Homeಅಂಕಣಗಳುಮಾದೇಗೌಡರ ಮಾನ ಮೂರು ಕಾಸಿಗೆ ಹೋಯ್ತಂತಲ್ಲಾ

ಮಾದೇಗೌಡರ ಮಾನ ಮೂರು ಕಾಸಿಗೆ ಹೋಯ್ತಂತಲ್ಲಾ

- Advertisement -
 ಯಾಹೂ |
ನೇರ ನಡೆ ನುಡಿಗೆ ಹೆಸರಾಗಿದ್ದ ಜಿ. ಮಾದೇಗೌಡರು, ಜೆಡಿಎಸ್ ಕಡೆಯಿಂದ ಹಣ ಬರುತ್ತದೆಂದು ಮಂಡ್ಯದ ಗಾಂಧಿಭವನದ ಎದುರು ಕುಳಿತು ಕಾದು ಸಾಕಾಗಿ, ಕಡೆಗೆ ಪುಟ್ಟರಾಜನಿಗೆ ಫೋನು ಮಾಡಿ ‘ಎಲ್ಲೊದುಡ್ಡು’ ಎಂದರಂತಲ್ಲಾ, ಪುಟ್ಟರಾಜನಿಗೆ ಮಾದೇಗೌಡರಿಂದ ಸಾಲ ಪಡೆದು ಬಡ್ಡಿಯನ್ನು ಕೊಡದೆ ಕುಂತವನ ದನಿಯಲ್ಲಿ, “ಅಪ್ಪಾಜಿಆರೇಂಜ್ ಮಾಡ್ತಿನಿ” ಎಂದುಗೋಗರೆದಂತರಲ್ಲಾ.ಮಾದೇಗೌಡರು, ಮಂಡ್ಯದ ಸೊಗಡಿಗೆ ಹೆಸರಾದವರು, ಗಾಂಧಿಮಾರ್ಗಿ ಬೇರೆ, ಅದಕ್ಕಾಗಿ ಗಾಂಧಿ ಭವನ ನಿರ್ಮಿಸಿ ಇಳಿ ಹೊತ್ತಿನಲ್ಲಿ ಅದರ ಮುಂದೆ ಕುಳಿತು ಈ ನಾಡಿನ ಬಗ್ಗೆ ಚಿಂತಿಸದವರು. ಆದರೆ ಸ್ವಂತದ ಬಗ್ಗೆ ತುಂಬಾ ಯೋಚಿಸಿ ದವರು. ಈ ಹಿಂದೆ ಮಗನಿಗೆ ಕಾಂಗ್ರೆಸ್ ಟಿಕೆಟ್ ಕೊಡಲಿಲ್ಲ ಎಂದು ದೂರಿ ಕಾಂಗ್ರೆಸ್ ತೊರೆದು ಬಿ.ಜೆ.ಪಿ ಅವರಿಗೆ ಒಗ್ಗಲಿಲ್ಲ. ಮತ್ತೆ ಕಾಂಗ್ರೆಸ್‍ಗೆ ಮರಳಿ ಮಗನ ಕೈಲಿ ಹಣ ಕಳಿದು. ಇಲ್ಲ ಯಾರು ಕೊಡ್ತಾರೊ ಅವುರೆಸರೇಳು ನಾವೇ ವಸೂಲು ಮಾಡ್ತಿವಿ” ಎಂದಿರೋದು .ವಯಸ್ಸಾದಂತೆ ತಲೆಯೊಳಗಿನ ಸಿದ್ಧಾಂತಗಳು ಸಾಯುತ್ತ, ಕುಟುಂಬದ ವ್ಯಾಮೋಹ ಅಮರಿಕೊಳ್ಳುವುದು, ಈ ಮಾದೇಗೌಡನನ್ನ ಬಿಡಲಿಲ್ಲವಲ್ಲಾ. ಅದೇನಾದರಾಗಲಿ. ಕಡೇಗಳಿಗೆಯಲ್ಲಿ ಚಿಲ್ಲರೆ ಕಾಸಿಗೆ ಪುಟ್ಟರಾಜನನ್ನ ಕೇಳಿ ಮಾದೇಗೌಡನ ಮಾನ ಮೂರು ಕಾಸಿಗೆ ಹರಾಜಾಯ್ತಲ್ಲಾ ಥೂತ್ತೆರಿ.
