Homeಮುಖಪುಟಇಂದು ವಿಶ್ವ ಗುಬ್ಬಚ್ಚಿ ದಿನ : ನಾವು ಮಾತ್ರ ಆ ಪುಟ್ಟ ಹಕ್ಕಿಯ ಭರವಸೆಗೆ ಮೋಸ...

ಇಂದು ವಿಶ್ವ ಗುಬ್ಬಚ್ಚಿ ದಿನ : ನಾವು ಮಾತ್ರ ಆ ಪುಟ್ಟ ಹಕ್ಕಿಯ ಭರವಸೆಗೆ ಮೋಸ ಮಾಡುತ್ತಿದ್ದೇವೆ.

ಸುಮಾರು ಹತ್ತು ವರ್ಷಗಳ ಹಿಂದೆ ಗುಬ್ಬಚ್ಚಿ ಗೂಡಿರದ ಮನೆಗಳೇ ಇರಲಿಲ್ಲ ಎನ್ನುವಷ್ಟರ ಮಟ್ಟಿಗೆ ಅವುಗಳು ಮಾನವನ ಜೊತೆ ನಿಕಟವಾಗಿ ಬದುಕುತ್ತಿತ್ತು. ಆದರೆ ಇಂದು??

- Advertisement -
- Advertisement -

ಮಾರ್ಚ್ ಇಪ್ಪತ್ತನೇ ದಿನಾಂಕವನ್ನು ವಿಶ್ವ ಗುಬ್ಬಚ್ಚಿಗಳ ದಿನವನ್ನಾಗಿ‌ ಆಚರಿಸಲಾಗುತ್ತದೆ.‌ (World house sparrow day) ಪಕ್ಷಿ ಪ್ರೇಮಿಗಳ ಹೊರತಾಗಿ ಹೆಚ್ಚಿನವರು ಇದರ ಬಗ್ಗೆ ಆಸ್ಥೆ ತೋರುವುದೂ ಇಲ್ಲ.

‌ನಿಸ್ಸಂಶಯವಾಗಿಯೂ ಅತ್ಯಂತ ಕ್ಷಿಪ್ರಗತಿಯಲ್ಲಿ ಅಳಿವಿನಂಚಿಗೆ ಸರಿಯುತ್ತಿರುವ ಪ್ರಮುಖ ಪಕ್ಷಿಗಳಲ್ಲಿ ಗುಬ್ಬಚ್ಚಿ ಪ್ರಮುಖವಾದುದು. ಸಾಮಾನ್ಯವಾಗಿ ಚಿಕ್ಕದಾದ ಶರೀರವಿರುವವರ ಬಗ್ಗೆ ಬರೆಯುವಾಗ
ಗುಬ್ಬಚ್ಚಿ ದೇಹದವನು/ಳು ಎಂಬ ಉಪಮೆ ಬಳಸಲಾಗುತ್ತದೆ. ಅದಕ್ಕೆ ಕಾರಣ ಗುಬ್ಬಚ್ಚಿಯ ಪುಟ್ಟ ದೇಹ.
ಗುಬ್ಬಚ್ಚಿಗಳು ಸಾಮಾನ್ಯವಾಗಿ ಜನರ ನಡುವೆಯೇ ಗೂಡು ಕಟ್ಟುವುದರಿಂದಲೇ ಅವನ್ನು ಮನೆ ಗುಬ್ಬಚ್ಚಿ ಎನ್ನುತ್ತಾರೆ.

ಗುಬ್ಬಚ್ಚಿಗಳನ್ನು ಹುಡುಕಲು ಗುಡ್ಡ, ಬೆಟ್ಟ, ತೋಟ, ಕಾಡು,ಹಳ್ಳಿಗಳಿಗೆ ಹೋಗಬೇಕಾಗಿದ್ದಿರಲಿಲ್ಲ. ಅದು ಅತ್ಯಂತ ಸರಳ ಮತ್ತು ಕಲಾತ್ಮಕ ಗೂಡುಗಳನ್ನು ಹಂಚಿನ ಕಟ್ಟಡದ ಮೇಲ್ಚಾವಣಿಯ ಒಳಭಾಗದ ಪಕ್ಕಾಸು, ರೀಪುಗಳನ್ನು ಆಧಾರವಾಗಿಟ್ಟುಕೊಂಡು ಕಟ್ಟುತ್ತವೆ. ಅವು ಕಸಗಳ ರಾಶಿಯನ್ನೇ ತಂದು ಹಾಕುತ್ತವೆಂದು, ಹಿಕ್ಕೆ ಹಾಕುತ್ತವೆಂದೂ ನಾವೆಲ್ಲಾ ಅವುಗಳನ್ನು ಓಡಿಸುತ್ತೇವೆ. ನಾವೆಷ್ಟೇ ಓಡಿಸಿದರೂ ಅದು ಒಂದು ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದರೆ ಅದು ಅಷ್ಟು ಸುಲಭವಾಗಿ ಆ ಸ್ಥಳವನ್ನು ಬಿಟ್ಟು ಹೋಗುವುದಿಲ್ಲ. ನಾವು ಮತ್ತೆ ಮತ್ತೆ ಅದರ ಗೂಡನ್ನು ಕಿತ್ತೆಸೆದರೆ ಅಪಾಯದ ಮುನ್ಸೂಚನೆಯರಿತು ಅದು ಬೇರೆ ಸ್ಥಳ ಹುಡುಕುತ್ತದೆ.

