Homeಮುಖಪುಟಈ ಸುಗ್ರೀವಾಜ್ಞೆಗಳು ಅಸಾಂವಿಧಾನಿಕವಾಗಿದ್ದು, ರೈತರ ಗುರುತನ್ನೇ ಅಳಿಸಿಹಾಕಲಿವೆ: ಜಸ್ಟೀಸ್ ನಾಗಮೋಹನ್ ದಾಸ್

ಈ ಸುಗ್ರೀವಾಜ್ಞೆಗಳು ಅಸಾಂವಿಧಾನಿಕವಾಗಿದ್ದು, ರೈತರ ಗುರುತನ್ನೇ ಅಳಿಸಿಹಾಕಲಿವೆ: ಜಸ್ಟೀಸ್ ನಾಗಮೋಹನ್ ದಾಸ್

- Advertisement -
- Advertisement -

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತರುತ್ತಿರುವ ಈ ಸುಗ್ರೀವಾಜ್ಞೆಗಳು ಅಸಾಂವಿಧಾನಿಕವಾಗಿದ್ದು ರೈತರ ಗುರುತನ್ನೇ ಅಳಿಸಿಹಾಕಲಿವೆ. ಹಳ್ಳಿಗಳಲ್ಲಿ ರೈತರನ್ನು ಅವರದೇ ಭೂಮಿಯಲ್ಲಿ ಕೂಲಿಕಾರರನ್ನಾಗಿಸುವ ಅಥವಾ ರೈತರನ್ನು ನಾಶಗೊಳಿಸುವ, ಅವರನ್ನು ನಗರಗಳಿಗೆ ದೂಡುವ ಈ ಸುಗ್ರೀವಾಜ್ಞೆಗಳನ್ನು ಯಾವ ಬೆಲೆ ತೆತ್ತಾದರೂ ಸರಿಯೇ ತಡೆಯಬೇಕಾಗಿದೆ ಎಂದು ಜಸ್ಟೀಸ್ ನಾಗಮೋಹನ್ ದಾಸ್ ತಿಳಿಸಿದ್ದಾರೆ.

ರೈತ-ದಲಿತ-ಕಾರ್ಮಿಕರ ಐಕ್ಯಹೋರಾಟದ ಅಂಗವಾಗಿ ನಡೆದ ಜನತಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ಅಲ್ಪ ಸ್ವಲ್ಪ ಭೂಮಿ ಹೊಂದಿರುವ ರೈತರನ್ನು ಅವರ ಜಮೀನಿನಿಂದ ಒಕ್ಕಲೆಬ್ಬಿಸಿ ಅವರನ್ನು ಅದೇ ಜಮೀನಿನಲ್ಲಿ ಕೂಲಿಕಾರರನ್ನಾಗಿ ಮಾಡುವ ಉದ್ದೇಶದಿಂದಲೇ ಸರ್ಕಾರ ಈ ಸುಗ್ರಿವಾಜ್ಞೆಗಳನ್ನು ತರುತ್ತಿದೆ ಎಂದು ಅಸಮಾನಧಾನ ವ್ಯಕ್ತಪಡಿಸಿದರು.

ಹಿರಿಯ ಹೋರಾಟಗಾರ ಎಸ್‌.ಆರ್ ಹಿರೇಮಠ್ ಮಾತನಾಡಿ “ಸಾಲಮನ್ನಾ, ಬೆಂಬಲ ಬೆಲೆ ಯಂತಹ ಪರಿಹಾರಗಳು ರೈತರಿಗೆ ತಾತ್ಕಾಲಿಕ ಪರಿಹಾರಗಳಷ್ಟೆ. ಆದರೆ ತಾನು ಬೆಳೆದ ಬೆಲೆ ನಿಗಧಿ ಮಾಡುವಂತಹ ದೀರ್ಘಕಾಲಿಕ ಪರಿಹಾರವೊಂದನ್ನು ನಾವು ಕಂಡುಕೊಳ್ಳಬೇಕು ಎಂದರು.

ಮೊದಲನೆಯದಾಗಿ, ನಾವು ನಮ್ಮ ಭೂಮಿಯನ್ನು ಯಾವುದೇ ಕಾರಣಕ್ಕೂ ಕಾರ್ಪೋರೇಟ್ ಕಂಪನಿಗಳಿಗೆ ಬಿಟ್ಟುಕೊಡಬಾರದು. ಎರಡನೆಯದಾಗಿ ಭೂ ಬಳಕೆ ನೀತಿಯನ್ನು ಜಾರಿಗೆ ತರುವಂತೆ ಒತ್ತಾಯಿಸುವುದು. ಮೂರನೆಯದಾಗಿ, ಉಳುವವನೇ ಭೂಮಿಯ ಒಡೆಯ ಎನ್ನುವುದು ರಾಷ್ಟ್ರೀಐ ಅಜೆಂಡಾ ಆಗಬೇಕು. ಕೊನೆಯದಾಗಿ, ಬಹುರಾಷ್ಟ್ರೀಯ ಕಂಪನಿ ಅಥವಾ ಕಾರ್ಪೋರೇಟ್ ಕಂಪನಿಗಳನ್ನು ತೊಲಗಿಸಿ ಸಂಪೂರ್ಣ ಸಹಕಾರೀ ವ್ಯವಸ್ಥೆ ಬರುವಂತೆ ಒತ್ತಾಯಿಸಬೇಕು ಎಂದರು.

ಕನಿಷ್ಟ ರೈತರೊಂದಿಗೆ ಸಣ್ಣ ಚರ್ಚೆ ನಡೆಸದೇ ಈ ರೈತವಿರೋಧಿ ಸುಗ್ರೀವಾಜ್ಞೆಗಳನ್ನು ಸರ್ಕಾರ ಜಾರಿಗೊಳಿಸುತ್ತಿರುವುದು ನಾಚಿಕೆಗೇಡು. ನಾವೆಲ್ಲರೂ ಒಟ್ಟಾಗಿ ಈ ಸುಗ್ರೀವಾಜ್ಞೆಗಳನ್ನು ಕಸದ ಬುಟ್ಟಿಗೆ ಎಸೆಯುವ ಕಾಲ ಬಂದಿದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಅಭಿಪ್ರಾಯಪಟ್ಟರು.


ಇದನ್ನೂ ಓದಿ: ರೈತ, ದಲಿತ, ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡುತ್ತಿರುವ ಸರ್ಕಾರ: ಜನತಾ ಅಧಿವೇಶನದಲ್ಲಿ ಡಾ. ಪ್ರಕಾಶ್ ಕಮ್ಮರಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...