Homeಕರ್ನಾಟಕಮಾಹಿತಿ ಹಕ್ಕು ಕಾಯಿದೆಯ (RTI) ಹಲ್ಲು ಕಿತ್ತ ಮೋದಿ ಸರಕಾರ

ಮಾಹಿತಿ ಹಕ್ಕು ಕಾಯಿದೆಯ (RTI) ಹಲ್ಲು ಕಿತ್ತ ಮೋದಿ ಸರಕಾರ

- Advertisement -
- Advertisement -

ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಮಂತ್ರಿಯಾಗಿದ್ದಾಗ ಹೆದ್ದಾರಿ ಕಾಮಗಾರಿಯಲ್ಲಿನ ಭಾರೀ ಭ್ರಷ್ಟಾಚಾರದ ಕುರಿತು ಪ್ರಧಾನಿ ಕಚೇರಿಗೆ ಪತ್ರ ಬರೆದು ಮಾಹಿತಿ ನೀಡಿದ್ದಕ್ಕಾಗಿ ಪ್ರಾಮಾಣಿಕ ಸರಕಾರಿ ಇಂಜಿನಿಯರ್ ಸತ್ಯೇಂದ್ರ ದುಬೆ ಅವರ ಕೊಲೆ ನಡೆದಿದ್ದರೆ, ಇದೀಗ ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಮಂತ್ರಿಯಾಗಿರುವಾಗ ಮಾಹಿತಿ ಹಕ್ಕು ಕಾಯಿದೆಗೇ ತಿದ್ದುಪಡಿ ತಂದು ಅದರ ಹಲ್ಲುಗಳನ್ನು ಕೀಳುವುದರ ಮೂಲಕ ಅರೆಜೀವಗೊಳಿಸಲಾಗಿದೆ.

ಸರಕಾರವು ಏಕೀಕೃತ ಪ್ರತಿಪಕ್ಷಗಳ ಭಾರೀ ವಿರೋಧದ ನಡುವೆಯೂ, ಮಾಹಿತಿ ಹಕ್ಕು (ತಿದ್ದುಪಡಿ) ಮಸೂದೆ 2019ನ್ನು ಲೋಕಸಭೆಯಲ್ಲಿ ಅಂಗೀಕಾರ ಮಾಡಿಸುವಲ್ಲಿ ಸಫಲವಾಗಿದೆ. ಈ ಮಸೂದೆಯು ಮುಂದಿನ ವಾರ ರಾಜ್ಯಸಭೆಯಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ. ಸರಕಾರದ ಈ ಕ್ರಮದಿಂದ ಕೇಂದ್ರ ಮತ್ತು ರಾಜ್ಯಗಳ ಮಾಹಿತಿ ಆಯೋಗವು ದುರ್ಬಲವಾಗಿ, ಸ್ವಾತಂತ್ರ್ಯ ಕಳೆದುಕೊಂಡು, ಹೆಚ್ಚು ಕಡಿಮೆ ಸರಕಾರದ ಅಡಿಯಾಳಾಗಿ ಕೆಲಸ ಮಾಡಬೇಕಾಗುತ್ತದೆ ಎಂಬುದು ಪ್ರತಿಪಕ್ಷಗಳ ಮತ್ತು ಮಾಹಿತಿ ಹಕ್ಕು ಸಂಘಟನೆಗಳು ಮತ್ತು ಕಾರ್ಯಕರ್ತರ ವಾದ. ಹಲವಾರು ಹಿರಿಯ ಮಾಜಿ ಅಧಿಕಾರಿಗಳು ಕೂಡಾ ಇಂತದ್ದೇ ಭಯವನ್ನು ವ್ಯಕ್ತಪಡಿಸಿದ್ದಾರೆ. ಇದರಿಂದ ಆಡಳಿತದಲ್ಲಿ ಪಾರದರ್ಶಕತೆಯ ಕುರಿತು ಮೋದಿ ಸರಕಾರದ ಅಸಡ್ಡೆ ಬಯಲಾಗಿದೆ.

