Homeಅಂಕಣಗಳುಗಾಂಧೀಜಿ 'ತತ್ವರಹಿತ ರಾಜಕೀಯ' ಪಾತಕವೆಂದರು, ಆದರೆ....

ಗಾಂಧೀಜಿ ‘ತತ್ವರಹಿತ ರಾಜಕೀಯ’ ಪಾತಕವೆಂದರು, ಆದರೆ….

ಮುಖ್ಯಮಂತ್ರಿ ಕುಮಾರಸ್ವಾಮಿಯವರು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಇತ್ತೀಚೆಗೆ ಭೇಟಿ ಮಾಡಿದಾಗ, "ನಿಮ್ಮದೂ ಕುಟುಂಬ ರಾಜಕೀಯ, ನಮ್ಮದೂ ಕುಟುಂಬ ರಾಜಕೀಯ.

- Advertisement -
- Advertisement -

| ಎಚ್. ಎಸ್. ದೊರೆಸ್ವಾಮಿ |

ದೇವೇಗೌಡರು ಇನ್ನು ಮುಂದಾದರೂ ಕುಟುಂಬ ರಾಜಕೀಯಕ್ಕೆ ವಿದಾಯ ಹಾಡಿ, ನಿಜವಾದ ಪ್ರಜಾಪ್ರಭುತ್ವ ಸ್ಥಾಪನೆಗೆ ತೊಡಗುವುದು ಅವರ ರಾಜಕೀಯ ಇಳಿ ಜೀವನವನ್ನು ಕೊಂಚ ಮುತ್ಸದ್ಧಿತನಕ್ಕೆ ತಂದು ನಿಲ್ಲಿಸಬಹುದು. ಹಾಗೆಂದೇ ನಾನು ವಿನಂತಿಸಿಕೊಳ್ಳುತ್ತೇನೆ.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಇತ್ತೀಚೆಗೆ ಭೇಟಿ ಮಾಡಿದಾಗ, “ನಿಮ್ಮದೂ ಕುಟುಂಬ ರಾಜಕೀಯ, ನಮ್ಮದೂ ಕುಟುಂಬ ರಾಜಕೀಯ. ಅಷ್ಟೇಅಲ್ಲ ಆಂಧ್ರದಲ್ಲಿ, ತೆಲಂಗಾಣದಲ್ಲಿ, ಹರಿಯಾಣದಲ್ಲಿ, ಮದ್ರಾಸ್ ಪ್ರಾಂತ್ಯದಲ್ಲಿ ನಡೆಯುತ್ತಿರುವುದು ಕುಟುಂಬ ರಾಜಕೀಯ. ಅದಕ್ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ? ನೀವು ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರೆಯಿರಿ’ ಎಂದು ಹೇಳಿ ಬಂದಿದ್ದಾರೆಂದು ಪತ್ರಿಕೆಯಲ್ಲಿ ವರದಿಯಾಗಿದೆ.

ಕುಟುಂಬ ರಾಜಕೀಯ ನಮ್ಮ ದೇಶಕ್ಕೆ ಅಂಟಿರುವ ಮಹಾವ್ಯಾಧಿ. ಇದನ್ನು ಸಮರ್ಥಿಸಿಕೊಳ್ಳುವವರೂ ಇದ್ದಾರೆ ಎಂಬುದು ದೇಶದ ದುರ್ದೈವ.

