾರಣಕ್ಕೆ ಭಯೋತ್ಪಾದನಾ ಕೃತ್ಯಗಳಾಗುತ್ತಿದ್ದರೆ ಯಾವ ದೇಶದಲ್ಲಿ ಅತೀ ಹೆಚ್ಚು ಭಯೋತ್ಪಾದಕರಿರಬೇಕಿತ್ತು…?
ಇಂಡೋನೇಶ್ಯಾದಲ್ಲಿರಬೇಕಿತ್ತು. ಯಾಕೆಂದರೆ ಜಗತ್ತಿನಲ್ಲಿ ಅತೀ ಹೆಚ್ಚು ಮುಸ್ಲಿಮರಿರುವ ರಾಷ್ಟ್ರ ಇಂಡೋನೇಶ್ಯಾ.. ಆದರೆ ಅಲ್ಲಿಂದ ಯಾವುದೇ ಭಯೋತ್ಪಾದಕ ಚಟುವಟಿಕೆಗಳು ವರದಿಯಾಗುತ್ತಿಲ್ಲ. ಆದರೆ ಇಸ್ಲಾಮನ್ನು ಭಯೋತ್ಪಾದನೆಯೊಂದಿಗೆ ದುರುದ್ದೇಶಪೂರ್ವಕವಾಗಿ ಚಿತ್ರಿಸಲಾಗುತ್ತಿದೆ. ಜಗತ್ತಿನಲ್ಲಿ ಭಯೋತ್ಪಾದನೆಯಿಂದಾಗಿ ಅತೀ ಹೆಚ್ಚು ಸಾಯುತ್ತಿರುವುದು ಹಿಂದೂಗಳೋ, ಕ್ರೈಸ್ತರೋ ಅಲ್ಲ. ಬದಲಾಗಿ ಸ್ವತಃ ಮುಸಲ್ಮಾನರೇ ಆಗಿದ್ದಾರೆ.

ಜಗತ್ತಿನ ಅತೀ ಹೆಚ್ಚು ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಿರುವುದು ಪಶ್ಚಿಮ ಏಷ್ಯಾದಲ್ಲಿ. ಆ ಪ್ರದೇಶದ ಮೂರು ಮುಖ್ಯ ವಿಚಾರಗಳನ್ನು ತಮ್ಮ ಮುಂದಿಡಬಯಸುತ್ತೇ‌ನೆ.

1. ಪಶ್ಚಿಮ ಏಷ್ಯಾದಲ್ಲಿ ಮುಸ್ಲಿಮರು ಹೆಚ್ಚಿದ್ದಾರೆ.
2. ಪಶ್ಚಿಮ ಏಷ್ಯಾದಲ್ಲಿ ಅತೀ ಹೆಚ್ಚು ಭಯೋತ್ಪಾದನಾ ಕೃತ್ಯಗಳು ನಡೆಯುತ್ತಿರುತ್ತವೆ.
3. ಇದೇ ಪಶ್ಚಿಮ ಏಷ್ಯಾದಲ್ಲಿ ಇಂಧನದ ಖಜಾನೆಯೇ ಇದೆ.
ಈಗ ಹೇಳಿ ಭಯೋತ್ಪಾದನೆ ಯಾವ ಕಾರಣಕ್ಕೆ ನಡೆಯುತ್ತಿದೆ.. ಇಂಧನದ ಕಾರಣಕ್ಕೋ… ಇಸ್ಲಾಮಿನ ಕಾರಣಕ್ಕೋ..?

