HomeUncategorizedಥೂತ್ತೇರಿ : ಅಂಬರೀಶ್ ಮೃತ್ಯುಂಜಯ ಹೋಮ ಮಾಡಿಸಬೇಕಿತ್ತು

ಥೂತ್ತೇರಿ : ಅಂಬರೀಶ್ ಮೃತ್ಯುಂಜಯ ಹೋಮ ಮಾಡಿಸಬೇಕಿತ್ತು

- Advertisement -
- Advertisement -

ಯಾಹೂ |

ಸಿನಿಮಾ ರಂಗದಲ್ಲಿ ಮತ್ತು ರಾಜಕಾರಣದಲ್ಲಿ ಹಾಗೂ ಖಾಸಗೀ ಬದುಕಿನಲ್ಲಿ ವೈರಿಗಳೇ ಇಲ್ಲದಂತೆ ಬದುಕಿದ ಅಂಬರೀಶ್‍ಗೆ ಗ್ರಹಗತಿಗಳು ಮುನಿಸಿಕೊಂಡಿದ್ದವು ಎಂದು ಟಿ.ವಿ.ಯೊಳಗೆ ಸೇರಿಕೊಂಡಿರುವ ಪುರೋಹಿತ ಪಿಂಡಗಳು ವಾದಿಸತೊಡಗಿವೆಯಂತಲ್ಲಾ. ಈ ಪಿಂಡಗಳ ವಿಶೇಷವೆಂದರೆ, ತ್ರಿಕಾಲಜ್ಞಾನಿಗಳಂತಾಡುವ ಇವು ಯಾವುದೇ ಘಟನೆ ನಡೆಯುವ ಮುನ್ನ ಬಾಯಿ ಬಿಡುವುದಿಲ್ಲ. ವಿಷ್ಣು ತೀರಿಕೊಂಡ ನಂತರವೇ ಅವರಿಗೆ ನಾಗವಲ್ಲಿ ಕಾಟ ಅಮರಿಕೊಂಡಿತ್ತು ಎಂದು ವದರಿದವು. ಸಕ್ಕರೆ ಕಾಯಿಲೆ ದೆಸೆಯಿಂದ ಹೃದಯಾಘಾತಕ್ಕೆ ತುತ್ತಾದ ವಿಷ್ಣುಗೆ ನಾಗವಲ್ಲಿ ಕಾಟವಿತ್ತು, ಯಾಗ ಮಾಡಿಸಿದ್ದರೆ ಸರಿಹೋಗುತ್ತಿತ್ತು ಎನ್ನುವ ಈ ಪಿಂಡಗಳು ಈಗ ಅಂಬರೀಶ್ ಸಾವಿಗೂ ಪುರೋಹಿತಶಾಹಿ ತಂತ್ರವನ್ನೇ ಬಳಸತೊಡಗಿರುವುದು ಕಂಡು ದಿಗಿಲಾಗಿ ಜ್ಯೋತಿಷ್ಯ ಬ್ರಹ್ಮ ಪ್ರಕಾಶ ಮಣ್ಣುರಾಯರಿಗೆ ಫೋನ್ ಮಾಡಲಾಗಿ ರಿಂಗಾಯ್ತು,
ರಿಂಗ್‍ಟೋನ್: “ಹೋನ್ಹೀ ತೋ ಹೋನ್ಹೀ ಹೀ ಹೈ, ಅನ್ಹೋಹ್ಹೀ ನಹೀಂ ಭವತ್ಯೇವ ಭವತವ್ಯಂ….. ಹಲೋ ಯಾರು.”
“ಗುರುಗಳೇ ನಾನು ಪತ್ರಕರ್ತ”
“ಯಾವ ಪತ್ರಿಕೆ.”
“ನ್ಯಾಯಪಥ.”
“ನ್ಯಾಯಪಥ ಅಂದರೆ ಸತ್ಯದ ದಾರಿ.”
“ಹೌದು ಸ್ವಾಮಿ, ನಿಮ್ಮ ಫೋನಿನ ರಿಂಗ್‍ಟೋನ್ ಅರ್ಥ ಆಗಲಿಲ್ಲ.”
“ನಡೆಯಬೇಕಾದದ್ದು ನಡೆದೇ ನಡೆಯುತ್ತದೆ, ನಡೆಯಬೇಕಾದ ರೀತಿಯಲ್ಲೇ ನಡೆಯುತ್ತದೆ ಅಂತ ಅರ್ಥ.”
