Homeರಾಜಕೀಯಅನಂತಕುಮಾರ್ ಏಕೆ ಎಲ್ಲರ ಶ್ರದ್ಧಾಂಜಲಿ ಪಡೆದರು?

ಅನಂತಕುಮಾರ್ ಏಕೆ ಎಲ್ಲರ ಶ್ರದ್ಧಾಂಜಲಿ ಪಡೆದರು?

- Advertisement -
- Advertisement -

ಕೇಂದ್ರ ಸಚಿವ, ಕರ್ನಾಟಕದ ಭಾಜಪ ನಾಯಕ ಅನಂತಕುಮಾರ್ ಅವರು ಅಕಾಲಿಕ ನಿಧನ ಹೊಂದಿದ್ದಾರೆ. ಅವರ ಸಾವಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪ, ಶ್ರದ್ಧಾಂಜಲಿಗಳ ಮಹಾಪೂರವೇ ಹರಿದು ಬರುತ್ತಿದೆ. ಅಚ್ಚರಿ ಎಂದರೆ ಅವರ ಭಾಜಪ ಅಭಿಮಾನಿಗಳಷ್ಟೆÃ ಅವರ ತಾತ್ವಿಕ ವಿರೋಧಿಗಳೂ ನಮನ ಸಲ್ಲಿಸುತ್ತಿದ್ದಾರೆ. ಸಾವಿನ ಸಂದರ್ಭದಲ್ಲಿ ಕುಹಕದ ವಿಕೃತಿಗಳು ಇರಕೂಡದು ಎಂಬ ನಡವಳಿಕೆ ಎಲ್ಲಾ ನಾಗರಿಕತೆಗಳಲ್ಲೂ ಇದೆ. ನಮ್ಮಲ್ಲೂ ಅಳಿದಿಲ್ಲ ಎಂಬುದು ಗಮನಾರ್ಹ.
ಈ ಗೌರವ ಸಲ್ಲಿಕೆ ಅನಂತಕುಮಾರ್ ಅವರ ರಾಜಕೀಯ, ತಾತ್ವಿಕ ವಿರೋಧಿಗಳಿಂದ ಬಂದಿದೆ ಎಂಬುದು ಈ ಮಂದಿಯ ಸಾಂಸದಿಕ ನಡವಳಿಕೆಯನ್ನು ತೋರಿಸುತ್ತದೆ. ಹಲವರು ಗಮನಿಸಿದಂತೆ, ಇದೇ ಕಾಂಗ್ರೆಸ್‌ನ ಯಾರಾದರೂ ಸತ್ತಿದ್ದರೆ, ಭಾಜಪ/ ಹಿಂದುತ್ವ ಬಳಗದ ವಿಕೃತರ ಪೈಶಾಚಿಕ ಪೋಸ್ಟ್ಗಳು ಹೇಗಿರುತ್ತಿದ್ದವು ಎಂದು ಊಹಿಸಲೂ ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಈ ಸಂತಾಪ ತೋರಿದ ಭಾಜಪ ವಿರೋಧಿಗಳೇ ಈ ದೇಶದ ಪ್ರಜಾಸತ್ತೆಯನ್ನು ಉಳಿಸುವ ಶಕ್ತಿ.
ಅನಂತಕುಮಾರ್ ಅವರಿಗೆ ಈ ಶ್ರದ್ಧಾಂಜಲಿ ಹೇಗೆ ಹರಿದುಬಂತು? ಕಾಟಾಚಾರಕ್ಕೊÃ, ಹಿಂದುತ್ವದ ವಿಕೃತರ ಎದುರು, ‘ನಾವು ನೋಡಿ ಎಷ್ಟು ಶಿಷ್ಟವಾಗಿ ಪ್ರತಿಕ್ರಿಯಿಸುತ್ತಿದ್ದೆÃವೆ’ ಎಂಬ ತೋರುಗಾಣಿಕೆ ಈ ಪೋಸ್ಟುಗಳಲ್ಲಿ ಕಾಣಿಸಲಿಲ್ಲ. ಇದರರ್ಥ ಅನಂತಕುಮಾರ್ ವ್ಯಕ್ತಿತ್ವ ಯಾವುದೋ ಬಗೆಯಲ್ಲಿ ನಮ್ಮನ್ನು ತಟ್ಟಿದೆ.
