Homeಮುಖಪುಟ'ಬ್ರೇಕು' ಕೊಟ್ಟ ರಾಜ್ಯದಲ್ಲೇ ಮೋದಿ ಗಾಡಿಗೆ ಬ್ರೇಕ್!

‘ಬ್ರೇಕು’ ಕೊಟ್ಟ ರಾಜ್ಯದಲ್ಲೇ ಮೋದಿ ಗಾಡಿಗೆ ಬ್ರೇಕ್!

- Advertisement -
- Advertisement -

| ಪಿ.ಕೆ. ಮಲ್ಲನಗೌಡರ್ |

ಶತಾಯಗತಾಯ ಮತ್ತೊಮ್ಮೆ ಪ್ರಧಾನಿಯಾಗಲು ಏನೆಲ್ಲ ಸರ್ಕಸ್ ಮಾಡುತ್ತಿರುವ ನರೇಂದ್ರ ಮೋದಿಯವರ ಕನಸಿನ ಓಟಕ್ಕೆ ಉತ್ತರ ಪ್ರದೇಶ ಎಂಬ ಈ ದೈತ್ಯ ರಾಜ್ಯವೇ ಬ್ರೇಕ್ ಹಾಕಲಿದೆ. 2014ರಲ್ಲಿ ದೊಡ್ಡ ಬ್ರೇಕ್ ನೀಡಿದ್ದ ರಾಜ್ಯವೇ 5 ವರ್ಷಗಳ ನಂತರ ಕುದುರೆಯ ಹುಚ್ಚು ಓಟಕ್ಕೆ ಬ್ರೇಕ್ ಹಾಕುತ್ತಿರುವುದು ವಿಶೇಷ.

ದೆಹಲಿಗೆ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದಿರುವ ಉತ್ತರ ಪ್ರಧೇಶ 80 ಸೀಟುಗಳನ್ನು ಹೊಂದಿದ್ದು, ಹೆಚ್ಚೂ ಕಡಿಮೆ ದೇಶದ 1/7ರಷ್ಟು ಸಂಸದರು ಈ ರಾಜ್ಯದವರೇ! ಹೀಗಾಗಿ ಉತ್ತರ ಪ್ರದೇಶದಲ್ಲಿ ಹೆಚ್ಚು ಸೀಟು ಪಡೆಯುವ ಪಕ್ಷಕ್ಕೆ ಸಹಜವಾಗಿಯೇ ದೆಹಲಿ ಗದ್ದುಗೆ ಹಿಡಿಯಲು ಒಂದು ಲಿಫ್ಟ್ ಸಿಕ್ಕಂತೆಯೇ!

ಘಟಬಂಧನ, ಮೋದಿ-ಶಾಗೆ ಪ್ರತಿಬಂಧನ

ಕಳೆದ ಚುನಾವಣೆವರೆಗೂ ಬದ್ಧ ವೈರಿಗಳಾಗಿದ್ದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಾರ್ಟಿಗಳು ಭಾರತದ ಚುನಾವಣಾ ಇತಿಹಾಸದಲ್ಲಿ ಭಿನ್ನ ಎನಿಸುವಂತಹ ಒಂದು ಒಪ್ಪಂದಕ್ಕೆ ಬಂದಿದ್ದೇ ಬಿಜೆಪಿಗೆ ದೊಡ್ಡ ಆಘಾತ ನೀಡಿದೆ. ಲೋಕಸಭಾ ಉಪ ಚುನಾವಣೆಗಳಲ್ಲಿ ಈ ಮೈತ್ರಿ ತೋರಿದ ರಾಜಕೀಯ ಜಾಣ್ಮೆ ಅದಕ್ಕೆ ಅದ್ಭುತ ಗೆಲುವನ್ನು ತಂದುಕೊಟ್ಟಿದೆ. ಆ ಕಾರಣಕ್ಕಾಗಿಯೇ ಈ ಚುನಾವಣೆಯಲ್ಲಿ ಈ ಘಟಬಂಧನ್ ಬಿಜೆಪಿ ಪಾಲಿಗೆ, ಮೋದಿ ಪಾಲಿಗೆ ಪ್ರತಿಬಂಧನವಾಗಲಿದೆ.

