Homeಸಾಮಾಜಿಕಇಂಟರ್‌ಸೆಕ್ಸ್ ಮಕ್ಕಳೇಕೆ ಕ್ಷೋಭೆ ಅನುಭವಿಸಬೇಕಾಗಿ ಬರುತ್ತದೆ?

ಇಂಟರ್‌ಸೆಕ್ಸ್ ಮಕ್ಕಳೇಕೆ ಕ್ಷೋಭೆ ಅನುಭವಿಸಬೇಕಾಗಿ ಬರುತ್ತದೆ?

- Advertisement -
- Advertisement -

ಡಾ.ಕಾರ್ತಿಕ್ ಬಿಟ್ಟು |

ಇದುವರೆಗೆ ನಾವು ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಬಯಾಲಾಜಿಕಲ್ ಆಧಾರದ ಬಗ್ಗೆ ಮಾತನಾಡಿದ್ದೇವೆ, ಅದರೊಂದಿಗೆ ಟ್ರಾನ್ಸ್ಜೆಂಡರ್ ಮತ್ತು ಇಂಟರ್‌ಸೆಕ್ಸ್ ಮಧ್ಯೆ ಇರುವ ವ್ಯತ್ಯಾಸ ಹಾಗೂ ಹೋಲಿಕೆಗಳ ಬಗ್ಗೆಯೂ ಚರ್ಚಿಸಿದ್ದೇವೆ. ಈಗ ಆ ವ್ಯಕ್ತಿಗಳು ಬಾಲ್ಯದಿಂದ ಹಿಡಿದು ತಮ್ಮ ಜೀವನದ ವಿವಿಧ ಹಂತಗಳಲ್ಲಿ ಎಂತಹ ಸಾಮಾಜಿಕ ಮತ್ತು ವೈಯಕ್ತಿಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತೆ ಎನ್ನುವುದನ್ನು ಚರ್ಚಿಸೋಣ. ಇಂಟರ್‌ಸೆಕ್ಸ್ ಆಗಿರಲು ಜೈವಿಕವಾದ ಕಾರಣವಿದೆ ಎಂಬುದನ್ನು ನೋಡಿದ್ದೇವೆ. ಅದರಲ್ಲೂ ಈ ವ್ಯಕ್ತಿಗಳಲ್ಲಿ ಮೇಲ್ತೋರಿಕೆಗೇ ಅದು ಕಂಡುಬಂದರೂ ಸಹ ಅವರ ಸಾಮಾಜಿಕ ಅನುಭವದಲ್ಲಿ ಸಮಸ್ಯೆಗಳು ಏಕೆ ತಲೆದೋರುತ್ತವೆ? ಏಕೆಂದರೆ, ಗಂಡು ಅಥವಾ ಹೆಣ್ಣಿನ ದೇಹಕ್ಕಿರುವ ಸಾಮಾಜಿಕ ನಿರೀಕ್ಷೆಗಳಿಗಿಂತ ಅವರು ಭಿನ್ನವಾಗಿರುತ್ತಾರೆ ಮತ್ತು ನೀವು ನಿರ್ದಿಷ್ಟ ಜೆಂಡರ್‌ನ ಗುರುತಿನೊಂದಿಗೇ ಇರಬೇಕು ಎಂದು ಒತ್ತಾಯಿಸುವ ಸಾಮಾಜಿಕ ಮತ್ತು ವೈದ್ಯಕೀಯ ಒತ್ತಡಗಳು ಅವರನ್ನು ಕಾಡುತ್ತವೆ.