ನಮ್ಮ ಸಾಮಾಜಿಕ ,ರಾಜಕೀಯ ಬದುಕಿನಲ್ಲಿ ದಿನಗಳೆದಂತೆ ಕೆಡುತ್ತಿದೆ, ಮೌಲ್ಯಗಳು ಶಿಥಿಲವಾಗುತ್ತಿದೆ ಎಂಬ ನಂಬಿಕೆ ದೃಢವಾಗುವಂಥಾ ಪುರಾವೆಗಳು ಹಿಡಿಯುತ್ತಲೇ ಇವೆ. ಇದನ್ನು ಠಿಡಿogಡಿessive ಆegeಟಿeಡಿಚಿಣioಟಿ ಅಂತ ಕರೆಯುವುದಿದೆ. ಅಂದರೆ ಒಂದು ನಾಗರಿಕತೆ ವಿಕಾಸಗೊಂಡು ಉತ್ತಮವಾಗುವ ಬದಲು ದಿನೇ ದಿನೇ ಇನ್ನಷ್ಟು ಕೆಡುತ್ತಾ, ಕೊಳೆಯುತ್ತಾ ಹೋಗುತ್ತಿದೆ ಎಂಬ ಹತಾಶೆ ಇದು. ಹಿಂದಿನ ಕಾಲ ಎಷ್ಟು ಚೆನ್ನಾಗಿತ್ತು ಎಂಬ ಹಿನ್ನೊÃಟದ ಹಳಹಳಿಕೆ ಎಲ್ಲಾ ತಲೆಮಾರಿಗೂ ಇದೆ. ಆದರೆ ಈ ದುಗುಡ ಅದಕ್ಕಿಂತ ಗುಣಾತ್ಮಕವಾಗಿ ಭಿನ್ನ. ಅಂದರೆ ಹಿಂದಿನದ್ದಕ್ಕಿಂತ ಈಗಿರುವುದು ಇನ್ನಷ್ಟು ಕೆಡುಕಾಗಿ ತೋರುವ ಬಗೆ. ಗುಂಡೂರಾವ್ ಬಂದಾಗ ಅರಸು ಬೆಟರ್ ಅನ್ನಿಸುತ್ತೆ. ಮೋದಿ ಕಂಡಾಗ ಇಂದಿರಾ ಕೊಡುಗೆ ಕಾಡುತ್ತದೆ. ಹೀಗೆ.. (ಸ್ವತಃ ಮೋದಿಯಂಥವರಿಗೆ ಈ ಚಾರಿತ್ರಿಕ ಗ್ರಹಿಕೆ ಅರ್ಥವಾಗುವುದಿಲ್ಲ, ಅದು ಬೇರೆ ಮಾತು.)
ನಾಗರಿಕತೆಯ ಮಾನದಂಡದಲ್ಲಿ ಹಿಂದಿನದ್ದು ಉತ್ತಮ ಎಂಬ ಗ್ರಹಿಕೆಗೆ ಇಂಬು ನೀಡುವಂಥಾ ನಡಾವಳಿಗಳು ಜರುಗಿದಷ್ಟೂ ಸಾಮೂಹಿಕ ಸ್ಮೃತಿಯಲ್ಲಿ ಇದು ಗಟ್ಟಿಯಾಗುತ್ತಾ ಹೋಗುತ್ತದೆ. ಈ ಮಾನದಂಡವನ್ನು ಪ್ರಜೆಗಳು ನಿರ್ವಚಿಸುವ ರೀತಿ ಸುಲಭ ಅಕಡೆಮಿಕ್ ಗ್ರಹಿಕೆಗೆ ನಿಲುಕುವಂಥಾದ್ದಲ್ಲ.
