Homeಕರ್ನಾಟಕಮುಸ್ಲಿಂ ಮೀಸಲಾತಿ ರದ್ದತಿ ಬಗ್ಗೆ ಮುಸ್ಲಿಮೇತರರು ಸಹ ಏಕೆ ಆತಂಕ ಪಡಬೇಕು?

ಮುಸ್ಲಿಂ ಮೀಸಲಾತಿ ರದ್ದತಿ ಬಗ್ಗೆ ಮುಸ್ಲಿಮೇತರರು ಸಹ ಏಕೆ ಆತಂಕ ಪಡಬೇಕು?

- Advertisement -
- Advertisement -

ಸರ್ವೋಚ್ಚ ನ್ಯಾಯಾಲಯವು ಬೊಮ್ಮಾಯಿ ಸರ್ಕಾರದ ಮುಸ್ಲಿಂ ಮೀಸಲಾತಿ ರದ್ದತಿ ಬಗ್ಗೆ ತರಾಟೆಗೆ ತೆಗೆದುಕೊಂಡಿತು. ಸರ್ಕಾರದ ಈ ತೀರ್ಮಾನವನ್ನು ಪ್ರತಿನಿಧಿಸುತ್ತ, “We’re just saying that prima facie, the order you have passed appears to suggest that the foundation of your decision-making process is shaky and flawed” ಎಂದು ಹೇಳಿತು. ಅಂದರೆ, ಸರ್ಕಾರ ಯಾವ ಆಧಾರದ ಮೇಲೆ ಈ ಆದೇಶವನ್ನು ತೆಗೆದುಕೊಂಡಿತೋ ಅದು ದೋಷಪೂರಿತವಾಗಿದೆ ಎಂದಿತು.

ಅಷ್ಟು ಮಾತ್ರವಲ್ಲದೆ, ಈಗ ಸಲ್ಲಿಸಿರುವ ದಾಖಲೆಗಳ ಪ್ರಕಾರ ಮುಸ್ಲಿಂ ಸಮುದಾಯವು ಹಿಂದುಳಿದ ವರ್ಗವಾಗಿದ್ದು, ಈ ಸಮುದಾಯಕ್ಕೆ ಹಲವು ವರ್ಷಗಳಿಂದ ಮೀಸಲಾತಿ ಜಾರಿಯಾಗಿದೆ; ಈಗ ದಿಢೀರನೆ ಈ ಸಮುದಾಯ ಹೇಗೆ ಮುಂದುವರೆದ ಸಮುದಾಯವಾಯಿತು ಎಂದು ನ್ಯಾಯಾಧೀಶರು ಪ್ರಶ್ನಿಸಿದರು.

ಸರ್ವೋಚ್ಚ ನ್ಯಾಯಾಲಯ ಸರ್ಕಾರವನ್ನು ಈ ರೀತಿ ತರಾಟೆಗೆ ತೆಗೆದುಕೊಳ್ಳಲು ಕಾರಣವೇನು?

ಅದಕ್ಕೂ ಮೊದಲು ಮುಸ್ಲಿಂ ಮೀಸಲಾತಿ ರದ್ದತಿ ಬಗ್ಗೆ ಇತರೆ ಸಮುದಾಯಗಳು ಸಹ ಏಕೆ ಆತಂಕ ಪಡಬೇಕು ಎಂದು ನೋಡೋಣ ಬನ್ನಿ.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಕರ್ನಾಟಕ ಸರ್ಕಾರ ದಿಢೀರನೆ ಮೂರು ಆದೇಶಗಳನ್ನು ಹೊರಡಿಸಿತು. ಒಂದು, ಪರಿಶಿಷ್ಟ ಜಾತಿಯಗಳಲ್ಲಿ ಒಳ ಮೀಸಲಾತಿ ಕಲ್ಪಿಸುವುದಕ್ಕೆ. ಎರಡನೆಯದಾಗಿ, ಮುಸ್ಲಿಂ ಸಮುದಾಯವನ್ನು 2 ಬಿ ಮೀಸಲಾತಿಯಿಂದ ತೆಗೆದು, ಅವರನ್ನು ಇಡಬ್ಲ್ಯುಎಸ್ ಮೀಸಲಾತಿ ಪಟ್ಟಿಗೆ ಸೇರಿಸಲು. ಮೂರನೆಯದು, ಈಗ ಮುಸ್ಲಿಂ ಸಮುದಾಯದ ಹೊರಹಾಕುವಿಕೆಯಿಂದ ಫ್ರೀ ಆದ 4% ಮೀಸಲಾತಿಯನ್ನು ಒಕ್ಕಲಿಗ ಹಾಗು ಲಿಂಗಾಯತ ಸಮುದಾಯಗಳಿಗೆ ತಲಾ 2% ಹಂಚಲು. ಈ ಎಲ್ಲಾ ಆದೇಶಗಳು ಸಹ ಕಾಂಟ್ರೊವರ್ಸಿಗೆ ಒಳಗಾಗಿವೆ.

