Homeಮುಖಪುಟಅಲಪಾನ್‌ ಬಂದೋಪಾದ್ಯಾಯ್‌ರವರ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ಕೇಂದ್ರಕ್ಕಿದೆಯೇ?

ಅಲಪಾನ್‌ ಬಂದೋಪಾದ್ಯಾಯ್‌ರವರ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ಕೇಂದ್ರಕ್ಕಿದೆಯೇ?

ಶೋಕಾಸ್‌ಗೆ ಸಂಬಂಧಿಸಿದ ಸಂಪೂರ್ಣ ಚರ್ಚೆಯು ಆಲ್‌ ಇಂಡಿಯಾ ಸರ್ವಿಸ್‌ ರೂಲ್ಸ್‌, 1969 ರ ರೂಲ್‌ 7 ( ಶಿಸ್ತುಪಾಲನೆ ಮತ್ತು ಮನವಿ) ರ ಅರ್ಥಾನ್ವಯದ ಮೇಲೆಯೇ ನಿಂತಿದೆ.

- Advertisement -
- Advertisement -

ಅಲಪಾನ್‌ ಬಂದೋಪಾದ್ಯಾಯ್‌ ಅವರಿಗೆ ಶೋಕಾಸ್‌ ನೋಟಿಸ್‌ ನೀಡಿರುವ ಕೇಂದ್ರ ಸರ್ಕಾರದ ಆಶ್ಚರ್ಯಕರ ನಡೆ ಹಲವು ಚರ್ಚೆಗಳಿಗೆ ಅವಕಾಶ ಮಾಡಿಕೊಟ್ಟಿದೆ. ಪಶ್ಚಿಮ ಬಂಗಾಳ ರಾಜ್ಯಸರ್ಕಾರದ ಕರ್ತವ್ಯದಲ್ಲಿ ನಿಯೋಜಿತರಾಗಿರುವ 1987 ಬ್ಯಾಚ್‌ ನ IAS ಅಧಿಕಾರಿಯನ್ನು ಕೇಂದ್ರ ಏಕಾಏಕಿ ದೆಹಲಿಯ ಸಿಬ್ಬಂದಿ ಮತ್ತು ಸಾವರ್ಜನಿಕ ಕುಂದು ಕೊರತೆ ಇಲಾಖೆಗೆ ವರ್ಗಾವಣೆ ಮಾಡಿತ್ತು. ತಮ್ಮ ವರ್ಗಾವಣೆ ಆದೇಶಕ್ಕೆ ಮನ್ನಣೆ ಕೊಡದೇ ನಿವೃತ್ತಿ ತೆಗೆದುಕೊಂಡ ಅಲಪಾನ್‌ ಬಂದೋಪಾದ್ಯಾಯ್‌ ಅವರ ಮೇಲೆ ಕೇಂದ್ರ ಕ್ರಮ ಕೈಗೊಂಡಿದ್ದು ಅದರ ಭಾಗವಾಗಿ ಪಶ್ಚಿಮ ಬಂಗಾಳ ಮಾಜಿ ಮುಖ್ಯಕಾರ್ಯುದರ್ಶಿ ಬಂದೋಪಾದ್ಯಾಯ್‌ ಅವರಿಗೆ ಶೋಕಾಸ್‌ ನೋಟಿಸ್‌ ನೀಡಿದೆ. ಹಾಗಾದರೆ ಬಂದೋಪಾದ್ಯಾಯ್‌ ಅವರಿಗೆ ಕೇಂದ್ರಕ್ಕೆ ಶೋಕಾಸ್‌ ನೀಡುವ ಅಧಿಕಾರವಿದೆಯೇ? ಕಾನೂನು ಈ ವಿಷಯದಲ್ಲಿ ಏನು ಹೇಳುತ್ತದೆ ಎಂಬುದನ್ನು ನಾವಿಲ್ಲಿ ವಿವರವಾಗಿ ಚರ್ಚಿಸಿದ್ದೇವೆ.

ಶೋಕಾಸ್‌ಗೆ ಸಂಬಂಧಿಸಿದ ಸಂಪೂರ್ಣ ಚರ್ಚೆಯು ಆಲ್‌ ಇಂಡಿಯಾ ಸರ್ವಿಸ್‌ ರೂಲ್ಸ್‌, 1969 ರ ರೂಲ್‌ 7 ( ಶಿಸ್ತುಪಾಲನೆ ಮತ್ತು ಮನವಿ) ರ ಅರ್ಥಾನ್ವಯದ ಮೇಲೆಯೇ ನಿಂತಿದೆ.

