Homeಚಳವಳಿಓ ಸರ್ಕಾರವೇ, ಇತ್ತ ಗಮನ ಕೊಡು

ಓ ಸರ್ಕಾರವೇ, ಇತ್ತ ಗಮನ ಕೊಡು

- Advertisement -
ನೂರ್ ಶ್ರೀಧರ್  |
ಫಲಿತಾಂಶ ಹೊರಬಿದ್ದಿದೆ. ಮತಾಂಧ ಶಕ್ತಿಗಳು ಮೊದಲ ಸ್ಥಾನದಲ್ಲಿ ಬಂದು ನಿಂತಿವೆ. ‘ಜಾತ್ಯತೀತ’ ಎಂದು ಕರೆದುಕೊಳ್ಳುವ ಮಿಶ್ರ ಸರ್ಕಾರದ ರಚನೆಯ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಲೋಕಸಭಾ ಚುನಾವಣೆಗಳು ಕೂಗಳತೆಯ ದೂರದಲ್ಲಿವೆ.  ಕಳೆದ 4 ವರ್ಷಗಳಲ್ಲಿ ಬಿಜೆಪಿ ಪಕ್ಷ ಕೇಂದ್ರ ಸರ್ಕಾರದ ಮೂಲಕ ನೀಡಿರುವ ಆಳ್ವಿಕೆ ಮತ್ತು 2009 – 2013ರ ಅವಧಿಯ ಅದರ ಕರ್ನಾಟಕ ಆಳ್ವಿಕೆ ಭಾರತದ ಇತಿಹಾಸದಲ್ಲೇ ಅತ್ಯಂತ ಜನವಿರೋಧಿ ಆಳ್ವಿಕೆಗಳಾಗಿವೆ. ನಾಡಿನ ಸಂಪತ್ತನ್ನು ಬಾಚಲು ಗಣಿದಣಿಗಳಿಗೆ ನೆರವಾಗುವ, ಜನ ಸಾಮಾನ್ಯರ ದುಡಿಮೆಯ ಫಲವನ್ನು ದೋಚಲು ಕಾರ್ಪೋರೇಟ್ ಶಕ್ತಿಗಳಿಗೆ ರತ್ನಗಂಬಳಿ ಹಾಕಿಕೊಟ್ಟಿದೆ. ಇದಕ್ಕೆ ಅನೇಕ ಉದಾಹರಣೆಗಳನ್ನು ನೀಡಬಹುದು. ಆರ್ಥಿಕ ನೀತಿಗಳಲ್ಲಿ ಒಂದಷ್ಟು ಸಾಮ್ಯತೆಗಳಿದ್ದರೂ ಕಾಂಗ್ರೆಸ್ ಜನಸಾಮಾನ್ಯರ ವಿಚಾರದಲ್ಲಿ ಒಂದಷ್ಟು ಮೃದು ಧೋರಣೆಯನ್ನು ಅಳವಡಿಸಿದೆ ಹಾಗೂ ಒಂದಿಷ್ಟು ಸಮಾಜ ಕಲ್ಯಾಣದ ಯೋಜನೆಗಳನ್ನು ಜಾರಿಗೆ ತಂದಿದೆ. ವಾಸ್ತವ ಹೀಗಿದ್ದರೂ ಕಾಂಗ್ರೆಸ್ ಪಕ್ಷವನ್ನು ಭ್ರಷ್ಟ, ಜಾತಿವಾದಿ, ಸ್ವಜನ ಪಕ್ಷಪಾತಿ ಪಕ್ಷ ಎಂಬಂತೆ ಬಿಂಬಿಸಲು ಮಾಧ್ಯಮಗಳು ಪೈಪೋಟಿ ನಡೆಸಿವೆ. ಅದೇ ಸಂದರ್ಭದಲ್ಲಿ ಬಿಜೆಪಿ ಅಭಿವೃದ್ಧಿಪರ, ದೇಶಪರ, ಹಿಂದುಪರ ಪಕ್ಷದಂತೆಯೂ ಸುಳ್ಳನ್ನು ಸತ್ಯವೆಂಬಂತೆ ನಂಬಿಸುವ ಸಂಘ ಪರಿವಾರದ ಪ್ರಚಾರಕ್ಕೆ ಮಾಧ್ಯಮಗಳೂ ದೊಡ್ಡ ದನಿಯ ಪ್ರಚಾರ ಕೊಟ್ಟಿವೆ. ವಾಸ್ತವಾಂಶಗಳನ್ನು ಜನರಿಗೆ ತಲುಪಿಸುವುದರಲ್ಲಿ ಕಾಂಗ್ರೆಸ್‍ನ ವೈಫಲ್ಯ ಕೂಡ ಎದ್ದು ಕಾಣುತ್ತಿದೆ.
