Homeಮುಖಪುಟಭೂದಾಹಕ್ಕೆ ಆಹುತಿಯಾದರಾ ಆಕ್ಟಿವಿಸ್ಟ್ ಅಜಿತ್ ನಾಯಕ್?!

ಭೂದಾಹಕ್ಕೆ ಆಹುತಿಯಾದರಾ ಆಕ್ಟಿವಿಸ್ಟ್ ಅಜಿತ್ ನಾಯಕ್?!

- Advertisement -
- Advertisement -

ಉತ್ತರ ಕನ್ನಡದ ಒಂದು ಕಾಲದ ಕೈಗಾರಿಕಾ ನಗರ ದಾಂಡೇಲಿ ಭೂಮಾಫಿಯಾದ ಆಡಂಬೋಲದಂತಾಗಿ ಹೋಗಿದೆ! ದೈತ್ಯ ರಾಜಕಾರಣಿ ದೇಶಪಾಂಡೆ ದೊಡ್ಡ ಕೈಗಾರಿಕೆಗಳ ಪ್ರಭಾವಿ ಮಂತ್ರಿ ಮಾಂಡಲೀಕನಾಗಿದ್ದಾಗಲೇ ಇಲ್ಲಿಯ ಒಂದೊಂದೇ ಕಾರ್ಖಾನೆಗಳು ಬಾಗಿಲು ಎಳೆದುಕೊಂಡಿರುವುದು ಇವತ್ತಿಗೂ ಬಿಡಿಸಲಾಗದ ಒಗಟಾಗೇ ಉಳಿದಿದೆ. ಈಗೇನಿದ್ದರೂ ದಾಂಡೇಲಿಯಲ್ಲಿ ಪ್ರವಾಸೋದ್ಯಮ “ದಂಧೆ”ಯ ಭಯಾನಕ ಭರಾಟೆ! ದಾಂಡೇಲಿ ಜೋಯಿಡಾದ ನಿತ್ಯಹರಿದ್ವರ್ಣ ಕಾಡಿನ ನೀರವತೆ ಮೃಗ-ಪಕ್ಷಿಗಳ ಕೂಗು-ಕಲರವ, ಕಾಳಿ-ಪಾಂಡರಿ ನದಿಗಳ ನಿನಾದ ತಂಡೋಪತಂಡವಾಗಿ ಪ್ರವಾಸಿಗರನ್ನ ಸೆಳೆಯುತ್ತಿದೆ. ಒಂದು ವಾರಕ್ಕೆ ಹಲವು ಕೋಟಿ ವಹಿವಾಟು ಆಗುತ್ತಿದೆ.
ದಾಂಡೇಲಿ-ಜೋಯಿಡಾದ ಸುತ್ತಲೂ ರೆಸಾರ್ಟ್, ಹೋಮ್‍ಸ್ಟೇಗಳದೇ ಹಾವಳಿ. ಪ್ರವಾಸೋದ್ಯಮದ ಮೋಜು-ಮಸ್ತಿ ಭೂ ಮಾಫಿಯಾ ನಿಭಾಯಿಸುತ್ತಿದೆ. ಹೀಗಾಗಿ ದಾಂಡೇಲಿಯ ಕಾಡಿನ ಅಂಚಿನ ಮತ್ತು ಕಾಳಿ ನದಿದಂಡೆಯ ಒಂದಿಂಚು ಜಾಗಕ್ಕೂ ಬಂಗಾರದ ಬೆಲೆ ಬಂದಿದೆ! ಟೂರಿಸಮ್‍ಗೆ ತೆಕ್ಕೆಹಾಕಿಕೊಂಡಿರುವ ಲ್ಯಾಂಡ್ ಲಫಡಾ, ಲಡಾಯಿ ದಾಂಡೇಲಿಯಲ್ಲಿ ನಿತ್ಯನೂತನ ಮುಂಬೈ-ಕೇರಳ-ಬೆಳಗಾವಿ-ಬೆಂಗಳೂರು ಮತ್ತು ಸ್ಥಳೀಯ ಭೂಭಾನ್ಗಡಿದಾರರು ಯಾರ್ಯಾರದೋ ಜಾಗ ಕಬಳಿಸಲು ಹೊಂಚುಹಾಕಿ ಕುಂತಿದ್ದಾರೆ. ಧೋಖಾ ಬಾಜಿಗಳ ಹಿಂದೆ ಸರ್ಕಾರಿ ಏಜೆನ್ಸಿಗಳು, ಕಾನೂನಿನ ಸಿಕ್ಕು ಬಿಡಿಸುವ ನ್ಯಾಯವಾದಿಗಳು, ಖಾಕಿಕಿರಾತಕರೆಲ್ಲ ಅಡಗಿಕೊಂಡಿದ್ದಾರೆ. ರೆಸಾರ್ಟ್ ಉದ್ಯಮಿಯಾಗಿ ಕೊಪ್ಪರಿಗೆ ಕಾಸು ಬಾಚುವ ದುರಾಸೆಯ ಪೈಪೋಟಿಯಿಂದ ದಾಂಡೇಲಿಯ ಪ್ರವಾಸೋದ್ಯಮಕ್ಕೆ ಈಗ ರಕ್ತದ ಕಲೆಯೂ ಅಂಟಿಬಿಟ್ಟಿದೆ!