ವೈದ್ಯರು ಅನೇಕ ಸಲ ಇಂಟರ್‌ಸೆಕ್ಸ್ ಮಕ್ಕಳ ಪೋಷಕರಿಗೆ ನೀಡುವ ಸಲಹೆಯೇ ಸಮಸ್ಯೆಯನ್ನು ತಂದೊಡ್ಡುತ್ತದೆ. ಅವರು ಆ ಮಗುವನ್ನು ಒಂದು ನಿರ್ದಿಷ್ಟ ಜೆಂಡರ್‌ಗೆ (ಜನನದ ಸಮಯದಲ್ಲಿ ವೈದ್ಯರು ನಿರ್ಧರಿಸಿದ ಜೆಂಡರ್) ಒತ್ತಾಯಪೂರ್ವಕವಾಗಿ ಒಳಗೊಳ್ಳುವಂತೆ ಸೂಚಿಸುತ್ತಾರೆ. ಹಾಗೂ ಕೆಲಸಲ ಅದಕ್ಕಿಂತ ಮುಂದೆ ಹೋಗಿ ಆ ಮಕ್ಕಳ ಜೀವನವನ್ನೇ ಬದಲಿಸಬಹುದಾದಂತಹ ಯಾತನಾಮಯ ಹಾಗೂ ಜೀವನದುದ್ದಕ್ಕೂ ಗಾಯದ ಕಲೆಗಳನ್ನು ಮಾಡಬಹುದಾದ ಶಸ್ತ್ರಚಿಕಿತ್ಸೆ ಮಾಡುವಂತೆಯೂ ಸೂಚಿಸುತ್ತಾರೆ. ಶಸ್ತ್ರಚಿಕಿತ್ಸೆಯಿಂದ ಆ ಮಕ್ಕಳ ದೇಹಗಳು ಅವರಿಗೆ ನೀಡಿದ ಜೆಂಡರ್‌ಗೆ ಅನುಗುಣವಾಗಿ ಬದಲಿಸಬಹುದು ಎನ್ನುವ ನಂಬಿಕೆಯಲ್ಲಿ ಈ ಶಸ್ತ್ರಚಿಕಿತ್ಸೆಗಳನ್ನು ಸೂಚಿಸಲಾಗುತ್ತದೆ. ಉದಾಹರಣೆಗೆ ಇತ್ತೀಚಿಗೆ ಮುಂಬಯಿಯಲ್ಲಿ ಇಂಟರ್‌ಸೆಕ್ಸ್ ಮಗುವಿನ ಮೇಲೆ ಇಂತಹ ಒಂದು ಶಸ್ತ್ರಚಿಕಿತ್ಸೆ ಮಾಡಲಾಯಿತು ಎನ್ನುವ ವರದಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇಂಟರ್‌ಸೆಕ್ಸ್ ಆಗಿರುವ ವಯಸ್ಕರು ಇದರ ವಿರುದ್ಧ ತೀವ್ರವಾಗಿ ಪ್ರತಿಭಟಿಸಿದ್ದಾರೆ. ಚಿಕ್ಕವಯಸ್ಸಿನಲ್ಲಿ ಇಂತಹ ಶಸ್ತ್ರಚಿಕಿತ್ಸೆಗಳಿಗೆ ಒಳಗೊಳ್ಳುವಂತೆ ಮಾಡುವುದನ್ನು ತಾವು ಒಪ್ಪುವುದಿಲ್ಲ ಹಾಗೂ ತಂದೆತಾಯಿಗಳು ತಮ್ಮ ಇಂಟರ್‌ಸೆಕ್ಸ್ ಮಕ್ಕಳಿಗೆ ಅವರ ವಾಸ್ತವವನ್ನು ಮುಚ್ಚುಮರೆಯಿಲ್ಲದೇ ಹೇಳಬೇಕು ಹಾಗೂ ಅದರಿಂದ ಮಕ್ಕಳಿಗೆ ತಮ್ಮ ದೇಹದ ಬಗ್ಗೆ ಅರಿವು ಮೂಡಬಹುದು ಹಾಗೂ ತಮ್ಮ ಮನಸ್ಸನ್ನೂ ಅರ್ಥೈಸಿಕೊಳ್ಳಬಹುದು ಹಾಗೂ ತಾವು ಇತರರಿಗಿಂತ ಹೇಗೆ ಭಿನ್ನ ಮತ್ತು ಹೇಗೆ ಸಮಾನ ಎನ್ನುವುದನ್ನು ತಿಳಿಯಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಆ ಮಕ್ಕಳು ಬೆಳೆದ ನಂತರ ಯಾವ ಜೆಂಡರ್‌ನೊಂದಿಗೆ ತಮ್ಮನ್ನು ತಾವು ಜೆಂಡರ್‌ನೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡುವರು ಎಂದು, ಅದು ಸ್ಪಷ್ಟವಾಗಿ ವ್ಯಕ್ತವಾಗುವ ಸಮಯಕ್ಕೆ ಮುಂಚೆಯೇ ಯಾರಿಗೂ ಹೇಳಲಾಗುವುದಿಲ್ಲ.

