Homeನ್ಯಾಯ ಪಥದಕ್ಷಿಣ ಭಾರತದಿಂದ ಸ್ಪರ್ಧೆಸಲು ಮೋದಿ - ರಾಹುಲ್ ಮೀನಾಮೇಷ: ತೆರೆಯ ಹಿಂದಿನ ಸತ್ಯಗಳು

ದಕ್ಷಿಣ ಭಾರತದಿಂದ ಸ್ಪರ್ಧೆಸಲು ಮೋದಿ – ರಾಹುಲ್ ಮೀನಾಮೇಷ: ತೆರೆಯ ಹಿಂದಿನ ಸತ್ಯಗಳು

- Advertisement -
- Advertisement -

| ನೀಲಗಾರ |

ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಯವರು 2014ರಲ್ಲಿ ತಮ್ಮ ಸ್ವಂತ ರಾಜ್ಯವಾದ ವಡೋದರಾ ಅಲ್ಲದೇ ಮತ್ತೊಂದು ಕ್ಷೇತ್ರದಿಂದಲೂ ಸ್ಪರ್ಧಿಸುವ ಆಲೋಚನೆ ಮಾಡಿದಾಗ ಅವರು ಆರಿಸಿಕೊಂಡಿದ್ದು ಉತ್ತರ ಪ್ರದೇಶದ ವಾರಣಾಸಿಯನ್ನು. ಆ ಕ್ಷೇತ್ರವನ್ನೇ ಆರಿಸಿಕೊಳ್ಳಲು ಅವರಿಗೆ ಕೆಲವು ಪ್ರಮುಖವಾದ ಕಾರಣಗಳಿರಬಹುದು. ಆದರೆ, ಪಶ್ಚಿಮ ಭಾಗದಲ್ಲಿದ್ದರೂ, ಉತ್ತರ ಭಾರತದ ಜೊತೆಗೆ ಹೆಚ್ಚಿನ ಸಂಬಂಧ ಹೊಂದಿರುವ ಗುಜರಾತ್‍ನ ಆಚೆಗೆ ಅವರು ‘ಪೂರ್ವದ’ ಈಶಾನ್ಯ ಭಾರತವನ್ನೋ ಅಥವಾ ದಕ್ಷಿಣದ ರಾಜ್ಯವನ್ನೋ ಆರಿಸಿಕೊಳ್ಳಲಿಲ್ಲವೆಂಬುದು ಗಮನಾರ್ಹ.

2019ರ ಚುನಾವಣೆ ಹತ್ತಿರ ಬಂದ ಹಾಗೆ ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿಯಿಬ್ಬರೂ ದಕ್ಷಿಣದ ರಾಜ್ಯಗಳಲ್ಲಿ ಸ್ಪರ್ಧಿಸುತ್ತಾರೆಂಬ ಸುದ್ದಿಗಳು ಹರಿದಾಡಿದವು. ರಾಹುಲ್ ಬೆಂಗಳೂರು ಗ್ರಾಮಾಂತರ, ಮೈಸೂರು ಅಥವಾ ಕೇರಳದ ವಯನಾಡು ಇತ್ಯಾದಿ ಕ್ಷೇತ್ರಗಳಲ್ಲೊಂದರಿಂದ, ನರೇಂದ್ರ ಮೋದಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಎಂದು ಆ ಸುದ್ದಿಗಳಿದ್ದವು. ಇದುವರೆಗೆ ಅವ್ಯಾವುವೂ ಖಾತರಿಯಾಗಿಲ್ಲ; ಆದರೆ, ಈ ಸುದ್ದಿಗಳಿಗೆ ಆಧಾರವೇ ಇಲ್ಲವೆಂದು ಹೇಳಲಾಗದು. ಏಕೆಂದರೆ, ಒಂದೇ ದಿನ ಕೆಲವೇ ಗಂಟೆಗಳ ಅಂತರದಲ್ಲಿ ಸಿದ್ದರಾಮಯ್ಯ, ಪರಮೇಶ್ವರ್ ಮತ್ತು ದಿನೇಶ್ ಗುಂಡೂರಾವ್ ಮೂವರೂ ರಾಹುಲ್‍ಗಾಂಧಿಗೆ ಇಲ್ಲಿಂದ ಸ್ಪರ್ಧಿಸಲು ಆಹ್ವಾನ ಕೊಟ್ಟಿದ್ದರು.

