ವಿಶ್ವ ಆರೋಗ್ಯ ಸಂಸ್ಥೆ( WHO) ಮಂಗಳವಾರ ಸಿನೊವಾಕ್ ಕೊರೊನಾ ಲಸಿಕೆಯನ್ನು ತುರ್ತು ಬಳಕೆಗಾಗಿ ಅನುಮೋದಿಸಿದೆ. ಇದು WHO ನ ಅನುಮತಿ ಪಡೆದ ಎರಡನೇ ಚೀನೀ ಲಸಿಕೆಯಾಗಿದೆ. WHO ಎರಡು-ಡೋಸ್ ಲಸಿಕೆಗೆ ಸಹಿ ಹಾಕಿದ್ದು ಇದನ್ನು ಈಗಾಗಲೇ ವಿಶ್ವದ ಹಲವಾರು ದೇಶಗಳಿಗೆ ನೀಡಲಾಗುತ್ತಿದೆ.
“WHO ಇಂದು ಸಿನೊವಾಕ್-ಕೊರೊನಾವಾಕ್ ಕೊರೊನಾ ಲಸಿಕೆಯನ್ನು ತುರ್ತು ಬಳಕೆಗಾಗಿ ಮೌಲ್ಯೀಕರಿಸಿದೆ” ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ತಿಂಗಳು ಸಿನೊಫಾರ್ಮ್ ಎಂಬ ಕೊರೊನಾ ಲಸಿಕೆಯನ್ನು WHO ಅನುಮೋದಿಸಿತ್ತು. ಸಿನೋಫಾರ್ಮ್ WHO ಅನುಮೋದಿಸಿದ ಮೊದಲ ಚೀನಿ ಲಸಿಕೆಯಾಗಿದೆ.
ಭಾರತ, ದಕ್ಷಿಣ ಕೊರಿಯಾ ಮತ್ತು ಯುರೋಪಿಯನ್ ಒಕ್ಕೂಟಗಳಲ್ಲಿ ಉತ್ಪಾದಿಸಲಾಗುತ್ತಿರುವ ಫಿಜರ್ / ಬಯೋಟೆಕ್, ಮಾಡರ್ನಾ, ಜಾನ್ಸನ್ & ಜಾನ್ಸನ್ ಮತ್ತು ಆಸ್ಟ್ರಝೆನಕ ಸಂಸ್ಥೆಗಳು ತಯಾರಿಸಿರುವ ಲಸಿಕೆಯನ್ನು WHO ಈಗಾಗಲೆ ತುರ್ತು ಬಳಕೆಗೆ ಅನುಮತಿ ನೀಡಿದೆ.
ಇದನ್ನೂ ಓದಿ: ಮೇಲ್ಜಾತಿ ಹುಡುಗಿಗೆ ಮೊಬೈಲ್ ನೀಡಿದ್ದಕ್ಕೆ ದಲಿತ ಯುವಕರ ತಲೆ ಬೋಳಿಸಿ, ಎಂಜಲು ತಿನ್ನಿಸಿದ ದುಷ್ಕರ್ಮಿಗಳು
ವಿಶೇಷವಾಗಿ ತಮ್ಮದೇ ಆದ ಅಂತರರಾಷ್ಟ್ರೀಯ ಗುಣಮಟ್ಟದ ನಿಯಂತ್ರಕವಿಲ್ಲದ ದೇಶಗಳಿಗೆ WHO ಅನುಮತಿಯು ಲಸಿಕೆಯನ್ನು ತ್ವರಿತವಾಗಿ ಅನುಮೋದಿಸಲು ಮತ್ತು ಆಮದು ಮಾಡಿಕೊಳ್ಳಲು ದಾರಿ ಮಾಡಿಕೊಡುತ್ತದೆ.
ಎಎಫ್‌ಪಿ ಎಣಿಕೆಯ ಪ್ರಕಾರ, ಸಿನೊವಾಕ್ ಲಸಿಕೆಯು ಈಗಾಗಲೇ ವಿಶ್ವದ 22 ದೇಶಗಳಲ್ಲಿ ಬಳಕೆಯಲ್ಲಿದೆ. ಚೀನಾ ಹೊರತುಪಡಿಸಿ ಚಿಲಿ, ಬ್ರೆಜಿಲ್, ಇಂಡೋನೇಷ್ಯಾ, ಮೆಕ್ಸಿಕೊ, ಥೈಲ್ಯಾಂಡ್ ಮತ್ತು ಟರ್ಕಿ ದೇಶಗಳು ಸಿನೊವಾಕ್ ಲಸಿಕೆಯನ್ನು ಬಳಸುತ್ತದೆ.
WHO ನ ಇಮ್ಯುನೈಸೇಶನ್ ಕುರಿತ ತಜ್ಞರ ಕಾರ್ಯತಂತ್ರದ ಸಲಹಾ ಗುಂಪು ಲಸಿಕೆಯನ್ನು ಪರಿಶೀಲಿಸಿದೆ ಮತ್ತು ಅದರ ಬಳಕೆಯ ಬಗ್ಗೆ ಅವರ ಸಲಹೆಯನ್ನು ಪ್ರಕಟಿಸಿದೆ.
“ಎರಡು ಮತ್ತು ನಾಲ್ಕು ವಾರಗಳ ಅಂತರದಲ್ಲಿ ಎರಡು-ಡೋಸ್‌ಗಳನ್ನು 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಕರಿಗೆ ಈ ಲಸಿಕೆಯನ್ನು WHO ಶಿಫಾರಸು ಮಾಡಿದೆ” ಎಂದು ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: ಕೊರೊನಾ ಆತಂಕ: ಸಿಬಿಎಸ್‌ಇ 12 ನೇ ತರಗತಿ ಪರೀಕ್ಷೆ ರದ್ದು