ಅನಂತಕುಮಾರ್ ಅವರ ಸಾವಿನ ಹಿನ್ನೆಲೆಯಲ್ಲಿ ಇದು ಪ್ರಸ್ತುತ. ಸ್ವತಃ ಅನಂತಕುಮಾರ್, ಅಧ್ವಾನಿಯವರು ಕಟ್ಟೆಯೊಡೆದು ಬಿಟ್ಟ ರೂಕ್ಷ ಕೋಮು ಧ್ರುವೀಕರಣದ ಕೂಸು. ಆದರೆ ಅನಂತಕುಮಾರ್ ಈ ಕೋಮು ಕಿರುಚಾಟದ ಭಾಗವಾಗಿರಲಿಲ್ಲ. ಅದರ ಸೂತ್ರಧಾರರಾಗಿದ್ದರು. ಹಲವರು ಗುರುತಿಸಿದಂತೆ ಅವರು ತೆರೆಮರೆಯ ಕೆಲಸಗಾರ. ‘90ರ ದಶಕದಲ್ಲಿ ನಿಷ್ಕರುಣ ಲೆಕ್ಕಾಚಾರದ ರಾಜಕಾರಣದ ಪ್ರತೀಕವಾಗಿ ಕಂಡಿದ್ದ ಅದ್ವಾನಿ ಮೋದಿ ಆಗಮನದ ಬಳಿಕ ಬಸವಳಿದ ಪಾಳೇಗಾರನ ತರ ಕಾಣುತ್ತಿದ್ದಾರೆ. ಅದ್ವಾನಿಯ ಸಂಸದೀಯ ನಡವಳಿಕೆ ಆಪ್ಯಾಯಮಾನವಾಗಿ ಕಾಣುತ್ತಿದೆ. ಅನಂತಕುಮಾರ ಕೂಡಾ ಅಷ್ಟೆÃ. ಬಾಯಿಗೆ ಬಂದ ಹಾಗೆ ಮಾತಾಡುವ, ಬೆಂಕಿ ಇಡುವ ಅಸಭ್ಯ ಮಾತೇ ನಾಯಕತ್ವದ ಲಕ್ಷಣ ಎಂಬಂತೆ ವರ್ತಿಸುವ ಹಿಂದುತ್ವದ ಪಡ್ಡೆ ಸ್ವಭಾವದೆದುರು, ಅನಂತಕುಮಾರ್ ತಾವು ರೂಢಿಸಿಕೊಂಡು ಬಂದಿದ್ದ ತಾಳ್ಮೆ, ಭಾಷೆಯ ಸಂಯಮ, ಸಂವಾದದ ಜಾಣ್ಮೆಯ ಕಾರಣಕ್ಕೆ ಈಗ ಹಿತವಾಗಿ ಕಾಣಿಸುತ್ತಿದ್ದಾರೆ. ನಮ್ಮ ಕಾಲದ ಪ್ರಭಾವ ಇದು. ನಾಲಗೆ ಅಷ್ಟಾಗಿ ಸಡಿಲು ಬಿಡದ ಅನಂತಕುಮಾರ್ ವಿವಾದಾತ್ಮಕ ವಿಷಯಗಳು ಬಂದಾಗ ಮೆತ್ತಗೆ ದೂರ ಉಳಿವ ಜಾಣ್ಮೆ ಉಳ್ಳವರು. ಮೈಕ್ ಕಂಡ ತಕ್ಷಣ ಬೆದೆಗೆ ಬಂದ ಹೋರಿಗಳ ತರ ಆಡುವ ಇತರರ ಎದುರು ಅನಂತಕುಮಾರ್ ಪರವಾಗಿಲ್ಲ ಅನ್ನಿಸುತ್ತದೆ.
ಇನ್ನು ಆಡಳಿತಾತ್ಮಕ ದಕ್ಷತೆ ಇತ್ಯಾದಿಗಳು ಹೀಗೆ ನೀಗಿಕೊಂಡಾಗ ಮುನ್ನೆಲೆಗೆ ಬರುವ ಸಂಗತಿ. ಮೋದಿ ಸರ್ಕಾರದ ದುಸ್ಥಿತಿ ಹೇಗಿದೆಯೆಂದರೆ ಬೆರಳೆಣಿಕೆಯ ಸಚಿವರು ಬಿಟ್ಟರೆ ಉಳಿದವರ ಹೆಸರೂ ಜನರಿಗೆ ಗೊತ್ತಿಲ್ಲ. ಈ ದೃಷ್ಟಿಯಲ್ಲಿ ಅನಂತ್ ಕುಮಾರ್ ಸುಮಾರಾಗಿ ಕೆಲಸ ನಿರ್ವಹಿಸಿದ್ದಾರೆ. ಅದಕ್ಕಿಂತಲೂ ಈಗ ಅವರ ಬಗ್ಗೆ ಸದಭಿಪ್ರಾಯ ಮೂಡಿರುವುದು ದೆಹಲಿಯ ಚಕ್ರವ್ಯೂಹದಲ್ಲಿ ಕನ್ನಡ/ ಕರ್ನಾಟಕದ ಕೆಲಸಗಳ ಬಗ್ಗೆ ವೈಯಕ್ತಿಕ ನೆಲೆಯಲ್ಲಿ ಸ್ಪಂದಿಸಿದ ಬಗ್ಗೆ. ಹಲವಾರು ಹೆಸರಾಂತ ವ್ಯಕ್ತಿಗಳ ಜೊತೆ ಅನಾಮಿಕರೂ ತಮಗೆ ಅನಂತಕುಮಾರ್ ಸ್ಪಂದಿಸಿದ ಬಗ್ಗೆ ಬರೆದಿದ್ದಾರೆ. ಈ ಗುಡ್‌ವಿಲ್ ರಾಜಕಾರಣಿಗೆ ಆಪತ್ಕಾಲದ ಗಂಟು. ಮುಖ್ಯತಃ ಪಕ್ಷ/ ಸೈದ್ಧಾಂತಿಕ ವಿರೋಧಿಗಳ ಜೊತೆಯೂ ಒಂದು ಕಿಂಡಿ ಸದಾ ತೆರೆÀದಿಟ್ಟುಕೊಂಡ ವ್ಯಕ್ತಿ ಅನಂತಕುಮಾರ್.
