Homeಅಂಕಣಗಳುಇಲಿ ಇಕ್ಕಳದಲ್ಲಿ ಇಡಬಾರದನ್ನ ಇಟ್ಟೋರು

ಇಲಿ ಇಕ್ಕಳದಲ್ಲಿ ಇಡಬಾರದನ್ನ ಇಟ್ಟೋರು

- Advertisement -
- Advertisement -

ಆಘಾತವಾಣಿ |

ನಮಸ್ಕಾರ ಆಘಾತವಾಣಿಗೆ ಸ್ವಾಗತ, ವಾರ್ತೆಗಳು ಓದುತ್ತಿರುವವರು ಅಟ್ಯಾಕ್ ಹನ್ಮಂತ.
ಕರ್ನಾಟಕಕ್ಕೆ ಬಂದಿದ್ದ ಸುಳ್ ಫ್ಯಾಕ್ಟರಿ ಪಕೋಡೇಂದ್ರನು ಉಡುಪಿಯಲ್ಲಿ ಭಾಷಣ ಜಡಿದು ಉಡುಪಿ ಕೃಷ್ಣಮಠಕ್ಕೆ ಹೋಗದೆ ಇದ್ದುದರ ಬಗ್ಗೆ ನಾನಾರೀತಿಯ ಊಹಾಪೋಹಗಳು ಹರಿದಾಡುತ್ತಿವೆ. ಇವೆಲ್ಲ ಗಾಳಿಸುದ್ದಿಗಳಿಗೆ ತೆರೆ ಎಳೆದಿರುವ ಶ್ರೀಮತಿ ಶೋಭಕ್ಕನವರು “ಕೃಷ್ಣಮಠದೊಳಗೆ ಪಕೋಡೇಂದ್ರನಿಗೆ ಜೀವಭಯ ಇದ್ದುದರಿಂದ ಅವರು ಮಠಕ್ಕೆ ಎಡಗಾಲನ್ನೂ ಇಡದೆ ಹಂಗೇ ವಾಪಸ್ ಹೋಗಿದ್ದಾರೆಂದು’’ ತಿಳಿಸಿದ್ದಾರೆ. ಈ ಸುದ್ದಿ ಕೇಳಿದ ಕೃಷ್ಣಮಠದ ಪಿಂಚಣಿಸ್ವಾಮಿಗಳಾದ ‘ತೇಜಾವರ ಶ್ರಿ’ಗಳು “ತನ್ನಂಥ ಕುಪೋಷಣೆ ಪೀಡಿತ ಬಡಕಲು ದೇಹಿಯನ್ನು ಪಕೋಡೇಂದ್ರ ಅವರು ಟೆರರಿಸ್ಟ್ ಎಂದು ಭಯಬಿದ್ದಿರುವುದು ತನಗೆ ಅತ್ಯಂತ ಖೇದವುಂಟಾಗಿದೆ, ಈ ಖೇದವನ್ನು ಹೋಗಲಾಡಿಸಲು ನಾನು ಮುತಾಲಿಕನ ಅರೆಬರೆ ಮೀಸೆಯನ್ನು ತುಟಿಯಿಂದ ಕಿತ್ತು ಯಜ್ಞಕುಂಡಕ್ಕೆ ಹವಿಸ್ಸಾಗಿ ಹಾಕುವ ಮೂಲಕ ದೇವರಿಗೆ ವಿನಂತಿ ಮಾಡುತ್ತೇನೆ ಎಂದು ಇನ್ನೂ ಹೇಳಿಲ್ಲವೆಂದು ವರದಿಯಾಗಿದೆ.
