Homeಕರ್ನಾಟಕಸಿ.ಎಂ ಯಡ್ಡಿಗೇಕೆ ಉತ್ತರ ಕನ್ನಡವೆಂದರೆ ತಾತ್ಸಾರ?

ಸಿ.ಎಂ ಯಡ್ಡಿಗೇಕೆ ಉತ್ತರ ಕನ್ನಡವೆಂದರೆ ತಾತ್ಸಾರ?

- Advertisement -
- Advertisement -

ಕರ್ನಾಟಕ ನೆರೆಸಂತ್ರಸ್ತರ ಬಗ್ಗೆ ಪಿ.ಎಂ ಮೋದಿ ಮಾಹಾತ್ಮನಿಗೆಷ್ಟು ತಿರಸ್ಕಾರವೋ ಅಷ್ಟೇ ಅಸಡ್ಡೆ ಉತ್ತರ ಕನ್ನಡದ ಬದುಕು ನಲುಗಿದ ಮಂದಿಯ ಬಗ್ಗೆ ಯಡ್ಡಿಗಿದೆ. ಮೋದಿಗೆ ಯಡ್ಡಿಯ ಪಠಾಲಮ್ ಮೇಲೆ ಪೂರ್ವಾಗ್ರಹವಾದರೆ ಯಡ್ಡಿಗೆ ಉತ್ತರ ಕನ್ನಡದ ಸಂಸದಶಿಖಾಮಣಿ ಅನಂತಕುಮಾರ ಹೆಗಡೆ ಎಂದರೆ ನಿಗಿನಿಗಿ ಕೋಪ. ಒಟ್ಟಿನಲ್ಲಿ ನೊಂದವರಿಗೆ ಇನ್ನಷ್ಟೂ ನೋವು ಅಧಿಕಾರಸ್ಥರಿಗೆ ದ್ವೇಷಾಸೂಯೆಯ ಮೋಜು..

ಉತ್ತರಕನ್ನಡದಲ್ಲಿ ಅಗಸ್ಟ್ 5 ರಿಂದ 10 ರವರಗೆ ಪ್ರಳಯಾಂತಕ ಮಳೆಸುರಿದು ಹೆಚ್ಚು ಕಮ್ಮಿ 750 ಕೋಟಿ ರೂ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಸಮಿಕ್ಷೆ ನೆಡೆಸಿದೆ. ಮೂರ್ನಾಲ್ಕು ಜೀವ ಹರಣವಾಗಿವೆ. ನೂರಾರು ಜಾನುವಾರಗಳು ಸತ್ತು ಹೋಗಿವೆ. ಸಾವಿರಾರು ಎಕೆರೆ ತೋಟ-ಗದ್ದೆ ಕೊಚ್ಚಿಕೊಂಡು ಹೋಗಿವೆ. ಬರೋಬ್ಬರಿ 2,500 ಮನೆಗಳು ಮುರಿದು ಬಿದ್ದಿವೆ. ನೆರೆ ಹಾವಳಿ ಸಂತ್ರಸ್ತರಿಗೆ ಎರಡು ತಿಂಗಳಾದರೂ ಬದುಕು ಕಟ್ಟಿಕೊಳ್ಳಲಾಗದೆ ಒದ್ದಾಡುತ್ತಿದ್ದಾರೆ. ಸಿಎಂ ಸಾಹೇಬರು ಬಂದು ತಮ್ಮ ಕಣ್ಣಿರು ಒರೆಸುತ್ತಾರೆಂಬ ನಿರೀಕ್ಷೆಯಲ್ಲಿದ್ದ ನೆರೆಪಿಡಿತ ಜನತೆಗೆ ಮೂರು ಬಾರಿ ಯಡ್ಡಿ ಮೋಸಮಾಡಿದ್ದಾರೆ.