ಮುಸ್ಲಿಂ ಮೀಸಲಾತಿ ರದ್ದುಪಡಿಸುವ ಸರ್ಕಾರದ ಈ ನಿರ್ಧಾರ ಪ್ರಜಾಪ್ರಭುತ್ವವನ್ನೇ ಆಪತ್ತಿನಲ್ಲಿಟ್ಟಿದೆ. ಇದಕ್ಕೆ ಕಾರಣಗಳು ಹಲವು. ಮೊದಲನೆಯದಾಗಿ, ಸರ್ಕಾರದ ಆದೇಶವೇ ಸುಳ್ಳುಗಳು ಹಾಗು ಅರ್ಧಸತ್ಯ ತುಂಬಿದೆ.

ಸುಳ್ಳುಗಳು:

1) ಮುಸ್ಲಿಂ ಸಮುದಾಯಕ್ಕೆ 2ಬಿ ಅಡಿಯಲ್ಲಿ ಮೀಸಲಾತಿ ನೀಡಿದಾಗ, ಯಾವುದೇ ಸಂಸ್ಥೆ/ಆಯೋಗ (ಬಾಡಿ), ಈ ಮೀಸಲಾತಿಯನ್ನು ಕೊಡುವಂತೆ ಹೇಳಿರಲಿಲ್ಲ.

2) ಮೀಸಲಾತಿ ಕೊಡಲು ಯಾವುದೇ ಅಂಕಿ ಅಂಶಗಳ/ವರದಿಯ ಆಧಾರವಿರಲಿಲ್ಲ.

ಜೊತೆಗೆ ಒಂದು ಸತ್ಯವನ್ನು ಮುಚ್ಚಿಡಲಾಗಿದೆ:

ಆಂಧ್ರ ಪ್ರದೇಶದಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಿದಾಗ, ಅದನ್ನು ಅಲ್ಲಿನ ಉಚ್ಚ ನ್ಯಾಯಾಲಯ ರದ್ದುಪಡಿಸಿತು ಎಂದು ಹೇಳಲಾಗಿದೆ ಹಾಗು ಈ ವಿಷಯ ಸರ್ವೋಚ್ಚ ನ್ಯಾಯಾಲಯದ ಮುಂದಿದೆ ಎಂದು ಹೇಳಲಾಗಿದೆ. ಆದರೆ ಅದೇ ಸರ್ವೋಚ್ಚ ನ್ಯಾಯಾಲಯವು, ಈ ಪ್ರಕರಣದ ವಿಚಾರಣೆ ನಡೆಸುತ್ತಾ, ಸದ್ಯದಲ್ಲಿಯೇ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಬಹುದು ಎಂದು ಹೇಳಿದ್ದನ್ನು ಮುಚ್ಚಿಡಲಾಗಿದೆ.