ಸತ್ಯೇಂದ್ರ ದುಬೆ ಕೊಲೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ

ಸತ್ಯೇಂದ್ರ ದುಬೆ ಅವರ ಪ್ರಕರಣದಲ್ಲಿ ಏನಾಗಿತ್ತು ಅಂದರೆ, ಅವರು ಭಾರತೀಯ ಇಂಜಿನಿಯರಿಂಗ್ ಸೇವೆ (ಐಇಎಸ್)ಯ ಅಧಿಕಾರಿ. ಅವರು ವಾಜಪೇಯಯವರ ಕನಸಿನ ಯೋಜನೆಯಾದ ಮಹಾ ಹೆದ್ದಾರಿಯ ಗಯಾ ವಿಭಾಗದಲ್ಲಿ ಯೋಜನಾ ನಿರ್ದೇಶಕರಾಗಿದ್ದರು. ನ್ಯಾಷನಲ್ ಹೈವೇ ಅಥಾರಿಟಿ (NHA) ಅಧಿಕಾರಿ.. ಅವರಿಗೆ ವಾಜಪೇಯಿಯವರ ಪ್ರಾಮಾಣಿಕತೆ ಬಗ್ಗೆ ಅತೀವ ವಿಶ್ವಾಸ ಇತ್ತು. ಆದರೆ ಅವರು ಮುಗ್ಧರಾಗಿದ್ದರು. ಐದು ಕಿ.ಮೀ. ಹೆದ್ದಾರಿ ಪುನರ್ರಚಿಸುವಂತೆ ಆದೇಶಿಸಿದ್ದರು. ಅವರು ಭ್ರಷ್ಟಾಚಾರದ ಎಲ್ಲಾ ವಿವರಗಳನ್ನೂ ಅಂಕಿಅಂಶ ಸಹಿತ ಪ್ರಧಾನಿ ಕಚೇರಿಗೆ ಕಳಿಸಿದ್ದರು. ಆದರೆ ಮಾಹಿತಿ ಪ್ರಧಾನಿಯಂತಹ ಉನ್ನತ ಕಚೇರಿಯಿಂದಲೇ ಸೋರಿಕೆಯಾಯಿತು. ಬೆಳಗ್ಗೆ ಚಹಾ ಕುಡಿಯಲು ಹೋದ ಗೂಡಂಗಡಿಯಲ್ಲೇ ಅವರನ್ನು ಅಟಕಾಯಿಸಿ ಕೊಲ್ಲಲಾಯಿತು. ಪ್ರಾಮಾಣಿಕ ಪ್ರಧಾನಿ ಕಚೇರಿಗೂ ಲೋಕಲ್ ಗೂಂಡಾಗಳಿಗೂ ಸಂಬಂಧ ಇರುವಾಗ ಈಗಿನ ಪ್ರಧಾನಿಯ ಕಾಲದಲ್ಲಿ ಏನು ನಡೆಯಬಹುದು; ಊಹಿಸಿ!

ನಮ್ಮದೇ ಕರಾವಳಿಯಲ್ಲಿ ಅರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗರ ಕೊಲೆಯಾಯಿತು. ಬಿಜೆಪಿ ಕಾರ್ಯಕರ್ತರೂ, ಪ್ರಸಿದ್ಧ ದೇವಸ್ಥಾನ ಒಂದರ, ಪ್ರತಿನಿತ್ಯ ಭೇಟಿ ನೀಡುತ್ತಿದ್ದ ಭಕ್ತರನ್ನೇ ಸುಪಾರಿ ಕೊಟ್ಟು ಕೊಲ್ಲಿಸಿ ಜೈಲಿಗೆ ಹೋಗಿ ಬಂದವರನ್ನು ಸೂಲಿಬೆಲೆಯಂತಹಾ ಬಾಯಿಬಡುಕರು ಜೈಲಿನಿಂದ ಹೊರಬಂದಾಗ ಹಾರಹಾಕಿ ಸ್ವಾಗತಿಸಿದ್ದಾರೆ. ಇದರ ಹಿನ್ನೆಲೆಯಲ್ಲಿ ಇದ್ದ್ದವರು ಇಂದು ಶಾಸಕರು. ಬಾಳಿಗ ಮಾಡಿದ ಒಂದೇ ತಪ್ಪು ಈ ದೇವಸ್ಥಾನದ ಅಕ್ರಮಗಳ ಬಗ್ಗೆ ಆರ್‌ಟಿಐ ಕಾಯಿದೆಯಡಿ ಮಾಹಿತಿ ಕೇಳಿದ್ದು.
ಈ ಹಿನ್ನೆಲೆಯಲ್ಲಿಯೇ ಮಾಹಿತಿ ಹಕ್ಕು ಕಾರ್ಯಕರ್ತರನ್ನು ರಕ್ಷಿಸಲು ‘ವಿಸಿಲ್ ಬ್ಲೋವರ್ಸ್ (ಪ್ರೊಡಕ್ಷನ್) ಆಕ್ಟ್ ಬಂದಿತ್ತು. ಅದನ್ನೂ ಮೋದಿ ಸರಕಾರ ಕೊಂದಿದೆ. ಮೋದಿಯ ಉದ್ದೇಶ ಸ್ಪಷ್ಟ. ಈಗ ತಿದ್ದುಪಡಿ!

