ನ್ಯೂಜಿಲ್ಯಾಂಡ್‌ನಲ್ಲಿ ನಡೆಯುತ್ತರುವ ಐಸಿಸಿ ಮಹಿಳಾ ವಿಶ್ವ ಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ ತಂಡವು 110 ರನ್‌ಗಳ ಜಯ ಗಳಿಸಿ ಮೂರನೇ ಜಯ ದಾಖಲಿಸಿದೆ. ಈ ಮೂಲಕ ಭಾರತವು ಸೆಮಿಫೈನಲ್ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿದೆ.
ಪಂದ್ಯದಲ್ಲಿ ಸ್ಪಿನ್ನರ್ ಸ್ನೇಹ ರಾಣಾ ಅವರು ಉತ್ತಮವಾಗಿ ಬೌಲಿಂಗ್ ಮಾಡಿ ಬಾಂಗ್ಲಾದೇಶದ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು. ಪಂದ್ಯದಲ್ಲಿ ಅವರು ನಾಲ್ಕು ವಿಕೆಟ್‌ಗಳ ಪಡೆದರು.
ಗೆಲುವಿಗಾಗಿ 230 ರನ್‌ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡವು 40.3 ಓವರ್‌ಗಳಲ್ಲಿ 119 ರನ್‌ಗಳಿಗೆ ಆಲೌಟ್ ಆಯಿತು. ಸಲ್ಮಾ ಖಾತುನ್ 32 ರನ್ ಗಳಿಸಿ ತಂಡದ ಗರಿಷ್ಠ ರನ್ ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
A magnificent win for #TeamIndia 🙌
They beat Bangladesh by 110 runs to keep their semi-finals qualification hopes alive. #CWC22 pic.twitter.com/ix3xmjE41q
— ICC (@ICC) March 22, 2022
ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಭಾರತವು 50 ಓವರ್‌ಗಳಲ್ಲಿ 229/7 ರನ್‌ಗಳನ್ನು ಕಲೆಹಾಕಿತು. ಯಾಸ್ತಿಕಾ ಭಾಟಿಯಾ ಅವರು ಶಾಫಾಲಿ ವರ್ಮಾ ಮತ್ತು ರಿಚಾ ಘೋಷ್ ಅವರ ಜೊತೆಗೆ ಆಡುತ್ತಾ 50 ರನ್‌ಗಳನ್ನು ಭಾರತ ತಂಡಕ್ಕೆ ನೀಡಿದರು.
ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡ ಭಾರತ ತಂಡದಿಂದ ಓಪನರ್ ಆಗಿ ಶಫಾಲಿ ಮತ್ತು ಸ್ಮೃತಿ ಅವರು ಉತ್ತಮವಾಗಿ ಆಡಿದರು. ಅದಾಗಿಯೂ ಬಾಂಗ್ಲಾದೇಶ ತಂಡವು ಸ್ಮೃತಿ ಮಂಧಾನ, ಶಫಾಲಿ ವರ್ಮಾ ಮತ್ತು ಮಿಥಾಲಿ ರಾಜ್ ಅವರ ಮೂರು ವಿಕೆಟ್‌ಗಳನ್ನು ತ್ವರಿತವಾಗಿ ಪಡೆಯಿತು.
ಇದರ ನಂತರ ಭಾರತವು ಹರ್ಮನ್‌ಪ್ರೀತ್ ಮತ್ತು ರಿಚಾ ಘೋಷ್ ಅವರ ವಿಕೆಟ್‌ಅನ್ನೂ ಕಳೆದುಕೊಂಡಿತು. ಆದರೆ ಯಾಸ್ತಿಕಾ ಭಾಟಿಯಾ ಅವರು ಪ್ರಬಲವಾಗಿ ನಿಂತು ಅರ್ಧಶತಕವನ್ನು ಗಳಿಸಿ ಭಾರತ ತಂಡಕ್ಕೆ ಉತ್ತಮ ಮೊತ್ತದ ರನ್‌ಗಳನ್ನು ಪೇರಿಸಿಕೊಟ್ಟರು.
ಟೂರ್ನಿಯಲ್ಲಿ ಭಾರತವು ಇದುವರೆಗೂ ಒಟ್ಟು ಆರು ಪಂದ್ಯಗಳನ್ನು ಆಡಿದ್ದು, ಮೂರರಲ್ಲಿ ಗೆದ್ದುಕೊಂಡಿದೆ.
ಇದನ್ನೂ ಓದಿ: ಪಾಕ್ ಕ್ರಿಕೆಟ್ ನಾಯಕಿಯ ಪುಟ್ಟ ಮಗುವಿನೊಂದಿಗೆ ಭಾರತೀಯ ತಂಡದ ಪ್ರೀತಿಯ ಕ್ಷಣಗಳು: ಎಲ್ಲೆಡೆ ಅಭಿಮಾನದ ಮಹಾಪೂರ