ಮಂಡ್ಯ ಚುನಾವಣೆಯ ರಂಗು ತಾರಕಕ್ಕೇರಿರುವುದರ ದ್ಯೋತಕವಾಗಿ, ಎನ್.ಡಿ.ಟಿ.ವಿ.ಯ ಮಾಯಾ ಶರ್ಮಾ ಸುಮಲತಾರ ಹಿಂದೆತಿರುಗುತ್ತಿರುವುದು ಗೊತ್ತಾಗಿ, ಮಾಯಾಗೆ ಫೋನ್ ಮಾಡಿದರೆ ಅವರು ಫೋನ್ ತೆಗೆಯಲಿಲ್ಲ. ಎನ್.ಡಿ ಟಿವಿ ಮಾಯಾ ಇವರಿಗಿಂತಲೂ ನಮ್ಮ ವಾಟಿಸ್ಸೆ ಸರಿಯಾಗಿ ಸುದ್ದಿ ನೀಡಲು ಸೂಕ್ತ ವ್ಯಕ್ತಿಯೆಂದು ಫೋನ್ ಮಾಡಲಾಗಿರಿಂಗಾಯ್ತು, ರಿಂಗ್‍ಟೂನ್ “ಬಲೆ ಚಾನ್ಸಿದೆ, ಲಕ್ಕಿ ಚಾನ್ಸಿದೆ, ಬಲೆ ಚಾನ್ಸಿದು’ ‘ಗುಡ್‍ಯುವುನಿಂಗ್ ಸಾರ್’
“ಎಲ್ಲಿದ್ದಿ ವಾಟಿಸ್ಸೆ”
“ಬಿಂಡಿಗನವಿಲೆ ಹೆಸರು ಕೇಳಿದ್ದಿರ ಸಾರ್.”
“ಗೊತ್ತು ಗರುಡಾಚಾರ್ರೂರು”
“ಅಷ್ಟೆ ಅಲ್ಲ ಸಾರ್. ಅಣು ವಿಜ್ಞಾನಿ, ರಾಜಾರಾಮಣ್ಣನ ಊರು. ಸಿನಿಮಾ ಡೈರೆಕ್ಟರು, ಬಿ.ಎಸ್.ರಂಗನ್‍ಊರಿದು”
“ಹೌದಾ”
“ಇಂತ ಪ್ರತಿಭಾವಂತ್ರೆ ಒಂದು ಡಜನ್ ಇರೊ ಊರಿದು”
“ಅಷ್ಟೊಂದು ಪ್ರತಿಭಾವಂತ್ರಿದ್ದರ”
“ನಾವಲ್ಲ ಸಾ ಅವುರ್ಯಲ್ಲ ಅಯ್ಯಂಗಾರ್ರು”
“ಸರಿ ಬುಡು”
“ಈ ಊರಿಗೆ ನಿಖಿಲ್ ಬತ್ತನೆಅಂತ ಭಾರಿಜನ ಸೇರ್ಯವುರೆ”
“ಅಷ್ಟೊಂದು ಜನ ಬಂದವುರಾ”
“ಪರೆಡ್‍ಗೆ ತವುಜೆಂಡಿಂದ ತ್ರೀ ಅಂಡ್ರೆಡ್‍ವರಿಗೂ ಬಟಾವಡೆ ಆಗ್ಯದೆ ಸಾ”
“ಇನ್ನ ಓಟಿಗೆಷ್ಟು ಕೊಡ್ತಾರಪ್ಪ”
“ಅದ ಹೇಳಕ್ಕೆ ಬರದಿಲ್ಲ ಸಾರ್. ಪ್ರತಿಎಮ್ಮೆಲ್ಲೆಗೂ 25 ಕೋಟಿ ಟಾರ್ಗೆಟ್ ಕೊಟ್ಟವುನಂತೆ ಕುಮಾರಣ್ಣ”
“ಅಂದ್ರೆ ಅವುರು ಕೈಯಿಂದ ಖರ್ಚು ಮಾಡಬೇಕಾ”
