Homeಕರ್ನಾಟಕಯಲ್ಲಾಪುರ ಉಪಸಮರದಲ್ಲಿ ದೇಶಪಾಂಡೆ ಹಠಕ್ಕೆ ಹೆದರಿದ ಅನರ್ಹ ಶಾಸಕ ಶಿವರಾಮ್‌ ಹೆಬ್ಬಾರ್!

ಯಲ್ಲಾಪುರ ಉಪಸಮರದಲ್ಲಿ ದೇಶಪಾಂಡೆ ಹಠಕ್ಕೆ ಹೆದರಿದ ಅನರ್ಹ ಶಾಸಕ ಶಿವರಾಮ್‌ ಹೆಬ್ಬಾರ್!

- Advertisement -
- Advertisement -

“ನಾನು ಅಭಿವೃದ್ಧಿಗಾಗಿ ಬಿಜೆಪಿ ಸೇರಿದ್ದೇನೆ… ಕಾಂಗ್ರೆಸಲ್ಲಿ ದೇಶಪಾಂಡೆ ಕಾಟ ತಾಳಲಾಗದೆ ಹೊರಬರಬೇಕಾಯ್ತು…” ಎಂದು ಯಲ್ಲಾಪುರ ಮುಂಡಗೋಡ-ಬನವಾಸಿ ಕ್ಷೇತ್ರದಾದ್ಯಂತ ಗೋಳಾಡುತ್ತ ಪ್ರಚಾರ ಮಾಡುತ್ತಿರುವ ಬಿಜೆಪಿ ಅಭ್ಯರ್ಥಿ “ಅನರ್ಹ” ಶಾಸಕ ಶಿವರಾಮ ಹೆಬ್ಬಾರ್‌ ಮಾತನ್ನು ಯಾರೆಂದರೆ ಯಾರೂ ನಂಬುತ್ತಿಲ್ಲ.

2018ರ ಅಸೆಂಬ್ಲಿ ಎಲೆಕ್ಷನ್ ರಿಸಲ್ಟ್ ಬಂದ ಮರುಘಳಿಗೆಯೇ ಹೆಬ್ಬಾರ ವ್ಯವಹಾರ ಚತುರೆ ಹೆಂಡತಿ, ಗಂಡನ ಬಿಜೆಪಿಗೆ ಸೇರಿಸಲು ಯಡ್ಡಿ ಮಗ ವಿಜಯೇಂದ್ರ ಜತೆ ಡೀಲ್ ನಡೆಸಿದ್ದು ಆಡಿಯೋ ಕೇಳಿದರ‍್ಯಾರೂ ಮರೆತಿಲ್ಲ! ಹೆಬ್ಬಾರ್ ಮಂತ್ರಿಗಿರಿ ದುರಾಸೆಗೆ ಬಿದ್ದೇ ಪಕ್ಷಾಂತರ ಮಾಡಿ ಅನವಶ್ಯಕ ಎಲೆಕ್ಷನ್ ಜನರ ಮೇಲೆ ಹೇರಿದ್ದಾನೆಂಬ ಕೂಗು ಇಡೀ ಕ್ಷೇತ್ರದಲ್ಲಿದೆ. ಮೂಲ ಬಿಜೆಪಿಗರಂತೂ ಹೆಬ್ಬಾರ ಮುಸುಡಿ ಕಂಡರೆ ಮೂಗು ಮುರಿಯುತ್ತಾರೆ. ನೋಟಾ ಬಟನ್ನಾದರೂ ಒತ್ತುತ್ತೇವೆಯೇ ಹೊರತು ಕೊಳಕು ರಾಜಕೀಯ ಮಾಡುವ ಹೆಬ್ಬಾರ್‌ ಗೆಲ್ಲಿಸಲಾರೆವೆಂದು ಕಟ್ಟರ್ ಕಮಲಿಗರು ಕೆರಳಿದ್ದಾರೆ!!