ಈರ್ವರೂ ನಾಯಕರ ಸಾಮಥ್ರ್ಯ, ಗುಣಾವಗುಣಗಳೇನೇ ಇರಲಿ ಅವರು ದಕ್ಷಿಣದಿಂದ ಸ್ಪರ್ಧಿಸುವುದಕ್ಕೆ ಹಿಂದೆಂದಿಗಿಂತಲೂ ಮಹತ್ವ ಇಂದು ಸೃಷ್ಟಿಯಾಗಿದೆ. ಅದನ್ನು ಅವರು ಪರಿಗಣನೆಗೆ ತೆಗೆದುಕೊಳ್ಳದಿರಬಹುದು. ಒಂದು ವೇಳೆ ಸ್ಪರ್ಧಿಸಿದರೂ ಕೇವಲ ತಮ್ಮ ಗೆಲುವಿಗಾಗಿ ಅಥವಾ ಇಲ್ಲೂ ಹೆಚ್ಚಿನ ಸೀಟುಗಳನ್ನು ಗೆಲ್ಲುವ ಉದ್ದೇಶದಿಂದ ಅದನ್ನು ಮಾಡಬಹುದು. ದಕ್ಷಿಣದಿಂದ ಸ್ಪರ್ಧಿಸಬೇಕಾದುದಕ್ಕೆ ಬಹುಮುಖ್ಯವಾದ ಅಂಶವನ್ನು ನಿರ್ಲಕ್ಷಿಸುವುದು ಅವರ ದೃಷ್ಟಿಯಿಂದಲೂ, ದೇಶದ ದೃಷ್ಟಿಯಿಂದಲೂ ಒಳ್ಳೆಯದಲ್ಲ.

ಆ ಬಹುಮುಖ್ಯವಾದ ಅಂಶವೇನೆಂದರೆ, ಉತ್ತರ ಮತ್ತು ದಕ್ಷಿಣ ಭಾರತಗಳು ಎರಡು ಬೇರೆಯ ಭಾರತಗಳಾಗುವ ಕಡೆಗೆ ನಡೆದಿವೆ. ಇದು ಹಿಂದೆಂದೂ ಒಂದಾಗಿರಲಿಲ್ಲವೆಂದು ಹಲವರು ವಾದಿಸಬಹುದು; ಅದಕ್ಕೆ ಸಕಾರಣಗಳೂ ಇರಬಹುದು. ಆದರೂ, ದ್ರಾವಿಡ ಚಳವಳಿಯ ಉತ್ತುಂಗದ ನಂತರ ಎಲ್ಲರಲ್ಲೂ ಐಕ್ಯತೆಯ ಭಾವನೆ ದಿನೇ ದಿನೇ ಹೆಚ್ಚೇ ಆಗುತ್ತಿತ್ತು. ಅದು ಮತ್ತೆ ಕುಗ್ಗಲು ಆರಂಭಿಸಿದ್ದ ಬಿಜೆಪಿ 2014ರಲ್ಲಿ ಬಹುಮತದಿಂದ ಅಧಿಕಾರಕ್ಕೆ ಬಂದ ನಂತರವೇ. ದಕ್ಷಿಣದ ಎಲ್ಲಾ ರಾಜ್ಯಗಳಲ್ಲೂ ಬಿಜೆಪಿಯು ಅಸ್ತಿತ್ವದಲ್ಲಿದೆಯಾದರೂ, ಅಧಿಕಾರಕ್ಕೆ ಬಂದಿದ್ದು ಕರ್ನಾಟಕದಲ್ಲಿ ಮಾತ್ರ. ಇಲ್ಲಿಯೂ 2009ರಲ್ಲಿ ಅದಕ್ಕೆ ಸಂಪೂರ್ಣ ಬಹುಮತ ಬಂದಿರಲಿಲ್ಲವಾದರೂ ಪಕ್ಷೇತರರ ನೆರವಿನಿಂದ ಸರ್ಕಾರ ರಚಿಸಿದರು. ಇಲ್ಲಿ ಅಸ್ತಿತ್ವವಿಲ್ಲ ಎಂಬುದು ಮಾತ್ರ ಕಾರಣವಲ್ಲ. ಮಾರ್ಚ್ ತಿಂಗಳಲ್ಲಿ ನಡೆದ ಸಿ-ವೋಟರ್ ಸಮೀಕ್ಷೆಯಲ್ಲಿ ತಮಿಳುನಾಡಿನಲ್ಲಿ ಪ್ರಧಾನಿ ಸ್ಥಾನಕ್ಕೆ ಮೋದಿ ಕೇವಲ 2% ಮತದಾರರ ಒಲವನ್ನು ಮಾತ್ರ ಹೊಂದಿದ್ದಾರೆಂದು ಹೇಳಲಾಗಿದೆ. ಕೇರಳದಲ್ಲಿ ಅದು 7% ಆಗಿದೆ!

