Homeಅಂಕಣಗಳುಕುಮಾರಣ್ಣ ಇಳದ್ರೆ ಯಾರಿಗೂ ಬೇಜಾರಾಗಲ್ಲ ಸಾ?

ಕುಮಾರಣ್ಣ ಇಳದ್ರೆ ಯಾರಿಗೂ ಬೇಜಾರಾಗಲ್ಲ ಸಾ?

- Advertisement -
- Advertisement -

| ಯಾಹೂ |

ಹಠಾತ್ತನೆ ಮನೆ ಕುಸಿಯತೊಡಗಿ ಜೆಡಿಎಸ್ ಕುಟೀರದ ಗೋಡೆ ಬಿರುಕು ಕಾಣಿಸಿಕೊಂಡ ಕೂಡಲೇ ಅನಾಹುತದ ನಿಖರತೆಯನ್ನು ಗುರುತಿಸಿದ ಎಡೂರಪ್ಪ, ನಾನು ಸನ್ಯಾಸಿಯಲ್ಲ ಎಂದು ಘೋಷಿಸಿಬಿಟ್ಟಿದ್ದಾರಲ್ಲಾ. ಅರೆ ಸಮ್ಮಿಶ್ರ ಸಂಸಾರ ಬಿಗಡಾಯಿಸಿಕೊಂಡು ಅಲ್ಲಿಂದ ಹೊರಬಿದ್ದವರೊಂದಿಗೆ ಕೂಡಿಕೆ ಮಾಡಿಕೊಂಡು ಸಂಸಾರ ಹೂಡುವ ಬಗ್ಗೆ, ಎಡೂರಪ್ಪನನ್ನು ತಡೆದವರಾರು. ಎಡೂರಪ್ಪನ ಬಾಯಲ್ಲಿ ಇಂತಹ ಮಾತು ಸುಮ್ಮಸುಮ್ಮನೆ ಬರಲಾರದು. ಯಾರೊ ಚಡ್ಡಿಗಳ ಪೈಕಿ ಎಡೂರಪ್ಪನಿಗೆ ವಯಸ್ಸಾಯ್ತು ಎಂದಿರಬಹುದು ಅಥವಾ ಅವರ ಸರದಿ ಮುಗಿಯಿತಲ್ಲಾ ಎಂದಿರಬಹುದು. ಈ ಎಲ್ಲಾ ವಾಸನೆ ಗ್ರಹಿಸಿದ ಎಡೂರಪ್ಪ, ನಾನು ಸನ್ಯಾಸಿಯಲ್ಲ ಸಂಸಾರಿ ಎಂದಿರುವುದು. ಅದಿರಲಿ, ಎಡೂರಪ್ಪ ಆಧುನಿಕ ಜಗತ್ತಿನ ಸನ್ಯಾಸಿಗಳನ್ನ ನೋಡಿಲ್ಲ ಅನ್ನಿಸುತ್ತದೆ. ಅವರೆಲ್ಲಾ ಗುಪ್ತ ಸಮಾಲೋಚನಾ ಪ್ರಿಯರಾಗಿ ಬಹಳ ವರ್ಷಗಳಾದವು. ಉಡುಪಿ ಮಠಗಳನ್ನೆ ಆದರ್ಶವಾಗಿ ಗ್ರಹಿಸಿ ಬದುಕನ್ನು ಇಡಿಯಾಗಿ ಮುಕ್ಕುವ ಕಲೆಯನ್ನು ಕರಗತ ಮಾಡಿಕೊಂಡು ಶತಮಾನವೇ ಸರಿಯಿತು. ತೀರ ಇತ್ತೀಚಿನ ತಾಜಾ ಉದಾಹರಣೆಯೆಂದರೆ ನಮ್ಮ ಸಿರಿಗೆರೆಯ ಶಿವಾಚಾರ್ಯ ಮಹಾಸ್ವಾಮಿಗಳವರು ಪೀಠದ ಸಂವಿಧಾನದ ರೀತಿ ಅರವತ್ತು ವರ್ಷಕ್ಕೆ ಪೀಠಬಿಟ್ಟು, ಹಿಂದೆ ಬಂದ ಮರಿಯನ್ನ ಸ್ಥಾಪಿಸಿ ಪಕ್ಕಕ್ಕೆ ನಿಲ್ಲಬೇಕಿತ್ತು. ಆದರೇನು ಭೂಪ ಇನ್ನ ಅಲ್ಲಾಡಿಲ್ಲ. ಇಂತಿರುವಾಗ ಎಡೂರಪ್ಪ ತಮ್ಮ ರಾಜಕಾರಣದ ಉದಾಹರಣೆಗೆ ನಾನು ಸನ್ಯಾಸಿಯಲ್ಲ ಎಂದಿದ್ದಾರಲ್ಲಾ, ಥೂತ್ತೇರಿ..

