Homeಮುಖಪುಟರಂಜಾನ್ ಉಪವಾಸ ಮುರಿದು ಪ್ಲಾಸ್ಮಾ ದಾನಮಾಡಿ ಕೊರೊನಾಪೀಡಿತ ಮಹಿಳೆಯರಿಬ್ಬರ ಜೀವ ಉಳಿಸಿದ ಮನ್ಸೂರಿ

ರಂಜಾನ್ ಉಪವಾಸ ಮುರಿದು ಪ್ಲಾಸ್ಮಾ ದಾನಮಾಡಿ ಕೊರೊನಾಪೀಡಿತ ಮಹಿಳೆಯರಿಬ್ಬರ ಜೀವ ಉಳಿಸಿದ ಮನ್ಸೂರಿ

- Advertisement -
- Advertisement -

ಕೊರೊನಾ ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ಭಾರತವು ಸಿಕ್ಕಿಕೊಂಡ ಸಂದರ್ಭದಲ್ಲಿ ಗೋದಿ ಮಾಧ್ಯಮಗಳು ಇನ್ನೂ ಹಿಂದೂ ಮುಸ್ಲಿಂ ಎನ್ನುತ್ತ ಆಳುವವರ ಅಭಿಲಾಷೆಗಳನ್ನು ಪೂರೈಸುತ್ತಿವೆ. ನಮ್ಮ ಸಿನಿಕತೆಯ ಹೊರತಾಗಿಯೂ, ಮಾನವೀಯತೆಯ ಮೇಲಿನ ನಂಬಿಕೆಯನ್ನು ಪುನಃಸ್ಥಾಪಿಸುವ ಕೆಲವು ನಿದರ್ಶನಗಳು ಸಂಭವಿಸುತ್ತವೆ.

ರಾಜಸ್ಥಾನದ ಉದಯಪುರದ 32 ವರ್ಷದ ಅಕೀಲ್ ಮನ್ಸೂರಿ, ಪವಿತ್ರ ರಂಜಾನ್ ತಿಂಗಳ ತನ್ನ ಮೊದಲ ರೋಜಾವನ್ನು ಮುರಿದು ಇಬ್ಬರು ಹಿಂದೂ ಮಹಿಳೆಯರಿಗೆ ಪ್ಲಾಸ್ಮಾ ದಾನ ಮಾಡಿ ಅವರ ಜೀವ ಉಳಿಸಿದ್ದಾರೆ. ಮನ್ಸೂರಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೊರೋನಾದಿಂದ ಚೇತರಿಸಿಕೊಂಡಿದ್ದರು.

ಸೋಶಿಯಲ್ ಮೀಡಿಯಾ ನೆಟ್‌ವರ್ಕ್‌ಗಳು ಮತ್ತು ರಕ್ತದಾನ ಗುಂಪುಗಳ ಮೂಲಕ, ಕೊರೋನಾ ಸೋಂಕಿಗೆ ಒಳಗಾದ ಇಬ್ಬರು ಮಹಿಳೆಯರ ಬಗ್ಗೆ ಮನ್ಸೂರಿಗೆ ಗೊತ್ತಾಯಿತು. ಆ ಮಹಿಳೆಯರು ಆಮ್ಲಜನಕದ ಬೆಂಬಲದಲ್ಲಿದ್ದರು ಮತ್ತು ಅವರಿಗೆ ತುರ್ತಾಗಿ ಎ+ ಪ್ಲಾಸ್ಮಾ ಅಗತ್ಯವಿತ್ತು.
ಉದಯಪುರದ ಪೆಸಿಫಿಕ್ ಆಸ್ಪತ್ರೆಯ ವೈದ್ಯರು ಪ್ಲಾಸ್ಮಾ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದ್ದರೂ ವ್ಯರ್ಥವಾಯಿತು. ಈ ಸಮಯದಲ್ಲಿಯೇ ರಕ್ತ ಯುವ ವಾಹಿನಿ (ಯುವ ರಕ್ತದಾನ ಗುಂಪು)ಗೆ ಸುದ್ದಿ ಸಿಕ್ಕಿತು. ಅಕೀಲ್ ಈ ಹಿಂದೆ 17 ಬಾರಿ ದಾನ ಮಾಡಿದ್ದರಿಂದ ಅವರನ್ನು ಸಂಪರ್ಕಿಸಿದರು. ಅಕೀಲ್ ಮನ್ಸೂರಿ ಅದೇ ರಕ್ತದ ಗುಂಪನ್ನು ಹೊಂದಿದ್ದರು.

