Homeಅಂಕಣಗಳುನಿಮ್ಮ ಖಾತೆಗಳನ್ನ ಬುಟ್ಟುಕೊಟ್ರೆ ಸರಕಾರ ಉಳಿತದಂತೆ ಸಾ...

ನಿಮ್ಮ ಖಾತೆಗಳನ್ನ ಬುಟ್ಟುಕೊಟ್ರೆ ಸರಕಾರ ಉಳಿತದಂತೆ ಸಾ…

- Advertisement -
- Advertisement -

| ಯಾಹೂ |

ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವುಂಟಾದರೂ ಕೊಲ್ಲೂರು ಪ್ರಾಂತ್ಯದ ಮೂಕಾಂಬಿಕೆ ಸನ್ನಿಧಿಯಲ್ಲಿ ವಿಹರಿಸುತ್ತಿರುವ ರೇವಣ್ಣನವರನ್ನು ಮಾತನಾಡಿಸಿ, ಮನಸ್ಸನ್ನು ಹಗುರ ಮಾಡಿಕೊಳ್ಳಬೇಕೆನಿಸಿತಲ್ಲಾ, ಆ ಕೂಡಲೇ ಪೋನ್ ಮಾಡಲಾಗಿ ರಿಂಗಾಯ್ತು.

ರಿಂಗ್‍ಟೋನ್: “ಕೊಲ್ಲೂರು ಸಿರಿದೇವಿ ಮೂಕಾಂಬಿಕೇ, ನಿನ್ನ ದರುಶನಕೆ ಬಂದಿಹೆನು ಕಾಪಾಡಮ್ಮ.”
“ಹಲೋ ಯಾರ್ರಿ.”
“ನಾನು ಸರ್ ಯಾಹೂ.”
“ಏನ್ರಿ”
“ಎಲ್ಲಿದ್ದಿರಿ ಸಾರ್.”
“ನಾನೆಲ್ಲಿದ್ರೆ ನಿಮಗೇನ್ರಿ.”
“ಅಲ್ಲ ಸಾರ್. ರೇವಣ್ಣ ಪುಣ್ಯಕ್ಷೇತ್ರಗಳಿಗೆ ಭೇಟಿ ಕೊಡ್ತಾ ಅವುರೆ ಅಂದ್ರು, ಅದಕೆ ಫೋನ್ ಮಾಡಿದೆ ಸಾರ್.”
“ಕೊಲ್ಲೂರು ಮೂಕಾಂಬಿಕೆ, ಆನೆಗುಡ್ಡದ ಆಂಜನೇಯ, ಕಟೀಲು, ಧರ್ಮಸ್ಥಳ, ಇಲ್ಯಲ್ಲ ಹೋಗಿ ಬಂದೆ ಕಂಡ್ರಿ.”
“ದೇವರು ಸರಕಾರ ಉಳುಸ್ತವ ಸಾರ್.”
“ಉಳುಸ್ತವೆ ಕಂಡ್ರಿ.”
“ಹ್ಯಂಗೆ ಸಾರ್.”
“ಯಾರ್ಯಾರಿಗೆ ಮನಿಯಾಳು ಬುದ್ದಿ ಇರತದೊ ಅವುರಿಗ್ಯಲ್ಲ ವಳ್ಳೆ ಬುದ್ದಿ ಕೊಡು ಅಂತ ನಾವು ದೇವರ ಕೇಳಿಕೊಂಡು ಪೂಜೆ ಮಾಡುಸ್ತಿವಿ, ಹೋಮ ಮಾಡುಸ್ತಿವಿ.”
“ಆಗ ದೇವುರು ಅವುರಿಗ್ಯಲ್ಲ ವಳ್ಳೆ ಬುದ್ದಿ ಕೊಡ್ತದ ಸಾರ್.”
“ಕೊಡ್ತದೊ ಬುಡ್ತದೊ ನಾವು ಮಾಡೊ ಕ್ಯಲಸ ಮಾಡಬೇಕಲ್ವೇನ್ರಿ”
“ನಿಜ ಸಾರ್.”
“ಅದ್ಕೆ ನಾನು ಮದ್ಲು ಹೋಗಿ ಕೇಳಿಕಂಡಿದ್ದು ಮೈಸೂರು ಚಾಮುಂಡೇಶ್ವರಿಯ. ಅವುಳು ಮೈಸೂರು ಮಾರಾಜನ್ನ ಕಾಪಾಡಿದಂಗೆ ನಮ್ಮ ಕುಮಾರನ ಸರಕಾರನೂ ಉಳುಸ್ತಾಳೆ.”
