Homeಚಳವಳಿ'ರೈತ ರಾಜಕೀಯಕ್ಕೆ ಮಣ್ಣಿನ ಮಗನ ಬೆಂಬಲವಿರಲಿ' - ದೇವನೂರು ಮಹಾದೇವ

‘ರೈತ ರಾಜಕೀಯಕ್ಕೆ ಮಣ್ಣಿನ ಮಗನ ಬೆಂಬಲವಿರಲಿ’ – ದೇವನೂರು ಮಹಾದೇವ

- Advertisement -
(ಚುನಾವಣಾ ಪ್ರಚಾರ ಭಾಷಣ ಅಂದರೇನೆ ರೇಜಿಗೆ ಹುಟ್ಟಿಸುತ್ತೆ. ಆರೋಪ – ಪ್ರತ್ಯಾರೋಪ, ಹಾರಾಟ- ಚೀರಾಟ ಮಾಮೂಲು. ಚುನಾವಣಾ ಪ್ರಚಾರದಲ್ಲಿ ಪ್ರಬುದ್ಧ – ಸಮತೋಲಿತ ಭಾಷೆ, ಭಾವ ಹೇಗೆ ಸಾಧ್ಯ ಎಂದು ವಕಾಲತ್ತು ವಹಿಸುವವರೇ ಹೆಚ್ಚು. ಸ್ವರಾಜ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷೀಯ ಮಂಡಳಿ ಸದಸ್ಯರಾಗಿರುವ ದೇವನೂರು ಮಹಾದೇವ ಅವರು ತಮ್ಮ ಪಕ್ಷದ ಮೇಲುಕೋಟೆ ಕ್ಷೇತ್ರದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರ ಪರವಾಗಿ ಮಾಡಿದ ಚುಟುಕಾದ ಚುನಾವಣಾ ಭಾಷಣ ಇಲ್ಲಿದೆ. ಎದುರಾಳಿ ಪಕ್ಷದವರಿಗೂ ವಿನಂತಿ ಮಾಡಬಲ್ಲಂತಹ ನೈತಿಕತೆ ಬಹುಶಃ ದೇವನೂರು ಅಂಥವರಿಗೆ ಮಾತ್ರ ಸಾಧ್ಯ.)
ಈಗ ಒಂದು ಸುದ್ದಿ ಹರಿದಾಡುತ್ತಿದೆ- ದರ್ಶನ್ ಅಮೆರಿಕಕ್ಕೆ ಹೋಗಿ ಬಿಡುತ್ತಾರೆ ಎಂಬುದೇ ಆ ಸುದ್ದಿ. ಇಂಥ ಸುದ್ದಿ ಕಳೆದ ಚುನಾವಣೆಯಲ್ಲಿ ಪುಟ್ಟಣ್ಣಯ್ಯನವರ ಬಗೆಗೂ ಇತ್ತು. ಪುಟ್ಟಣ್ಣಯ್ಯನವರ ಜೀವದ ತುಡಿತ ಗೊತ್ತಿರುವವರು ಇಂಥ ಮಾತಾಡಲಾರರು. ಪುಟ್ಟಣ್ಣಯ್ಯ ಜತೆ ಪ್ರವಾಸ ಮಾಡಿದ್ದೇನೆ. ಪುಟ್ಟಣ್ಣಯ್ಯ ಎಲ್ಲಿಗೆ ಹೋಗಲಿ, ಅವರು ನೆನಪಿಸಿಕೊಳ್ಳುತ್ತಿದ್ದುದು ಏನು ಗೊತ್ತೆ? ಪಾಂಡವಪುರದ ಬೋಂಡ, ಪಕೋಡ ಹಾಗೂ ಮದ್ದೂರು ಜೋಪಡಿ ಹೋಟೆಲ್ ದೋಸೆ. ಪಾಂಡವಪುರದ ಥರದ ಬೋಂಡವನ್ನು ಎಲ್ಲೂ ಮಾಡಲ್ಲ ಬಿಡಿ ಅಂತಿದ್ದರು. ಆಮೇಲೆ ನಮ್ಮ ರಾಣಿ ಮಾಡೋ ಇಡ್ಲಿ ಕೈಮ ಅಮೆರಿಕದಲ್ಲೂ ಮಾಡಲ್ಲ ಅಂತಿದ್ದರು. ಇಡ್ಲೀನ ಅಮೆರಿಕದಲ್ಲಿ ಮಾಡ್ತಾರ? ಅಷ್ಟೊಂದು ಮುಗ್ಧ ಕೂಡ ಅವರು. ಅವರು ಅಮೆರಿಕದಲ್ಲಿ ಮೂರು ತಿಂಗಳು ಇರಬೇಕಾಗಿ ಬಂದಾಗ ಅವರ ಮನಸ್ಸಲ್ಲಿ ಇದ್ದುದು ಒಂದೇ- ಕುಡಿಯುವ ನೀರಿನ ಸಮಸ್ಯೆ. ಅಮೆರಿಕದಲ್ಲಿ ಸಾವಿರಾರು ಕಿಲೋಮೀಟರ್ ನಾಲೆ ಮಾಡಿ ಕುಡಿಯುವ ನೀರು ತಂದು ಕೊಡುವುದಾದರೆ ನಮ್ಮಲ್ಲಿ ಏನಾಗಿದೆ? ಇದು ಅವರ ಚಿಂತೆಯಾಗಿತ್ತು. ದುದ್ದ ಹೋಬಳಿಗೆ ನೀರು ತರುವುದು ಹೇಗೆ? ಅದಕ್ಕಾಗಿ ಪುಟ್ಟಣ್ಣಯ್ಯ ತಪಸ್ಸು ಮಾಡುತ್ತಿದ್ದರು. ನನ್ನಿಂದಲೂ ಕೆಲವರಿಗೆ ಹೇಳಿಸಿದ್ದರು. ಇಂಥ ಮನಸ್ಥಿತಿಯ ಪುಟ್ಟಣ್ಣಯ್ಯನವರ ಮಗ ದರ್ಶನ್ ಅಮೆರಿಕ ಬಿಟ್ಟುಬಂದು, ಅಪ್ಪನ ಹೆಸರನ್ನು ಉಳಿಸಲು, ಅಪ್ಪನ ಕೆಲಸ ಕಾರ್ಯಗಳನ್ನು ಮುಂದುವರಿಸಲು ಪಣ ತೊಟ್ಟಿದ್ದಾರೆ. ದರ್ಶನ್ ನಿರ್ಧಾರದ ಗಟ್ಟಿತನ ನೋಡಿಯೆ ಸ್ವರಾಜ್ ಇಂಡಿಯಾ ಪಕ್ಷವು ಅವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದೆ. ದರ್ಶನ್‍ಗೆ ತಮ್ಮ ಆಶೀರ್ವಾದ ಬೇಕು.
ಈಗ ಕಾಂಗ್ರೆಸ್ ದರ್ಶನ್‍ಗೆ ಬೆಂಬಲಿಸಿದೆ, ಜೆಡಿಎಸ್ ನೇರ ಪ್ರತಿಸ್ಪರ್ಧಿಯಾಗಿದೆ. ಆದರೂ ನಮಗೆ ಸನ್ಮಾನ್ಯ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರ ನೈತಿಕ ಬೆಂಬಲವೂ ಬೇಕು. ಯಾಕೆಂದರೆ ದೇವೇಗೌಡರು ರಾಜಕಾರಣದಲ್ಲಿ ಭೀಷ್ಮ ಇದ್ದಂತೆ. ಅವರು ಎದುರು ಪಾರ್ಟಿಯಲ್ಲಿ ಇರಬಹುದು. ರಾಜಕಾರಣದಲ್ಲಿ ಭಿನ್ನಾಭಿಪ್ರಾಯಗಳೂ ಇರಬಹುದು. ಪ್ರಧಾನಿಯಾಗಿದ್ದ ಆ ಕಾಲಾವಧಿಯಲ್ಲಿ ನಾನು ಅವರ ಬಹಿರಂಗ ಬೆಂಬಲಿಗನಾಗಿದ್ದೆ. ಅದು ಅವರಿಗೂ ಗೊತ್ತು. ಹಾಗೇ ಕಾವೇರಿ ನದಿ ನೀರಿನ ವಿವಾದದಲ್ಲಿ ಅವರ ಪಕ್ಷಾತೀತ ನಡೆಯನ್ನು ಮೆಚ್ಚಿ ಬರೆದಿದ್ದೆ. ಭಿನ್ನಾಭಿಪ್ರಾಯಗಳ ನಡುವೆ ಇಂಥವೂ ಇರುತ್ತದೆ. ರಾಜಕಾರಣದ ಭೀಷ್ಮರಾದ ಹೆಚ್.ಡಿ.ದೇವೇಗೌಡರ ಆಶೀರ್ವಾದ ಈ ಬಾಲಕ ದರ್ಶನ್ ಮೇಲೂ ಇರಲಿ ಎಂದು ವಿನಂತಿಸುವೆ.