ವಿನಾಯಕ ಬಾಳಿಗೆ ಕೊಲೆ ಖಂಡಿಸಿ ಪ್ರತಿಭಟನೆ

ಲೋಕಸಭೆಯಲ್ಲಿ ಯಾವುದೇ ಮಸೂದೆ ಅಂಗೀಕಾರ ಮಾಡಿಸುವಷ್ಟು ಬಲ ಸರಕಾರಕ್ಕೆ ಇದೆ ಮತ್ತು ಪ್ರತಿಪಕ್ಷಗಳು ಈ ವಿಷಯದಲ್ಲಿ ಸಾಕಷ್ಟು ಗದ್ದಲ ಎಬ್ಬಿಸಿದವು ಎಂಬುದು ನಿಜವಾದರೂ ಈ ಕುರಿತು ಸಾಕಷ್ಟು ಗಂಭೀರವಾಗಿಲ್ಲ ಎಂಬುದನ್ನು ಮಸೂದೆಯ ಪರ ಮತ್ತು ವಿರೋಧವಾಗಿ ಬಿದ್ದ ಮತಗಳ ಸಂಖ್ಯೆಯನ್ನು ಗಮನಿಸಿದರೆ ಗೊತ್ತಾಗುತ್ತದೆ. ಸ್ವಾಯತ್ತ ಸಂಸ್ಥೆಗಳನ್ನು ದುರ್ಬಲಗೊಳಿಸುವುದರ ಮೂಲಕ ಸಾಂವಿಧಾನಿಕ ರೀತಿಯಲ್ಲಿಯೇ ಅರಿವಿಗೆ ಬರದಂತೆ, ಅಧಿಕಾರದ ಕೇಂದ್ರೀಕರಣ ಮತ್ತು ಸರ್ವಾಧಿಕಾರಿ ಆಡಳಿತದ ಕಡೆಗೆ ಸಾಗುವ ಆರೆಸ್ಸೆಸ್, ಬಿಜೆಪಿ ಮತ್ತು ಮೋದಿ ಸರಕಾದ ಹುನ್ನಾರಗಳ ದಾರಿಯಲ್ಲಿ ಈ ತಿದ್ದುಪಡಿ ಒಂದು ಪ್ರಮುಖ ಹೆಜ್ಜೆ ಎಂಬುದು ಪ್ರತಿಪಕ್ಷಗಳಿಗೆ ಅರಿವಾದಂತಿಲ್ಲ. ಮಸೂದೆಯ ಪರವಾಗಿ 178 ಮತಗಳು ಬಿದ್ದರೆ, ವಿರೋಧವಾಗಿ  ಬಿದ್ದದ್ದು ಕೇವಲ 79 ಮತಗಳು. ಉಳಿದ ಸಂಸದರು ಎಲ್ಲಿದ್ದರು?

