Homeಪ್ರಪಂಚಬ್ರೆಜಿಲ್ ಆಳುವ ವರ್ಗ ಮತ್ತು ಪ್ರಜಾತಂತ್ರ

ಬ್ರೆಜಿಲ್ ಆಳುವ ವರ್ಗ ಮತ್ತು ಪ್ರಜಾತಂತ್ರ

- Advertisement -
- Advertisement -

ಭರತ್ ಹೆಬ್ಬಾಳ್ |

2012ರ ಸೆಪ್ಟೆಂಬರ್ ತಿಂಗಳಲ್ಲಿ ‘ಭ್ರಷ್ಟಾಚಾರದ ವಿರುದ್ದ ಭಾರತ’ ಹೋರಾಟದ ಮುಂಚೂಣಿಯಲ್ಲಿದ್ದ ಪ್ರಶಾಂತ್ ಭೂಷಣ್ ಮತ್ತು ಅರವಿಂದ್ ಕೇಜ್ರಿವಾಲ್ ಅವರುಗಳು ಕಾಂಗ್ರೆಸ್ ಮತ್ತು ರಾಬರ್ಟ್ ವಾದ್ರಾ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡಿದ್ದು ನಿಮಗೆ ನೆನಪಿರಬಹುದು. ಆಗ ವಾದ್ರಾ ಇವರೆಲ್ಲ ‘ಬಾಳೆಹಣ್ಣು ಗಣತಂತ್ರದ ಮಾವಿನ ಪ್ರಜೆಗಳು’ ಎಂದು ಪ್ರತಿಕ್ರಿಯಿಸಿದ್ದರು. ರಾಜಕೀಯ ಶಬ್ದಕೋಶದಲ್ಲಿ ಬನಾನಾ ರಿಪಬ್ಲಿಕ್ (ಬಾಳೆಹಣ್ಣಿನ ಗಣತಂತ್ರ) ಎಂದರೆ ಒಂದು ಸೀಮಿತ ಸಂಪನ್ಮೂಲದ, ಉತ್ಪನ್ನದ ರಫ್ತಿನ (ಬಾಳೆ ಹಣ್ಣು ಅಥವಾ ಅದಿರು) ಮೇಲೆ ಅವಲಂಬಿತವಾಗಿರುವ, ರಾಜಕೀಯವಾಗಿ ಅಸ್ಥಿರವಾದ ದೇಶ ಎಂಬ ಅರ್ಥವನ್ನು ಕೊಡುತ್ತದೆ. ಸಾಮಾನ್ಯವಾಗಿ, ಬಾಳೆಹಣ್ಣಿನ ಗಣರಾಜ್ಯವು ಅತ್ಯಂತ ಶ್ರೇಣೀಕೃತ ಸಾಮಾಜಿಕ ವರ್ಗಗಳ ಸಮಾಜವನ್ನು ಹೊಂದಿರುತ್ತದೆ (ಒಂದು ಕಡೆ ದೊಡ್ಡ ಬಡ ಕಾರ್ಮಿಕ ವರ್ಗ, ಮತ್ತೊಂದು ಕಡೆ ಉದ್ದಿಮೆಪತಿಗಳು, ರಾಜಕಾರಣ ಮತ್ತು ಸೈನ್ಯದ ಗಣ್ಯರನ್ನು ಹೊಂದಿರುವ ಆಳುವ-ವರ್ಗದ ಪ್ರಭುತ್ವ).

ಈ ಪದವನ್ನು ಮೊದಲ ಬಾರಿಗೆ 1901 ರಲ್ಲಿ ಓ ಹೆನ್ರಿ ಎಂಬ ಅಮೆರಿಕಾದ ಬರಹಗಾರ ದಕ್ಷಿಣ ಅಮೆರಿಕಾದ ದೇಶಗಳನ್ನು ತನ್ನ ವಸಾಹುತುಶಾಹಿ ವಿಸ್ತರಣೆಯಿಂದ ಕೊಳ್ಳೆ ಹೊಡೆಯುತ್ತಿದ್ದ ಮತ್ತು ಲಾಭಕ್ಕಾಗಿ ದೇಶಗಳನ್ನೇ ಆಸ್ಥಿರಗೊಳಿಸುತ್ತಿದ್ದ ಅಮೆರಿಕಾದ ಯುನೈಟೆಡ್ ಫ್ರೂಟ್ ಕಂಪನಿ ಬಗ್ಗೆ ಬರೆಯುತ್ತಾ ಬಳಸುತ್ತಾರೆ. ಅಮೆರಿಕಾದ ಸಾಮ್ರಾಜ್ಯಶಾಹಿ ವಿಸ್ತರಣೆಗಾಗಿ ಈ ಇಂತಹ ಕಂಪನಿಗಳು ಮಾಡಿದ ಹತ್ಯಾಕಾಂಡಗಳು ಬಹಳಷ್ಟಿವೆ. ದಕ್ಷಿಣ ಅಮೆರಿಕ ಖಂಡದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಇತಿಹಾಸ ಇದನ್ನೇ ಸೂಚಿಸುತ್ತದೆ.