ಕರ್ನಾಟಕದ ಇವತ್ತಿನ ಸ್ಥಿತಿಯ ಬಗ್ಗೆ ಯಾರಿಗೆ ಫೋನು ಮಾಡಲಿ, ಕುಮಾರಣ್ಣ ಕನಲಿ ಕೆಂಡವಾಗಿದ್ದಾರೆ, ಸಿದ್ದು ಆತಂಕ ತೋರಿಕೆಯಂತೆ ಕಾಣುತ್ತಿದೆ. ಬಿಜೆಪಿಗಳು ಶುದ್ಧ ಕಿಡಿಗೇಡಿಗಳಂತೆ ಕಾಣುತ್ತಿದ್ದಾರೆ. ವಿಶ್ವನಾಥ್ ಈ ಶತಮಾನದ ಮೀರ್‍ಸಾದಿಕನಂತೆ ಗೋಚರಿಸಿದರೆ, ಕೆ.ಆರ್.ಪೇಟೆ ನಾರಾಯಣಗೌಡ ನಿಜಕ್ಕೂ ನೊಂದಂತೆ ಕಾಣುತ್ತಿದ್ದಾನೆ. ಇವೆಲ್ಲಾ ಸಂಗತಿಗಳನ್ನ ಚರ್ಚಿಸಲು ಸೂಕ್ತ ವ್ಯಕ್ತಿಗಾಗಿ ತಪಾಸಣೆ ಮಾಡುತ್ತಿದ್ದಾಗ ವಾಟಿಸ್ಸೆ ಹೆಸರು ಹೊಳೆಯಬೇಕೆ? ಕೂಡಲೇ ಫೋನ್ ಮಾಡಲಾಗಿ ರಿಂಗಾಯ್ತು…