ನಮ್ಮ ಸಂವಿಧಾನವನ್ನು ರಚಿಸಿದವರು ಭಾರತವು ಪ್ರಜಾತಂತ್ರವನ್ನು ಪಾಲಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ಸ್ವಾತಂತ್ರ್ಯ ಸಂಗ್ರಾಮ ನಡೆದಾಗ 562 ಸಂಸ್ಥಾನಿಕ ರಾಜರುಗಳಿದ್ದರು. ನಾವಷ್ಟೇ ಪೃಥ್ವೀಪತಿಗಳೆಂದು ಅವರು ಭಾವಿಸಿದ್ದರು. ಈ ಪೃಥ್ವೀಪತಿಗಳು ದೇವರ ಅಂಶ ಎಂದು ಅಂದಿನ ಸಮಾಜ ಒಪ್ಪಿಕೊಂಡಿತ್ತು. ಇಂಗ್ಲೆಂಡಿನಲ್ಲಿ ಒಂದು ಭಾವನೆಯಿತ್ತು. ಅದೆಂದರೆ The King does no wrong! ರಾಜನು ತಪ್ಪೇ ಮಾಡುವುದಿಲ್ಲ, ತಪ್ಪು ಮಾಡಿದರೂ ಅದನ್ನು ಪ್ರಶ್ನಿಸುವ ಹಕ್ಕು ಪ್ರಜೆಗಿಲ್ಲ ಎಂದೇ ಇದಕ್ಕೆ ಅರ್ಥ.

ಈ ರಾಜರುಗಳಿಗೆ, ತಾವು ಆಳ್ವಿಕೆ ಮಾಡುವ ಈ ರಾಜ್ಯವೆಲ್ಲ ತನ್ನ ಸ್ವತ್ತು, ಇದನ್ನು ಪ್ರಶ್ನಿಸುವ ಹಕ್ಕು ಯಾವ ಪ್ರಜೆಗೂ ಇಲ್ಲ ಎಂಬ ಭಾವನೆ ಇತ್ತು. ಸ್ವಾತಂತ್ರ್ಯ ಬಂದನಂತರ ಸರ್ದಾರ್ ಪಟೇಲರು ಈ 562 ರಾಜರಿಂದಲೂ ರಾಜತ್ವ ಅಧಿಕಾರ ಕಿತ್ತುಕೊಂಡು ಸಂಸ್ಥಾನಗಳಲ್ಲಿ ಪ್ರಜಾರಾಜ್ಯ ಸ್ಥಾಪಿಸಿದರು. ಸ್ವಾತಂತ್ರ್ಯ ಪ್ರಾಪ್ತವಾದ ಈ 72 ವರ್ಷಗಳಲ್ಲಿ ರಾಜಕೀಯ ಬದಲಾಗುತ್ತಾ ಬಂತು. ನೆಹರೂ ಸಂತತಿಯವರು ಕಾಂಗ್ರೆಸ್ಸಿನ ಚುಕ್ಕಾಣಿ ಹಿಡಿದರು. ಅವರನ್ನು ಅನುಸರಿಸಿ ಒಂದೊಂದು ರಾಜ್ಯದಲ್ಲೂ ಒಂದೊಂದು ಮನೆತನದವರೂ ತಾವು ರಚಿಸಿದ ರಾಜಕೀಯ ಪಕ್ಷವನ್ನು ತಮ್ಮ ಕುಟುಂಬ ರಾಜಕೀಯವಾಗಿ ಪರಿವರ್ತನೆ ಮಾಡಿದರು.

