Homeಅಂಕಣಗಳುಆಪರೇಷನ್ ಕಮಲಕ್ಕೆ ಬಲಿಯಾಗಲಿದೆಯೇ ಮಹಾ ವಿಕಾಸ್ ಅಘಾಡಿ ಸರ್ಕಾರ?

ಆಪರೇಷನ್ ಕಮಲಕ್ಕೆ ಬಲಿಯಾಗಲಿದೆಯೇ ಮಹಾ ವಿಕಾಸ್ ಅಘಾಡಿ ಸರ್ಕಾರ?

- Advertisement -
- Advertisement -

ದೇಶದಾದ್ಯಂತ ವಿರೋಧ ಪಕ್ಷಗಳನ್ನು ಕಳ್ಳ ದಾರಿಯ ಮೂಲಕ ನಿರ್ನಾಮ ಮಾಡುವ ತನ್ನ ಕೆಲಸದಿಂದ ಎಂತಹ ಗಂಭೀರ ಪರಿಣಾಮಗಳು ಉಂಟಾದರೂ ಬಿಜೆಪಿ ಪಕ್ಷ ಅದರಿಂದ ಸಣ್ಣ ಪಾಠವನ್ನೂ ಕಲಿತಂತಿಲ್ಲ. ಕೆಲವು ದಿನಗಳ ಹಿಂದೆ ತನ್ನ ವಕ್ತಾರೆ ಟಿವಿ ಶೋವೊಂದರಲ್ಲಿ ಮಾಡಿದ ಒಂದು ದ್ವೇಷಪೂರಿತ ಕಾಮೆಂಟ್‌ಗೆ ಹಲವು ರಾಷ್ಟ್ರಗಳು ಭಾರತಕ್ಕೆ ’ವಾರ್ನಿಂಗ್’ ಕೊಡುವ ರೀತಿಯಲ್ಲಿ ಮಾತನಾಡಿದಾಗ, ’ಇದು ದೇಶದ ಆಂತರಿಕ ವಿಚಾರ, ಸಾರ್ವಭೌಮ ರಾಷ್ಟ್ರವೊಂದರ ಸಮಸ್ಯೆಗಳಲ್ಲಿ ಮೂಗು ತೂರಿಸುವ ಅವಶ್ಯಕತೆ ಇಲ್ಲ’ ಎಂದು ಕೇಂದ್ರ ಬಿಜೆಪಿ ಸರ್ಕಾರದ ಜೊತೆಗೆ ನಿಲ್ಲಲು ಯಾವುದೇ ಅನ್ಯ ಪಕ್ಷ ಮುಂದೆ ಬರಲಿಲ್ಲ. ಅದರ ಮಿತ್ರ ಪಕ್ಷಗಳೂ ಕೂಡ ಉಸಿರೆತ್ತಲಿಲ್ಲ. ಸದಾ ದ್ವೇಷದ, ಪ್ರತೀಕಾರದ ಭಾಷೆಯನ್ನಾಡುತ್ತಾ ತನ್ನ ವಿರೋಧಿ ಪಕ್ಷಗಳೇಕೆ ತನ್ನ ಮಿತ್ರ ಪಕ್ಷಗಳನ್ನೂ ಜೊತೆಗೆ ಕೊಂಡೊಯ್ಯುವ ಪ್ರಾಮಾಣಿಕತೆಯನ್ನು ತೋರದ ಪಕ್ಷ ಬಿಜೆಪಿ. ಇದೇ ಕಾರಣಕ್ಕೆ ದೀರ್ಘ ಕಾಲದ ಸಂಗಾತಿಯಾಗಿದ್ದ ಶಿವಸೇನೆ 2019ರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವಾಗಿ ಬಿಜೆಪಿ ಜೊತೆಗೆ ಸೆಣೆಸಿದ್ದರೂ, ಚುನಾವಣೆಯ ನಂತರ ಎನ್‌ಡಿಎಯಿಂದ ದೂರವಾಗಿ ಕಾಂಗ್ರೆಸ್ ಹಾಗೂ ಶರದ್ ಪವಾರ್ ಅವರ ಎನ್‌ಸಿಪಿಯೊಂದಿಗೆ ಎಂವಿಎ (ಮಹಾ ವಿಕಾಸ್ ಅಘಾಡಿ) ಮೈತ್ರಿಕೂಟ ರಚಿಸಿಕೊಂಡು, ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಯಾಗಿದ್ದರು.