“ಹೆಣ್ಣು ದೇವರಿಗೆ ಇಷ್ಟು ಗೌರವ ಕೊಡೋ ನೀವು ಆ ಸುಮಲತನ್ನ ಬೈದರಲ್ಲ ಸಾರ್.”
“ನಾನೆಲ್ಲಿ ಬೋದೆ. ವಟ್ಟಿಗೇನು ತಿಂತೀರಿ ನೀವು ನಿಮ್ಮಂಥೊರಿಂದ್ಲೆ ಹಿಂಗಾಗಿರದು.”
“ಸಾರಿ ಸರ್ ಬೈಲಿಲ್ಲ ಟೀಕೆ ಮಾಡಿದ್ರಿ.”
“ಟೀಕೆ ಎಲ್ಲಿ ಮಾಡಿದೇರೀ? ಪಾಪ ಗಂಡ ಸತ್ತು ತಿಂಗಳಾಗಿಲ್ಲ ಯಲಕ್ಷನ್ನಿಗೆ ಬಂದವುಳೆ ಅಂದೆ ಇದು ತೆಪ್ಪ.”
“ತೆಪ್ಪಲ್ಲ ಸಾರ್, ಅಕಸ್ಮಾತ್ ನೀವು ಅಂಬರೀಶನಂಗಾಗಿ…..”
“ಥೂ ಬುಡ್ತು ಅನ್ರಿ.”
“ಸಾರಿ ಸ, ನಿಮ್ಮ ನಂತ್ರ ಭವಾನಕ್ಕನಿಗೆ ಟಿಕೆಟ್ ಕೊಟ್ರೆ ನೀವು ಅಂಗನ್ನಕ್ಕಾಯ್ತದ.”
“ಭವಾನಿ ನಾನಿಲ್ದಾಗ ರಾಜಕಾರಣ ಮಾಡದಕ್ಕಿಂತ ಈಗ್ಲೆ ಅವುಳು ರಾಜಕಾರಣಿ ಕಂಡ್ರಿ, ಅವುಳ ಕ್ಯಲಸ ನಿಮಗೇನು ಗೊತ್ತು.”
“ಗೊತ್ತಾಗಲಿಲ್ಲ ಸಾರ್.”
“ಹಾಸನ ಜಿಲ್ಲೆ ಇಸಗೂಲುಡುಗ್ರ್ಯಲ್ಲ ಪಾಸಾಗ್ಯವೆ ಅಂಗೆ ಮಾಡಿದ್ಲು.”
“ರಿಯಲ್ಲಿ ಗ್ರೇಟ್ ಸಾ, ಅಂಗಿದ್ರೆ ಅವುರ ಎಮ್ಮೆಲ್ಸಿ ಮಾಡಿ ಶಿಕ್ಷಣ ಸಚಿವರನ್ನಾಗಿ ಮಾಡಿದ್ರೆ, ಇಡೀ ಕರ್ನಾಟಕದ ಸ್ಕೂಲು ಮಕ್ಕಳ್ಯಲ್ಲ ಪಾಸಾಯ್ತವಲ್ಲವ ಸಾ.”
“ಆಯ್ತವೆ ಸರಿ, ಆದ್ರೆ ಅವುಳ ಎಮ್ಮೆಲ್ಸಿ ಮಾಡಕ್ಕೆ ಬುಡ್ತಾರೇನ್ರಿ. ಈಗ್ಲೆ, ದ್ಯಾವೇಗೌಡ್ರು ಮಕ್ಕಳದೆ ಸರಕಾರ ಅಂತ ವಟ್ಟೆಕಿಚ್ಚು ಮಾಡೋರು ಆಗ ಬುಡ್ತಾರಾ.”
“ವಟ್ಟೆಕಿಚ್ಚು, ರಾಜಕಾರಣಿಗಳ ಹುಟ್ಟುಗುಣ ಸಾ. ವಟ್ಟೆಕಿಚ್ಚು, ಕರುಬುತನ, ಕಿಜ್ಜರತನ, ಸಣ್ಣತನ ಇವ್ಯಲ್ಲ ನಿಮ್ಮಂತವರ ಹುಟ್ಟುಗುಣ.”
