Homeರಾಜಕೀಯರಫೇಲ್: ಕೇಂದ್ರಕ್ಕೆ ಮುಳುವಾದ ಮುಚ್ಚಿದ ಲಕೋಟೆ ಮತ್ತು ಬಿಜೆಪಿಯ ದ್ವಂದ್ವ ನಿಲುವು

ರಫೇಲ್: ಕೇಂದ್ರಕ್ಕೆ ಮುಳುವಾದ ಮುಚ್ಚಿದ ಲಕೋಟೆ ಮತ್ತು ಬಿಜೆಪಿಯ ದ್ವಂದ್ವ ನಿಲುವು

- Advertisement -
- Advertisement -

ಏನಿದು ಮುಚ್ಚಿಟ್ಟ ಲಕೋಟೆ?
ಕೆಲವೊಮ್ಮೆ ಸಾರ್ವಜನಿಕವಾಗಿ ಬಹಿರಂಗಪಡಿಸಲಾಗದ ಸಂಗತಿಗಳನ್ನು ಕೋರ್ಟು ಮುಚ್ಚಿದ ಲಕೋಟೆಯಲ್ಲಿ ಕೊಡಲು ಕೇಳುತ್ತದೆ. ಅಥವಾ ಸರ್ಕಾರ ಯಾ ಕೇಸು ದಾಖಲಿಸಿದ ವಾದಿಯೇ ಅಂತಹ ಮುಚ್ಚಿದ ಲಕೋಟೆಯನ್ನು ಕೋರ್ಟಿಗೆ ನೀಡುತ್ತದೆ. ಈ ವಿಧಾನವನ್ನು ಒಪ್ಪುವುದೂ ಕಷ್ಟ. ಏಕೆಂದರೆ, ಅದೇ ಕೇಸಿನಲ್ಲಿ ಇರುವ ಎದುರುದಾರರಿಗೂ ನಿರಾಕರಿಸಲ್ಪಟ್ಟ ದಾಖಲೆಗಳು ನ್ಯಾಯಾಧೀಶರಿಗೆ ಮಾತ್ರ ಲಭ್ಯವಾಗುತ್ತದೆ. ಅಂತಿಮವಾಗಿ ನ್ಯಾಯಾಧೀಶರಿಗೆ ಲಭ್ಯವಾಗಿರುವ ‘ಪುರಾವೆ’ಗಳು ಸುಳ್ಳೂ ಇರಬಹುದು. ಅದರ ಕುರಿತು ತಮ್ಮ ವಿವರಣೆ ಹೇಳುವ ಅವಕಾಶವೂ ಎದುರುದಾರರಿಗಿಲ್ಲದೇ ತಪ್ಪು ತೀರ್ಪೂ ಸಹಾ ಬರಬಹುದು.
ಈ ಪ್ರಕರಣವು ಹಾಗೆಯೇ ಆಗಿರುವ ಎಲ್ಲಾ ಲಕ್ಷಣಗಳೂ ಇವೆ.