ರೂಲ್‌ 7 IAS ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಮತ್ತು ವಿಚಾರಣೆ ನಡೆಸುವ ಅಧಿಕಾರ ಯಾರಿಗೆ ಇದೆ ಎಂದು ಹೇಳುತ್ತದೆ. ಐಎಎಸ್‌ ಅಧಿಕಾರಿಯು ರಾಜ್ಯ ಸರ್ಕಾರದ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಂದರ್ಭದಲ್ಲಿ ಆ ಅಧಿಕಾರಿಯ ಮೇಲೆ ಕೈಗೊಳ್ಳುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಮಾತ್ರ ಇದೆ ಎಂದು ಆಲ್‌ ಇಂಡಿಯಾ ಸರ್ವಿಸಸ್‌ ರೂಲ್ಸ್‌, 1969 ರ 7 ನೇ ನಿಯಮವು ಸ್ಪಷ್ಟವಾಗಿ ಹೇಳುತ್ತದೆ. ಜೊತೆಗೆ ರಾಜ್ಯ ಸರ್ಕಾರದ ನಿಯೋಜನೆಯಲ್ಲಿರುವ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳುವ ಅಥವಾ ದಂಡ ವಿಧಿಸುವಾಗ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಒಪ್ಪಿಗೆ ಸೂಚಿಸಬೇಕು. ರಾಜ್ಯ ಸರ್ಕಾರದ ಸಮ್ಮತಿಯ ಆಧಾರದ ಮೇಲೆ ಕೇಂದ್ರ ಐಎಎಸ್‌ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳಬಹುದು ಎಂದು ಈ ನಿಯಮಾವಳಿಯು ಹೇಳುತ್ತದೆ.

ಈ ಹಿಂದಿನ ಪ್ರಕರಣಗಳಲ್ಲಿ ನ್ಯಾಯಾಯಗಳು ಏನು ಹೇಳಿವೆ?

ಇತಿಹಾಸದಲ್ಲಿ ಹಿಂದೆ ನಡೆದಿರುವ ಘಟನೆಗಳಲ್ಲಿ ಬಹುತೇಕ ನ್ಯಾಯಾಲಯಗಳು ರಾಜ್ಯ ಸರ್ಕಾರಕ್ಕೆ ತನ್ನ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆಲವು ಪ್ರಕರಣಗಳಲ್ಲಿ ನ್ಯಾಯಧೀಶರಲ್ಲೇ ಈ ಕುರಿತು ಭಿನ್ನಾಭಿಪ್ರಾಯಗಳಿವೆ. ಕೆಲವು ನ್ಯಾಯಾಧೀಶರು ಕೇಂದ್ರಕ್ಕೆ ಐಎಎಸ್‌ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರವಿದೆಯೆಂದು ಹೇಳಿದರೆ ಕೆಲವು ನ್ಯಾಯಾಲಯಗಳು ರಾಜ್ಯ ಸರ್ಕಾರಗಳಿಗೆ ಈ ಸಂಬಂಧ ಕ್ರಮ ಕೈಗೊಳ್ಳಲು ಅಧಿಕಾರವಿದೆಯೆಂದು ಹೇಳಿದ್ದಾರೆ.

ಮದ್ರಾಸ್‌ ಹೈಕೋರ್ಟ್‌ 2013 ರಲ್ಲಿ ʼಪ್ರಮೋದ್‌ ಕುಮಾರ್‌ Vs ಭಾರತ ಸರ್ಕಾರʼ ಪ್ರಕರಣದಲ್ಲಿ ಆಲ್‌ ಇಂಡಿಯಾ ಸರ್ವಿಸ್‌ ಅಧಿಕಾರಿಯ ಮೇಲೆ ಶಿಸ್ತುಕ್ರಮ ಕೈಗೊಳ್ಳುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಮಾತ್ರ ಇದೆ ಎಂದು ಹೇಳಿದೆ. ನ್ಯಾಯಾಲಯವು ಮುಂದುವರೆದು ರಾಜ್ಯ ಸರ್ಕಾರದ ಕರ್ತವ್ಯದಲ್ಲಿರುವ ಆಲ್‌ ಇಂಡಿಯಾ ಸರ್ವಿಸ್‌ ಅಧಿಕಾರಿಗಳ ಮೇಲೆ ಕೇಂದ್ರವು ಸ್ವಯಂ ಪ್ರೇರಿತಯ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ.