1964ರಿಂದ 1985ರವರೆಗೂ ಮಿಲಿಟರೀ ಸರ್ವಾಧಿಕಾರದಲ್ಲಿದ್ದ ಬ್ರೆಜಿಲ್ ಕಾನೂನಾತ್ಮಕವಾಗಿ ಗುಲಾಮಗಿರಿ ನಿರ್ಮೂಲನೆ ಮಾಡಿದ ಕೊನೆಯ ದೇಶ (1988ರಲ್ಲಿ). ತನ್ನ ದೇಶದಲ್ಲಿ ಅರ್ಧಕ್ಕಿಂತ ಜನಸಂಖ್ಯೆ ಕಪ್ಪು ಜನರಿದ್ದರೂ, ದೃಶ್ಯಮಾಧ್ಯಮದಲ್ಲಿ ಬಹುತೇಕ ಬಿಳಿಯರನ್ನೇ ತೋರಿಸುವ ದೇಶ. ಮೊದಲಿಂದಲೂ ವಸಾಹುತುಶಾಹಿ ಆಳ್ವಿಕೆಯಲ್ಲಿ ಬ್ರೆಜಿಲ್ಲನ್ನು ಬಿಳಿಯಾಗಿಸುವ ನೀತಿಗಳನ್ನು (ಯುರೋಪಿಯನ್ ಜನರನ್ನು ಬ್ರೆಜಿಲ್ ಮತ್ತಿತರ ದೇಶಗಳಿಗೆ ಕರೆತರುವುದು) ಉತ್ತೇಜಿಸಲಾಗಿತ್ತು. ಇಂತಹ ಇತಿಹಾಸದಿಂದಾಗಿ ಈಗಲೂ ಅದು ಅತ್ಯಂತ ವರ್ಣಭೇದ ಅನುಸರಿಸುವ ವ್ಯವಸ್ಥೆಯನ್ನು ಹೊಂದಿದೆ. ದಕ್ಷಿಣ ಭಾಗದಲ್ಲಿರುವ ಪ್ರದೇಶಗಳು ಬಹುತೇಕ ಬಿಳಿಯರಿಂದ ಕೂಡಿದೆ.

70ರ ದಶಕದಿಂದ ಪ್ರಪಂಚದಾದ್ಯಂತ ಆವರಿಸಿಕೊಂಡಿರುವ ನವಉದಾರೀಕರಣದ ಮೂಲ ಹುಡುಕುತ್ತಾ ಹೋದರೆ ಎಪ್ಪತ್ತರ ದಶಕದಲ್ಲಿ ಲ್ಯಾಟಿನ್ ಅಮೆರಿಕದಲ್ಲಾದ ರಾಜಕೀಯ ಬೆಳವಣಿಗೆಗಳ ಆದಿಯು ಸಿಗುತ್ತದೆ. ಮಿಲಿಟರಿ ಸರ್ವಾಧಿಕಾರ ಹೋಗಿ ಪ್ರಜಾಪ್ರಭುತ್ವ ಬಂದರೂ ಕೂಡ, ಸರ್ವಾಧಿಕಾರದ ಪರಂಪರೆಯು ಹಳೆಯ ದೊಡ್ಡ ದೊಡ್ಡ ಭೂಮಾಲೀಕರು, ಸಾರ್ವಜನಿಕ ಸಂಸ್ಥೆಗಳಲ್ಲಿನ ದೊಡ್ಡ ದೊಡ್ಡ ಕುಳಗಳು, ಮಿಲಿಟರಿಯ ಪ್ರಭಾವಗಳು ರಾಜಕೀಯ ಸಂಸ್ಕೃತಿಯಲ್ಲಿ ಆವರಿಸಿಕೊಂಡಿತ್ತು. ಇದರ ಜೊತೆಗೆ ಬ್ರೆಜಿಲ್‍ನ ಮಾಧ್ಯಮ ಕೂಡ ಯಾವಾಗಲೂ ಸಿರಿವಂತರ ಪರವಾಗಿತ್ತು. ಇಂದಿಗೂ ಬಹುತೇಕ ಬ್ರೆಜಿಲ್ ಮಾಧ್ಯಮ ಖಾಸಗಿ ಹಿಡಿತದಲ್ಲಿದೆ.