ಹಾಗಾಗಿ ಇಂಟರ್‌ಸೆಕ್ಸ್ ಮಕ್ಕಳ ಪೋಷಕರು ಮತ್ತು ವೈದ್ಯರು ಗಮನಿಸಬೇಕಾದ ಮುಖ್ಯವಾದ ಸಂಗತಿ ಏನೆಂದರೆ, ತಪ್ಪು ಮಾಹಿತಿಯ ಆಧಾರದ ಮೇಲೆ ಆ ಇಂಟರ್‌ಸೆಕ್ಸ್ ಮಕ್ಕಳ ಮೇಲೆ ಜನನೇಂದ್ರೀಯದ ಶಸ್ತ್ರಚಿಕಿತ್ಸೆ ಮಾಡಲು ಆತುರಪಡಬಾರದು. ಹಾಗೆ ಮಾಡಿ ಆ ಮಗುವಿನ ಜೆಂಡರ್ ಅನ್ನು ಬದಲಿಸಲು ಪ್ರಯತ್ನ ಮಾಡಬಾರದು. ನೀವು ನಿಮ್ಮ ಇಂಟರ್‌ಸೆಕ್ಸ್ ಮಗುವನ್ನೂ ಇತರೆ ಮಕ್ಕಳಂತೆ ಒಪ್ಪಿಕೊಳ್ಳಿ, ಅಷ್ಟೇ ಪ್ರೀತಿಸಿ ಹಾಗೂ ಅವರನ್ನು ವಯಸ್ಕರಾಗಲು ಬಿಡಿ. ಆಗ ಮಾತ್ರ ಅವರು ತಾವು ಗುರುತಿಸಿಕೊಳ್ಳಲು ಇಚ್ಛಿಸುವ ಜೆಂಡರ್ ಬಗ್ಗೆ ನಿರ್ಣಯ ತಾವೇ ತೆಗೆದುಕೊಳ್ಳುವರು. ಅದರೊಂದಿಗೆ ತಮ್ಮ ದೇಹವನ್ನು ಮಾರ್ಪಡಿಸಲು ವೈದ್ಯಕೀಯ ನೆರವು ಅಗತ್ಯವೋ ಇಲ್ಲವೋ ಎಂತಲೂ ತಾವೇ ನಿರ್ಣಯಿಸಬಹುದು. ಅನೇಕ ಸಲ ಇಂಟರ್‌ಸೆಕ್ಸ್ ಮಕ್ಕಳ, ಅಂದರೆ ಯಾರ ದೇಹ ಪುರುಷ ಅಥವಾ ಸ್ತ್ರೀಯರ ದೇಹಕ್ಕೆ ಪೂರಕವಾಗಿರುವುದಿಲ್ಲವೋ ಅಂತಹ ಮಕ್ಕಳ ತಂದೆತಾಯಿಗಳು ಆ ಮಕ್ಕಳನ್ನು ಪರಿತ್ಯಜಿಸಿ ಬಿಡುತ್ತಾರೆ. ಎರಡು ತಿಂಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಇಂತಹ ಒಂದು ಮಗುವನ್ನು ಯಾರಾದರೂ ದತ್ತು ತೆಗೆದುಕೊಳ್ಳಲಿ ಎಂದು ಆ ಮಗುವಿನ ಪೋಷಕರು ಬಿಟ್ಟಿದ್ದು ವರದಿಯಾಗಿತ್ತು. ಹಾಗಾಗಿ ಇಂಟರ್‌ಸೆಕ್ಸ್ ಮಕ್ಕಳಿಗೆ ತಮ್ಮ ಉಳಿವಿಗಾಗಿ ಹಾಗೂ ತಾರತಮ್ಯದ ವಿರುದ್ಧದ ಹೆಣಗಾಟ ಹುಟ್ಟಿದ ಸಮಯದಿಂದಲೇ ಪ್ರಾರಂಭವಾಗುವುದು ಅತ್ಯಂತ ದುಃಖಕರ ಸಂಗತಿ.