ಮದ್ರಾಸ್‌ ಉಚ್ಛನ್ಯಾಯಾಲಯವು ಈ ಪ್ರಕರಣದಲ್ಲಿ ಆಲ್‌ ಇಂಡಿಯಾ ಸರ್ವಿಸ್‌ , 1969 ನಿಯಮ ಏಳರ ಅರ್ಥಾನ್ವಯವನ್ನು ಮಾಡಿದ್ದು ಇಲ್ಲಿರುವ ಅಕ್ಷರಗಳನ್ನು ವಿಶಾಲವಾದ ದೃಷ್ಟಿಕೋನದಲ್ಲಿ ಅನ್ವಯಿಸಬೇಕೆಂದು ಹೇಳಿದೆ. ಜೊತೆಗೆ ಆಲ್‌ ಇಂಡಿಯಾ ಸರ್ವಿಸ್‌ ಅಧಿಕಾರಿಗಳು ವಿಶೇಷವಾದ ಸೌಲಭ್ಯಗಳನ್ನು ಹೊಂದಿದ್ದಾರೆ. ಅವರು ಕೇಂದ್ರ ಸರ್ಕಾರದ ಅಧೀನ ಇಲಾಖೆಯಲ್ಲಿ ಕೆಲಸ ಮಾಡುವಾಗ ಕೇಂದ್ರದ ಉದ್ಯೋಗಿಗಳಾಗಿರುತ್ತಾರೆ. ರಾಜ್ಯ ಸರ್ಕಾರದ ಕರ್ತವ್ಯದಲ್ಲಿ ಇರುವಾಗ ರಾಜ್ಯ ಸರ್ಕಾರದ ಉದ್ಯೋಗಿಗಳಾಗಿರುತ್ತಾರೆ ಎಂದು ಮದ್ರಾಸ್‌ ಹೈಕೋರ್ಟ್‌ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ.

ಇದೇ ಭಾವನೆಯು ಗುವಾಹಟಿ ಮತ್ತು ಹೈದರಾಬಾದ್‌ ಸೆಂಟ್ರಲ್‌ ಅಡ್ಮಿನಿಸ್ಟರೇಟಿವ್‌ ಟ್ರಿಬ್ಯುನಲ್‌ ಗಳು ವ್ಯಕ್ತಪಡಿಸಿವೆ. ಒಮ್ಮೆ ಆಲ್‌ ಇಂಡಿಯಾ ಸರ್ವಿಸ್‌ ಅಧಿಕಾರಿಯು ರಾಜ್ಯಗಳ ಸೇವೆಗೆ ನೇಮಕಗೊಂಡ ಮೇಲೆ ಅವರು ರಾಜ್ಯ ಸರ್ಕಾರದ ಉದ್ಯೋಗಿಗಳಾಗುತ್ತಾರೆ, ಅವರು ಆಲ್ ಇಂಡಿಯಾ ಸರ್ವಿಸ್‌ ರೂಲ್ಸ್‌, 1969 ರ ನಿಯಮ 7 ಅಡಿಯಲ್ಲಿ ಬರುವುದಿಲ್ಲ. ಶಿಸ್ತು ಕ್ರಮ ಮತ್ತು ಮನವಿಯ ಅವಕಾಶ ವಿರುವ ನಿಯಮ 7 ರಾಜ್ಯ ಸರ್ಕಾರದ ಸೇವೆಯಲ್ಲಿರುವ ಅಧಿಕಾರಿಗಳಿಗೆ ಅನ್ವಯವಾಗುವುದಿಲ್ಲ ಎಂದು ಹೇಳಿ ಕೇಂದ್ರ ಸರ್ಕಾರದ ದೂರನ್ನು ವಜಾ ಮಾಡಿತ್ತು.