ವಾರದಲ್ಲಿ ಎರಡು ಮೂರು ಬಾರಿ ಸಿಎಂ ನೆರೆ ಪೀಡಿತ ಪ್ರದೇಶಗಳಿಗೆ ಬರುತ್ತಾರೆಂದು ಜಿಲ್ಲಾಡಳಿತ ಎಲ್ಲಾ ಸಿದ್ದತೆ ಮಾಡಿತ್ತು. ಕಳೆದ ತಿಂಗಳು ಸಿಎಂ ಬರುವುದು ಗ್ಯಾರಂಟಿಯೆಂದು ನೆರೆ ಸಂತ್ರಸ್ತರು ಕಾದು ಕುಳಿತ್ತಿದ್ದರು. ಎಂಮ್ಮೆಲ್ಲೆಗಳು, ಸಂಸದರು ಯಡ್ಡಿ ಸ್ವಾಗತಿಸಲು ಅಲ್ಲಿ ನೆರದಿದ್ದರು. ಅಧಿಕಾರಿಗಳ ದಂಡಂತು ನಡುವತ್ತಿಗೆ ಬಂದಿತ್ತು. ಆದರೆ ಪಕ್ಕದ ಶಿವಮೊಗ್ಗದಲ್ಲಿದ ಯಡ್ಡಿ ಧಿಡೀರ್ ಉತ್ತರಕನ್ನಡಕ್ಕೆ ಬರಲಾರೇನೆಂದು ಸಂದೇಶ ಕಳುಹಿಸಿದರು. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ತನ್ನ ಹಿತಶತ್ರುವೂ ಆದ ಈಶ್ವರಪ್ಪ ಕರೆದಿದ್ದ ಅಧಿಕಾರಿಗಳ ಸಭೆಗೆ ನುಗ್ಗಿ ನಿಭಾಯಿಸಿದ್ದರು. ಶಿವಮೊಗ್ಗೆಯ ಚೆಡ್ಡಿ ರಾಜಕಾರಣದ ಮೇಲಾಟಕ್ಕೆ ಉತ್ತರಕನ್ನಡ ಕಡೆಗಣಿಸ ಬೇಕಾಯಿತು.

ನೆರೆ ಹಾನಿಯ ಪರಿಶೀಲನೆಗೆಂದು ಪಕ್ಕದ ಧಾರವಾಡದ ಮಂತ್ರಿ ಜಗದೀಶ್ ಶೆಟ್ಟರ್ ಜಿಲ್ಲೆಗೊಮ್ಮೆ ಬಂದು ಹಾಗೆ ಹೋಗಿದ್ದರು. ಜಿಲ್ಲಾ ಉಸ್ತುವಾರಿ ಮಂತ್ರಿ ಶಶಿಕಲಾ ಜೊಲ್ಲೆ ಮೊನ್ನೆ ಬಂದು ಬೈ ಹೇಳಿದ್ದಾರೆ. ಜಿಲ್ಲೆಯ ಭೌಗೋಳಿಕ, ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಒಂಚೂರು ಗೊತ್ತಿಲ್ಲದ ಈ ಮಂತ್ರಿ, ಅಧಿಕಾರಿ ಹೇಳಿದ್ದಕೆ ಗೋಣು ಆಡಿಸಿದ್ದಾರೆ. ತಾವು ಬಂದಿದ್ದು ಬರೀ ಮಾಹಿತಿಯನ್ನು ಬಾಯಲ್ಲಿ ಸಿಎಂಗೆ ತಲುಪಿಸುವ ಪೋಸ್ಟ್ ಮ್ಯಾನ್ ಚಾಕರಿಗಷ್ಟೇ ಎಂಬಂತೆ ಹೊಣಗೆಡಿ ಮಾತನಾಡಿದ್ದಾರೆ. ಸಿಎಂ ಜೊತೆ ಚರ್ಚಿಸುತೇನೆಂದು ಮಂತ್ರಿಗಳು ಹೇಳಿದ್ದಾರೆಯೇ ಹೊರತು ಇಂತಿಷ್ಟು ಪರಿಹಾರಕ್ಕೆ ಬೇಡಿಕೆ ಇಡುತ್ತೇವೆಂದಾಗಲಿ, ನೊಂದವರಿಗೆ ಸೂಕ್ತ ಪರಿಹಾರ ಕೊಡುತ್ತೇವೆ ಎಂದಾಲಿ ಧೈರ್ಯದಿಂದ ಹೇಳಿಲ್ಲ. ಈ ಮಂತ್ರಿಗಳ ದಂಡಿನ “ದಂಡ” ಯಾತ್ರೆಗೆ ಮತ್ತು ಸಿಎಂ ಬರ್‍ತಾರೆಂದು ಮಾಡಿದ ಸಿದ್ದತೆಗೆ ಲಕ್ಷಾಂತರ ಹಾನಿಯಾಗಿದೆ ಹೊರತು ನೆರೆ ಪಿಡಿತರಿಗೆ ಪೈಸೆ ಫಾಯ್ದೆ ಆಗಿಲ್ಲ.

