Homeಅಂಕಣಗಳುಗಾಂಧೀ ಸ್ಮರಣೆ ಮತ್ತು ವರ್ತಮಾನದ ಬಿಡಿ ಚಿತ್ರಗಳು

ಗಾಂಧೀ ಸ್ಮರಣೆ ಮತ್ತು ವರ್ತಮಾನದ ಬಿಡಿ ಚಿತ್ರಗಳು

- Advertisement -
- Advertisement -

ಅಕ್ಟೋಬರ್ 2 ಎಂದಿನಂತೆ ಗಾಂಧೀ ಜಯಂತಿಯ ಸರಕಾರಿ ಸಂಭ್ರಮ, ಗಾಂಧೀಜಿಯ ಪರಂಪರಾಗತ ಅನುಯಾಯಿಗಳ ಅವಿಮರ್ಶಾತ್ಮಕ ಸ್ಮರಣೆಗಳು ನಡೆದು ಹೋಗುತ್ತವೆ. ಇದರ ಜೊತೆ ಗಾಂಧಿ ವಿರೋಧಿಗಳ ಅಬ್ಬರದ ಟೀಕೆಗಳು ಮುಗಿಲು ಮುಟ್ಟುತ್ತವೆ. ಸರಕಾರಿ ಸಂಭ್ರಮಗಳಿಗೆ ಈ ಹಿಂದೆಯೂ ಯಾವ ಅರ್ಥಗಳಿರಲಿಲ್ಲ, ಈಗಲೂ ಅವು ಹಾಗೆಯೇ ನಡೆದು ಮುಗಿದು ಹೋಗುತ್ತವೆ. ಇನ್ನು ಹಳಹಳಿಕೆಯ ಯಾಂತ್ರಿಕ ಗಾಂಧಿ ಸ್ಮರಣೆಗಳಿಗೆ ವರ್ತಮಾನ ಮುಖ್ಯವಾಗುವುದೇ ಇಲ್ಲ. ಸಾಮಾನ್ಯರಿಗೆ ಅನಾಯಾಸವಾಗಿ ನಿಲುಕಿಬಿಡುವ ಗಾಂಧೀಜಿಯ ಸರಳ ಬೌದ್ಧಿಕತೆಯನ್ನು ಇನ್ನೂ ಕಗ್ಗಂಟಾಗಿಸಿಬಿಡುವ ಕ್ಲೀಷೆಯ ಭಾಷಣಗಳನ್ನ ಈ ತಿಂಗಳಿಡೀ ಕೇಳಲೇಬೇಕು. ಇನ್ನು ಗಾಂಧಿಯನ್ನು ನಖಶಿಖ ದ್ವೇಷಿಸುವ ವರ್ಗದ ಬೈಗುಳಗಳೂ ಈ ಅಕ್ಟೋಬರ್ ಮಾಸದಲ್ಲಿ ಉತ್ತುಂಗಕ್ಕೇರಿಬಿಡುತ್ತವೆ. ಎಲ್ಲೋ ವಕೀಲಿಕಿ ಮಾಡಿಕೊಂಡಿದ್ದ ಕರಮಚಂದ ಗಾಂಧಿ ಆಕಸ್ಮಿಕವಾಗಿ ಸಾರ್ವಜನಿಕ ಬದುಕಿಗೆ ಬಂದು ಸ್ವಾತಂತ್ರ್ಯ ಹೋರಾಟದ ಮುಂದಾಳಾಗಿ ರೂಪಾಂತರಗೊಂಡದ್ದು ಈಗ ಚರಿತ್ರೆ. ಗಾಂಧೀಜಿ ಹೀಗೆ ಸಾರ್ವಜನಿಕ ಬದುಕಲ್ಲಿದ್ದದ್ದು ಕೆಲವು ದಶಕಗಳು ಮಾತ್ರ. ಈ ಕಾಲಘಟ್ಟದಲ್ಲಿ ಗಾಂಧೀಜಿ ಸಾವಿರಾರು ರಾಜಕೀಯ ಸಂದಿಗ್ಧಗಳನ್ನು ಎದುರಿಸಿದ್ದಾರೆ.