ಈ ಮೇಲಿನ ಆದೇಶಗಳಿಗೆ ವ್ಯತಿರಿಕ್ತವಾಗಿ ಗುಜರಾತ್‌ ಹೈಕೋರ್ಟ್‌ 2007 ರ ʼಪ್ರೇಮ್‌ಶಂಕರ್‌ ವಿ ಭಟ್‌ Vs ಗುಜರಾತ್‌ ರಾಜ್ಯʼ ಪ್ರಕರಣದಲ್ಲಿ ಕೇಂದ್ರ ಸರ್ಕಾರಕ್ಕೆ ಮಾತ್ರ ಐಎಎಸ್‌ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಮತ್ತು ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರ ಇದೆ. ರಾಜ್ಯ ಸರ್ಕಾರಗಳಿಗೆ IAS ಅಧಿಕಾರಿಗಳ ವಿಷಯದಲ್ಲಿ ಕ್ರಮ ಕೈಗೊಳ್ಳುವ ಅಧಿಕಾರ ಇರುವುದಿಲ್ಲ ಎಂದು ಆದೇಶ ನೀಡಿದೆ. ಈ ಪ್ರಕರಣದಲ್ಲಿ ಆಲ್‌ ಇಂಡಿಯಾ ಸರ್ವಿಸ್‌ ಅಧಿಕಾರಿಗಳು ಕೇಂದ್ರ ಸರ್ಕಾರದಿಂದ ಉದ್ಯೋಗಕ್ಕೆ ಆಯ್ಕೆಯಾದವರಾಗಿದ್ದಾರೆ. ಅಧಿಕಾರಿಗಳ ನೇಮಕ, ಪ್ರೊಬೆಶನರಿ, ಭತ್ಯೆ, ವರ್ಗಾವಣೆ, ರಜೆ ಮತ್ತು ಇತರ ಸೌಲಭ್ಯ, ಸಂಬಳ, ನಿವೃತ್ತಿ, ಗೌಪ್ಯತೆ , ಸೇವಾವಧಿಯ ವಿಸ್ತರಣೆ, ಕೆಲಸದಿಂದ ವಜಾ ಎಲ್ಲವೂ ಕೂಡ ಕೇಂದ್ರ ಸರ್ಕಾರದ ಅಧೀನದಲ್ಲೆ ಬರುತ್ತವೆ ಎಂದು ಗುಜರಾತ್‌ ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಬೇರೆ ಬೇರೆ ನ್ಯಾಯಾಲಯಗಳ ಬೇರೆ ಬೇರೆ ಆದೇಶಗಳ ನಡುವೆ ಹೆಚ್ಚಿನ ನ್ಯಾಯಶಾಸ್ತ್ರಜ್ಞರ ಮತ್ತು ನ್ಯಾಯಾಧೀಶರ ಅಭಿಪ್ರಾಯ ರಾಜ್ಯ ಸರ್ಕಾರದ ಕರ್ತವ್ಯಕ್ಕೆ ನಿಯುಕ್ತಿಗೊಂಡ ಅಧಿಕಾರಿಗಳು ರಾಜ್ಯದ ಅಧೀನದಲ್ಲಿ ಬರುತ್ತಾರೆ ಎಂಬ ಕಡೆಯೇ ವಾಲುತ್ತದೆ.

IAS ಅಧಿಕಾರಿಯ ನಿವೃತ್ತಿಯ ನಂತರ ಕೇಂದ್ರ ಸರ್ಕಾರ ವಿಚಾರಣೆ ನಡೆಸಬಹುದೇ?

ಬಂದೋಪಾದ್ಯಾಯ್‌ ಅವರ ಪ್ರಕರಣವು ಅವರ ನಿವೃತ್ತಿಯಿಂದಾಗಿ ಇನ್ನಷ್ಟು ಕಗ್ಗಂಟಾಗಿ ಪರಿಣಮಿಸಿದೆ. ಮೇ 31 ರಂದು ಬಂದೋಪಾದ್ಯಾಯ ತಮ್ಮ ಆಲ್‌ ಇಂಡಿಯಾ ಸರ್ವಿಸ್‌ ಅಡಿಯ ಉದ್ಯೋಗದಿಂದ ನಿವೃತ್ತರಾಗಿದ್ದಾರೆ. ಹಾಗಾದರೆ ನಿವೃತ್ತಿಯ ನಂತರ ಕೇಂದ್ರ ಸರ್ಕಾರವು ಬಂದೋಪಾದ್ಯಾಯ ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಬಹುದೇ?