ತೀರ್ಪನ್ನು ತಿದ್ದುಪಡಿ ಮಾಡುವಂತೆ ಸುಪ್ರೀಂ ಕೋರ್ಟಿಗೆ ಕೇಂದ್ರ ಸಲ್ಲಿಸಿರುವ ಅಫಿಡವಿಟ್

ರಾಫೇಲ್ ಡೀಲ್‌ನಲ್ಲಿ ಮೂರು ಅಂಶಗಳು ಕೋರ್ಟಿನ ಮುಂದೆ ಇದ್ದವು. ಮೂಲ ಒಪ್ಪಂದಕ್ಕಿಂತ ಮೂರು ಪಟ್ಟು ಹೆಚ್ಚು ದರ ನೀಡಿ ಖರೀದಿ ಮಾಡಲು ಮೋದಿ ಸರ್ಕಾರ ಹೊರಟಿರುವುದು, ಈ ಡೀಲ್‌ನಲ್ಲಿ ಆಫ್‌ಸೆಟ್ ಪಾಲುದಾರನನ್ನಾಗಿ 7 ದಿನಗಳ ಹಿಂದಷ್ಟೇ ಹುಟ್ಟಿಕೊಂಡ ಅನಿಲ್ ಅಂಬಾನಿಯ ಕಂಪೆನಿಯನ್ನು ಒಳಗೊಂಡಿರುವುದು ಮತ್ತು ಸೂಕ್ತ ಪ್ರಕ್ರಿಯೆ ಅಳವಡಿಸದೇ ಖರೀದಿ ವ್ಯವಹಾರ ಒಪ್ಪಂದ ಮಾಡಿಕೊಂಡಿರುವುದು. ಮೊದಲೆರಡು ಅಂಶಗಳು ಯಾವುದೇ ಸರ್ಕಾರ ಅಥವಾ ಕಂಪೆನಿಯ ಆಂತರಿಕ ವ್ಯವಹಾರದಂತೆಯೂ ತೋರಬಹುದಾದ್ದರಿಂದ ಆ ಕುರಿತು ತಾನೇನೂ ಹೇಳಲು ಇಲ್ಲ ಎಂದು ನ್ಯಾಯಾಲಯವು ಹೇಳಬಹುದು; ಹೇಳಿದೆ. ಆದರೂ, ನ್ಯಾಯಾಲಯವು ಈ ಬಗ್ಗೆ ಖಚಿತವಾಗಿರಲು ಮುಚ್ಚಿದ ಲಕೋಟೆಯಲ್ಲಿ ವಿವರಗಳನ್ನು ಕೇಳಿತು. ಅದರಲ್ಲಿ ದರಗಳ ವಿವರದ ಜೊತೆಗೆ, ಸೂಕ್ತ ಪ್ರಕ್ರಿಯೆಯನ್ನು ಅಳವಡಿಸಿರುವ ಕುರಿತು ಸರ್ಕಾರವು ವಿವರಗಳನ್ನು ನೀಡಿತು.

ಅದರಲ್ಲೇ ಸಿಎಜಿಗೂ ವಿವರ ನೀಡಿದ್ದೇವೆ; ಸಿಎಜಿಯ ವರದಿಯನ್ನು ಪಿಎಸಿ (ಸಂಸತ್ತಿನ ಲೆಕ್ಕ ಪತ್ರಗಳ ಸಮಿತಿ)ಗೂ ಸಲ್ಲಿಸಲಾಗಿದೆ ಇತ್ಯಾದಿ ಸುಳ್ಳುಗಳನ್ನು ಸರ್ಕಾರವು ಹೇಳಿತು. ಬಹುಶಃ ಮುಚ್ಚಿದ ಲಕೋಟೆಯಲ್ಲಿನ ವಿವರಗಳನ್ನು ನ್ಯಾಯಾಲಯವು ತೀರ್ಪಿನಲ್ಲಿ ಉಲ್ಲೇಖಿಸಲಿಕ್ಕಿಲ್ಲ ಎಂದು ಸರ್ಕಾರದ ಆಲೋಚನೆಯಾಗಿರಬೇಕು. ಆದರೆ, ಸೂಕ್ತ ಪ್ರಕ್ರಿಯೆ ನಡೆದಿರುವುದು ತನಗೆ ಮನವರಿಕೆಯಾದ್ದರಿಂದಲೂ ‘ತಾನು ಮಧ್ಯಪ್ರವೇಶಿಸುವುದಿಲ್ಲ’ ಎಂದು ನ್ಯಾಯಾಲಯವು ಹೇಳಬಯಸಿತು. ಹಾಗಾಗಿ ಅದನ್ನು ತೀರ್ಪಿನಲ್ಲಿ ಉಲ್ಲೇಖಿಸಿಬಿಟ್ಟಿತು.

ಈ ಮೊಕದ್ದಮೆಯಲ್ಲಿ ಭಾಗಿಯಾಗಿರುವ ನ್ಯಾಯವಾದಿ ಪ್ರಶಾಂತ್‌ಭೂಷಣ್ ಅವರು ಮೊದಲಿಗೆ ಈ ವಿವರಗಳು ನಮಗೆ ಗೊತ್ತೇ ಇರಲಿಲ್ಲವಲ್ಲಾ ಎಂದು ಆಶ್ಚರ್ಯವ್ಯಕ್ತಪಡಿಸಿದರು. ನಂತರ ಆಶ್ಚರ್ಯವ್ಯಕ್ತಪಡಿಸುವ ಸರದಿ ಪಿಎಸಿ ಅಧ್ಯಕ್ಷರದ್ದಾಗಿತ್ತು. ಅಂತಹ ಯಾವ ವರದಿಯೂ ತಮಗೂ ಸಿಕ್ಕಿಲ್ಲವಲ್ಲಾ ಎಂದು ಅದರ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಲ್ಲದೇ, ಸಿಎಜಿ ಮತ್ತು ಸುಪ್ರೀಂಕೋರ್ಟಿಗೆ ಸರ್ಕಾರದ ಪರವಾಗಿ ಸುಳ್ಳನ್ನು ಹೇಳಿದ ಅಟಾರ್ನಿ ಜನರಲ್ ಇಬ್ಬರನ್ನೂ ಪಿಎಸಿ ಕರೆಸುತ್ತದೆಂದು ಹೇಳಿದರು.