“ಹಾಗಿದ್ದರೆ ಜ್ಯೋತಿಷ್ಯದ ಅಗತ್ಯವೇನು.”
“ನೀವು ಆಸ್ತಿಕರೋ ನಾಸ್ತಿಕರೋ.”
“ಸದ್ಯಕ್ಕೆ ನಾಸ್ತಿಕ.”
“ಹಾಗಾದರೆ ನಿಮ್ಮೊಟ್ಟಿಗೆ ಮಾತನಾಡಿ ಪ್ರಯೋಜನ ಇಲ್ಲ.”
“ಹಾಗನ್ನಬೇಡಿ ಗುರುವೆ, ನಮ್ಮ ಅಂಬರೀಶಣ್ಣನ ಸಾವಿನ ಬಗ್ಗೆ ತಿಳಕೊಬೇಕು.”
“ನೋಡಿ, ಅಂಬರೀಶ್ ನಮ್ಮನ್ನು ಭೇಟಿಮಾಡಿ ನಾವು ಹೇಳಿದಂತೆ ಕೇಳಿದ್ದರೆ ಬದುಕುತ್ತಿದ್ದರು.”
“ಅದು ಹ್ಯೆಂಗೆ ಗುರುಗಳೇ.”
“ಒಂದು ಮೃತ್ಯುಂಜಯ ಹೋಮ ಮಾಡಿಸಿದ್ದರೆ ಬದುಕುತ್ತಿದ್ದರು.”
“ಮೃತ್ಯುಂಜಯ ಹೋಮ ಅಂದರೆ ಸಾವನ್ನ ಜಯಿಸುವ ಹೋಮ ಅಲ್ಲವೆ ಗುರು.”
“ಹೌದು.”
“ಈ ಮೃತ್ಯುಂಜಯ ಹೋಮ ಮಾಡಿಸಿದ್ರೆ ಎಷ್ಟು ದಿನ ಬದುಕಬಹುದು.”
“ನೋಡಿ, ನಮಗಿರುವ ಆಯಸ್ಸು ಬ್ರಹ್ಮನದಲ್ಲ ನಾವು ನಮ್ಮ ಆಯಸ್ಸನ್ನ ವೃದ್ಧಿಸಿಕೊಳ್ಳಬೇಕು. ಮರಣದಲ್ಲಿ ನೂರ ಒಂದು ಪ್ರಕಾರಗಳುಂಟು. ನೂರನ್ನ ಜಯಿಸಬಹುದು. ಒಂದನ್ನ ಮಾತ್ರ ಜಯಿಸಲಾಗುವುದಿಲ್ಲ.”
“ಅದ್ಯಾವುದು ಗುರುಗಳೇ.”
“ನಿಜವಾದ ಮರಣ!”
“ಈಗ ಅಂಬರೀಶ್‍ಗೆ ಸಂಭವಿಸಿದ್ದು ನಿಜವಾದ ಮರಣ ಅಲ್ಲವ.”
“ಇಲ್ಲ ಅವರದ್ದು ಭಾವೋದ್ವೇಗದ ಮರಣ. ಅದಕ್ಕಾಗಿ ನಾಗಾರಾಧನೆಯ ಮೃತ್ಯುಂಜಯ ಹೋಮ ಮಾಡಿಸಿದ್ದರೆ ಬದುಕುತ್ತಿದ್ದರು.”
“ಅದನ್ನ ಅವರಿಗೆ ಹೇಳಬೇಕಾಗಿತ್ತು.”
“ಅವರು ಬಂದು ಕೇಳಬಹುದಿತ್ತು, ನಾವು ಅವರ ಬಳಿಗೆ ಹೋಗುವುದಿಲ್ಲ.”
“ಅವರ ಜೀವ ಮುಖ್ಯ ಅಲ್ಲವೆ?”
“ಅದೌದು. ನಾವು ಸಂಸ್ಕಾರವಂತ ಜ್ಯೋತಿಷಿಗಳು. ಅವರಾಗಿ ಬಂದರೆ ಹೇಳ್ತೇವೆ.”
“ಅವುರಾಗಿ ಬಂದ್ರೆ ಹೇಳೋ ಅಂತವರು, ಈಗ ಟಿವಿಯೊಳಗಡೆ ಬಂದು ಯಾಕೇಳ್ತಿದೀರಿ”
“ನಾವು ಬಂದದ್ದಲ್ಲ ಟಿವಿಯವರು ಕರೆದದ್ದು.”
