Homeಮುಖಪುಟಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ :...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

- Advertisement -
- Advertisement -

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ) 1 ಲಕ್ಷ ರೂಪಾಯಿ ದಂಡ ವಿಧಿಸಿದೆ ಎಂದು ವರದಿಯಾಗಿದೆ.

ಜಮ್ಮು ಕಾಶ್ಮೀರದ ಹೆದ್ದಾರಿ ಮಧ್ಯದಲ್ಲಿ ವ್ಯಕ್ತಿಯೊಬ್ಬರು ನಮಾಝ್ ಮಾಡಲು ತನ್ನ ಟ್ರಕ್ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಝೀ ನ್ಯೂಸ್ ಸುದ್ದಿ ಪ್ರಸಾರ ಮಾಡಿತ್ತು. ಆದರೆ, ವಾಸ್ತವದಲ್ಲಿ ಆ ವ್ಯಕ್ತಿ ಇತರ ವಾಹನಗಳಂತೆ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿಕೊಂಡಿದ್ದರು. ಈ ಘಟನೆ ನಡೆದು ಸುಮಾರು ಒಂದು ವರ್ಷದ ನಂತರ, ‘ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿರುವ ಪರಿಶೀಲಿಸದ ವಿಷಯವನ್ನು ಬಳಸಿದ್ದಕ್ಕಾಗಿ’ ಝೀ ನ್ಯೂಸ್‌ಗೆ ದಂಡ ವಿಧಿಸಲಾಗಿದೆ.

ಮಂಗಳವಾರ (ಫೆ. 17) ಹೊರಡಿಸಿದ ಆದೇಶದಲ್ಲಿ ಎನ್‌ಬಿಡಿಎಸ್‌ಎ, ಝೀ ನ್ಯೂಸ್ ಸಂಸ್ಥೆಯು ಸರಿಯಾದ ಜಾಗರೂಕತೆಯನ್ನು ವಹಿಸದೆ ‘ಸ್ಪಷ್ಟ ಲೋಪ’ ಎಸಗಿದೆ ಎಂದು ತಿಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿರುವ ವಿಷಯಗಳ ವರದಿಗಾರಿಕೆಗೆ ಸಂಬಂಧಿಸಿದಂತೆ ಆರು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ವರದಿಗಳ “ಖಚಿತತೆಯನ್ನು ದೃಢೀಕರಿಸಲು ಸಾಧ್ಯವಿಲ್ಲ” ಎಂದು ಕೇವಲ ಡಿಸ್ಕ್ಲೈಮರ್ (Disclaimer) ನೀಡುವುದರಿಂದ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಾಧಿಕಾರವು ಸ್ಪಷ್ಟಪಡಿಸಿದೆ ಎಂದು ದಿ ವೈರ್ ವರದಿ ಮಾಡಿದೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಕೆ ಸಿಕ್ರಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಹೊರಡಿಸಲಾದ ಎನ್‌ಬಿಡಿಎಸ್‌ಎ ಆದೇಶವು, ಮಾರ್ಚ್ 3, 2025 ರಂದು ಝೀ ನ್ಯೂಸ್ ಪ್ರಸಾರ ಮಾಡಿದ ಕಾರ್ಯಕ್ರಮದ ವಿರುದ್ಧ ದಾಖಲಾಗಿದ್ದ ಮೂರು ದೂರುಗಳಿಗೆ ಪ್ರತಿಕ್ರಿಯೆಯಾಗಿ ಬಂದಿದೆ. ಇಂದ್ರಜೀತ್ ಘೋರ್ಪಡೆ, ಉತ್ಕರ್ಷ್ ಮಿಶ್ರಾ ಮತ್ತು ಜಮಿಯತ್ ಉಲಮಾ-ಎ-ಹಿಂದ್ ಪರ ವಕೀಲ ಸೈಯದ್ ಕಾಬ್ ರಶೀದಿ ಈ ದೂರುಗಳನ್ನು ದಾಖಲಿಸಿದ್ದರು.