ಇಷ್ಟು ಸಣ್ಣ ವಿಚಾರ ಸರ್ಕಾರಕ್ಕೆ ಗೊತ್ತಿಲ್ಲದೇನಲ್ಲ. ಆದರೆ, ತಾನು ಮುಚ್ಚಿದ ಲಕೋಟೆಯಲ್ಲಿ ಕೊಟ್ಟ ಅಂಶವು ಹೊರಗೆ ಬರಲಾರದು ಎಂಬ ತಪ್ಪು ಲೆಕ್ಕಾಚಾರ ಅದರದ್ದಾಗಿತ್ತು. ಈಗ ಬೇರೆ ದಾರಿಯೇ ಇಲ್ಲ. ಹಾಗಾಗಿ ಸಿಎಜಿ ವರದಿಯನ್ನು ಸಾಮಾನ್ಯವಾಗಿ ಪಿಎಸಿ ಪರಿಶೀಲಿಸುತ್ತದೆ ಎಂದು ತಾನು ಹೇಳಬಯಸಿದ್ದೆ, ಅದು ಈಗಾಗಲೇ ಪರಿಶೀಲಿಸಿದೆ ಎಂಬರ್ಥದಲ್ಲಿ ಟೈಪಿಂಗ್ ಎಡವಟ್ಟು ಅಷ್ಟೇ ಎಂದು ಸುಪ್ರೀಂಕೋರ್ಟಿಗೆ ಅಫಿಡವಿಟ್ ಹಾಕಿದೆ.

ಒಂದು ವೇಳೆ ಇದನ್ನು ಟೈಪಿಂಗ್ ಎಡವಟ್ಟು ಎಂದೇ ಇಟ್ಟುಕೊಂಡರೆ, ಸಿಎಜಿ ಹಾಗೂ ಪಿಎಸಿ ಪರಿಶೀಲಿಸಿದ ಮೇಲೆ ಪ್ರಕ್ರಿಯೆಯ ಕುರಿತು ಆಕ್ಷೇಪಣೆ ಸಲ್ಲಿಸುವ ಅಗತ್ಯವಿಲ್ಲ ಎಂದು ಹೇಳಿದ್ದ ಸುಪ್ರೀಂಕೋರ್ಟು, ಈಗ ಅದರಲ್ಲಿ ಲೋಪವನ್ನು ಕಾಣಲೇಬೇಕು. ಆಗ ಕೇಂದ್ರ ಸರ್ಕಾರದ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ನಾವು ಕಾದು ನೋಡಬೇಕಷ್ಟೇ.

ಅದೇನೇ ಇರಲಿ, ದೇಶದ ರಕ್ಷಣಾ ಇಲಾಖೆಗೆ ಸೇರಿದ ಇಂತಹ ದೊಡ್ಡ ಡೀಲ್‌ನ ಕುರಿತು ಇಷ್ಟೊಂದು ತಪ್ಪುಗಳ ನಡೆದಿರುವಾಗ, ಉನ್ನತ ಮಟ್ಟದ ತನಿಖೆ ಆಗದೇ ಹೋದರೆ ಅದಕ್ಕಿಂತ ದೊಡ್ಡ ದುರಂತ ಇನ್ನೊಂದಿರಲಾರದು.

ಜಂಟಿ ಸಂಸದೀಯ ಸಮಿತಿ: ಬಿಜೆಪಿಯ ದ್ವಂದ್ವ ನಿಲುವು

ಯುಪಿಎ ಅವಧಿಯ 2 ಜಿ ಸ್ಪೆಕ್ಟ್ರಂ ಹಗರಣ ಎಲ್ಲರಿಗೂ ಗೊತ್ತಿದೆ. ಆ ವಿಚಾರದಲ್ಲಿ ತನಿಖೆಯೂ ನಡೆಯಿತು; ಕೇಂದ್ರದಲ್ಲಿ ಮಂತ್ರಿಯಾಗಿದ್ದವರೊಬ್ಬರು ಜೈಲಿಗೂ ಹೋಗಿ ಬಂದರು. ಆ ಹಗರಣದ ಕುರಿತು ಜಂಟಿ ಸಂಸದೀಯ ಸಮಿತಿಯೇ ರಚನೆಯಾಗಬೇಕು ಎಂದು ಬಿಜೆಪಿಯು ಪಟ್ಟು ಹಿಡಿಯಿತು. ಆಗಿನ ಅದರ ಸರ್ವೋಚ್ಚ ನಾಯಕ ಎಲ್.ಕೆ.ಅಡ್ವಾಣಿಯವರ ನೇತೃತ್ವದಲ್ಲಿ ಪ್ರತಿಭಟನೆಗಳೂ ನಡೆದವು.

