Homeಮುಖಪುಟಲೋಕಸಭೆ ಚುನಾವಣೆ: ಹೈದರಾಬಾದ್‌ನಲ್ಲಿ ಓವೈಸಿ ವಿರುದ್ಧ ಕಣಕ್ಕಿಳಿದಿರುವ ಮಾಧವಿ ಲತಾ ಯಾರು?

ಲೋಕಸಭೆ ಚುನಾವಣೆ: ಹೈದರಾಬಾದ್‌ನಲ್ಲಿ ಓವೈಸಿ ವಿರುದ್ಧ ಕಣಕ್ಕಿಳಿದಿರುವ ಮಾಧವಿ ಲತಾ ಯಾರು?

ಮುಸ್ಲಿಂ ಪ್ರಾಬಲ್ಯದ ಕ್ಷೇತ್ರದಲ್ಲಿ ಹಿಂದುತ್ವ ನಾಯಕಿಗೆ ಗೆಲುವಾಗುತ್ತಾ?

- Advertisement -
- Advertisement -

ದೇಶದ ಪ್ರಮುಖ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾದ ಹೈದರಾಬಾದ್‌ನಿಂದ ಅಸಾದುದ್ದೀನ್ ಓವೈಸಿ ವಿರುದ್ಧ ಈ ಬಾರಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಈ ಮೂಲಕ ಚುನಾವಣಾ ಕಣ ರಂಗೇರಿದೆ.

ಆಲ್‌ ಇಂಡಿಯಾ ಮಜ್ಲಿಸೇ ಇತ್ತಿಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ನಾಯಕ ಮತ್ತು ಹೈದರಾಬಾದ್‌ನ ಹಾಲಿ ಸಂಸದ ಅಸಾಸುದ್ದೀನ್ ಓವೈಸ್ ವಿರುದ್ದ ಹಿಂದುತ್ವ ಮುಖ ಕೊಂಪೆಲ್ಲಾ ಮಾಧವಿ ಲತಾ ಅವರನ್ನು ಅಭ್ಯರ್ಥಿಯಾಗಿ ಬಿಜೆಪಿ ಘೋಷಿಸಿದೆ. ಮುಸ್ಲಿಮರು ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಮತ್ತು ಎಂಐಎಂ ಪಕ್ಷದ ಭದ್ರಕೋಟೆಯಾದ ಪುರಾತನ ನಗರ ಹೈದರಾಬಾದ್‌ನಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರಾ? ಎಂಬ ಕುತೂಹಲ ಮೂಡಿದೆ.

‘ಧರ್ಮೋ ರಕ್ಷತಿ ರಕ್ಷಿತಃ (ಧರ್ಮವು ತನ್ನನ್ನು ರಕ್ಷಿಸುವವರನ್ನು ರಕ್ಷಿಸುತ್ತದೆ)” ಎಂದು ಹೈದರಾಬಾದ್ ಕ್ಷೇತ್ರದ ಅಭ್ಯರ್ಥಿಯಾಗಿ ತನ್ನ ಹೆಸರನ್ನು ಘೋಷಣೆಯಾದ ನಂತರ ಮಾಧವಿ ಪ್ರತಿಕ್ರಿಯಿಸಿದ್ದರು.

ಎಐಎಂಐಎಂ ಅಧ್ಯಕ್ಷರೂ ಆಗಿರುವ ಓವೈಸಿ ಅವರು 2004 ರಿಂದ ಹೈದರಾಬಾದ್ ಸಂಸದರಾಗಿದ್ದಾರೆ. ಸತತ ನಾಲ್ಕನೇ ಬಾರಿ ಅವರು ಗೆಲುವು ದಾಖಲಿಸಿದ್ದಾರೆ. ಈ ಬಾರಿ ಗೆದ್ದರೆ ಐದನೇ ಬಾರಿ ಗೆದ್ದಂತಾಗುತ್ತದೆ. ಈ ಹಿಂದೆ, ಅವರ ತಂದೆ ಸುಲ್ತಾನ್ ಸಲಾವುದ್ದೀನ್ ಓವೈಸಿ ಅವರು ಆರು ಬಾರಿ ಹೈದರಾಬಾದ್‌ನಿಂದ ಲೋಕಸಭೆಯ ಪ್ರತಿನಿಧಿಯಾಗಿದ್ದರು.

ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಹೈದರಾಬಾದ್‌ನ ನಿಝಾಮ್ ಕಾಲೇಜಿನಲ್ಲಿ ಸಾರ್ವಜನಿಕ ಆಡಳಿತದಲ್ಲಿ ಬಿಎ ಮತ್ತು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದಾರೆ. ಹೈದರಾಬಾದ್ ಮೂಲದ ವಿರಿಂಚಿ ಆಸ್ಪತ್ರೆಗಳ ಮುಖ್ಯಸ್ಥರಾಗಿದ್ದಾರೆ. ವಿದ್ಯಾರ್ಥಿ ದಿನಗಳಲ್ಲಿ ಲತಾ ಅವರು ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಸದಸ್ಯೆಯಾಗಿದ್ದರು. ಅವರು ಭರತನಾಟ್ಯ ನೃತ್ಯಗಾರ್ತಿಯೂ ಹೌದು. ಪ್ರಸ್ತುತ ಹೈದರಾಬಾದ್ ಓಲ್ಡ್ ಸಿಟಿ ವ್ಯಾಪ್ತಿಯ ಯಕುತ್ಪುರ ವಿಧಾನಸಬಾ ಕ್ಷೇತ್ರದಲ್ಲಿ ಲತಾ ಅವರ ಮನೆಯಿದೆ.

ಲೋಪಾಮುದ್ರಾ ಚಾರಿಟೇಬಲ್ ಟ್ರಸ್ಟ್, ಲತಾಮಾ ಫೌಂಡೇಶನ್ ಇತ್ಯಾದಿ ಸಮಾಜಮುಖಿ ಸಂಸ್ಥೆಗಳೊಂದಿಗೆ ಮಾಧವಿ ಲತಾ ಗುರುತಿಸಿಕೊಂಡಿದ್ದಾರೆ. ಅವರ ಪತಿ ವಿಶ್ವನಾಥ್ ಅವರು ವಿರಿಂಚಿ ಆಸ್ಪತ್ರೆಯ ಸಂಸ್ಥಾಪಕರು ಮತ್ತು ಅಧ್ಯಕ್ಷರು. ಲತಾ ಅವರು ಹೈದರಾಬಾದ್‌ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಮೊದಲ ಮಹಿಳಾ ಅಭ್ಯರ್ಥಿಯಾಗಿದ್ದಾರೆ.

49 ವರ್ಷ ವಯಸ್ಸಿನ ಮಾಧವಿ ಲತಾ ಅವರು, ಈ ಹಿಂದೆ ಹೈದರಾಬಾದ್‌ನ ಓಲ್ಡ್‌ ಸಿಟಿಯಲ್ಲಿ ತ್ರಿವಳಿ ತಲಾಖ್ ವಿರುದ್ಧ ಅಭಿಯಾನ ನಡೆಸಿದ್ದರು. ಈ ಮೂಲಕ ಮುಸ್ಲಿಂ ಮಹಿಳೆಯರನ್ನು ತಲುಪುವ ಪ್ರಯತ್ನ ಮಾಡಿದ್ದರು. ಆರ್ಥಿಕವಾಗಿ ದುರ್ಬಲರಾಗಿರುವ ಮುಸ್ಲಿಂ ಮಹಿಳೆಯರು ಮತ್ತು ಹುಡುಗಿಯರಿಗೆ ಸಹಾಯ ಮಾಡಲು ಅವರು ನಿಧಿಯನ್ನು ಸ್ಥಾಪಿಸಿದ್ದಾರೆ.