ಈಗ ಬಂದಿರುವ ಸಮೀಕ್ಷೆಗಳ ಆಧಾರದಲ್ಲಿ ಹೇಳುವುದಾದರೆ ಬಿಜೆಪಿ ಅಲ್ಲಿ ಈಗಿರುವ ಸ್ಥಾನಗಳಿಗಿಂತ 35-43 ಸೀಟು ಕಡಿಮೆ ಪಡೆಯುವ ಸಾಧ್ಯತೆ ಇದೆ. ಇನ್ನು ಕೆಲವು ಚುನಾವಣಾ ತಜ್ಞರ ಪ್ರಕಾರ, ಬಿಜೆಪಿಗೆ 25-29 ಸೀಟು ಅಷ್ಟೇ ಸಿಗಲಿವೆ. ಅಂದರೆ ಸುಮಾರು 50 ಸೀಟ್‌ಗಳ ಲಾಸ್! ಕಾಂಗ್ರೆಸ್ ಘಟಬಂಧನದ ಹೊರಗಿದ್ದು, ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದು ಬಿಜೆಪಿಗೆ 10-18 ಸ್ಥಾನಗಳಲ್ಲಿ ಇದರಿಂದ ಲಾಭವಾಗಬಹುದೇ ಎಂಬ ಪ್ರಶ್ನೆಗಳೂ ಎದ್ದಿವೆ. ಇನ್ನೊಂದು ವಿಶ್ಲೇಷಣೆ ಪ್ರಕಾರ, ಹತ್ತಾರು ಕ್ಷೇತ್ರಗಳಲ್ಲಿ ಬ್ರಾಹ್ಮಣ, ಬನಿಯಾ ಮತ್ತು ಇತರ ಮೇಲ್ಜಾತಿಗಳ ಮತಗಳನ್ನು ಕಿತ್ತುಕೊಳ್ಳುವ ಮೂಲಕ ಬಿಜೆಪಿಗೆ ಕಾಂಗ್ರಸ್ ಏಟೂ ನೀಡಬಹುದು ಎನ್ನಲಾಗುತ್ತಿದೆ.

2014-ಬಿಜೆಪಿಗೆ ಬಂಪರ್

2014ರಲ್ಲಿ ಬಿಜೆಪಿಗೆ ಹಿಂದಿ ಭಷಿಕ ರಾಜ್ಯಗಳಲ್ಲಿ ‘ಸ್ವೀಪ್’ ಎನ್ನುವಂತಹ ಗೆಲುವು ದೊರಕಿತ್ತು. ಉತ್ತರ ಪ್ರದೇಶದಲ್ಲಿ ಅದು 80 ರ ಪೈಕಿ 71 ಸೀಟುಗಳನ್ನು, ಅದರ ಮಿತ್ರಪಕ್ಷ ಅಪ್ನಾ ದಳ್ 2 ಸಿಟನ್ನು, ಹೀಗೆ 73 ಸೀಟು ಪಡೆದಿತ್ತು. ಆಗ ಸಮಾಜವಾದಿ ಪಕ್ದಷಕ್ಕೆ 5, ಕಾಂಗ್ರೆಸ್‌ಗೆ 2 ( ಸೋನಿಯಾ ಮತ್ತು ರಾಹುಲ್ ಗೆದ್ದ ಕ್ಷೇತ್ರಗಳು)ಸಿಟು ಬಂದಿದ್ದವು. ಮಾಯಾವತಿಯವರ ಬಿಎಸ್ಪಿ ಸೊನ್ನೆ ಸ್ಕೋರ್ ಮಾಡಿತ್ತು.

2014ರ ನಂತರ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ದಿಗ್ವಿಜಯ ಸಾಧಿಸುತ್ತಲೇ ಹೋದಾಗ ಎಲ್ಲವೂ ಕೇಸರಿಮಯವಾಗುವ ಅಪಾಯದ ಸೂಚನೆ ಕಾಣತೊಡಗಿತ್ತು.