ಮಂತ್ರಿಯಾಗಿ ಜೀವನದ ಕೊನೆಯ ಆಸೆ ಈಡೇರಿಸಿಕೊಳ್ಳಬೇಕೆಂಬ ತೆವಲಿಗೆ ಬಿದ್ದಿರುವ ಹೆಬ್ಬಾರ್‌ ಲೆಕ್ಕಾಚಾರ ಸರಳ ಅಂಕಗಣಿತದಲ್ಲಿದೆ. ನಂಗೆ ಕಳೆದ ಬಾರಿ ಬಿದ್ದ ಮತದೊಂದಿಗೆ ಆಗಿನ ಎದುರಾಳಿ ವಿ.ಎಸ್.ಪಾಟೀಲ್ ಈಗ ಜತೆಗಿರುವುದರಿಂದ ಪ್ಲಸ್ ಆಗಿದೆ. ಸ್ವಜಾತಿ ಹವ್ಯಕರಲ್ಲಿ ಬೇಸರವಿದ್ದರೂ ಸ್ವರ್ಣವಲ್ಲಿ ಸ್ವಾಮಿಗಳ ಫರ್ಮಾನಿಂದ ಲಾಭ ಆಗ್ತದೆ. ಎದುರಾಳಿ ಕಾಂಗ್ರೆಸ್‌ನ ಭೀಮಣ್ಣ ನಾಯ್ಕಗೆ ಆತನ ದೀವರ ಜಾತಿ ಮತ ಬಿಟ್ಟರೆ ಬೇರಾರದೂ ಸಿಗದು. ಅದಿರು ವ್ಯವಹಾರದ ಕೊಪ್ಪರಿಗೆ ಹಣದಿಂದ ಪ್ರಚಾರ ಸಲೀಸಾಗುತ್ತದೆಂಬ ಅಂದಾಜು ಹೆಬ್ಬಾರ್ ಹಾಕಿದ್ದಾರೆ. ಆದರೆ ಅಷ್ಟು ಸರಳವಾಗಿಲ್ಲ ಉಪಚುನಾವಣಾ ಅಖಾಡ.

ಕಳೆದ ಬಾರಿ ಕೇವಲ 1,400 ಮತದಂತರದಿಂದ ಗೆದ್ದಿದ್ದ ಹೆಬ್ಬಾರ್‌ಗೆ ದಡ ತಲುಪಿಸಿದ್ದೇ ಮುಸ್ಲಿಮ್, ಕ್ರಿಶ್ಚಿಯನ್ನರು. 20 ಸಾವಿರದಷ್ಟಿರುವ ಈ ಅಲ್ಪಸಂಖ್ಯಾತರ ಬೆಂಬಲ ಈ ಸಲ ಹೆಬ್ಬಾರ್‌ಗೆ ಸಿಗಲಾರದು. ಬಿಜೆಪಿಯಿಂದ ಶಾಸಕನಾಗಬೇಕೆಂದು ಕಳೆದ ಬಾರಿಯೇ ಬಿಜೆಪಿ ಪಾಲಾಗಿರುವ ಜಿಪಂ ಸದಸ್ಯ ಎಲ್.ಟಿ.ಪಾಟೀಲ್‌ಗೆ ಹೆಬ್ಬಾರ್ ಬಿಜೆಪಿಗೆ ಬಂದಿದ್ದು ಸಹಿಸಲಾಗುತ್ತಿಲ್ಲ. ಸುಮಾರು 25 ಸಾವಿರ ಮತದಾರರಿರುವ ಮರಾಠ ಸಮುದಾಯದ ಪಾಟೀಲ ಮೂಲತಃ ದೇಶಪಾಂಡೆಯ ಅತ್ಯಾಪ್ತ ಶಿಷ್ಯ. ಈ ಪಾಟೀಲ್ ಕಳೆದ ಬಾರಿ ದೊಡ್ಡ ಮೊತ್ತಕ್ಕೆ ಡೀಲಾಗಿ ಹೆಬ್ಬಾರ್‌ಗೆ ಹೆಲ್ಪ್ ಮಾಡಿದ್ದ. ಆದರೀಗ ದೇಶಪಾಂಡೆ ಕಣ್ಸನ್ನೆಗೇ ಉಲ್ಟಾ ಹೊಡೆಯುತ್ತಿದ್ದಾನೆ.

ಹಿಂದಿನ ಪ್ರತಿಸ್ಪರ್ಧಿ ವಿ.ಎಸ್.ಪಾಟೀಲ್ ಸ್ವಜಾತಿ ದೊರೆ ಯಡ್ಡಿ ಮುಲಾಜಿಗೆ ಬಹಿರಂಗವಾಗಿ ಓಡಾಡಿಕೊಂಡಿದ್ದಾನಾದರೂ ಒಳಗೊಳಗೇ ಹೆಬ್ಬಾರ್ ಸೋಲಲಿ ಎಂದೇ “ಹಾರೈಸು”ತ್ತಿದ್ದಾರೆ. ಈತನ ಮಗ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಸೇರಿದ್ದು ಹೆಬ್ಬಾರ್‌ ರನ್ನು ದಂಗುಬಡಿಸಿದೆ.