ಪ್ರಖರ ಸೂರ್ಯನÀ ತರ ಜ್ವಲಿಸುತ್ತಿದ್ದ ಅಂಬೇಡ್ಕರ್, ಸುಭಾಷ್ ಚಂದ್ರ ಭೋಸ್, ಭಗತ್ ಸಿಂಗ್, ಪೆರಿಯಾರ್‍ರಂತಹ ಜೊತೆಗಾರರ ಪ್ರಭಾವಲಯಗಳಲ್ಲಿ ಕೆಲವು ಸಲ ಗಾಂಧಿ ಪೇಲವವಾಗಿ ಕಂಡಿದ್ದಾರೆ. ಈ ಜೊತೆಗಾರರು ಮುಂದಿರಿಸುತ್ತಿದ್ದ ಚಾರಿತ್ರಿಕ ಪ್ರಶ್ನೆಗಳಿಗೆ ಗಾಂಧೀಜಿ ನಿರುತ್ತರರೂ ಆಗಿದ್ದಾರೆ. ಆದರೆ, ದೇಶದ ರಾಜಕೀಯ ಗುಲಾಮಗಿರಿ, ಅಸಮಾನ ವಿಷಮ ಸಾಮಾಜಿಕ ಸಂದರ್ಭ, ಕೋಮು ಅಸಹನೆಯ ತಲ್ಲಣಗಳಲ್ಲಿ ಗಾಂಧೀಜಿ ಕಳೆದು ಹೋಗಲಿಲ್ಲ. ಈ ಎಲ್ಲ ಸಂಗತಿಗಳಿಂದ ಗಾಂಧೀಜಿ ವಿದ್ಯಾರ್ಥಿಯಂತೆ ಕಲಿತರು, ಜೊತೆಗೆ ಕಲಿಸಲು ಮುಂದಾದರು. ಇದೆಲ್ಲಕ್ಕಿಂತ ಹೆಚ್ಚಾಗಿ ಗಾಂಧೀಜಿ ಜನರ ನಡುವೆ ಬದುಕಿದರು. ಅದು ಬಿರ್ಲಾನ ಅತಿಥಿಗೃಹವೇ ಇರಲಿ, ಚಂಪಾರಣ್ ಹೋರಾಟವೇ ಇರಲಿ, ಕೋಮು ಅಸಹನೆಯಿಂದ ಧಗಧಗ ಉರಿಯುತ್ತಿದ್ದ ಕಲ್ಕತ್ತಾದ ರಸ್ತೆಗಳೇ ಇರಲಿ, ಗಾಂಧೀಜಿ ತಾನು ಪ್ರೀತಿಸುತ್ತಿದ್ದ `ಜನಸಾಮಾನ್ಯ’ರ ಜೊತೆ ನಿಂತುಕೊಂಡರು. ಅಡುಗೆಗೆ ನಿತ್ಯ ಬಳಸುವ ಉಪ್ಪು, ಸಾಮಾನ್ಯರಿಗೆ ಸುಲಭವಾಗಿ ದಕ್ಕಬೇಕು ಎಂಬುದರಿಂದ ಹಿಡಿದು, ಇಂಗ್ಲೆಂಡಿನಿಂದ ಬರುತ್ತಿದ್ದ ಉನ್ನತ ಮಟ್ಟದ ನಿಯೋಗಗಳ ಮುಂದೆ ತಾನು ಪ್ರೀತಿಸುವ ದೇಶದ ವಿಮೋಚನೆಗೆ ವಾದ ಮಂಡಿಸುವವರೆಗೆ ಗಾಂಧೀಜಿಯ ರಾಜಕೀಯ ವ್ಯಕ್ತಿತ್ವದ ಹರವು ವಿಸ್ತರಿಸಿಕೊಂಡಿತ್ತು.