ಇಂಧನದ ಕಾರಣಕ್ಕಾಗಿ ನಡೆಯುತ್ತಿದೆ ಎನ್ನುವುದು ಸ್ಪಷ್ಟ. ಈ ಇಂಧನದ
ಯಜಮಾನಿಕೆಯನ್ನು ಯಾವ ಶಕ್ತಿ ಪಡೆಯ ಬಯಸುತ್ತದೋ ಆ ಶಕ್ತಿ ವಾಷಿಂಗ್ಟನ್‌ನಲ್ಲಿ ಕೂತು ಇಡೀ ಜಗತ್ತನ್ನು ತನ್ನ ಕಿರುಬೆರಳಲ್ಲಿ‌ ಆಟವಾಡಿಸುತ್ತದೆ. ಒಟ್ಟಿನಲ್ಲಿ ದುಷ್ಕೃತ್ಯಗಳನ್ನು ಎಸಗುವವರು ಯಾರೋ… ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲ್ಪಡುವವರು ಇನ್ಯಾರೋ…

ಇದೆಲ್ಲಾ ಹೇಗೆ ಮತ್ತು ಎಲ್ಲಿಂದ ಪ್ರಾರಂಭವಾಗಿದೆ ಎನ್ನುವುದನ್ನೂ ನಾವು ಅರ್ಥೈಸಲೇಬೇಕಾಗುತ್ತದೆ.

ಮೇಲ್ನೋಟಕ್ಕೆ ಈ ಚಟುವಟಿಕೆಗಳೆಲ್ಲಾ ಅಲ್ ಖಾಯಿದಾದ ಮದ್ರಸಾಗಳಿಂದ ಆರಂಭವಾಗುತ್ತದೆ. ಅಲ್ ಖಾಯಿದಾದ ಮದ್ರಸಾಗಳಲ್ಲಿ ಭಯೋತ್ಪಾದನಾ ತರಭೇತಿ ನೀಡಲಾಗುತ್ತದೆ. ಆದರೆ ಇದರ ಹಿಂದಿರುವ ಶಕ್ತಿ ಇದೇ ಅಮೆರಿಕಾ. ಇದಕ್ಕಾಗಿ ಅಮೆರಿಕಾ ಎಂಟು ಸಾವಿರ ಮಿಲಿಯನ್ ಡಾಲರ್ ದುಡ್ಡು ಮತ್ತು ಏಳು ಸಾವಿರ ಟನ್ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿತು. ದುಡ್ಡು ಮತ್ತು ಶಸ್ತ್ರಾಸ್ತ್ರ ಸರಬರಾಜು ಮಾಡಿ ಅವರ ಬ್ರೈನ್ ವಾಶ್ ಮಾಡಲಾಯಿತು. ಅದಕ್ಕಾಗಿ ಅವರು ಇಸ್ಲಾಮಿನ ಎರಡು ಮಹತ್ವಪೂರ್ಣ ಶಬ್ಧಗಳ ವ್ಯಾಖ್ಯಾನವನ್ನು ತಿರುಚಿದರು.
1.ಜಿಹಾದ್
2.ಕಾಫಿರ್

ಈ ಜಿಹಾದ್‌ನಲ್ಲಿ ಎರಡು ವಿಧಗಳಿವೆ.
1. ಜಿಹಾದ್- ಎ-ಅಕ್ಬರ್ (ಹಿರಿ ಜಿಹಾದ್)
2. ಜಿಹಾದ್-ಎ-ಅಕ್ಸರ್ (ಕಿರಿ‌ ಜಿಹಾದ್)