ಝೀ ನ್ಯೂಸ್ ತನ್ನ ಕಾರ್ಯಕ್ರಮದಲ್ಲಿ ಲಾರಿಯೊಂದರ ಮೇಲ್ಛಾವಣಿಯ ಮೇಲೆ ನಿಂತು ಚಾಲಕ ನಮಾಝ್ ಮಾಡುತ್ತಿರುವುದಾಗಿ ವಿಡಿಯೋ ಪ್ರಸಾರ ಮಾಡಿತ್ತು. ಈ ಮೂಲಕ ಆತ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟುಮಾಡಿದ್ದಾನೆ ಎಂದಿತ್ತು. ಆ ಸಮಯದಲ್ಲಿ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಆತ ‘ಸಂಪೂರ್ಣ ನಿರಾತಂಕವಾಗಿದ್ದ’ ಎಂದು ಆರೋಪಿಸಿತ್ತು.

“ನೀವು ಹೆದ್ದಾರಿಯ ಇನ್ನೊಂದು ಬದಿ ಸಂಪೂರ್ಣವಾಗಿ ಖಾಲಿ ಇರುವುದನ್ನು ನೋಡಬಹುದು, ಏಕೆಂದರೆ ಈ ಚಾಲಕನಂತೆ ಅಲ್ಲಿ ಯಾರೂ ನಮಾಝ್ ಮಾಡಿಲ್ಲ” ಎಂದು ಕಾರ್ಯಕ್ರಮದ ನಿರೂಪಕಿ ಹೇಳಿದ್ದರು. ಅಲ್ಲದೆ, ಪ್ರಾರ್ಥನೆ ಸಲ್ಲಿಸುವ ಸಮಯ ಬಂದಾಗ ಲಾರಿ ಚಾಲಕ ತನ್ನ ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸುವ ಬದಲು ರಸ್ತೆಯ ಮಧ್ಯದಲ್ಲೇ ನಿಲ್ಲಿಸಲು ನಿರ್ಧರಿಸಿದ್ದನು ಎಂದು ಆರೋಪಿಸಿದ್ದರು.

“ಝೀ ನ್ಯೂಸ್ ಈ ವೈರಲ್ ವಿಡಿಯೋವನ್ನು ದೃಢೀಕರಿಸುವುದಿಲ್ಲ, ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ನೋಡಿದ ಪ್ರತಿಯೊಬ್ಬರೂ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಖಂಡಿತವಾಗಿಯೂ ಒತ್ತಾಯಿಸಿದ್ದಾರೆ” ಎಂದು ನಿರೂಪಕಿ ಮಾತು ಮುಂದುವರಿಸಿದರು.

ಕೆಲವು ದಿನಗಳ ನಂತರ, ಘಟನೆಯ ಸ್ಪಷ್ಟ ವಿಡಿಯೋವನ್ನು ಪರಿಶೀಲಿಸಿದ ಫ್ಯಾಕ್ಟ್‌ ಚೆಕ್ ಸುದ್ದಿ ಸಂಸ್ಥೆ ಆಲ್ಟ್‌ ನ್ಯೂಸ್, ಆ ಮುಸ್ಲಿಂ ಚಾಲಕನೇ ಸ್ವತಃ ವಾಹನಗಳ ಸಾಲಿನಲ್ಲಿ ಸಿಲುಕಿಕೊಂಡಿದ್ದರು ಎಂದು ಹೇಳಿತ್ತು. ಅಷ್ಟೇ ಅಲ್ಲದೆ, ಜಮ್ಮುವಿನ ರಾಂಬನ್ ಬಳಿ (ಟ್ರಾಫಿಕ್ ಜಾಮ್ ಉಂಟಾಗಿತ್ತು ಎನ್ನಲಾದ ಜಾಗ) ಏಕಮುಖ ಸಂಚಾರ ಮತ್ತು ಕಲ್ಲುಗಳು ಉರುಳುವ ಅಪಾಯದ ಬಗ್ಗೆ ಆ ಸಮಯದಲ್ಲಿ ಅಧಿಕೃತ ಎಚ್ಚರಿಕೆಗಳನ್ನು ನೀಡಲಾಗಿತ್ತು ಎಂಬ ಅಂಶವನ್ನೂ ಆಲ್ಟ್‌ ನ್ಯೂಸ್ ಪತ್ತೆಹಚ್ಚಿತ್ತು.