ವಸಾಹತು ಆಡಳಿತ ವಿಧಿಸಿದ್ದ ವಿಪರೀತ ಕಂದಾಯವನ್ನು ಕಟ್ಟದೆ ಭೂಮಿ ಕಳೆದುಕೊಂಡಿದ್ದ ರೈತರು, ಅಸ್ಪøಶ್ಯತೆಯ ಹೀನಾಯ ಆಚರಣೆಯಲ್ಲಿ ನಲುಗುತ್ತಿದ್ದ ದಲಿತ ಸಮುದಾಯಗಳು, ಕೈಗಾರಕೀರಣದಿಂದ ಕುಲಕಸಬುಗಳನ್ನು ಕಳೆದುಕೊಂಡು ದಿಕ್ಕೆಟ್ಟುಹೋಗಿದ್ದ ಕರಕುಶಲ ಕರ್ಮಿಗಳು, ಯಾವ ಹಕ್ಕುಗಳೂ ಇಲ್ಲದ ಮಹಿಳೆಯರು, ಅಪರಾಧಿಗಳೆಂದು ಘೋಷಿಸಲ್ಪಟ್ಟಿದ್ದ ಅಲೆಮಾರಿ ಸಮುದಾಯಗಳು, ಎರಡನೇ ದರ್ಜೆಯ ಪ್ರಜೆಗಳೇ ಆಗಿ ಪರಿಗಣಿಸಲ್ಪಟ್ಟಿದ್ದ ಮುಸಲ್ಮಾನರು……. ಒಟ್ಟಾರೆ ಇಂಡಿಯಾದ ಬಹುಸಂಖ್ಯಾತ ದುಡಿವ ಸಮುದಾಯಗಳು ತಲ್ಲಣಗಳಲ್ಲಿಯೇ ಇದ್ದ ನಿಕೃಷ್ಟ ರಾಜಕೀಯ ಸಂದರ್ಭವದು. ಮೋಹನ ಕರಮಚಂದ ಗಾಂಧಿ ಎಂಬ ಗುಜರಾತಿ ಬನಿಯಾ ಸಮುದಾಯದ ವ್ಯಕ್ತಿಯ ಮುಂದೆ ಇದ್ದ ಸವಾಲುಗಳವು. ಇಂತಹ ಚಾರಿತ್ರಿಕ ಸಮಸ್ಯೆಗಳಿಗೆ ತಟ್ಟನೆ ಪರಿಹಾರ ಕಂಡುಕೊಳ್ಳಲು ಸಾಧ್ಯವೇ? ಶತಮಾನಗಳ ಕಾಲ ಆಚರಣೆಯಲ್ಲಿದ್ದ ಜ್ವಲಂತ ಪಿಡುಗುಗಳಿಂದ ಶೋಷಿತರನ್ನು ವಿಮೋಚನೆಗೊಳಿಸಲು ಸಾಧ್ಯವೇ? ದುರಾಶೆಯ ಊಳಿಗಮಾನ್ಯ ವ್ಯವಸ್ಥೆ, ಅಮಾನವೀಯವಾಗಿ ಬೆಳೆದು ನಿಂತಿದ್ದ ಜಾತಿ ಅಸಹನೆ, ವಿಷಾನಿಲದಂತೆ ಪಸರಿಸುತ್ತಿದ್ದ ಕೋಮುವಾದಗಳ ನಡುವೆ ದೇಶಕ್ಕೆ ಮತ್ತು ಶೋಷಿತ ಸಮುದಾಯಗಳೆರಡಕ್ಕೂ ವಿಮೋಚನೆಯ ಅಗತ್ಯವಿತ್ತು. ಇಂತಹ ತಲ್ಲಣದ ಸಂದರ್ಭದಲ್ಲಿ ಗಾಂಧಿಯ ಮೇಲೆ ನಿರೀಕ್ಷೆಗಳ ಭಾರಜಲವೂ ಸುರಿಯುತ್ತಿತ್ತು. ಇಂತಹ ಸಂದರ್ಭದಲ್ಲಿ ಅಂದಿನ ನಲವತ್ತು ಕೋಟಿ ಜನರ ಮುಂದಾಳು ಎಂದೇ ಪರಿಗಣಿಸಲ್ಪಟ್ಟಿದ್ದ ಗಾಂಧೀಜಿ ಎಂತಹ ಸಂದಿಗ್ಧಗಳನ್ನು ಎದುರಿಸಿರಬಹುದು? ಗಾಂಧಿ ಎಂಬ ಮನುಷ್ಯನನ್ನು ಆತನ ಕಾಲಘಟ್ಟದ ಈ ಎಲ್ಲ ರಾಜಕೀಯ ಸಂದಿಗ್ಧಗಳ ಮೂಲಕವೇ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು.