< < < <
ಬಿಜೆಪಿ ಪಕ್ಷದಲ್ಲಿ ನೆಪಕ್ಕೊಂದು ಅಧ್ಯಕ್ಷನಿರಲಿ ಎಂದು ಇಟ್ಟುಕೊಳ್ಳದ ‘ಧಡಿಯೂರಪ್ಪ’ನನ್ನು ನಂಬಿಕೊಂಡರೆ ತಮ್ಮ ಕೈಗೆ ಮಟನ್ ಬಿರಿಯಾನಿ ಬೇಯಿಸುವ ಹಂಡೆ ಮಾತ್ರ ಸಿಗಲು ಸಾಧ್ಯ ಎಂದು ಚಿಂತೆಗೊಳಗಾಗಿರುವ ‘ಹಮೀದ್ ಷಾ’ ಇದಕ್ಕೊಂದು ಹೊಸ ಪ್ಲಾನು ರೆಡಿ ಮಾಡಿದ್ದಾರೆಂದು ಗೊತ್ತಾಗಿದೆ. ಎಲ್ಲೇ ಬಿಜೆಪಿ ಪಕ್ಷದ ಪ್ರಚಾರವಿರಲಿ ಅಲ್ಲಿ ಈ ಬುಡ್ಡಾಗಿರಾಕಿಯನ್ನು ಶೋಕೇಸ್ ಪೀಸಿನಂತೆ ಬಳಸಿಕೊಂಡು ಆಕಾಶ ಪಾತಾಳವಾಗಿ, ಪಾತಾಳ ಆಕಾಶವೇನಾದರೂ ಆಗಿ ಬಿಜೆಪಿ ಅಧಿಕಾರಕ್ಕೆ ಬಂದರೆ ‘ಹಾರೆಸ್ಸೆಸ್’ ವಯೋವೃದ್ಧರ ಕೊಂಪೆಯಿಂದ ‘ಚಂತೋಷ್ ಜೀ’ಯನ್ನು ದರದರನೆ ಕರೆತಂದು ಸಿಎಂ ಮಾಡುವುದಾಗಿ ‘ಹಮೀದ್ ಷಾ’ ಅವರು ನಿದ್ದೆಗಣ್ಣಿನಲ್ಲಿ ಕನವರಿಸಿಕೊಳ್ಳುತ್ತಿದ್ದರು ಎಂಬ ಸುದ್ದಿ ಬಹಿರಂಗವಾಗಿದೆ.
< < < <
ಕಾಂಗ್ರೆಸ್ ಪಕ್ಷದ ‘ಲಾಹುಲ್ ಗಾಂಧಿ’ ಬಸವಣ್ಣನವರ ವಚನವನ್ನು ಉಚ್ಚರಿಸಲು ಹೋಗಿ ಇವನರ್ವ, ಇವನರ್ವ ಎಂದು ತೆದ್ದೊದ್ದೊ ಬೊದ್ದೊದ್ದೊ ಮಾಡಿದ ಮೇಲೆ ಕಾಂಗ್ರೆಸ್ಸಿಗರನ್ನು ಬಿಜೆಪಿಗರು ಹುರಿದು ಉಪ್ಪಾಕಿಕೊಂಡು ನುಂಗಿ ನೆಕ್ಕಿದ್ದ ವಿಷಯ ತಮಗೆ ತಿಳಿದಿರಬಹುದು. ಅದೇ ಬಗೆಯಲ್ಲಿ ಉತ್ತರದ ಹಿಂದಿಗರ ಮನೆಯ ಜೀತದಾಳಾದ ‘ಪಕೋಡೇಂದ್ರ’ನು ತಾನೇನೋ ಕನ್ನಡ ಪಂಡಿತನೆಂಬಂತೆ ಪೋಸು ಕೊಡಲು ಹೋಗಿ ‘ಇಲಿ ಇಕ್ಕಳದೊಳಗೆ ಇಡಬಾರದ್ದನ್ನು ಇಟ್ಟಂತೆ’ ಕೊಯಯೊ ಪಯಯೋ ಎಂದು ವದರಿಬಿಟ್ಟಿದ್ದಾನೆ. ‘ಭಗವಾನ್ ಮಂತೆಸಾಮಿ, ದೇವಿ ಮಾರವಬ್ಯಾ, ಮಲ ಮೇವದೇಶ್ವರ್, ಬಿಲ್ಲಿಗಿರಿ ರಂಗ, ಚಾಮರಾಜೇಶ್ವರ್, ಹಿಮ್ಮದ್ ಗೋಪಾಲ್ ಸಾಮಿ’ ಅಂತೆಲ್ಲ ದೇವರುಗಳ ಹೆಸರು ಹೇಳಿದ್ದನ್ನು ಕೇಳಿದ ಜನ.. ಇವನೇನು ದೇವರ ಹೆಸರು ಹೇಳುತ್ತಿದ್ದಾನೋ, ಈಗಾಗಲೇ ಪರಲೋಕಕ್ಕೆ ಪಾರ್ಸೆಲ್ ಆಗಿರೋ ಇವನ ಚಿಕ್ಕಪ್ಪ-ದೊಡ್ಡಪ್ಪಂದಿರ ಹೆಸರು ಹೇಳುತ್ತಿದ್ದಾರೆ ಎಂದು ಗಾಬರಿಯಾಗಿರುವ ಸುದ್ದಿ ಇದೀಗ ತಾನೇ ಬಂದಿದೆ.