ಹೊಸ ಸರ್ಕಾರ ರಚಿಸುವುದರಲ್ಲಿ ನಾಟಕೀಯ ರಾಜಕೀಯ ಬೆಳವಣಿಗೆಗಳು ನಡೆದಿವೆ. ಬಿಜೆಪಿ ಎಲ್ಲ ಸಂವಿಧಾನಿಕ ಸಂಸ್ಥೆಗಳನ್ನು, ಹುದ್ದೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಅಂತೂ ಯಾವುದೋ ಒಂದು ಸರ್ಕಾರ ಬರಲಿದೆ. ಯಾವುದೇ ಸರ್ಕಾರ ಬಂದರೂ ರಾಜ್ಯದ ಜನತೆಯ ಹಿತಾಸಕ್ತಿಯ ದೃಷ್ಟಿಯಿಂದ ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಬೇಕಾದ ಪ್ರಮುಖ ಅಂಶಗಳು ಯಾವುವು ಎಂಬುದು ನಮ್ಮ ಮುಂದಿರುವ ಪ್ರಶ್ನೆ.
1. ಕೃಷಿ ಬಿಕ್ಕಟ್ಟಿಗೆ ಪರಿಹಾರವನ್ನು ಹುಡುಕುವ ಪ್ರಾಮಾಣಿಕ ಪ್ರಯತ್ನವಾಗಬೇಕು. ಕೃಷಿ ಬಿಕ್ಕಟ್ಟು ಪರಿಹಾರವಾಗಬೇಕಾದರೆ ಕೃಷಿ ವೆಚ್ಚ ಕಡಿಮೆಯಾಗಬೇಕು, ಕೃಷಿ ಆದಾಯ ನಿಶ್ಚಿತಗೊಳ್ಳಬೇಕು. ಕೃಷಿ ವೆಚ್ಚ ತಗ್ಗಿಸಬೇಕಾದರೆ ಸಹಕಾರಿ ಹಾಗೂ ಸಹಜ ಕೃಷಿಯನ್ನು ಉತ್ತೇಜಿಸಲು ವಿಶೇಷ ಪ್ಯಾಕೇಜನ್ನು ಜಾರಿಗೆ ತರಬೇಕು. ಅಲ್ಲದೆ ಬೀಜ, ಗೊಬ್ಬರ, ರಾಸಾಯನಿಕ ಇತ್ಯಾದಿ ಒಳಸುರಿಗಳ ಮೇಲಿನ, ಕೃಷಿ ಯಂತ್ರೋಪಕರಣಗಳ ಮೇಲಿನ ಹಾಗೂ ಕೃಷಿ ಮಾರುಕಟ್ಟೆ ಮೇಲಿನ ಕಾರ್ಪೋರೇಟ್ – ದಲ್ಲಾಳಿ ಹಿಡಿತ ತಪ್ಪಿ ಬೆಲೆಗಳು ನಿಯಂತ್ರಣಕ್ಕೆ ಬರಬೇಕು. ಜೊತೆಗೆ ಇದುವರೆತನಕ ಸರ್ಕಾರಗಳು ಅಳವಡಿಸಿದ ರೈತ ವಿರೋಧಿ – ಕಾರ್ಪೋರೇಟ್ ಪರ ನೀತಿಗಳಿಂದಾಗಿ ರೈತರಿಗೆ ಆಗಿರುವ ನಷ್ಟವನ್ನು ಸಂಪೂರ್ಣ ಸಾಲ ಮನ್ನಾದ ರೂಪದಲ್ಲಾದರೂ ತುಂಬಿಕೊಡಬೇಕು.
2. ಓದಿದರೂ ಉದ್ಯೋಗವಿಲ್ಲದ ಕಡೆ ಸಾಗುತ್ತಿರುವ ಅಂಧಕಾರಿ ಭವಿಷ್ಯದಲ್ಲಿ ದೀಪ ಬೆಳಗುವಂತೆ ಮಾಡಬೇಕು. ಉದ್ಯೋಗ ಸೃಷ್ಟಿ ಸರ್ಕಾರದ ಎರಡನೇ ಪರಮೋಚ್ಛ ಕರ್ತವ್ಯವಾಗಬೇಕು. “ಉದ್ಯೋಗಕ್ಕಾಗಿ ಯುವಜನರು” ಮುಂದಿಟ್ಟ ಯುವ ಪ್ರಣಾಳಿಕೆ ಸೂಚಿಸುವ ರೀತಿಯಲ್ಲಿ “ಉದ್ಯೋಗ ಆಯೋಗ”ವೊಂದನ್ನು ರಚಿಸಬೇಕು. ಅದರ ಶಿಫಾರಸುಗಳನ್ನು ವಿಧಾನ ಸಭೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲೇಬೇಕಾದ ಅಧಿಕಾರ ಇರಬೇಕು. ಹಾಲಿ ಚಾಲ್ತಿಯಲ್ಲಿರುವ ಉದ್ಯೋಗ ಕಡಿತದ ಮಾದರಿಯ ಬದಲು ಉದ್ಯೋಗ ಸೃಷ್ಟಿಯ ಮಾದರಿ ಅಭಿವೃದ್ಧಿಗೊಳ್ಳುವಂತೆ ಮಾಡಬೇಕು.