ಇಂದು ದೇಶದ ರಾಜಕಾರಣ ಕೆಟ್ಟಿದೆ. ಎಷ್ಟು ಕೆಟ್ಟಿದೆ ಅಂದರೆ ಕೆ.ಆರ್.ಎಸ್ ಡ್ಯಾಂಗೆ ಡೈನಮೆಟ್ ಇಟ್ಟರೂ ಸರಿಯೇ- ಎಲ್ಲರೂ ಕೊಚ್ಚಿಕೊಂಡು ಹೋದರೂ ಸರಿಯೇ- ನಾನು ನನ್ನ ಬಂಧುಬಳಗ ಬದುಕಬೇಕು, ಈ ರೀತಿ ಇದೆ ಇಂದಿನ ರಾಜಕಾರಣ. ಸಾರ್ವಜನಿಕ ಸಂಪತ್ತು ಸಮುದಾಯಕ್ಕೆ ಸೇರಬೇಕು. ಆದರೆ ಅದರ ಲೂಟಿ ಮಾಡಲು ದರೋಡೆಕೋರರು ರಾಜಕಾರಣದಲ್ಲಿ ಹೆಚ್ಚಾಗಿ ಪ್ರವೇಶಿಸುತ್ತಿದ್ದಾರೆ. ಇದು ಎಲ್ಲೆಲ್ಲು ಇದೆ. ಈ ದರೋಡೆ ರಾಜಕಾರಣವನ್ನು ಮತದಾರ ತಡೆಗಟ್ಟಬೇಕು. ತಡೆಗಟ್ಟದಿದ್ದರೆ ಉಳಿಗಾಲವಿಲ್ಲ.
ಈಗ ಜನಬಲ ಮತ್ತು ಹಣಬಲದ ನಡುವೆ ಸ್ಪರ್ಧೆ ನಡೆಯುತ್ತಿದೆ. ಹಣವು ಮದದಿಂದ ಜನರನ್ನು ಜಾನುವಾರುಗಳು ಎಂಬಂತೆ ಭಾವಿಸಿ ಕೊಂಡುಕೊಳ್ಳಬಹುದು ಅಂದುಕೊಂಡಿದೆ. ಹಣದ ಮದ ಮುರಿಯಬೇಕು. ಹಣದ ಗರ್ವಭಂಗವಾಗಬೇಕು. ಇದಾದಾಗಲೇ ಜನಸಾಮಾನ್ಯರು ಉಸಿರಾಡಲು ಸಾಧ್ಯ. ಅದಕ್ಕಾಗಿ ಮತದಾರರು ದರ್ಶನ್‍ರನ್ನು ಗೆಲ್ಲಿಸಬೇಕು, ಕೈ ಹಿಡಿದು ನಡೆಸಬೇಕು. ಇದು ನನ್ನ ಪ್ರಾರ್ಥನೆ.
ಕೊನೆಯದಾಗಿ ಇನ್ನೊಂದು ಮನವಿ: ದರ್ಶನ್‍ಗೆ ಪ್ರಚಾರವನ್ನು ಹೇಗೆ, ಎಲ್ಲಿಂದ ಮಾಡಬೇಕು? ನೆನಪಿಡಿ- ಸುಳ್ಳು ಹಬ್ಬಿಸುತ್ತಾರೆ. ನೆನಪಿಡಿ- ಒಡಕು ಉಂಟುಮಾಡುತ್ತಾರೆ. ಇಂಥಲ್ಲಿ ಹೇಗೆ ಪ್ರಚಾರ? ಎಲ್ಲಿದ್ದೀರೊ ಅಲ್ಲೆ ಪ್ರಚಾರ ಮಾಡಬೇಕು. ನಂನಮ್ಮ ಮನೆಯಿಂದಲೇ ಆರಂಭಿಸಬೇಕು. ನಂನಮ್ಮ ಬೀದಿಯಲ್ಲೇ ಪ್ರಚಾರ ಆಗಬೇಕು. ಎಲ್ಲಿದ್ದೀವೋ ಅಲ್ಲೇ ಪ್ರಚಾರ. ಈ ರೀತಿ ಪ್ರಚಾರವನ್ನು ಮೇಲುಕೋಟೆ ಕ್ಷೇತ್ರದ ಯುವಕರು ಕೈಗೊಂಡರೆ ಇದೇ ರಾಜ್ಯದ ಚುನಾವಣಾ ರೀತಿರಿವಾಜಿಗೆ ಒಂದು ಮಾದರಿಯಾಗಿ ನಾಡಿಗೆ ಕೊಡುಗೆ ಕೊಟ್ಟಂತಾಗುತ್ತದೆ. ದರ್ಶನ್ ಗೆಲುವಿನ ಜೊತೆಗೆ ಈ ಮಾದರಿಯನ್ನೂ ಹುಟ್ಟುಹಾಕಿ ಎಂದು ಮೇಲುಕೋಟೆ ಕ್ಷೇತ್ರದ ನಮ್ಮ ಯುವಕರಲ್ಲಿ ವಿನಂತಿಸುವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...