Homeಎಲೆಮರೆಅಲೆಮಾರಿ ಮೇಡಂ: ಶಾರದ

ಅಲೆಮಾರಿ ಮೇಡಂ: ಶಾರದ

- Advertisement -
- Advertisement -

ಬೀದರಿನ ವಾರ್ತಾಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಸಮಾಜಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಜಿಲ್ಲಾಧಿಕಾರಿಗಳ ಕಚೇರಿ ಮುಂತಾದ ಇಲಾಖೆಗಳ ಅಧಿಕಾರಿಗಳ ಬಳಿ ಮತ್ತು ಬೀದರ್ ಜಿಲ್ಲೆಯ ಯಾವುದೇ ಬುಡಕಟ್ಟು ಅಲೆಮಾರಿ ಜನರ ಬಳಿ `ಅಲೆಮಾರಿ ಮೇಡಂ’ ಯಾರು ಎಂದು ಕೇಳಿದರೆ ಅವರುಗಳು ಶಾರದ ಅವರ ಬಗ್ಗೆ ಹೇಳುತ್ತಾರೆ. ಕೆಲವು ಅಧಿಕಾರಿಗಳು ಮುಖ ಗಂಟಿಕ್ಕಿ ಚೂರು ಸಿಡುಕಿನಿಂದಲೆ ಹೇಳಿದರೆ, ಅಲೆಮಾರಿ ಬುಡಕಟ್ಟಿನ ಜನರು ಮುಖ ಅರಳಿಸಿ `ಓಹ್ ನಮ್ ಮೇಡಂ ಸರ್, ಗೊತ್ತವ್ರು, ಅವರ ನಂಬರ್.. ನಮ್ಮ ಆಧಾರ ಕಾರ್ಡ್ ಮೇಲಿದೆ’ ಎಂದು ನಿಮಗೆ ಶಾರದ ಅವರ ಫೋನ್ ನಂಬರ್ ಕೊಡುತ್ತಾರೆ.

ಹೀಗೆ ಬೀದರ್ ಜಿಲ್ಲೆಯಾದ್ಯಂತ ಅಲೆಮಾರಿ ಮೇಡಂ ಎಂದೇ ಗುರುತಿಸಲ್ಪಡುವ ಶಾರದ ಒಬ್ಬ ಸಾಮಾನ್ಯ ಪದವೀಧರ ಗೃಹಿಣಿ. ಅರೆ ಶಾರದ ಅವರನ್ನು ಯಾಕೆ ಅಲೆಮಾರಿ ಮೇಡಂ ಎಂದು ಕರೆಯುತ್ತಾರೆ..? ಏಕೆಂದರೆ 2013 ರಿಂದಲೂ ಬುಡಕಟ್ಟು ಅಲೆಮಾರಿ ಮಕ್ಕಳಿಗೆ ಅಕ್ಷರದ ಅರಿವು ಮೂಡಿಸಲು, ಅವರಿಗೊಂದು ಗುರುತು ಕೊಡಿಸಲು, ನೆಲೆ ಒದಗಿಸಲು, ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಯಾವುದೇ ಅಧಿಕಾರವಿಲ್ಲದೆ, ಲಾಭನಷ್ಟದ ಲೆಕ್ಕಾಚಾರಗಳಿಲ್ಲದೆ, ಉತ್ತಮ ಆರ್ಥಿಕ ಸ್ಥಿತಿಯೂ ಇಲ್ಲದೆ, ಮೇಲ್ಜಾತಿಯೂ ಅಲ್ಲದ ಪರಿಶಿಷ್ಟ ಜಾತಿಯ ಛಲವಾದಿ ಸಮುದಾಯಕ್ಕೆ ಸೇರಿದ, ಎಂ.ಎಸ್.ಡಬ್ಲು ಬಿಇಡಿ ಮಾಡಿದ ಒಬ್ಬ ಸಾಮಾನ್ಯ ಮಹಿಳೆಗೆ ಬುಡಕಟ್ಟು ಅಲೆಮಾರಿಗಳ ಒಳಿತಿಗಾಗಿ ದುಡಿವ ಮನಸ್ಸು ಹದಗೊಂಡದ್ದು ಹೇಗೆ ಎಂದು ನೋಡಿದರೆ, ಅದೊಂದು ಕುತೂಹಲಕರ ಸಂಗತಿ.