ಕಳೆದ ಶುಕ್ರವಾರ, ಜುಲೈ 27ರ ರಾತ್ರಿ 9.30ರ ಹೊತ್ತಿಗೆ ಮುಸುಕುಧಾರಿ ಪಾತಕಿಯ ಮಚ್ಚಿನೇಟಿಗೆ ಹತರಾದ ದಾಂಡೇಲಿಯ ನಾಮಾಂಕಿತ ನ್ಯಾಯವಾದಿಯೂ, ಸಾಮಾಜಿಕ ಹೋರಾಟಗಾರರೂ ಆಗಿದ್ದ ಅಜಿತ್‍ನಾಯಕ್ ಬರ್ಬರ ಹತ್ಯೆ ಪ್ರಕರಣವೂ ಇದೇ ಪ್ರವಾಸೋದ್ಯಮ ನಂಟಿನ ಭೂ ಮಾಫಿಯಾದ ಭೀಭತ್ಸ ಕಾರ್ಯಾಚರಣೆ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಅಜಿತ್ ವಕೀಲಿಕೆಯಿಂದ ಭರ್ಜರಿ ದುಡ್ಡು-ಭೂಮಿ ಮಾಡಿಕೊಂಡಿದ್ದರು. ಸಣ್ಣ ಸೈಜಿನ ರಾಜಕಾರಣಿಯೂ ಆಗಿದ್ದರು. ದಾಂಡೇಲಿ ನಗರಸಭೆಯ ಅರ್ಯರೂ ಒಮ್ಮೆ ಆಗಿದ್ದರು. ಬ್ಲಾಕ್-ಕಾಂಗ್ರೆಸ್ ಕಮಿಟಿಯ ಅಧ್ಯಕ್ಷತೆ ನಿಭಾಯಿಸಿದ್ದರು; ಎಂಪಿಯಾಗಿದ್ದ ಮ್ಯಾಗಿ, ಸಿಎಂ ಆಗಿದ್ದ ‘ಬಂ’ ಬಾಂಧವ್ಯ ಅಜಿತ್‍ಗೆ ಇತ್ತು. ದಾಂಡೇಲಿಯ ಪರಿಸರ, ಸಾಮಾಜಿಕ ವ್ಯವಸ್ಥೆಗೆ ತೊಂದರೆಯಾದಾಗ ಆತ ಸೆಟೆದು ನಿಲ್ಲುತಿದ್ದರು. ಹೋರಾಟ ಕಟ್ಟೆ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು.
ದಾಂಡೇಲಿ ತಾಲ್ಲೂಕು ಮಾಡಬೇಕೆಂದು ಸಂಘಟನೆ ಮಾಡಿ ಹೋರಾಟ ಅಜಿತ್‍ನಾಯಕ್ ರೂಪಿಸಿದ್ದರು. ಈಚೆಗೆ ದಾಂಡೇಲಿ ತಾಲ್ಲೂಕು ಘೋಷಣೆಯಾದಾಗ ಆತ ತುಂಬ ಖುಷಿಯಾಗಿದ್ದರು. ದಾಂಡೇಲಿಯ ಜೀವನದಿ ಕಾಳಿ ಬೆನ್ನಿವನ ಮೇಲೆ ಸಾಲಾಗಿ ಕಟ್ಟಲಾಗಿರುವ ಜಲವಿದ್ಯುತ್ ಡ್ಯಾಮ್‍ನಿಂದಾಗುವ ಡ್ಯಾಮೇಜ್ ಅರಿವಿನ ಕಾಳಿ ಬಚಾವ್ ಆಂದೋಲನದಲ್ಲಿ ಅಜಿತ್ ಸಕ್ರಿಯರಾಗಿದ್ದರು; ನದಿಯಿಂದ ಎತ್ತುವ ಮರಳು ಮಾಫಿಯಾ, ಕೈಗಾರಿಕಾ ಮಾಲಿನ್ಯ ಮಾಫಿಯಾದ ಕಣ್ಣುರಿಗೂ ಆತ ಕಾರಣರಾಗಿದ್ದರು. ಆದರೆ ಇದ್ಯಾವುದೂ ಆತನ ಕೊಂದೇ ಹಾಕುವಷ್ಟು ಸೇಡಿನ ಶತ್ರುಗಳನ್ನೇನೂ ಸೃಷ್ಟಿಸಿರಲಿಲ್ಲ. ಹಾಗಂತ ಆತ ಗÀುಣಸ್ವಭಾವ ಕಂಡಿರುವ ದಾಂಡೇಲಿಯ ಜನರು ಹೇಳುತ್ತಾರೆ.