ಹನ್ನೊಂದು ಸಾವಿರಕ್ಕೂ ಹೆಚ್ಚು ಮಂದಿ ಪರಿಹಾರ ಕೇಂದ್ರಗಳನ್ನು ಸೇರಿದ್ದರು. ಇದಕ್ಕಿಂತಲು ಹೆಚ್ಚು ಮಂದಿ ನೆರೆಯಿಂದ ದಿಕ್ಕೆಟ್ಟು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದರು. ಕೆಲವರಿಗೆ ಪಂಚಕಜ್ಜಾಯ ಕೊಟ್ಟಂತೆ ಹನಿ ಹನಿ ಹಣ ‘ಪರಿಹಾರ’ ಹಂಚಿದ್ದಾರೆ. ಇದು ಹೊಸ ಬದುಕು ಕಟ್ಟಿಕೊಳ್ಳಲು ನೆರವಾಗಿಲ್ಲ. ರಸ್ತೆ, ಕಾಲು ಸುಂಕ, ಬ್ರಿಡ್ಜ್, ವಿದ್ಯುತ್ ಕಂಬ, ಡ್ಯಾಮು, ಕೆರೆ, ಬಾವಿ ಕೊಚ್ಚಿ ಹೋಗಿವೆ. ನೆರೆಬಂದ ಪ್ರದೇಶಗಳಂತೂ ನರಕವಾಗಿವೆ. ಜನರಿಗಾದ ಆಘಾತವನ್ನು ಆಳುವವರ ಎದುರು ಸಮರ್ಥವಾಗಿ ಮಂಡಿಸಿ ಪರಿಹಾರ ತರುವ ನಾಯಕತ್ವ ಉತ್ತರಕನ್ನಡದಲ್ಲಿ ಇಲ್ಲ. ಬಿಜೆಪಿಯಿಂದ ಆರರಲ್ಲಿ ನಾಲ್ಕುಜನ ಶಾಸಕರಾಗಿದ್ದಾರೆ. ಒಬ್ಬ ಅನರ್ಹನು ಬಿಜೆಪಿ ಪಾಲಾಗಿದ್ದಾನೆ. ತಾನು ಹುಟ್ಟಿದೇ ದೇಶಉದ್ದಾರಕೆಂದು ಎಂಬಂತೆ ನಾಲಿಗೆ ಹರಿಬಿಡುವ ಸಂಸದ ಆರನೇ ಭಾರಿ ಪಾರ್ಲಿಮೆಂಟಿನ ಕುರ್ಚಿ ಬಿಸಿ ಮಾಡಲು ಆಯ್ಕೆಯಾಗಿದ್ದಾನೆ.

