Homeಮುಖಪುಟಸೋಂಕಿತರಿಗೆ ಉಚಿತ ಊಟ ನೀಡುವ ಮೂಲಕ ಇತರರಿಗೆ ಸ್ಫೂರ್ತಿಯಾದ ಮೂವರು ಬಾಲ್ಯಸ್ನೇಹಿತರು!

ಸೋಂಕಿತರಿಗೆ ಉಚಿತ ಊಟ ನೀಡುವ ಮೂಲಕ ಇತರರಿಗೆ ಸ್ಫೂರ್ತಿಯಾದ ಮೂವರು ಬಾಲ್ಯಸ್ನೇಹಿತರು!

- Advertisement -
- Advertisement -

ಕೋವಿಡ್-19 ಎರಡನೇ ಅಲೆ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ದೇಶಾದ್ಯಂತ ದಿನಕ್ಕೆ ಮೂರು ಲಕ್ಷಕ್ಕೂ ಅಧಿಕ ಪ್ರಕರಣಗಳು ವರಿದಿಯಾಗುತ್ತಿದ್ದರೆ, ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 30 ಸಾವಿರ ದಾಟಿದೆ. ಆಸ್ಪತ್ರೆಗಳಲ್ಲಿ ಬೆಡ್ ಕೊರತೆ, ಆಮ್ಲಜನಕದ ಕೊರತೆ ಉಂಟಾಗಿದ್ದು, ಕೋವಿಡ್ ಸೋಂಕಿತರು ಬೆಡ್ ಸಿಗದೆ ಮನೆಗೆ ಮರಳಿ ಕ್ವಾರಂಟೈನ್ ಗೆ ಒಳಗಾಗಬೇಕಾದ ಪರಿಸ್ಥಿತಿ ಬಂದಿದೆ. ಹಲವಾರು ಸ್ಥಳಗಳಲ್ಲಿ ಇಡೀ ಕುಟುಂಬವೇ ಕೊರೋನಾದಿಂದ ತತ್ತರಿಸಿದ್ದು, ಆರೈಕೆ ಮಾಡಲು ಯಾರು ಇಲ್ಲದಂತಾಗಿದೆ. ಇಂತಹದ್ದೇ ಸಮಸ್ಯೆಯನ್ನು ಎದುರಿಸಿದ ಯುವಕರಿಬ್ಬರು ಇತರರಿಗೆ ನೆರವಾಗುವ ಉದ್ದೇಶದಿಂದ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿ ಕ್ವಾರಂಟೈನ್ ಮತ್ತು ಆಸ್ಪತ್ರೆಯಲ್ಲಿರುವ ಜನರಿಗೆ ಉಚಿತವಾಗಿ ಊಟದ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇಂತಹ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡಿರುವವರು ಸಿದ್ದಾರ್ಥ್, ಅಂಕಿತ್ ಮತ್ತು ನಿಖಿಲ್. ಮೂಲತಃ ಪಶ್ಚಿಮ ಬಂಗಾಳದವರಾದ ಇವರು 20ಕ್ಕೂ ವರ್ಷಕ್ಕಿಂತ ಹೆಚ್ಚು ಕಾಲ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬಾಲ್ಯ ಸ್ನೇಹಿತರಾದ ಈ ಮೂವರು ವೃತ್ತಿಯಲ್ಲಿ ಉದ್ಯಮಿಗಳಾಗಿದ್ದು ಬೆಂಗಳೂರಿನಲ್ಲಿ ಕ್ವಾರಂಟೈನ್ ಆಗಿರುವ ಜನರಿಗೆ ಮತ್ತು ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಉಚಿತವಾಗಿ ಮಧ್ಯಾಹ್ನ ಮತ್ತು ರಾತ್ರಿ ಊಟ ವಿತರಿಸುತ್ತಿದ್ದಾರೆ. ಊಟಕ್ಕೆ 3 ಚಪಾತಿ, ದಾಲ್, ತರಕಾರಿ ಪಲ್ಯ, ಅನ್ನ ಸಾಂಬರ್ ಮತ್ತು ಬಾಳೆಹಣ್ಣು ಇವರ ಮುಖ್ಯ ಮೆನು.

ಕೋವಿಡ್ ಸೋಂಕಿಗೆ ಒಳಗಾಗಿರುವ ಕ್ವಾರಂಟೈನ್‌ನಲ್ಲಿರುವ ಇವರು ಕೋವಿಡ್‌ನಿಂದ ಉಂಟಾಗುವ ಸಮಸ್ಯೆಗಳನ್ನು ಅನುಭವಿಸಿದ್ದಾರೆ. ಸೋಂಕಿತರು ಮೈಕೈ ನೋವು, ಬೇದಿ, ತಲೆನೋವು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಈ ಸಮಯದಲ್ಲಿ ಅಡುಗೆ, ಊಟ ಮಾಡಿಕೊಳ್ಳುವುದು ಕಷ್ಟ ಸಾಧ್ಯ ಎನ್ನುವುದನ್ನು ಅರಿತ ಈ ಉದ್ಯಮಿಗಳು ಇದೇ ಸಮಯದಲ್ಲಿ ತಾವೇನಾದರೂ ಮಾಡಬೇಕೆಂಬ ಅಭಿಲಾಷೆಯೊಂದಿಗೆ ಬೆಂಗಳೂರಿನಲ್ಲಿ ವಾಸವಿರುವ ಕೋವಿಡ್ ಸೋಂಕಿಗೆ ಒಳಗಾಗಿರುವವರಿಗೆ ಈಗಾಗಲೇ ನೂರಾರು ಜನರಿಗೆ ಪೌಷ್ಟಿಕಾಂಶಯುಕ್ತ ಅಹಾರವನ್ನು ಉಚಿತವಾಗಿ ಸರಬರಾಜು ಮಾಡಿದ್ದಾರೆ.

