Homeಮುಖಪುಟದಲಿತನೆಂಬ ಕಾರಣಕ್ಕೆ ಮಧುಮಗನನ್ನು ಕುದುರೆಯಿಂದ ಕೆಳಗಿಳಿಸಿ ಹಲ್ಲೆ!

ದಲಿತನೆಂಬ ಕಾರಣಕ್ಕೆ ಮಧುಮಗನನ್ನು ಕುದುರೆಯಿಂದ ಕೆಳಗಿಳಿಸಿ ಹಲ್ಲೆ!

ಮೇಲ್ಜಾತಿಯ ಜನರು ಶಿವಪುರ ಗ್ರಾಮದಲ್ಲಿ ದಲಿತ ವರನನ್ನು ಕುದುರೆಯಿಂದ ಕೆಳಗಿಳಿಯುವಂತೆ ಒತ್ತಾಯಿಸಿ, ಮದುವೆ ಮೆರವಣಿಗೆಯಲ್ಲಿ ಭಾಗವಹಿಸಿದ್ದವರನ್ನು ಥಳಿಸಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -
- Advertisement -

ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ಬುಧವಾರ ಜಾತಿ ದೌರ್ಜನ್ಯದ ಅಮಾನವೀಯ ಘಟನೆಯೊಂದು ವರದಿಯಾಗಿದ್ದು, ಕರೇರಾದ ಶಿವಪುರ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ಸೇರಿದ ‘ಮಧುಮಗ’ ಕುದುರೆ ಹತ್ತಿದ್ದಕ್ಕೆ ಸಹಿಸದ ಮೇಲ್ಜಾತಿಯವರು ಹಲ್ಲೆ ಮಾಡಿದ್ದಾರೆ. ಮದುವೆಯ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರರನ್ನು ಥಳಿಸಿ, ವರನನ್ನು ಕುದುರೆಯಿಂದ ಕೆಳಗಿಳಿಯುವಂತೆ ಒತ್ತಾಯಿಸಿದ್ದಾರೆ.

“ಮೇಲ್ಜಾತಿಯ ಜನರು ಶಿವಪುರ ಗ್ರಾಮದಲ್ಲಿ ದಲಿತ ವರನನ್ನು ಕುದುರೆಯಿಂದ ಕೆಳಗಿಳಿಯುವಂತೆ ಒತ್ತಾಯಿಸಿ, ಮದುವೆ ಮೆರವಣಿಗೆಯಲ್ಲಿ ಭಾಗವಹಿಸಿದ್ದವರನ್ನು ಥಳಿಸಿದ್ದಾರೆ ಎಂದು ನಮಗೆ ಇಂದು ಮಾಹಿತಿ ಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದೇವೆ. ತನಿಖೆ ನಡೆಸಲಾಗುತ್ತಿದೆ” ಎಂದು ಕರೇರಾ ಪೊಲೀಸ್ ಠಾಣೆಯ ಉಸ್ತುವಾರಿ ಜಗದೀಶ್ ಪ್ರಸಾದ್ ಹೇಳಿದ್ದಾರೆ.

ಇದನ್ನೂ ಓದಿ: ಒಂದೇ ಊರಲ್ಲಿ ಪದೇ ಪದೇ ನಡೆಯುತ್ತಿರುವ ದಲಿತರ ಮೇಲಿನ ಅತ್ಯಾಚಾರ ಮತ್ತು ಜಾತಿ ದೌರ್ಜನ್ಯಗಳು

ದಲಿತರು ಕುದುರೆ ಸವಾರಿ ಮಾಡಬಾರದು ಎಂದು ಮೇಲ್ಜಾತಿಯವರು ಒತ್ತಾಯಪೂರ್ವಕವಾಗಿ ಹೇರಿರುವ ನಿಯಮವನ್ನು ಧಿಕ್ಕರಿಸಿದ ದಲಿತರ ಮೇಲೆ ಹಲ್ಲೆ ಮಾಡಿರುವ ನೂರಾರು ಪ್ರಕರಣಗಳು ಕಳೆದ ಕೆಲವು ವರ್ಷಗಳಿಂದ ದಾಖಲಾಗುತ್ತಿವೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

2019 ರ ಮೇ ತಿಂಗಳಲ್ಲಿ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಲೋರ್ ಗ್ರಾಮದಲ್ಲಿ ದಲಿತರ ಕುದುರೆ ಸವಾರಿಯೊಟ್ಟಿಗೆ ವಿವಾಹ ಮೆರವಣಿಗೆಯನ್ನು ಮಾಡಿದ್ದಕ್ಕೆ ಆ ಸಮುದಾಯಕ್ಕೆ ಮತ್ತು ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ.

ಇದನ್ನೂ ಓದಿ: ’ಜಾತ್ಯಾತೀತರು’ ಎಂದ ದಲಿತ ಕುಟುಂಬಕ್ಕೆ ಜಾತಿ ಪ್ರಮಾಣಪತ್ರ ನಿರಾಕರಣೆ!

ಈ ವರ್ಷದ ಫೆಬ್ರವರಿಯಲ್ಲಿ, ಗುಜರಾತ್‌ನ ಬನಸ್ಕಂತ ಜಿಲ್ಲೆಯಲ್ಲಿ ದಲಿತ ವ್ಯಕ್ತಿಯ ವಿವಾಹ ಮೆರವಣಿಗೆಯನ್ನು ಪೊಲೀಸ್ ರಕ್ಷಣೆಯಲ್ಲಿ ನಡೆಸಲಾಗಿತ್ತು.

ಹೀಗೆ ನೂರಾರು ಜಾತಿ ದೌರ್ಜನ್ಯದ ಘಟನೆಗಳು ನಮ್ಮೆದುರಿಗೆ ಇವೆ. ಆದರೂ ಸೋ ಕಾಲ್ಡ್‌ ದೇಶಪ್ರೇಮಿಗಳು ಈಗ ಜಾತಿ ಪದ್ದತಿ ದೇಶದಲ್ಲಿ ಇಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.


ಇದನ್ನೂ ಓದಿ: ಇದು ಎಲ್ಲಾ ಮೇಲ್ಜಾತಿ ಜನರೂ ಪ್ರತಿಕ್ರಿಯಿಸಲೇಬೇಕಾದ ಸಮಯ, ಮಾಧ್ಯಮಗಳಲ್ಲಿರುವ ಮೇಲ್ಜಾತಿಯವರನ್ನೂ ಒಳಗೊಂಡು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಭಾರತದಲ್ಲಿ ಬಿಕ್ಕಟ್ಟಿನಲ್ಲಿ ಪತ್ರಿಕಾ ಸ್ವಾತಂತ್ರ್ಯ: ವರದಿ

0
ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಸ್ಥಿತಿ ಅತ್ಯಂತ ಕಟ್ಟದಾಗಿದ್ದು, ನೆರೆಯ ಪಾಕಿಸ್ತಾನ, ಶ್ರೀಲಂಕಾ, ನೇಪಾಳಕ್ಕಿಂತಲೂ ಕಳಪೆಯಾಗಿದೆ. ಇದು ಪ್ರಜಾಪ್ರಭುತ್ವ ದೇಶಕ್ಕೆ ಯೋಗ್ಯವಾದ ಬೆಳವಣಿಗೆಯಲ್ಲ ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಬಿಡುಗಡೆ ಮಾಡಿದ 2024ರ...