ಅಂದಿನಿಂದಲೂ ಎಂವಿಎ ಸರ್ಕಾರವನ್ನು ಒಂದಲ್ಲ ಒಂದು ರೀತಿಯಲ್ಲಿ ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದರೂ ಸಫಲವಾಗಿರಲಿಲ್ಲ. ಸೈದ್ಧಾಂತಿಕವಾಗಿ ಒಂದೇ ಗರಡಿಯಲ್ಲಿ ಬಿಜೆಪಿ ಮತ್ತು ಶಿವಸೇನೆ ಎರಡೂ ಪಕ್ಷಗಳು ಪಳಗಿದ್ದರೂ, ಪ್ರಾದೇಶಿಕ ಅಸ್ಮಿತೆ ಮತ್ತು ಮರಾಠಿ ಗರ್ವ ಶಿವಸೇನೆಗೆ ವಿಶಿಷ್ಟವಾದದ್ದು. ಆ ನಿಟ್ಟಿನಲ್ಲಿ ತೀವ್ರ ಕೇಂದ್ರೀಕರಣದ ಮತ್ತು ರಾಜ್ಯಗಳ ಅಧಿಕಾರವನ್ನು ಕಸಿಯುವ ಬಿಜೆಪಿ ಸಿದ್ಧಾಂತದ ಜೊತೆಗೆ ಸಣ್ಣ ಮಟ್ಟದ ಭಿನ್ನಮತವನ್ನು ಉಳಿಸಿಕೊಂಡ ಪಕ್ಷ ಅದು. ಆದರೆ ಎರಡೂ ಪಕ್ಷಗಳು ಸಾಮಾನ್ಯ ತಳಹದಿಯಲ್ಲಿ ಹಂಚಿಕೊಂಡಿದ್ದ ಹಿಂದುತ್ವ ಸಿದ್ಧಾಂತದ ಕಾರಣಕ್ಕೆ, ಶಿವಸೇನೆಯ ಹಲವು ಶಾಸಕರಿಗೆ ’ಅಕ್ಕಿ ಮೇಲೆ ಆಸೆ, ನಂಟನ ಮೇಲೆ ಪ್ರೀತಿ’ ಎಂಬಂತಾಗಿತ್ತು. ಈ ಸಂಗತಿಯನ್ನು ಬಳಸಿಕೊಂಡು ಯಾವ ದಾರಿ ಹಿಡಿದರೂ ಸರಿ ಅಧಿಕಾರ ಹಿಡಿಯದೆ ಬಿಡುವುದಿಲ್ಲ ಎಂದು ಕಾದಿದ್ದ ಬಿಜೆಪಿಗೆ, ಜೂನ್ ನಾಲ್ಕನೇ ವಾರದ ಮಂಗಳವಾರ ಕಾಲ ಕೂಡಿಬಂದಿದೆ ಎಂಬಂತಾಗಿದೆ. ಸಂಘ ಪರಿವಾರದ ಜೊತೆಗೆ ನಂಟು ಬೆಳೆಸಿಕೊಂಡಿರುವ ಮಾರಿಕೊಂಡ ಮಾಧ್ಯಮಗಳು ತಾವೇ ಜಗತ್ತು ಗೆದ್ದವರಂತೆ ಆಗಲೇ ಸಂಭ್ರಮಿಸಲು ಆರಂಭಿಸಿವೆ.

