Homeಸಿನಿಮಾಅಮ್ಮನ ಪ್ರೀತಿಯಲ್ಲಿ ಬದುಕಿನ ಬಿಚ್ಚುನೋಟ....

ಅಮ್ಮನ ಪ್ರೀತಿಯಲ್ಲಿ ಬದುಕಿನ ಬಿಚ್ಚುನೋಟ….

- Advertisement -
- Advertisement -
ಕನ್ನಡಿಗರು ಭಾವನಾ ಜೀವಿಗಳು, ಕರ್ನಾಟಕದಲ್ಲಿ ಭಾವನೆಗಳಿಗೆ ಬೆಲೆ ಜಾಸ್ತಿ ಎಂಬ ಮಾತುಗಳು ಚಿತ್ರರಂಗದಲ್ಲಿ ಬಹಳ ಕಾಲದಿಂದಲೂ ಕೇಳಿಬರುತ್ತಿದೆ. ಅಂತೆಯೇ ಕೆಲವು ಸಿನಿಮಾಗಳಲ್ಲಿ ಕನ್ನಡಿಗರು ಸೆಂಟಿಮೆಂಟಲ್ ಫೂಲ್ಸ್ ಎಂದೂ ಸಹ ನಯವಾಗಿ ಬೈಸಿಕೊಂಡಿರುವುದೂ ಇದೆ. ಕನ್ನಡ ಚಿತ್ರರಂಗವು ಸೆಂಟಿಮೆಂಟ್‍ಗೆ ಹೆಚ್ಚು ಹೊತ್ತು ಕೊಡುತ್ತಾ ಬಂದಿದೆ, ಸಂಬಂಧಗಳ ಭಾವನೆಗಳನ್ನಿಟ್ಟುಕೊಂಡು ಮಾಡಿದ ಸಿನಿಮಾಗಳು ಫೈಲ್ ಆಗಿದ್ದೇ ಇಲ್ಲ.
ಅದರಲ್ಲೂ ತಾಯಿಯ ಪ್ರೀತಿ ವಾತ್ಸಲ್ಯಕ್ಕೆ ಬೆಲೆ ಕಟ್ಟಲಾಗದಷ್ಟು ಅನುಕಂಪ. ಅಮ್ಮ ಎಂದರೆ ಸ್ಥೈರ್ಯ, ಅಮ್ಮಾ ಎಂದರೆ ಅನುಕಂಪ, ತಾಯಿಯೇ ಸ್ಫೂರ್ತಿ ಎಂಬ ಹೆಗ್ಗಳಿಕೆ ಕನ್ನಡಿಗರದು. ಹೆತ್ತವಳು ಕಣ್ಣೆದುರೇ ಮರೆಯಾಗುತ್ತಾಳೆಂದಾಗ ಅವಳನ್ನು ಉಳಿಸಿಕೊಳ್ಳಲು ಮಗನ ಒದ್ದಾಟ ಹಾಗೂ ತಳಮಳವನ್ನು ಕಥೆಯನ್ನಾಗಿಟ್ಟುಕೊಂಡು ನಿರ್ದೇಶಕ ಕೆ.ಎಂ.ಚೈತನ್ಯ ‘ಅಮ್ಮ ಐ ಲವ್ ಯೂ’ ಸಿನಿಮಾ ಮಾಡಿದ್ದಾರೆ.
ಪ್ರೀತಿಯ ಪ್ರಜ್ಞೆಯನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಚಿತ್ರ ಅಮ್ಮ ಮಗನ ಸೆಂಟಿಮೆಂಟ್ ಅಷ್ಟೇ ಅಲ್ಲದೆ ಸಮಾಜದ ಹಲವು ಸಂಬಂಧಗಳನ್ನು ಬೆಸೆಯುವ ಮಾನವೀಯ ಮೌಲ್ಯಗಳನ್ನು ಒಳಗೊಂಡಿದೆ. ಭಿಕ್ಷುಕರ ಬದುಕಿನ ತೊಳಲಾಟದೊಂದಿಗೆ ಬದುಕಿನ ಅರ್ಥವನ್ನು ಕಟ್ಟಿಕೊಟ್ಟಿದೆ.