ದೂರುದಾರರಾದ ಇಂದ್ರಜೀತ್ ಘೋರ್ಪಡೆ ಅವರು, “ಅಧಿಕೃತವಲ್ಲದ ವಿಡಿಯೋವನ್ನು ಪ್ರಸಾರ ಮಾಡುವ ಮೂಲಕ ಮತ್ತು ಮುಸ್ಲಿಂ ಲಾರಿ ಚಾಲಕನ ಮೇಲೆ ಸುಳ್ಳು ಆರೋಪ ಹೊರಿಸುವ ಮೂಲಕ ಝೀ ನ್ಯೂಸ್ ಸಂಸ್ಥೆಯು ಮಾಧ್ಯಮ ನೀತಿ ಸಂಹಿತೆ ಮತ್ತು ಪ್ರಸಾರ ಮಾನದಂಡಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದರು.

ದೂರುದಾರರ ಆರೋಪಗಳಿಗೆ ಲಿಖಿತವಾಗಿ ಮತ್ತು ನವೆಂಬರ್‌ನಲ್ಲಿ ಎನ್‌ಬಿಡಿಎಸ್‌ಎ ನಡೆಸಿದ ವಿಚಾರಣೆಯ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದ ಝೀ ನ್ಯೂಸ್, ಆ ವಿಡಿಯೋ ದೃಢೀಕರಿಸಲ್ಪಟ್ಟಿಲ್ಲ ಎಂಬ ವಿಷಯವನ್ನು ತಾನು ಸ್ಪಷ್ಟಪಡಿಸಿರುವುದಾಗಿ ಮತ್ತು ಅದನ್ನು ‘ವಾಸ್ತವ ಅಥವಾ ದೃಢೀಕೃತ ಮಾಹಿತಿ’ ಎಂದು ಪ್ರಸ್ತುತಪಡಿಸಿಲ್ಲ ಎಂದು ಸಮರ್ಥಿಸಿಕೊಂಡಿತ್ತು. ಅಲ್ಲದೆ, ತಾನು ನೀತಿ ಸಂಹಿತೆ ಮತ್ತು ಪ್ರಸಾರ ಮಾನದಂಡಗಳ ಯಾವುದೇ ಅಂಶಗಳನ್ನು ಉಲ್ಲಂಘಿಸಿಲ್ಲ ಎಂದು ಅದು ಸಮರ್ಥಿಸಿಕೊಂಡಿತ್ತು.

ಆದಾಗ್ಯೂ, ನ್ಯಾಯಮೂರ್ತಿ ಸಿಕ್ರಿ ಅವರು ತಮ್ಮ ಆದೇಶದಲ್ಲಿ, “ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿರುವ ದೃಢೀಕರಿಸದ ವಿಷಯಗಳನ್ನು ಬಳಸಿಕೊಳ್ಳುವುದು ಪ್ರಸಾರ ಸಂಸ್ಥೆಯ ಕಡೆಯಿಂದ ಉಂಟಾದ ಸ್ಪಷ್ಟ ಲೋಪವಾಗಿದೆ ಮತ್ತು ಇದು ಗಂಭೀರ ಸ್ವರೂಪದ್ದಾಗಿದೆ” ಎಂಬುವುದಾಗಿ ಎನ್‌ಬಿಡಿಎಸ್‌ಎ ಅಭಿಪ್ರಾಯಪಟ್ಟಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಇದು ನೀತಿ ಸಂಹಿತೆಯಲ್ಲಿರುವ ‘ನಿಖರತೆಯ ತತ್ವ’ಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

“ಉಲ್ಲಂಘನೆಯ ಸ್ವರೂಪವನ್ನು ಗಮನಿಸಿ, ಎನ್‌ಬಿಡಿಎಸ್‌ಎ ಭಾರಿ ಮೊತ್ತದ ದಂಡವನ್ನು ವಿಧಿಸಬಹುದಿತ್ತು. ಆದರೆ, ಪ್ರಸಾರ ಸಂಸ್ಥೆಯೇ ಸ್ವತಃ ಆಕ್ಷೇಪಾರ್ಹ ವಿಡಿಯೋವನ್ನು ನಂತರ ಡಿಲೀಟ್ ಮಾಡಿರುವುದನ್ನು ಪರಿಗಣಿಸಿ, ಸಂಸ್ಥೆಗೆ 1,00,000 ರೂಪಾಯಿ ದಂಡ ವಿಧಿಸಲು ನಿರ್ಧರಿಸಲಾಗಿದೆ” ಎಂದು ಮಂಗಳವಾರದ ಆದೇಶದಲ್ಲಿ ತಿಳಿಸಲಾಗಿದೆ.