ಸೋಮವಾರ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಐದು ಸ್ಥಾನಗಳನ್ನು ಗೆದ್ದಿತ್ತು. ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ 106 ಇದ್ದು ಲೆಕ್ಕಾಚಾರದ ಪ್ರಕಾರ ನಾಲ್ಕು ಸ್ಥಾನಗಳನ್ನಷ್ಟೇ ಗೆಲ್ಲಬಹುದಿತ್ತು. ಕೆಲವು ಸ್ವತಂತ್ರ ಶಾಸಕರಲ್ಲದೆ, ಶಿವಸೇನೆಯ ಕೆಲವು ಶಾಸಕರೂ ಅಡ್ಡ ಮತದಾನ ಮಾಡಿರುವ ಶಂಕೆ ಇದರಿಂದ ವ್ಯಕ್ತವಾಗಿತ್ತು. ಎಂವಿಎ ತಾನು ನಿಲ್ಲಿಸಿದ್ದ ಆರು ಅಭ್ಯರ್ಥಿಗಳಲ್ಲಿ ಒಬ್ಬರು ಸೋತಿದ್ದರು. ಸಣ್ಣ ಪುಟ್ಟ ಪಕ್ಷಗಳು ಮತ್ತು ಸ್ವತಂತ್ರ ಶಾಸಕನ್ನೂ ಸೇರಿಸಿ 169 ಶಾಸಕರ ಬೆಂಬಲವನ್ನು ಪ್ರತಿಪಾದಿಸುವ ಎಂವಿಎಗೆ ಈ ಆಘಾತದ ಜೊತೆಗೆ ಮುಂದಿನ ದಿನ ಸೂರತ್‌ನ ಐಶಾರಾಮಿ ಹೋಟೆಲ್‌ನಲ್ಲಿ ಶಿವಸೇನೆಯ ಸುಮಾರು 30 ಶಾಸಕರು, ಆ ಪಕ್ಷದ ಮುಖಂಡ ಏಕನಾಥ ಶಿಂಧೆ ಜೊತೆಗೆ ಬಿಡಾರ ಹೂಡಿ, ಬಿಜೆಪಿ ಬೆಂಬಲಕ್ಕೆ ನಿಂತಿರುವ ಸುದ್ದಿ ಬರಸಿಡಿಲಿನಿಂತೆ ಬಂದಪ್ಪಳಿಸಿತು. ಅಲ್ಲಿಂದ ರಾತ್ರೋರಾತ್ರಿ ಬಿಜೆಪಿ ಆಡಳಿತದ ಅಸ್ಸಾಂನ ಗೌಹಾತಿಗೆ ಹಾರಿರುವ ಬಂಡಾಯ ಶಾಸಕರು ತಮ್ಮ ಸಂಖ್ಯಾಬಲವನ್ನು 46 ಎಂದು ಹೇಳಿಕೊಂಡಿದ್ದಾರೆ. 287 ಬಲಾಬಲದ ವಿಧಾನಸಭೆಯಲ್ಲಿ 144 ಮ್ಯಾಜಿಕ್ ಸಂಖ್ಯೆ (ಒಬ್ಬ ಶಿವಸೇನೆಯ ಶಾಸಕರು ತೀರಿಕೊಂಡಿದ್ದಾರೆ) ಆಗಿದ್ದರೂ ವಿಶ್ವಾಸಮತ ನಿರ್ಣಯಕ್ಕೆ ರಾಜ್ಯಪಾಲರು ನಿರ್ದೇಶಿಸಿದರೆ ಸರ್ಕಾರದ ಗತಿ ಏನಾಗುತ್ತದೆಂದು ಎಲ್ಲರಿಗೂ ತಿಳಿದಿದ್ದೆ.