ಜಿಹಾದ್-ಎ-ಅಕ್ಬರ್ ಎಂದರೆ ತನ್ನ ಸ್ವಶರೀರವು ಕೆಡುಕುಗಳತ್ತ ಹೋಗುವುದರ ವಿರುದ್ಧ ಅದರೊಂದಿಗೆ ಹೋರಾಡುವುದು.
ಜಿಹಾದ್-ಎ-ಅಕ್ಸರ್ ಎಂದರೆ ಸಮಾಜದ ಕೆಡುಕಗಳ ವಿರುದ್ದ ಹೋರಾಡುವುದು. ಆದರೆ ಇವುಗಳ ಅರ್ಥ ಮತ್ತು ವ್ಯಾಖ್ಯಾನಗಳನ್ನು ಸಂಪೂರ್ಣವಾಗಿ ತಿರುಚಲಾಯಿತು. ನಿಮಗೆ ಯಾರ ಬಗ್ಗೆ ಸಹಮಿತವಿಲ್ಲವೋ ಮೊದಲು ಅವರಿಗೆ ಕಾಫಿರ್ ಎಂಬ ಹಣೆಪಟ್ಟಿ ಹಚ್ಚುವುದು ಮತ್ತು ಅವರನ್ನು ಕೊಲ್ಲುವುದು. ಇಂತಹ ತರಭೇತಿಗಳನ್ನು ಯಾವ ಅಲ್- ಖಾಯಿದಾದ ಮದ್ರಸಾಗಳಲ್ಲಿ‌ ನೀಡಲಾಗುತ್ತದೋ ಅವರಿಗೆ ಅಮೆರಿಕಾ ದುಡ್ಡನ್ನೂ ನೀಡಿತು, ಮಾತ್ರವಲ್ಲ ಸ್ವತಃ ಅಮೆರಿಕಾವೇ ಅವರಿಗೆ ಪಠ್ಯ ವಸ್ತುಗಳನ್ನೂ ಒದಗಿಸಿತು. ಅಲ್ ಖಾಯಿದಾದ ಮದ್ರಸಾಗಳಲ್ಲಿ ಯಾವ ತರಭೇತಿಗಳನ್ನು ನೀಡಲಾಗುತ್ತದೋ ಅದರ ಪಠ್ಯಕ್ರಮಗಳನ್ನು ವಾಷಿಂಗ್ಟನ್‌‌ನಲ್ಲಿ ತಯಾರಿಸಲಾಗುತ್ತದೆ…!!

ನೀವು ಯೂ‌ ಟ್ಯೂಬ್‌‌ನಲ್ಲಿ “ಹಿಲರಿ ಕ್ಲಿಂಟನ್, ಅಲ್- ಖಾಯಿದಾ ಮತ್ತು ಅಮೆರಿಕಾ” ಎಂಬ ಮೂರು ಪದಗಳನ್ನು ಟೈಪ್ ಮಾಡಿ ಸರ್ಚ್ ಕೊಟ್ಟರೆ ಅದರಲ್ಲಿ ನಾಲ್ಕೂವರೆ ನಿಮಿಷಗಳ ಒಂದು ವೀಡಿಯೋ ಇದೆ. (2016 ರವರೆಗೆ ಯೂಟ್ಯೂಬ್‌ನಲ್ಲಿದ್ದ ಆ ವೀಡಿಯೋವನ್ನು ಹಿಂದೆಗೆಯಲಾಗಿದೆ) ಅದರಲ್ಲಿ ಹಿಲರಿ ಕ್ಲಿಂಟನ್ ಹೇಳುತ್ತಾರೆ. “ನಮಗೆ ರಶ್ಯಾದ ವಿರುದ್ಧ ಹೋರಾಡಬೇಕಿತ್ತು. ನಮ್ಮ ಸೈನಿಕರು ವಿಯೆಟ್ನಾಂ‌ನಲ್ಲಿ ಸೋತು ಸುಸ್ತಾಗಿ ಬಂದಿದ್ದರು. ನಾವು ಏಶ್ಯಾದ ಮುಸ್ಲಿಂ ಯುವಕರ ಭುಜಗಳಲ್ಲಿ ಬಂದೂಕುಗಳನ್ನಿಟ್ಟು ಗುಂಡು ಹಾರಿಸಿದೆವು. ನಾವು ಅಲ್ ಖಾಯಿದಾ ಸೃಷ್ಟಿಸಿದೆವು. ನಮ್ಮ ಕೆಲಸಗಳನ್ನು ಅನೂಚಾನವಾಗಿ ಮಾಡಿದೆವು. ಆ ಬಳಿಕ ನಮ್ಮ ಕೈಗಳನ್ನು ತೊಳೆದು ಮರಳಿದೆವು. ಅರ್ಥಾತ್ ಕ್ಯಾನ್ಸರಿನ ಬೀಜ ಬಿತ್ತಿದೆವು. ನಾವು ನಮ್ಮ ದೇಶದಲ್ಲಿ ಸುರಕ್ಷಿತರಾಗಿದ್ದೇವೆ. ಪರಿಣಾಮವೇನಿದ್ದರೂ ಏಷ್ಯಾದ ಜನತೆ ಉಣ್ಣುತ್ತಾರೆ. ಅದರಲ್ಲೂ‌ ಪಶ್ಚಿಮ ಏಷ್ಯಾದ ಜನತೆ ಉಣ್ಣುತ್ತಾರೆ..”