ಆದರೆ ಹಾಗೆಂದು ಅವರ್ಯಾರು ಇದನ್ನು ಜಗಜ್ಜಾಹೀರು ಮಾಡಲಿಲ್ಲ. ಚಾಣಾಕ್ಷತೆಯಿಂದ ಕುಟುಂಬ ರಾಜಕೀಯವನ್ನು ಬೆಳೆಸುತ್ತಾ ಬಂದರು. ಮೊದಮೊದಲು ನಮ್ಮದು ಕುಟುಂಬ ರಾಜಕೀಯ ಎಂಬುದನ್ನು ಸಮರ್ಥನೆ ಮಾಡುತ್ತಲೂ ಹಿಂಜರಿಯುತ್ತಿದ್ದರು. ಪ್ರಜಾಪ್ರಭುತ್ವ ತತ್ವಗಳನ್ನೇ ಆಚರಣೆಗೆ ತಂದಿದ್ದೇವೆ ಎಂಬ ಭ್ರಾಂತಿ ಹುಟ್ಟಿಸಿ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲೂ ಮುಂದಾದರು. ನಮ್ಮ ಮನೆಯವರಿಗೆ ಒಬ್ಬಿಬ್ಬರಿಗೆ ರಾಜಕೀಯ ಪ್ರವೇಶಿಸಲು ಅವಕಾಶ ಕೊಟ್ಟ ಮಾತ್ರಕ್ಕೆ ಇದನ್ನು ಕುಟುಂಬ ರಾಜಕೀಯ ಎಂದು ಏಕೆ ಬೊಬ್ಬೆ ಹೊಡೆಯುತ್ತೀರಿ ಎಂದರು. ಕಾಲಕ್ರಮೇಣ ಮನೆಮಂದಿಗೆಲ್ಲ ಚುನಾವಣೆಗೆ ಸೀಟು ನೀಡಲು ಆರಂಭಿಸಿದಾಗ ಜನಕ್ಕೆ ಇವರ ಹುನ್ನಾರ ಗೊತ್ತಾಯಿತು.

ಜಾತಿಯ ಹೆಸರಿನಲ್ಲಿ ರಾಜಕೀಯ ಮಾಡಿ, ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆಂದು ಜನ ತಿರುಗಿಬಿದ್ದರು. ಚುನಾವಣೆಯಲ್ಲಿ ಆ ಮನೆತನದ ಕೆಲವರನ್ನು ಪರಾಭವಗೊಳಿಸಲು ಉದ್ಯುಕ್ತರಾದರು. ಈಗ ಲೋಕಕ್ಕೆ ಗೊತ್ತಾಯಿತು, ಇವರೆಲ್ಲ ಕುಟುಂಬ ರಾಜಕೀಯಕ್ಕೆ ಪ್ರಜಾಪ್ರಭುತ್ವವನ್ನು ಬಲಿ ಕೊಡುತ್ತಿದ್ದಾರೆಂಬುದು. ಆದರೆ ಕುಟುಂಬ ರಾಜಕೀಯ ನಡೆಸಿದವರಿಗೆ ಈಗ ತಮ್ಮನ್ನು ಸಮರ್ಥಿಸಿಕೊಳ್ಳುವ ಧೈರ್ಯ ಬಂದಿದೆ. ರಾಹುಲ್ ಗಾಂಧಿಗೆ ಕುಮಾರಸ್ವಾಮಿಯವರು ಕುಟುಂಬ ರಾಜಕಾರಣದ ಧೈರ್ಯ ತುಂಬಿ ಬಂದಿದ್ದಾರೆ ಎನ್ನುವ ಸುದ್ದಿ ಇದನ್ನು ಸಾಬೀತು ಮಾಡುತ್ತದೆ.

ಇದು ನಿಜವೇ ಆಗಿದ್ದರೆ, ಭಾರತದ ಪ್ರಜಾಪ್ರಭುತ್ವಕ್ಕೆ ಇದೊಂದು ದೊಡ್ಡ ದುರಂತವಾಗಲಿದೆ. ಜನ ಅಜ್ಞಾನಿಗಳು, ಅಸಹಾಯಕರು, ಅವರನ್ನು ತುಳಿದಷ್ಟು ನಮ್ಮ ಬೇಳೆ ಬೇಯಿಸಿ ಕೊಳ್ಳಬಹುದು ಎಂದು ಈ ಕುಟುಂಬ ರಾಜಕಾರಣದ ಫಲಾನುಭವಿಗಳು ಭಾವಿಸಿರುವಂತಿದೆ.