“ನಮ್ಮಂತವುರು ಅಂತ ಯಾಕಂತೀರಿ ಹಲ್ಲಿಡುದು ಮಾತಾಡಿ.”
“ನೀವು ದೇವೇಗೌಡ್ರ ಮಕ್ಕಳಲ್ಲವ ಸಾರ್.”
“ಅದ್ಕೆ ಅಂಗಂದುಬುಡದಾ. ನಮ್ಮ ತಂದೆ ಈ ವಯಸ್ಸಿನಲ್ಲಿ ಎಷ್ಟು ಕಷ್ಟಪಡ್ತರೆ ಅಂತ ನಿಮಗೇನ್ರಿ ಗೊತ್ತು”
“ನಿಜ ಸಾ, ಗೌಡ್ರು ಅನ್ನ ನಿದ್ದೆ ಬುಟ್ಟು ಬರೀ ಮುದ್ದೆ ತಿನ್ನಕಂಡು ನೋವಿನ ಕಣ್ಣಲ್ಲಿ ಕುಂತಿರದ ನೋಡಿದ್ರೆ ವಟ್ಟೆ ಉರಿತದೆ. ಈ ಹಾಳು ಎಮ್ಮೆಲ್ಲೆಗಳು ಅದ ತಿಳಕಳ್ಳಿಲ್ಲ.”
“ತಿಳಕಳಕ್ಕೆ ಯಂಗಾಯ್ತದ್ರಿ, ಆ ಬಿಜೆಪಿಗಳು ಕೋಟಿ ಕೋಟಿ ಕೊಡ್ತೀವಿ ಅಂತ ಆಸೆ ತೋರಿಸಿಬುಟ್ಟವುರೆ, ಅದ್ಕೆ ಅಂಗಾಡದು.”
“ನೀವು ತೋರಬೇಕಾಗಿತ್ತು.”
“ಎಲ್ಲಿಂದ ತರದ್ರಿ ಅಷ್ಟೊಂದು ದುಡ್ಡ.”
“ಸರಕಾರದ ಖಜಾನೇನೆ ನಿಮ್ಮದಲವಾ ಸಾ.”
“ಸರಕಾರದ ಖಜಾನೆ ನಮ್ಮದು ಅಂತ ಈ ಮುಂಡೆ ಮಕ್ಕಳಿಗ್ಯಲ್ಲ ಕೇಳಿ ಕೇಳಿದಂಗೆ ಕೊಡಕ್ಕಾಯ್ತದೇನ್ರಿ.”
“ಅದ್ಕೆ ಅಲವ ಸಾ, ಬಂಡಾಯ.”
“ಬಂಡಾಯ ಏಳ್ಳಿಬುಡಿ, ಕುಮಾರನ ಸರಕಾರವ ಏನು ಮಾಡಕ್ಕಾಗದಿಲ್ಲ. ನಾನೀಗಾಗ್ಲೆ ಯಲ್ಲಾ ದೇವರನೂ ನೋಡಿ ಪೂಜೆ ಮಾಡಿ ಬಂದಿದ್ದಿನಿ. ನಮ್ಮ ಕಡೆ ದೇವುರಿದಾನೆ.”
“ಒಂದು ಡವುಟು ಸಾರ್.”
“ಏನ್ರಿ ಅದು.”
“ನೀವು ಈಗಾಗ್ಲೆ ಒಂದು ಡಜನ್ ದೇವುರಿಗೆ ನಿಮ್ಮ ಕಷ್ಟ ಹೇಳಕಂಡಿದ್ದಿರಿ, ಇದರಲ್ಲಿ ಯಾವ ದೇವರು ನಿಮ್ಮ ಕೈ ಹಿಡಿತವೆ.”
“ಯಲ್ಲಾ ದೇವರೂ ಹಿಡಿತವೆ.”
“ಹಿಡಿಲಿಲ್ಲ ಅಂದ್ರೆ.”