ಸುಳ್ಳುಗಳ ಸರಣಿ ಕೇವಲ ಆದೇಶದಲ್ಲ ಮಾತ್ರವಲ್ಲ, ನ್ಯಾಯಾಲಯದಲ್ಲೂ ಸರ್ಕಾರ ಸುಳ್ಳು ಹೇಳಲು ಯತ್ನಿಸಿತು. ಸರ್ಕಾರದ ಹಿರಿಯ ವಕೀಲರಾದ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಅವರು, ನ್ಯಾ.ಚಿನ್ನಪ್ಪ ರೆಡ್ಡಿ ವರದಿಯು, ಮುಸ್ಲಿಂ ಸಮುದಾಯ ಕೇವಲ ಶೈಕ್ಷಣಿಕವಾಗಿ ಹಿಂದುಳಿದಿದೆ, ಆದರೆ ಸಾಮಾಜಿಕವಾಗಿ ಅಲ್ಲ ಎಂದು ಹೇಳುತ್ತದೆ ಎಂದು ವಾದಿಸಿದರು. ಪೀಠದಲ್ಲಿ ಕರ್ನಾಟಕದಿಂದ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿರುವ ನ್ಯಾ. ನಾಗರತ್ನರವರು ಅದು ಸರಿಯಲ್ಲ, ನ್ಯಾ.ಚಿನ್ನಪ್ಪ ರೆಡ್ಡಿ ವರದಿ ಮುಸ್ಲಿಂ ಸಮುದಾಯ ಶೈಕ್ಷಣಿಕ ಹಾಗು ಸಾಮಾಜಿಕವಾಗಿ ಹಿಂದುಳಿದಿದೆ ಎನ್ನುತ್ತದೆ ಎಂದು ಅವರನ್ನು ತಿದ್ದಿದರು.

ಆದೇಶದಲ್ಲಿ ಸುಳ್ಳು ಹೇಳುವವರು, ನ್ಯಾಯಾಲಯದಲ್ಲಿ ಸುಳ್ಳು ಹೇಳುವವರು, ಮಾಧ್ಯಮಗಳಿಗೆ ಸುಳ್ಳು ಹೇಳದೆ ಇರುತ್ತಾರೆಯೇ?

ವಕೀಲರು ಹಾಗು ಸಂಸದರಾದ ತೇಜಸ್ವಿ ಸೂರ್ಯ, ’ಸಂವಿಧಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲಾತಿಗೆ ಅವಕಾಶವಿಲ್ಲ’ ಎಂದು ಸುಳ್ಳು ಹೇಳಿದ್ದಾರೆ. ಇನ್ನು ಕೆಲವು ಬಿಜೆಪಿ ನಾಯಕರು, ’ಸಂವಿಧಾನದಲ್ಲಿ ಮೀಸಲಾತಿ ಎಂಬುವುದು ಜಾತಿ ಆಧಾರಿತ ಮಾತ್ರ’ ಎಂದಿದ್ದಾರೆ. ಸಂವಿಧಾನದ ಅನುಚ್ಛೇದ 15 ಮತ್ತು 16ರಲ್ಲಿ, ಆರ್ಥಿಕ ಹಾಗೂ ಶೈಕ್ಷಣಿಕ ವರ್ಗಗಳಿಗೆ ಮೀಸಲಾತಿ ನೀಡಲಾಗುವುದು ಎಂದು ಹೇಳಿದೆ. ಅಲ್ಲಿ ಜಾತಿ ಅಥವಾ ಧರ್ಮವೆಂಬ ಪದ ಬಂದೇ ಇಲ್ಲ. ಅಲ್ಲದೆ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಿರುವುದನ್ನು ಕರ್ನಾಟಕ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳೂ ಎತ್ತಿಹಿಡಿದಿವೆ. ಇಷ್ಟಿದ್ದರೂ ಬಿಜೆಪಿ ನಾಯಕರು ಹಸಿ ಸುಳ್ಳನ್ನು ಆಡುತ್ತಿದ್ದಾರೆ.

ಇದನ್ನೂ ಓದಿ: ಮುಸ್ಲಿಂ ಮೀಸಲಾತಿ ರದ್ದು ವಿಚಾರ: ಅತಿ ಕಳಪೆ, ದೋಷಪೂರಿತ ನಿರ್ಧಾರವೆಂದು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಛೀಮಾರಿ

ಸರ್ಕಾರಿ ಆದೇಶಗಳಲ್ಲೇ ರಾಜಾರೋಷವಾಗಿ ಸುಳ್ಳುಗಳನ್ನೂ ಹೇಳುವಾಗ, ನ್ಯಾಯಾಲಯದಲ್ಲಿ ಸುಳ್ಳು ನುಡಿದಾಗ, ಮಾಧ್ಯಮಗಳ ಮುಂದೆ ಸುಳ್ಳು ನುಡಿದಾಗ ಇಂಥ ಸರ್ಕಾರವನ್ನು ನಂಬುವುದಾದರೂ ಹೇಗೆ?