ಬಿಜೆಪಿ ತನ್ನ ಎಂದಿನ ಚಾಳಿಯಂತೆ ಪ್ರತಿ ಪಕ್ಷಗಳ ಶಾಸಕರನ್ನು ಸೆಳೆಯುವ ಆಪರೇಷನ್ ಕಮಲಕ್ಕೆ ಮುನ್ನುಗ್ಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. 2015ರಲ್ಲಿ ಆರ್‌ಜೆಡಿ ಜೊತೆಗೂಡಿ ಸರ್ಕಾರ ರಚಿಸಿದ್ದ ಜೆಡಿಯುವಿನ ನಿತೀಶ್ ಕುಮಾರ್ ಅವರನ್ನು 2017ರಲ್ಲಿ ಅಕ್ರಮವಾಗಿ ಸೆಳೆದು ಅವರ ಜತೆಗೆ ಬಿಜೆಪಿ ಸರ್ಕಾರ ರಚಿಸಿತ್ತು. ಜಯಲಲಿತಾ ಅವರ ನಿಧನದ ನಂತರ ತಮಿಳುನಾಡಿನ ಎಐಎಡಿಎಂಕೆ ಸರ್ಕಾರವನ್ನು ಆ ರಾಜ್ಯದಲ್ಲಿ ನೆಲೆಯೇ ಇಲ್ಲದ ಬಿಜೆಪಿ ತನ್ನ ತೆಕ್ಕೆಯಲ್ಲಿಟ್ಟುಕೊಂಡು ಆಡಳಿತ ನಡೆಸಿತ್ತು. ಕರ್ನಾಟಕದಲ್ಲಿ ಆಪರೇಶನ್ ಕಮಲದಿಂದ ಜೆಡಿಎಸ್-ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿತು. (ಈ ಹಿಂದಿನ ಅವಧಿಯಲ್ಲಿ ಆದ ಆಪರೇಷನ್ ಕಮಲ ಬೇರೆಯದ್ದು!) ಮಧ್ಯಪ್ರದೇಶದಲ್ಲಿ ಆಮಿಷಗಳನ್ನು ಒಡ್ಡಿ ಕಾಂಗ್ರೆಸ್ ಶಾಸಕರನ್ನು ಸೆಳೆದು ಕಮಲನಾಥ್ ಸರ್ಕಾರವನ್ನು ಮುಳುಗಿಸಿತ್ತು. ಗೋವಾ, ಮೇಘಾಲಯ, ಮಣಿಪುರ, ಅರುಣಾಚಲ ಪ್ರದೇಶ ಹೀಗೆ ದೇಶದ ಉದ್ದಗಲಕ್ಕೆ ಒಂದಲ್ಲ ಒಂದು ಕುತಂತ್ರ ಬಳಸಿ ಅಧಿಕಾರ ಹಿಡಿಯುವುದನ್ನು ಕರಗತ ಮಾಡಿಕೊಂಡಿರುವ ಬಿಜೆಪಿ ಮಹಾರಾಷ್ಟ್ರದಲ್ಲಿಯೂ ತನ್ನ ದಾಳವನ್ನು ಈಗ ಪರಿಣಾಮಕಾರಿಯಾಗಿ ಬೀಸಿದೆ. ಅಲ್ಲದೆ ತನ್ನ ಶಾಸಕರನ್ನು ಶಿವಸೇನೆ ಸೆಳೆಯದಂತೆ ನೋಡಿಕೊಳ್ಳಲು ಅವರನ್ನೆಲ್ಲಾ ಒಟ್ಟಿಗೆ ಕೂಡಿಹಾಕಿಕೊಂಡು ರೆಸಾರ್ಟ್ ಯಾತ್ರೆ ಬೆಳೆಸಿದೆ. ಕಾಂಗ್ರೆಸ್ ಸೇರಿದಂತೆ ಬೇರೆ ಪಕ್ಷಗಳೂ ತಮ್ಮ ಶಾಸಕರನ್ನು ಜೋಪಾನ ಮಾಡಿಕೊಳ್ಳಲು ದಾರಿ ಬೆಳೆಸಿವೆ.