ಪ್ರಸಾರ ಸಂಸ್ಥೆಗಳು ಮತ್ತು ಡಿಜಿಟಲ್ ಸುದ್ದಿ ಪ್ರಕಾಶಕರು ತಮ್ಮ ವರದಿಗಾರಿಕೆಗಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ, ಆದರೆ ಇದು ತಪ್ಪು ಮಾಹಿತಿ ಮತ್ತು ಎಐ ಸೃಷ್ಟಿತ ಕೃತಕ ವಿಷಯಗಳ ಹರಡುವಿಕೆಗೆ ಕಾರಣವಾಗುವ ಅಪಾಯವಿದೆ ಎಂದು ನ್ಯಾಯಮೂರ್ತಿ ಸಿಕ್ರಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ, ಪ್ರಾಧಿಕಾರದ ಸದಸ್ಯರು ಪಾಲಿಸಬೇಕಾದ ಆರು ಮಾರ್ಗಸೂಚಿಗಳನ್ನು ಅವರು ಹೊರಡಿಸಿದ್ದು, ಸಾಮಾಜಿಕ ಜಾಲತಾಣಗಳಿಂದ ಪಡೆದ ಮಾಹಿತಿ, ಚಿತ್ರಗಳು ಮತ್ತು ವಿಡಿಯೋಗಳನ್ನು ಪ್ರಕಟಿಸುವ ಅಥವಾ ಪ್ರಸಾರ ಮಾಡುವ ಮೊದಲು ಅವುಗಳನ್ನು ಕಡ್ಡಾಯವಾಗಿ ದೃಢೀಕರಿಸಿಕೊಳ್ಳಬೇಕು ಎಂದು ಅವರು ಈ ಮೂಲಕ ಸೂಚಿಸಿದ್ದಾರೆ.

“ಚಿತ್ರ ಅಥವಾ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಮತ್ತು ಅದರ ಅಧಿಕೃತತೆಯನ್ನು ದೃಢೀಕರಿಸಲು ಸಾಧ್ಯವಿಲ್ಲ ಎಂದು ಕೇವಲ ಹಕ್ಕು ನಿರಾಕರಣೆ (Disclaimer) ನೀಡುವುದರಿಂದ, ಸದಸ್ಯರು ನೀತಿ ಸಂಹಿತೆಯ ಅಡಿಯಲ್ಲಿರುವ ತಮ್ಮ ಜವಾಬ್ದಾರಿಗಳಿಂದ ಮುಕ್ತರಾಗಲು ಸಾಧ್ಯವಿಲ್ಲ” ಎಂದು ಮಾರ್ಗಸೂಚಿಗಳಲ್ಲಿ ಒಂದು ಹೇಳುತ್ತದೆ.

1.ಸಾಮಾಜಿಕ ಮಾಧ್ಯಮದಿಂದ ಸಂಗ್ರಹಿಸಲಾದ ಎಲ್ಲಾ ಮಾಹಿತಿ, ಚಿತ್ರಗಳು ಮತ್ತು/ಅಥವಾ ವಿಡಿಯೋಗಳನ್ನು ಪ್ರಸಾರ/ಪ್ರಕಟಣೆ ಮಾಡುವ ಮೊದಲು ನಿಖರವೆಂದು ಪರಿಶೀಲಿಸಬೇಕು.

    2. ಸಾಧ್ಯವಾದಲ್ಲೆಲ್ಲಾ, ಅಂತಹ ಎಲ್ಲಾ ಮಾಹಿತಿ, ಚಿತ್ರಗಳು ಮತ್ತು/ಅಥವಾ ವಿಡಿಯೋಗಳನ್ನು ಆನ್-ಗ್ರೌಂಡ್ ವರದಿ ಮಾಡುವಿಕೆ ಮತ್ತು ಪ್ರತ್ಯಕ್ಷದರ್ಶಿಗಳ ಸಾಕ್ಷ್ಯಗಳು, ಪೊಲೀಸ್ ಮತ್ತು ಸರ್ಕಾರಿ ಅಧಿಕೃತ ಖಾತೆಗಳಂತಹ ಇತರ ವಿಶ್ವಾಸಾರ್ಹ ಮೂಲಗಳಿಂದ ದೃಢೀಕರಿಸಬೇಕು.

