Homeಅಂಕಣಗಳುದಲಿತರ ಮೇಲಿನ ದೌರ್ಜನ್ಯ ನ್ಯಾಯಾಂಗಕ್ಕೆ ಕಾಣುತ್ತಿಲ್ಲವೇ?

ದಲಿತರ ಮೇಲಿನ ದೌರ್ಜನ್ಯ ನ್ಯಾಯಾಂಗಕ್ಕೆ ಕಾಣುತ್ತಿಲ್ಲವೇ?

- Advertisement -
- Advertisement -

ಕಳೆದ ಮಾರ್ಚ್ 20ರಂದು ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಾದ ನ್ಯಾ.ಆದರ್ಶ್ ಗೋಯಲ್ ಮತ್ತು ಯು.ಯು.ಲಲಿತ್ ಅದರನ್ನೊಳಗೊಂಡ ನ್ಯಾಯಪೀಠ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳ ತಡೆ) ಕಾಯ್ದೆ-1989ಕ್ಕೆ ಸಂಬಂಧಿಸಿದಂತೆ ಒಂದು ಪವಿತ್ರವಾದ ತೀರ್ಪನ್ನು ನೀಡಿತು. “ಸುಭಾಶ್ ಕಾಶಿನಾಥ್ ವಿರುದ್ಧ ಮಹಾರಾಷ್ಟ್ರ ಸರ್ಕಾರ ಹೆಸರಿನ ಪ್ರಕರಣವನ್ನು ವಿಚಾರಣೆ ನಡೆಸುತ್ತಾ ದೇಶದಲ್ಲಿ ಸ.ಜಾ ಮತ್ತು ಪ.ತಂ(ದೌರ್ಜನ್ಯಗಳ…) ಕಾಯ್ದೆಯನ್ನು ಬಳಸಿಕೊಂಡು ಸುಳ್ಳು ಪ್ರಕರಣಗಳನ್ನು ದಾಖಲಿಸುವುದರ ಮೂಲಕ ದಲಿತನು ಈ ಕಾಯ್ದೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಂದೂ, ಇದರಿಂದಾಗಿ ಮೇಲ್ಜಾತಿಗಳು ಉದ್ದೇಶಪೂರ್ವಕವಾಗಿ ತೊಂದರೆ ಅನುಭವಿಸುವಂತಾಗಿದೆಯೆಂದು ಅಭಿಪ್ರಾಯ ಪಟ್ಟ ನ್ಯಾಯಾಲಯ ಈ ಕಾಯ್ದೆಯನ್ನು ಪುನರ್ ಸಂಯೋಜಿಸಿ ಕೆಲವು ತಿದ್ದುಪಡಿಗಳನ್ನು ಮಾಡುವುದರ ಮೂಲಕ ಕಾಯ್ದೆಯು ಅನಗತ್ಯವಾಗಿ ದುರುಪಯೋಗ ಆಗುವುದನ್ನು ಮತ್ತು ಮೇಲ್ಜಾತಿಯವರು ತೊಂದರೆ ಅನುಭವಿಸದಂತೆ ಹೇಳಿತ್ತು. ಸುಪ್ರೀಂಕೋರ್ಟ್ ಪ್ರಕಾರ ಈ ಕಾಯ್ದೆಯ ಅಡಿಯಲ್ಲಿ ಆಗಿರುವಂತೆ ಜಾಮೀನುರಹಿತ ಬಂಧಿಸುವುದನ್ನು ಬದಲಾಯಿಸಿ ಈ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸುವ ಮುಂಚೆ ವಿಸ್ತøತ ವಿಚಾರಣೆ ನಡೆಸಬೇಕೆಂದು ಅವಶ್ಯಕತೆ ಇದ್ದರೆ ನಿರೀಕ್ಷಣಾ ಜಾಮೀನು ಪಡೆಯಲು ಆಪಾದಿತನಿಗೆ ಅವಕಾಶ ನೀಡಬೇಕೆಂದು ಸೂಚನೆ ನೀಡಿತ್ತು. ಈ ತೀರ್ಪು ಪ್ರಕಟವಾದ ಬೆನ್ನಿಗೆ ಈ ತೀರ್ಪನ್ನು ವಿರೋಧಿಸಿ ದೇಶಾದ್ಯಂತ ತೀವ್ರ ಪ್ರತಿಭಟನೆಗಳು ನಡೆದವು. ತೀರ್ಪಿನ ಪರವಾಗಿ ಮತ್ತು ತೀರ್ಪಿನ ವಿರುದ್ಧವಾಗಿ ಚರ್ಚೆಗಳು ನಡೆದವು ಮತ್ತು ಈಗಲೂ ನಡೆಯುತ್ತಲೇ ಇವೆ. ದೇಶದೆಲ್ಲೆಡೆ ಈ ತೀರ್ಪಿನ ವಿರುದ್ಧ ಕಂಡುಬಂದ ದಲಿತರ ಪ್ರತಿರೋಧವನ್ನು ಗಮನಿಸಿ ಕೇಂದ್ರಸರ್ಕಾರ ಸುಪ್ರೀಂಕೋರ್ಟ್‍ಗೆ ಈ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡಿದ ನಾಟಕವೂ ನಡೆಯಿತು.
