Homeಮುಖಪುಟ"ಮಿಗ್-17 ವಿಮಾನ ಹೊಡೆದುರುಳಿಸಿದ್ದು ನಾವೇ" : ತಪ್ಪೊಪ್ಪಿಕೊಂಡ ವಾಯುಸೇನೆ ಮುಖ್ಯಸ್ಥ

“ಮಿಗ್-17 ವಿಮಾನ ಹೊಡೆದುರುಳಿಸಿದ್ದು ನಾವೇ” : ತಪ್ಪೊಪ್ಪಿಕೊಂಡ ವಾಯುಸೇನೆ ಮುಖ್ಯಸ್ಥ

- Advertisement -
- Advertisement -

ಕಳೆದ ವರ್ಷ ಕಾಶ್ಮೀರದ ಬದ್ಗಾಮ್ ನಲ್ಲಿ ಭಾರತೀಯ ವಾಯುಪಡೆಗೆ ಸೇರಿದ ಮಿಗ್- 17 ವಿಮಾನ ಹೊಡೆದುರುಳಿಸಿದ್ದು ನಮ್ಮವರೇ ಎಂದು ಭಾರತೀಯ ವಾಯುಸೇನಾ ಮುಖ್ಯಸ್ಥ ಮಾರ್ಷಲ್ ರಾಕೇಶ್‌ ಕುಮಾರ್ ಸಿಂಗ್ ಬದೌರಿಯಾ ಒಪ್ಪಿಕೊಂಡಿದ್ದಾರೆ.

ವಾಯುಸೇನೆಯ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬದೌರಿಯಾ, ಕಳೆದ ವರ್ಷ ಭಾರತೀಯ ವಾಯು ಸೇನೆ ಹಲವು ವಿಜಯಗಳನ್ನು ಸಂಪಾದಿಸಿದೆ, ಅದರಲ್ಲಿ ಬಾಲಾಕೋಟ್ ನ ಜೈಷೇ ಮೊಹಮ್ಮದ್ ಉಗ್ರರ ಕ್ಯಾಂಪ್ ಮೇಲೆ ದಾಳಿ ನಡೆಸಿದ್ದೂ ಕೂಡ ಒಂದು. ಇದರ ನಂತರ ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನೂ ಹೊಡೆದುರುಳಿಸಲಾಗಿತ್ತು. ಇದರ ಗಡಿಬಿಡಿಯಲ್ಲಿ ಭಾರತೀಯ ವಾಯುಸೇನೆಯಿಂದಲೇ ಭಾರತೀಯ ಸೇನೆಗೆ ಸೇರಿದ ಮಿಗ್-17 ವಿಮಾನವನ್ನೂ ಹೊಡೆದುರುಳಿಸಲಾಗಿತ್ತು. ಭಾರತೀಯ ಸೇನೆಗೆ ಸೇರಿದ ಮಿಸಾಯಿಲ್ ಗೆ ಮಿಗ್-17 ವಿಮಾನ ಡಿಕ್ಕಿಯಾಗಿತ್ತು. ಅದರಲ್ಲಿ 6 ಸಿಬ್ಬಂದಿಗಳು ಮತ್ತು ಒಬ್ಬ ನಾಗರಿಕ ಮೃತರಾಗಿದ್ದಾರೆ ಆಗಿದ್ದಾರೆ ಎಂದು ತಪ್ಪೊಪ್ಪಿಕೊಂಡರು.

ಈ ಸಂಬಂಧ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಪ್ರಕರಣದಲ್ಲಿ ಇಬ್ಬರು ಅಧಿಕಾರಿಗಳ ವಿಚಾರಣೆ ನಡೆಸಲಾಗಿದೆ. ಮೃತರನ್ನು ಯುದ್ಧದಲ್ಲಿ ಹುತಾತ್ಮರಾಗಿದ್ದಾರೆ ಎಂದು ಘೋಷಿಸಿ, ಗೌರವ ನೀಡಲಾಗುವುದು ಎಂದು ಹೇಳಿದರು. ಇನ್ನು ಯಾವುದೇ ಸಂದರ್ಭದಲ್ಲಿ ನೋಟಿಸ್ ಬಂದರೂ ಸಹ ಪಾಕಿಸ್ತಾನ ವಿರುದ್ಧ ಯುದ್ಧಕ್ಕೆ ವಾಯುಸೇನೆ ಸಿದ್ಧವಿದೆ ಎಂದು ಹೇಳಿದರು.

ಫೆಬ್ರವರಿ 14ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷೇ ಮೊಹಮ್ಮದ್ ಉಗ್ರರು ಸಿಆರ್ ಪಿಎಫ್ ನ 40ಕ್ಕೂ ಹೆಚ್ಚು ಯೋಧರ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದರು. ನಂತರ ಪಾಕಿಸ್ತಾನ ಗಡಿಯ ಬಾಲಾಕೋಟ್ ಗೆ ನುಗ್ಗಿದ್ದ ವಾಯುಸೇನೆ ಏರ್ ಸ್ಟ್ರೈಕ್ ಮೂಲಕ ಉಗ್ರರ ಕ್ಯಾಂಪ್ ಗಳನ್ನು ಹೊಡೆದುರುಳಿಸಿತ್ತು. ಇದೇ ವೇಳೆ ಮಿಗ್-17 ಕೂಡ ಪತನವಾಗಿ, 7 ಜನ ಮೃತಪಟ್ಟಿದ್ದರು..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಭಾರತದಲ್ಲಿ ಬಿಕ್ಕಟ್ಟಿನಲ್ಲಿ ಪತ್ರಿಕಾ ಸ್ವಾತಂತ್ರ್ಯ: ವರದಿ

0
ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಸ್ಥಿತಿ ಅತ್ಯಂತ ಕಟ್ಟದಾಗಿದ್ದು, ನೆರೆಯ ಪಾಕಿಸ್ತಾನ, ಶ್ರೀಲಂಕಾ, ನೇಪಾಳಕ್ಕಿಂತಲೂ ಕಳಪೆಯಾಗಿದೆ. ಇದು ಪ್ರಜಾಪ್ರಭುತ್ವ ದೇಶಕ್ಕೆ ಯೋಗ್ಯವಾದ ಬೆಳವಣಿಗೆಯಲ್ಲ ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಬಿಡುಗಡೆ ಮಾಡಿದ 2024ರ...