“ಹಿಡಿದೇ ಹಿಡಿತವೆ ಕಂಡ್ರಿ. ನಮ್ಮ ತಂದೆ ಕನಕಪುರ, ಹೊಳೆನರಸೀಪುರದಲ್ಲಿ ಸೋತು, ಮನಿಗೆ ಬಂದಾಗ ಸುಮ್ಮನೆ ಕೂತಗಳಿಲ್ಲ. ದೇವರ ಪೂಜೆ ಮಾಡಿದ್ರು. ಜಗದ್ಗುರುಗಳ ಕಾಲಿಗೆ ಬಿದ್ರು. ಮುಂದೇನಾಯ್ತು? ಪ್ರಧಾನಿಯಾದ್ರು! ಇದ ನಂಬಕ್ಕಾಯ್ತದೇನ್ರಿ, ಅದ್ಕೆ ನಾವು ಯಾವತ್ತೂ ದೇವರ ಪೂಜೆ, ಪುನಸ್ಕಾರ ಬುಡದಿಲ್ಲ. ಕುಮಾರನ್ನ ಚಾಮುಂಡೇಶ್ವರಿ ಕೈ ಹಿಡಿದೇ ಹಿಡಿತಳೆ.”
“ನಮಗಿರೋ ಮಾಹಿತಿ ಪ್ರಕಾರ ಈ ಒಂದು ವರ್ಷ ನಿಮ್ಮ ಕುಟುಂಬ ಇಡೀ ಸರಕಾರನ ತಿಂದು ಕುಂತದಂತೆ? ಯಾವ ಯಮ್ಮೆಲ್ಲೆಗೂ ಅನುದಾನ ಇಲವಂತೆ.”
“ಅದ್ಯಾವನ್ರಿ ಅಂಗಂದೋನು? ಧರ್ಮಸ್ಥಳಕ್ಕೆ ಬಂದು ಸತ್ಯ ಮಾಡ್ಳಿ, ಕರಕೊಂಡು ಬನ್ರಿ ಅವುರ.”
“ಸರಕಾರ ಉಳಿಬೇಕಾದ್ರೆ ಒಂದು ಸಿಂಪಲ್ ತೀರ್ಮಾನ ಇದ್ದತ್ತಂತೆ ಸಾರ್.”
“ಅದ್ಯಾವುದ್ರಿ ಸಿಂಪಲ್ಲು ತೀರ್ಮಾನ? ಅಂತದು ಇದ್ದತೆ?.”
“ನಿಮ್ಮ ಕೈಲಿ ಅದೆ ಸಾರ್.”
“ನನ್ನ ಕೈಲಿ ನಿಂಬೆಹಣ್ಣವೆ ಕಂಡ್ರಿ.”
“ಆ ಐದು ನಿಂಬೆ ಹಣ್ಣ ನಿಮ್ಮ ಸರಕಾರಕ್ಕೆ ಸಪೋಲ್ಟು ಮಾಡಿರೋ ಸಮರ್ಥರಾದ ಐದು ಜನ ಎಂಎಲ್‍ಎಗಳ ಕೈಗೆ ಕೊಟ್ಟು, ನಿಮ್ಮ ಖಾತೆ, ಕುಮಾರಣ್ಣನತ್ರ ಇರೋ ಖಾತೆ ಹಂಚಿದ್ರೆ, ಸರಕಾರ ಇನ್ನ ನಾಕೊರ್ಸ ಇರತದೆ ಸಾ.”
“ಇದು ಸಿಂಪಲ್ಲು ತೀರ್ಮಾನ ಏನ್ರಿ. ಯಾವನ್ರಿ ನಿಮಗೆ ಇಂಥಾ ಮನಿಯಾಳ ಬುದ್ದಿ ಹೇಳಿಕೊಟ್ಟೋನು. ಸರಕಾರ ಬಿದ್ದೋಗಿ ನಾವು ವಿರೋಧ ಪಕ್ಷದಲ್ಲಿ ಕುತಗಂಡ್ರೂ ಇಂತ ಕ್ಯಲಸ ಮಾಡಕ್ಕಾಯ್ತದೇನ್ರಿ.”
“ಅಂಗಾದ್ರೆ ಸರಕಾರನ ನಿಮ್ಮ ಯಾವ ದೇವರೂ ಉಳಿಸಕ್ಕಾಗಿದಲ್ಲ ಸಾ.”
“ಹೋಗ್ಲಿ ಬುಡ್ರಿ.”
“ಮುಂದಿನ ಚುನಾವಣೆಗೆ ದುಡ್ಡಾಯ್ತಲ್ಲ ಬುಡ್ರಿ.”
“ಏನಂದ್ರಿ.”

“ಥೂತ್ತೇರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...