1965ರ ಮಿಲಿಟರಿ ಆಡಳಿತದಲ್ಲಿ ಹುಟ್ಟಿಕೊಂಡ ಗ್ಲೋಬೋ ಎನ್ನುವ ಒಂದು ಮಾಧ್ಯಮ ಸಂಸ್ಥೆಯು ಅಲ್ಲಿನ ಅತ್ಯಂತ ದೊಡ್ಡ ಮಾಧ್ಯಮ ಸಂಸ್ಥೆ. ಇದು ಆ ದೇಶದ ಅತ್ಯಂತ ದೊಡ್ಡ ಶ್ರೀಮಂತ ಮನೆತನದ ಮಾಲೀಕತ್ವದಲ್ಲಿದೆ. ದೇಶದ ಅರ್ಧದಷ್ಟು ಜನ ಗ್ಲೋಬೋ ವೀಕ್ಷಿಸುತ್ತಾರೆ (9 ಕೋಟಿಗೂ ಮೇಲೂ). ಭಾರತದ ಮಾಧ್ಯಮಗಳ ಅರ್ನಾಬ್ ಗೋಸ್ವಾಮಿ, ಸುಧಿರ್ ಚೌದರೀ, ರಜತ್ ಶರ್ಮ, ರೋಹಿತ್ ಸರ್ದಾನರಂಥ ಪತ್ರಕರ್ತರು ಸರ್ವಾಧಿಕಾರದ ತುತ್ತೂರಿಯನ್ನು ಇನ್ನೂ ಚೆನ್ನಾಗಿ ಹೇಗೆ ಊದಬೇಕು ಎಂಬ ಪಾಠವನ್ನು ಇವರಿಂದ ಕಲಿಯಬಹುದು ಎಂದರೆ, ಅದು ಇನ್ನೂ ಹೇಗಿರಬೇಕು ಊಹಿಸಿಕೊಳ್ಳಿ. ಬ್ರೆಜಿಲ್‍ನ ಎರಡನೇ ಅತಿದೊಡ್ಡ ಮಾಧ್ಯಮ ಸಂಸ್ಥೆ ‘ಬಾಂಡೆರಸ್ಟೆಸ್’ ಧಾರ್ಮಿಕ ಸಂಸ್ಥೆಯ ಒಡೆತನದಲ್ಲಿದೆ. ಬ್ರೆಜಿಲ್ ದೇಶ ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಕ್ರೈಸ್ತ ಧರ್ಮೀಯರಿರುವ ಕ್ಯಾಥೊಲಿಕ್ ದೇಶ. ಮಿಲಿಟರಿ ಜೊತೆ ಇವೂ ಕೂಡ ಬ್ರೆಜಿಲ್‍ನ ಸ್ಥಾಪಿತ ಹಿತಾಸಕ್ತಿ ಕಾಯುವ ಸಾಂಪ್ರದಾಯಿಕ ಪ್ರತಿಗಾಮಿ ಶಕ್ತಿಗಳು.