ಸಿದ್ದಾರ್ಥ್ ತನ್ನ ಹೆತ್ತ ತಾಯಿ ಸಾವು ಬದುಕಿನ ನಡುವೆ ಹೋರಾಟ ಮಾಡುವಾಗ ಅವಳನ್ನು ಉಳಿಸಿಕೊಳ್ಳಲು ಹಲವು ಆಸ್ಪತ್ರೆಗಳನ್ನು ಸುತ್ತಿದರು ತಾಯಿ ಗುಣಮುಖಳಾಗದಿದ್ದ ಚಿಂತೆಯಲ್ಲಿದ್ದವನು ಒಬ್ಬ ಸನ್ಯಾಸಿಯ ಮಾತು ಕೇಳಿ ತನ್ನ ವೈಚಾರಿಕತೆಯನ್ನು ಬದಿಗೊತ್ತಿ ಶ್ರೀಮಂತಿಯ ವೇಷ ಮರೆಸಿ ಭಿಕ್ಷುಕನ ವೇಷ ಧರಿಸಿ ಭಿಕ್ಷಾಟನೆಯ ಅಜ್ಞಾತವಾಸಕ್ಕೆ ತೆರಳುತ್ತಾನೆ, ಇಲ್ಲಿ ತಾಯಿಯ ಮೇಲಿನ ಮಮತೆ ಔಷಧಿಗಳಿಂದ ಸಾಧ್ಯವಾಗದ್ದು ಹರಕೆಯಿಂದ ಸಾಧ್ಯವೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಲಾರದು. ಇಂತಹ ಸಂದರ್ಭಗಳು ಜನರು ಮೌಢ್ಯದ ಮೊರೆಹೊಗುವ ಪರಿಸ್ಥಿತಿಗೆ ಕನ್ನಡಿ ಇಟ್ಟಂತೆ ತಿಳಿಸುತ್ತವೆ.
ಆ ದಿನಗಳಲ್ಲಿ ಭಿಕ್ಷುಕರ ನೋವು-ನಲಿವು, ಅವರು ಎದುರಿಸುವ ಮಾನಸಿಕ ದೈಹಿಕ ಹಿಂಸೆಗಳನ್ನು ಬಿಡಿಸಿಟ್ಟಿರುವ ಚಿತ್ರ, ಭಿಕ್ಷುಕರೆಂದರೆ ಅಸಹ್ಯ ಪಡುವ ಜನರು ಹಾಗೂ ಕೆಲವು ಸಿನಿಮಾಗಳನ್ನು ನೋಡಿ ಭಿಕ್ಷುಕರು ಭಾರಿ ಸಂಪಾದಿಸುತ್ತಾರೆಂದು ಅವರನ್ನು ದೂಷಿಸುವ ಜನರಿಗೆ ಭಿಕ್ಷುಕರನ್ನು ಕಾಮೆಡಿ ಸೀನ್‍ಗಳಾಗಿ ತೋರುವ ಬೇರೆಲ್ಲ ಸಿನಿಮಾಗಳಿಗಿಂತ ಭಿಕ್ಷುಕರ ಬದುಕಿನ ನೈಜತೆಯನ್ನು ಚಿತ್ರಿಸಿದೆ. ಭಿಕ್ಷುಕರೂ ಮನುಷ್ಯರೇ ಅವರಿಗೂ ಒಂದು ಬದುಕಿದೆ, ಉಳ್ಳವರ ಮಧ್ಯೆ ಅವರ ದೌರ್ಜನ್ಯಗಳಿಂದ ತೊಳಲಾಡುವ ಇಲ್ಲದವರ ಬದುಕಿನ ಪ್ರತಿಬಿಂಬವಾಗಿ ಭಿಕ್ಷುಕರ ಬದುಕು ಕಾಣದೆ ಇರಲಾರದು.