ಈ ತಿದ್ದುಪಡಿ ಮಸೂದೆಯು ಮಾಹಿತಿ ಆಯುಕ್ತರ ಅಧಿಕಾರಾವಧಿ ಮತ್ತು ಸಂಭಾವನೆಯ ಮೇಲೆ ಸರಕಾರಕ್ಕೆ ಹೆಚ್ಚಿನ ಅಧಿಕಾರ ನೀಡುತ್ತದೆ. ಆಡಳಿತದಲ್ಲಿ ಪಾರದರ್ಶಕತೆ ಇರಬೇಕೆಂಬ ಬಹುಕಾಲದ ಮತ್ತು ಈಗ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿರುವ ಬೇಡಿಕೆಗಳಿಗೆ ಅನುಗುಣವಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ 2005ರಲ್ಲಿ ಮಾಹಿತಿ ಹಕ್ಕು ಕಾಯಿದೆಯನ್ನು ಜಾರಿಗೆ ತಂದಿತ್ತು. ಈ ಕಾಯಿದೆಯ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ಬೇರೆಬೇರೆ ರಾಜ್ಯಗಳು ತಮ್ಮದೇ ಮಾಹಿತಿ ಹಕ್ಕು ಕಾಯಿದೆಗಳನ್ನು ತಂದಿದ್ದವು. ಕರ್ನಾಟಕ ಮಾಹಿತಿ ಹಕ್ಕು ಕಾಯಿದೆಯು ಈ ನಿಟ್ಟಿನಲ್ಲಿ ರೂಪಿಸಲಾದ ಅತ್ಯುತ್ತಮ ಕಾಯದೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಮೂಲ ಮಾಹಿತಿ ಹಕ್ಕು ಕಾನೂನಿನಲ್ಲಿ ಕೇಂದ್ರ ಮಾಹಿತಿ ಆಯೋಗಕ್ಕೆ ಕೇಂದ್ರ ಚುನಾವಣಾ ಆಯೋಗದ ಸ್ಥಾನಮಾನ ನೀಡುತ್ತದೆ. ಅಂದರೆ, ಎರಡೂ ಸ್ವಾಯತ್ತ ಸಂಸ್ಥೆಗಳು. ಸರಕಾರ ಅವುಗಳ ವ್ಯವಹಾರಗಳಲ್ಲಿ ತಲೆಹಾಕುವಂತಿಲ್ಲ. ಚುನಾವಣಾ ಆಯೋಗಕ್ಕೆ ವಿಧಾನಿಕ ಮಾನ್ಯತೆ ಇದ್ದರೆ, ಮಾಹಿತಿ ಆಯೋಗಕ್ಕೆ ಕಾನೂನಿನ ಮಾನ್ಯತೆ ಇದೆ. ಇದನ್ನೇ ಮೋದಿ ಸರಕಾರವು ಬಳಸಿಕೊಳ್ಳುತ್ತಿದೆ. ಸಾಂವಿಧಾನಿಕ ತಿದ್ದುಪಡಿ ಮಾಡುವುದು ಸದ್ಯಕ್ಕೆ ಕಷ್ಟವಿದೆ. ಕಾರಣ-ರಾಜ್ಯಸಭೆಯಲ್ಲಿ ಆಳುವ ಕೂಟಕ್ಕೆ ಮೂರನೇ ಎರಡು ಬಹುಮತವಿಲ್ಲ. ಆದರೆ, ಕಾಯಿದೆಯನ್ನು ಬದಲಾಯಿಸುವ ಅವಕಾಶ ನಿಸ್ಸಂಶಯವಾಗಿ ಇದೆ.