ರಾಯಚೂರು ಜಿಲ್ಲೆ ಮಾನವಿ ತಾಲೂಕಿನ ಬಾಗಲವಾಡ ಹಳ್ಳಿಯ ಶಾರದ ಮನೆಯ ಬಡತನದ ಕಾರಣ ಹೈಸ್ಕೂಲಿನಿಂದಲೂ ಮಾನವಿ, ರಾಯಚೂರಿನ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲುಗಳಲ್ಲಿ ಓದುತ್ತಾರೆ. ಹೀಗೆ ಓದುವಾಗ ತಮ್ಮ ಹಾಸ್ಟೆಲುಗಳ ಹೊರವಲಯದಲ್ಲಿ ಆಗಾಗ ಅಲೆಮಾರಿಗಳು ಬಟ್ಟೆಯ ಟೆಂಟ್ ಹಾಕಿ ವಾಸಿಸುತ್ತಿದ್ದರು. ಹಿರಿಯರು ಚಿಕ್ಕಪುಟ್ಟ ವ್ಯಾಪಾರ, ಬೇಟೆ, ಭಿಕ್ಷೆ ಅಂತೆಲ್ಲಾ ನಗರ ಮತ್ತು ಕಾಡು ಪ್ರವೇಶಿಸಿದರೆ, ಇವರ ಮಕ್ಕಳು ಬಟ್ಟೆಯಿಲ್ಲದೆ ಸ್ನಾನವಿಲ್ಲದೆ ಕೆದರಿದ ಕೂದಲಿನಲ್ಲಿ ಟೆಂಟಿನ ಮುಂದೆ ಮಣ್ಣಲ್ಲಿ ಆಟವಾಡುತ್ತಿದ್ದರು. ಶಾರದ ಹಾಸ್ಟೆಲ್ ಕಿಟಕಿಗಳಿಂದ ಈ ಮಕ್ಕಳನ್ನು ನೋಡುತ್ತಿದ್ದಾಗ ಅರೆ ಇವರ್ಯಾಕೆ ಹೀಗೆ ? ಇವರಿಗೆ ನಮ್ಮಂತೆ ಮನೆಗಳೇಕಿಲ್ಲ? ಎನ್ನುವ ಪ್ರಶ್ನೆಯೊಂದು ಮಿಂಚಿ ಮರೆಯಾಗುತ್ತಿತ್ತು. ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಆ ಸ್ಥಳದಿಂದ ಮಾಯವಾಗಿ ಎಷ್ಟೋ ದಿನಗಳ ಕಾಲ ಅವರು ಇತ್ತ ತಲೆ ಹಾಕುತ್ತಲೂ ಇರಲಿಲ್ಲ. ಒಮ್ಮೊಮ್ಮೆ ದಿಢೀರ್ ಟೆಂಟ್‍ಗಳು ಪ್ರತ್ಯಕ್ಷವಾಗುತ್ತಿದ್ದವು. ಈ ಕಣ್ಣೋಟದ ಅಲೆಮಾರಿಗಳ ಚಿತ್ರ ಶಾರದ ಅವರಲ್ಲಿ ಸುಪ್ತವಾಗಿತ್ತು.