ಸ್ವಜಾತಿಯ ಸ್ವ-ಪಕ್ಷದ ಹಿತಶತ್ರುಗಳಾದ ಪ್ರಮೋದ್ ಹೆಗಡೆ. ಗುರುಮುರಿಗೆ ಸಂಸದ ಅನಂತ್ಮಾಣಿಗಳ ಅರ್ಥವಾಗದ ಅಂತರಾಳ ಹೆಬ್ಬಾರ್‌ರನ್ನು ಅಂಜಿಸುತ್ತಲೇ ಇದೆ. ಬಿಜೆಪಿ ಜಿಲ್ಲಾಧ್ಯಕ್ಷನಾಗಿದ್ದಾಗಲೇ ಅನಂತ್ಮಾಣಿಯಿಂದ ಕೆನ್‌ಕೆನ್ನೆಗೆ ಬಾರಿಸಿಕೊಂಡು ಬಿಜೆಪಿ ಸೇರಿದ್ದ ಹೆಬ್ಬಾರ್‌ರಿಗೆ ಆತನ ಸಹಕಾರ ಸಿಗುವುದಾದರೂ ಹೇಗೆ? ಅನಂತ್ಮಾಣಿಗೆ ಸ್ವ-ಪಕ್ಷದ ಹೆಬ್ಬಾರ್‌ಗಿಂತಲೂ ವಿರೋಧಿ ಪಡೆಯ ಭೀಮಣ್ಣ ನಾಯ್ಕ ಎಂದರೇನೇ ಕಾಳಜಿ ಜಾಸ್ತಿ. ಸ್ಪೀಕರ್ ಕಾಗೇರಿಯಂತೂ ತನ್ನ ಮಂತ್ರಿಗಿರಿಗೆ ಸಂಚಕಾರ ತರುವ, ಸ್ವ-ಜಾತಿ ಹವ್ಯಕರಲ್ಲಿ ಪ್ರತಿಸ್ಪರ್ಧಿಯಾಗುವ ಹೆಬ್ಬಾರ್ ಗೆಲ್ಲುವುದು ಸಹಜವಾಗೇ ಬೇಡವಾಗಿದೆ. ಇಷ್ಟಾಗಿಯೂ ಈ ಹವ್ಯಕ ಲೀಡರ್‌ಗಳೆಲ್ಲ ತಮ್ಮ ಕುಲಗುರು ಸ್ವರ್ಣವಲ್ಲಿ ಸ್ವಾಮಿ ಮಂತ್ರಾಕ್ಷತೆಗೆ ಮಣಿದರೆ ಹವ್ಯಕರ ಮತ ಸಿಗಬಹುದೇ ಹೊರತು ಅಹಿಂದ ಮತ ತರಲು ಸಾಧ್ಯವೇ ಇಲ್ಲ.