ಮೋದಿ ಪ್ರಧಾನಿಯಾದ ನಂತರದಲ್ಲಿ ಬಣ್ಣ ಬಣ್ಣದ ಹೆಸರಿನ ಘೋಷಣೆಗಳನ್ನು ಮಾಡುವುದು, ಅದಕ್ಕೆ ಪೇಯ್ಡ್ ಮೀಡಿಯಾ ಎಗ್ಗಿಲ್ಲದಂತೆ ಪ್ರಚಾರ ಕೊಡುವುದು ಶುರುವಾಗಿತು. ಇದೇ ಹೊತ್ತಲ್ಲಿ ಅಮಿತ್ ಶಾ ಹಲವಾರು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡರು. ಇದಕ್ಕಾಗಿ ಬಿಜೆಪಿ ಬಳಸಿದ್ದು ಆದಾಯ ತರೆಇಗೆ ಇಲಾಖೆ, ಸಿಬಿಐ ಮತ್ತು ಇ.ಡಿ. ಇಲಾಖೆಗಳ ಅಸ್ತ್ರಗಳನ್ನು. ಅದರ ಪರಿಣಾಮವಾಗಿ ಹರಯಾಣ, ಜಾರ್ಖಂಡ್, ಆಂಧ್ರಪ್ರದೇಶ (ನಾಯ್ಡು ಈಗ ಬಿಜೆಪಿ ಜೊತೆಗಿಲ್ಲ), ಮಹಾರಾಷ್ಟ್ರ, ಮತ್ತು ಜಮ್ಮು ಕಾಶ್ಮೀರಗಳಲ್ಲಿ ಅದು ಸ್ವಂತ ಬಲ ಅಥವಾ ಮೈತ್ರಿ ಬಲ ಅಥವಾ ‘ಆಪರೇಷನ್ ಕಮಲ’ದ ಮೂಲಕ ಅಧಿಕಾರದಲ್ಲಿ ಭಾಗಿಯಾಯ್ತು.

ಆಮೇಲೆ, ಅಸ್ಸಾಂ, ಗೋವಾ, ಮಣಿಪುರ ಮತ್ತು ಉತ್ತರಖಾಂಡ್‌ಗಳಲ್ಲೂ ನಿಜೆಪಿ ತನ್ನ ಅಧಿಪತ್ಯವನ್ನು ಗಟ್ಟಿ ಮಾಡಿಕೊಂಡಿತು. ಬಹುಪಾಲು ಕಡೆ ಅದು ಅಕ್ರಮ ಮಾರ್ಗಗಳ ಮೂಲಕವೇ ಅಧಿಕಾರದಲ್ಲಿ ಪಾಲು ಪಡೆಯಿತು. ಆದರೆ ತೀವ್ರ ಅಪಾಯದ ಭಾಗ ಶುರುವಾಗಿದ್ದು ಉತ್ತರಪ್ರದೇಶದ ಅಸೆಂಬ್ಲಿ ಚುನಾವಣೆ ನಂತರ.

ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅದು ಗಳಿಸಿದ ಗೆಲುವು ಪ್ರಜಾಪ್ರಭುತ್ವಕ್ಕೇ ಸವಾಲು ಎಸೆಯುವಂತಿತ್ತು. ನೋಟ್ ಬ್ಯಾನ್ ಆಗಷ್ಟೇ ಭ್ರಷ್ಟರ ವಿರುದ್ಧ ಮೋದಿ ಯುದ್ಧ ಎಂಬ ‘ಸಂಚಲನ’ ಮೂಡಿಸಿತ್ತು. ಆ ಸಂಚಲನವನ್ನು ಬಾಯಿಬಡುಕ ಮೋದಿ, ಅವರ ಪಕ್ಷದ ಗುಲಾಮಿ ನಾಯಕರು, ಟಿವಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣದ ಮಬ್ಭಕ್ತರು ಸೃಷ್ಟಿಸಿದ್ದರು. ಆದರೆ, ಉತ್ತರ ಪ್ರದೇಶದ ಚುನಾವಣೆಯಲ್ಲಿ ಈ ಕೃತಕ ಸಂಚಲನೆಗೆ ಹಿನ್ನಡೆ ಕಂಡಾಗ, ಬಿಜೆಪಿಯ ನೆರವಿಗೆ ಬಂದದ್ದು ಎರಡು ಅಂಶಗಳು.