ಈ ಯೋಜನೆ ಕುರಿತು ಮಾತನಾಡಿದ ಸಿದ್ದಾರ್ಥ್, “ನಾನು ಕೂಡ ಕೋವಿಡ್ ಸೋಂಕಿಗೆ ಒಳಗಾಗಿದ್ದೇನೆ. ಪ್ರಸ್ತುತ ಕ್ವಾರಂಟೈನ್‌ನಲ್ಲಿದ್ದು, ಇನ್ನೊಂದು ದಿನದಲ್ಲಿ ಹೊರಬರಲಿದ್ದೇನೆ. ಮೊದಲು ನನಗೂ ಮನೆ ಕೆಲಸ ಮಾಡಿಕೊಳ್ಳುವುದು ತೀರ ಕಷ್ಟ ಎನಿಸುತಿತ್ತು. ನನ್ನಂತೆಯೇ ನನ್ನ ಸ್ನೇಹಿತನಿಗೂ ಅನ್ನಿಸಿತು. ಮೂವರು ಮಾತನಾಡಿಕೊಂಡು ಇತರರಿಗೆ ನೆರವು ಮಾಡುತ್ತಿದ್ದೇವೆ. ನಾವಿಬ್ಬರು ಸ್ಟೆಗಿ ಎಂಬ ರೆಸ್ಟೋರೆಂಟ್ ನಡೆಸುತ್ತಿದ್ದೇವೆ. ನಮ್ಮ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿರುವ ಹುಡುಗರು ಅಡುಗೆ ತಯಾರಿಸಿ ಪ್ಯಾಕ್ ಮಾಡುತ್ತಾರೆ. ಉಳಿದಂತೆ ಯಾರೆಲ್ಲರಿಗೂ ಊಟ ಬೇಕು ಎಂದು ತಿಳಿಸಿರುತ್ತಾರೋ ಅವರು ಯಾರನ್ನಾದರೂ ಕಳಿಸಿ ಅಥವಾ ಡೆನ್ಸೋ ಮೂಲಕ ಆರ್ಡರ್ ಮಾಡಿ ಊಟ ತರಿಸಿಕೊಳ್ಳುತ್ತಾರೆ” ಎಂದರು.

ಮೊನ್ನೆಯಷ್ಟೆ (ಗುರುವಾರ) ಅರಂಭವಾಗಿರುವ ಊಟ ವಿತರಣೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮಧ್ಯಾಹ್ನ ಸುಮಾರು 165 ಜನರಿಗೆ ಊಟ ವಿತರಿಸಿದ್ದಾರೆ. ಅಲ್ಲಿಂದ ಪ್ರತಿ ವೇಳೆ ಊಟ ಬೇಕು ಎಂದು ಸುಮಾರು 500 ಜನರು ಫೋನ್ ಕರೆಗಳು ಬರುತ್ತಿದ್ದು ಅವರಿಗೆ ಒದಗಿಸುತ್ತಿದ್ಧೇವೆ, ಫೋನ್‌ಗಳನ್ನು ಸ್ವೀಕರಿಸದಷ್ಟು ಕರೆಗಳು ಬರುತ್ತಿವೆ ಎನ್ನುತ್ತಾರೆ. ಆಸ್ಪತ್ರೆಗಳಿಗೂ ಊಟ ತಲುಪಿಸಲು ಮುಂದಾಗಿರುವ ಅವರು, ಕೊರೊನಾಗೆ ಭಯ ಪಡದಿರಿ. ಮನೆಯಲ್ಲೇ ಸೂಕ್ತ ಚಿಕಿತ್ಸೆ ಪಡೆಯಿರಿ, ವಿಶ್ರಾಂತಿ ಪಡೆಯುವುದೇ ಸೂಕ್ತವಾದ ಚಿಕಿತ್ಸೆ ಎನ್ನುತ್ತಾರೆ ಸಿದ್ದಾರ್ಥ್.

ಸೋಂಕಿತರಾಗಿ ಯಾರಿಗಾದರೂ ಆಹಾರದ ಅಗತ್ಯವಿದ್ದರೆ ಈ ವಿಧಾನದ ಮೂಲಕ ಊಟ ತರಿಸಿಕೊಳ್ಳಬಹುದು.