< < < <
ಕರ್ನಾಟಕದ ಚುನಾವಣೆಯ ಖರ್ಚಿಗೆ ಕಾಸು ಪೀಕಲೆಂದು ಗಣಿರೆಡ್ಡಿಗಳನ್ನೆಲ್ಲ ಸಿಬಿಐ ಕೋರ್ಟಿನ ನೇಣಿನ ಕುಣಿಕೆಯಿಂದ ಬಿಡಿಸಿ ಕರೆತಂದು ಪ್ರಚಾರ ಕಾರ್ಯದಲ್ಲಿ ತೊಡಗಿಸಿರುವ ‘ಭಾರತೀಯ ಜನಾರ್ದನರೆಡ್ಡಿ ಪಾರ್ಟಿಯು’ ಮಿನಿಮಂ ಲೆವೆಲ್ ನಾಚಿಕೆ ಮಾನಮರ್ಯಾದೆಯಿಲ್ಲದೆ ಬಳ್ಳಾರಿ ಅದಿರಿನ ಭೂದರೋಡೆಯ ದುಡ್ಡಿನಲ್ಲಿ ಮಜಾ ಉಡಾಯಿಸುತ್ತಿದೆ ಎಂದು ತಿಳಿದುಬಂದಿದೆ. ಪಕ್ಷದ ಅಧ್ಯಕ್ಷರೂ ಸೇರಿದಂತೆ ಜನಾರ್ದನ ರೆಡ್ಡಿ ಪಕ್ಷದ ಶಾಸಕರೆಲ್ಲರಿಗೂ ಗಣಿರೆಡ್ಡಿಗಳು ಶರ್ಟುಪ್ಯಾಂಟು ಅಂದ್ರುವೇರು ಹೊಲಿಸಿಕೊಟ್ಟು ಅವರ ಪತ್ನಿಯರಿಗೆ ಲಂಗಜಾಕೀಟನ್ನೂ ಹೊಲಿಸಿಕೊಟ್ಟಿದ್ದಾರೆಂದು ಇನ್ನೂ ವರದಿಯಾಗಿಲ್ಲ. ಈ ಸುದ್ದಿ ತಿಳಿದ ಬ್ಲೂಜೆಪಿ ಶಾಸಕರ ಪತ್ನಿಯರು ತಮ್ಮ ಮನೆಯ ಬಟ್ಟೆ ಬೀರುವಿನ ಕದ ತೆರೆದು ಅಯ್ಯೋ ನನ್ನತ್ರ ಒಂದು ಸೀರೇನೂ ಇಲ್ಲ ಎಂದು ಗೋಳಾಡುತ್ತಿಲ್ಲವೆಂದು ಬಲ್ಲ ಮೂಲಗಳು ತಿಳಿಸಿವೆ.