ಎರಡನೆಯದಾಗಿ, ಯಾವುದೇ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆಯಬೇಕಾದರೆ, ಅದಕ್ಕಾಗಿ ಒಂದು ಪ್ರಕ್ರಿಯೆ ಇದೆ. ಮೊದಲು ಹಿಂದುಳಿದ ವರ್ಗಗಳ ಆಯೋಗವು ವಿಷಯವನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸಬೇಕು. ಅದರ ಆಧಾರದ ಮೇಲೆಯೇ ಸರ್ಕಾರ ಹಿಂದುಳಿದ ವರ್ಗಗಳ ಪಟ್ಟಿಯನ್ನು ಬದಲಾಯಿಸಬೇಕು. ಈ ವಿಷಯವನ್ನು ಸರ್ವೋಚ್ಚ ನ್ಯಾಯಾಲಯವು ಇಂದಿರಾ ಸಾಹ್ನಿ ತೀರ್ಪಿನಲ್ಲಿ ಎತ್ತಿಹಿಡಿದಿದೆ. ಆದರೆ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಆಯೋಗವು ಆಂತರಿಕ ತೀರ್ಪನ್ನು ಮಾತ್ರ ಸಲ್ಲಿಸಿದೆ. ಪೂರ್ಣ ವರದಿಯನ್ನಿನ್ನೂ ಸಲ್ಲಿಸಿಲ್ಲ. ಹಾಗಿದ್ದ ಮೇಲೆ, ಸರ್ಕಾರ ಒಂದು ಸಮುದಾಯವನ್ನು ಮೀಸಲಾತಿ ಪಟ್ಟಿಯಿಂದ ತೆಗೆಯುವುದು ಸರಿಯಲ್ಲ. ಅಲ್ಲದೆ, ಆ ಆಂತರಿಕ ತೀರ್ಪಿನಲ್ಲೂ ಸಹ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನಿರಾಕರಿಸಬೇಕೆಂದು ಎಲ್ಲೂ ಹೇಳಿಲ್ಲ.

ಹೀಗಿದ್ದಾಗ, ನ್ಯಾಯಾಲಯಗಳ ತೀರ್ಪನ್ನೇ ಉಲ್ಲಂಘಿಸುವ ಸರ್ಕಾರಗಳು ಕಾನೂನನ್ನು ಎತ್ತಿಹಿಡಿಯುತ್ತವೆಯೇ?

ಪ್ರಜಾಪ್ರಭುತ್ವದ ಮೂಲ ಅಂಶ ’ರೂಲ್ ಆಫ್ ಲಾ’, ಅಂದರೆ ಕಾನೂನು ಆಧಾರದ ಆಡಳಿತ. ಸರ್ಕಾರ ಕಾನೂನನ್ನು ಪಾಲಿಸಬೇಕು, ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಹಾಗು ಸರ್ಕಾರದ ತೀರ್ಮಾನಗಳು ಆರ್ಬಿಟ್ರೇರಿಯಾಗಿರಬಾರದು.

ಸರ್ವೋಚ್ಚ ನ್ಯಾಯಾಲಯ ತಿಳಿಸಿದಂತೆ ಇಲ್ಲಿ ಕರ್ನಾಟಕ ಸರ್ಕಾರ ಯಾವುದೇ ಮಾನದಂಡಗಳನ್ನು ಪಾಲಿಸದೆ, ಇರುವ ಕಾನೂನನ್ನೂ ಪರಿಪಾಲಿಸದೆ ಅಡ್ಡಾದಿಡ್ಡಿಯ ತೀರ್ಮಾನ ತೆಗೆದುಕೊಂಡಿದೆ. ಮುಸ್ಲಿಮರ ವಿಷಯವಾಗಿ ಸರ್ಕಾರದ ಈ ನಡೆ, ಬೇರೆ ವಿಷಯಗಳಿಗೆ ಸಂಬಂಧಪಟ್ಟಂತೆ ಕೂಡ ಜಾರಿಯಾಗುವುದಿಲ್ಲವೇ? ತನ್ನ ಪ್ರಜೆಗಳಿಗೇ ಸುಳ್ಳು ಹೇಳುವ ಸರ್ಕಾರ ಹೇಗೆ ತಾನೇ ನಾಡಿನ ಸಂವಿಧಾನವನ್ನು ಎತ್ತಿಹಿಡಿಯಬಲ್ಲದು?