3. ಕೆಲಸ ಸಿಕ್ಕರೆ ಸಾಲದು, ನೆಮ್ಮದಿಯ ಬದುಕಿಗೆ ಉದ್ಯೋಗ ಭದ್ರತೆ ಖಾತ್ರಿಯಾಗಬೇಕು, ದುಡಿಮೆಗೆ ತಕ್ಕ ಪ್ರತಿಫಲ ಲಭ್ಯವಾಗಬೇಕು. ಅದಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಂಟ್ರಾಕ್ಟ್ ಪದ್ದತಿ ಶಾಶ್ವತೀಕರಣವನ್ನು ರದ್ದುಗೊಳಿಸಲು ರಾಜ್ಯ ಸರ್ಕಾರವೂ ಹೋರಾಡಬೇಕು. ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಕಂಟ್ರಾಕ್ಟ್ ಪದ್ದತಿಯನ್ನು ತೆಗೆದುಹಾಕಬೇಕು. ಉಚ್ಛ ನ್ಯಾಯಾಲಯವೇ ಅನೇಕ ಬಾರಿ ಎಚ್ಚರಿಸಿರುವ ಕನಿಷ್ಟ ವೇತನವನ್ನು ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಜಾರಿಗೆ ತರಬೇಕು.
4. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಬೆಳೆಯುತ್ತಿರುವ ಖಾಸಗೀ ಹಿಡಿತ ಹಾಗೂ ಸುಲಿಗೆಯನ್ನು ನಿಯಂತ್ರಿಸಲು ಕ್ರಮಕೈಗೊಳ್ಳಬೇಕು ಮತ್ತು ಉಚಿತ ಹಾಗೂ ಉಚ್ಛ ಸರ್ಕಾರಿ ಶಿಕ್ಷಣ ಮತ್ತು ಚಿಕಿತ್ಸೆ ಲಭ್ಯವಾಗುವಂತೆ ಮಾಡಬೇಕು.
5. ಬಡವರ ಬಹುತೇಕ ದುಡಿಮೆಯನ್ನೆಲ್ಲಾ ಬಾಟಲಿ ದಣಿಗಳ ಪಾಲಾಗಿಸುತ್ತಿರುವ ಹಾಗೂ ಯುವಜನರನ್ನು ದುಷ್ಟಚಟದ ದಾಸರನ್ನಾಗಿಸುತ್ತಿರುವ ಮಧ್ಯಪಾನವನ್ನು ನಿಶೇಧಿಸುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಕ್ಕಬೇಕು. ಕನಿಷ್ಟ ಮೊದಲ ಹಂತವಾಗಿ ಮಧ್ಯವ್ಯಸನ ತಗ್ಗಿಸುವ ಟಾರ್ಗೆಟ್ ಹಾಕಿ ಫಲಿತಾಂಶ ತೋರಬೇಕು. ಇಡೀ ದೇಶದಲ್ಲಿ ಏಕ ಕಾಲದಲ್ಲಿ ಮಧ್ಯಪಾನ ನಿಷೇಧಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು.
6. ಧಾರ್ಮಿಕ ಸಹಬಾಳ್ವೆಯನ್ನು ಉತ್ತೇಜಿಸಬೇಕು. ಧಾರ್ಮಿಕ ದ್ವೇಷ, ಸಾಂಸ್ಕøತಿಕ ಅಸಹನೆ, ಆಹಾರ ಪದ್ದತಿಗಳ ಹೇರಿಕೆಯಂತಹ ಕ್ರಮಗಳನ್ನು ಪ್ರಚೋದಿಸುವ ಸಂಘ ಸಂಸ್ಥೆಗಳನ್ನು ನಿಷೇಧಿಸಬೇಕು.