ಬಹುಶಃ ದೇವೇಗೌಡರಿಗೆ ತಮ್ಮ ಸೋಲಿಗೆ ಕಾರಣ ತಮ್ಮ ಕುಟುಂಬ ರಾಜಕಾರಣ ಎಂಬುದು ಈಗ ಮನವರಿಕೆಯಾಗಿರಬಹುದು. ಆದರೆ ಅದನ್ನು ಅವರೆಲ್ಲು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿಲ್ಲವಷ್ಟೆ. ಅವರು ಇತ್ತೀಚಿನ ಸಭೆ ಸಮ್ಮೇಳನಗಳಲ್ಲಿ ಅಧಿಕಾರವನ್ನು ಎಲ್ಲ ಕೋಮಿನ ನಾಯಕರೊಡನೆ ಹಂಚಿಕೊಳ್ಳುವ ಮಾತನಾಡುತ್ತಿದ್ದಾರೆ. ಕುಟುಂಬ ರಾಜಕೀಯ ಮುಂದುವರೆಸುತ್ತಾ, ಈ ಸೋಗಲಾಡಿ ನೀತಿಯನ್ನು ಅನುಷ್ಠಾನಕ್ಕೆ ತರುವ ಉದ್ದೇಶ ಅವರದಾಗಿರಬಹುದು. ಜನರನ್ನು ಒಂದು ಸಾರಿಯೋ, ಎರಡು ಸಾರಿಯೋ ಯಾಮಾರಿಸಬಹುದು. ಅವರನ್ನು ಸದಾಕಾಲ ವಂಚಿಸಲು ಸಾಧ್ಯವಿಲ್ಲ ಎಂಬ ಗಾದೆ ಇದೆ.

ದೇವೇಗೌಡರು ಇನ್ನು ಮುಂದಾದರೂ ಕುಟುಂಬ ರಾಜಕೀಯಕ್ಕೆ ವಿದಾಯ ಹಾಡಿ, ನಿಜವಾದ ಪ್ರಜಾಪ್ರಭುತ್ವ ಸ್ಥಾಪನೆಗೆ ತೊಡಗುವುದು ಅವರ ರಾಜಕೀಯ ಇಳಿ ಜೀವನವನ್ನು ಕೊಂಚ ಮುತ್ಸದ್ಧಿತನಕ್ಕೆ ತಂದು ನಿಲ್ಲಿಸಬಹುದು. ಹಾಗೆಂದೇ ನಾನು ವಿನಂತಿಸಿಕೊಳ್ಳುತ್ತೇನೆ.

