2024 ರಲ್ಲಿ ಮೊದಲ ಬಾರಿಗೆ ಮಹಿಳೆಯನ್ನು ಚಂದ್ರನಿಗೆ ಕಳುಹಿಸಲು ಯೋಜಿಸಿದೆ ಎಂದು ನಾಸಾ ಈ ವಾರ ಬಹಿರಂಗಪಡಿಸಿದೆ. ಬಾಹ್ಯಾಕಾಶ ಸಂಸ್ಥೆಯ ಆರ್ಟಿಮಿಸ್ ಪ್ಲಾನ್‌ನಲ್ಲಿ ಒಬ್ಬ ಮಹಿಳೆ ಮತ್ತು ಪುರುಷನನ್ನು ಚಂದ್ರಯಾನಕ್ಕೆ ಕಳುಹಿಸುವ ಗುರಿಯನ್ನು ನಾಸಾ ಹೊಂದಿದೆ. ಇದು 1972ರ ನಂತರದ ಮೊದಲ ಚಂದ್ರಯಾನದ ಯೋಜನೆಯಾಗಿದೆ.
2,50,000 ಮೈಲುಗಳ ದೂರದಲ್ಲಿರುವ ಚಂದ್ರನಲ್ಲಿಗೆ, ಮತ್ತು 140 ಮಿಲಿಯನ್ ಮೈಲುಗಳಷ್ಟು ದೂರವಿರುವ ಮಂಗಳ ಗ್ರಹಕ್ಕೆ ಮಾನವ ಪರಿಶೋಧಕರನ್ನು ಕಳುಹಿಸಲಾಗುತ್ತದೆ. ಇದಕ್ಕೆ ದಿಟ್ಟ ದೃಷ್ಠಿ, ಪರಿಣಾಮಕಾರಿ ಪ್ರೋಗ್ರಾಂ ನಿರ್ವಹಣೆ, ಆಧುನಿಕ ತಂತ್ರಜ್ಞಾನಗಳ ಮಿಷನ್ ಕಾರ್ಯಾಚರಣೆಗಳಿಗೆ ಧನಸಹಾಯ, ಮತ್ತು ರಾಷ್ಟ್ರದ ಎಲ್ಲಾ ಮೂಲೆಗಳಿಂದ ನಮಗೆ ಜನ ಬೆಂಬಲ ಬೇಕು ಎಂದು ನಾಸಾ ಹೇಳಿದೆ.
ಇದನ್ನೂ ಓದಿ: ನೌಕಾಪಡೆಯ ಐತಿಹಾಸಿಕ ಕ್ರಮ: ಯುದ್ಧನೌಕೆಗೆ ಮಹಿಳಾ ಅಧಿಕಾರಿಗಳ ನಿಯೋಜನೆ
ಆರ್ಟೆಮಿಸ್ ಯೋಜನೆಯು ಎಲ್ಲಾ ಒತ್ತಡಗಳನ್ನು ತೆಗೆದುಕೊಂಡು 2024 ರ ಆರಂಭದ ವೇಳೆಗೆ ಚಂದ್ರನ ಮೇಲೆ ಮಾನವನ ಇಳಿಯುವಿಕೆಯ ಗುರಿ ಸಾಧಿಸುವತ್ತ ಗಮನ ಹರಿಸುತ್ತಿದ್ದು, 2020ರ ಅಂತ್ಯದವರೆಗೂ ನವೀನ ತಂತ್ರಜ್ಞಾನಗಳನ್ನು ಬಳಸಿಕೊಂಡು ಹಿಂದೆಂದಿಗಿಂತಲೂ ಹೆಚ್ಚಿಗೆ ಚಂದ್ರನ ಮೇಲ್ಮೈಯನ್ನು ಅನ್ವೇಷಿಸುತ್ತದೆ ಎಂದು ನಾಸಾ ಹೇಳಿದೆ.
LIVE NOW: We are going to the Moon, and here's how.
Administrator @JimBridenstine and other senior leadership discuss our #Artemis Phase 1 plan to return humanity to lunar surface by 2024.
?️ Listen in: https://t.co/f1K1MFXFRn pic.twitter.com/18GNq62Elw
— NASA (@NASA) September 21, 2020
ನಾಸಾದ ಮೊದಲ ಆಧುನಿಕ ಚಂದ್ರನ ಮಿಷನ್ 2021 ರಲ್ಲಿ ಆರ್ಟೆಮಿಸ್ 1ರಲ್ಲಿ ಗಗನಯಾತ್ರಿಗಳು ರಹಿತವಾಗಿ ನಡೆಯಲಿದೆ. 2023ರಲ್ಲಿ ನಡೆಯುವ ಆರ್ಟೆಮಿಸ್ II ರಲ್ಲಿ ಸಿಬ್ಬಂದಿಗಳು ಚಂದ್ರನಲ್ಲಿ ಹೋಗುವ ಗುರಿ ಹೊಂದಿದ್ದಾರೆ. ಕೊನೆಯ ಯೋಜನೆ 2024ರ ಆರ್ಟೆಮಿಸ್ IIIರಲ್ಲಿ ಮೊದಲ ಮಹಿಳೆ ಮತ್ತು ಪುರುಷನನ್ನು ಚಂದ್ರನ ಮೇಲೆ ಇಳಿಸುವ ಗುರಿ ಹೊಂದಲಾಗಿದೆ.
ಈ ವಾರದಲ್ಲಿ ನೌಕಾಪಡೆಯು ಯುದ್ಧನೌಕೆಗೆ ಇಬ್ಬರು ಮಹಿಳಾ ಅಧಿಕಾರಿಗಳನ್ನು ನಿಯೋಜಿಸಿತ್ತು. ವಾಯುಸೇನೆ ಕೂಡ ಶೀಘ್ರದಲ್ಲೇ ರಫೇಲ್ ಯುದ್ಧವಿಮಾನಕ್ಕೆ ಮಹಿಳಾ ಫೈಟರ್ ಪೈಲಟ್ ಅನ್ನು ನೇಮಿಸಲು ತರಬೇತಿ ನೀಡುತ್ತಿರುವುದನ್ನು ತಿಳಿಸಿತ್ತು. ಈಗ ನಾಸಾ ಕೂಡ ಮಹಿಳಾ ಗಗನಯಾತ್ರಿಯನ್ನು ಚಂದ್ರಯಾನಕ್ಕೆ ಕಳುಹಿಸುವುದಾಗಿ ಘೋಷಣೆ ಮಾಡಿದೆ.