“ಬಂದು-ಬಳಗದೋರು ಕರೆದ್ರೆ ಹೊಗಬೇಕಾಗತ್ತೆ ಬಿಡಿ. ತಮ್ಮ ಪ್ರಕಾರ ಅಂಬರೀಶ್ ಜಾತಕ ಹೇಗಿತ್ತು ಗುರುಗಳೇ.”
“ಅಂಬರೀಶ್ ಜಾತಕದಲ್ಲಿ ಗುರುವಿನ ಬಲವಿತ್ತು. ಶನಿ ದೂರವಿದ್ದ. ಈಗ ಅವರ ಬಳಿ ಶನಿ ಸಂಚಾರ ಆರಂಭವಾಗಿತ್ತು. ಮೃತ್ಯುಂಜಯ ಹೋಮದಿಂದ ಶನಿಯನ್ನ ದೂರ ಮಾಡಬಹುದಿತ್ತು.”
“ಬ್ರಹ್ಮರ್ಷಿಗಳೇ ನಾಗನ ಆರಾಧನೆ ಯಾಕೆ ಮಾಡ್ತರೆ ಗೊತ್ತೆ.”
“ನಾಗದೋಷ ಪರಿಹಾರಕ್ಕೆ.”
“ಅದಲ್ಲ, ಹಾವುಗಳ ಪೈಕಿ ನಾಗರಹಾವಿಗೆ ವಿಷ ಇದೆ. ಅದು ಕಡುದ್ರೆ ಮನುಷ್ಯ ಸತ್ತೋಗ್ತನೆ. ಪೂಜೆ ಮಾಡಿದ್ರೆ ಅದು ಕಡಿಯಲ್ಲ ಅನ್ನೋ ಕಾರಣಕ್ಕೆ. ಅಂದ್ರೆ ಭಯ ಭಕ್ತಿ ಮೂಡಿಸುತ್ತೆ ಅಲ್ಲವಾ.”
“ಅದೌದು. ಭಯ ನಿವಾರಣೆ ನಮ್ಮ ಕೆಲಸ.”
“ನಿಮ್ಮ ಮೃತ್ಯುಂಜಯ ಹೋಮದಿಂದ ಅರ್ಭುದ ರೋಗ ನಿವಾರಿಸಬಹುದಾ?”
“ಹೌದು.”
“ಹಾಗಾದ್ರೆ ಅನಂತಕುಮಾರ್ ಅದರಲ್ಲೇ ಹೋದರಲ್ಲ. ಅವರ ಸಂಬಂಧಿಯಾದ ನೀನು ಆಗ ಕತ್ತೆ ಕಾಯ್ತಾಯಿದ್ದ?”
“ಯಾಕೆ ಹಾಗೆ ಕೆಟ್ಟ ಮಾತನ್ನಾಡುವುದು ನೀವು.”
“ಸಾರಿ, ಗೋವು ಕಾಯ್ತಾಯಿದ್ರ.”
“ನೋಡಿ ಇವರೆ, ನಿಮ್ಮಂತ ಅಸಂಸ್ಕೃತ ಅಹಂಕಾರಿಗಳನ್ನ ನಾವು ಸಹಿಸಿಕೊಂಡು ಉತ್ತರ ಕೊಡಬೇಕಾಗ್ತದೆ, ಅಂಬರೀಶರು ಭಾವೋದ್ವೇಗದ ವ್ಯಕ್ತಿ. ಆನೆ ನಡೆದದ್ದೇ ದಾರಿ ಅಂತ ಹೇಳುವ ಹಾಗೆ ಅವರು ಯಾರ ಮಾತನ್ನ ಕೇಳಲಿಲ್ಲ. ಕೇಳಿದ್ದರೆ ನಮ್ಮಲ್ಲಿ ಪರಿಹಾರವಿತ್ತು.”
“ಏನು ಪರಿಹಾರ ಹೇಳಿ.”
“ನೋಡಿ ಮನುಷ್ಯನ ಬಾಹ್ಯ ವರ್ತನೆಗೆ ಆಂತರ್ಯದ ಸಮಸ್ಯೆಗಳು ಕಾರಣ. ನಮ್ಮ ದೇಹದಲ್ಲಿ 72 ಸಾವಿರ ನಾಡಿಗಳಿವೆ. ಅವುಗಳ ಸಮತೋಲನ ಮುಖ್ಯ. ಅವುಗಳ ಏರುಪೇರಿನಿಂದ ಮನುಷ್ಯ ಕೀಳರಿಮೆಗೆ ತುತ್ತಾಗುವುದುಂಟು. ಆಗ ನಾವು ಆತ್ಮವಿಶ್ವಾಸ ಮೂಡಿಸುತ್ತೇವೆ.”