ಇವೆಲ್ಲವನ್ನೂ ಃಃಃ ಲಾಬಿ ಎಂದು ಕರೆಯುತ್ತಾರೆ. ಈ ಲಾಬಿಗೆ ಬ್ರೆಜಿಲ್ ಕಾಂಗ್ರೆಸ್ ಮತ್ತು ಸೆನೆಟ್ನಲ್ಲಿ 40% ಸಂಖ್ಯಾಬಲವಿದೆ. ಮೊದಲನೆಯದು ಬೀಫ್ ಲಾಬಿ, ಇದರಲ್ಲಿ ಸಾವಿರಾರು ಅಥವಾ ಲಕ್ಷ ಲಕ್ಷ ಎಕರೆಗಟ್ಟಲೆ ಹೊಂದಿರುವ ಭೂಮಾಲೀಕರು ಬರುತ್ತಾರೆ. ಇವರು ದನದ ಮಾಂಸ ರಫ್ತು ಮಾಡುವ ವ್ಯವಹಾರದ ಜೊತೆಗೆ ಸೋಯಾ ಬೀನ್, ಕಬ್ಬು(ಸಕ್ಕರೆ), ಆರೆಂಜ್, ಬಾಳೆಹಣ್ಣು, ಕಾಫೀ ರಫ್ತು ಮಾಡುವ ಗುಂಪಾಗಿದ್ದಾರೆ. ಚುನಾವಣೆಗೂ ಮುಂಚೆ ಬೊಲ್ಸಾನರೋ ಅಮೆಜಾನ್ ಕಾಡುಗಳನ್ನು ಕಡಿದು ಈ ವ್ಯವಹಾರದ ವಿಸ್ತರಣೆ ಮಾಡುವುದಕ್ಕೆ ಸಂಪೂರ್ಣ ಬೆಂಬಲ ಕೊಡುವುದಾಗಿ ಹೇಳಿದ್ದ. ಇನ್ನು ಎರಡನೆಯ ಬಿ, ಬುಲೆಟ್ ಲಾಬಿಯಲ್ಲಿ ಸ್ವತಹಃ ಬೊಲ್ಸಾನರೋ ದೊಡ್ಡ ನಾಯಕ. ಇವನ ಪ್ರಕಾರ ಇವನು ಕೂಡ ಪಾಲ್ಗೊಂಡಿದ್ದ ಮಿಲಿಟರಿ ಸರ್ವಾಧಿಕಾರದಲ್ಲಿ ಚಿತ್ರಹಿಂಸೆಯ ಜೊತೆಗೆ ಕಡಿಮೆ ಜನರನ್ನು ಸಾಯಿಸಿದ್ದು ದೊಡ್ಡ ತಪ್ಪು. ಇನ್ನೂ 30 ಸಾವಿರ ಜನರನ್ನು ಸಾಯಿಸಬೇಕಿತ್ತೆಂದು ಸಾರ್ವಜನಿಕವಾಗಿ ಹೇಳಿಕೆ ಕೊಟ್ಟಿದ್ದ. ಇವನ ಜೊತೆ ಇನ್ನೂ ಹಲವು ಮಿಲಿಟರಿ ಅಧಿಕಾರಿಗಳು ಕಾರ್ಮಿಕ ಪಕ್ಷದ ಅಧಿಕಾರದಲ್ಲಿ ಸ್ಥಾಪಿಸಿದ್ದ ‘ಸರ್ವಾಧಿಕಾರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತಾದ ಸತ್ಯ ಆಯೋಗ’ದ ಮುಂದೆ ವಿಚಾರಣೆಗಳನ್ನು ಎದುರುಸುತ್ತಿದ್ದಾರೆ. ಮೂರನೆಯದು ಬೈಬಲ್ ಲಾಬಿ, ಇದು ಕೂಡ ಧಾರ್ಮಿಕ ಮೂಲಭೂತವಾದ ಪ್ರತಿಪಾದಿಸುವ ಒಂದು ಗುಂಪು.

ಇವರೆಲ್ಲರ ಜೊತೆಗೆ ಅಮೆರಿಕ ಬೇಹುಗಾರಿಕೆ ಸಂಸ್ಥೆಗಳ ಸಹಭಾಗಿತ್ವ ಮತ್ತು ಬ್ರೆಜಿಲ್ ನ್ಯಾಯಾಂಗ ವ್ಯವಸ್ಥೆ ಸೇರಿ ಎರಡನೇ ಬಾರಿಗೆ ನ್ಯಾಯಯುತವಾಗಿ ಚುನಾಯಿರಾತಾಗಿದ್ದ ದಿಲ್ಮ ರೌಸೆಫ್‍ರನ್ನು ಒಂದು ಹುಸಿ ಆರೋಪದಡಿ ಅಧಿಕಾರದಿಂದ ಹೊರ ಹಾಕುತ್ತಾರೆ. ಇವರ ವಿರುದ್ದ ದೋಷಾರೋಪ ಮಾಡಿದ್ದ 4 ಜನರಲ್ಲಿ ನಾಲ್ಕು ಜನವೂ ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿದ್ದಾರೆ. ದಿಲ್ಮ ಆಡಳಿತದಲ್ಲಿ ಉಪರಾಷ್ಟ್ರಪತಿಯಾಗಿದ್ದ ಮಿಚಿಯಾಲ್ ತೆಮೆರ್ ತಾವು ಕೂಡ ದಿಲ್ಮರನ್ನು ಕೆಳಗಿಳಿಸುವ ಷಡ್ಯಂತ್ರದ ಪಾತ್ರಧಾರಿಯೂ ಆಗಿದ್ದರು ಮತ್ತು ಸ್ವತಃ ಅವರೇ ಭ್ರಷ್ಟಾಚಾರದ ಆರೋಪವನ್ನು ಎದುರಿಸಿ ಅಧಿಕಾರದಿಂದ ಕೆಳೆಗಿಳಿಯಬೇಕಾಗುತ್ತದೆ.