ಬಿ.ಎ. ಎರಡನೆ ವರ್ಷ ಕಲಿಯುವಾಗಲೆ ಶಾರದ 2011 ರಲ್ಲಿ ಮದುವೆಯಾಗಿ ಬೀದರಿಗೆ ಬರುತ್ತಾರೆ. ಗಂಡ ಮತ್ತು ಮನೆಯವರ ಬೆಂಬಲದಿಂದ ಅರ್ಧಕ್ಕೆ ನಿಂತ ಓದನ್ನು ಮುಂದುವರಿಸುತ್ತಾರೆ. ಬಿ.ಎ., ಎಮ್.ಎಸ್.ಡಬ್ಲು, ಬಿಎಡ್ ಮಾಡುತ್ತಾರೆ. ಎಮ್.ಎಸ್.ಡಬ್ಲು ಮಾಡುವಾಗ ಸಮಾಜಸೇವೆಯ ಬಗ್ಗೆ ಗಮನ ಹರಿಯುತ್ತದೆ. ಹೈಸ್ಕೂಲಲ್ಲಿ ಕಂಡ ಅಲೆಮಾರಿಗಳ ಚಿತ್ರಗಳು ತರಗತಿಗಳಲ್ಲಿ ಮರುಕಳಿಸತೊಡಗುತ್ತವೆ. ಹೀಗೆ ಬಿಎಡ್ ಮುಗಿಸಿ ಬೀದರಿನ ಸೆಂಟ್ ಜೋಸೆಫ್ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರುತ್ತಾರೆ. ಶಾಲೆಗೆ ಹೋಗಿ ಬಂದು ಮಾಡುವ ಮಾರ್ಗಮಧ್ಯದಲ್ಲಿ ಒಮ್ಮೆ ಅರ್ಧಮುಚ್ಚಿದ ಬಾವಿಯೊಂದರಲ್ಲಿ ಅಲೆಮಾರಿ ಮಗು ಆಯತಪ್ಪಿ ಬಿದ್ದು ಅಳುತ್ತಿರುತ್ತದೆ. ಇದನ್ನು ನೋಡಿ ಶಾರದ ಆ ಮಗುವನ್ನು ಮೇಲಕ್ಕೆತ್ತಿ ಅವರ ತಂದೆತಾಯಿಗೆ ತಲುಪಿಸುತ್ತಾರೆ. ಆಗ ಅಲೆಮಾರಿಗಳ ಪರಿಚಯವಾಗುತ್ತದೆ.

ಸೋಷಿಯಲ್ ವರ್ಕ್ ಎನ್ನುವ ಕೆಲಸದಲ್ಲಿ ಡಾನ್‍ಬಾಸ್ಕೋ ಸಂಸ್ಥೆಯಲ್ಲಿ ಕೆಲದಿನ ಕೆಲಸ ಮಾಡುತ್ತಾರೆ. ಆಗ ಮಗುವಿಗೆ ಹೆರಿಗೆಯಾದ ಕಾರಣ ಡಾನ್‍ಬಾಸ್ಕೋ ಸಂಸ್ಥೆಯ ಕೆಲಸವನ್ನು ಬಿಡುತ್ತಾರೆ. ತಾಯಿ, ಮಗುವಿನ ಜತೆ ಕಾಲ ಕಳೆಯುವಾಗ ತನ್ನ ಮನೆಗೆ ಹತ್ತಿರದಲ್ಲಿರುವ ಅಲೆಮಾರಿಗಳ ಜತೆ ಸಂಪರ್ಕ ಬೆಳೆಯುತ್ತದೆ. ಓದುಬರಹವಿಲ್ಲದ ಅವರ ಮಕ್ಕಳನ್ನು ನೋಡಿ, ನಿಮ್ಮ ಮಕ್ಕಳಿಗೆ ಅಕ್ಷರ ಕಲಿಸುವೆ ಎಂದಾಗ ಅಲೆಮಾರಿಗಳು ಒಪ್ಪುವುದಿಲ್ಲ. ದಿನಾಲು ಅಲೆಮಾರಿಗಳ ಗುಡಿಸಲುಗಳ ಎದುರು ಅವರ ಮನವೊಲಿಸಲು ಪ್ರಯತ್ನಿಸುತ್ತಾರೆ. ಆದರೂ ಅಲೆಮಾರಿಗಳು ಇವರನ್ನು ನಂಬುವುದಿಲ್ಲ. ನಾನಾಗೆ ಇವರ ಮಕ್ಕಳಿಗೆ ಅಕ್ಷರ ಕಲಿಸುವೆ ಎಂದರೂ ಇವರು ನನ್ನನ್ನು ನಂಬುತ್ತಿಲ್ಲವಲ್ಲ ಎಂದು ಎಷ್ಟೋ ಬಾರಿ ಶಾರದ ಅಳುತ್ತಾ ಮನೆಗೆ ಮರಳಿದ್ದರು. ಇಷ್ಟಾಗಿಯೂ ಅಲೆಮಾರಿಗಳನ್ನು ಬಗೆಬಗೆಯ ರೀತಿಯಲ್ಲಿ ಆಪ್ತವಾಗಿ ಒಪ್ಪಿಸಲು ಪ್ರಯತ್ನಿಸಿದರು. ಒಂದೆರಡು ವರ್ಷದ ನಂತರ ನಿಧಾನಕ್ಕೆ ಅಲೆಮಾರಿಗಳಿಗೆ ಶಾರದ ಅವರಲ್ಲಿ ವಿಶ್ವಾಸ ಮೂಡುತ್ತದೆ.