ಇದೆಲ್ಲಕ್ಕಿಂತ ಕೈ ಕಮಾಂಡ್ ದೇಶಪಾಂಡೆಯ ಜಿದ್ದೊಂದೇ ಅಖಾಡದಲ್ಲಿ ಹೆಬ್ಬಾರ್‌ರನ್ನು ಹೈರಾಣಾಗಿಸಿದೆ. ದೇಶಪಾಂಡೆ ತನ್ನ ರಾಜಕೀಯ ಇತಿಹಾಸದಲ್ಲಿ ಯಾರನ್ನೂ ಗೆಲ್ಲಿಸಲು ಪ್ರಯತ್ನಿಸಿದ್ದೇ ಇಲ್ಲ. ಆತನದೇನಿದ್ದರೂ ಸೋಲಿಸುವ ಕರಾಮತ್ತು. ಆದರೆ ಈ ಬಾರಿ ದೇಶಪಾಂಡೆ ಹೇಗಾದರೂ ಮಾಡಿ ಹೆಬ್ಬಾರ್‌ರನ್ನು ಹೆಡೆಮುರಿ ಕಟ್ಟಿ ಬೇಡ್ತಿ ನದಿಯಲ್ಲಿ ಬಿಡಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ತನ್ನನ್ನು ಕಾಂಗ್ರೆಸಲ್ಲಿದ್ದಾಗಲೂ ಕೆಣಕುತ್ತಿದ್ದ ಹೆಬ್ಬಾರ್ ಪಾರ್ಟಿ ಬಿಡಲಿಕ್ಕೆ ತಾನೇ ಕಾರಣವೆಂದು ಹೇಳಿದ್ದು ಕೆರಳಿಸಿದೆ. ಕ್ಷೇತ್ರದ ಮುಂಡಗೋಡದಲ್ಲಿ ದೇಶಪಾಂಡೆಗೆ ಹಿಡಿತವಿದೆ. ಕ್ಷೇತ್ರ ಪುನರ್ ವಿಂಗಡಣೆಗೂ ಮೊದಲು ಮುಂಡಗೋಡ ದೇಶಪಾಂಡೆಯ ಹಳಿಯಾಳ ಕ್ಷೇತ್ರದ ಜತೆಗಿತ್ತು. ಇಲ್ಲಿಯೇ ಬಿಡಾರ ಹೂಡಿರುವ ದೇಶಪಾಂಡೆ ಹೆಬ್ಬಾರ್‌ನ ಸೋಲಿಸಲು ಸಕಲ ಸ್ಟ್ರಾಟರ್ಜಿ ಮಾಡುತ್ತಿದ್ಧಾರೆ. ಬ್ರಾಹ್ಮಣೇತರ ಮರಾಠ, ಗೌಳಿ, ಸಿದ್ದಿ, ಬುಡಕಟ್ಟು, ದಲಿತ ಮತ ಬ್ಯಾಂಕ್ ಮೇಲೆ ದೇಶಪಾಂಡೆ ಗಮನ ಕೇಂದ್ರೀಕರಿಸಿರುವುದು ಹೆಬ್ಬಾರ್‌ಗೂ ಗೊತ್ತಾಗಿದೆ.

ದೇಶಪಾಂಡೆ ತಂತ್ರಗಾರಿಕೆಗೆ ಹೆಬ್ಬಾರ್ ಒಂಥರಾ ಡೆಸ್ಟರೇಟ್ ಆದಂತಿದೆ. ಅರಣ್ಯ ಅತಿಕ್ರಮಣದಾರರ ಸಂಘಟಕ ರವೀಂದ್ರ ನಾಯ್ಕರನ್ನು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ದೇಶಪಾಂಡೆ ಕರೆತಂದಿದ್ದಾರೆ. ಬಹುತೇಕ ಜಿ.ಪಂ- ತಾ.ಪಂ- ಗ್ರಾಪಂ.ನ ಕಾಂಗ್ರೆಸ್ ಮೆಂಬರ್‌ಗಳು ಹೆಬ್ಬಾರ್ ಜತೆಗಿದ್ದರೂ ದೇಶಪಾಂಡೆಯ “ಋಣ” ಇರುವುದರಿಂದ ಆತನ ರಹಸ್ಯ ನಿರ್ದೇಶನಕ್ಕೆ ಬದ್ಧರಾಗಿದ್ದಾರೆಂಬುದು ಎಲೆಕ್ಷನ್ ವಿಶ್ಲೇಷಕರ ಆಂಬೋಣ.

ಕಾಂಗ್ರೆಸ್ ಕ್ಯಾಂಡಿಡೇಟ್ ಭೀಮಣ್ಣ ನಾಯ್ಕ ಪಾಪದ ಆಸಾಮಿ. ಹಲವು ಎಲೆಕ್ಷನ್‌ನಲ್ಲಿ ಸೋತವನೆಂಬ ಸಿಂಪಥಿ ಕ್ಷೇತ್ರದಲ್ಲಿದೆ. ’ಮಾಜಿ ಸಿಎಂ ಬಂ’ ಭಾಮೈದನೆಂಬ ಅಂಶ ಆತನಿಗೆ ಸ್ವಜಾತಿ ದೀವರ 15 ಸಾವಿರದಷ್ಟಿರುವ ಮತದಲ್ಲಿ ಹೆಚ್ಚಿನದು ಪಡೆಯಲು ಅನುಕೂಲವಾಗಿದೆ. ನೆರೆ ಬಂದಾಗ ಸಮ್ಮಿಶ್ರ ಸರ್ಕಾರ ಉರುಳಿಸಲು ಮುಂಬೈನ ಐಷಾರಾಮಿ ಹೋಟೆಲ್‌ನಲ್ಲಿ “ಆಟ” ಆಡುತ್ತಿದ್ದ ಹೆಬ್ಬಾರ್ ಬಗ್ಗೆ ಕ್ಷೇತ್ರದಲ್ಲಿ ಸಿಟ್ಟಿದೆ. ಮೂಲಸೌಕರ್ಯ, ರಸ್ತೆಯಂಥ ಸೌಲಭ್ಯ ಒದಗಿಸುವ ಹೆಬ್ಬಾರ್‌ನ ಭರವಸೆ ಎರಡು ಬಾರಿ ಶಾಸಕರಾದರೂ ಈಡೇರಿಲ್ಲವೆಂಬ ಬೇಸರ ಜನರಿಗಿದೆ.