ಸುಮಾರು ಹತ್ತು ವರ್ಷಗಳ ಹಿಂದೆ ಗುಬ್ಬಚ್ಚಿ ಗೂಡಿರದ ಮನೆಗಳೇ ಇರಲಿಲ್ಲ ಎನ್ನುವಷ್ಟರ ಮಟ್ಟಿಗೆ ಅವುಗಳು ಮಾನವನ ಜೊತೆ ನಿಕಟವಾಗಿ ಬದುಕುತ್ತಿತ್ತು. ಅದು ಮನುಷ್ಯನಿಂದ ತನಗೆ ಮತ್ತು ತನ್ನ ಸಂತಾನಕ್ಕೆ ಅಪಾಯವಿಲ್ಲ ಎಂಬ ಕಾರಣಕ್ಕೂ ಮನುಷ್ಯನ ವಾಸಸ್ಥಾನವನ್ನೇ ಹೆಚ್ಚು ಇಷ್ಟಪಡುತ್ತದೆ. ಆದರೆ ನಾವು ಮಾತ್ರ ಆ ಪುಟ್ಟ ಹಕ್ಕಿಯ ಭರವಸೆಗೆ ಮೋಸ ಮಾಡುತ್ತಿದ್ದೇವೆ.

ಪ್ರಸ್ತುತ ಗುಬ್ಬಚ್ಚಿಗಳ ಸಂತಾನ ಶೀಘ್ರಗತಿಯಲ್ಲಿ ಅಳಿವಿನಂಚಿಗೆ ಸಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಗುಬ್ಬಚ್ಚಿಗಳನ್ನು ಚಿತ್ರದಲ್ಲೋ, ಟಿ.ವಿ.ಪರದೆಯ ಮೇಲೋ ನಮ್ಮ ಮಕ್ಕಳಿಗೆ ತೋರಿಸಬೇಕಾದ ದಿನಗಳು ಬೇಗನೇ ಬರಬಹುದು.

ಸುಮಾರು ಹದಿನೈದಿಪ್ಪತ್ತು ವರ್ಷಗಳ ಹಿಂದೆ ಸಾಮಾನ್ಯರಲ್ಲಿ ಸಾಮಾನ್ಯರಿಗೆ, ಎಳೆಯ ಮಕ್ಕಳಿಗೆಲ್ಲಾ ಗುಬ್ಬಚ್ಚಿಗಳ ಬಗ್ಗೆ ಒಳ್ಳೆಯ ತಿಳುವಳಿಕೆ ಇತ್ತು. ಇಂದು ಗುಬ್ಬಚ್ಚಿಗಳ ಬಗ್ಗೆ ಪಕ್ಷಿ ಶಾಸ್ತ್ರಜ್ಞರು, ಪರಿಸರ ತಜ್ಞರು ಮಾತ್ರ ಅಧಿಕೃತವಾಗಿ ಮಾತನಾಡಬಲ್ಲರೇನೋ ಎಂಬಷ್ಟರ ಮಟ್ಟಿಗೆ ಅದರ ಸಂತತಿಯೂ ವಿರಳವಾಗುತ್ತಿದೆ ಮತ್ತು ಸ್ವತಃ ಅದೂ ಮಾನವನಿಂದ ದೂರವಾಗುತ್ತಿದೆ.