ಈ ನಡೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ತೀರ್ಮಾನಿಸಲು ಮತ್ತೊಂದು ಕಾರಣವಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಪ್ರಜಾಪ್ರಭುತ್ವವೆಂದರೆ ಸಹಜೀವನದ ಪದ್ಧತಿ ಎಂದಿದ್ದರು. ಅಂದರೆ ಬೇರೆಬೇರೆ ಜಾತಿ ಧರ್ಮಗಳ ಜನರು ಸೌಹಾರ್ದದಿಂದ ಇರುವುದು. ಇಲ್ಲಿನ ಸರ್ಕಾರ ಕೇವಲ ಮುಸ್ಲಿಂ ಮೀಸಲಾತಿ ರದ್ದು ಮಾಡಲಿಲ್ಲ, ಬದಲಿಗೆ ಒಕ್ಕಲಿಗರನ್ನು, ಲಿಂಗಾಯತರನ್ನು ಮುಸಲ್ಮಾನರ ವಿರುದ್ಧ ಎತ್ತಿಕಟ್ಟಿದೆ. ಮೂರೂ ಸಮುದಾಯಗಳ ಮಧ್ಯೆ ದ್ವೇಷ ಹುಟ್ಟಿಸುವ ನಡೆಯಿದು. ಈ ಮೀಸಲಾತಿ ರದ್ದತಿಯನ್ನು ಬಹುಶಃ ನ್ಯಾಯಾಲಯ ಎತ್ತಿಹಿಡಿಯುವುದಿಲ್ಲವೆಂದು ಸರ್ಕಾರಕ್ಕೆ ಗೊತ್ತಿದೆ. ಒಂದು ವೇಳೆ ನ್ಯಾಯಾಲಯ ಇದನ್ನು ರದ್ದುಪಡಿಸಿದರೆ, ಮುಸ್ಲಿಮರಿಂದ ಲಿಂಗಾಯತ ಹಾಗು ಒಕ್ಕಲಿಗ ಸಮುದಾಯಗಳು ಹೆಚ್ಚಿಸಿದ ಮೀಸಲಾತಿ ಕಳೆದುಕೊಂಡವು ಎಂದು ಬಿಂಬಿಸಬಹುದೆಂಬ ಅಪಾಯದ ತಂತ್ರಗಾರಿಕೆಯೂ ಇರಬಹುದು.

ಈ ಮೀಸಲಾತಿ ಪಲ್ಲಟದ ನಡೆಯನ್ನು ಕರ್ನಾಟಕದ ಪ್ರಮುಖ ಲಿಂಗಾಯತ ಹಾಗು ಒಕ್ಕಲಿಗ ಮಠಾಧೀಶರು ಖಂಡಿಸದೆ ಇರುವುದು ದುರಂತದ ವಿಷಯ. ಅಷ್ಟು ಮಾತ್ರವಲ್ಲ, ಈ ಸದ್ಯಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ಮೊದಲನೇ ಹಿಯರಿಂಗ್‌ನಲ್ಲಿ, ಒಕ್ಕಲಿಗ ಹಾಗು ಲಿಂಗಾಯತ ಸಮುದಾಯದ ಪರವಿರುವ ವಕೀಲರು, ಮುಸ್ಲಿಂ ಸಮುದಾಯದ ಮೀಸಲಾತಿಗೆ ವಿರುದ್ಧವಾಗಿ ವಾದ ಮಾಡಿದಂತಿದೆ. ಸರ್ಕಾರದ ಈ ನಡೆಯಿಂದ ನಾಡಿನಲ್ಲಿ ಇಸ್ಲಾಮೊಫೋಬಿಯಾ ಇನ್ನಷ್ಟು ಹೆಚ್ಚಾಗಬಹುದು.