ರಿಂಗ್‍ಟೋನ್ “ಹೋಗದಿರೀ ಸೋದರರೇ.. ಹೋಗದಿರೀ ಬಂಧುಗಳೇ.. ಮನೆಯನು ತೊರೆದು ಹೋಗುವಿರಾ?” ಹಲೊ ಗುಡಾಪ್ಟರ್ ನೂನ್ ಸರ್”
“ವಾಟಿಸ್ಸೆ ಎಲ್ಲಿದ್ದೀ”
“ಎಲ್ಯಾರ ಇದ್ರೂ ನಿಮ್ಮೆದುರಿಗೆ ನಿಂತಂಗಲವ ಸಾ, ಅದ್ಕೆ ಹಂಡ್ರೆಂಡ್ ರುಪೀಸ್ ಕರೆನ್ಸಿ ಹಾಕ್ಸಿ”
“ಹಾಕುಸ್ತಿನಿ ಕರ್ನಾಟಕದ ರಾಜಕಾರಣ ಏನನ್ನಸ್ತಾ ಅದೆ”
“ಏನಾಗಬೇಕೊ ಅದಾಯ್ತ ಅದೆ ಸಾ”
“ಎಮ್ಮೆಲ್ಲೆಗಳ ರಾಜೀನಾಮೆ ಬಗ್ಗೆ ಏನೇಳ್ತಿ”
“ಅವೊಂತರಾ ಬ್ರಾಂಬ್ರು ಕೇರಿಯ ನಾಯಿದ್ದಂಗೆ ಸಾ”
“ಅಂದ್ರೆ”
“ಈ ಬ್ರಾಂಬ್ರು ಕೇರಿ ನಾಯಿಗಳು ಅಕಸ್ಮಾತ್ ಶೂದ್ರ ಕೇರಿಗೋಯ್ತವೆ. ಅಲ್ಲಿ ಚರಂಡೀಲಿ ಕುರಿ, ಆಡಿನ ಮೂಳೆ, ಕೋಳಿ ಮೂಳೆ ರುಚಿ ನೋಡಿದೂ ಅಂದ್ರೇ ತಿರಗಿ ಬ್ರಾಂಬ್ರು ಕೇರಿಗೋಗದಿಲ್ಲ”
“ಅಂಗಂತಿಯಾ”
“ಹೂ ಮತ್ತೆ. ಆ ಬಿಜೆಪಿಗಳು ಕೊಡೋ ದುಡ್ಡಿಗೆ, ಅಧಿಕಾರಕ್ಕೆ, ಮನಸು ಕೊಟ್ಟವೆ ಅನ್ನಸ್ತದೆ ಅದ್ಕೆ ಹೋದೊ ಬುಡಿ ಅತ್ತಗೆ”
“ಹೋಗಿಲ್ಲ ಇನ್ನ ಇಲ್ಲೆ ಇದ್ದಿವಿ ಅಂತಾರಲ್ಲಾ”
“ಇನ್ನ ಇಲ್ಲೇ ಇದ್ದಿವಿ ಅಂದ್ರೆ ಅವುರಿಗೇನಾಗ್ಯದೆ ಕೇಳಬೇಕು ಸಾ.”
“ಯಾರು ಕೇಳಬೇಕು.”
“ಇನ್ಯಾರು ಮುಖ್ಯಮಂತ್ರಿನೇ ಕೇಳಬೇಕು. ಇವುನು ಗ್ರಾಮ ವಾಸ್ತವ್ಯಕ್ಕೋದ್ರೆ ಹಿಂಗೆ ಆಗದು”
“ಈಗೇನಾಗಬವುದು”
“ಅಲ್ಲ ಸಾ, ಬೆಂಗಳೂರಲ್ಲಿರೊ ನೀವು ಹೇಳಬೇಕು.”
“ಜನಗಳಭಿಪ್ರಾಯ ಹೇಳು.”
“ಜನಗಳು ವಿಶ್ವನಾಥನ್ನ ಉಗೀತಾ ಅವುರೆ ಸಾ”
“ಯಾಕೆ?”
“ಯಾಕೆ ಅಂದ್ರೆ ಸಿದ್ದರಾಮಯ್ಯ ಇವುನೇಗ್ತಿ ನೋಡಿ ಕುರಿ ಕ್ವಟಗೆ ಒಳಿಕೆ ನೂಕಿದ್ದ. ದ್ಯಾವೇಗೌಡ ಹೋಗಿ ಕರದು ತಲೆ ಸವುರಿದ. ಆಗ ತನ್ನ ತಲೇನೆ ಸವುರಿಕೊಂಡಂಗಾಯ್ತು. ಕೂಡ್ಳೆ ಪಾರ್ಟಿ ಪ್ರೆಸಿಡೆಂಟ್ ಮಾಡಿ ಎಮ್ಮೆಲ್ಲೆ ಮಾಡಿದ್ರೆ, ಇವುನು ಕೈ ಕೊಡದ ಅಂತ ಅವುರೆ”