ಈ ಸಾರಿ ಲೋಕಸಭೆ ಚುನಾವಣೆಯ ಫಲಿತಾಂಶ ನೋಡಿ ಕರ್ನಾಟಕದ ಜನ (ಇದ್ದಕ್ಕಿದ್ದ ಹಾಗೆ) ಮತಾಂಧರಾಗಿ ಬಿಟ್ಟಿದ್ದಾರೆ ಎಂಬ ತೀರ್ಮಾನಕ್ಕೆ ಬರಬೇಡಿ. ಕನ್ನಡ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ಅನೇಕ ಶ್ರೇಷ್ಠ ಕವಿಗಳು, ಬರಹಗಾರರು, ವಿಚಾರವಂತರು, ಕಲಾವಿದರು, ಕರ್ನಾಟಕದಲ್ಲಿದ್ದಾರೆ. ಇವರ್ಯಾರು partian ಗಳಲ್ಲ. ಇಂದಿರಾಗಾಂಧಿ ತನ್ನ ಪ್ರಧಾನಿ ಸ್ಥಾನ ಅಭದ್ರವೆಂದೆನಿಸಿದಾಗ ತನ್ನ ಮಕ್ಕಳನ್ನೇ ಅಧಿಕಾರಕ್ಕೆ ತರುವ ವಿಚಾರ ಮಾಡಿದರು. ಅಲ್ಲಿಂದ ಆರಂಭವಾಯಿತು ಕುಟುಂಬ ರಾಜಕಾರಣ. ದೇವೇಗೌಡರು ತನ್ನ ಮಗನನ್ನು ರಾಜಕೀಯಕ್ಕೆ ತಂದಿದ್ದು ಅವರನ್ನು ಗದ್ದುಗೆಗೆ ಕೂಡಿಸುವ ದೃಷ್ಟಿಯಿಂದ. ಭಾಜಪ ಜೊತೆ ಮೈತ್ರಿ ಮಾಡಿಕೊಂಡಿದ್ದು ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವ ಏಕೈಕ ಉದ್ದೇಶದಿಂದ. ಆಮೇಲೆ ತಮ್ಮ ಕುಟುಂಬದ ರೇವಣ್ಣ, ಅನಿತಾ, ಭವಾನಿ, ಪ್ರಜ್ವಲ್, ನಿಖಿಲ್ ಕುಮಾರಸ್ವಾಮಿ ಹೀಗೆ ಎಲ್ಲರನ್ನೂ ಒಬ್ಬೊಬ್ಬರನ್ನಾಗಿ ರಾಜಕೀಯಕ್ಕೆ ಎಳೆದರು. ರಾಜಕೀಯ ಸಮ್ಮೇಳನ ನಡೆಸಿ, ಅಲ್ಲಿ ‘ನನ್ನನ್ನೂ ಜನ ಕುಟುಂಬ ರಾಜಕೀಯ ಮಾಡುವವನು ಎಂದು ಜರಿಯುತ್ತಾರೆ’ ಎಂದು ಹೇಳಿ ‘ಗಳಗಳ’ ಅತ್ತುಬಿಟ್ಟರು. ಪತ್ರಿಕಾಗೋಷ್ಠಿಯ ಮುಂದೆಯೂ ದೃಶ್ಯ ಮಾಧ್ಯಮಗಳ ಮುಂದೆಯೂ ಅಳುತ್ತಾ ತಮ್ಮ ಅಳಲನ್ನು ತೋಡಿಕೊಂಡರು. ಮುಂದೆ ಪಾರ್ಲಿಮೆಂಟ್ ಚುನಾವಣೆ ಹತ್ತಿರ ಬರುತ್ತಿದ್ದಂತೆ, ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾ ದಳದ ಮಧ್ಯೆ ಘರ್ಷಣೆ ಆರಂಭವಾಯಿತು. ಇದು ಸಾಲದೆಂಬಂತೆ, ಕಾಂಗ್ರೆಸ್ಸಿನ ಅತೃಪ್ತ ಶಾಸಕರು ಸರ್ಕಾರದ ಇರುವಿಗೆ ಭಂಗ ಬರುವಂತೆ ರೆಸಾರ್ಟ್ ರಾಜಕೀಯಕ್ಕೆ ಮುಂದಾದರು. ಇದೆಲ್ಲ ಕಾರಣದಿಂದ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾ ದಳ ಅಭ್ಯರ್ಥಿಗಳೆಲ್ಲರೂ ಚುನಾವಣೆಯಲ್ಲಿ ಸೋತರು.

ಈ ಯಾದವಿ ಕಲಹ ಕರ್ನಾಟಕದ ಘಟಾನುಘಟಿ ನಾಯಕರೆಲ್ಲರನ್ನು ಆಹುತಿ ತೆಗೆದುಕೊಂಡಿತು.

ತತ್ವ ರಹಿತ ರಾಜಕೀಯ ಮಾಡುವುದು ಸಪ್ತ ಸಾಮಾಜಿಕ ಪಾತಕಗಳಲ್ಲಿ ಒಂದು ಎಂದು ಗಾಂಧೀಜಿ ಹೇಳಿದ್ದಾರೆ. ಆದರೆ, ಈಗ ಭಾರತದಲ್ಲಿ ಆಚರಣೆಯಲ್ಲಿರುವುದು ಅದೇ ತತ್ವರಹಿತ, ಸ್ವಾರ್ಥಹಿತದ ರಾಜಕೀಯ ಎನ್ನುವ ದುರಂತವನ್ನು ನಾವೆಲ್ಲರೂ
ಒಪ್ಪಿಕೊಳ್ಳಲೇಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...