“ಪುಟ್ಟರಾಜ ತಮ್ಮಣ್ಣ ನಾವೇ ಹಾಯ್ಕಂಡು ಖರ್ಚು ಮಾಡ್ತಿವಿ ಅಂದಿದ್ದರಂತೆ”
“ಅನ್ನಲೇಬೇಕು ಬುಡು. ಇದೇ ತಮ್ಮಣ್ಣನ ಆಸ್ತಿ ವಿಷಯದಲ್ಲಿ ಮಾದೇಗೌಡ್ರು ಹಿಂದೆನೆ ಹೋರಾಡಿದ್ರು”
“ಮಾದೇಗೌಡ ಬುಡಿ ಸಾ. ಅವುನು ಮಾತಾಡಿದ್ರೆ ಅಂಬರೀಶು “ಲೇ ಮುದುಕ ಸುಮ್ಮನಿರು ಇಲ್ಲ ಅಂದ್ರೆ ನಿನ್ನ  ಕತ್ತಿಸಗತಿನಿ ಅಂತಿದ್ನಂತೆ”
“ತಮಾಸಿಗೆ ಅಂಗಂತಿದ್ರು”
“ತಮಾಸಿನೆ ಆದ್ರು ಈ ಮುದುಕ ಹಾಳಾದನಲ್ಲ ಸಾ”
“ಏನು ಹಾಳಾಗಿಲ್ಲ. ಚುನಾವಣೆ ಕರ್ಚಿಗೆ ದುಡ್ಡು ಕೇಳ್ಯವುರೆ ಅಷ್ಟೆ”
“ಮಾದೇಗೌಡ ಪುಟ್ಟರಾಜನ್ನ ಕೇಳಿದಕ್ಕಿಂತ, ಕುಮಾರಣ್ಣನ್ನ ಕೇಳಬೇಕಾಗಿತ್ತು ಸಾ”
“ಕುಮಾರಣ್ಣ ಯಮ್ಮೆಲ್ಲೆಗಳಿಗೆ ವಯಿಸಿಬುಟ್ಟವುನೆ”
“ಮಗನ್ನ ಗೆಲ್ಲಿಸಿಕೊಂಡು ಬರೊ ಜವಾಬ್ದಾರಿಯ ಎಮ್ಮೆಲ್ಲೆಗಳೇ ವಯಿಸಿಕೊಂಡವಂತಲ್ಲ ಸಾ. ಪಾಪ ಆ ಹುಡುಗನಿಗೆ ಬಾಸಣ ಬರವಿಲ್ಲ”
“ವ ಪರವಾಗಿಲ್ಲ ಮಾತಾಡ್ತನೆ”
“ಏನು ಮಾತಾಡ್ತನೆ ಸಾ. ನಾನು ಕುಮಾರಸ್ವಾಮಿ ಹೊಟ್ಟೆಲುಟ್ಟಕ್ಕೆ ಪುಣ್ಯ ಮಾಡಿದ್ದೆಅಂತದೆ.ನಮ್ಮಪ್ಪ ಮಂಡ್ಯಕೆಎಂಟು ಸಾವುರ ಕೋಟಿ ಕೊಟ್ಟವುನೆ ಅಂತದೆ. ನಮ್ಮ ಪಾರ್ಟಿ ಕಾರ್ಯಕರ್ತರಿಗೆ ಯಾರಾದ್ರು ಮೈ ಮುಟ್ಟಿದ್ರೆ ಹುಶಾರು ಅಂದರೆ. ಎಲ್ಲಿತ್ತು ಈ ಕರ್ಮ”
“ಇನ್ನು ಮುಂದೈತೆ ನಿಮಗ್ಯಲ್ಲ”
“ಯಾಕೊ ಅಂಗೆ ಕಾಣ್ತದೆ ಸಾ. ಈ ದ್ಯಾವೇಗೌಡ ಮಕ್ಕಳು ಮರಿನ್ಯಲ್ಲ ರಾಜಕಾರಣಕ್ಕೆ ತರದೇ ಆಗಿದ್ರೆ, ಅವುಕೆ ಒಳ್ಳೆ ಮಾತು, ನಡವಳಿಕೆ, ವಿದ್ಯೆ, ಬುದ್ಧಿ, ಕಲಿಸಿ ಕಳಿಸಬೇಕಾಗಿತ್ತು ಸಾ”