`ನಮಗೆ ಮನಿಯಿಲ್ಲ ಮಠವಿಲ್ಲ ನೀವು ಬಂದ್ ಶಾಲಿ ಕಲಿಸ್ತೀನಿ ಅಂತೀರಿ, ನಾವು ಇವತ್ ಇಲ್ಲಿದ್ರೆ ನಾಳೆ ಅಲ್ಲಿರ್ತೀವಿ, ನಮ್ಮನ್ನ ಸರಕಾರದವರು ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಓಡಿಸ್ತಾನ ಇರ್ತಾರೆ. ನಮಗೆ ಉಳಿಯೋಕೆ ಒಂದು ನೆಲೆ ಅಂತ ಇಲ್ದಿರೋವಾಗ ನಮ್ಮ ಮಕ್ಕಳು ಶಾಲಿ ಕಲಿತು ಏನ್ ಮಾಡ್ತಾವೆ’ ಎನ್ನುತ್ತಾರೆ. ಆಗ ಶಾರದಾಗೆ ಹೊಳೆದ ಸಂಗತಿಯೆಂದರೆ, ಇವರಿಗೆ ಸರಕಾರದಿಂದ ಒಂದು ಮನೆ ಕಟ್ಟಿಸಿಕೊಟ್ಟರೆ ಒಂದೆಡೆ ಉಳಿಯುತ್ತಾರೆ ಎಂದು ಅನ್ನಿಸುತ್ತದೆ. ಅದಕ್ಕಾಗಿ `ನೀವು ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ, ನಾನು ಹೇಗಾದರೂ ಮಾಡಿ ನಿಮಗೆ ಮನೆಗಳನ್ನು ಕೊಡಿಸ್ತೀನಿ’ ಎನ್ನುವ ಸುಳ್ಳು ಭರವಸೆ ಕೊಡುತ್ತಾರೆ. ಈ ಒಂದು ಭರವಸೆಯಿಂದ ಅಲೆಮಾರಿಗಳು ತಮ್ಮ ಮಕ್ಕಳನ್ನು ಶಾರದ ಬಳಿ ಅಕ್ಷರ ಕಲಿಯಲು ಕಳಿಸುತ್ತಾರೆ. ಆಗ ಶಾರದ ಅವರು ಅಲೆಮಾರಿಗಳ ಜಾಗವನ್ನೆ ಶಾಲೆಯ ಆವರಣವನ್ನಾಗಿಸಿಕೊಂಡು ಅವರಿಗೆ ಅಕ್ಷರ ಕಲಿಸತೊಡಗುತ್ತಾರೆ.