ಆರೋಗ್ಯ ಶಿಬಿರ ಏರ್ಪಡಿಸುವುದು, ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಸೇರಿದಂತೆ ಸಮಾಜಮುಖಿ ಕೆಲಸಗಳನ್ನು ಲತಾ ಮಾಡುತ್ತಾ ಬಂದಿದ್ದಾರೆ. ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಿತರಾಗಿ 2,176 ಶೌಚಾಲಯಗಳನ್ನು ಅವರು ಸ್ಥಾಪಿಸಿದ್ದಾರೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಕೂಡ ನೆರವು ಒದಗಿಸುತ್ತಿದ್ದಾರೆ. ಇವೆಲ್ಲದರ ಹೊರತಾಗಿ ಹಿಂದೂ ಧರ್ಮದ ಚಟುವಟಕೆಗಳಲ್ಲಿ ಅವರು ಸಕ್ರಿಯರಾಗಿ ತೊಡಗಿಸಿಕೊಳ್ಳುತ್ತಿದ್ದಾರೆ.

“ಸನಾತನ ಧರ್ಮವು ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ದಾರಿ. ನಾನು ಧರ್ಮ ಮಾರ್ಗದ ಅನುಯಾಯಿಯಾಗಿದ್ದೇನೆ. ನಮ್ಮ ಭರತವರ್ಷದಲ್ಲಿ ಹಿಂದೂ ಧರ್ಮ ರಾಜ್ಯಗಳ ಮೂಲಕ ಪ್ರವರ್ಧಮಾನಕ್ಕೆ ಬಂದ ಹಲವಾರು ರಾಜರಿಂದ ಪ್ರಭಾವಿತಳಾಗಿದ್ದೇನೆ” ಎಂದು ಲತಾ ಭಾನುವಾರ ದೂರವಾಣಿ ಮೂಲಕ ಹೇಳಿರುವುದಾಗಿ ದಿ ಪ್ರಿಂಟ್ ವರದಿ ಮಾಡಿದೆ.

“ನನ್ನ ಸ್ಫೂರ್ತಿ ಕಳೆದ ಎರಡು ದಶಕಗಳಿಂದ ಭಾರತದ ಅಭಿವೃದ್ಧಿಯನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ತನ್ನನ್ನು ತ್ಯಾಗ ಮಾಡುತ್ತಿರುವ ನರೇಂದ್ರ ಮೋದಿ ಜಿಯವರು. ನಮ್ಮ ದೇಶವು ಹಿಂದೆ ಅನೇಕ ಮಹಾನ್ ನಾಯಕರನ್ನು ಕಂಡಿದೆ. ಆದರೆ, ಯಾರೂ ಪ್ರಧಾನಿ ನರೇಂದ್ರ ಮೋದಿ ಜಿಯಂತೆ ನಿಸ್ವಾರ್ಥ, ನಿರ್ಣಾಯಕ ಮತ್ತು ಸ್ಪಷ್ಟ ಉದ್ದೇಶದಿಂದ ಕೆಲಸ ಮಾಡಿಲ್ಲ. ನನ್ನ ಧ್ಯೇಯವೆಂದರೆ ಸ್ಫೂರ್ತಿಯಿಂದ ಮುನ್ನಡೆಯುವುದು. ಮೋದಿಯವರ ನೇತೃತ್ವದಲ್ಲಿ ‘ಅಮೃತ ಕಾಲ’ದಲ್ಲಿ ಭಾರತವನ್ನು ಸೂಪರ್ ಪವರ್ ಮಾಡುವಲ್ಲಿ ನಾವು ಕೆಲಸ ಮಾಡಬೇಕು. ನನ್ನ ಮೇಲೆ ನಂಬಿಕೆ ಇಟ್ಟ ಅಮಿತ್ ಶಾ, ಜೆಪಿ ನಡ್ಡಾ ಮತ್ತು ರಾಜನಾಥ್ ಸಿಂಗ್ ಅವರಿಗೆ ಧನ್ಯವಾದ ಹೇಳುತ್ತೇನೆ” ಎಂದು ಲತಾ ಅವರು ಹೇಳಿದ್ದಾಗಿ ಪ್ರಿಂಟ್ ವರದಿ ತಿಳಿಸಿದೆ.