ಮಧ್ಯಾಹ್ನದ ಊಟ ಬೇಕಿದ್ದರೆ ಬೆಳಿಗ್ಗೆ 10 ಗಂಟೆ ಒಳಗೆ ಫೋನ್ ಮೂಲಕ ಅಥವಾ ವಾಟ್ಸಾಪ್ ಮಾಡುವ ಮೂಲಕ ಆರ್ಡರ್ ಮಾಡಬೇಕು. ಮಧ್ಯಾಹ್ನ 12:30 ರಿಂದ 2:00 ಗಂಟೆಯೊಳಗೆ ಊಟ ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಿಕೊಳ್ಳಬೇಕು. (ಜಯನಗರದ ಸ್ಟೆಗಿ ರೆಸ್ಟೋರೆಂಟ್‌ನಿಂದ ನೇರವಾಗಿ ತೆಗೆದುಕೊಂಡು ಹೋಗಬಹುದು ಅಥವಾ ಡೆಂಜೋ ಅಥವಾ ಸ್ವಿಗ್ಗಿ ಸೇರಿದಂತೆ ಇತರ ಆಹಾರ ಸರಬರಾಜು ಆಪ್ ಗಳ ಮೂಲಕ ಆರ್ಡರ್ ಮಾಡಬಹುದು. ಅದಕ್ಕೆ ಹಣ ಅವರೇ ಭರಸಿಬೇಕು) ಅದೇ ರೀತಿ ರಾತ್ರಿ ಊಟಕ್ಕೆ ಸಂಜೆ 5 ಗಂಟೆಯೊಳಗೆ ಆರ್ಡರ್ ಮಾಡಬೇಕು. ರಾತ್ರಿ 7 ರಿಂದ 8:30ರ ಒಳಗೆ ಊಟ ತರಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಬೇಕು. ಅಗತ್ಯವಿದ್ದವರು ಈ ನಂಬರ್‌ಗಳಿಗೆ ಸಂಪರ್ಕಿಸಿ. ಸಿದ್ಧಾರ್ಥ್: 9986694781, ನಿಖಿಲ್: 9663313417 ಅಂಕಿತ್: 8553389893

ಈ ಸಂಕಷ್ಟದ ಸಮಯದಲ್ಲಿ ಇವರ ಈ ಮಾನವೀಯ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಕೈಲಾಗದು ಎಂದು ಕುಳಿತುಕೊಳ್ಳುವ ಬದಲು ಮನಸ್ಸು ಮಾಡಿದರೆ ಹೇಗೆಲ್ಲಾ ನೆರವಾಗಬಹುದು ಎಂಬುದಕ್ಕೆ ಈ ಯುವ ಉದ್ಯಮಿಗಳು ಮಾದರಿಯಾಗಿದ್ದಾರೆ. ಈ ಕುರಿತು ನಿಮ್ಮಗಳ ಫೋಟೊ ಕೊಡಿ ನಮ್ಮ ವರದಿಯಲ್ಲಿ ಪ್ರಕಟಿಸುತ್ತೇವೆ ಎಂದಾಗ ಅವರು ಪ್ರೀತಿಯಿಂದಲೇ ಅದನ್ನು ನಿರಾಕರಿಸಿದ್ದಾರೆ. ‘ಇದು ನಮ್ಮ ಜವಾಬ್ದಾರಿ, ಇದರಲ್ಲಿ ನಮ್ಮ ಫೋಟೊ ಹಾಕಿಕೊಳ್ಳುವ ಅಗತ್ಯವಿಲ್ಲ, ನಮ್ಮ ರೆಸ್ಟೋರೆಂಟ್‌ನಲ್ಲಿ ಇದಕ್ಕಾಗಿ ದುಡಿಯುತ್ತಿರುವ ಕಾರ್ಮಿಕರ ಫೋಟೊ ಹಾಕಿ” ಎಂದು ಹೇಳುವ ಮೂಲಕ ತಮ್ಮ ದೊಡ್ಡತನ ಮೆರೆದಿದ್ದಾರೆ. ಇವರಿಗೆ ನಮ್ಮ ಪರವಾಗಿ ಒಂದು ಸಲಾಂ…


ಇದನ್ನೂ ಓದಿ: ರಂಜಾನ್ ಉಪವಾಸ ಮುರಿದು ಪ್ಲಾಸ್ಮಾ ದಾನಮಾಡಿ ಕೊರೊನಾಪೀಡಿತ ಮಹಿಳೆಯರಿಬ್ಬರ ಜೀವ ಉಳಿಸಿದ ಮನ್ಸೂರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ: ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆ ಹಿಡಿದು ತಮಿಳುನಾಡಿನ ರೈತರಿಂದ ಪ್ರತಿಭಟನೆ

0
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡಿನ ಸುಮಾರು 200ರೈತರು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆ ಮತ್ತು ಮೂಳೆಗಳನ್ನು ತಮಿಳುನಾಡಿನಿಂದ ದೆಹಲಿಗೆ ಹೊತ್ತೊಯ್ದಿದ್ದಾರೆ. ಕೃಷಿಯಲ್ಲಿ...