ಅದರ ಜೊತೆಗೆ 9/11ರ ಬಳಿಕ ಅಮೆರಿಕಾದ ಮಾಧ್ಯಮಗಳು ಅತೀ ದೊಡ್ಡ ಕುಕೃತ್ಯಗಳನ್ನೆಸಗಿತು. ಅದು ಮಾನವ ಜನಾಂಗದ ಇತಿಹಾಸದಲ್ಲೇ ಅತ್ಯಂತ ಅಮಾನವೀಯ ದುಷ್ಕೃತ್ಯ. The most antihuman act in the history of Mankind. ಇಸ್ಲಾಮನ್ನು ಭಯೋತ್ಪಾದನೆಯ ಜೊತೆ ಥಳುಕು ಹಾಕಲಾಯಿತು.. ಯಾವ ಧರ್ಮ ಮನುಷ್ಯನಿಗೆ ಪ್ರೀತಿಯನ್ನು ಕಲಿಸುತ್ತದೋ, ಯಾವ ಧರ್ಮ ಮನುಷ್ಯನಿಗೆ ಮನುಷ್ಯನಾಗಲು ಬೋಧಿಸುತ್ತದೋ ಅದನ್ನು ಭಯೋತ್ಪಾದನೆಯೊಂದಿಗೆ ಥಳುಕು ಹಾಕಿ ಮೊದಲ ಬಾರಿಗೆ ಇಸ್ಲಾಮಿಕ್ ಟೆರರಿಸಂ ಎಂಬ ಪದವನ್ನು ಸೃಷ್ಟಿಸಿತು.

ನೆನಪಿರಲಿ ಜಗತ್ತಿನಲ್ಲಿ ಹಿಂದೆಯೂ ಭಯೋತ್ಪಾದನಾ ಕೃತ್ಯಗಳು ನಡೆದಿವೆ. ನೆನಪಿಟ್ಕೊಳ್ಳಿ ಐರಿಶ್ ರಿಪಬ್ಲಿಕನ್ ಆರ್ಮಿ, ಖಲಿಸ್ತಾನ್ ಮೂವ್‌ಮೆಂಟ್, ನಾಥೂರಾಂ ಗೋಡ್ಸೆ ಮಾಡಿದ ಗಾಂಧೀಜಿಯ ಹತ್ಯೆ, ಇಂದಿರಾ ಗಾಂಧಿಯ ಹತ್ಯೆ, ಎಲ್ಟಿಟಿ‌ಇ ಮಾಡಿದ ರಾಜೀವ್ ಗಾಂಧಿಯ ಹತ್ಯೆ.. ಹೀಗೆ ಸಂಘಟಿತ ಭಯೋತ್ಪಾದನಾ ಚಟುವಟಿಕೆಗಳು ಹಿಂದೆಯೂ ಇತ್ತು. ಆದರೆ ಅವ್ಯಾವುವನ್ನೂ ಆ ಕೃತ್ಯಗಳನ್ನೆಸಗಿದವರ ಧರ್ಮದ ಜೊತೆಗೆ ಥಳುಕು ಹಾಕಲಾಗುತ್ತಿರಲಿಲ್ಲ. ಆದರೆ ಅಲ್ ಖಾಯಿದಾ ಮಾಡಿದ ದುಷ್ಕೃತ್ಯಗಳಿಗೆ ಅಮೆರಿಕಾ ಕೊಟ್ಟ ಹೆಸರು ಇಸ್ಲಾಮಿಕ್ ಟೆರರಿಸಂ..!! ಇದರ ಹಿಂದೆ ಇಸ್ಲಾಮ್ ಧರ್ಮದ ಯಾವುದೇ ಕೈವಾಡವಿರಲಿಲ್ಲ.