    3. ಸಾಧ್ಯವಾದಷ್ಟು ಮಟ್ಟಿಗೆ, ಚಿತ್ರಗಳು ಮತ್ತು/ಅಥವಾ ವಿಡಿಯೋಗಳು ವಿರೂಪಗೊಂಡಿವೆಯೇ, ತಿರುಚಲಾಗಿದೆಯೇ ಅಥವಾ ಅವುಗಳನ್ನು ಕೃತಕ ಬುದ್ಧಿಮತ್ತೆ (ಎಐ) ಬಳಸಿ ಸೃಷ್ಟಿಸಲಾಗಿದೆಯೇ ಎಂಬ ಬಗ್ಗೆ ಅವುಗಳ ಅಧಿಕೃತತೆಯನ್ನು ಫ್ಯಾಕ್ಟ್-ಚೆಕ್ ಮಾಡಬೇಕು.

    4. ಮಾಹಿತಿ, ಚಿತ್ರಗಳು ಅಥವಾ ವಿಡಿಯೋಗಳು ಅಸಲಿಯಾಗಿದ್ದರೂ ಸಹ, ಅವುಗಳನ್ನು ಸಂದರ್ಭಕ್ಕೆ ಹೊರತಾಗಿ ಪ್ರಸ್ತುತಪಡಿಸಬಾರದು; ಏಕೆಂದರೆ ಇದು ತಪ್ಪು ಮಾಹಿತಿಯನ್ನು ಹರಡಲು ದಾರಿಯಾಗಬಹುದು.

    5. ಮಿಲಿಟರಿ ಕಾರ್ಯಾಚರಣೆಗಳು, ಸಶಸ್ತ್ರ ಸಂಘರ್ಷಗಳು, ಆಂತರಿಕ ಅಸ್ಥಿರತೆ, ಕೋಮು ಹಿಂಸಾಚಾರ, ಸಾರ್ವಜನಿಕ ಅಶಾಂತಿ, ಅಪರಾಧ ಅಥವಾ ಇಂತಹುದೇ ಇತರ ಸೂಕ್ಷ್ಮ ಸಂದರ್ಭಗಳಿಗೆ ಸಂಬಂಧಿಸಿದ ಯಾವುದೇ ಸುದ್ದಿಯನ್ನು ವರದಿ ಮಾಡುವಾಗ, ಸಾಮಾಜಿಕ ಜಾಲತಾಣಗಳಲ್ಲಿನ ವಿಷಯಗಳನ್ನು ಬಳಸುವ ಮುನ್ನ ಅವುಗಳನ್ನು ಕಡ್ಡಾಯವಾಗಿ ಸಾರ್ವಜನಿಕ ಹಿತಾಸಕ್ತಿ ಮತ್ತು ನಿಖರತೆಯ ಆಧಾರದ ಮೇಲೆ ಪರೀಕ್ಷಿಸಬೇಕು.

    6. ದೃಶ್ಯ ಅಥವಾ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ಮತ್ತು ಅದರ ಅಧಿಕೃತತೆಯನ್ನು ದೃಢೀಕರಿಸಲು ಸಾಧ್ಯವಿಲ್ಲ ಎಂದು ಕೇವಲ ಹಕ್ಕು ನಿರಾಕರಣೆ (Disclaimer) ನೀಡುವುದರಿಂದ, ಸದಸ್ಯರು ನೀತಿ ಸಂಹಿತೆಯ ಅಡಿಯಲ್ಲಿರುವ ತಮ್ಮ ಜವಾಬ್ದಾರಿಗಳಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ.

    ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

    LEAVE A REPLY

    Please enter your comment!
    Please enter your name here

    - Advertisment -

    ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

    ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

    ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

    ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

    ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

    ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

    ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

    ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

    ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

    ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...