< < < <
ದಲಿತರ ಮನೆಗಳಿಗೆ ಹೋಗಿ ಎಮ್ಮೆ ಮೇದಂತೆ ಮೇಯ್ದು ಬರುವುದನ್ನು ರೂಢಿ ಮಾಡಿಕೊಂಡಿರುವ ‘ಭಾರತೀಯ ಜಲ್ಸಾ ಪಾರ್ಟಿ’ಯ ಉತ್ತರ ಪ್ರದೇಶ ಸರ್ಕಾರದಿಂದ ಹೊಸ ನ್ಯೂಸೊಂದು ಓಡೋಡಿ ಬಂದಿದೆ. ಬ್ಲೂಜೆಪಿ ಪಕ್ಷದ ಶಾಸಕರು ದಲಿತರ ಮನೆಗಳಿಗೆ ಶ್ರೀರಾಮಚಂದ್ರನಂತೆ ಹೋಗಿ ಅಲ್ಲೇ ಕೂಳುಬಾಕರಂತೆ ಗಡದ್ದಾಗಿ ಉಂಡು, ದಲಿತರಿಗೆ ಆಶೀರ್ವಾದ ಮಾಡಿ ಬರುತ್ತಿದ್ದಾರೆ ಎಂದಿದ್ದಾನೆ ಶಾಸಕ. ಈ ಸುದ್ದಿ ಕೇಳಿದ ಉತ್ತರಪ್ರದೇಶದ ದಲಿತರು, ಇನ್ನೊಂದ್ಸಲ ಯಾವೋನಾದ್ರೂ ‘ಉಣ್ಣಕ್ಕೆ ಏನಾರ ಐತಾ’ ಅಂತ ‘ಉಣ್ಣಲು’ ಬಂದರೆ ಬರ್ರಿ ಊಟ ಮಾಡ್ರಿ ಅಂತ ಒಳಗೆ ಕರೆದು ಅಗುಣಿ ಹಾಕಿ ಆ ಬ್ಲೂಜೆಪಿ ಶಾಸಕರನ್ನು ಕಚಪಚ ಪಚಪಚ ಎಂದು ತುಳಿದು ಕಾಲು ಹಿಡಿದು ತಿಪ್ಪೆಗೆಸೆಯಬೇಕೆಂದು ಇನ್ನೂ ಪ್ರತಿಜ್ಞೆ ಮಾಡಿಲ್ಲವೆಂದು ವರದಿಯಾಗಿದೆ.
< < < <
ಹೋದಲ್ಲಿ ಬಂದಲ್ಲಿ ಹಾರೆಕೋಲು ಹಿಡಿದುಕೊಂಡು ಓಡಾಡುತ್ತ ಬ್ಲೂಜೆಪಿ ಪಕ್ಷದವರ ಪೃಷ್ಟಕ್ಕೆ ಹೆಟ್ಟಿಕೊಂಡು ಓಡಾಡುತ್ತಿರುವ ಪ್ರಕಾಶ್ ರೈ ಅವರು ಪಕ್ಷಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿದ್ದಾರೆಂದು ಬ್ಲೂಜೆಪಿ ಮೂಲಗಳು ತಿಳಿಸಿವೆ. ರೈ ಅವರ ಮೇಲೆ ಪಕ್ಷವು ಸಾಕಿಕೊಂಡಿರುವ ಅಲ್ಸೇಷಿಯನ್ ನಾಯಿ ಪ್ರುತಾಪ್ ತಿಮ್ಮನನ್ನು ಛೂ ಬಿಟ್ಟರೂ ರೈ ಪ್ರುತಾಪನಿಗೇ ಹಾರೆಕೋಲು ಹೆಟ್ಟಿ ಎಸೆದಿರುವುದು ಆಘಾತಕಾರಿಯೆಂದು ಧಡಿಯೂರಪ್ಪನವರು ತಮ್ಮ ಮನೆದೇವರು ‘ಬಂದಿದೆಲ್ಲ ಬಳ್ಕೊಳೇ ಬಂಡಿಭಾಗ್ಯಮ್ಮ’ನ ಬಳಿ ಕಷ್ಟ ತೋಡಿಕೊಂಡಿದ್ದಾರೆ. ಈ ಬಗ್ಗೆ ತುರ್ತಾಗಿ ಗಮನ ಹರಿಸಿ ತಮ್ಮದೇ ಪಾರ್ಟಿಯ ಪ್ರೊಡ್ಯೂಸರ್ ಒಬ್ಬನ ಕೈಲಿ ಹಾಲಿವುಡ್ ಚಿತ್ರವನ್ನು ಬೇರೆ ದೇಶದಲ್ಲಿ ಪ್ರೊಡ್ಯೂಸ್ ಮಾಡಲು ಹೇಳಿ ಪ್ರಕಾಶ್ ರೈಗೆ ಶೂಟಿಂಗ್ ನೆಪದಲ್ಲಾದರೂ ಬೇರೆ ದೇಶಕ್ಕೆ ರವಾನೆ ಮಾಡಿದರೆ ತಾನು ನೆಮ್ಮದಿಯಾಗಿ ಜಶೋಧಹೆನ್ ಸವಿನೆನಪಿನಲ್ಲಿ ಮಲಗುತ್ತೇನೆಂದು ಪಕೋಡೇಂದ್ರನು ಧಡಿಯೂರಪ್ಪನಿಗೆ ವಾಟ್ಸಾಪ್ ಮೆಸೇಜ್ ಕಳಿಸಿದ್ದಾರೆಂದು ಖಚಿತ ಮಾಹಿತಿಗಳು ತಿಳಿಸಿವೆ.