ಜಿಹಾದ್ ಮತ್ತು ಕಾಫಿರ್ ಎಂಬ ಪದಗಳ ಅರ್ಥ ಮತ್ತು ವ್ಯಾಖ್ಯಾನವನ್ನು ತಿರುಚಲಾಯಿತು. ಆ ಮೂಲಕ ಮಾನವ ಜನಾಂಗದ ಮೆದುಳು ತೊಳೆಯುವ ಕೆಲಸ ಆರಂಭಿಸಲಾಯಿತು. ಈ ಪ್ರಕ್ರಿಯೆ ಒಂದು ವಿಧದ ಕ್ಯಾನ್ಸರ್. ನನಗೆ ಸ್ವಲ್ಪ ವೈದ್ಯಕೀಯ ಹಿನ್ನೆಲೆಯಿದೆ. ಆದುದರಿಂದ ಕ್ಯಾನ್ಸರ್ ಎಂದರೇನೆಂದು ನಾನು ಚೆನ್ನಾಗಿ ಬಲ್ಲೆ. ಕ್ಯಾನ್ಸರ್‌ಗೆ ಮೊದಲ ಹಂತದಲ್ಲಿ ಚಿಕಿತ್ಸೆ ನೀಡಬಹುದು. ಆದರೆ ಫೈನಲ್ ಹಂತ ತಲುಪಿದರೆ ಅದು ಮಾನವನ ಇಡೀ ದೇಹವನ್ನು ನಾಶಪಡಿಸುವಂತೆ, ಈ ಕ್ಯಾನ್ಸರ್ ಜಗತ್ತನ್ನೇ ನಾಶಪಡಿಸುತ್ತದೆ. ಅಲ್ ಖಾಯಿದಾ ಎಂದರೆ ಅದೇ ಕ್ಯಾನ್ಸರ್. ಅಲ್ ಖಾಯಿದಾದ ಪ್ರಯೋಗದ ಮೂಲಕ ಅಮೆರಿಕಾ ಹರಡಿದ್ದು ಮನುಕುಲಕ್ಕೆ ಮಾರಕವಾದ ಕ್ಯಾನ್ಸರನ್ನಾಗಿದೆ.

ವಿಷಯ ಇಷ್ಟಕ್ಕೇ ಮುಗಿಯುವುದಿಲ್ಲ. ಇಂಧನ ದಾಹ ಯಾವುದೇ ದಾಹಕ್ಕಿಂತ ದೊಡ್ಡದು. ನಮಗೆಲ್ಲಾ ಗೊತ್ತಿದೆ ಭಾರತ ಇನ್ನೂರು ವರ್ಷಗಳ ಕಾಲ ಇಂಗ್ಲೆಂಡಿನ ಗುಲಾಮಗಿರಿ ಅನುಭವಿಸಿದೆ. ಯಾತಕ್ಕಾಗಿ ಅವರು ನಮ್ಮನ್ನು ಗುಲಾಮಗಿರಿಗೆ ತಳ್ಳಿದರು..? ಅವರಿಗೆ ಇಲ್ಲಿನ ಸಂಪತ್ತನ್ನು ದೋಚಬೇಕಿತ್ತು. ಅದು ವಸಾಹತುಶಾಹಿತ್ವ.