“ಬರಡು ಬಯಲಲ್ಲಿ ತುಂಬೆ ಗಿಡವೂ ಮರವೇ..” ಎಂಬ ಮಾತಿದೆ. ಹಿಂದುತ್ವದ ಅಮಾನುಷ ವಿಕೃತಿಯ ಪ್ರೆÃತಕುಣಿತದ ನಡುವೆ ಸೌಜನ್ಯದ ಸಂವಾದದ ಕಲೆ ರೂಢಿಸಿಕೊಂಡಿದ್ದ ಅನಂತಕುಮಾರ್ ಹೊಂಗೆ ಮರದ ಹಾಗೆ ಕಂಡಿದ್ದು ಅಚ್ಚರಿ ಅಲ್ಲ. ದೊಡ್ಡ ನಾಯಕನ ವಿಶಿಷ್ಟ ಗುಣ ಅವರಲ್ಲಿ ಕಾಣಿಸಲಿಲ್ಲ. ದಿವಾನರ ಶೈಲಿಯ ಪ್ರಭಾವಿ ಗುಣವಷ್ಟೆÃ ಅವರಲ್ಲಿದ್ದದ್ದು. ಯುವಜನರಿಗೆ ಸ್ಪಂದಿಸುವ ಸುವರ್ಣಾವಕಾಶ ತಟ್ಟೆಯಲ್ಲಿಟ್ಟು ಕೊಟ್ಟಾಗಲೂ ಕೆಡವಿ ಕೂತ ಅನಂತಕುಮಾರ ಹೆಗ್ಡೆಯಂಥಾ ಅಪ್ರಬುದ್ಧರನ್ನು ಕಂಡಾಗ ಈ ಸೀನಿಯರ್ ಅನಂತಕುಮಾರ್ ಗಮನ ಸೆಳೆಯುತ್ತಾರೆ!!! ಪುಣ್ಯಕ್ಕೆ ಅವರು ಅಧ್ವಾನಿ, ಯೆಡಿಯೂರಪ್ಪನವರ ತರ ನಿಸ್ತೆÃಜಗೊಂಡು ನಿರ್ಗಮನದ ಸಿದ್ಧತೆಯಲ್ಲಿರುವ ನಾಯಕನ ತರ ಕಾಣಿಸಲಿಲ್ಲ. ಉತ್ತುಂಗದಲ್ಲಿ ನಿರ್ಗಮಿಸಬೇಕು ಎನ್ನುವ ಆಸೆ ಮನುಷ್ಯನಿಗಿರುತ್ತದೆ. ಆದರೆ ಅದು ಕೈಗೂಡುವುದು ಕಡಿಮೆ. ಈ ಕಾಲದಲ್ಲಿ ಹರಿ ಚಿತ್ತವೆಂಬುದು ಪ್ರಜಾ ಚಿತ್ತ. ಆದರೆ ಅನಂತಕುಮಾರ್ ವಿಷಯದಲ್ಲಿ ವಿಧಿ ಕೊಂಚ ಕ್ರೂರವಾಯಿತು.

  • ಕೆ.ಪಿ.ಸುರೇಶ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...