ಇದೇನೂ ಹೊಸದಾಗಿರಲಿಲ್ಲ. ಹಾಗೆ ನೋಡಿದರೆ ಭಾಜಪವು ದೀರ್ಘಕಾಲದಿಂದ ಉತ್ತರ ಭಾರತದ ಪಕ್ಷವಷ್ಟೇ ಆಗಿತ್ತು. 2014 ಮತ್ತು ನಂತರ ಅದು ಈಶಾನ್ಯ ಭಾರತದಲ್ಲಿ ಒಂದಲ್ಲಾ ಒಂದು ಮಾರ್ಗದಿಂದ ಸಂಪೂರ್ಣವಾಗಿ ಆವರಿಸಿಕೊಂಡಿತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲೂ ಅದು ಗೆದ್ದಿತ್ತಲ್ಲದೇ, ರಾಜ್ಯ ಸರ್ಕಾರದಲ್ಲೂ ಪಾಲುದಾರ ಪಕ್ಷವಾಗಿತ್ತು. ಕೇರಳದಲ್ಲೂ ಒಬ್ಬ ಎಂಎಲ್‍ಎ ಗೆದ್ದರು. ಶಬರಿಮಲೆ ಪ್ರಕರಣವನ್ನಿಟ್ಟುಕೊಂಡು ವಿಸ್ತರಿಸಲು ಪ್ರಯತ್ನಿಸಿದೆ. ಅದೇನೇ ಇದ್ದರೂ, ದಕ್ಷಿಣದಲ್ಲಿ ಅದು ಅಷ್ಟು ಯಶಸ್ವಿಯಾಗಿಲ್ಲ. 2009ರಲ್ಲಿ ಮೋದಿಯವರ ನೆರವಿಲ್ಲದೇ, ಬಿಜೆಪಿಯು 110 ಸೀಟುಗಳನ್ನು ಗೆದ್ದಿದ್ದರೆ, 2018ರಲ್ಲಿ ಮೋದಿಯವರ ಸತತ ಪ್ರಚಾರದ ನಂತರವೂ 104 ಸೀಟುಗಳನ್ನಷ್ಟೇ ಗೆದ್ದಿತು!

ಚಿತ್ರ ಕೃಪೆ ಸ್ಕ್ರೋಲ್.ಇನ್

ಇದು ಕೇವಲ ರಾಜಕೀಯ ವಿಸ್ತರಣೆಯ ಪ್ರಶ್ನೆ ಅಲ್ಲ. ತಮಿಳುನಾಡು ಮತ್ತು ಕೇರಳಗಳಿಗೆ ಪ್ರಧಾನಿಯ ಪ್ರವಾಸದ ಸಂದರ್ಭದಲ್ಲಿ ಭಾರೀ ವಿರೋಧ ಎದುರಾಯಿತು. ಮೋದಿ ಗೋ ಬ್ಯಾಕ್ ಎಂಬ ಹ್ಯಾಷ್‍ಟ್ಯಾಗ್ ಪ್ರತಿ ಸಾರಿಯೂ ಟ್ರೆಂಡ್ ಆಯಿತು. ಆಂಧ್ರ ಮತ್ತು ತೆಲಂಗಾಣಗಳಲ್ಲೂ ಮೋದಿಗೆ ಒಳ್ಳೆಯ ಸ್ವಾಗತವೇನೂ ದೊರೆಯಲಿಲ್ಲ. ಇವೆಲ್ಲವೂ ಏನು ತೋರಿಸುತ್ತವೆ?

