HomeUncategorizedಬುಲೆಟ್‌ ಟ್ರೈನ್‌ಗಾಗಿನ ವೆಚ್ಚದಲ್ಲಿ ದೇಶದ ಎಲ್ಲಾ ರೈಲುಗಳನ್ನು ಎರಡು ಪಟ್ಟು ವೇಗದಲ್ಲಿ ಓಡುವಂತೆ ನವೀಕರಿಸಬಹುದು...

ಬುಲೆಟ್‌ ಟ್ರೈನ್‌ಗಾಗಿನ ವೆಚ್ಚದಲ್ಲಿ ದೇಶದ ಎಲ್ಲಾ ರೈಲುಗಳನ್ನು ಎರಡು ಪಟ್ಟು ವೇಗದಲ್ಲಿ ಓಡುವಂತೆ ನವೀಕರಿಸಬಹುದು…

- Advertisement -
- Advertisement -

ಭಾರತದಲ್ಲಿ ಪ್ರತಿನಿತ್ಯ ಸುಮಾರು 10000 ರೈಲುಗಳು ಓಡಾಡುತ್ತಿವೆ. ಅವು ದಿನವೊಂದಕ್ಕೆ 2.3 ಕೋಟಿಗೂ ಅಧಿಕ ಜನರನ್ನು ಹೊತ್ತು ಸಾಗುತ್ತಿವೆ. ಇದರಲ್ಲಿ 66,687 ಕಿ.ಮೀ ಉದ್ದದ ರೈಲು ಮಾರ್ಗವು ತುಂಬಾ ಹಳೆಯದಾಗಿದ್ದು ವಸಾಹತು ಕಾಲದ್ದಾಗಿದೆ. ಇದರಲ್ಲಿ ಅರ್ಧದಷ್ಟನ್ನು ಮಾತ್ರ ವಿದ್ಯುದ್ದೀಕರಿಸಲಾಗಿದೆ. ನೈರ್ಮಲ್ಯ ಅತಿ ದೊಡ್ಡ ಸಮಸ್ಯೆಯಾಗಿದ್ದು ಸುರಕ್ಷತಾ ಮಾನದಂಡಗಳು ಕೂಡ ಸಾಕಾಗುವುದಿಲ್ಲ ಎನ್ನಲಾಗುತ್ತಿದೆ. ಹಾಗಾಗಿಯೇ ಪದೇ ಪದೇ ಹಳಿ ತಪ್ಪುವ ರೈಲುಗಳ ಬಗ್ಗೆ ವರದಿಯಾಗುತ್ತಿದೆ.

ಇಂತಹ ಬೃಹತ್‌ ದೇಶದಲ್ಲಿ ಕೆಲವೇ ಕೆಲವು ಸಾವಿರ ಜನರನ್ನು ಹೊತ್ತೊಯ್ಯುವ ಬುಲೆಟ್ ರೈಲನ್ನು ‘ಅಭಿವೃದ್ಧಿಯ’ ಸಂಕೇತವೆಂದು ಕರೆಯಲಾಗುತ್ತದೆಯೇ? ಈ ಚರ್ಚೆ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಿದ್ದು ಶಿವಸೇನೆ ನೇತೃತ್ವದ ಕಾಂಗ್ರೆಸ್‌-ಎನ್‌ಸಿಪಿ ಸರ್ಕಾರ ಬಂದಿರುವುದರಿಂದ ಮತ್ತೊಮ್ಮೆ ಚರ್ಚೆಗೆ ಬಂದಿದೆ.

ಅಹಮದಾಬಾದ್ – ಮುಂಬೈ ಬುಲೆಟ್ ರೈಲು ಯೋಜನೆ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸಲು ಆದೇಶಿಸಿದ್ದೇನೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಠಾಕ್ರೆ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಬುಲೆಟ್‌ ರೈಲು ಯೋಜನೆಗಾಗಿ ಮೀಸಲಿದ್ದ 40000 ಸಾವಿರ ಕೋಟಿ ಹಣವನ್ನು ಕೇಂದ್ರಕ್ಕೆ ವಾಪಸ್ ಮಾಡಲೆಂದೇ ಫಡ್ನವೀಸ್‌ ಮೂರು ದಿನ ಮುಖ್ಯಮಂತ್ರಿಯ ನಾಟಕವಾಡಿದ್ದರು ಎಂದು ಬಿಜೆಪಿ ಸಂಸದ ಅನಂತ್‌ ಕುಮಾರ್‌ ಹೆಗಡೆ ಹೇಳಿದ್ದಾರೆ. ಅದೆಲ್ಲಾ ಸುಳ್ಳು ಎಂದು ಫಡ್ನವಿಸ್‌ ಸ್ಪಷ್ಟೀಕರಣ ನೀಡಿದ್ದಾರೆ.