ಒಂದು, ವಿರೋಧ ಪಕ್ಷಗಳ ನಡುವೆ ಏರ್ಪಡದ ಹೊಂದಾಣಿಕೆ. ಎರಡನೇಯದು, ಮುಜಾಫರ್ ನಗರದಲ್ಲಿ ಹಿಂದು ಕೋಮುವಾದಿಗಳು ಸೃಷ್ಟಿಸಿದ ಭೀಕರ ಕೋಮು ಹಿಂಸಾಚಾರ. ಇದನ್ನು ಬಳಸಿಕೊಂಡ ಮೋದಿ-ಶಾ ಮತ್ತು ಅವರ ಲಂಗೋಟಿ ಯೋಗಿ ಆದಿತ್ಯನಾಥರು ಅಲ್ಲಿ ಕೋಮು ಧ್ರುವೀಕರಣ ಮಾಡಲು ಯಶಸ್ವಿಯಾಗಿಬಿಟ್ಟರು. ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಇದು ಮೊದಲ ಅಪಾಯ. ಅಲ್ಲಿ ಯೋಗಿ ಆದಿತ್ಯನಾಥ ಎಂಬ ಅಲ್ಪಸಂಖ್ಯಾತ ವಿರೋಧಿ ದುಷ್ಟನನ್ನು ಮುಖ್ಯಮಂತ್ರಿ ಪಟ್ಟಕ್ಕೆ ಏರಿಸಲಾಗಿತು. ಇದು ಎರಡನೇಯ ದೊಡ್ಡ ಅಪಾಯ. ಇದೆಲ್ಲ ಪ್ರಜಾಪ್ರಭುತ್ವಕ್ಕೇ ಅಪಾಯ ಒಡ್ಡುವ ಒಂದು ಪೂರ್ವಯೋಜಿತ ಸಂಚೇ ಆಗಿತ್ತು.

ಪ್ರಾದೇಶಿಕ ಪಕ್ಷಗಳಿಗೆ ಕುತ್ತು

ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತಲೇ ಸಾಗಿದ ಬಿಜೆಪಿಯ ಹುಚ್ಚು ಕುದುರೆ ಪ್ರಾದೇಶಿಕ ಪಕ್ಷಗಳ ಅಸ್ತಿತ್ವವನ್ನೇ ನಿರ್ನಾಮ ಮಾಡಲು ಹೊರಟಿತು. ಆಗ ಮೊದಲು ಎಚ್ಚರಗೊಂಡ ಅಖಿಲೇಶ್ ಯಾದವ್ ಮಾಯಾವತಿಯವರ ಜೊತೆಗಿನ ತನ್ನೆಲ್ಲ ಹಗೆತನ ಮರೆತು ಮುಕ್ತ ಸಂವಾದ ನಡೆಸಿದರು. ಅದರ ಫಲವಾಗಿ ಅಲ್ಲಿ ಆಗ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಾರ್ಟಿ, ಕಾಂಗ್ರೆಸ್ ಮತ್ತು ರಾಷ್ಟ್ರೀಯ ಲೋಕದಳಗಳ ನಡುವೆ ಒಂದು ಒಪ್ಪಂದ, ಮೈತ್ರಿ ಶುರುವಾಗಿತು. ಮುಂದೆ ಉತ್ತರಪ್ರದೇಶದಲ್ಲಿ ನಡೆದ ಮೂರು ಲೋಕಸಭ ಚುನಾವಣೆಗಳಲ್ಲಿ ಈ ಮೈತ್ರಿ ಮೂರಕ್ಕೆ ಮೂರನ್ನು ಗೆದ್ದು ಬಿಜೆಪಿಗೆ ನಡುಕ ಹುಟ್ಟಿಸಿತು. 2018ರಲ್ಲಿ ನಡೆದ ಈ ಉಪಚುನಾವಣೆಗಳಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಪ್ರತಿನಿಧಿಸುತ್ತಿದ್ದ ಗೋರಖಪುರ ಜೊತೆಗೆ ಪ್ರತಿಷ್ಠಿತ ಪುಲ್ಪುರ್ ಮತ್ತು ಕೈರಾನಾ ಕ್ಷೇತ್ರಗಳಲ್ಲಿ ಈ ಘಟಬಂಧನವು ಬಿಜೆಪಿಯನ್ನು ಸರಾಸರಿ ಎರಡು ಲಕ್ಷಗಳಿಂದ ಸೋಲಿಸಿತು.

ಆಗಿಂದ ಈ ಮೈತ್ರಿಗೆ ಇನ್ನಷ್ಟು ಕಸುವು ಬಂದಿದೆ. ಉತ್ತರ ಪ್ರದೇಶದ ಸರ್ಕಾರ ಮಾಡುತ್ತಿರುವ ಪೊಲೀಸ್ ಗೂಂಡಾಗಿರಿ ರಾಜಕಾರಣದಿಂದ ಅಲ್ಲಿನ ದಲಿತರು, ಅಲ್ಪಸಂಖ್ಯಾತರು ಭಯಭಿತರಾಗಿದ್ದಾರೆ. ಹೀಗಾಗಿ ಈ ಸಲ ದಲಿತರು, ಮುಸ್ಲಿಮರು ಮತ್ತು ಯಾದವರು ಸಾರಾಸಗಟಾಗಿ ಘಟಬಂಧನದ ಪರ ನಿಲ್ಲುತ್ತಿದ್ದಾರೆ. ಜೊತೆಗೆ ಮೋದಿಯ ಸೃಷ್ಟಿತ ಹವಾ ಕೂಡ ಇಲ್ಲಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಈ ಹೆಬ್ಬಾಗಿಲಿನ ರಾಜ್ಯದಲ್ಲಿ ಬಿಜೆಪಿ 40 ರಿಂದ 46 ಸೀಟುಗಳನ್ನು ಕಳೆದುಕೊಳ್ಳುವುದು ಪಕ್ಕಾ ಆಗಿದೆ.

ಎಬಿಪಿ-ಸಿವೋಟರ್ ಸಮೀಕ್ಷಯ ಪ್ರಕಾರ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಸಂಖ್ಯೆ 73ರಿಂದ 25ಕ್ಕೆ ಕುಸಿಯಲಿದೆ. ಘಟಬಂಧನ 51 ಸೀಟು ಗಳಿಸಲಿದೆ. ಎಬಿಪಿ-ನೆಲ್ಸನ್ ಸರ್ವೆ ಪ್ರಕಾರ ಘಟಬಂಧನ್ 42 ಸಿಟು ಗಳಿಸಲಿದೆ.
ಕಾಂಗ್ರೆಸ್ ಘಟಬಂಧನದಲ್ಲಿ ಇದ್ದಿದ್ದರೆ ಬಿಜೆಪಿಗೆ ಇನ್ನೂ 10-15 ಸೀಟು ಲಾಸ್ ಆಗಬಹುದಿತ್ತು ಎನ್ನಲಾಗಿದೆ. ಕಾಂಗ್ರೆಸ್ ಸ್ವತಂತ್ರ ಸ್ಪರ್ಧೆಯಿಂದ ಬಿಜೆಪಿಗೆ 10-14 ಸೀಟುಗಳಲ್ಲಿ ಲಾಭ ಎಂದು ಎನ್‌ಡಿಟಿವಿಯ ಪ್ರಣಬ್ ರಾಯ್ ತಂಡ ಹೇಳುತ್ತಿದೆ. ಇನ್ನು ಕೆಲವು ರಾಜಕೀಯ ಪಂಡಿತರ ಪ್ರಕಾರ, ಕನಿಷ್ಠ ಹತು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಿಜೆಪಿಯ ಸೋಲಿಗೆ ಕಾರಣವಾಗಬಹುದು.

ಅಂತಿಮವಾಗಿ, 2014ರಲ್ಲಿ ‘ಬ್ರೇಕು’ ಕೊಟ್ಟ ರಾಜ್ವೇ ಮೋದಿ ಗಾಡಿಯ ಓಟಕ್ಕೆ ಮೊದಲ ‘ಬ್ರೇಕ್’ ಹಾಕಲಿದೆ ಎಂಬುಬಂತೂ ಸ್ಪಷ್ಟ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...