ಹಾಗಾದರೆ ಈ ಎಲ್ಲಾ ರಾಜ್ಯಗಳಲ್ಲಿ ಅಧಿಕಾರ ನಡೆಸಿರುವ (ತಮಿಳುನಾಡಿನಲ್ಲಿ ಬಹಳ ಹಿಂದೆ ಮಾತ್ರವಲ್ಲದೇ, ಮೈತ್ರಿ ಸರ್ಕಾರಗಳಲ್ಲಿ ಕಾಂಗ್ರೆಸ್ ಇತ್ತೀಚಿನವರೆಗೂ ಭಾಗಿಯಾಗಿದೆ) ಕಾಂಗ್ರೆಸ್‍ನ ಪಕ್ಷಕ್ಕೆ ಅಂತಹ ಸಮಸ್ಯೆಯೇನೂ ಇಲ್ಲವೇ? ಈ ಸದ್ಯ ಹಾಗೆನ್ನಿಸಬಹುದಾದರೂ, ಇದು ಹೆಚ್ಚು ಕಾಲ ಉಳಿಯಲಾರದು. ಪ್ರಾದೇಶಿಕ ಪಕ್ಷಗಳು ದಕ್ಷಿಣದ ಮೂರು ರಾಜ್ಯಗಳಲ್ಲಿ ಪ್ರಬಲವಾಗಿವೆ ಮತ್ತು ಕಾಂಗ್ರೆಸ್ ಅಥವಾ ಬಿಜೆಪಿ ಅಲ್ಲಿ ಸ್ವಂತವಾಗಿ ಅಧಿಕಾರ ಪಡೆದುಕೊಳ್ಳುವ ಸಾಧ್ಯತೆ ಹತ್ತಿರದಲ್ಲೆಲ್ಲೂ ಕಾಣುತ್ತಿಲ್ಲ. ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ದಕ್ಷಿಣೇತರ ರಾಜ್ಯಗಳಲ್ಲೂ ಇವೆಯಾದರೂ, ಅವು ದೆಹಲಿಯ ಜೊತೆಗೆ ಸುಲಭದಲ್ಲಿ ಸಂಬಂಧ ಕುದುರಿಸಿಕೊಳ್ಳಬಲ್ಲವು.

ದ್ರಾವಿಡ ಸಂಸ್ಕøತಿ ಉತ್ತರದ ಸಂಸ್ಕೃತಿಗಿಂತ ಭಿನ್ನ. ಪ್ರಬಲ ದ್ರಾವಿಡ ಚಳವಳಿ ಬೆಳೆದ ತಮಿಳುನಾಡು, ಎಡಪಂಥೀಯ ಚಳವಳಿಗಳು ಪ್ರಬಲವಾಗಿದ್ದ ಅವಿಭಜಿತ ಆಂಧ್ರ ಮತ್ತು ಕೇರಳ ಹಾಗೂ ಪ್ರಗತಿಪರ ಚಳವಳಿಗಳ ಪ್ರಭಾವವಿದ್ದ ಕರ್ನಾಟಕವಿರುವ ದ.ಭಾರತದ ರಾಜ್ಯಗಳು ಉತ್ತರ ಪ್ರದೇಶ, ಹರಿಯಾಣ ಅಥವಾ ರಾಜಸ್ತಾನಕ್ಕಿಂತ ಸಂಪೂರ್ಣ ಭಿನ್ನ. ಹಾಗೆಯೇ ಭಾಷೆಯೂ ಸಹಾ ಹಿಂದಿಯ ಜೊತೆಗೆ ಹೆಚ್ಚಿನ ಸಂಬಂಧ ಹೊಂದಿಲ್ಲ. ಒರಿಯಾ, ಗುಜರಾತಿ, ಮರಾಠಿ, ಪಂಜಾಬಿಗಳು ಹಿಂದಿಯ ಲಿಪಿ ಹಾಗೂ ಪದಕೋಶದ ಜೊತೆಗೆ ಬಹುಮಟ್ಟಿಗೆ ಸಂಬಂಧ ಹೊಂದಿವೆ.