ಗುಬ್ಬಚ್ಚಿ, ಪಾರಿವಾಳ, ಕಾಗೆಗಳ ಹೊರತಾದ ಹೆಚ್ಚಿನೆಲ್ಲಾ ಪಕ್ಷಿಗಳ ಜೀವನ ಶೈಲಿಯ ಬಗ್ಗೆ ಆಳವಾದ ಮಾಹಿತಿಯಿರುವುದು ಪಕ್ಷಿ ತಜ್ಞರಿಗೆ ಮತ್ತು ಕಾಡುಗಳಲ್ಲಿ ವಾಸಿಸುವ ಬುಡಕಟ್ಟು ಜನರಿಗೆ ಮಾತ್ರ. ಆದರೆ ಗುಬ್ಬಚ್ಚಿಯ ಜೀವನ ಶೈಲಿ, ಮೊಟ್ಟೆ ಇಡುವ ಸಮಯ ಮತ್ತು ಕ್ರಮ, ಮೊಟ್ಟೆಗೆ ಕಾವು ಕೊಡಲು ಬೇಕಾಗುವ ಸಮಯ, ಅವುಗಳ ಆಹಾರ, ಗೂಡು ಕಟ್ಟುವ ಕ್ರಮ ಇತ್ಯಾದಿಗಳ ಬಗೆಗೆಲ್ಲಾ ನಮ್ಮ ಹಿರಿಯರು ಅಧಿಕೃತವಾಗಿ ಮಾತನಾಡಬಲ್ಲಷ್ಟು ಮಾಹಿತಿ ಕೊಡುತ್ತಿದ್ದರು.ಅಷ್ಟರ ಮಟ್ಟಿಗೆ ಗುಬ್ಬಚ್ಚಿಗಳು ಮನುಷ್ಯರೊಂದಿಗೆ ನಿಕಟ ಸಂಪರ್ಕ ಹೊಂದಿತ್ತು.

ಯಾವುದೇ ವೈವಿಧ್ಯಮಯ ಪಕ್ಷಿ ಸಂಕುಲವನ್ನು ನೋಡಬೇಕಾದರೆ ಹಳ್ಳಿಗಳಿಗೆ ಹೋಗಬೇಕಾಗುತ್ತದೆ. ಬೆಟ್ಟ, ಗುಡ್ಡ, ತೋಟ, ಕಾಡು ಮುಂತಾದ ಹಸಿರಾಗಿರುವ ಪ್ರಕೃತಿಯ ಮಡಿಲನ್ನೇ ಹೆಚ್ಚಿನ ಪಕ್ಷಿ ಸಂಕುಲ ಆಯ್ದುಕೊಳ್ಳುತ್ತವೆ. ಆದರೆ ಗುಬ್ಬಚ್ಚಿ ಮಾತ್ರ ಸರ್ವವ್ಯಾಪಿ. ಅವು ನಗರ,ಪಟ್ಟಣ, ಹಳ್ಳಿಗಳ ಗಡಿಗಳಿಲ್ಲದೇ ಎಲ್ಲೆಂದರಲ್ಲಿ ಕಾಣಸಿಗುತ್ತಿತ್ತು. ಗುಬ್ಬಚ್ಚಿ ಸಂತತಿ ವಿನಾಶದಂಚಿಗೆ ಸರಿದುದರ ಹಿಂದಿನ ಕಾರಣಗಳನ್ನು ಪಕ್ಷಿ-ಪರಿಸರ ತಜ್ಞರಷ್ಟೇ ಕರಾರುವಾಕ್ಕಾಗಿ ನಮ್ಮ ಹಿರಿಯರೂ ನೀಡಬಲ್ಲರು. ಅದಕ್ಕೆ ಕಾರಣ ಗುಬ್ಬಚ್ಚಿ ಮತ್ತು ಮನುಷ್ಯನ ನಿಕಟತೆ.

ಕಾರಣಗಳು 

ಹೆಂಚಿನ ಮನೆ-ಕಟ್ಟಡಗಳು ಕಡಿಮೆಯಾಗಿ ಆರ್.ಸಿ.ಸಿ. ಕಟ್ಟಡಗಳು ಹೆಚ್ಚಿದ್ದರಿಂದ ಗುಬ್ಬಚ್ಚಿಗಳಿಗೆ ಗೂಡು ಕಟ್ಟಲು ಅನನುಕೂಲವುಂಟಾಗಿದೆ. ಆರ್.ಸಿ.ಸಿ. ಮನೆಗಳಲ್ಲಿ ಪಕ್ಕಾಸು, ರೀಪುಗಳು ಇಲ್ಲದ್ದರಿಂದ ಅವುಗಳಲ್ಲಿ ಗೂಡು ಕಟ್ಟಲು ಆಧಾರಗಳಿಲ್ಲ.