“ದ್ಯಾವೇಗೌಡ್ರೆ ಅಂಗಿದ್ದ ಮೇಲೆ ಅವುಕೆಲ್ಲಿ ಕಲಿಸ್ಯಾರು”
“ಅದು ಸರಿನೆ ಬುಡಿ, ಗೌಡ್ರು ಪಾರ್ಟಿ ಸಿದ್ಧಾಂತಕ್ಕೆ ಒಗ್ಗಿಕಳೊ ಬದ್ಲು ಪಾರ್ಟಿನೆತನಿಗೆ ಬೇಕಾದಂತೆ ಬಗ್ಗಿಸಿಗಂಡ್ರು”
“ಪರವಾಗಿಲ್ಲ ಗೌಡ್ರು ಬಗ್ಗೆ ತಿಳಿಕಂಡಿದ್ದಿ”
“ಯಾವುದಾದ್ರು ಯೂನಿವರ್ಸಿಟಿ ಪರಮಿಷನ್ ಕೊಟ್ರೆ ಡಾಕ್ಟರೇಟ್ ಮಾಡನ ಅಂತ ಇದ್ದಿನಿ ಸಾ”
“ಹಂಪೆ ಯೂನಿವರ್ಸಿಟಿಲಿ ನೊಂದಾಯಿಸಿ ಮಾಡು”
“ಹಂಪೆ ಅಂದೇಟಿಗೆ ಗೆಪ್ತಿಗೆ ಬತ್ತು ಸಾ. ಅಲ್ಲೊಬ್ಬಳು ಮಲ್ಲಿಕಾಗಂಟಿ ಅಂತ ಇದ್ಲು ಈಗ್ಲು ಇದ್ದಳಾ”
“ಇಲ್ಲ ಹೋದ್ಲು. ವಿಶಭಟ್ಟಗೊತ್ತ ನಿಂಗೆ”
“ಗೊತ್ತು ಸಾ. ಇಲ್ಲೆ ನಮ್ಮ ನಾಗ್ತಳ್ಳಿ ಚಂದ್ರನ ಬಗ್ಗೆ ಮಾತಾಡಕ್ಕೆರ ಬಂದಿದ್ದ. ಹುಟ್ಟ ಕಳ್ಳಿದ್ದಂಗಿದ್ದ”
“ಅವುನ್ನ ಈ ನಿಮ್ಮಗಂಟೆ ಸಮಾರಂಭಕ್ಕೆ ಕರೆದಿದ್ಲು”
“ಕರಿಬಾರ್ದ”
“ಕಳ್ಳನಂಗಿದ್ದ ಅಂತಿ ಕರಿಬಾರ್ದ ಅಂತಿ ಯಲ್ಲಯಾ. ಆ ಹುಟ್ಟು ಸುಳ್ಳಪ್ಪ ಕ್ಯಟ್ಟಚೆಡ್ಡಿ”
“ಚೆಡ್ಡಿಲಿ ವಳ್ಳೆ ಚೆಡ್ಡಿನೂ ಇದ್ದವಾ”
“ಅವೆ ಆದ್ರೆ ಇವುನು ಮಾತ್ರ ವಿಶಪಾತಕ .ಇಂಥೊನ್ನ ಆ ಗಂಟಿ ಸಮಾರಂಬಕ್ಕೆ ಕರಿಸಿಗಂಡು ಸರಿಯಾಗಿ ಉಗಿಸಿಗಂಡ್ಳು”
“ನಾವು ಯಾರ ಪರನೂ ಮಾತಾಡಂಗಿಲ್ಲ ಸಾ. ಯಾರು ಯಾವಟೈಮಲ್ಲಿ ಬದ್ಲಾಯ್ತಾರೊ ಏನೊ”
“ಬದಲಾವಣೆ ಕಾಲದ ನಿಯಮ”
“ಅದು ಮನುಸುನ ಮನಸಿಗೂ ಅನ್ವಯಿಸ್ತದಾ”
“ಊ ಮತ್ತೆ ಕರ್ನಾಟಕದಲ್ಲಿ ಈಗ ಯಂತ ಬದಲಾವಣೆ ಆಗ್ಯದೆಗೊತ್ತ”