ಈ ಭಿನ್ನತೆಗಳಿಗಿಂತ ಮುಖ್ಯವಾಗಿ ಜನಸಂಖ್ಯಾ ಬೆಳವಣಿಗೆ ಮತ್ತು ಆರ್ಥಿಕ ಬೆಳವಣಿಗೆ ಹಾಗೂ ಅದರ ಫಲದ ವಿತರಣೆಯಲ್ಲಿನ ವ್ಯತ್ಯಾಸಗಳು ದೊಡ್ಡ ಸಮಸ್ಯೆಯನ್ನುಂಟು ಮಾಡಲಿವೆ. ಭಾರತದ ‘ಅಭಿವೃದ್ಧಿ ಹೊಂದಿದ’ ರಾಜ್ಯಗಳಾದ ತ.ನಾಡು, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಂದ ಪ್ರತಿ ವ್ಯಕ್ತಿಯಿಂದ ಸಂಗ್ರಹವಾಗುವ ಸರಾಸರಿ ಕೇಂದ್ರ ತೆರಿಗೆಯು (2015ರಲ್ಲಿ) 21 ಸಾವಿರ ರೂ.ಗಳಿದ್ದರೆ, ಉ.ಪ್ರದೇಶ, ಬಿಹಾರ, ಮಧ್ಯಪ್ರದೇಶಗಳಿಂದ ತಲಾ 6 ಸಾವಿರ ರೂ.ಗಳಿವೆ. ಆದರೆ, ಉತ್ತರದ ರಾಜ್ಯಗಳು ತಾವು ಕೇಂದ್ರಕ್ಕೆ ನೀಡುವ ತೆರಿಗೆಗಿಂತ ಒಂದು, ಒಂದೂವರೆ ಅಥವಾ ಕೆಲವೊಮ್ಮೆ 2 ಪಟ್ಟು ಅನುದಾನವನ್ನು ಪಡೆದುಕೊಳ್ಳುತ್ತವೆ. ಆದರೆ, ಮೇಲೆ ಹೇಳಲಾದ ನಾಲ್ಕು ರಾಜ್ಯಗಳು ಅರ್ಧ ಅಥವಾ ಅದಕ್ಕಿಂತ ಕಡಿಮೆ ಅನುದಾನ ಪಡೆದುಕೊಳ್ಳುತ್ತವೆ. ಇದರ ಜೊತೆಗೆ, ಉತ್ತರದ ಹಿಂದುಳಿದ ರಾಜ್ಯಗಳಿಂದ ದೊಡ್ಡ ಪ್ರಮಾಣದ ವಲಸೆಯು ದಕ್ಷಿಣದ ರಾಜ್ಯಗಳಿಗೆ ಆಗುತ್ತಿದೆ.

ಮೇಲಿನ ಆರ್ಥಿಕ ಅನುದಾನ ಹಂಚಿಕೆಯ ವ್ಯತ್ಯಾಸ ನಡೆಯುತ್ತಿರುವಾಗಲೇ, ಉತ್ತರದ ರಾಜ್ಯಗಳಲ್ಲಿ ಜನಸಂಖ್ಯೆಯು ತೀವ್ರವಾಗಿ ಹೆಚ್ಚುತ್ತಿದೆ. ದಕ್ಷಿಣದ ರಾಜ್ಯಗಳಲ್ಲಿ ಜನಸಂಖ್ಯೆಯ ಏರಿಕೆಯ ದರ ಇಳಿಯುತ್ತಿದೆ. ಇದು ಮುಂದಿನ ದಿನಗಳಲ್ಲಿ ಬಿಕ್ಕಟ್ಟು ಇನ್ನೂ ಹೆಚ್ಚಲಿರುವ ಸೂಚನೆಯಾಗಿದೆ. ಜನಸಂಖ್ಯೆಗನುಗುಣವಾಗಿ ಲೋಕಸಭಾ ಕ್ಷೇತ್ರಗಳ ಪುನರ್‍ರಚನೆಯಾಗುವ ಕಾಲ ಬಂದರೆ (ಈ ಕುರಿತು ಪತ್ರಿಕೆಯ ಹಿಂದಿನ ಸಂಚಿಕೆಯಲ್ಲಿ ವಿವರವಾದ ಲೇಖನವಿದೆ) ದಕ್ಷಿಣದ ರಾಜ್ಯಗಳು ಸಂಸತ್ತಿನಲ್ಲಿ ಪ್ರತಿನಿಧಿಸುವ ತಮ್ಮವರ ಸಂಖ್ಯೆಯನ್ನು ಕಳೆದುಕೊಳ್ಳಲಿವೆ. ಈಗಾಗಲೇ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಹಾಕುವ ದಕ್ಷಿಣದ ಎಂಎಲ್‍ಎಗಳ ಮತಕ್ಕೂ, ಉತ್ತರದ ರಾಜ್ಯಗಳ ಎಂಎಲ್‍ಎಗಳ ಮತಕ್ಕೂ ಮೌಲ್ಯದಲ್ಲಿ ಬಹಳ ವ್ಯತ್ಯಾಸವಿದೆ. ಏಕೆಂದರೆ, ಅದು ಜನಸಂಖ್ಯೆಯ ಮೇಲೆ ಆಧಾರಿತವಾಗಿರುತ್ತದೆ.