-ಹೆಂಚಿನ ಮನೆಗಳಲ್ಲಾದರೂ ಹದಿನೈದಿಪ್ಪತ್ತು ವರ್ಷಗಳ ಹಿಂದೆ ಇಂದಿನಂತೆ ಫ್ಯಾನ್‌ಗಳ ಬಳಕೆ ವ್ಯಾಪಕವಾಗಿರಲಿಲ್ಲ. ಗುಬ್ಬಚ್ಚಿ ಸದಾ ಚಟುವಟಿಕೆಯಲ್ಲಿರುವ ಪಕ್ಷಿಯಾದ್ದರಿಂದ ಒಂದೇ ಕಡೆ ಹೆಚ್ಚು ಹೊತ್ತು ನಿಲ್ಲುವುದಿಲ್ಲ. ಸಹಜ ಸ್ವಭಾವದಂತೆ ಆಚೀಚೆ ಹಾರಾಡುತ್ತಿರುತ್ತದೆ. ಫ್ಯಾನ್‌ಗಳು ಚಾಲೂ ಇದ್ದಾಗೆಲ್ಲಾ ಫ್ಯಾನ್ ರೆಕ್ಕೆಗಳಿಗೆ ಸಿಕ್ಕಿ ಗುಬ್ಬಚ್ಚಿಗಳು ಸಾಯುವುದು ಹೆಚ್ಚಾಯಿತು.

-ಗುಬ್ಬಚ್ಚಿಗಳಿಗೆ ಗೂಡು ಕಟ್ಟಲು ಬೇಕಾಗುವ ಅನುಕೂಲತೆಗಳು ಕ್ಷೀಣಿಸಿದುದರ ಪರಿಣಾಮ ಅವುಗಳ ಮೊಟ್ಟೆಗಳು ನಾಶವಾಗಿ ಗುಬ್ಬಚ್ಚಿ ಸಂತಾನ ಕ್ಷೀಣಿಸಲಾರಂಭವಾಯಿತು.

-ಮಾನವ ಪರಿಸರದಲ್ಲಿರುವ ಗುಬ್ಬಚ್ಚಿ ಗೂಡುಗಳ ಮೇಲೆ ಮಾನವನ ಕ್ರೌರ್ಯದಿಂದ ಮೊಟ್ಟೆಗಳು ನಾಶಗೊಂಡು ಸಂತತಿ ಕ್ಷೀಣಿಸುತ್ತಿದೆ.

-ಮೊಬೈಲ್ ಫೋನ್ ಬಳಕೆ ವ್ಯಾಪಕವಾದುದರ ಪರಿಣಾಮ ನೆಟ್‌ವರ್ಕ್ ಕವರೇಜ್‌ಗಾಗಿ ಹಳ್ಳಿ ಹಳ್ಳಿಗಳಲ್ಲೂ, ಅರಣ್ಯ ಪ್ರದೇಶಗಳ ಮಧ್ಯೆಯೂ ಮೊಬೈಲ್ ಗೋಪುರಗಳು ಹೆಚ್ಚಾಗುತ್ತಾ ಅದರ ಪರಿಣಾಮ ಗುಬ್ಬಚ್ಚಿ ಸಂತತಿಗಳ ಮೇಲೆ ಬೀರುತ್ತಿದೆ. ಒಟ್ಟಿನಲ್ಲಿ ಹೆಚ್ಚುತ್ತಿರುವ ಸೂಕ್ಷ್ಮ ತರಂಗ ಗೋಪುರಗಳು ಗುಬ್ಬಚ್ಚಿ ಸಂತಾನಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿದೆ.

-ಗುಬ್ಬಚ್ಚಿಗಳ ಮುಖ್ಯ ಆಹಾರ ಹೊಲಗದ್ದೆಗಳಲ್ಲಿರುವ ಚಿಕ್ಕ ಪುಟ್ಟ ಕ್ರಿಮಿ ಕೀಟಗಳು ಮತ್ತು ಕಾಳುಗಳು. ಹೊಲಗದ್ದೆಗಳು ಕಡಿಮೆಯಾಗುತ್ತಾ ಅವುಗಳ ಆಹಾರ ಮೂಲಗಳ ಮೇಲೂ ಪರಿಣಾಮವುಂಟಾಯಿತು.

– ಗುಬ್ಬಚ್ಚಿಗಳು ತಮ್ಮ ಆಹಾರವನ್ನು ಹೊಲಗದ್ದೆಗಳಲ್ಲಿ ಹುಡುಕುವುದರಿಂದ ಹೊಲಗದ್ದೆಗಳಿಗೆ ಸಿಂಪಡಿಸುವ ಕ್ರಿಮಿ, ಕೀಟ ನಾಶಕಗಳು ಗುಬ್ಬಚ್ಚಿಗಳ ಪ್ರಾಣಕ್ಕೂ ಎರವಾಗುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...