ಮಾಲೀಕನ ಕೈ ಕೆಳಗೆ ದುಡಿದು ಕಷ್ಟದ ದಿನಗಳಲ್ಲಿ ಎದುರಿಸಿ ಉದ್ಯಮಿಯಾಗಿ ಬೆಳೆದುಬಂದ ಸಿದ್ದಾರ್ಥನ ತಾಯಿ, ಕಂಪನಿಯ ಮಾಲಕಿಯಾಗಿ, ದುಡಿಯುವ ಜನರ ಸ್ನೇಹಿತೆಯಾಗಿದ್ದು, ನೌಕರರನ್ನು ರೋಬೋಟ್‍ಗಳಂತೆ ದುಡಿಸಿಕೊಳ್ಳುವ ವ್ಯವಸ್ಥೆಯೊಳಗೆ ಕಷ್ಟದ ಅರಿವಿರುವ ತಾಯಿ ತನ್ನ ಕಂಪನಿಯಲ್ಲಿ ದುಡಿಯುವ ಶ್ರಮಿಕರ ಹಿತವನ್ನೂ ಕಾಯುವ, ಅವರ ಬದುಕಿನಲ್ಲಿ ನೆರವಾಗುತ್ತಾ ಎಲ್ಲರನ್ನೂ ನಿಸ್ವಾರ್ಥವಾಗಿ ಒಳಗೊಳ್ಳುವಳು, ಈ ಒಳಗೊಳ್ಳುವಿಕೆ ಇಲ್ಲದವರ ಶ್ರಮದಿಂದ ಉಳ್ಳವರು ಕಟ್ಟಿಕೊಳ್ಳುವ ಮೊಹಲ್ಲಗಳ ಮಧ್ಯೆ ಸದೃಢ ಸಮಾಜದಲ್ಲಿ ದುಡಿಯುವ ಕೈಗಳಿಸಿ ತಮ್ಮ ಶ್ರಮಕ್ಕೆ ಸಿಗಬೇಕಾದ ಪಾಲಿನ ಸಂಕೇತವಾಗಿದೆ. ತಮ್ಮ ದುಡಿವ ಕೈಗಳಿಗೆ ಕೆಲಸಕೊಟ್ಟ ಅವಳ ಉಳಿವಿಗಾಗಿ ಪ್ರಾರ್ಥಿಸುವ ಸಿಬ್ಬಂದಿಗಳು, ಮಾಲಿಕ ಮತ್ತು ಶ್ರಮಿಕರ ಹೊಂದಾಣಿಕೆಗೆ ಸ್ಪೂರ್ತಿ ತುಂಬುತ್ತದೆ.
ಮತ್ತೊಂದೆಡೆ ಇಂದಿನ ಯುವಜನರು ಸಮಾಜದಲ್ಲಿ ಮಾಡಬೇಕಾದ ಸಹಾಯಾಸ್ತದ ಕನಿಷ್ಟ ಮೌಲ್ಯವನ್ನು ತೋರಿಸುವ ನಾಯಕಿಯ ಪಾತ್ರ, ತಾಯಿಗಾಗಿ ಭಿಕ್ಷೆ ಬೇಡುವ ಪ್ರೇಮಿಯ ಪ್ರೀತಿ ಬಯಸುವ ಪ್ರೇಯಸಿ. ಈ ಎಲ್ಲಾ ಪಾತ್ರಗಳೂ ಜೀವನ ಸಂಗ್ರಾಮದ ಹಲವು ದಿಕ್ಕುಗಳನ್ನು ತೋರುತ್ತವೆ.