ಬಿಜೆಪಿಯ ಟಾಪ್ ಲೀಡರ್‌ಗಳು ಎರಡೆರಡು ಬಾರಿ ಸಂಧಾನ ಸಭೆ ನಡೆಸಿದರೂ ಬಿಜೆಪಿಯ ಬಹುತೇಕ ಘಟಕಗಳಿನ್ನೂ ಫೀಲ್ಡಿಗೆ ಇಳಿದಿಲ್ಲ. ಹೆಬ್ಬಾರ್ ಗ್ಯಾಂಗಿನ ಜತೆ ಸೇರಲು ಮೂಲ ಬಿಜೆಪಿಗರ ಮನಸು ಒಪ್ಪುತ್ತಿಲ್ಲ. ಹೊರನೋಟಕ್ಕೆ ಹೆಬ್ಬಾರ್ ಹವಾ ಜೋರಿರುವಂತೆ ಕಂಡರೂ ಆತನಿಗೆ ಸ್ವಜಾತಿ ಹವ್ಯಕರು ಮತ್ತು ಯಡ್ಡಿ ದೆಸೆಯಿಂದ 25 ಸಾವಿರದಷ್ಟಿರುವ ಲಿಂಗಾಯತರ ಮತ ಬಿಟ್ಟರೆ ಉಳಿದ ಯಾವ ಸಮುದಾಯದ ಮತವೂ ದೊಡ್ಡ ಪ್ರಮಾಣದಲ್ಲಿ ದಕ್ಕಲಾರದು.

ಕ್ಷೇತ್ರ ವ್ಯಾಪ್ತಿಯ ಏಳು ಜಿಪಂ ಕ್ಷೇತ್ರಗಳ ಪೈಕಿ ನಾಲ್ಕು ಬಿಜೆಪಿ (ಇಬ್ಬರು ಕಾಂಗ್ರೆಸ್‌ನಿಂದ ಹೋದವರು) ಪರವಿದ್ದರೆ ಮೂರು ಕಾಂಗ್ರೆಸ್ ಕಡೆಗಿದೆ. ದೇಶಪಾಂಡೆ ಕರಾರುವಾಕ್ಯ ದಾಳ ಉರುಳಿಸಿದಂತೆ ಕಾಂಗ್ರೆಸ್ ಕ್ಯಾಂಡಿಡೇಟ್ ಬಲಗೊಳ್ಳುತ್ತಿದ್ದಾರೆ. ಸದ್ಯಕ್ಕೆ ಎತ್ತಿಂದೆತ್ತ ಲೆಕ್ಕಹಾಕಿ ತಾಳೆ ನೋಡಿದರೂ ಕ್ಷೇತ್ರ ಯಾವ ಮೂಲೆಯಲ್ಲಿ ನಿಂತು ಕಣ್ಣು ಹಾಯಿಸಿದರೂ ಪಕ್ಷಾಂತರಿ ಹೆಬ್ಬಾರ್‌ಗೆ ಅಖಾಡ ಕಠಿಣ ಆಗುತ್ತಿರುವುದು ಸ್ಪಷ್ಟವಾಗುತ್ತಿದೆ. ದೇಶಪಾಂಡೆ ಇದೇ ನಿಷ್ಠೆ-ಬದ್ಧತೆ-ಹಠದಿಂದ ಕಡೆವರೆಗೂ ಹೋರಾಡಿದರೆ ಕ್ಷೇತ್ರಕ್ಕೆ ಮೋಸ-ವಂಚನೆ ಮಾಡಿದ ಹೆಬ್ಬಾರ್‌ಗೊಂದು ನೈತಿಕ ಪಾಠವಾಗೋದು ಗ್ಯಾರಂಟಿ ಎಂಬುದು ಕ್ಷೇತ್ರದಲ್ಲಿ ಕೇಳಿಬರುವ ಸಾಮಾನ್ಯ ಮಾತು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...