Homeಮುಖಪುಟಶೀಘ್ರವೇ ಯುದ್ಧವಿಮಾನ ’ರಫೇಲ್’ ಹಾರಿಸಲಿರುವ ಮಹಿಳಾ ಪೈಲಟ್

ಶೀಘ್ರವೇ ಯುದ್ಧವಿಮಾನ ’ರಫೇಲ್’ ಹಾರಿಸಲಿರುವ ಮಹಿಳಾ ಪೈಲಟ್

ಪ್ರಸ್ತುತ ಐಎಎಫ್‌ನ 10 ಸಕ್ರಿಯ ಮಹಿಳಾ ಫೈಟರ್ ಪೈಲಟ್‌ಗಳಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗಿದೆ.

- Advertisement -
- Advertisement -

ನಿನ್ನೆಯಷ್ಟೇ ಭಾರತೀಯ ನೌಕಾಪಡೆಯ ಯುದ್ಧನೌಕೆಗೆ ಇಬ್ಬರು ಮಹಿಳಾ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ನೌಕಾಪಡೆ ಐತಿಹಾಸಿಕ ಕ್ರಮ ಕೈಗೊಂಡಿತ್ತು. ಈ ಬೆನ್ನಲ್ಲೇ ವಾಯಸೇನೆ ಕೂಡ ಮಹಿಳಾ ಪೈಲಟ್ ಒಬ್ಬರನ್ನು ರಫೇಲ್ ಯುದ್ಧವಿಮಾನ ಹಾರಿಸಲು ನಿಯೋಜಿಸಲು ಮುಂದಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಅಂಬಾಲದಲ್ಲಿರುವ ಭಾರತೀಯ ಸೇನಾಪಡೆಯ ಗೋಲ್ಡನ್ ಆರೋಸ್ ಸ್ವ್ಕಾಡ್ರರ್‌ಗೆ ಮಹಿಳಾ ಪೈಲಟ್ ಸೇರ್ಪಡೆಯಾಗಲಿದ್ದಾರೆ. ಪ್ರಸ್ತುತ ಐಎಎಫ್‌ನ 10 ಸಕ್ರಿಯ ಮಹಿಳಾ ಫೈಟರ್ ಪೈಲಟ್‌ಗಳಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗಿದೆ. ಮಿಗ್-21 ಯುದ್ಧವಿಮಾನ ಹಾರಾಟ ನಡೆಸಿರುವ ಅನುಭವವಿರುವ ಮಹಿಳಾ ಪೈಲಟ್‌ ಅನ್ನು ಆತಂರಿಕ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಾಗಿದೆ. ಇವರಿಗೆ ರಫೇಲ್ ಹಾರಾಟ ತರಬೇತಿ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:  ರಫೇಲ್‌ ಯುದ್ದ ವಿಮಾನಗಳು ವಾಯುಪಡೆಗೆ ಇಂದು ಅಧೀಕೃತ ಸೇರ್ಪಡೆ

ಸೆಪ್ಟೆಂಬರ್‌ 10ರಂದು 5 ರಫೇಲ್‌ ವಿಮಾನಗಳು ಅಧೀಕೃತವಾಗಿ ಭಾರತೀಯ ವಾಯುಪಡೆಗೆ ಹರ್ಯಾಣದ ಅಂಬಾಲ ವಾಯುನೆಲೆಗೆ ಸೇರ್ಪಡೆಯಾಗಿದ್ದವು. ಅಕ್ಟೋಬರ್ ಮತ್ತು ಡಿಸೆಂಬರ್‌ನಲ್ಲಿ ಹೆಚ್ಚಿನ ರಫೇಲ್‌ಗಳು ಬರಲಿದ್ದು, 2021ರ ಅಂತ್ಯದ ವೇಳೆಗೆ 36 ರಫೇಲ್‌ಗಳು ಭಾರತದ ವಾಯುಪಡೆಗೆ ಸೇರ್ಪಡೆಯಾಗಲಿವೆ.

ಮಹಿಳಾ ಪೈಲಟ್‌ಗಳಿಗೂ ಪುರುಷ ಸಿಬ್ಬಂದಿಗಳಿಗೆ ನೀಡುವ ತರಬೇತಿಯನ್ನೇ ನೀಡಲಾಗುತ್ತದೆ. ವಾಯುಪಡೆಯಲ್ಲಿ 10 ಮಹಿಳಾ ಪೈಲಟ್‌ಗಳು, 18 ಮಹಿಳಾ ನಾವಿಗೇಟರ್‌ಗಳು ಸೇರಿ ಒಟ್ಟು 1,875 ಮಹಿಳಾ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

ಭಾರತೀಯ ನೌಕಾಪಡೆಯ ಸಬ್ ಲೆಫ್ಟಿನೆಂಟ್ ಕುಮುದಿನಿ ತ್ಯಾಗಿ ಮತ್ತು ಸಬ್ ಲೆಫ್ಟಿನೆಂಟ್ ರಿತಿ ಸಿಂಗ್‌ ಯುದ್ಧನೌಕೆಯ ಕರ್ತವ್ಯಕ್ಕೆ ನಿಯೋಜನೆಗೊಂಡ ಮೊಟ್ಟ ಮೊದಲ ಮಹಿಳೆಯರಾಗಿದ್ದಾರೆ. ಈಗ ವಾಯುಸೇನೆ ಕೂಡ ರಫೇಲ್ ಯುದ್ಧವಿಮಾನಕ್ಕೆ ಮಹಿಳಾ ಪೈಲಟ್‌ ಒಬ್ಬರನ್ನು ನಿಯೋಜಿಸಲು ಮುಂದಾಗಿರುವುದು ಪ್ರಶಂಸನಿಯ. ಭಾರತೀಯ ವಾಯುಪಡೆಯಲ್ಲಿ ಮಹಿಳಾ ಪೈಲಟ್‌ಗಳ ಸಂಖ್ಯೆ ಸಾಧಾರಣವಾಗಿದ್ದರೂ, ಇಂತಹ ನಿರ್ಣಯಗಳು ಸೇನೆಗೆ ಸೇರಬಯಸುವ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಬಲ್ಲವು.


ಇದನ್ನೂ ಓದಿ:  ನೌಕಾಪಡೆಯ ಐತಿಹಾಸಿಕ ಕ್ರಮ: ಯುದ್ಧನೌಕೆಗೆ ಮಹಿಳಾ ‌ಅಧಿಕಾರಿಗಳ ನಿಯೋಜನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...