ಒಂದು ಪಕ್ಷ, ಪಕ್ಷಾಂತರ ಕಾಯ್ದೆ ಅನ್ವಯವಾಗದೆ ಶಾಸಕರನ್ನು ಅಸಿಂಧುಗೊಳಿಸದಂತೆ ಆಟ ಆಡಬೇಕಾದರೆ ಶಿವಸೇನೆಯ ಮೂರರ ಎರಡನೇ ಭಾಗದಷ್ಟು ಶಾಸಕರು ಏಕನಾಥ ಶಿಂಧೆ ಜೊತೆಗೆ ಹೋಗಬೇಕಾಗುತ್ತದೆ.
ಅಂದರೆ ಶಿವಸೇನೆಯ 55 ಶಾಸಕರಲ್ಲಿ 37 ಜನ ಪಕ್ಷದಿಂದ ಹೊರಹೋಗಬೇಕಾಗುತ್ತದೆ. ಈಗಾಗಲೇ 40 ಶಿವಸೇನೆ ಶಾಸಕರು ಅವರ ಜೊತೆ ಇದ್ದಾರೆ ಎನ್ನಲಾಗುತ್ತಿದೆ. ಈಗ ಅವರು ಪಕ್ಷಾಂತರ ನಿಷೇಧ ಕಾಯ್ದೆಯಿಂದ ಬಚಾವ್ ಆಗಿ ಸ್ವತಂತ್ರ ಪಕ್ಷ ಘೋಷಿಸಬಹುದು. ಹಣ, ಇಡಿ-ಸಿಬಿಐ ಮುಂತಾದ ಏಜೆನ್ಸಿಗಳ ಅಧಿಕಾರವನ್ನು ಮನಸೋಇಚ್ಛೆ ಬಳಸಿದ್ದರಿಂದ ಇದು ಸಾಧ್ಯಾವಾಯಿತೆ? ಈಗಿನ ಸದ್ಯದ ಸುದ್ದಿಗಳಂತೆ ಹಲವು ಶಿವಸೇನೆ ಶಾಸಕರು ವಿಶ್ವಾಸಮತ ಸಂದರ್ಭದಲ್ಲಿ ವಿಪ್ ಉಲ್ಲಂಘಿಸಿ ಬಿಜೆಪಿ ಬೆಂಬಲಿಸಿದರೆ ಮತ್ತು ಅವರ ಶಾಸಕ ಸ್ಥಾನ ಅಸಿಂಧುವಾದರೆ ಕುಸಿಯುವ ವಿಧಾನಸಭಾ ಬಲಾಬಲದಲ್ಲಿ ಬಿಜೆಪಿಗೂ ಸರ್ಕಾರ ರಚಿಸುವುದು ಸುಲಭವೇನಲ್ಲ. ಸ್ವತಂತ್ರ ಶಾಸಕರ ಬೆಂಬಲ ತಪ್ಪಿ ಮತ್ತು ಕಾಂಗ್ರೆಸ್ ಹಾಗೂ ಎನ್‌ಸಿಪಿಯ ಒಂದಷ್ಟು ಶಾಸಕರು ಪಕ್ಷಾಂತರ ಮಾಡಿ ಶಿವಸೇನೆ-ಎಂವಿಎ ಅಧಿಕಾರ ಕಳೆದುಕೊಂಡರೆ ರಾಷ್ಟ್ರಪತಿ ಆಳ್ವಿಕೆ ಮಹಾರಾಷ್ಟ್ರಕ್ಕೆ ಅನಿವಾರ್ಯವಾಗಬಹುದು. ಒಟ್ಟಿನಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು, ಜನರು ಕೊಟ್ಟ ಮ್ಯಾಂಡೇಟ್‌ಗೆ ಕಿಂಚಿತ್ತೂ ಗೌರವ ನೀಡದೆ ಹಿಂಬಾಗಿಲಿನಿಂದಾದರೂ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಬಿಜೆಪಿಗೆ ಈ ಬಾರಿ ’ಗೆಲುವು’ ಒಲಿಯುವುದೇ? ಇದು ಶಿವಸೇನೆಯನ್ನು ಎಲ್ಲಿಗೆ ತಳ್ಳಬಹುದು?
ಒಂದು ಕಡೆ ಅಶಾಂತಿಗೆ ಮತ್ತೊಂದು ಕಡೆ ರಾಜಕೀಯ ಅಸ್ಥಿರತೆಯ ಕಡೆಗೆ ರಾಜ್ಯಗಳನ್ನು ನೂಕಲು ಸದಾ ಸನ್ನದ್ಧವಾಗಿರುವ ಬಿಜೆಪಿಯ ನಿಜ ಬಣ್ಣವನ್ನು ಜನರು ಅರಿತು ಪ್ರಜಾತಾಂತ್ರಿಕವಾಗಿ ಅದಕ್ಕೆ ಪಾಠ ಕಲಿಸಬೇಕಿದೆ.


ಇದನ್ನೂ ಓದಿ: ಮಹಾರಾಷ್ಟ್ರ: ಅಧಿಕಾರಕ್ಕಾಗಿ ನಾನು ಎಂದಿಗೂ ಮೋಸ ಮಾಡುವುದಿಲ್ಲ ಎಂದ ಏಕನಾಥ್‌ ಶಿಂಧೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

​ಚನ್ನರಾಯಪಟ್ಟಣ ರೈತರಿಗೆ ಅಂತಿಮ ವಿಜಯ; ​ಬೆಂಬಲಕ್ಕೆ ನಿಂತವರಿಗೆ ಧನ್ಯವಾದ ತಿಳಿಸಿದ ‘ಹೋರಾಟ ಸಮಿತಿ’

​ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಭೂ ಹೋರಾಟ ಕೊನೆಗೂ ಸುಖಾಂತ್ಯವಾಗಿದೆ. ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಜೊತೆಗೆ ರಾಜ್ಯದ ಹತ್ತಾರು ಜನಪರ ಸಂಘಟನೆಗಳು ನಡೆಸಿದ ಸುದೀರ್ಘ ಹೋರಾಟ...