ವಸಾಹತುಶಾಹಿತ್ವದ ಬಳಿಕ ಅಸ್ತಿತ್ವಕ್ಕೆ ಬಂದುದಾಗಿದೆ ಸಾಮ್ರಾಜ್ಯಶಾಹಿತ್ವ (imperialism). ಸಾಮ್ರಾಜ್ಯಶಾಹಿತ್ವವು ಜಗತ್ತಿನಾದ್ಯಂತದ ಸಂಪತ್ತನ್ನು ದೋಚುತ್ತದೆ ಅಥವಾ ಅದರ ಮೇಲೆ ಯಜಮಾನಿಕೆ ಸಾಧಿಸುತ್ತದೆ. ಇದಕ್ಕಾಗಿ ಅಮೆರಿಕಾ ಎಸಗಿದ ಇನ್ನೊಂದು‌ ದುಷ್ಕೃತ್ಯ ಇರಾಕಿನ ಮೇಲಿನ ದಾಳಿ. ಇರಾಕಿನ ಮೇಲೆ ನಡೆಸಲಾದ ಯುದ್ಧ ಏಕಾಏಕಿ ಮಾಡಿದ್ದೇನಲ್ಲ. ಮೊದಲು ದಾಳಿ ಮಾಡುವ ಕುರಿತು ತೀರ್ಮಾನಿಸಿದರು. ಆ ಬಳಿಕ ಅದಕ್ಕೆ ಸಮರ್ಥನೆಗಳನ್ನು ಹುಡುಕಿದರು. ಇರಾಕಿನ ಬಳಿ ಸಮೂಹ ನಾಶಕ ಶಸ್ತ್ರಾಸ್ತ್ರಗಳಿವೆ ಎಂದು ಜಗತ್ತಿನಾದ್ಯಂತ ಎಲ್ಲೆಡೆಗೂ ಸಮೂಹ ನಾಶಕ ಅಸ್ತ್ರಗಳನ್ನು ಸರಬರಾಜು ಮಾಡುವ ಅಮೆರಿಕಾವೇ ಬೊಬ್ಬಿರಿಯತೊಡಗಿತು. ಈ ಚರ್ಚೆ ದೀರ್ಘ ಕಾಲ ಅದೇ ಹಾದಿಯಲ್ಲಿ ಸಾಗುವಂತೆ ನೋಡಿಕೊಳ್ಳಲಾಯಿತು.

ವಿಶ್ವಸಂಸ್ಥೆಯೇನಿದೆಯೋ ಅದು ಅಮೆರಿಕಾದ ಜೇಬಿನಲ್ಲೇ ಇದೆ. ಅದನ್ನು ಅಮೆರಿಕಾ ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತದೆ. ಅದರ ಮೌನ ಸಮ್ಮತಿಯೊಂದಿಗೆ ಅಮೆರಿಕಾ ಇರಾಕ್ ಮೇಲೆ ಎರಗಿ ಬಿತ್ತು. ಇರಾಕಿನ ಮೇಲೆ ಅಮೆರಿಕಾ ಎರಗಿ ಬಿದ್ದ ಕಾರಣ ಅಲ್ಲಿನ ಸೇನಾ ಸ್ವರೂಪ ಗಲಿಬಿಲಿಗೊಳಗಾಯಿತು. ಒಂದೆಡೆ ಅಲ್- ಖಾಯಿದಾದ ಐಡಿಯಾಲಜಿಯೂ ಅದಾಗಲೇ ಬಲಿಷ್ಠವಾಗಿ ಬೇರೂರಿತ್ತು. ಇವೆರಡನ್ನೂ ಸೇರಿಸಿ ಐಸಿಸ್‌ಗೆ ಭದ್ರ ಬುನಾದಿ ಹಾಕಿತು. ಇಂದು ಇಸ್ಲಾಮಿನ ಹೆಸರಲ್ಲಿ ಜಗತ್ತಿನಾದ್ಯಂತ ಏನೆಲ್ಲಾ ಭಯೋತ್ಪಾದನಾ ಕೃತ್ಯಗಳು ನಡೆಯುತ್ತಿವೆಯೋ, ವಾಸ್ತವದಲ್ಲಿ‌ ಅದು “ಜಗತ್ತಿನ ಇಂಧನ ಸಂಪನ್ಮೂಲಗಳ ಮೇಲೆ ನಿಯಂತ್ರಣ ಸಾಧಿಸಿ ತನ್ನ ಯಜಮಾನಿಕೆ ಸ್ಥಾಪಿಸಲು ಸಾಮ್ರಾಜ್ಯಶಾಹಿ ಸೃಷ್ಟಿಸಿದ ಅತ್ಯಂತ ನೀಚ ಕೃತ್ಯವಾಗಿದೆ..”

