Homeಸಿನಿಮಾಸಿನಿ ಸುದ್ದಿಜಯನಗರದ ಅಖಾಡಕ್ಕೆ ಲೋಟಸ್ ತಾರಕ್ಕ?

ಜಯನಗರದ ಅಖಾಡಕ್ಕೆ ಲೋಟಸ್ ತಾರಕ್ಕ?

- Advertisement -
- Advertisement -

ಗಿರೀಶ್ ತಾಳಿಕಟ್ಟೆ |

ಬಿ.ಎನ್.ವಿಜಯ ಕುಮಾರ್

ಕರ್ನಾಟಕದ ಮಹಾಸಮರ ಈಗಷ್ಟೇ ಮುಗಿದು ಪೊಲಿಟಿಕಲ್ ನಾಟಕಗಳು ಒಂದೊಂದಾಗಿ ಪರದೆ ಎತ್ತಿಕೊಳ್ಳುತ್ತಿವೆ. ಜನರೆಲ್ಲ ಒಂದು ಕಣ್ಣು ಕುಮಾರಣ್ಣನತ್ತ, ಮತ್ತೊಂದು ಕಣ್ಣನ್ನು ಯಡ್ಯೂರಪ್ಪನತ್ತ ಹಿಗ್ಗಲಿಸಿ ಕೂತಿರುವ ಹೊತ್ತಲ್ಲೇ ಇತ್ತ ಜಯನಗರದಿಂದ ತಾಜಾತಾಜಾ ತಾರಕ್ಕನ ಸುದ್ದಿಯೊಂದು ಹೊರಬಿದ್ದಿದೆ. ಎಲೆಕ್ಷನ್ ಇನ್ನೇನು ಕೆಲ ದಿನ ಇದೆ ಅನ್ನೋವಾಗ ಜಯನಗರ ಕ್ಷೇತ್ರದ ಬಿಜೆಪಿ ಕ್ಯಾಂಡಿಡೇಟಾಗಿದ್ದ ವಿಜಯಕುಮಾರ್ ಎದೆ ಹಿಡಿದುಕೊಂಡು ನೆಲಕ್ಕೆ ಬಿದ್ದವರು ಮತ್ತೆ ಮೇಲಕ್ಕೆ ಏಳಲೇ ಇಲ್ಲ. ಬಿಜೆಪಿಯೊಳಗಿರುವ ಕೆಲವೇ ಕೆಲವು ಮಂದಿ ಸೀದಾಸಾದಾ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ವಿಜಯ್‍ಕುಮಾರ್‍ರ ಹಠಾತ್ ಅಗಲಿಕೆಯಿಂದಾಗಿ ಜಯನಗರದ ಎಲೆಕ್ಷನ್ನೇ ಮುಂದಕ್ಕೋಯ್ತು. ಮುಂದೆ ನಡೆಯಲಿರುವ ಈ ಕ್ಷೇತ್ರದ ಚುನಾವಣೆಗೆ ವಿಜಯ್‍ಕುಮಾರ್ ಜಾಗದಲ್ಲಿ ನಟಿ ತಾರಾ ಅವರನ್ನು ಕಣಕ್ಕಿಳಿಸಲು ಬಿಜೆಪಿ ಪ್ಲ್ಯಾನ್ ಮಾಡುತ್ತಿದೆ ಅನ್ನೋ ವರ್ತಮಾನ ಬರುತ್ತಿದೆ. ಸುಮಾರು ವರ್ಷದಿಂದ ಜಯನಗರ ವ್ಯಾಪ್ತಿಯಲ್ಲೇ ನೆಲೆಸಿರುವ ತಾರಮ್ಮನಿಗೆ ವಿಜಯ್‍ಕುಮಾರ್ ಪರವಾಗಿ ಇಲ್ಲಿ ಕ್ಯಾನ್ವಾಸ್ ಮಾಡಿದ `ಪೊಲಿಟಿಕಲ್’ ಅನುಭವವೂ ಇದೆ. ಕಾಂಗ್ರೆಸ್‍ನಿಂದ ಮಾಜಿ ಮಂತ್ರಿ ಕಂ ಪಕ್ಕದ ಬಿಟಿಎಂ ಶಾಸಕ ರಾಮಲಿಂಗಾರೆಡ್ಡಿ ಮಗಳು ಸೌಮ್ಯರೆಡ್ಡಿ ಅಭ್ಯರ್ಥಿಯಾಗಿ ಫಿಕ್ಸ್ ಆಗಿರೋದ್ರಿಂದ ಮಹಿಳೆ ಎದುರು ಮಹಿಳೆಯನ್ನೇ ಕಾದಾಟಕ್ಕಿಳಿಸೋದು ಬಿಜೆಪಿಯ ಲೆಕ್ಕಾಚಾರ.