ಪ್ರೀತಿ, ಮಮತೆಯ ಹುಡುಕಾಟದೊಂದಿಗೆ ಸಾಗುವ ಚಿತ್ರ ನೋಡುಗರ ಮನತಟ್ಟುವ ಕಥಾಹಂದರವನ್ನು ಒಳಗೊಂಡಿದೆ. ಆದರೆ ಇಂತಹ ಕತೆಯನ್ನು ತೆರೆಯ ಮೇಲೆ ನಿರೂಪಿಸುವಾಗ ಪ್ರೇಕ್ಷಕರ ಮನಸಲ್ಲಿ ಕ್ಯೂರಿಯಾಸಿಟಿಯನ್ನಾಗಲಿ ಅಥವಾ ನೋಡುಗರ ಗಮನ ಮತ್ತೊಂದೆಡೆಗೆ ಜಾರದಂತೆ ತನ್ನತ್ತ ಸೆಳೆದಿಟ್ಟುಕೊಳ್ಳುವಲ್ಲಿ ತಂಡ ಕೊಂಚ ಎಡವಿದೆಯಾದರೂ, ಭಿಕ್ಷುಕನ ಪಾತ್ರದಲ್ಲಿ ಚಿರು, ಹಾಗೂ ನಾಯಕಿಯಾಗಿ ಹೊಸ ನಟಿ ನಿಶ್ಚಿಕಾ ಸೌಂದರ್ಯ ಉತ್ತಮ ಅಭಿನಯ ನೀಡಿದ್ದಾರೆ.


ಕಳೆದುಹೋದ ಖಳನಾಯಕ

ವಿಷ್ಣುವರ್ಧನ್, ಅಂಬರೀಶ್, ಶಿವರಾಜ್‍ಕುಮಾರ್‍ರಂಥಹ ಕನ್ನಡ ಚಿತ್ರರಂಗದ ದಿಗ್ಗಜರೊಂದಿಗೆ ಖಳನಾಯಕನಾಗಿ ಅಭಿನಯಿಸುತ್ತಿದ್ದ ಧೀಮಂತ ಕಲಾವಿದ, ಖ್ಯಾತ ನಾಟಕಕಾರ ಸದಾಶಿವ ಸಾಲ್ಯನ್ ಇಹಲೋಕ ತ್ಯಜಿಸಿದ್ದಾರೆ. 1988ರಲ್ಲಿ ತುಳು ಭಾಷೆಯ ‘ಭಾಗ್ಯವಂತೆದಿ” ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಸಾಲ್ಯನ್ ಕನ್ನಡ, ತುಳು, ಹಿಂದಿ, ಮರಾಠಿ ಭಾಷೆಯಲ್ಲಿ ಸುಮಾರು 50 ಚಿತ್ರಗಳಲ್ಲಿ ಅಭಿನಯಿಸಿದ್ದರು, 500ಕ್ಕೂ ಹೆಚ್ಚು ರಂಗ ಪ್ರಯೋಗಗಳಲ್ಲ್ಲಿ ಅಭಿನಯಿಸಿದ ಮುಂಬೈ-ಕರ್ನಾಟಕದ ಏಕೈಕ ರಂಗಕಲಾವಿದನೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಮುಂಬೈನಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿಯೂ ಆಗಿದ್ದ ಇವರು 2004ಅಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾಲಿನ ಸ್ವಾಧಿನ ಕಳೆದುಕೊಂಡು ಕಷ್ಟದ ಜೀವನ ಸಾಗಿಸುತ್ತಿದ್ದವರು.


ಕುಂಬಳಕಾಯಿ ಕಳ್ಳ ಕೋಕಿಲ?