ಸಚಿವ ಸಂಪುಟ ಸಭೆಯಲ್ಲಿ ಅಲೆಮಾರಿಗಳ ಬಗ್ಗೆ ತುಟಿ ಬಿಚ್ಚದ ಸರ್ಕಾರ; ‘ಬೆಳಗಾವಿ ಚಲೋ’ ಹೋರಾಟಕ್ಕೆ ಕರೆ

ಗುರುವಾರ (ಡಿ.4) ನಡೆದ ಸಚಿವ ಸಂಪುಟ ಸಭೆಯಲ್ಲಿ ಅಲೆಮಾರಿಗಳ ಮೀಸಲಾತಿ ಬಗ್ಗೆ ತುಟಿ ಬಿಚ್ಚದ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತವಾಗಿದ್ದು, 'ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ' 'ಬೆಳಗಾವಿ ಚಲೋ'...

ಅಖಂಡ ಕರ್ನಾಟಕದ ಪ್ರದೇಶಗಳನ್ನು ಸಾಂಸ್ಕೃತಿಕವಾಗಿ ವಿಲೀನಗೊಳಿಸಲು ಇದು ಸಕಾಲ: ಡಾ.ಪುರುಷೋತ್ತಮ ಬಿಳಿಮಲೆ

ಕರ್ನಾಟಕ ಮತ್ತು ನೆರೆ ರಾಜ್ಯಗಳ ಅಚ್ಚ ಕನ್ನಡ ಪ್ರದೇಶಗಳ ನಡುವಿನ ಭೌತಿಕ ಗಡಿಗಳು ಇದ್ದಂತೆ ಇದ್ದರೂ ಸಾಂಸ್ಕೃತಿಕವಾಗಿ ಹೇರಲಾಗುತ್ತಿರುವ ಗಡಿಗಳನ್ನು ಅಪ್ರಸ್ತುತವಾಗಿಸುವುದು ಸಾಧ್ಯವಿದೆ. ಇಂತಹ ಪ್ರದೇಶಗಳೊಂದಿಗೆ ಕರ್ನಾಟಕದ ಭಾವನಾತ್ಮಕ ಸಂಬಂಧದ ವಿಸ್ತರಣೆಗೆ ಇದು...

ಅರುಂಧತಿ ರಾಯ್ ಅವರ ಪುಸ್ತಕದ ಮುಖಪುಟ ವಿರೋಧಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಖ್ಯಾತ ಲೇಖಕಿ ಅರುಂಧತಿ ರಾಯ್ ಅವರ 'ಮದರ್ ಮೇರಿ ಕಮ್ಸ್ ಟು ಮಿ' ಪುಸ್ತಕದ ಮುಖಪುಟ ಚಿತ್ರದ ಪ್ರಸಾರದ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ಸುಪ್ರಿಂ ಕೋರ್ಟ್‌ ಶುಕ್ರವಾರ ತಿರಸ್ಕರಿಸಿದೆ. ಏಕೆಂದರೆ, ಲೇಖಕರು ಧೂಮಪಾನವನ್ನು...

ರೋಹಿಂಗ್ಯಾ ಕುರಿತು ಆಕ್ಷೇಪಾರ್ಹ ಹೇಳಿಕೆ: ಸಿಐಜೆ ಸೂರ್ಯಕಾಂತ್ ಅವರಿಗೆ ಮಾಜಿ ನ್ಯಾಯಾದೀಶರು, ವಕೀಲರು, ಶಿಕ್ಷಣ ತಜ್ಞರಿಂದ ಮುಕ್ತ ಪತ್ರ

ರೋಹಿಂಗ್ಯಾಗಳ ವಿರುದ್ಧ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ನೀಡಿದ್ದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಮಾಜಿ ನ್ಯಾಯಾಧೀಶರು, ವಕೀಲರು ಮತ್ತು ಶಿಕ್ಷಣ ತಜ್ಞರು ಸೂರ್ಯಕಾಂತ್ ಅವರಿಗೆ ಮುಕ್ತ ಪತ್ರ ಬರೆದಿದ್ದಾರೆ.  ಕಿರುಕುಳದಿಂದ ಪಲಾಯನ ಮಾಡಿದ...