    ಮುಂಬೈ| ಬುರ್ಖಾ ಧರಿಸಿ ಲೋಕಲ್‌ ಟ್ರೈನ್‌ನ ಮಹಿಳಾ ಬೋಗಿಯಲ್ಲಿ ಪ್ರಯಾಣಿಸಿದ ವ್ಯಕ್ತಿ ಬಂಧನ

    ಮುಂಬೈನ ಉಪನಗರ ರೈಲಿನ ಮಹಿಳಾ ಬೋಗಿಯಲ್ಲಿ ಬುರ್ಖಾ ಧರಿಸಿ ಪ್ರಯಾಣಿಸುತ್ತಿದ್ದ ಆರೋಪದ ಮೇಲೆ ನಾಸಿಕ್‌ನ 57 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಈ ಘಟನೆ ಫೆಬ್ರವರಿ 6 ರಂದು ಘಾಟ್ಕೋಪರ್...

    ಎಪ್‌ಸ್ಟೀನ್‌ ಫೈಲ್ಸ್ ಜನಾಕ್ರೋಶ : ಎಐ ಶೃಂಗಸಭೆಯಿಂದ ದೂರ ಉಳಿದ ಬಿಲ್‌ ಗೇಟ್ಸ್‌

    ಎಪ್‌ಸ್ಟೀನ್‌ ಫೈಲ್ಸ್‌ ಮುಂದಿಟ್ಟುಕೊಂಡು ಜನರು ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ'ಯಿಂದ ಮೈಕ್ರೋಸಾಫ್ಟ್‌ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ದೂರ ಉಳಿದಿದ್ದಾರೆ. ಈ ಕುರಿತು ಗೇಟ್ಸ್ ಫೌಂಡೇಶನ್ ಇಂಡಿಯಾ ಗುರುವಾರ...

    ಬೆಂಗಳೂರಿನಲ್ಲಿ ರಂಜಾನ್ ಆಹಾರ ಮೇಳ ನಡೆಸದಂತೆ ಹೋಟೆಲ್‌ಗಳಿಗೆ ಎಚ್ಚರಿಕೆ

    ಬೆಂಗಳೂರು: ಫ್ರೇಸರ್ ಟೌನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಎಂಎಂ ರಸ್ತೆಯಲ್ಲಿ ರಂಜಾನ್ ಆಹಾರ ಮೇಳ ನಡೆಸದಂತೆ ಹೋಟೆಲ್ ಮಾಲೀಕರಿಗೆ ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ. ರಂಜಾನ್ ಆಹಾರ ಮೇಳದಿಂದ ಸಂಚಾರ ದಟ್ಟಣೆ. ಅವ್ಯವಸ್ಥೆಯ ಜೊತೆಗೆ...

    ‘ದಿ ಕೇರಳ ಸ್ಟೋರಿ-2’ ಚಲನಚಿತ್ರ ಜಾತ್ಯತೀತತೆಗೆ ಬೆದರಿಕೆ: ಮುಖ್ಯಮಂತ್ರಿ ಪಿಣರಾಯಿ ವಿಜಯನ್

    'ದಿ ಕೇರಳ ಸ್ಟೋರಿ' ಚಿತ್ರದ ಎರಡನೇ ಭಾಗ ಬಿಡುಗಡೆಯಾಗುತ್ತಿರುವ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಳವಳ ವ್ಯಕ್ತಪಡಿಸಿದ್ದು, ಇದರ ಮೊದಲ ಭಾಗವು "ರಾಜ್ಯದ ವಿರುದ್ಧ ದ್ವೇಷವನ್ನು ಹರಡುವ ಮತ್ತು ನಮ್ಮ ಜಾತ್ಯತೀತ...

    ಬಿಜೆಪಿ ಸೇರಲು ಸಿದ್ದರಾದ ಭೂಪೇನ್ ಬೋರಾ : ಪ್ರಿಯಾಂಕಾ, ಡಿಕೆಶಿ ಸೇರಿದಂತೆ ‘ಕೈ ಟ್ರಬಲ್ ಶೂಟರ್‌ಗಳು’ ಅಸ್ಸಾಂಗೆ ದೌಡು

    ರಾಜ್ಯ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಬಿಜೆಪಿಗೆ ಹಾರಲು ಸಿದ್ದರಾಗಿರುವ ನಡುವೆ ಪ್ರಿಯಾಂಕಾ ಗಾಂಧಿ, ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಟ್ರಬಲ್ ಶೂಟರ್‌ಗಳ ತಂಡ ಅಸ್ಸಾಂಗೆ ದೌಡಾಯಿಸಿದೆ. ಅಸ್ಸಾಂ ಕಾಂಗ್ರೆಸ್ ಅಭ್ಯರ್ಥಿಗಳ...