ಸಿನಿಮಾ ರಂಗದ ಸ್ಟಾರ್‍ಗಳು, ನಿರ್ದೇಶಕರು, ನಿರ್ಮಾಪಕರಿಗಾಗಲೀ ಭೂಗತ ಪಾತಕಿಗಳೊಂದಿಗಿನ ಒಡನಾಟ ಮಾಮೂಲಿಯಾದದ್ದು. ಎಷ್ಟೋ ನಿರ್ಮಾಪಕರೇ ರೌಡಿ ಶೀಟರ್ ಬ್ಯಾಗ್ರೌಂಡ್ ಹೊಂದಿರುತ್ತಾರೆ. ಇದಕ್ಕೆ ಕನ್ನಡ ಚಿತ್ರರಂಗವೂ ಹೊರತಲ್ಲ. ಅಂತೆಯೇ ಬೆಂಗಳೂರಿನ ಕುಖ್ಯಾತ ರೌಡಿ ಶೀಟರ್ ಸೈಕಲ್ ರವಿಯನ್ನು ಬಹಳ ದಿನಗಳಿಂದ ಹುಡುಕುತ್ತಿದ್ದ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆಯಲ್ಲಿ ರೌಡಿ ರವಿ ಜತೆ ಹಾಸ್ಯನಟ ಸಾಧುಕೋಕಿಲ ಒಡನಾಟ ಇಟ್ಟುಕೊಂಡಿದ್ದರೆಂದು ಯಾರೋ ಹಬ್ಬಿಸಿದ
ಗಾಳಿಸುದ್ದಿಯನ್ನು ಕೇಳಿ ಹೆದರಿದ ಸಾಧು ಸಿಸಿಬಿ ಕಚೇರಿಗೆ ದೌಡಾಯಿಸಿದ್ದಾರೆ. ನನಗೂ ರೌಡಿಗೂ ಯಾವ ಸಂಬಂಧವೂ ಇಲ್ಲ, ಈ ಪ್ರಕರಣದಲ್ಲಿ ನನ್ನ ಹೆಸರು ಬರುತ್ತಿದೆಯಂತೆ ಎಂದು ಅಧಿಕಾರಿಯ ಎದುರು ಕುಂಯ್ಯೋಮರ್ರೋ ಎಂದರಂತೆ. ಅದಕ್ಕೆ ಆ ಅಧಿಕಾರಿ ನಿನಗೆ ರೌಡಿಯ ಜತೆ ಒಡನಾಟವಿದೆ ಎಂದು ನಾವು ಎಲ್ಲಿಯೂ ಹೇಳಿಲ್ಲ, ಹೇಳೋಕೆ ಯಾವ ಪುರಾವೆಯೂ ಇಲ್ಲ, ‘ಕುಂಬಳಕಾಯಿ ಕಳ್ಳ ಅಂದ್ರೆ ನೀನ್ಯಾಕೆ ಹೆಗಲು ಮುಟ್ಟಿ ನೋಡ್ಕೋತೀಯಾ’, ಹಾಗೇನಾದರೂ ಇದ್ದರೆ ನಾವೆ ಕರೆಯುತ್ತಿದ್ದೆವು ಎಂದು ಮಂಗಳಾರತಿ ಮಾಡಿ ಕಳಿಸಿದ್ದಾರೆ. ಸಾಧುವಿನ ಈ ಅತಿಗಾಬರಿಯ ವರ್ತನೆ ಅದ್ಯಾವುದೋ ಕೆಟ್ಟ ಕ್ಷಣಗಳ ಮುನ್ಸೂಚನೆಯಂತೆ ಕಾಣುತ್ತಿದೆ. ಹಾಗೇನಾದರೂ ಸಾಧು ಇಂತಹ ಕ್ರಿಮಿನಲ್‍ಗಳ ಒಡನಾಟ ಇಟ್ಟುಕೊಂಡಿದ್ದರೆ, ಅಂತಹವುಗಳನ್ನು ಕತ್ತರಿಸಿಕೊಂಡು ಹೊರಬರಲಿ. ಯಾಕೆಂದರೆ, ಅವರ ಪ್ರತಿಭೆಗೆ ಈ ಬಗೆಯ ಮಸಿ ಹತ್ತಿಕೊಂಡು ಮಂಕಾಗುವುದು ಯಾರಿಗೂ ಇಷ್ಟವಿಲ್ಲ.
– ಸೋಮಶೇಖರ್ ಚಲ್ಯ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...