ಇವೆಲ್ಲವೂ ಉಂಟು ಮಾಡಲಿರುವ ಪರಿಣಾಮವೇನು? ಹೆಚ್ಚೆಚ್ಚು ಪ್ರಾದೇಶಿಕ ಪಕ್ಷಗಳು ಜನರ ಒಲವು ಗಳಿಸುತ್ತಿರುವ ಈ ಹೊತ್ತಿನಲ್ಲಿ ಭಾರತದ ರಾಜಕಾರಣವನ್ನು ಮುನ್ನಡೆಸಲು ಬಯಸುವ ನಾಯಕರು ಇದನ್ನು ಹೇಗೆ ಬಗೆಹರಿಸಲಿಚ್ಛಿಸುತ್ತಾರೆ? ಕನಿಷ್ಠ ತಾವು ಎಲ್ಲರನ್ನೂ ಪ್ರತಿನಿಧಿಸುವವರು ಎಂದು ತೋರಿಸಲು ದಕ್ಷಿಣದಿಂದಲೂ ಸ್ಪರ್ಧಿಸಿದ್ದರೆ ಅದೂ ಒಳ್ಳೆಯದೇ. ಆದರೆ, ಕೇವಲ ತೋರಿಸುವುದರಿಂದ ಏನೂ ಆಗುವುದಿಲ್ಲ. ಬದಲಿಗೆ, ವಿವಿಧ ರೀತಿಯ ಭಿನ್ನತೆಗಳು, ತಾರತಮ್ಯಗಳು ಇರುವ ಈ ದೇಶದಲ್ಲಿ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ನೀತಿಯಿಲ್ಲದಿದ್ದರೆ, ದೇಶದಲ್ಲಿ ನೆಮ್ಮದಿಯ ವಾತಾವರಣ ಇರಲಾರದು. ಆ ನಿಟ್ಟಿನಲ್ಲಿ ಯೋಚಿಸುವ ನಾಯಕತ್ವ ದೇಶಕ್ಕೆ ಬೇಕಿದೆ.

ಆದರೆ, ಮೋದಿ ಮತ್ತು ರಾಹುಲ್ ಗಾಂಧಿ ಮಾಡುತ್ತಿರುವುದೇನು? ದಕ್ಷಿಣಕ್ಕೆ ಬರಬೇಕು, ಗೆಲ್ಲಬೇಕು ಎನ್ನುವ ಬಯಕೆಯನ್ನು ಹೊಂದಿದ್ದಾರೆ. ಅಧಿಕಾರ ರಾಜಕಾರಣದ ಲೆಕ್ಕಾಚಾರದಿಂದ ವದಂತಿಗಳನ್ನೂ ಹಬ್ಬಿಸಲಾಗುತ್ತದೆ. ನಂತರ ಮತ್ತೆ ಕೇವಲ ರಾಜಕೀಯ ಲೆಕ್ಕಾಚಾರದಿಂದ ಹಿಂಜರಿಯುತ್ತಾರೆ. ಈ ಬಯಕೆ-ಹಿಂಜರಿಕೆಯ ದ್ವಂದ್ವದಿಂದ ಅವರು ದಕ್ಷಿಣಾಪಥ ಕ್ರಮಿಸಿ, ದೇಶದ ಐಕ್ಯತೆಯನ್ನು ಗಟ್ಟಿಗೊಳಿಸಲಾರರು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...