ವಾಯುಪಡೆಗೆ
PC: Rajnath Singh/Twitter

ಬಹುಕೋಟಿ ಹಗರಣ ನಡೆದಿದೆ ಎಂದು ಆರೋಪಿಸಿ ಭಾರಿ ವಿವಾದವೆಬ್ಬಿಸಿದ್ದ ರಫೇಲ್‌ ವಿಮಾನಗಳು ಇಂದು ಅಧೀಕೃತವಾಗಿ ಭಾರತೀಯ ವಾಯುಪಡೆಗೆ ಹರ್ಯಾಣದ ಅಂಬಾಲ ವಾಯುನೆಲೆಯಲ್ಲಿ ಸೇರ್ಪಡೆಯಾಗಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರಾನ್ಸ್ ರಕ್ಷಣಾ ಸಚಿವ ಫ್ಲೋರೆನ್ಸ್ ಪಾರ್ಲಿ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್. ಬದೌರಿಯ ಹಾಗೂ ರಕ್ಷಣಾ ಕಾರ್ಯದರ್ಶಿ ಅಜಯ ಕುಮಾರ್ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ರಕ್ಷಣಾ ಇಲಾಖೆಯ ಅತಿದೊಡ್ಡ ಹಗರಣ; ರಫೇಲ್ 

ಸಾಂಪ್ರದಾಯಿಕ ಸರ್ವಧರ್ಮ ಪೂಜೆ ನಡೆದ ನಂತರ ಒಟ್ಟು ಐದು ರಫೇಲ್ ಯುದ್ದ ವಿಮಾನಗಳನ್ನು ಸೇರ್ಪಡೆ ಮಾಡಲಾಯಿತು. ನಂತರ ನೀರಿನ ಫಿರಂಗಿ ಸೆಲ್ಯೂಟ್ ಮಾಡಲಾಯಿತು.

PC: Rajnath Singh/Twitter

“ಇತ್ತೀಚೆಗಿನ ದಿನಗಳಲ್ಲಿ ನಮ್ಮ ಗಡಿಗಳಲ್ಲಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಐದು ರಫೇಲ್ ಯುದ್ಧ ವಿಮಾನಗಳ ಸೇರ್ಪಡೆ ಅತ್ಯಂತ ಮುಖ್ಯವಾಗಿದೆ. ಭಾರತೀಯ ವಾಯುಪಡೆಗೆ ರಫೇಲ್ ಯುದ್ದ ವಿಮಾನಗಳ ಸೇರ್ಪಡೆಯು ಭಾರತ ಹಾಗೂ ಫ್ರಾನ್ಸ್ ದೇಶಗಳು ಉತ್ತಮ ಸಂಬಂಧವನ್ನು ಪ್ರತಿನಿಧಿಸುತ್ತದೆ” ಎಂದು ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಚೀನಾದ ಜೊತೆ ಪೂರ್ವ ಲಡಾಖ್‌ನಲ್ಲಿ ಗಡಿ ವಿವಾದ ಉದ್ವಿಗ್ನ ಸ್ಥಿತಿ ತಲುಪಿರುವ ನಡುವೆಯೇ ವಾಯುಸೇನೆಗೆ ರಫೇಲ್ ಸೇರ್ಪಡೆಯಾಗುತ್ತಿರುವುದು ಹೆಚ್ಚಿನ ಮಹತ್ವ ಪಡೆದಿದೆ.


ಇದನ್ನೂ ಓದಿ: ಮೋದಿಗೆ ಅಂಬಾನಿ ‘ಕಂಪನಿ’ ಕೊಡುತ್ತಿದ್ದಾರೋ, ಅಥವಾ ಅಂಬಾನಿಗೇ ಮೋದಿ ‘ಕಂಪನಿ’ ಕೊಡುತ್ತಿದ್ದಾರೋ?

LEAVE A REPLY

Please enter your comment!
Please enter your name here