7. ಮೀಸಲಾತಿಯಂತಹ ಸಂಕೀರ್ಣ ಸಮಸ್ಯೆಗಳಿಗೆ ಸಮಗ್ರ ಉತ್ತರ ಕಂಡುಕೊಳ್ಳಲು ಕಾಲಮಿತಿಯೊಳಗೆ ಪರಿಹಾರ ಸೂಚಿಸುವ ಸಾಮಾಜಿಕ ಮನ್ನಣೆ ಹೊಂದಿರುವ ಸಮಿತಿಯನ್ನು ರಚಿಸಬೇಕು. ಅದರ ಶಿಫಾರಸುಗಳನ್ನು ದಿಟ್ಟವಾಗಿ ಜಾರಿ ಮಾಡುವ ಮೂಲಕ ಸಾಮಾಜಿಕ ನ್ಯಾಯವನ್ನು ಖಾತ್ರಿಗೊಳಸಿಬೇಕು ಮತ್ತು ಸಾಮಾಜಿಕ ಕಲಹಕ್ಕೆ ಕೊನೆ ಹಾಡಬೇಕು.
8. ಅಲ್ಪಸಂಖ್ಯಾತರ ಸ್ಥಿತಿಗತಿಯಲ್ಲಿ ಬದಲಾವಣೆ ತರಲು ಈಗಾಗಲೇ ಸಾಚಾರ್ ಕಮಿಟಿಯ ಸೂಕ್ಷ್ಮಮತಿ ಶಿಫಾರಸುಗಳು ಇರುವುದರಿಂದ ಅವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು.
9. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ವಿಶೇಷ ಅಭಿಯಾನ ಆರಂಭಿಸಬೇಕು. ಅವರ ಸ್ವಾವಲಂಬಿ ಶಕ್ತಿ ವೃದ್ಧಿಸುವಂತೆ ಮಾಡಲು ಹಾಗೂ ಅವರ ಸ್ಥಾನ ಮತ್ತು ಹಕ್ಕಿನ ಬಗ್ಗೆ ಪ್ರಜ್ಞೆ ಸಾಮಾಜಿಕ ಪ್ರಜ್ಞೆ ಹೆಚ್ಚಾಗುವಂತೆ ಮಾಡಲು ಸಾಮಾಜಿಕ ಅಭಿಯಾನ ಆರಂಭಿಸಬೇಕು. ಸಾಮಾಜಿಕ ಸಂಘ ಸಂಸ್ಥೆಗಳನ್ನು ಅದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು.
10. ನಿರ್ಲಕ್ಷಿತರಲ್ಲಿ ನಿರ್ಲಕ್ಷಿತರಾಗಿ ಬದುಕುತ್ತಿರುವ ತೃತೀಯ ಲಿಂಗೀಯರು, ವಿಕಲಚೇತನರು, ವೇಶ್ಯೆಯರು, ವೃದ್ಧರು ಹಾಗೂ ನಿರಾಶ್ರಿತರ ಬಗ್ಗೆ ಅಂತಃಕರಣವುಳ್ಳ ಪುನರ್ವಸತಿ ಕ್ರಮಗಳನ್ನು ಆಚರಣೆಗೆ ತರಬೇಕು.
ಇದೆಲ್ಲವನ್ನು ಮಾಡಲೇಬೇಕು. ಸರ್ಕಾರಗಳು ಈ ನಿಟ್ಟಿನಲ್ಲಿ ಕೆಲವು ಹೆಜ್ಜೆಗಳನ್ನಾದರೂ ಇಡುವಂತೆ ಮಾಡುವ ನಿಟ್ಟಿನಲ್ಲಿ ನಮ್ಮ ಹೋರಾಟಗಳು  ನಡೆಯಬೇಕಿದೆ.   ಜನಪರ ಆಳ್ವಿಕೆ ನೀಡುವುದು ಜಾತ್ಯತೀತ ಪಕ್ಷಗಳ ಉಳಿವು ಮತ್ತು ಬೆಳವಣಿಗೆಗೆ ಹೇಗೆ ಪೂರ್ವ ಶರತ್ತೋ ಹಾಗೆಯೇ ನಿಜವಾದ ಜನಪರ ಶಕ್ತಿಗಳು ಪರ್ಯಾಯ ಪಕ್ಷಗಳನ್ನು ಕಟ್ಟಿದರೆ ಸಾಲದು, ಪರ್ಯಾಯ ಜನ ಚಳವಳಿಯನ್ನು ಕಟ್ಟಿಬೆಳೆಸಬೇಕು. ವಿಶಾಲ ತಳಹದಿಯ ಪ್ರಬಲ ಜನಾಂದೋಲನಗಳನ್ನು ರೂಪಿಸಬೇಕಾದ ಕರ್ತವ್ಯ ನಮ್ಮ ಮುಂದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...