ಆದರೆ, ಈಗ ನಡೆಯುತ್ತಿರುವ ಗಾಂಧೀಜಿಯ ನಿಂದನೆ ಮತ್ತು ಭಜನೆಗಳಿಗೆ ಇಂತಹ ಸೂಕ್ಷ್ಮಗಳಿಲ್ಲ. ಕಪ್ಪು ಬಿಳುಪಿನ ಲೆಕ್ಕಾಚಾರಗಳಿಗೆ ಚರಿತ್ರೆಯ ಹಂಗುಗಳಿರುವುದಿಲ್ಲ. ಗಾಂಧೀಜಿಯ ಒಟ್ಟಾರೆಯ ಬೌದ್ಧಿಕ ನಿಲುವುಗಳು ಅವರ ಎಣೆ ಇಲ್ಲದ ಆಕ್ಟಿವಿಸಮ್‍ನಿಂದ ರೂಪುಗೊಳ್ಳುತ್ತಾ ಬಂದಿವೆ. ಗಾಂಧೀಜಿಯ ಬೌದ್ಧಿಕತೆಯನ್ನು ಅವರ ಶ್ರಮದಾಯಕ ಆಕ್ಟಿವಿಸಮ್‍ನ ಮೂಲಕ ಅರ್ಥಮಾಡಿಕೊಳ್ಳಬೇಕು. ಹಾಗೆಂದು ಗಾಂಧೀಜಿಯ ನಿಲುವುಗಳೆಲ್ಲ ಪರಿಪೂರ್ಣವಾಗಿವೆ ಎಂದೇನಲ್ಲ, ಅವಕ್ಕೆ ಹಲವು ಮಿತಿಗಳಿವೆ, ಕೆಲವೊಮ್ಮೆ ಅವು ಫಾಶ್ರ್ವಿಕವೂ (ಸೆಕ್ಟೇರಿಯನ್) ಸಹ ಆಗಿವೆ. ಆದರೆ ಆ ನಿಲುವುಗಳು ಜನಸಮುದಾಯಗಳ ಜೊತೆಗಿನ ಸಾವಯವ ಸಂಬಂಧಗಳಿಂದ ಅಸ್ತಿತ್ವಕ್ಕೆ ಬಂದಂತವುಗಳೇ ಆಗಿವೆ. ಒಂದು ಅರ್ಥದಲ್ಲಿ ಗಾಂಧೀಜಿಯ ರಾಜಕೀಯ ನಿಲುವುಗಳನ್ನು ಅವರ ಸಾರ್ವಜನಿಕ ಬದುಕನ್ನು ಹೊರತಾಗಿಸಿ ನೋಡಲು ಸಾಧ್ಯವಿಲ್ಲ. ಈ ದೇಶದ ಸಾಮಾನ್ಯ ಜನರ ನಡುವೆ ಬೇರೆಯದೇ ಇದ್ದರೆ ಗಾಂಧೀಜಿ ಎಂಬ ವ್ಯಕ್ತಿತ್ವವಾಗಲಿ, ಗಾಂಧಿಯ ಚಿಂತನೆಗಳಾಗಲಿ ಅಸ್ತಿತ್ವಕ್ಕೇ ಬರುತ್ತಿರಲಿಲ್ಲ.