ಇದೇ ಹೊತ್ತಿಗೆ ಬೀದರ್ ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯು ಬೀದರಿನಲ್ಲಿ ಅಲೆಮಾರಿಗಳಿಲ್ಲ ಎಂದು ಸರಕಾರಕ್ಕೆ ವರದಿ ಸಲ್ಲಿಸುತ್ತದೆ. ಸ್ವತಃ ಅಲೆಮಾರಿಗಳ ಜತೆ ಬದುಕುತ್ತಿದ್ದ ಶಾರದ ಅವರಿಗೆ ಈ ವರದಿ ಅಚ್ಚರಿ ಹುಟ್ಟಿಸಿ ಇಲಾಖೆಯ ಗಮನಕ್ಕೆ ತರುತ್ತಾರೆ. ಆಗ ಇಲಾಖೆಯು ಅಲೆಮಾರಿಗಳು ಇದ್ದರೆ ಅವರನ್ನು ಗುರುತಿಸಲು ಶಾರದಾ ಅವರಿಗೆ ಸಹಕಾರ ನೀಡುತ್ತದೆ. ಈ ನಡುವೆ ತಾನು ಅಕ್ಷರ ಕಲಿಸುವ ಮಕ್ಕಳನ್ನು ಶಾಲೆಗೆ ಸೇರಿಸಬೇಕು. ಆದರೆ ಆ ಮಕ್ಕಳಿಗೆ ಯಾವುದೇ ಗುರುತಿಲ್ಲ. ಮೊದಲನೆಯದಾಗಿ ಆಧಾರ ಕಾರ್ಡ್ ಮಾಡಿಸಬೇಕಾದ ಅನಿವಾರ್ಯ ಬರುತ್ತದೆ. ಮಕ್ಕಳಿಗೆ ಆಧಾರ್ ಮಾಡಿಸಲು ತಂದೆತಾಯಿಯರ ಆಧಾರ್ ಬೇಕು.

ಆದರೆ ಈ ಯಾವ ಕುಟುಂಬಗಳಿಗೂ ಆಧಾರ ಕಾರ್ಡ್ ಕೊಟ್ಟಿರಲಿಲ್ಲ. ಈಗ ಮತ್ತೊಂದು ಸಮಸ್ಯೆ ಶುರುವಾಯಿತು. ಮಕ್ಕಳ ತಂದೆತಾಯಿಯರಿಗೆ ಆಧಾರ್ ಕಾರ್ಡ್ ಮಾಡಿಸುವುದು. ಯಾವುದೇ ದಾಖಲೆಗಳಿಲ್ಲದ ಈ ಅಲೆಮಾರಿಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಸೆಳೆದು, ಅಲೆದಲೆದು ಶಾರದ ಅವರೆ ಸ್ವತಃ ಎಲ್ಲರಿಗೂ ಸಾಕ್ಷಿಯಾಗಿದ್ದು ಆಧಾರ್ ಕಾರ್ಡ ಮಾಡಿಸುತ್ತಾರೆ. ಹೀಗೆ ನಿರಂತರವಾಗಿ ನಾಲ್ಕೈದು ವರ್ಷದಲ್ಲಿ ಅಲೆಮಾರಿ ಸಮುದಾಯದ 500ಕ್ಕೂ ಹೆಚ್ಚು ಜನರಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಓಟರ್ ಐಡಿ ಮಾಡಿಸಿದ್ದಾರೆ. ಇದೀಗ 63 ಅಲೆಮಾರಿ ಮಕ್ಕಳು ಶಾಲೆ ಕಲಿಯುತ್ತಿದ್ದಾರೆ. ಅಲೆಮಾರಿಗಳ ಮನೆ ಕಟ್ಟಿಸಲಿಕ್ಕಾಗಿ ನಾಲ್ಕು ಎಕರೆ ಜಮೀನು ಮಂಜೂರಾಗಿದೆ. ಇದೀಗ ಅಲೆಮಾರಿಗಳ ಸ್ವಂತ ಉದ್ಯೋಗಕ್ಕಾಗಿ ಸಣ್ಣಮಟ್ಟದಲ್ಲಿ ಸಾಲಸೌಲಭ್ಯಗಳು ಸಿಗತೊಡಗಿವೆ. ಇದೆಲ್ಲವೂ ಸುಲಭವಾಗಿ ದಕ್ಕಿರುವುದಲ್ಲ ಶಾರದ ಅವರು ನಾಲ್ಕೈದು ವರ್ಷಗಳ ಕಾಲ ಸರಕಾರಿ ಇಲಾಖೆಗಳ ಜತೆ, ಅಧಿಕಾರಿಗಳ ಜತೆ ನಿರಂತರ ಜಗಳ, ಹಕ್ಕೊತ್ತಾಯ, ಚರ್ಚೆ ಸಂವಾದಗಳ ಮೂಲಕ ಇದನ್ನೆಲ್ಲಾ ಆಗುಮಾಡಿದ್ದಾರೆ.

