ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳು ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿಯಂತಹ ಕಾರ್ಪೊರೇಟ್ ಕಂಪನಿಗಳ ಪರವಾಗಿವೆ ಎಂದು ಆರೋಪಿಸಿರುವ ರೈತರು ಅವರ ಎಲ್ಲಾ ಉತ್ಪನ್ನಗಳನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ. ಇಂದು ಬೆಂಗಳೂರಿನ ರೈಲು ನಿಲ್ದಾಣದ ಬಳಿ ಯುವ ರೈತರು ಜಿಯೋ ಸಿಮ್ ಅನ್ನು ಬೇರೆ ಕಂಪನಿಗೆ ಪೋರ್ಟ್ ಮಾಡುವ ಮೂಲಕ, ರಿಲೆಯನ್ಸ್ ಉತ್ಪನ್ನಗಳನ್ನು ಬಳಸದಿರುವುದಾಗಿ ಪ್ರತಿಜ್ಞೆ ಮಾಡಿದರು.
ಯುವ ಮುಖಂಡ ಸರೋವರ್ ಬೆಂಕೀಕರೆ ಮಾತನಾಡಿ “ಅಂಬಾನಿ ಅದಾನಿ ತರದ ಕಾರ್ಪೊರೇಟ್ ಖದೀಮರು ನಮ್ಮ ಕೃಷಿ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಅವರಿಗಾಗಿಯೇ ಈ ರೈತ ವಿರೋಧಿ ಕಾನೂನುಗಳು ಜಾರಿಯಾಗಿವೆ. ಹಾಗಾಗಿ ಸಾಮೂಹಿಕವಾಗಿ ತಮ್ಮ ಜಿಯೋ ಸಿಮ್ ನಂಬರ್‌ಗಳನ್ನು ಬೇರೆ ಕಂಪನಿಗೆ ಪೋರ್ಟ್ ಆಗಬೇಕೆಂದು ದೆಹಲಿ ರೈತರ ಕರೆ ನೀಡಿದ್ದಾರೆ. ಜಿಯೋ ಆರಂಭವಾದಾಗ ದೇಶದ ಪ್ರಧಾನಿ ದೇಶದ 130 ಕೋಟಿ ಜನರಿಗೆ ಅರ್ಪಣೆ ಎಂದು ನಾಚಿಕೆ ಇಲ್ಲದೆ ಮುಖಪುಟ ಜಾಹೀರಾತು ನೀಡಿದರು. ಇದನ್ನು ವಿರೋಧಿಸಿ ನಾವು ಬೇರೆ ಕಂಪನಿಗೆ ಪೋರ್ಟ್ ಆಗೋಣ” ಎಂದರು.
ನಾವು ಈಗ ಪೋರ್ಟ್ ಆಗಿದ್ದೇವೆ. ಹಾಗಾಗಿ ಜಿಯೋ ಕಂಪನಿಯ ಕಡೆಯಿಂದ ಯಾಕೆ ಪೋರ್ಟ್ ಆದಿರಿ ಎಂದು ಫೋನ್ ಮಾಡುತ್ತಾರೆ. ಆಗ ನಿಮ್ಮ ಅಂಬಾನಿ ದೇಶಕ್ಕೆ ಅನ್ನ ನೀಡುವ ರೈತರನ್ನು ಮುಳುಗಿಸುತ್ತಿದ್ದಾರೆ. ಹಾಗಾಗಿ ನಾವು ನಿಮ್ಮನ್ನು ಮುಳುಗಿಸಲು ಹೊರಟಿದ್ದೇವೆ ಎಂದು ಹೇಳಿ ಎಂದು ಸರೋವರ್ ಕರೆ ನೀಡಿದರು.
ನಂತರ ಎಲ್ಲರೂ ಸಾಮೂಹಿಕವಾಗಿ “ಭಾರತದ ಯುವಜನರಾದ ನಾವು ರೈತರ ಕರೆಗೆ ಓಗೊಟ್ಟು ಅಂಬಾನಿ ಮತ್ತು ಅದಾನಿಯನ್ನು ಬಾಯ್ಕಟ್ ಮಾಡುತ್ತೇವೆ. ನಮ್ಮ ಜೀವನ ಪರ್ಯಂತ ಅಂಬಾನಿಯ ಜಿಯೋ ಸಿಮ್ ಅನ್ನು ಬಳಸುವುದಿಲ್ಲ. ಅಂಬಾನಿಯ ರಿಲೆಯನ್ಸ್ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳುವುದಿಲ್ಲ. ರಿಲೆಯನ್ಸ್ ಮಾಲ್‌ಗೆ ಎಡಗಾಲನ್ನು ಸಹ ಹಾಕುವುದಿಲ್ಲ. ಈ ಮೂಲಕ ಭಾರತದ ಪ್ರಜ್ಞಾವಂತ ಯುವಜನರಾದ ನಾವು ರೈತರ ಜೊತೆ ನಿಲ್ಲುತ್ತೇವೆ” ಎಂದು ಪ್ರತಿಜ್ಞೆ ಸ್ವೀಕರಿಸಿದರು.
ಇದನ್ನೂ ಓದಿ: ಕೇಂದ್ರದ ಪ್ರಸ್ತಾಪ ತಿರಸ್ಕರಿಸಿದ ರೈತರು, ಪ್ರತಿಭಟನೆ ಮುಂದುವರೆಸಲು ನಿರ್ಧಾರ



I will also support former’s I ate capitalists who are supporting them I ate them also, as a common man I supporting formers
ನಾನು ನನ್ನ ರೈತರಿಗೆ ಬೆಂಬಲಿಸುತ್ತೆನೆ.
ನಾನು ನನ್ನ ರೈತರನ್ನು ಬೆಂಬಲಿಸುತ್ತೇನೆ.
ನಾನು ಇನ್ನುಮುಂದೆ ಯಾವುದೇ ರೀತಿಯ.ಸಿಮ್, ಪೆಟ್ರೋಲ್, ಹಾಗೂ ಅವರ ಸರಕುಗಳನ್ನ ಬಳಸುವುದಿಲ್ಲ
ನಾನು ರೈತರನ್ನು ಬೆಂಬಲಿಸುತ್ತನೆ.