ಒಂದು ಸಾಮಾಜಿಕ ಅಸಮಾನತೆಯನ್ನು ಪ್ರತಿರೋಧಿಸುವ ಮೂಲಕ ಬ್ಯಾರಿಸ್ಟರ್ ಆಗಿದ್ದ ಕರಮಚಂದರು, ಗಾಂಧೀಜಿಯಾಗಿ ರೂಪಾಂತರಗೊಂಡರು. ಈ ದೇಶದ ಅಸಹನೀಯ ರಾಜಕೀಯ ಸನ್ನಿವೇಶದಲ್ಲಿ, ಇಂತಹ ಸಾಮಾಜಿಕ ವಿಷಮತೆಯ ವಿರುದ್ಧ ಹೋರಾಡುತ್ತಲೇ ಗಾಂಧೀಜಿ ಮತ್ತೆಮತ್ತೆ ರೂಪುಗೊಳ್ಳುತ್ತಾ ಹೋದರು. ದೇಶದ ಎಲ್ಲ ಜನರ ನಡುವೆ ಸಂಪರ್ಕ ಸೇತುವನ್ನು ನಿರ್ಮಾಣ ಮಾಡುವ ಪ್ರಯತ್ನದಲ್ಲಿರುವಾಗ, ನಿರ್ಮಾಣಗಳನ್ನು ಸ್ಪೋಟಿಸುವ ನಿಕೃಷ್ಟರ ಪ್ರತಿನಿಧಿಯೊಬ್ಬನಿಂದ ಗಾಂಧಿ ಕೊಲ್ಲಲ್ಪಟ್ಟರು. ಗಾಂಧೀಜಿ ಹೇಗೆ ಬದುಕಿದ್ದರು, ಏನು ಚಿಂತಿಸಿದರು ಎಂಬುದರ ಜೊತೆಗೆ, `ನಮ್ಮ’ ವೈರಿಯೊಬ್ಬನಿಂದ ಗಾಂಧಿ ಹತರಾದರು ಎಂಬುದೂ ನಮಗೆ ಮುಖ್ಯವಾಗಬೇಕು. ಗಾಂಧಿಯ ಚಿಂತನೆಗಳು ತನ್ನೆಲ್ಲ ಮಿತಿಗಳ ನಡುವೆ ಬಹುಸಂಖ್ಯಾತ ದುಡಿವ ಸಮುದಾಯಗಳ ವೈರಿಗಳಿಗೆ ಬಳಕೆಯಾಗಲಿಲ್ಲ. ಗಾಂಧಿ ತತ್ವಗಳು ಪ್ರಭುತ್ವಕ್ಕೆ ಬಂಡವಾಳವಾಗಲಿಲ್ಲ. (ಆದರೆ, ಗಾಂಧಿಯ ಫೋಟೋ, ಆತನ ಕನ್ನಡಕ, ಚರಕ ಮತ್ತು ಚರಿಷ್ಮಾಗಳು ಆಳುವ ವರ್ಗಗಳಿಗೆ ಬಂಡವಾಳವಾದವು) ಗಾಂಧಿಯನ್ನು ಕೊಂದ `ಆ ಜನ’ ಗೋಡ್ಸೆಗೆ ದೇವಾಲಯ ಕಟ್ಟುತ್ತಿದ್ದಾರೆ, ಗಾಂಧೀಜಿಯ ಚಿಂತನೆಗಳನ್ನು ಆತ ಹುಟ್ಟಿದ ನೆಲದಿಂದಲೇ ಮೂಲೋತ್ಪಾಟನೆ ಮಾಡಿದವರು ದೇಶವನ್ನು ಫ್ಯಾಸಿಸಮ್ ಕಡೆಗೆ ಕೊಂಡೊಯ್ಯುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಗಾಂಧೀಜಿಯನ್ನು ಅವರ ಎಲ್ಲ ಮಿತಿಗಳ ನಡುವೆ ನಾವು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಹಾಗೆಂದು ನಾವು ಭಾವುಕವಾಗಿ ಗಾಂಧಿಯನ್ನು ಒಪ್ಪಿಕೊಳ್ಳುವ ಅಗತ್ಯವಿಲ್ಲ. ಶೋಷಿತ ಸಮುದಾಯಗಳ ಕುರಿತು ಭಾವುಕವಾಗಿ ಯೋಚಿಸುತ್ತಲೇ ಅವರು ನಮ್ಮ ಮೇಲೆ ಹೇರಿದ ಪೂನಾ ಒಪ್ಪಂದವನ್ನು ಖಾರವಾಗಿಯೇ ಪ್ರಶ್ನಿಸೋಣ. ಗಾಂಧಿಯ ಟ್ರಸ್ಟಿಷಿಪ್ ಚಿಂತನೆಗಳನ್ನು, ಅವರು ತಮ್ಮ ಸೈದ್ಧಾಂತಿಕ ವಿರೋಧಿಗಳನ್ನು (ಸುಭಾಷ್ ಚಂದ್ರ ಭೋಸ್, ಭಗತ್ ಸಿಂಗ್, ಅಂಬೇಡ್ಕರ್ ಮುಂತಾದವರನ್ನು) ನಡೆಸಿಕೊಂಡ ರೀತಿಯನ್ನು ನಾವು ವಿರೋಧಿಸೋಣ. ಆದರೆ ಇಡಿಯಾಗಿ ಗಾಂಧಿಯನ್ನಲ್ಲ.