“ಯಾವ ತರ.”
“ನಮ್ಮ ಹೆಂಡತಿಗೆ ಒಂದಿಷ್ಟು ಉಬ್ಬು ಹಲ್ಲುಗಳಿದ್ದವು.”
“ಹಲ್ಲಿಗೇ ಮುತ್ತು ಕೊಡೋತರ.”
“ಹಾಗಂದುಕೊಳ್ಳಬಹುದು. ಆಗ ನಾನು ಆಕೆಗೆ ಆತ್ಮವಿಶ್ವಾಸ ತುಂಬಿದೆ. ನಿನ್ನ ಹಲ್ಲುಗಳ ಬಗ್ಗೆ ಕೀಳರಿಮೆ ಬೇಡ. ಮನೆಯ ಮೆಟ್ಟಿಲು ಕಲ್ಲುಗಳು, ಮನೆಯ ಹೊರಗಿರುತ್ತವೆ, ಒಳಗಲ್ಲ ಅಂತ ಹಾಸ್ಯ ಮಾಡಿ ಹೇಳಿದೆ. ಆಕೆಗೆ ಕೀಳರಿಮೆ ಹೋಯ್ತು. ನಮ್ಮ ಬದುಕು ಸರಾಗವಾಯ್ತು. ಹೀಗೆ ನಾವು ಮನುಷ್ಯನ ಆಂತರ್ಯದಲ್ಲಿನ ಕೀಳರಿಮೆ ಹೋಗಲಾಡಿಸಿಬಿಡ್ತೇವೆ.”
“ಇದಕ್ಕೂ ಅಂಬರೀಶ್ ವಿಷಯಕ್ಕೂ ಏನು ಸಂಬಂಧ.”
“ಸಂಬಂಧವುಂಟು, ಅಂಬರೀಶ್ರಲ್ಲಿದ್ದ ಭಾವೋದ್ವೇಗ ಕಡಿಮೆ ಮಾಡಿ, ಇನ್ನೂ ಬದುಕುವಂತೆ ಮಾಡ್ತಾಯಿದ್ದೆ.”
“ಮಿಸ್ಟರ್ ಬ್ರಹ್ಮ, ನಿಮ್ಮ ಜೋತಿಷ್ಯ ಪ್ರಧಾನವಾಗಿ ಹೊಟ್ಟೆ ಪಾಡಿಂದು, ಈ ದೇಶದ ಮುಗ್ಧ ಮನಸ್ಸುಗಳ ತಲೆಗೆ ಪುರಾಣ ತುಂಬಿ ದೇಶನೆ ಬಾಳೆಎಲೆ ಮಾಡಿಕೊಂಡು ಉಂಡ್ರಿ ಅಂತ ನಮ್ಮ ತೇಜಸ್ವಿ ಹೇಳತಿದ್ರು. ಏನಾದ್ರು ಮಾಡಿಕೊಂಡು ಹಾಳಾಗೋಗಿ. ಆದ್ರೆ ಅಂಬರೀಶ್ ವಿಷಯದಲ್ಲಿ ಪುರಾಣ ಶುರುಮಾಡಿದ್ರೆ ಸರಿಯಾಗಿ ಮಾಡಬೇಕಾಯ್ತದೆ.”
“ಯಂತ ಮಾಡ್ತಿರಿ.”
“ನಿನ್ನ ರಿಂಗ್‍ಟೋನಿದೆಯಲ್ಲ ಆ ತರ ನಡೆಯಬೇಕಾದ್ದು ನಡದೇ ನಡೆಯುತ್ತೆ. ನಡೆಯಬೇಕಾದ ರೀತಿಯಲ್ಲೇ ನಡೆಯುತ್ತೆ.”
“ನನ್ನನ್ನ ಬೆದರಿಸುತ್ತೀಯ, ಶಾಪ ಕೊಡ್ತೇನೆ.”
“ನಿನ್ನ ಶಾಪ ನನ್ನ ಕೂದಲಿಗೆ ಸಮ.”
“ಛೇ ಕೆಟ್ಟವನೆ.”
ಥೂತ್ತೇರಿ….!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...