ಬಹುಭಾಷಾ ನಟ ಪ್ರಕಾಶ್ ರಾಜ್‌ ತಾಯಿ ಸ್ವರ್ಣಲತಾ ನಿಧನ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿಯೊಂದಿಗೆ ಇದ್ದ...

ಮುಂಬೈ: ಸ್ವ-ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ಆಕ್ರೋಶ: ದಾದರ್‌ನಲ್ಲಿ ಮೂಢನಂಬಿಕೆ ವಿರೋಧಿ ಅಭಿಯಾನ

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಚಟುವಟಿಕೆಗಳ ಸುತ್ತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿವೇಕ್ ಜಾಗರ್ ಉಪಕ್ರಮದಡಿಯಲ್ಲಿ ಮಹಾರಾಷ್ಟ್ರ ಅಂಧಾಶ್ರದ್ಧ ನಿರ್ಮೂಲನ ಸಮಿತಿ (MANS) ಮಹಾರಾಷ್ಟ್ರ ಘಟಕವು ಭಾನುವಾರ...

ನೋಟಿಸ್ ನೀಡದೆ ಮಸೀದಿ ಬಂದ್; ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್

ಪೂರ್ವ ಸೂಚನೆ ನೀಡದೆ ಅಥವಾ ಮಾಲೀಕರಿಗೆ ವಿಚಾರಣೆಗೆ ಅವಕಾಶ ನೀಡದೆ ಪ್ರಾರ್ಥನಾ ಸ್ಥಳಕ್ಕೆ ಬೀಗ ಹಾಕಬಹುದೇ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ. ಮುಜಫರ್‌ನಗರದಲ್ಲಿ ಮಸೀದಿಯನ್ನು...

ಬಿಜು ಪಟ್ನಾಯಕ್ ಕುರಿತು ಹೇಳಿಕೆ : ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ತೀವ್ರ ಆಕ್ರೋಶ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದುಬೆ ನೇತೃತ್ವದ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ...

ಮುರ್ಷಿದಾಬಾದ್ ರಾಮನವಮಿ ಹಿಂಸಾಚಾರ; ಆರ್‌ಎಸ್‌ಎಸ್ ನಾಯಕ ಸೇರಿದಂತೆ 30 ಜನರ ಬಂಧನ

ಮಾರ್ಚ್ 27 ರಂದು ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ಉಪವಿಭಾಗದ ರಘುನಾಥಗಂಜ್‌ನಲ್ಲಿ ನಡೆದ ರಾಮನವಮಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ನಂತರ ಸುಮಾರು 30 ಜನರು ಗಾಯಗೊಂಡರು. ಈ ಘಟನೆಯು ವ್ಯಾಪಕ ಉದ್ವಿಗ್ನತೆಗೆ ಕಾರಣವಾಗಿದ್ದು, ಅಂಗಡಿ...

ದೆಹಲಿ ಗಲಭೆ ಪ್ರಕರಣ: ಮಧ್ಯಂತರ ಜಾಮೀನು ಅವಧಿ ಅಂತ್ಯ; ಇಂದು ತಿಹಾರ್ ಜೈಲಿಗೆ ಮರಳಲಿರುವ ಶಾರ್ಜೀಲ್ ಇಮಾಮ್

2020 ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ದೊಡ್ಡ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನೀಡಿದ್ದ 10 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್...