ಇವರ್‍ಯಾರಿಗೂ ಸಿಎಂ ಎದುರು ನಿಂತು ಸಮಸ್ಯ ವಿವರಿಸುವ ಧೈರ್ಯವಿಲ್ಲ. ಕಾರವಾರ ಶಾಸಕಿ ರೂಪಾಲಿ ನಾಯ್ಕಳಂತೂ ಹೆಜ್ಜೆ-ಹೆಜ್ಜೆಗೆ ಶೋ ಮಾಡುವುದೆ ಶಾಸಕಿಯ ಕರ್ತವ್ಯ ಎಂದುಕೊಂಡಿದ್ದಾಳೆ. ನೆರೆ ಬಂದಾಗ ಸಮ್ಮಿಶ್ರ ಸರ್ಕಾರ ಉರುಳಿಸುವ ಬಿಜೆಪಿ ರೆಸಾರ್ಟ್‌ ಸರ್ಕಸ್‍ನಲ್ಲಿದ ಈಕೆ ತಾನು ಅನಿವಾರ್ಯವಾಗಿ ರೆಸಾರ್ಟ್ ಸೇರಿದ್ಧೇನೆ… ನೊಂದ ನೆರೆ ಪೀಡಿತರ ಬಳಿ ಬರಲಾಗುತ್ತಿಲ್ಲವೆಂದು ಜಾಹಿರಾತು ಪತ್ರಿಕೆಗಳಿಗೆ ಕೊಟ್ಟು ತಾನೆಂತಹ ನಾಲಾಯಕ್ ಜನಪ್ರತಿನಿಧಿ ಎಂದು ತೋರಿಸಿಕೊಂಡಿದ್ದಾಳೆ. ಬಟ್ಕಳದ ಬಚ್ಚಾ ಶಾಸಕ ಸುನಿಲನಾಯ್ಕ್ ಸಿಎಂ ಇರಲಿ ಸಂಸರ ಮುಂದೆನಿಂತು ಮಾತನಾಡುವ ಧೈರ್ಯವಿಲ್ಲ. ಕುಮುಟೆಯ ಶಾಸಕ ದಿನಕರ್ ಶೆಟ್ಟಿಗೆ ಕಿಕ್‌ಬ್ಯಾಕ್‌ ಕಮಾಯಿಯೇ ನೆರೆ ಪೀಡಿತರ ಸೇವೆ ಎಂಬ ಭಾವನೆ.

ಈಗ ಎರಡನೆ ಸುತ್ತಿನ ನೆರೆ ವಿಕ್ಷಣೆಗೆ ಸಿಎಂ ಯಡ್ಡಿ ರೆಡಿಯಾಗಿದ್ದಾರೆ. ಬೀದರ್, ವಿಜಯಪುರ, ಬಾಗಲಕೋಟೆ, ಬೆಳಗಾವಿ ಮತ್ತಿತರ ಕಡೆ ಸಿಎಂ ಸಂಚಾರ ಮಾಡುತ್ತಿದ್ದಾರೆ. ಆದರೆ ಆತನ ಟೂರ್ ಲಿಸ್ಟ್ ನಲ್ಲಿ ಉತ್ತರಕನ್ನಡ ಇಲ್ಲ.!! ಸಿಎಂ ಕಾಲರ್ ಹಿಡಿದು ಜಿಲ್ಲೆಗೆ ಕರೆತಬೇಕಿದ್ದ ಶಾಸಕರಿಗೆ ಆ ತಾಕತು ಇಲ್ಲ. ಸಿಎಂ ಕೆಂಗಣ್ಣಿಗೆ ಸಿಲುಕಿದರೆ ನಿಗಮ ಮಂಡಳಿ, ಗೂಟದ ಕಾರಿಗೆ ಸಂಚಕಾರ ಎಂಬ ಅಂಜಿಕೆ. ಸಿಎಂ ಮುಂದೆ ವಿರಾವೇಷದ ಮಾತಾಡುವ ಸಂಸದ ಅನಂತ್ಮಾಣಿಗೆ ಜನರೆಂದರೆ ಯಾವಾಗಲೂ ಅಲರ್ಜಿ. ಅತನಿಗೆ ಹಿಂದುತ್ವ ಗೊಂದಲಗಳಿಗಷ್ಟೆ ಕಾಲಾಳುಗಳು ಬೇಕು.

ಒಟ್ಟಿನಲ್ಲಿ ಉತ್ತರಕನ್ನಡದ ಸಮಸ್ಯಗಂತೂ ಉತ್ತರವಿಲ್ಲ.!!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...