ಪೂನಾ ಒಪ್ಪಂದದ ಸಂದರ್ಭದಲ್ಲಿ ದಲಿತರಿಗೆ ಪ್ರತ್ಯೇಕ ಮತಕ್ಷೇತ್ರಗಳನ್ನು ಮೀಸಲಿಡುವುದನ್ನು ವಿರೋಧಿಸಿ ಗಾಂಧಿ ಉಪವಾಸ ಕೂಡುತ್ತಾರೆ. ದಿನಕಳೆದಂತೆ ಗಾಂಧೀಜಿಯ ಆರೋಗ್ಯ ಕ್ಷೀಣಿಸುವುದನ್ನು ನೋಡಿದ ಬಾಬಾ ಸಾಹೇಬರು ವಿಧಿ ಇಲ್ಲದೆ ಪೂನಾ ಒಪ್ಪಂದಕ್ಕೆ ಸಹಿ ಹಾಕುತ್ತಾರೆ. ತಾವು ಗಟ್ಟಿಯಾಗಿ ಪ್ರತಿಪಾದಿಸುತ್ತಿದ್ದ ದಲಿತರಿಗೆ ಪ್ರತ್ಯೇಕ ಮತ ಕ್ಷೇತ್ರಗಳ ನಿಲುವುನ್ನು ಬಾಬಾ ಸಾಹೇಬರು ಗಾಂಧೀಜಿಯನ್ನು ಉಳಿಸಿಕೊಳ್ಳುವ ಕಾರಣಕ್ಕಾಗಿ ಸಡಿಲಿಸುತ್ತಾರೆ. ಹಾಗೆಂದು ನಮ್ಮ ಹಕ್ಕುಗಳನ್ನು ಬಲಿಗೊಡಬೇಕೆಂದೇನೂ ಇಲ್ಲ. ಹಕ್ಕುಗಳಿಗೆ ಹೋರಾಡುವ ನಮಗೆÉ ಬಾಬಾ ಸಾಹೇಬರ ಅಂತರ್ಸತ್ವ, ಅವರ ತಾಯ್ತನದ ಅಂತಃಕರಣ ಮತ್ತು ರಚನಾತ್ಮಕ ಪ್ರತಿಚಿಂತನೆಗಳೇ ಮಾದರಿ. ನಿಷ್ಪ್ರಯೋಜಕ ಮೂರ್ತಿಭಂಜಕ ಪ್ರವೃತ್ತಿ ಮತ್ತು ಅಂತಃಕರಣದ ಸ್ಪರ್ಶವಿಲ್ಲದ ಟೀಕೆಗಳು ನಮ್ಮನ್ನು ರಾಜಕೀಯ ಅಸೂಕ್ಷ್ಮರನ್ನಾಗಿಸುವ ಜೊತೆಗೆ ನಮ್ಮಲ್ಲಿನ ಮನುಷ್ಯನನ್ನೂ ಕೊಲ್ಲುತ್ತವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...