ಅದಕ್ಕಾಗಿಯೇ ಎರಡು ಆಯೋಗಗಳ ಪೈಕಿ ಮಾಹಿತಿ ಹಕ್ಕು ಆಯೋಗವನ್ನೇ ಮೊದಲ ದಾಳಿಗಾಗಿ ಸರಕಾರ ಆಯ್ಕೆ ಮಾಡಿದೆ.  ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ‘ಅಕ್ರಮವನ್ನು ನೋಡಲಾರೆ ಕೇಳಲಾರೆ, ಆ ಕುರಿತು ಮಾತನಾಡಲಾರೆ’ ಎಂದು ಗಾಂಧೀಜಿಯವರ ಮೂರು ಮಂಗಗಳನ್ನೇ ವಿಡಂಬಿಸಿದ ಕೇಂದ್ರ ಚುನಾವಣಾ ಆಯೋಗವನ್ನು ತಮ್ಮ ಕಿರುಬೆರಳಲ್ಲಿ ಕುಣಿಸಿದವರಿಂದ ಇದಕ್ಕಿಂತ ಹೆಚ್ಚನ್ನು ನಿರೀಕ್ಷಿಸುವುದು ಪ್ರತಿಪಕ್ಷಗಳ, ಅದಕ್ಕಿಂತ ಹೆಚ್ಚಾಗಿ ಪ್ರಜ್ಞಾವಂತ ಜನತೆಯ ಮೂರ್ಖತನವಾದೀತು.

ಈ ತಿದ್ದುಪಡಿಯಲ್ಲಿ ಇರುವ ಮುಖ್ಯಾಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮಾಹಿತಿ ಆಯೋಗವನ್ನು ನಿಯಂತ್ರಿಸುವ ಸರಕಾರದ ಉದ್ದೇಶ ಸ್ಪಷ್ಟವಾಗಿ ಕಾಣುತ್ತದೆ. ಮೊದಲನೆಯದಾಗಿ ಈಗಿರುವ ಕಾನೂನಿನ ಪ್ರಕಾರ ಕೇಂದ್ರ ಮುಖ್ಯ ಆಯುಕ್ತರು ಮತ್ತು ಇತರ ಆಯುಕ್ತರು ಐದು ವರ್ಷಗಳ ಅವಧಿ ಅಥವಾ 65 ವರ್ಷಗಳ ವಯಸ್ಸು ಹೊಂದುವ ವರೆಗೆ ಇರುತ್ತದೆ. ಈಗಿನ ತಿದ್ದುಪಡಿಯಲ್ಲಿ ಅವರ ಭವಿಷ್ಯ ಸರಕಾರದ ಕೈಯಲ್ಲಿ ಇರುತ್ತದೆ. ಇನ್ನೊಂದು ಕೈಗೊಂಬೆ!

ನನ್ನ ಮಾತು ಕೇಳದಿದ್ದರೆ ಯಾವಾಗಲೂ ನಿಮಗೆ ಪಿಂಕ್ ಸ್ಲಿಪ್ ಕಳುಹಿಸಬಹುದು ಎಂಬ ಕಾರ್ಪೊರೇಟ್ ವಿಧಾನವನ್ನು ದೇಶದ ಅತ್ಯುನ್ನತ ಸ್ವಾಯತ್ತ ಸಂಸ್ಥೆಯೊಂದಕ್ಕೆ ಕಾನೂನು ಪ್ರಕಾರ ಅನ್ವಯಿಸಲಾಗುತ್ತಿದೆ. ಈ ‘ಪಿಂಕ್ ಸ್ಲಿಪ್’ ಎಂಬುದು ಬಹುರಾಷ್ಟ್ರೀಯ ಕಂಪೆನಿಗಳು ನಿಮ್ಮನ್ನು ಮರ್ಯಾದೆಯಾಗಿ ತೊಲಗು ಎಂದು ಹೇಳುವ ಸೂಕ್ಷ್ಮ ವಿಧಾನ ಬಂಡವಾಳಶಾಹಿ ವಿಧಾನ ಎಂಬುದು ಕನಿಷ್ಟ ಐಟಿ, ಬಿಟಿಗರಿಗೆ ಗೊತ್ತು. ಇನ್ನು ಸರಕಾರ ಇವರ ಭವಿಷ್ಯ ನಿಯಂತ್ರಿಸುತ್ತದೆ- ‘ಮಗನೇ ಮಾತು ಕೇಳು! ಇಲ್ಲ, ನಿನ್ನ ಬಾಲ ನನ್ನ ಕೈಯಲ್ಲಿದೆ. ಕಟ್ ಮಾಡುತ್ತೇನೆ’ ಎಂಬ ತಿದ್ದುಪಡಿ ಇದು. ಏಕೆಂದರೆ, ಈ ತಿದ್ದುಪಡಿ ಕೇಂದ ಮಾಹಿತಿ ಆಯುಕ್ತರ ಸಹಿತ ಎಲ್ಲಾ ಮಾಹಿತಿ ಆಯುಕ್ತರ ಸೇವಾವಧಿಯನ್ನು ನಿರ್ದಿಷ್ಟವಾಗಿ ಹೇಳಿಲ್ಲ. ಇದು ಬಂಡವಾಳಶಾಹಿ ಟ್ರಂಪ್ ಆಡಳಿತದ ಮೋದಿ ಕಾಪಿ. ಅದಾನಿ, ಅಂಬಾನಿ ಅಜೆಂಡಾ