“ನಿನಗೇನನ್ಸುತ್ತೆ”
“ಮಂತ್ರಿ ಮಾಡಿದ್ರೆ ಖಾತೆ ಚನ್ನಾಗಿ ನಿಭಾಯಿಸೋನು, ಅಂಗೆ ನೋಡಿದ್ರೆ ಸಾ.ರಾ. ಮಯೇಶ, ಪುಟ್ಟರಾಜ, ತಮ್ಮಣ್ಣ ಇಂತ ಸ್ಕ್ರಾಪ್ ಮಾಲಿಗಿಂತ ವಿಶ್ವನಾಥ್ ಯೋಗ್ಯ, ಈಗ ಮಾತ್ರ ಅಯೋಗ್ಯ”
“ಕೆ.ಆರ್.ಪೇಟೆ ನಾರಾಯಣಗೌಡನ ಬಗ್ಗೆ ಏನೇಳ್ತಿ’.’
“ಅವುನು ಬಾಂಬೆಯಿಂದ ತಪ್ಪಿಸಿಕೊಂಡು ಬಂದ ಮಾರವಾಡಿ ಹುಡುಗನಂಗೆ ಕಾಣ್ತನೆ ಸಾರ್. ಜೆಡಿಎಸ್‍ಗೆ ಬೇಕಾದಷ್ಟು ಮಾಡ್ಯವುನೆ, ಚುಂಚನಗಿರಿ ಮಠಕ್ಕೆ ಬೊಂಬಾಯಿಲೆ ಜಾಗ ಕೊಡಿಸ್ಯಾವುನೆ, ಅಂಥೊನ್ನ ದ್ಯಾವೇಗೌಡನ ಮನೆವ್ರು ಚಪ್ರಾಸಿಯಂಗೆ ನ್ಯಡಿಸಿಕೊಬಾರದಿತ್ತು.”
“ಒಟ್ಟಾರೆ ಈ ರಾಜೀನಾಮೆ ಪ್ರಕರಣ ಏನನ್ನಸುತ್ತೆ”
“ನನಿಗೇನನ್ನಸ್ತದೆ ಅಂದ್ರೆ, ಒಂದು ಅವಿಭಕ್ತ ಕುಟುಂಬದಲ್ಲಿ ಅತೃಪ್ತ ಜನ ಏನೇನೊ ನಾಟಗ ಮಾಡ್ತರೆ. ಹೊಟ್ಟೆನೊವ್ವು ಅಂತರೆ, ಬೇಧಿ ಅಂತರೆ, ಹಲ್ಲುನೋವು ಅಂತರೆ, ಸುಮ್ಮನೆ ಮೂಲೇಲಿ ಮನಿಕತ್ತರೆ, ಅದು ಅವುರ ಪ್ರತಿಭಟನೆ ಸಾ. ಈಗ್ಲು ನ್ಯಡದಿರದು ಈ ಕುಮಾರಸ್ವಾಮಿ ಬ್ಯಾಡ ಅನ್ನೊ ಪ್ರತಿಭಟನೆ ಅಷ್ಟೆ ಸಾ”
“ಅಂಗಾರೆ ಕುಮಾರಣ್ಣ ಬ್ಯಾಡವಾ”
“ಇವುನು ಹೋಯ್ತನೆ ಅಂದ್ರೆ ಯಾರಿಗೂ ಫೀಲಾಗಲ್ಲ ಸಾರ್, ಯಾಕಂದ್ರೆ ಇವುರಿಂದ್ಲೆ ಹಾರವರು ಲಕ್ಕಪತಿಗಳಾದ್ರು, ಅದೇನು ಯಜ್ಞ – ಅದೇನು ಯಾಗ, ಅದೇನು ಹೋಮ, ಅದಿರ್ಲಿ ಯಾರಾರ ತಲೆಯಿದ್ದೋರು, ನಾಮಪತ್ರ ತಗಂಡೋಗಿ ಶೃಂಗೇರೀಲಿ ಪೂಜೆ ಮಾಡಿಸಿಗಂಡು ಬತ್ತರ ಸಾ”
“ಇಲ್ಲ ಬುಡು ಇತಿಹಾಸದಲ್ಲಿ ಯಾರು ಅಂಗೆ ಮಾಡಿಲ್ಲ”
“ದ್ಯಾವೇಗೌಡ್ರು ಫ್ಯಾಮಿಲಿ ಪವರಿಂದ ಇಳದ್ರೆ ಬ್ರಾಂಬ್ರಿಗೆ ಲಾಸಾಗಬಹುದು. ನನಿಗಂತು ಯಾವ ನಷ್ಟನೂ ಇಲ್ಲ ಸಾ”

“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...