ವೈದ್ಯರು ಇಂಟರ್‌ಸೆಕ್ಸ್ ಮಕ್ಕಳಿಗೆ ಗಂಡು ಅಥವಾ ಹೆಣ್ಣು ಎನ್ನುವ ಒಂದು ಜೆಂಡರ್ ಅನ್ನು ನಿರ್ಣಯಿಸಿಬಿಡುತ್ತಾರೆ. ಆದರೆ ಇಂಟರ್‌ಸೆಕ್ಸ್ ಆಗಲು ಒಂದು ನಿರ್ದಿಷ್ಟ ಮೂಲಕಾರಣ ಹೊಂದಿದ ಮಕ್ಕಳು, ಹುಟ್ಟಿನ ಸಂದರ್ಭದಲ್ಲಿ ತಮಗೆ ಆರೋಪಿಸಲಾದ ಜೆಂಡರ್‌ಗೆ ಅನುಗುಣವಾಗಿ ಬೆಳೆಯದೇ ಇರಬಹುದು ಎನ್ನುವುದನ್ನು ಪರಿಗಣಿಸದೇ ಮಗುವಿನ ಜೆಂಡರ್ ನಿರ್ಣಯಿಸುತ್ತಾರೆ. ಒಂದು ವೇಳೆ ಆ ಇಂಟರ್‌ಸೆಕ್ಸ್ ಮಕ್ಕಳು ತಮಗೆ ವಹಿಸಿರುವ ಜೆಂಡರ್‌ದೊಂದಿಗೆ ಹೊಂದಾಣಿಕೆಯಾದಲ್ಲಿ ಅವರು ಟ್ರಾನ್ಸ್ಜೆಂಡರ್ ಆಗುವುದಿಲ್ಲ, ಅವರು ಸಿಸ್‌ಜೆಂಡರ್ ಆಗುತ್ತಾರೆ. ಹಾಗೂ ಒಂದು ವೇಳೆ ತಮಗೆ ನೀಡಿರುವ ಜೆಂಡರ್‌ನೊಂದಿಗೆ ಹೊಂದಾಣಿಕೆ ಆಗದಿದ್ದಲ್ಲಿ ಅವರು ಟ್ರಾನ್ಸ್ಜೆಂಡರ್ ಆಗುತ್ತಾರೆ. ಹಾಗಾಗಿ ಇಂಟರ್‌ಸೆಕ್ಸ್ ಮತ್ತು ಟ್ರಾನ್ಸ್ಜೆಂಡರ್ ಎನ್ನುವ ಎರಡೂ ಬೇರೆಯ ಬಗೆಗಳೇ ಆಗಿದ್ದು, ಎರಡೂ ತನ್ನದೇ ಆದ ಆರ್ಥ ಮತ್ತು ಸಾಮಾಜಿಕ ಪಯಣಗಳನ್ನು ಹೊಂದಿರುತ್ತವೆ. ಆದರೆ ಕೆಲವರು ಇಂಟರ್‌ಸೆಕ್ಸ್ ಮತ್ತು ಟ್ರಾನ್ಸ್ಜೆಂಡರ್ ಎರಡೂ ಒಟ್ಟಿಗೇ ಆಗಿರಲೂ ಸಾಧ್ಯ.