ಅದರ ನಂತರ ಭ್ರಷ್ಟಾಚಾರವೇ ಪ್ರಮುಖ ಇಶ್ಯೂ ಎಂದು ಬಿಜೆಪಿಯು ಹೇಳಿತು. ಎಲ್.ಕೆ.ಅಡ್ವಾಣಿಯವರು ದೇಶಾದ್ಯಂತ ಪ್ರವಾಸ ಹೊರಟರು. ಅಂತಹ ಒಂದು ಪ್ರವಾಸದ ಭಾಗವಾಗಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಮೈದಾನದಲ್ಲೂ ಒಂದು ಬೃಹತ್ ಸಭೆ ಆಯೋಜನೆಯಾಯಿತು. ಆ ಹೊತ್ತಿಗೆ ಜೈಲಿಗೆ ಹೋಗಿದ್ದ ಯಡಿಯೂರಪ್ಪನವರ ವಿಚಾರವನ್ನು ದೂರವಿಟ್ಟಿದ್ದಲ್ಲದೇ, ಯಡಿಯೂರಪ್ಪನವರ ಸಮೀಪವರ್ತಿಗಳನ್ನೂ ದೂರವಿಡಲಾಗಿತ್ತು.

ಅದೇನೇ ಇರಲಿ, ಜಂಟಿ ಸಂಸದೀಯ ಸಮಿತಿಯಿಂದ ಮಾತ್ರ ಇದರ ಸರಿಯಾದ ತನಿಖೆ ಸಾಧ್ಯ ಎಂದು ಆಗ ಬಿಜೆಪಿ ಹೇಳಿತ್ತು. ಈಗ ಖರ್ಗೆಯವರು ಅಧ್ಯಕ್ಷರಾಗಿರುವ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯಿಂದ ಪರಿಶೀಲನೆ ಆಗಿದೆ ಎಂದು ಆಗ ಯುಪಿಎ ಸರ್ಕಾರವು ಹೇಳಿತ್ತು. ಆದರೆ, ಇವೆರಡರ ಪಾತ್ರ ಬೇರೆ ಬೇರೆಯಾಗಿದ್ದು, ಜೆಪಿಸಿ (ಜಂಟಿ ಸಂಸದೀಯ ಸಮಿತಿ)ಯೇ ಇದಕ್ಕೆ ಸರಿ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದರು.

‘ನಮ್ಮ ಬೇಡಿಕೆ – ಜೆಪಿಸಿ’ ಎಂದು ಹೇಳುವ ಪ್ಲಕಾರ್ಡ್ಗಳನ್ನು ಇಟ್ಟುಕೊಂಡು ಆಗ ಬಿಜೆಪಿ ದೊಡ್ಡ ಪ್ರತಿಭಟನೆ ನಡೆಸಿತ್ತು. ಈಗ ರಾಫೇಲ್ ಡೀಲ್‌ನ ವಿಚಾರದಲ್ಲಿ ಮಾತ್ರ ಜಂಟಿ ಸಂಸದೀಯ ಸಮಿತಿಯ ರಚನೆ ಸಾಧ್ಯವಿಲ್ಲ ಎಂದು ಆಡಳಿತ ಪಕ್ಷವಾದ ಬಿಜೆಪಿಯು ಪಟ್ಟು ಹಿಡಿದಿದೆ. ಅದರಲ್ಲೂ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರೇ ಖುದ್ದಾಗಿ ಈ ಡೀಲ್‌ನಲ್ಲಿ ಭಾಗಿ ಎಂಬ ಆರೋಪವನ್ನು ಮಾಡಲಾಗಿದೆ ಹಾಗೂ ಮೇಲ್ನೋಟಕ್ಕೆ ಹಲವು ಅಂಶಗಳನ್ನು ಅದನ್ನು ಸಮರ್ಥಿಸುವಂತೆ ಇರುವಾಗ ಬಿಜೆಪಿಯ ಈ ಹಿಂದೇಟು ಅನುಮಾನಗಳನ್ನು ದೃಢೀಕರಿಸುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...