ಮಾಧವಿ ಲತಾ ಅವರು ತನ್ನನ್ನು ತಾನು ವಾಗ್ಮಿ, ಕಲಾವಿದೆ, ಲೋಕೋಪಕಾರಿ, ವಾಣಿಜ್ಯೋದ್ಯಮಿ, ತಾಯಿ, ಹೆಂಡತಿ ಮತ್ತು ಮಹಿಳೆ ಎಂದು ಬಣ್ಣಿಸಿದ್ದಾರೆ. ನಾನು ಹೈದರಾಬಾದ್‌ಗೆ ಶಾಂತಿ ಮತ್ತು ಸಮೃದ್ಧಿಯನ್ನು ತರುವ ಉದ್ದೇಶ ಹೊಂದಿದ್ದೇನೆ ಎಂದಿದ್ದಾರೆ. ನಗರದ ಇತರ ಭಾಗಗಳು ಅಭಿವೃದ್ಧಿ ಹೊಂದುತ್ತಿರುವಾಗ ಎಐಎಂಐಎಂ ಆಳ್ವಿಕೆ ನಡೆಸುತ್ತಿರುವ ಕ್ಷೇತ್ರವು ಏಕೆ ಅಭಿವೃದ್ಧಿಯಾಗದೆ ಉಳಿದಿದೆ?” ಎಂದು ಲತಾ ಅವರು ಪ್ರಶ್ನಿಸಿದ್ದಾರೆ.

“ಓಲ್ಡ್‌ ಸಿಟಿಯಲ್ಲಿ ಶುಚಿತ್ವವಿಲ್ಲ, ಶಿಕ್ಷಣವಿಲ್ಲ. ಮದರಸಾಗಳಲ್ಲಿ ಮಕ್ಕಳಿಗೆ ಊಟ ಸಿಗುತ್ತಿಲ್ಲ. ಮುಸ್ಲಿಂ ಮಕ್ಕಳು ಬಾಲ ಕಾರ್ಮಿಕರಾಗುತ್ತಿದ್ದಾರೆ, ಅವರಿಗೆ ಭವಿಷ್ಯವಿಲ್ಲ. ಹಿಂದೂ ದೇವಾಲಯಗಳು ಮತ್ತು ಮನೆಗಳನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲಾಗುತ್ತಿದೆ” ಎಂದು ಲತಾ ಅವರು ಟಿಕೆಟ್ ಘೋಷಣೆಯಾದ ಬಳಿಕ ಹೇಳಿದ್ದರು.

“ಹೈದರಾಬಾದ್ ಲೋಕಸಭಾ ಕ್ಷೇತ್ರದ ಮೂಲೆ ಮೂಲೆಗೆ ನಾನು ಸಂಚರಿಸಿದ್ದೇನೆ. ಇಲ್ಲಿಯ ಜನರ ಸಮಸ್ಯೆ ನನಗೆ ಚೆನ್ನಾಗಿ ಗೊತ್ತಿದೆ. ವಿಶೇಷವಾಗಿ ಪಸ್ಮಾಂಡ ಮುಸ್ಲಿಮರನ್ನು ಭೇಟಿಯಾಗಗಿರುವ ನನಗೆ, ಅವರಿಗೆ ಏನು ಬೇಕಿದೆ ಎಂದು ಚೆನ್ನಾಗಿದೆ ಗೊತ್ತಿದೆ. ಹಾಗಾಗಿ, ಸ್ಥಳೀಯರಿಗೆ ಅವರ ಹಕ್ಕುಗಳನ್ನು ದೊರಕಿಸಿಕೊಡುವುದು ನನ್ನ ಚುನಾವಣಾ ಪ್ರಚಾರದ ಥೀಮ್ ಅಗಿರಲಿದೆ ಎಂದು ಲತಾ ಅವರು ತಿಳಿಸಿದ್ದಾಗಿ ಪ್ರಿಂಟ್ ಹೇಳಿದೆ.