ಛತ್ತೀಸ್‌ಗಢ: ‘ಎಸ್‌ಇಸಿಎಲ್‌ ಅಮೇರಾ’ ಕಲ್ಲಿದ್ದಲು ಗಣಿ ವಿಸ್ತರಣೆ ವಿರೋಧಿಸಿ ಪರ್ಸೋಡಿ ಕಲಾನ್ ಗ್ರಾಮದಲ್ಲಿ ಪ್ರತಿಭಟನೆ

ಛತ್ತೀಸ್‌ಗಢದ ಸೌತ್ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ನ (ಎಸ್‌ಇಸಿಎಲ್‌) ಅಮೇರಾ ಕಲ್ಲಿದ್ದಲು ಗಣಿಗಾರಿಕೆ ವಿಸ್ತರಣೆ ವಿರೋಧಿಸಿ ಡಿ.3 ರಂದು ಅಂಬಿಕಾಪುರದ ಪರ್ಸೋಡಿ ಕಲಾನ್ ಗ್ರಾಮದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರ ಮೇಲೆ ಗ್ರಾಮಸ್ಥರು...

ಗಂಟೆಗಟ್ಟಲೆ ಇಂಡಿಗೋ ವಿಮಾನ ವಿಳಂಬ: ‘ನನ್ನ ಮಗಳಿಗೆ ಸ್ಯಾನಿಟರಿ ಪ್ಯಾಡ್‌ ಕೊಡಿ..’ ಎಂದು ಬೇಡಿಕೊಂಡ ತಂದೆ

ದೇಶಾದ್ಯಂತ ಇಂಡಿಗೋ ಪ್ರಯಾಣಿಕರು ಭಾರಿ ಅನಾನುಕೂಲತೆಯನ್ನು ಎದುರಿಸುತ್ತಿದ್ದಾರೆ. ಏಕೆಂದರೆ, ವಿಮಾನಯಾನ ಸಂಸ್ಥೆಯ ವಿಳಂಬ ಮತ್ತು ರದ್ದತಿ ನಿರ್ಧಾರವು ಸತತ ನಾಲ್ಕನೇ ದಿನವೂ (ಡಿ. 5) ಮುಂದುವರೆದಿದೆ. ಅವ್ಯವಸ್ಥೆಯ ನಡುವೆಯೇ, ವಿಮಾನ ನಿಲ್ದಾಣದಿಂದ ಬಂದ...

ರಷ್ಯಾ-ಉಕ್ರೇನ್ ಯುದ್ಧ ವಿಚಾರದಲ್ಲಿ ಭಾರತ ತಟಸ್ಥವಾಗಿಲ್ಲ, ಶಾಂತಿಯ ಪರವಾಗಿದೆ: ಪುಟಿನ್‌ ಜೊತೆಗಿನ ದ್ವಿಪಕ್ಷೀಯ ಮಾತುಕತೆ ವೇಳೆ ಮೋದಿ ಹೇಳಿಕೆ

ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧ ವಿಚಾರದಲ್ಲಿ ಭಾರತ ತಟಸ್ಥವಾಗಿಲ್ಲ. ಶಾಂತಿಯ ಪರವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಎರಡು ದಿನಗಳ ಭೇಟಿಗೆಂದು ಭಾರತಕ್ಕೆ ಆಗಮಿಸಿದ್ದು,...

ಮನೆ ಕಟ್ಟಲು, ವಾಹನ ಖರೀದಿಸಲು ಇದು ಸುಸಮಯ: ರೆಪೊ ದರ ಕಡಿತಗೊಳಿಸಿದ ಆರ್.ಬಿ.ಐ

ಡಿಸೆಂಬರ್ 05, ಶುಕ್ರವಾರದಂದು ನಡೆದ ಹಣಕಾಸು ನೀತಿ ಸಭೆಯಲ್ಲಿ (MPC) ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದೆ. ಇಂದಿನ ಕಡಿತದ ನಂತರ, ಕೇಂದ್ರ ಬ್ಯಾಂಕ್ ಈ...

ಉತ್ತರ ಪ್ರದೇಶ| ದಲಿತ ಯುವಕನ ಮೇಲೆ ಹಲ್ಲೆ; ಬಂದೂಕು ತೋರಿಸಿ ವಿವಸ್ತ್ರಗೊಳಿಸಿದ ಗುಂಪು

ಸಿಗರೇಟ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಗುಂಪೊಂದು ದಲಿತ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ವರದಿಯಾಗಿದೆ. ಗುಂಪು ದಲಿತ ಯುವಕನನ್ನು ಚಪ್ಪಲಿಯಿಂದ ಹೊಡೆದು, ಮುಷ್ಟಿ, ಕಾಲು ಮತ್ತು...