< < < <
ಕತ್ತೆ-ಎಮ್ಮೆಗಳಿಗೆ ಹೂನಾರ ಹಾಕಿ ಮೆರವಣಿಗೆ ಮಾಡುವುದೇ ರಾಜಕೀಯ ಎಂದು ನಂಬಿಕೊಂಡಿರುವ ‘ಪಾಟಾಳ್ ನಾಗರಾಜ್’ ಅವರು ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಕರ್ನಾಟಕದ ಜನರ ಗ್ರಾಚಾರ ಕೆಟ್ಟು ತಮ್ ಪಕ್ಷ ಏನಾದ್ರೂ ಅಪ್ಪಿತಪ್ಪಿ ಅಧಿಕಾರಕ್ಕೆ ಬಂದರೆ ಉಚಿತವಾಗಿ ಕಟಿಂಗ್ ಶೇವಿಂಗ್ ಮಾಡಿಸುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ ಪಾಟಾಳ್ ನಾಗರಾಜ್. ಈ ಸುದ್ದಿಯನ್ನು ಸಂಜೆಪತ್ರಿಕೆಯಲ್ಲಿ ಓದಿದ ಧಡಿಯೂರಪ್ಪನವರು ಮುಖವೇ ಕಾಣದಂತೆ ಗಡ್ಡ ಬೆಳೆಸಿಕೊಂಡು ಕಾಡುಮನುಷ್ಯನಂತೆ ಅಂಡಲೆಯುತ್ತಿರುವ ಸ್ತ್ರೀರಾಮುಲುಗೆ ಫೋನ್ ಮಾಡಿ “ನಿನ್ನ ಟಾರ್ಜನ್ ಮುಸುಡಿ ನೋಡಿಯೇ ಪಾಟಾಳ್ ನಾಗರಾಜ್ ಈ ಉಚಿತ ಕಟಿಂಗ್ ಶೇವಿಂಗ್ ಚುನಾವಣಾ ಭರವಸೆ ಕೊಟ್ಟಿದ್ದಾನೆ, ಮೊದಲು ನುಣ್ಣಗೆ ಶೇವಿಂಗ್ ಮಾಡಿಸಿಕೊಂಡು ನಂತರ ಬಂದು ನಿನ್ನ ಮುಖ ಮಾತ್ರ ತೋರಿಸು ಇನ್ನೇನೂ ತೋರಿಸಬೇಡ ಎಂದು ಗದರಿಕೊಂಡಿದ್ದಾರೆ. ಶೇವಿಂಗ್ ಮಾಡಿಸಿಕೊಂಡರೆ ನನ್ನ ಹೆಂಡತಿಯೇ ನನ್ನ ಮುಖ ನೋಡಿ ಕಿಟಾರನೆ ಕಿರುಚುತ್ತಾಳೆಂದು ಸ್ತ್ರೀರಾಮುಲು ಎಷ್ಟು ಸಮಜಾಯಿಷಿ ಕೊಟ್ಟರೂ ಧಡಿಯೂರಪ್ಪನವರು ತಾವು ಕೈಲಿ ಹಿಡಕೊಂಡಿದ್ದ ಧಡಿಯನ್ನು ಕೆಳಗೇ ಇಳಿಸಲಿಲ್ಲವೆಂದು ತಿಳಿದುಬಂದಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಭೇಟಿ ಇದೇ ಜಾಗದಲ್ಲಿ ಇದೇ ವಾರದಲ್ಲಿ. ಇಲ್ಲೇ ಡ್ರಾ, ಇಲ್ಲೇ ಬಹುಮಾನ. ಮೇಯಕ್ಕೆ ಹೋಗಿರೋ ದನಗಳು ಹಟ್ಟಿ ಸೇರ್ಕಳೋ ಹೊತ್ತಾತು, ನಾನಿನ್ನ ಬತ್ತಿನಿ. ಬಾಯ್ ಬಾಯ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...