ಈ ಎಲ್ಲ ಕಾರಣಗಳಿಂದ, ಸರ್ಕಾರ ಆದೇಶದಲ್ಲೇ ಸುಳ್ಳನ್ನು ಪ್ರಕಟಿಸಿ, ಆಧಾರವಿಲ್ಲದೆ, ಆರ್ಬಿಟ್ರೆರಿಯಾಗಿ ಆದೇಶ ನೀಡಿ, ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸಿ ಹಾಗು ಸಮುದಾಯಗಳ ಮಧ್ಯೆ ದ್ವೇಷ ಹುಟ್ಟಿಸಿ ಪ್ರಜಾಪ್ರಭುತ್ವವನ್ನೇ ಆಪತ್ತಿನಲ್ಲಿಟ್ಟಿದೆ. ಇದು ಮುಸ್ಲಿಮೇತರರು ಆತಂಕಪಡಬೇಕಾಗುವ ಮೊದಲನೇ ಸಂಗತಿ.

ಆತಂಕಪಡಬೇಕಾದ ಎರಡನೇ ವಿಷಯವೆಂದರೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಲ್ಲಿ ಮೀಸಲಾತಿ ಒಂದು ಹಕ್ಕು. ಆದರೆ ಕರ್ನಾಟಕ ಸರ್ಕಾರ ಅದನ್ನು ಹಾಗೆ ನೋಡುತ್ತಿಲ್ಲ. ಮುಸ್ಲಿಂ ಸಮುದಾಯಕ್ಕೆ ನೀಡಿದ ಮೀಸಲಾತಿಯನ್ನು ಅಪೀಸ್‌ಮೆಂಟ್ ಎಂದು ಕರೆದ ಸರ್ಕಾರ ನಾಳೆ ಬೇರೆ ಸಮುದಾಯಗಳಿಗೂ ಅದನ್ನೇ ಮಾಡುವುದಿಲ್ಲವೆಂದು ಯಾವ ಖಾತರಿ ಇದೆ?

ಮೂರನೇ ಆತಂಕವೆಂದರೆ, ಕರ್ನಾಟಕ ಸರ್ಕಾರ ಮುಸ್ಲಿಮರನ್ನು ಗುರಿಯಾಗಿಸಲು ಯಾರನ್ನಾದರೂ ಬಲಿಕೊಡಲು ಸಿದ್ಧವೆಂಬ ಸಂಗತಿ. ಚುನಾವಣೆಗೆ ಮುನ್ನ ಒಕ್ಕಲಿಗ ಹಾಗು ಲಿಂಗಾಯತ ಸಮುದಾಯಕ್ಕೆ ಮೀಸಲಾತಿಯ ಆಸೆ ತೋರಿಸಿದೆ. ಆದರೆ ಅದನ್ನು ಮುಸ್ಲಿಂ ಸಮುದಾಯದಿಂದ ಕಿತ್ತುಕೊಡಲಾಗಿದೆ. ಹೀಗೆ ಕಿತ್ತಿರುವುದು ಕಾನೂನುಬಾಹಿರ ಎಂದು ಅವರಿಗೂ ಗೊತ್ತು. ನಾಳೆ ನ್ಯಾಯಾಲಯ ಮುಸ್ಲಿಂ ಮೀಸಲಾತಿ ರದ್ದು ಮಾಡಿರುವುದು ಸರಿಯಲ್ಲ ಎಂದು ಅದನ್ನು ಮರುಸ್ಥಾಪಿಸಿದರೆ ಆಗ ಒಕ್ಕಲಿಗರ, ಲಿಂಗಾಯತರ ಪರಿಸ್ಥಿತಿಯೇನು. ಈ ಹಿಂದುಳಿದ ವರ್ಗಗಳಿಗೆ ನಿಜವಾದ ಸಾಮಾಜಿಕ ನ್ಯಾಯವನ್ನು ಕಲ್ಪಿಸುವುದು ಬಿಟ್ಟು, ಆ ಸಮುದಾಯಗಳು ಎದುರಿಸುತ್ತಿರುವ ನೋವನ್ನು ಚುನಾವಣೆಯ ಗೆಲುವಿಗೆ, ಮುಸ್ಲಿಂ ಸಮುದಾಯವನ್ನು ಹತ್ತಿಕ್ಕುವ ಗುರಿಗೆ ಬಳಿಸಿಕೊಂಡ ಬಿಜೆಪಿ ಸರ್ಕಾರ ನಾಳೆ ಯಾವ ಸಮುದಾಯವನ್ನಾದರೂ ಹೀಗೆ ಸಂಕಷ್ಟಕ್ಕೆ ತಳ್ಳುವುದಿಲ್ಲವೇ?