ನಂತರದ ಅಭಿಪ್ರಾಯ ಸಮೀಕ್ಷೆಯಲ್ಲಿ ಎಲ್ಲರಿಗಿಂತಲೂ ಮುಂಚೂಣಿಯಲ್ಲಿದ್ದ ಲೂಲಾರನ್ನು ಕ್ಷುಲ್ಲಕ ಕಾರಣಗಳನ್ನು ಮುಂದೆ ಮಾಡಿ, ನ್ಯಾಯಾಂಗ ವ್ಯವಸ್ಥೆಯನ್ನೂ ದುರ್ಬಳಕೆ ಮಾಡಿಕೊಂಡು ಜೈಲಿಗಟ್ಟುತ್ತಾರೆ. (ಬ್ರೆಜಿಲ್ ಚುನಾವಣೆಗಳಲ್ಲಿ ಒಬ್ಬ ಅಭ್ಯರ್ಥಿ ಸತತ ಎರಡು ಬಾರಿಗೂ ಹೆಚ್ಚು ಚುನಾವಣೆಗೆ ನಿಲ್ಲುವ ಹಾಗಿಲ್ಲ, ಹಾಗಾಗಿ 2010ರ ನಂತರ ಮತ್ತೆ 2018ರಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದರು). ಈ ತೀರ್ಪಿಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿ ತನ್ನ ಮಾನವ ಹಕ್ಕುಗಳ ಸಮಿತಿಯ ವತಿಯಿಂದ ಲೂಲಾರನ್ನು ಚುನಾವಣೆಯಿಂದ ಅನರ್ಹಗೊಳಿಸಬಾರದು ಮತ್ತು ವಿಚಾರಣೆ ನಡೆಯುವವರೆಗೂ ಅವರು ಚುನಾವಣೆಯಲ್ಲಿ ನಿಲ್ಲಬಹುದೆಂದು ಹೇಳಿಕೆ ನೀಡಿತ್ತು. ಈ ಚುನಾವಣೆ ಎಷ್ಟು ಆಳುವ ವರ್ಗದ ಪರವಾಗಿತ್ತೆಂದರೆ ತಮ್ಮ ಅಭ್ಯರ್ಥಿ ಗೆಲ್ಲಲು, ಇವರ ವಿರುದ್ಧ ಇದ್ದ ಗೆಲ್ಲುವ ಅಭ್ಯರ್ಥಿಯನ್ನು ಹೇಗಾದರೂ ಮುಗಿಸಬೇಕಿತ್ತು. ಬ್ರೆಜಿಲ್ ಚುನಾವಣೆಯಲ್ಲಿ ಆದದ್ದು ಅದೇ. ಇಲ್ಲಿ ಭಾರತದಲ್ಲಿ ಸರ್ವಾಧಿಕಾರದ ಹೆಜ್ಜೆಗಳು ದೊಡ್ಡ ದೊಡ್ಡದಾಗುತ್ತಿದ್ದಂತೆ ಇಲ್ಲೂ ಕೂಡ ಪ್ರತಿಪಕ್ಷದ ನಾಯಕರುಗಳನ್ನು ಜೈಲಿಗಟ್ಟಿದರೂ ಅದು ಆಶ್ಚರ್ಯವಲ್ಲ. ಈಗಾಗಲೇ ಇದನ್ನು ಕೆಲವು ನಾಯಕರುಗಳ ಮೇಲೆ ಅದನ್ನು ಉಪಯೋಗಿಸುತ್ತಿದ್ದಾರೆ.

(ಬೊಲ್ಸಾನರೋ ಪ್ರಚಾರ, ಅದರ ಹಿಂದಿನ ಶಕ್ತಿಗಳು, ಮುಂಬರುವ ಚುನಾವಣೆಗಳ ಬಗ್ಗೆ ಕಡೆಯ ಕಂತು ಮುಂದಿನ ಸಂಚಿಕೆಯಲ್ಲಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...