ಈ ಎಲ್ಲಾ ಹೋರಾಟ ಹಕ್ಕೊತ್ತಾಯಗಳ ಜೊತೆಜೊತೆಗೆ ಇದೀಗ ಗುತ್ತಿಗೆ ಆಧಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮಹಿಳಾ ಶಕ್ತಿ ಕೇಂದ್ರ ಯೋಜನೆಯ ಜಿಲ್ಲಾ ಮಹಿಳಾ ಕಲ್ಯಾಣಾಧಿಕಾರಿಯಾಗಿ ಇದೇ ಜನವರಿ 13, 2020 ರಿಂದ ಕೆಲಸಕ್ಕೆ ಸೇರಿದ್ದಾರೆ. `ನಮ್ ಮನೆಯವ್ರ ಬೆಂಬಲ ಇರದಿದ್ರ ಇದನ್ನೆಲ್ಲ ಮಾಡೋಕೆ ಆಗ್ತಿರಲಿಲ್ಲ ಸರ್, ಈಗ ಸಿ.ಎ.ಎ ಎನ್.ಆರ್.ಸಿ ಬಂದದಲ್ಲ ಮತ್ತೆ ನನಗೆ ಭಯ ಶುರು ಆಗ್ಯಾತಿ. ಇವರಿಗೆ ಈಗಿರೋದನ್ನು ಬಿಟ್ಟರೆ ಇವರ ಹಿರೇರು ಎಲ್ಲಿದ್ರು ಅನ್ನೋಕೆ ಏನೂ ದಾಖಲೆ ಇಲ್ಲ. ಅದೇನು ಆಗ್ತಾತೋ ಅಂತ ಭಯ ಆಗೇತಿ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಯಾವುದೇ ಆಕಾಡೆಮಿಕ್ ಸಂಶೋಧಕರಿಗಿಂತಲೂ ಸೂಕ್ಷ್ಮವಾಗಿ ಅಲೆಮಾರಿ ಬುಡಕಟ್ಟು ಸಮುದಾಯದ ನಾಡಿಮಿಡಿತ ಗುರುತಿಸುವ ಶಾರದ ಅವರು ನಿಜಕ್ಕೂ ಈ ಕಾಲಕ್ಕೆ ಮಾದರಿಯಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಶಾರದಾ ಅವರ ಸಮಾಜಸೇವೆ ಜೋತೆ… ವಿದ್ಯೆ ದಾನವನ್ನು ಮಾಡಿದ್ದಾರೆ. ಅವರಿಗಿ ಅಭಿನಂದನೆಗಳು

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...