ಇನ್ನೊಂದು ವಿಷಯ ಎಂದರೆ, ಮೂಲ ಕಾಯಿದೆಯಲ್ಲಿ ಚುನಾವಣಾ ಆಯುಕ್ತರಿಗೆ ಇರುವ ಸಂಭಾವನೆಯೇ ಮಾಹಿತಿ ಆಯುಕ್ತರಿಗೆ ಇರುತ್ತದೆ. ತಿದ್ದುಪಡಿ ಇದಕ್ಕೂ ಕತ್ತರಿ ಹಾಕುತ್ತದೆ. ಇವೆಲ್ಲವೂ ಕೇಂದ್ರ ಸರಕಾರದ ‘ವಿವೇಚನೆ’ಗೆ ಒಳಪಟ್ಟ ವಿಷಯ ಎಂದು ಹೇಳುತ್ತದೆ ಈ ತಿದ್ದುಪಡಿ. ಅಂದರೆ, ನಾನು ಹೇಳಿದ್ದೇ ಕಾನೂನು ಎನ್ನುವ ಧೋರಣೆ ಇದು.

ಮತ್ತೊಂದು ವಿಷಯವಿದೆ. ನಿವೃತ್ತ ಅಧಿಕಾರಿಯಾಗಿ- ನಿವೃತ್ತ ನ್ಯಾಯಾಧೀಶರೂ ಆಗಿದ್ದರೂ, ಒಂದು ವೇಳೆ ಮಾಹಿತಿ ಆಯುಕ್ತರಾದರೆ, ನಿವೃತ್ತಿ ವೇತನದ ಭಾಗವನ್ನು ಸಂಭಾವನೆಯಿಂದ ಕಡಿತಗೊಳಿಸಲಾಗುತ್ತದೆ. ಇದು ಧಣಿ-ಕೂಲಿಯಳಿನ ಸಂಬಂಧವನ್ನು ನೆನಪಿಸುವ ತಿದ್ದುಪಡಿ. ಅದು ಸರಕಾರವು ಮಾಹಿತಿ ಆಯೋಗಕ್ಕೆ ಮತ್ತು ಆಯುಕ್ತರಿಗೆ, ‘ಸಂಬಳ ನೀಡುವವರು ನಾವು, ಆದುದರಿಂದ ಎಚ್ಚರ’ ಎಂದು ಹೇಳುವ ರೀತಿಯಿದು.

ಈ ತಿದ್ದುಪಡಿ ವಿರುದ್ದ ಪ್ರತಿಪಕ್ಷಗಳು ಮಾತಾಡಿವೆ ನಿಜ. ಇದರ ವಿರುದ್ಧ ಹೋರಾಟ ಮಾಡಲೂ ಹಲವಾರು ಸಂಘಟನೆಗಳು ಸಿದ್ಧವಾಗಿವೆ ನಿಜ; ಹೋರಾಟದ ಸ್ವರೂಪ ಹೇಗೆ? ನಾವು ಇನ್ನಿಲ್ಲದಂತೆ ಈ ಕಾಯಿದೆ ಬಳಸಿ ಸುಳ್ಳಿನ ಮೇಲಿನ ಮಾನ ಕಾಪಾಡುತ್ತಿರುವ ಹುಸಿಹಸಿ ಸತ್ಯದ ಚಡ್ಡಿ ಜಾರಿಸಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...