  • ದೇಶದ ಪ್ರಮುಖ ಬುದ್ಧಿಜೀವಿ ಚಿಂತಕರಲ್ಲೊಬ್ಬರಾದ ರಾಂ ಪುನಿಯಾನಿ 2016ರಲ್ಲಿ ಮಾಡಿದ ಭಾಷಣವೊಂದರ ಕನ್ನಡಾನುವಾದವಿದು

ಕನ್ನಡಕ್ಕೆ : ಇಸ್ಮತ್ ಪಜೀರ್

(ಮಂಗಳೂರಿನ ಯುವ ಲೇಖಕರಾದ ಇಸ್ಮತ್ ಪಜೀರ್ ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಮೇಲಿನ ಹಲ್ಲೆ ಖಂಡಿಸಿ ಅದಕ್ಕೆ ರಾಜೀನಾಮೆ ನೀಡಿ ಹೊರಬಂದವರು. ತಮ್ಮದೇ ಆದ ಪಾಲಿಕ್ಲಿನಿಕ್ ನಡೆಸುತ್ತಿದ್ದಾರೆ.)


ಇದನ್ನೂ ಓದಿ: ಭೂ ಹಂಚಿಕೆ ಏಕೆ ಮಾಡಬೇಕೆಂದರೆ?: ದೇವರಾಜ ಅರಸು ಭಾಷಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಫ್ಘಾನಿಸ್ಥಾನದ ಇಂದಿನ ವಾಸ್ತವದ ಬಗ್ಗೆ ರಾಂ ಪುನಿಯಾನಿ ಭಾಷಣದ ಕನ್ನಡ ಅನುವಾದ ನೋಡಿದೆ. ಅದು ಏಕಮುಖವಾಗಿದೆ ಮತ್ತು ಭಾಗಶಃ ಸರಿ ಅಷ್ಟೇ. ಎಂಬತ್ತರ ದಶಕದಲ್ಲಿ ರಶಿಯಾ ಮತ್ತು, ಕಳೆದ ಇಪ್ಪತ್ತು ವರ್ಷಗಳಲ್ಲಿ ಅಮೆರಿಕಾ, ರುದ್ರ ನರ್ತನ ಮಾಡಿವೆ ನಿಜ. ಆದರೆ, ಅವರನ್ನು ಹೊರಗಟ್ಟಲು, ಅಫ್ಘಾನಿಸ್ಥಾನದ ಜನರು ಒಕ್ಕಟ್ಟಾಗಿ ಪ್ರಯತ್ನ ಮಾಡಲಿಲ್ಲ. ಪಾಶ್ಚಾತ್ಯರ ಪ್ರಾಬಲ್ಯದಿಂದ ದೇಶ ವಿಮೋಚನೆಗೆ ಬದಲು,ಬುಡಕಟ್ಟುಗಳು ತಮ್ಮತಮ್ಮಲ್ಲಿ ಬಡಿದಾಡುವ, ಶಕ್ತಿ ಪ್ರದರ್ಶಿಸುವ ಮತ್ತು ಅಧಿಕಾರ ಮೆರೆಯುವ ತಾಣವಾಗಿ ಅಫ್ಘಾನ್ ಪರಿವರ್ತಿತವಾಗಿದೆ. ಇದಕ್ಕೆ, ಕನಿಷ್ಠ ತಾರತಮ್ಯ ಜ್ಞಾನವು ಇಲ್ಲದ ಅಫ್ಘಾನ್ ಜನರೇ ನೇರವಾಗಿ ಕಾರಣ ವಿನಾ, ಪರದೇಶಗಳೇ ಪೂರ್ಣ ಹೊಣೆ ಅಲ್ಲ. ಅದರೊಂದಿಗೆ ಧರ್ಮ ತಳಕು ಹಾಕಿಕೊಂಡರೆ, ಪರಿಣಾಮ ಏನು ಎಂಬುದನ್ನು ನಾವು ಇಂದು ನೋಡುತ್ತಿದ್ದೇವೆ. ಇದು ಮನುಕುಲದ ದುರಂತ!

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...