“ಸಂದೇಶವನ್ನು ನೋಡಿದ ಕೂಡಲೇ ನಾನು ಆಸ್ಪತ್ರೆಗೆ ಧಾವಿಸಿ ನನ್ನ ಪ್ಲಾಸ್ಮಾ ದಾನಕ್ಕಾಗಿ ಸ್ವಯಂಪ್ರೇರಿತನಾಗಿ ಸಜ್ಜಾದೆ. ಕಳೆದ ಸೆಪ್ಟೆಂಬರ್‌ನಲ್ಲಿ ಕೋವಿಡ್ -19ನಿಂದ ಚೇತರಿಸಿಕೊಂಡ ನಂತರ ನಾನು ಈ ಹಿಂದೆ ಪ್ಲಾಸ್ಮಾ ದಾನ ಮಾಡಿದ್ದರಿಂದ, ಆ ಕಾರ್ಯವಿಧಾನ ನನಗೆ ತಿಳಿದಿತ್ತು” ಎಂದು ಮನ್ಸೂರಿ ಹೇಳಿದ್ದನ್ನು ಟೈಮ್ಸ್ ಆಫ್ ಇಂಡಿಯಾ ಉಲ್ಲೇಖಿಸಿದೆ.

ಆಸ್ಪತ್ರೆಯಲ್ಲಿಯೇ ಮನ್ಸೂರಿ ಉಪವಾಸ ಮುರಿಯಬೇಕಾಯಿತು. “ವೈದ್ಯರು ನನ್ನನ್ನು ತಯಾರಾಗಲು ಕೇಳಿದಾಗ, ಅವರು ನನ್ನನ್ನು ಏನಾದರೂ ತಿನ್ನಲು ಕೇಳಿದ್ದರು. ಅದಕ್ಕಾಗಿಯೇ ನಾನು ನನ್ನ ರೋಜಾವನ್ನು ಮುರಿಯಬೇಕಾಯಿತು ಮತ್ತು ಆಸ್ಪತ್ರೆಯವರಿಂದಲೇ ಅಲ್ಪ ಆಹಾರ ಸೇವಿಸಿ ನನ್ನ ರಕ್ತವನ್ನು ದಾನ ಮಾಡಿದೆ’ ಎನ್ನುತ್ತಾರೆ ಮನ್ಸೂರಿ. ಪ್ರಶಂಸೆಯ ಮಾತುಗಳು ಬಂದಾಗ ನಾನೇನೂ ಅಸಾಧಾರಣವಾದುದನ್ನು ಮಾಡಿಲ್ಲ ಎಂದು ಅವರು ಹೇಳುತ್ತಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅಕೀಲ್, ಖಾಲಿ ಹೊಟ್ಟೆಯಲ್ಲಿದ್ದರೆ ಪ್ಲಾಸ್ಮಾ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ವೈದ್ಯರು ಹೇಳಿದರು. ಹಾಗಾಗಿ ನನ್ನ ರೋಜಾವನ್ನು ಮುರಿದು ಆಹಾರವನ್ನು ಸೇವಿಸಿದ ನಂತರ ಪ್ಲಾಸ್ಮಾವನ್ನು ದಾನ ಮಾಡಿದೆ ಎಂದಿದ್ದಾರೆ.

“ಇದು ಮನುಷ್ಯನಾಗಿ ನನ್ನ ಜವಾಬ್ದಾರಿಯಾಗಿದೆ ಮತ್ತು ರೋಜಾ ಮುರಿದಿದಕ್ಕೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ” ಎಂದು ಮನ್ಸೂರಿ ಹೇಳಿದರು, ಇಬ್ಬರು ಮಹಿಳೆಯರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದೇನೆ ಎಂದು ಮನ್ಸೂರಿ ಹೇಳಿದ್ದಾರೆ.

ಮನ್ಸೂರಿ ಪ್ರಕಾರ, ಅವರು ತಮ್ಮ ಜೀವನದಲ್ಲಿ 17 ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದಾರೆ. ಕೊರೋನಾದಿಂದ ಚೇತರಿಸಿಕೊಂಡಾಗಿನಿಂದ, ಅವರು ತಮ್ಮ ಪ್ಲಾಸ್ಮಾವನ್ನು ಮೂರು ಬಾರಿ ದಾನ ಮಾಡಿದ್ದಾರೆ.


ಇದನ್ನೂ ಓದಿ: ಪ್ಲಾಸ್ಮಾ ದಾನ ಮಾಡಿ 4 ಜನರ ಜೀವ ಉಳಿವಿಗೆ ಕಾರಣವಾದ ಯುವ ಉದ್ಯಮಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...