ಈ ನಡುವೆ ಬುಲೆಟ್‌ ರೈಲು ಯೋಜನೆಯನ್ನು ಪರಿಶೀಲಿಸುವ ಠಾಕ್ರೆಯವರ ನಿರ್ಧಾರವನ್ನು ಸುಪ್ರೀಂ ಕೋರ್ಟ್‌‌ನ ಹಿರಿಯ ನ್ಯಾಯವಾದಿಗಳಾದ ಪ್ರಶಾಂತ್‌ ಭೂಷಣ್‌ರವರು ಸ್ವಾಗತಿಸಿದ್ದಾರೆ.

ಇದು ಒಳ್ಳೆಯ ನಿರ್ಧಾರ. ಕೇವಲ ಅಹಮದಾಬಾದ್-ಮುಂಬೈ ಮಾರ್ಗದ ‘ಬುಲೆಟ್ ರೈಲು’ ಯೋಜನೆಯು 1 ಲಕ್ಷ ಕೋಟಿಗಿಂತ ಹೆಚ್ಚು ವೆಚ್ಚದ ಹಾಸ್ಯಾಸ್ಪದ ಯೋಜನೆಯಾಗಿದೆ. ಇದೇ ವೆಚ್ಚದಲ್ಲಿ ದೇಶಾದ್ಯಂತ ಇರುವ ರೈಲ್ವೆಯ ಎಲ್ಲಾ ಟ್ರಂಕ್ ಮಾರ್ಗಗಳನ್ನು ನವೀಕರಿಸಿ ರೈಲುಗಳು ಎರಡು ಪಟ್ಟು ವೇಗದಲ್ಲಿ ಓಡುವಂತೆ ಮಾಡಬಹುದಾಗಿದೆ. ಜೊತೆಗೆ ಸಾಗಾಣಿಕಾ ಸಾಮರ್ಥ್ಯವನ್ನು ಸಹ ಶೆ. 50% ಹೆಚ್ಚಿಸಬಹುದು ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಇನ್ನೊಂದು ಕಡೆ ಭಾರತೀಯ ರೈಲ್ವೆಯು ಅಸ್ಥಿರ ಆರ್ಥಿಕ ಸ್ಥಿತಿಗೆ ತಲುಪಿದೆ ಎಂದು ಸಿಎಜಿ ವರದಿ ತಿಳಿಸಿದೆ. ಭಾರತೀಯ ರೈಲ್ವೆಯ 2017-18ರ ಕಾರ್ಯಾಚರಣಾ ಅನುಪಾತವು 98.44% ರಷ್ಟು ಹೆಚ್ಚಾಗಿದ್ದು 10 ವರ್ಷಗಳಲ್ಲಿ ಕೆಟ್ಟದು ಎಂದು ಸಿಎಜಿ ತಿಳಿಸಿದೆ. ಕಾರ್ಯಾಚರಣಾ ಅನುಪಾತವೆಂದರೆ ಭಾರತೀಯ ರೈಲ್ವೆಯು 100ರೂ ಗಳಿಸಲು 98.44 ರೂ ಖರ್ಚು ಮಾಡಿದೆ ಎಂದರ್ಥ. ಅಲ್ಲಿಗೆ ಲಾಭ ಕೇವಲ 1.66% ಮಾತ್ರ ಆಗಿದೆ.

ಆದಾಯದ ವಿರುದ್ಧದ ಖರ್ಚಿನ ಅಳತೆಯ ಅನುಪಾತವು ರೈಲ್ವೆ ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಅದರ ಹಣಕಾಸು ಎಷ್ಟು ಆರೋಗ್ಯಕರವಾಗಿದೆ ಎಂಬುದನ್ನು ತೋರಿಸುತ್ತದೆ. 98.44% ನಷ್ಟು ಕಾರ್ಯಾಚರಣಾ ಅನುಪಾತ ಎಂದರೆ ರೈಲ್ವೆ ಇಲಾಖೆ ಕಳಪೆ ಸ್ಥಿತಿಯಲ್ಲಿದೆ ಎಂದು ಅರ್ಥವಾಗುತ್ತದೆ.

