PC: ThePrint

ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಇಬ್ಬರು ಮಹಿಳೆಯರನ್ನು ಭಾರತೀಯ ನೌಕಾಪಡೆಯ ಯುದ್ಧನೌಕೆಗೆ ನಿಯೋಜನೆ ಮಾಡಲಾಗಿದೆ. ನೌಕಾಪಡೆಯ ಸಬ್ ಲೆಫ್ಟಿನೆಂಟ್ ಕುಮುದಿನಿ ತ್ಯಾಗಿ ಮತ್ತು ಸಬ್ ಲೆಫ್ಟಿನೆಂಟ್ ರಿತಿ ಸಿಂಗ್‌ ಯುದ್ಧನೌಕೆಯ ಕರ್ತವ್ಯಕ್ಕೆ ನಿಯೋಜನೆಗೊಂಡ ಮೊಟ್ಟ ಮೊದಲ ಮಹಿಳೆಯರಾಗಿದ್ದಾರೆ.

ನೌಕಾಪಡೆಯಲ್ಲಿ ಹಲವು ಮಹಿಳಾ ಅಧಿಕಾರಿಗಳಿದ್ದರೂ ಸಹ ಯುದ್ಧನೌಕೆಯಲ್ಲಿ ಮಹಿಳೆಯರಿರಲಿಲ್ಲ. ಬಾತ್‌ರೂಂ ವ್ಯವಸ್ಥೆ, ಕ್ವಾರ್ಟರ್‌‌ಗಳಲ್ಲಿ ಖಾಸಗಿತನನದ ಕೊರತೆ ಇತ್ಯಾದಿ ಕಾರಣಗಳಿಂದ ಮಹಿಳೆಯರನ್ನು ಯುದ್ಧನೌಕೆಗೆ ನಿಯೋಜಿಸುತ್ತಿರಲಿಲ್ಲ. ಆದರೆ ನೌಕಾಪಡೆ ಇದೀಗ ಐತಿಹಾಸಿಕ ಕ್ರಮ ಕೈಗೊಂಡು ಇಬ್ಬರು ಮಹಿಳಾ ಅಧಿಕಾರಿಗಳನ್ನು ನಿಯೋಜಿಸಿದೆ.

ಇವರಿಬ್ಬರೂ ಅತ್ಯಂತ ಕಠಿಣ ತರಬೇತಿ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ನೌಕಾಪಡೆಯ ಭಾಗವಾಗಲಿರುವ ಅತ್ಯಾಧುನಿಕ ಎಂಎಚ್-60 ಆರ್‌ ಹೆಲಿಕಾಪ್ಟರ್‌ಗಳನ್ನೂ ಈ ಮಹಿಳಾ ಅಧಿಕಾರಿಗಳು ನಿರ್ವಹಿಸಲಿದ್ದಾರೆ. ಕ್ಷಿಪಣಿ ಮತ್ತು ಟಾರ್ಪೆಡೊಗಳ ಮೂಲಕ ಶತ್ರುದೇಶದ ಯುದ್ಧನೌಕೆ, ಜಲಾಂತರ್ಗಾಮಿಗಳನ್ನೂ ನಾಶಪಡಿಸುವ ಸಾಮರ್ಥ್ಯ ಈ ಹೆಲಿಕಾಪ್ಟರ್‌ಗೆ ಇದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರಕ್ಕೆ 1,350 ಕೋಟಿ  ರೂ. ಆರ್ಥಿಕ ಪ್ಯಾಕೇಜ್ ಘೋಷಣೆ

ಇಬ್ಬರಿಗೂ ಕೊಚ್ಚಿಯಲ್ಲಿ ಐಎನ್‌ಎಸ್ ಗರುಡಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಬ್ಸರ್ವರ್ಸ್​  ಆಗಿ ಗ್ರಾಜುಯೇಟ್ ಆಗಿದ್ದಕ್ಕೆ ವಿಂಗ್ಸ್ ನೀಡಿ ಅಭಿನಂದಿಸಲಾಗಿದೆ.

‘ನಮಗೆ ಪುರುಷ ಸಿಬ್ಬಂದಿಗೆ ಸರಿಸಮನಾದ, ಅತ್ಯಂತ ಕಠಿಣ ತರಬೇತಿ ಸಿಕ್ಕಿತ್ತು. ಎಂಥದ್ದೇ ಒತ್ತಡವನ್ನೂ ನಾವು ನಿಭಾಯಿಸಬಲ್ಲೆವು’ ಎಂದು ಈ ಮಹತ್ತರ ನಿಯೋಜನೆಯ ಭಾಗವಾಗಿರುವ ಸಬ್ ಲೆಫ್ಟಿನೆಂಟ್ ರಿತಿ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ನಮ್ಮನ್ನು ಇಲ್ಲಿ ಸಮಾನವಾಗಿ ಪರಿಗಣಿಸಲಾಗಿದೆ. ನಮ್ಮ ಪುರುಷ ಸಿಬ್ಬಂದಿ ಯಾವ ತರಬೇತಿಯನ್ನು ಪಡೆದರು, ನಾವು ಅದೇ ತರಬೇತಿ ಪಡೆದೆವು. ಇದು ಒಂದು ದೊಡ್ಡ ಜವಾಬ್ದಾರಿ, ಸವಾಲಿನ ಕೆಲಸ. ನಾವು ಅದನ್ನು ಎದುರು ನೋಡುತ್ತಿದ್ದೇವೆ “ಎಂದು ಗಾಜಿಯಾಬಾದ್ ಮೂಲದ ಸಬ್ ಲೆಫ್ಟಿನೆಂಟ್ ತ್ಯಾಗಿ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಅಂಗಿಕಾರ: ಖಂಡಿಸಿ ‘#KisanVirodhiNarendraModi’ ಟ್ವೀಟಾಂದೋಲನ

ನೌಕಾಪಡೆ ಯುದ್ಧನೌಕೆಗೆ ಇಬ್ಬರು ಮಹಿಳಾ ಅಧಿಕಾರಿಗಳನ್ನು ನೇಮಿಸಿದ್ದು, ಭಾರತೀಯ ಸೇನೆಯಲ್ಲಿ ಮಹಿಳೆಯರು ಪುರುಷರ ಸಮಾನವಾಗಿ ಕೆಲಸ ನಿರ್ವಹಿಸುವಂತಾಗುತ್ತಿದೆ.

ನೌಕಾಪಡೆಯಿಂದ ಇಬ್ಬರ ನಿಯೋಜನೆ ಹೊರಬಿದ್ದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಇಬ್ಬರಿಗೂ ಶುಭಕೋರಿದ್ದಾರೆ.


ಇದನ್ನೂ ಓದಿ: ಚೀನಾದೊಂದಿಗೆ ರಾಜತಾಂತ್ರಿಕ ಮಾತುಕತೆ ಸಾಧ್ಯವಾದರೆ, ಪಾಕಿಸ್ತಾನದೊಂದಿಗೆ ಯಾಕಿಲ್ಲ: ಫಾರೂಕ್ ಅಬ್ದುಲ್ಲಾ ಪ್ರಶ್ನೆ

LEAVE A REPLY

Please enter your comment!
Please enter your name here