ಹಾಗಿದ್ದರೆ ಅಜಿತ್‍ನಾಯಕ್‍ರ ಕೊಲೆ ಮಾಡುವಂಥ ಹಠದ ಜಿದ್ದಿನ ಹಿನೆÀ್ನಲೆ ಏನಿರಬಹುದು ಎಂದು ಉತ್ತರ ಕನ್ನಡದಲ್ಲಿ ಬಿರುಸಿನ ಚರ್ಚೆಗಳು ನಡೆದಿದೆ. ಪೊಲೀಸರು ಆತನ ವಕೀಲಿ ವೃತ್ತಿಗೆ ಸುತ್ತಿಕೊಂಡಿದ್ದ ಒಂದಿಷ್ಟು ಭೂಮಾಫಿಯಾ ವ್ಯವಹಾರಗಳತ್ತ ತನಿಖೆ ಕೇಂದ್ರೀಕರಿಸಿದ್ದಾರೆ. ಈಚೆಗೆ ಅಜಿತ್‍ನಾಯಕ್‍ಗೆ ಭೂಮಿಯ ಮೋಹ ವಿಪರೀತವಾಗಿತ್ತು. ಆತ ಹಲವು ಕಡೆ ಬೇನಾಮಿಯಾಗಿ ಭೂಖರೀದಿಯೂ ಮಾಡಿದ್ದರು. ರೆಸಾರ್ಟ್ ಬಿಸ್ನೆಸ್‍ನ ಸೆಳೆತಕ್ಕೆ ಬಿದ್ದಿದ್ದರಂತೆ. ಕಾಳಿನದಿ ತೀರದ ಮೌಳಂಗಿ ಎಂಬ ಮನಮೋಹಕ ಪ್ರದೇಶದ ಪ್ರೈಮ್ ಲ್ಯಾಂಡ್ ಮೇಲೆ ಅಜಿತ್ ಕಣ್ಣು ಬಿದ್ದಿತ್ತಂತೆ. ಇದೇ ಆತನಿಗೆ ಗಂಡಾಂತರಕಾರಿ ಆಯ್ತೆಂಬ ಕಾರಾರುವಾಕ್ಕಾದ ಲೆಕ್ಕಾಚಾರದ ಮಾತುಗಳೀಗ ದಾಂಡೇಲಿಯಲ್ಲಿ ಮೊಳಗಲಾರಂಭಿಸಿದೆ!