“ಗೊತ್ತು ಸಾ. ಈ ಡಿಕೆಶಿ, ಕುಮಾರಸ್ವಾಮಿ ಹೊಡದಾಡಿಕಂಡೆ ಸತ್ತೊಯ್ತರೆ ಅನಕಂಡಿದ್ದೆ. ಈಗ ನೋಡಿದ್ರೆ ದ್ಯಾವೇಗೌಡನ ಹಣೆಗೆ ಅಕ್ಷತೆ ಆಗ್ಯವುರೆ”
“ಅಕ್ಷತೆನೆ”
“ಊ ಸಾ. ಡಿಕೆಶಿ ಹರಸಣ ಅಕ್ಕಿ ಸೇರಿದ್ರೆ ಅಕ್ಷತೆ ಅಂದ. ಅದ ಯಾರಿಗಿಡಬೇಕು ದ್ಯಾವೇಗೌಡನಿಗೆ ತಾನೆ”
“ನಿಜಕಣಯ್ಯ”
“ಇನ್ನ ಅಹಿಂದ ಸಭೆಲಿ ಈ ಸಿದ್ದರಾಮಯ್ಯ ದ್ಯಾವೇಗೌಡರನ್ನ ಬೋದಿದ್ದ ನೋಡಿದ್ರೆ, ಇನ್ನ ಮುಗಿತು. ಈ ಜಲುಮದಲ್ಲಿ ಇವುರು ಹಿಂಗೇ ಸತ್ತೋಯ್ತರೆ ಅನ್ನಕಂಡಿದ್ದೆ. ತೀರ ಇತ್ತೀಚಿಗೆ, ಈ ಸಿದ್ದರಾಮಯ್ಯನಂತ ನೀಚ ಮುಕ್ಯಮಂತ್ರಿನ ನೋಡೇ ಇಲ್ಲ ಅಂದ ದ್ಯಾವೇಗೌಡ, ಈಗ ನೋಡಿದ್ರೆ ಜಾತ್ರೆಗೆ ರೆಡಿಯಾಗಿರೋ ಜೋಡೆತ್ತಿನಂಗೆ ಜ್ವತೆಲೆ ನಿಂತವುರೆ ಇದಕೇನೇಳ್ತಿರಿ”
“ಒಳ್ಳೆ ಬದಲಾವಣೆ”
“ಯಾಕೆ ಸಾರ್’
“ಮೋದಿ ಟೀಮಂಗೆ ಯಲ್ಲ ಒಂದಾಗಬೇಕಾಗಿದೆ”
“ಅದೇನೂ ನಿಜಸಾ. ಈ ಹಾಳು ಚೆಡ್ಡಿಗಳು ಈಗ ಏನೇಳ್ತ ಅವುರೆಗೊತ್ತೆ, ಮೋದಿ ಏನಾರ ಸೋತ್ರೆ ಆ ಪಾಕೀಸ್ತಾನದೋರು ನಮ್ಮ ಮ್ಯಾಲೆ ಬಿದ್ದು ಇಚಿಡಿ ಯಾದೇಸನೆಗೆದ್ದ ಕತ್ತರಂತೆ”
“ವಳ್ಳೆದಾಯ್ತಲ್ಲಯ್ಯ”
“ಇದೇನ್ ಸಾ ಹಿಂಗೇಳ್ತಿರಿ”
“ಪಾಕಿಸ್ತಾನ ದೂರು ಇಂಡಿಯಾಗೆದ್ದು ಕೂಡ್ಳೆ ಅದೂ ಇಂಡಿಯಾ ಆಯ್ತದಲ್ಲಯ್ಯ”
“ಅಂಗಾದ್ರೆ ಗೆದ್ಕಳ್ಳಿ ಬುಡಿ ಸಾ”
“ಥೂತ್ತೆರಿ”
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...