“ಎಐಎಂಐಎಂ ಅವರ ಉತ್ತಮ ಕೆಲಸ ಅಥವಾ ಜನಪ್ರಿಯತೆಯ ಕಾರಣದಿಂದ ಗೆದ್ದರೆ ಒಳ್ಳೆಯದು. ಆದರೆ, ಆ ಪಕ್ಷವು ತಮ್ಮ ಮತದಾರರಿಗೆ ತಿಳುವಳಿಕೆಯಿಲ್ಲದ ಕಾರಣ ಅವರನ್ನು ಭಯಭೀತರನ್ನಾಗಿಸಿ ಅಧಿಕಾರದಲ್ಲಿ ಮುಂದುವರಿಯುತ್ತಿದೆ. ನಕಲಿ ಮತಗಳನ್ನು ತೆಗೆದು ಹಾಕುವುದು, ಮತಗಟ್ಟೆಗಳನ್ನು ಸುರಕ್ಷಿತ ವಲಯಗಳಿಗೆ ಸ್ಥಳಾಂತರಿಸುವುದು, ವೆಬ್‌ಕ್ಯಾಮ್‌ಗಳನ್ನು ಸ್ಥಾಪಿಸುವುದು ಮತ್ತು ನೇರ ಪೊಲೀಸ್ ಅಧಿಕಾರಿಗಳು ಮತ್ತು ಕೇಂದ್ರ ಪೊಲೀಸ್ ಪಡೆಗಳನ್ನು ನಿಯೋಜಿಸುವ ಮೂಲಕ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ನಾನು ಭಾರತೀಯ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ” ಎಂದು ಲತಾ ಹೇಳಿದ್ದಾರೆ.

ಪ್ರಖರ ಹಿಂದುತ್ವವಾದಿ ಮತ್ತು ಹೈದರಾಬಾದ್‌ನ ಗೋಶಮಹಲ್ ವಿಧಾನಸಭೆ ಕ್ಷೇತ್ರದ ಶಾಸಕ ರಾಜಾ ಸಿಂಗ್‌ ಅವರನ್ನು ಓವೈಸಿ ವಿರುದ್ದ ಕಣಕ್ಕಿಳಿಸುವ ಸಾಧ್ಯತೆಯಿದೆ ಎನ್ನಲಾಗಿತ್ತು. ಆದರೆ, ಬಿಜೆಪಿ ಹೈಕಮಾಂಡ್ ಮಾಧವಿ ಲತಾ ಅವರಿಗೆ ಟಿಕೆಟ್ ಕೊಟ್ಟಿದೆ.

ಗೋಶಮಹಲ್ ಹೈದರಾಬಾದ್ ಲೋಕಸಭಾ ಕ್ಷೇತ್ರದಲ್ಲಿರುವ ಏಕೈಕ ಬಿಜೆಪಿ ಹಿಡಿತದ ವಿಧಾನಸಭಾ ಕ್ಷೇತ್ರವಾಗಿದೆ. ಉಳಿದ ಆರು ಕ್ಷೇತ್ರಗಳಲ್ಲಿ ಎಐಎಂನ ಶಾಸಕರಿದ್ದಾರೆ. ಕಳೆದ ಎರಡು ಚುನಾವಣೆಗಳಲ್ಲಿ ಒವೈಸಿ ಅವರು ಹೈದರಾಬಾದ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತರಾವ್ ಅವರನ್ನು ಭಾರೀ ಮತಗಳ ಅಂತರದಿಂದ ಸೋಲಿಸಿದ್ದರು.

ಹೈದರಾಬಾದ್‌ ಲೋಕಸಭೆ ಕ್ಷೇತ್ರದಲ್ಲಿ ಓಲ್ಡ್‌ ಸಿಟಿಯೇ ಪ್ರಮುಖ ಪ್ರದೇಶವಾಗಿದೆ. ಇಲ್ಲಿಯೇ ವಿಶ್ವ ಪ್ರಸಿದ್ದ ಚಾರ್‌ಮಿನಾರ್, ಭಾರತ ಅತೀ ದೊಡ್ಡ ಮಸೀದಿಗಳಲ್ಲಿ ಒಂದಾದ ಮಕ್ಕಾ ಮಸ್ಜಿದ್, ನಿಝಾಮರ ಆಡಳಿತ ಕೇಂದ್ರ ಚೌಮೊಹಲ್ಲಾ ಅರಮನೆ, ಪ್ರಸಿದ್ದ ಜಾಮಿಯಾ ನಿಝಾಮಿಯಾ ಕಾಲೇಜು ಇದೆ.

ಭಾರತದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಲ್ಲಿರುವ ನಗರಗಳಲ್ಲಿ ಹೈದರಾಬಾದ್ ಕೂಡ ಒಂದು. ಈ ಕ್ಷೇತ್ರದಲ್ಲಿ ಗೆಲ್ಲಬೇಕಾದರೆ ಮುಸ್ಲಿಮರ ಮತಗಳು ನಿರ್ಣಾಯಕವಾಗಿದೆ. ಹಾಗಾಗಿ, ಮಾಧವಿ ಲತಾ ಅವರು ಬಿಜೆಪಿ ಅಭ್ಯರ್ಥಿಯಾದರೂ ಮುಸ್ಲಿಮರ ಜೊತೆ ಚೆನ್ನಾಗಿದ್ದಾರೆ. ಅದರ ಜೊತೆಗೆ ಬಿಜೆಪಿ ಮೂಲ ಸಿದ್ದಾಂತವಾದ ಹಿಂದುತ್ವದಿಂದ ಅವರು ಹೊರತಾಗಿಲ್ಲ. ಉದಾ: ಹೈದರಾಬಾದ್‌ನ ಸೈದಾಬಾದ್‌ನಲ್ಲಿ ಹನುಮಾನ್ ದೇವಸ್ಥಾನದ ಮೇಲೆ ನಿರ್ಮಾಣವಾಗುತ್ತಿರುವ ಸ್ಟೀಲ್ ಬ್ರಿಡ್ಜ್ ವಿರುದ್ದ ಅವರು ಹೋರಾಟ ರೂಪಿಸಿದ್ದಾರೆ. ಸ್ಟೀಲ್ ಬ್ರಿಡ್ಜ್ ಹನುಮಾನ್ ಮಂದಿರದ ಮೇಲೆ ಹಾದು ಹೋಗುವುದರಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಲಿದೆ ಎಂಬುವುದು ಮಾಧವಿ ಅವರ ವಾದ.

ಒಟ್ಟಿನಲ್ಲಿ, ದೇಶದ ಪ್ರಭಾವಿ ಮುಸ್ಲಿಂ ರಾಜಕಾರಣಿ ವಿರುದ್ದ ಅಗ್ನಿ ಪರೀಕ್ಷೆಗಿಳಿದಿರುವ ಮಾಧವಿ ಲತಾ ಅವರು ಗೆಲುವು ದಾಖಲಿಸುತ್ತಾರಾ? ಲತಾ ಅವರ ಸ್ಪರ್ಧೆ ಸೋಲಿಲ್ಲದ ಸರದಾರನಾಗಿರುವ ಅಸಾದುದ್ದೀನ್ ಓವೈಸಿಯ ಮತಗಳ ಮೇಲೆ ಪರಿಣಾಮ ಬೀರುತ್ತಾ? ಲತಾ ಅವರು ಮುಸ್ಲಿಮರ ಮನ ಗೆಲ್ಲುತ್ತಾರಾ? ಇತ್ಯಾದಿಗ ಪ್ರಶ್ನಗಳಿಗೆ ಚುನಾವಣೆ ಉತ್ತರ ನೀಡಬೇಕಿದೆ.

ಇದನ್ನೂ ಓದಿ: ಮೋದಿ ರ್‍ಯಾಲಿಯಲ್ಲಿ ಭಾಗವಹಿಸುವಂತೆ ಸರಕಾರಿ ಉದ್ಯೋಗಿಗಳಿಗೆ ಸೂಚಿಸಿದ ಜಮ್ಮು-ಕಾಶ್ಮೀರ ಆಡಳಿತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...