ಒಂದು ಸುದ್ದಿಯಂತೆ ಮೌಳಂಗಿಯ ಎರಡು ದಲಿತ ಕುಟುಂಬದ ಮಧ್ಯೆ ಭೂವ್ಯಾಜ್ಯ ನಡೆದಿತ್ತು. ಒಂದು ಕಡೆ ವಕೀಲರಾಗಿ ಅಜಿತ್‍ನಾಯಕ್ ನಿಂತಿದ್ದರು. ಎದುರಾಳಿ ತಂಡದ ಪಾಂಡುರಂಗ ಕಾಂಬಳೆಗೆ ಬಲಾಢ್ಯ ಭೂಮಾಫಿಯಾದ ನಂಟಿತ್ತು. ಕಾಂಬಳೆಯ ಜಾಗವನ್ನು ಎದುರುದಾರರು ಕಬ್ಜಾ ಮಾಡಿಕೊಂಡಿದ್ದರು. ಇದು ಘನಘೋರ ಕಾಳಗಕ್ಕೂ ಕಾರಣವಾಗಿಹೋಯ್ತು. ಆಗ ಅಜಿತ್ ನಾಯಕ್ ಮುತುವರ್ಜಿಯಲ್ಲಿ ಸರ್ವೇಯೂ ನಡೆಯಿತು. ತಾವೇ ಖುದ್ದು ನಿಂತು ಮೋಜುಣಿ ಮಾಡಿಸಿದ್ದರಂತೆ. ದೀಪಕ್ ಯಾನೆ ಪಾಂಡುರಂಗ ಕಾಂಬಳೆಯವರ ವಿರುದ್ಧ ಪೊಲೀಸ್ ಕಂಪ್ಲೇಂಟೂ ಆಗಿತ್ತು. ಪೊಲೀಸರು ಅಜಿತ್‍ನಾಯಕ್‍ರ ಪ್ರಭಾವದಿಂದ ಎದುರಾಳಿಗಳನ್ನು ಸತಾಯಿಸಿದ್ದರು. ಅಷ್ಟೇ ಅಲ್ಲ, ಕೆರಳಿದ ಕಾಂಬಳೆ ಪಾಳಯವು ಅಜಿತ್‍ನಾಯಕ್‍ರ ಕಕ್ಷಿದಾರನ ಜಾಗಕ್ಕೆ ಮಾರಕಾಸ್ತ್ರಗಳ ಸಮೇತ ಲಗ್ಗೆಹಾಕಿ ಧಮಕಿ ಹಾಕಿತ್ತು. ಒಂದೆಡೆ ತಗಾದೆ ನ್ಯಾಯಾಲಯ ಮೆಟ್ಟಿಲೇರಿದರೆ, ಮತ್ತೊಂದೆಡೆ ಆರೋಪಿಗಳಿಗೆ ಪೊಲೀಸರು ಜೈಲಿಗೆ ಹಾಕಿ ಬೆಂಡೆತ್ತಿದ್ದರು. ಇದಕ್ಕೆಲ್ಲ ವಕೀಲ ಅಜಿತ್‍ನಾಯಕ್ ಚಿತಾವಣಿಯೇ ಕಾರಣವೆಂಬ ಸಿಟ್ಟು ಕಾಂಬಳೆ ಕುಟುಂಬಕ್ಕಿತ್ತು. ಕೆರಳಿ ಬುಸುಗುಡುತ್ತಿದ್ದ ಕಾಂಬಳೆ ತಂಡ ಅಜಿತ್‍ನಾಯಕ್‍ಗೆ ಬೆದರಿಕೆ ಫೋನ್ ಕರೆಗಳನ್ನು ಆಗಾಗ ಮಾಡುತ್ತಲೇ ಇತ್ತು.
ಇದನ್ನು ಅಜಿತ್ ಸೀರಿಯಸ್ಸಾಗಿ ಪರಿಗಣಿಸಿರಲಿಲ್ಲ ಈಗ ದಾಂಡೇಲಿಯಲ್ಲಿರುವ ಪುಕಾರುಗಳ ಪ್ರಕಾರ ತುಂಬ ಬೆಲೆಬಾಳುವ ಮಹತ್ವದ ಟೂರಿಸಮ್ ಸೈಟಾಗಿದ್ದ ಮೌಳಂಗಿಯ ಜಾಗದಲ್ಲಿ ಬೇನಾಮಿ ರೆಸಾರ್ಟ್ ಮಾಡುವ ಸ್ಕೆಚ್ ಹಾಕಿದ್ದ ಅಜಿತ್‍ನಾಯಕ್ ತುಂಬ ವ್ಯವಸ್ಥಿತವಾಗಿ ಎದುರಾಳಿಗಳ ಹಣಿಯಲು ಹತ್ತಿದ್ದರು. ಆದರೆ ಇದೇ ಜಾಗಕ್ಕಾಗಿ ಬಲಾಢ್ಯ ಭೂಮಾಫಿಯಾ ಒಂದು ಪ್ರಯತ್ನ ನಡೆಸಿ ಮತ್ತೊಂದು ದಲಿತÀ ಕುಟುಂಬದ ಬೆನ್ನಿಗೆ ನಿಂತಿತ್ತು. ಮೌಳಂಗಿಯಲ್ಲಿ ಈಕೋ ಪಾರ್ಕ್ ಆದ ಬಳಿಕ ವಿವಾದಿತ ಜಾಗದ ಕಿಮ್ಮತ್ತು ಜಾಸ್ತಿಯಾಗಿತ್ತು; ಅಜಿತ್ ನಾಯಕ್ ಕೂಡಾ ಸದ್ರಿ ಜಾಗದ ಬಗ್ಗೆ `ವಿಶೇಷ’ ಆಸಕ್ತಿ ವಹಿಸಿದ್ದರು. ಇದು ಪಾಂಡುರಂಗ ಕಾಂಬಳೆಯ ಆಕ್ರೋಶ ಹೆಚ್ಚಿಸಿತ್ತು. ಈ ದ್ವೇಷ ಒಳಗೊಳಗೇ ಹೊಗೆಯಾಡುತ್ತಲೇ ಇತ್ತು. ಅಜಿತ್‍ನಾಯಕ್‍ರ ಕಾನೂನು ತಂತ್ರಗಾರಿಕೆ, ಖಾಕಿಗಳ ಮೇಲಿನ ಹಿಡಿತದಿಂದ ಎದುರಾಳಿ ತಂಡ ಹೈರಾಣಾಗಿಹೋಗಿತ್ತು. ಇದು ಕೊಲೆಗೂ ಪ್ರೇರೇಪಿಸಿತೆಂಬ ತರ್ಕ ನಡೆದಿದೆ. ಇದು ಜನಸಾಮಾನ್ಯರದ್ದಷ್ಟೇ ಅಲ್ಲ, ಪೊಲೀಸರ ತಲೆಯೂ ತಿನ್ನುತ್ತಿದೆ.