ಟ್ರಾನ್ಸ್ಜೆಂಡರ್ ಮಕ್ಕಳ ಅನುಭವಗಳೇನು? ಕೆಲವು ಟ್ರಾನ್ಸ್ಜೆಂಡರ್ ಮಕ್ಕಳು ತಮಗೆ ವಹಿಸಿದ ಜೆಂಡರ್‌ಗಿಂತ ತಾವು ಭಿನ್ನ ಎಂದು 3 ವರ್ಷದ ಚಿಕ್ಕ ವಯಸ್ಸಿನಲ್ಲೇ ಗುರುತಿಸಿಬಿಡುತ್ತಾರೆ. ಇನ್ನಿತರರು ತಾವು ಪ್ರೌಢಾವಸ್ಥೆಗೆ ಬಂದಾಗ ಗುರುತಿಸುತ್ತಾರೆ ಹಾಗೂ ಇನ್ನೂ ಕೆಲವರು ಇನ್ನಷ್ಟು ತಡವಾಗಿಯೂ ಗುರುತಿಸುವುದುಂಟು. ಇಂತಹ ಒಂದು ಪ್ರಸಂಗವನ್ನು ಊಹಿಸಿ, ಒಬ್ಬ ಟ್ರಾನ್ಸ್ಜೆಂಡರ್ ಮಗು, ಆ ಮಗುವನ್ನು ಪೋಷಕರು ಗಂಡು ಎಂದು ನೋಡುತ್ತಿರುವ ಆ ಮಗು ಅಳುತ್ತ ಬಂದು ತನ್ನ ತಂದೆತಾಯಿಗಳಿಗೆ ತನ್ನ ಶಿಶ್ನವನ್ನು ತೆಗೆದುಹಾಕಬಹುದೇ ಎಂದು ಕೇಳುತ್ತದೆ ಅಥವಾ, ಹೆಣ್ಣುಮಗು ಎಂದು ನಿರ್ಧರಿಸಲಾದ ಆ ಮಗು, ತನ್ನ ತಂದೆತಾಯಿಗೆ ನಾಳೆ ನಾನು ನಿದ್ರೆಯಿಂದ ಎದ್ದಾಗ ಒಬ್ಬ ಹುಡುಗನಾಗಿ ಏಳಬಹುದೇ ಎಂದು ಕೇಳುತ್ತದೆ. ಇದರಿಂದ ತಂದೆತಾಯಿಗಳಿಗೆ ತುಂಬಾ ಗೊಂದಲವುಂಟಾಗಬಹುದು ಹಾಗೂ ಆ ಮಗುವಿನ ಬೆಳವಣಿಗೆಯ ಒಂದು ಹಂತ ಎಂತಲೋ ಅಥವಾ ಆ ಮಗುವಿನ ‘ಜೆಂಟರ್ ಐಡೆಂಟಿಟಿ ಡಿಸ್‌ಫೋರಿಯಾ’ ಎಂದು ಕರೆಯಲಾಗುವ ಕ್ಷೋಭೆ ತನ್ನಿಂತಾನೆ ಕಡಿಮೆಯಾಗಬಹುದು ಎಂದು ಭಾವಿಸುತ್ತಾರೆ. ತನ್ನ ಮಾತುಗಳನ್ನು ಕೇಳಿಸಿಕೊಳ್ಳುವುದಕ್ಕೆ ಸರಿಯಾದ ವಾತಾವರಣ ಸಿಗದಾಗ ಆ ಮಕ್ಕಳು ತಮ್ಮ ಭಾವನೆಗಳನ್ನು ಪ್ರಕಟಿಸಿದೇ ತಮ್ಮಲ್ಲೇ ಹುದುಗಿಸಿಡಲು ಪ್ರಯತ್ನಿಸುತ್ತಾರೆ. ಹಾಗೂ ಅದರ ಬಗ್ಗೆ ಮಾತನಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡುತ್ತಾರೆ. ಡಿಸ್‌ಫೋರಿಯಾ ಹೊಂದಿರುವ ಕೆಲವು ಮಕ್ಕಳು ತಾವು ಗುರುತಿಸಿಕೊಳ್ಳಲಿಚ್ಛಿಸುವ ಜೆಂಡರ್‌ನಂತೆ ತುಂಬಾ ತೀವ್ರವಾಗಿ ವರ್ತಿಸುತ್ತಾರೆ, ಹಾಗಾದಾಗ ಕೆಲವು ಪೋಷಕರು ಆ ಮಗುವಿನ ಜೆಂಡರ್ ಇದೇ ಇರಬಹುದು ಎಂದು ಅದರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಆದರೆ ಇನ್ನೂ ಕೆಲವು ಪೋಷಕರು ಮಗುವಿನೊಂದಿಗೆ ತುಂಬಾ ಅಹಿತವಾಗಿ ಹಾಗೂ ಕೆಲವು ಸಲ ಹಿಂಸಾತ್ಮಕವಾಗಿ ವರ್ತಿಸುತ್ತಾರೆ.

ಟ್ರಾನ್ಸ್ಜೆಂಡರ್ ಮಗುವೊಂದು ವಯಸ್ಕರಾಗುವ ಅನುಭವವನ್ನು ತಿಳಿದುಕೊಳ್ಳಲು ನಾವು ಈ ಡಿಸ್‌ಫೋರಿಯಾ ಅನ್ನು ಇನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದೆ, ವಿಶೇಷವಾಗಿ ಪ್ರೌಢಾವಸ್ಥೆಯಲ್ಲಿ ಪರಿಸ್ಥಿತಿ ಬಿಗಡಾಯಿಸಿದಾಗ. ಡಿಸ್‌ಫೋರಿಯಾ ಅಂದರೆ, ತನಗೆ ನೀಡಿರುವ ಜೆಂಡರ್‌ನೊಂದಿಗಿರುವ ಕ್ಷೋಭೆಯ ಭಾವನೆ ಅಥವಾ ಬೇರ್ಪಡಿಕೆ. ಈ ಡಿಸ್‌ಫೋರಿಯಾ ವಿವಿಧ ಸ್ವರೂಪಗಳನ್ನು ಪಡೆದುಕೊಳ್ಳಬಹುದು ಹಾಗೂ ಟ್ರಾನ್ಸ್ಜೆಂಡರ್ ಆಗಿ ಜೀವನ ಸಾಗಿಸುವ ಒಬ್ಬ ವ್ಯಕ್ತಿಯ ಅನುಭವ ಈ ಡಿಸ್‌ಫೋರಿಯಾದ ಅನುಭವವೇ ಆಗಿರುತ್ತದೆ. ನಮ್ಮ ಸಮಾಜವು ಟ್ರಾನ್ಸ್ಜೆಂಡರ್ ವ್ಯಕ್ತಿಗಳಿಗೆ ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸದೇ ಈ ಸಮುದಾಯಕ್ಕೆ ಹೇಗೆ ಸಹಕಾರಿಯಾಗಬಲ್ಲದು ಎನ್ನುವುದನ್ನು ನಾವೆಲ್ಲರೂ ಸೇರಿ ಚಿಂತಿಸಬೇಕಿದೆ.

(ಅನುವಾದ: ಡಾ.ರಾಜಶೇಖರ್ ಅಕ್ಕಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...