ಸುಪ್ರಿಂ ಕೋರ್ಟ್‌ 1971 ರಲ್ಲಿ IAS ಅಧಿಕಾರಿಗಳ ನಿವೃತ್ತಿಯ ನಂತರ ಅವರ ವಿರುದ್ಧ ವಿಚಾರಣೆಗಳನ್ನು ನಡೆಸುವ ಕುರಿತು ತನ್ನ ಆದೇಶದಲ್ಲಿ ಸ್ಪಷ್ಟತೆಯನ್ನು ನೀಡಿದೆ. 1971 ರಲ್ಲಿ ʼಪಿ.ಆರ್‌ ನಾಯಕ್‌ Vs ಭಾರತ ಸರ್ಕಾರʼ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಇಂಡಿಯನ್‌ ಸಿವಿಲ್‌ ಸರ್ವಿಸ್‌ ನ ಸದಸ್ಯರ ನಿವೃತ್ತಿಯ ನಂತರದಲ್ಲಿ ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಬೇರೆ ಉದ್ಯೋಗಿಗಳನ್ನು ನಿವೃತ್ತಿಯ ನಂತರವೂ ಇಲಾಖಾ ವಿಚಾರಣೆಗೆ ಒಳಪಡಿಸಬಹುದು ಎಂಬ ಸ್ಪಷ್ಟ ಆದೇಶವನ್ನು ನೀಡಿದೆ.
2014 ರಲ್ಲಿ ಸುಪ್ರೀಂ ಕೋರ್ಟ್‌ ದೇವ್‌ ಪ್ರಕಾಶ್‌ Vs ಉತ್ತರ ಪ್ರದೇಶ ಕೊ ಆಪರೇಟಿವ್‌ ಸಂಸ್ಥೆ ಪ್ರಕರಣದಲ್ಲಿ IAS ಅಧಿಕಾರಿಯ ನಿವೃತ್ತಿಯ ನಂತರ ಅವರ ವಿರುದ್ಧವಿರುವ ಇಲಾಖಾ ವಿಚಾರಣೆಯನ್ನು ಮುಂದುವರಿಸಬಾರದು. ನಿಯಮಗಳ ಪ್ರಕಾರ ವಿಚಾರಣೆಯನ್ನು ನಡೆಸಲು ಅವಕಾಶವಿಲ್ಲದಿದ್ದಾಗ ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಯು ನಿವೃತ್ತಿಯ ನಂತರದಲ್ಲಿ ವಿಚಾರಣೆಯನ್ನು ಮುಂದುವರೆಸಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್‌ ಈ ಪ್ರಕರಣದಲ್ಲಿ ಹೇಳಿದೆ.

ಬಂದೋಪಾದ್ಯಾಯ್‌ ಅವರ ಪ್ರಕರಣದಲ್ಲಿ ಆಲ್‌ ಇಂಡಿಯಾ ಸರ್ವಿಸ್‌ ರೂಲ್ಸ್‌ 1983 ರ ನಿಯಮಾವಳಿಗಳು IAS ಅಧಿಕಾರಿಯು ನಿವೃತ್ತನಾಗಿ ನಾಲ್ಕು ವರ್ಷಗಳ ಅವಧಿಯ ವರೆಗೆ ಇಲಾಖಾ ವಿಚಾರಣೆಗೆ ಅವಕಾಶವನ್ನು ಕಲ್ಪಿಸುತ್ತದೆ. ಆದರೆ ರಾಜ್ಯ ಸರ್ಕಾರದ ಸೇವೆಯಲ್ಲಿರುವ IAS ಅಧಿಕಾರಿಯ ವಿರುದ್ಧ ಚಾರ್ಜ್‌ ಶೀಟ್‌ ಸಲ್ಲಿಸುವ ಅಧಿಕಾರ ಯಾರಿಗಿದೆಯೆಂದು ಈ ನಿಯಮಾವಳಿಗಳು ಎಲ್ಲೂ ಸ್ಪಷ್ಟವಾಗಿ ಹೇಳುವುದಿಲ್ಲ.

ಒಂದು ವೇಳೆ ಬಂದೋಪಾದ್ಯಾಯ್‌ ಅವರ ವಿರುದ್ಧ ಇಲಾಖಾ ತನಿಖೆಯನ್ನು ನಡೆಸುವುದೇ ಆದರೆ ಅವರ ವಿರುದ್ಧ ಚಾರ್ಜ್‌ ಶೀಟ್‌ ಸಲ್ಲಿಸುವ ಅಧಿಕಾರ ಯಾರಿಗಿದೆ? ಕೇಂದ್ರ ಸರ್ಕಾರಕ್ಕೋ ? ಅಥವಾ ರಾಜ್ಯ ಸರ್ಕಾರಕ್ಕೋ?

ದೇಶದಲ್ಲಿ ಇದುವರೆಗೆ ಈ ಸಮಸ್ಯೆ ಉದ್ಭವವಾಗಿಲ್ಲ. ಈ ಹೊಸ ಸಮಸ್ಯೆಗೆ ಹೈ ಕೋರ್ಟ್‌ ಅಥವಾ ಸುಪ್ರೀಂ ಕೋರ್ಟ್‌ ಗಳು ಮಾತ್ರ ಸಮರ್ಪಕ ಉತ್ತರವನ್ನು ನೀಡಲು ಸಾಧ್ಯ.


ಇದನ್ನೂ ಓದಿ: ಸರ್ಕಾರದ ಹುದ್ದೆಗೆ ನಿವೃತ್ತಿ – ಸಿಎಂ ಮಮತಾ ಬ್ಯಾನರ್ಜಿಯವರ ಮುಖ್ಯ ಸಲಹೆಗಾರರಾಗಿ ನೇಮಕಗೊಂಡ ಅಲಪಾನ್‌ ಬಂದೋಪಾದ್ಯಾಯ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...