ಹಂತಕರು ಹಲವು ದಿನಗಳಿಂದ ಅಜಿತ್‍ನಾಯಕ್ ಚಲನವಲನ, ಚಟುವಟಿಕೆ ಮೇಲೆ ನಿಗಾಯಿಟ್ಟು ನೋಡಿದ್ದಾರೆ. ಆತ ಅಂದು ರಾತ್ರಿ ದಾಂಡೇಲಿಯ ಜೆಎನ್ ರಸ್ತೆಯಲ್ಲಿರುವ ಕಚೇರಿಯಿಂದ ಹೊರಬರುವುದನ್ನೇ ಕಾದು ಕುಳಿತಿದ್ದಾರೆ. ಒಬ್ಬರೇ ಬರುವುದು ಖಾತ್ರಿಯಾಗಿದೆ. ಆತ ಕಾರಿನ ಬಳಿ ಹೋಗುವಾಗ ಮಚ್ಚಿನಿಂದ ತಲೆಗೆ ಹೊಡೆದಿದ್ದಾರೆ. ತಲೆಯ ಎಡಭಾಗ ಸೀಳಿಹೋಗಿದೆ. ಕಿವಿಯೂ ಚಿಂದಿಯಾಗಿದೆ. ಕೊಚ್ಚಿದ ರಭಸಕ್ಕೆ ಅಜಿತ್ ನಿಂತಲ್ಲೇ ಕುಸಿದು ರಕ್ತದ ಮಡುವಲ್ಲಿ ಒದ್ದಾಡಿ ಜೀವ ಬಿಟ್ಟಿದ್ದಾರೆ. ಕತ್ತಲಲ್ಲಿ ಹಂತಕ ಕರಗಿಹೋಗಿದ್ದಾನೆ. ಪೊಲೀಸರು ಈ ಲ್ಯಾಂಡ್ ಪ್ರಕರಣದತ್ತಲೇ ತನಿಖೆ ನಡೆಸಿದ್ದಾರೆ. ಹಂತಕನನ್ನು ಬಂಧಿಸಲಾಗಿದೆ ಎಂಬ ಅನಧಿಕೃತ ಸುದ್ದಿಯೂ ಹಬ್ಬಿದೆ ಯಲ್ಲಾಪುರದಲ್ಲಿ ಸೆರೆಸಿಕ್ಕಿರುವ ಹಂತಕ ಕೊಲೆ ಮಾಡಿರುವುದು ಒಪ್ಪಿಕೊಂಡಿದ್ದಾನಂತೆ!
ಆತ ಅಸ್ತ್ರವಷ್ಟೇ! ಬಳಸಿದ್ದು ಯಾರೆಂಬುದು ಬಹಿರಂಗವಾಗಬೇಕಾಗಿದೆ. ಒಂದಂತೂ ಖರೆ; ಅಜಿತ್‍ನಾಯಕ್ ಕೋಲೆ ದಾಂಡೇಲಿ ಭಾಗದ ರೆಸಾರ್ಟ್ ದಂಧೆಯ ಅನಾಹುತಕಾರಿ ಆಯಾಮ ತೋರಿಸಿದೆ!

– ವರದಿಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...