ಇಂದು ಸಂಸತ್ತಿನಲ್ಲಿ ಮಂಡಿಸಲಾದ ಸಿಎಜಿ ವರದಿಯಲ್ಲಿ, ರೈಲ್ವೆಯು 1,665.61 ಕೋಟಿ ರೂಗಳ ಉಳಿತಾಯ ಮಾಡಿದೆ ಎಂದು ಹೇಳಲಾಗಿದೆ. ವಾಸ್ತವದಲ್ಲಿ ಅದು 5,676.29 ಕೋಟಿ ರೂ ನಷ್ಟ ಅನುಭವಿಸಿದೆ. ಏಕೆಂದರೆ ಎನ್‌ಟಿಪಿಸಿ ಮತ್ತು ಐಆರ್‌ಕಾನ್‌ನಿಂದ ಅದು ಮುಂಗಡ ಪಡೆದಿರುವುದರಿಂದ ಲಾಭ ಕಾಣುತ್ತಿದೆ “ಈ ಮುಂಗಡವನ್ನು ಹೊರತುಪಡಿಸಿದರೆ ಕಾರ್ಯಾಚರಣಾ ಅನುಪಾತವನ್ನು 102.66% ಕ್ಕೆ ಹೆಚ್ಚಾಗುತ್ತಿತ್ತು” ಎಂದು ವರದಿ ತಿಳಿಸಿದೆ. ಎಂದರೆ ಲಾಭಕ್ಕಿಂತ ವೆಚ್ಚವೇ ಹೆಚ್ಚಾಗುತ್ತಿತ್ತು ಎನ್ನಲಾಗುತ್ತಿದೆ.

ಭಾರತೀಯ ರೈಲ್ವೆಯ ಖಾತೆಗಳ ಹಣಕಾಸು ಲೆಕ್ಕಪರಿಶೋಧನೆಯ ವಿಶ್ಲೇಷಣೆಯು ತನ್ನ ನಿವ್ವಳ ಆದಾಯದಲ್ಲಿ 2016-17ರಲ್ಲಿ ರೂ 4,913 ಕೋಟಿಯಿಂದ 2017-18ರಲ್ಲಿ ರೂ 1,665.61 ಕೋಟಿಗೆ ಅಂದರೆ 66.1% ರಷ್ಟು ಕುಸಿದಿದೆ ಎಂದು ತಿಳಿದುಬಂದಿದೆ.

ಈ ಎಲ್ಲಾ ಅಂಕಿ ಅಂಶಗಳು ಕಡೆಗೆ ಎಲ್ಲಿಗೆ ಕರೆದೊಯ್ಯುತ್ತವೆ ಎಂಬುದಕ್ಕೆ ಅನುಮಾನವೇ ಇಲ್ಲ. ದೇಶದಲ್ಲಿ ಅತಿ ಹೆಚ್ಚು ಜನರಿಗೆ ಉದ್ಯೋಗ ಕೊಟ್ಟಿರುವ ಕ್ಷೇತ್ರವಾದ ರೈಲ್ವೆಯನ್ನು ಖಾಸಗೀಕರಿಸುವ ಕಡೆ ಇದು ಹೋಗಲಿದೆ. ಅದಕ್ಕೆ ಇದೆಲ್ಲವೂ ತಳಪಾಯವಾಗಲಿದೆ. ಒಎನ್‌ಜಿಸಿ, ಬಿಪಿಸಿಎಲ್‌, ಬಿಎಸ್‌ಎನ್‌ಎಲ್‌ ಥರಹದ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಖಾಸಗೀಕರಿಸಿ ಮಾರಾಟ ಮಾಡುವ ಹಂತಕ್ಕೆ ಕೇಂದ್ರ ಸರ್ಕಾರ ಬಂದಿದೆ. ಒಟ್ಟಿನಲ್ಲಿ ಮುಂಬರಲಿರುವ ಕರಾಳ ದಿನ ಮುನ್ಸೂಚನೆ ಇದಾಗಿದೆ ಎಂದು ರಾಜಶೇಖರ್‌ ಅಕ್ಕಿಯವರು ಪ್ರತಿಕ್ರಿಯಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Reason for loss is obvious.. For populism train fare not done since more than a decade. Even was shown in profits! The minister was invited to address people how this turn around was possible..

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ‘ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್’: ಸಿಎಂ ಸಿದ್ದರಾಮಯ್ಯ

‘ಮೋದಿ ಸರ್ಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ, ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತ ಈ 2026 ಬಜೆಟ್’ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.  ಕಲಬುರಗಿ ವಿಮಾನ...

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...