ತೇಜಸ್ವಿನಿ ಅನಂತ್ ಕುಮಾರ್

ಈ ಸುದ್ದಿ ಕೇಳಿ ತಾರಕ್ಕ ಹಿರಿಹಿರಿ ಹಿಗ್ಗಬೇಕೆನ್ನುವಷ್ಟರಲ್ಲಿ ಅದೇ `ಲೋಟಸ್ ಮಹಲ್’ನಿಂದ ಹೊರಬಿದ್ದ ಮತ್ತೊಂದು ಸುದ್ದಿ ತಾರಕ್ಕನಿಗೆ ಕಸಿವಿಸಿ ಮಾಡುತ್ತಿದೆಯಂತೆ. ಏನೆಂದ್ರೆ, ಕೇಂದ್ರ ಗೊಬ್ಬರದ ಮಂತ್ರಿ ಅನಂತ್ ಕುಮಾರ್ ಮಡದಿ ತೇಜಸ್ವಿನಿಯವರನ್ನು ಅಭ್ಯರ್ಥಿಯಾಗಿಸಿದರೆ ಹೇಗೆ ಅನ್ನೊ ಸಾಧ್ಯತೆಯನ್ನೂ ಬಿಜೆಪಿ ಅಳೆದು ತೂಗುತ್ತಿದೆಯಂತೆ. ಬ್ರಾಹ್ಮಣ ಮತಗಳು ಸ್ಟ್ರಾಂಗಾಗಿರುವ ಇಲ್ಲಿ ತೇಜಸ್ವಿನಿ ಮೇಡಮ್ಮು ಅದಮ್ಯ ಚೇತನ ಎಂಬ ಎನ್‍ಜಿಒ ಕಟ್ಟಿ ಓಡಾಡಿಕೊಂಡಿರುವುದರಿಂದ ಒಂದಷ್ಟು ಜನಪರಿಚಯವೂ ಅವರಿಗಿದೆ. ಸಾಲದ್ದಕ್ಕೆ ಅವರ ಪತಿಯೇ ಈ ಭಾಗದ ಸಂಸದ. ಜಾತಿ ಕೆಮಿಸ್ಟ್ರಿ ಪ್ಲಸ್ ಫ್ಯಾಮಿಲಿ ಕೆಮಿಸ್ಟ್ರಿ ಎರಡೂ ಮ್ಯಾಚ್ ಆಗೋದ್ರಿಂದ ಅವರನ್ನೇ ಕಣಕ್ಕಿಳಿಸಬೇಕೆಂಬ ಬಿಜೆಪಿಗರ ಒಲವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯಂತೆ. ಹಾಗೇನಾದರು ಆದಲ್ಲಿ ತಾರಕ್ಕನ ಖುಷಿ ಠುಸ್ ಆಗಬಹುದು. ಫ್ಯಾಮಿಲಿ ಪೊಲಿಟಿಕ್ಸ್ ನೆಪವಿಟ್ಟುಕೊಂಡು ಮೈಸೂರಿನಲ್ಲಿ ಯಡ್ಯೂರಪ್ಪನ ಮಗ ವಿಜಯೇಂದ್ರನಿಗೆ ಟಿಕೇಟ್ ತಪ್ಪಿಸಿದ್ದ ಸೇಡು ಏನಾದ್ರು ಮುನ್ನೆಲೆಗೆ ಬಂದು, ಒಂದು ಕುಟುಂಬದ ಇಬ್ಬರಿಗೆ ಟಿಕೆಟ್ ಯಾಕೆ? ಅನ್ನೊ ಕಾಲೆಳೆದಾಟವೇನಾದ್ರು ಶುರುವಾದ್ರೆ ತಾರಕ್ಕನೇ ಅಭ್ಯರ್ಥಿಯಾದ್ರು ಅಚ್ಚರಿಯಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...