ಮೂರೂ ವರ್ಷಗಳ ಹಿಂದೆ ಬೆಂಗಳೂರಿನ ಪುರಭವನದೆದುರು ಸಂಸದ ತೇಜಸ್ವಿ ಸೂರ್ಯ ಮಾತನಾಡುತ್ತಾ, ’ಮುಸ್ಲಿಮರ ಎದೆ ಸೀಳಿದರೆ ಎರಡಕ್ಷರ ಸಿಗುವುದಿಲ್ಲ’ ಎಂದು ಕೂಗಾಡಿದರು. ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿದೆ. ಇದನ್ನು ಹಲವು ವರದಿಗಳು ದಾಖಲಿಸಿವೆ. ಸರ್ಕಾರದ ನೆರವು ಇದೆಯೋ ಇಲ್ಲವೋ, ಸಮುದಾಯವು ತನ್ನ ಯುವಜನರನ್ನು ಶಿಕ್ಷಣದ ಕಡೆಗಿ ತಿರುಗಿಸಿ, ಆವರಿಗೆ ಉತ್ತಮ ಭವಿಷ್ಯ ಕಲ್ಪಿಸಲು ಪ್ರಯತ್ನಿಸುತ್ತಿದೆ. ಇದನ್ನು ಪ್ರೋತ್ಸಾಹಿಸಲು ವಿಫಲವಾದ ಸರ್ಕಾರ, ಸಮುದಾಯವನ್ನು ಶಿಕ್ಷಣದಿಂದ ಇನ್ನಷ್ಟು ದೂರ ತಳ್ಳುತ್ತಿದೆ. ಹಿಜಾಬ್ ವಿವಾದವಾಯಿತು; ಧಾರ್ಮಿಕ ಅಲ್ಪಸಂಖ್ಯಾತರಿಗೆ ಸ್ಕಾಲರ್‌ಶಿಪ್ ರದ್ದು ಪಡಿಸುವುದಾಯಿತು; ಈಗ ಮೀಸಲಾತಿ ರದ್ದು ಪಡಿಸಲು ಹೊರಟಿದೆ.

ಮುಸ್ಲಿಮರಿಗೆ ಅನ್ಯಾಯ ಮಾಡಲು ಹೊರಟ ಸರ್ಕಾರ ಇಡೀ ನಾಡನ್ನೇ ಆಪತ್ತಿನಲ್ಲಿಟ್ಟಿದೆ. ಇದರ ಬಗ್ಗೆ ನಾವೆಲ್ಲರೂ ಧ್ವನಿ ಎತ್ತಬೇಕಾಗಿದೆ. ಸಂವಿಧಾನದ ಪೀಠಿಕೆಯಲ್ಲಿರುವ “ಸ್ಥಾನಮಾನ ಹಾಗು ಅವಕಾಶಗಳ ಸಮಾನತೆ”ಯ ಗುರಿ ತಲುಪಲು ಒಟ್ಟಿಗೆ ಹೆಜ್ಜೆಹಾಕಬೇಕಿದೆ.

ವಿನಯ್ ಕೂರಗಾಯಲ ಶ್ರೀನಿವಾಸ

ವಿನಯ್ ಕೂರಗಾಯಲ ಶ್ರೀನಿವಾಸ
ವಕೀಲರು ಮತ್ತು ಬೀದಿ ವ್ಯಾಪಾರಿಗಳ ಸಂಘದ ಮುಖಂಡರು. ಆಲ್ಟರ್‍ನೇಟಿವ್ ಲಾ ಫೋರಂನಲ್ಲಿ ತೊಡಗಿಸಿಕೊಂಡಿರುವ ವಿನಯ್ ಹಲವು ಹೋರಾಟಗಳಲ್ಲಿ ಭಾಗಿಯಾಗಿರುವುದಲ್ಲದೆ, ಸಂವಿಧಾನದ ಪ್ರಚಾರಕ್ಕಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...