ತೀರ್ಪಿನ ಪರ-ವಿರೋಧ ಚರ್ಚೆಗಳ ಆಚೆಗೆ ನಮ್ಮ ದೇಶಕ್ಕೆ ಇಂತಹದೊಂದು ಕಾಯ್ದೆಯ ಅಗತ್ಯವಾದರೂ ಏಕಿದೆ ಎನ್ನುವುದನ್ನು ಪರಿಶೀಲಿಸಿದರೆ ಈ ತೀರ್ಪಿನ ಹಾದಿರುವ ಮತ್ತು ತೀರ್ಪಿಗೆ ಅನುಗುಣವಾಗಿ ಈ ಕಾಯ್ದೆಗೆ ತಿದ್ದುಪಡಿಗಳಾದರೆ ಎಂತಹ ಪರಿಣಾಮಗಳಾಗಬಹುದು ಎನ್ನುವುದು ಅರ್ಥವಾಗುತ್ತದೆ. ಜಾತಿಯ ಕಾರಣಕ್ಕೆ ಮೇಲು-ಕೀಳು ಎನ್ನುವ ಅಪಮಾನತೆಯನ್ನು ಸೃಷ್ಟಿಸಿ ತಳ ಸಮುದಾಯಗಳ ಮೇಲೆ ನಿರಂತರವಾಗಿ ಶೋಷಣೆ, ದೌರ್ಜನ್ಯಗಳನ್ನು ಎಸಗುತ್ತಿರುವ ದೇಶ ನಮ್ಮದು. ಅಸ್ಪøಶ್ಯತೆ, ಅಸಮಾನತೆಗಳ ಭೀಕರತೆಯನ್ನು ಮನಗಂಡೆ ನಮ್ಮ ಹಿರಿಯರು ಸ್ವಾತಂತ್ರ್ಯದ ನಂತರ ಜಾರಿಯಾದ ಸಂವಿಧಾನದಲ್ಲಿ ಅಸ್ಪøಶ್ಯತೆ ಆಚರಣೆ ಮತ್ತು ಜಾತಿಯ ಹೆಸರಿನಲ್ಲಿ ಅವಮಾನ, ಶೋಷಣೆ ಮಾಡುವುದನ್ನು ಕಾನೂನುಬಾಹಿರ ಎಂದು ಪರಿಗಣಿಸಿ ಅಸ್ಪøಶ್ಯತೆ ಆಚರಣೆಯನ್ನು ಅಪರಾಧವೆಂದು ಘೋಷಿಸಿ, ಸಂವಿಧಾನದಲ್ಲಿ ಅಳವಡಿಸಿಕೊಂಡರು.
ಆದರೆ ಸಂವಿಧಾನದಲ್ಲಿ ಅಕ್ಷರರೂಪದಲ್ಲೇ ಉಳಿದ ಕಾನೂನುಗಳಿಗೆ ಸಂಪೂರ್ಣ ವಿರುದ್ಧವಾಗಿ ದೇಶ ನಡೆದುಕೊಳ್ಳ ತೊಡಗಿದಾಗ, ಸ್ವಾತಂತ್ರ್ಯ ಬಂದು ನಾಲ್ಕು ದಶಕಗಳ ನಂತರ 1989ರಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪಂಗಡಗಳ (ದೌರ್ಜನ್ಯದ ತಡೆ)ಕಾಯ್ದೆ ಜಾರಿಗೆ ತರಲಾಯಿತು. ಆ ಮೂಲಕ ತಮ್ಮ ಮೇಲಿನ ದೌರ್ಜನ್ಯಗಳಿಂದ ರಕ್ಷಣೆ ಪಡೆಯುವ ಮತ್ತು ನ್ಯಾಯಾಲಯದ ಮೂಲಕ ತಮಗಾದ ದೌರ್ಜನ್ಯಕ್ಕೆ ನ್ಯಾಯ ಪಡೆಯುವ ಅಧಿಕಾರವನ್ನು ಈ ಕಾಯ್ದೆ ದಲಿತರಿಗೆ ಒದಗಿಸಿತ್ತು. ಈಗ ದುರುಪಯೋಗದ ಹೆಸರಿನಲ್ಲಿ ಈ ಕಾಯ್ದೆಯನ್ನು ಸಂಪೂರ್ಣವಾಗಿ ದುರ್ಬಲಗೊಳಿಸಲು ಪ್ರಯತ್ನಿಸುವ ಸುಪ್ರೀಂಕೋರ್ಟಿನ ನಡೆ ದಲಿತರಿಗೆ ಇದ್ದ ಏಕೈಕ ರಕ್ಷಣೆಯ ಅಸ್ತ್ರವನ್ನು ಕಿತ್ತುಕೊಳ್ಳುತ್ತಿದೆ.
ಸರಿ, ಈ ಕಾಯ್ದೆ ದುರುಪಯೋಗವಾಗುತ್ತಿದ್ದು, ಮೇಲ್ಜಾತಿಗಳಿಗೆ ಅನ್ಯಾಯವಾಗುತ್ತಿದೆ ಎನ್ನುವ ನ್ಯಾಯಾಲಯ ಈ ಕಾಯ್ದೆ ಜಾರಿಗೆ ಬಂದ ನಂತರದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ನಿಜವಾಗಿಯೂ ಕಡಿಮೆಯಾಗಿವೆಯೇ ಎಂಬುದನ್ನು ಗಮನಿಸಿದರೆ ವಾಸ್ತವದ ಚಿತ್ರಣ ಬೇರೆಯೇ ಇರುವುದು ಗೊತ್ತಾಗುತ್ತದೆ. ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾದ ನ್ಯಾಷನಲ್ ಕ್ರೈಂ ರೀಸರ್ಚ್ ಬ್ಯೂರೋದಲ್ಲಿರುವ ಅಂಕಿ ಅಂಶಗಳನ್ನು ಒಂದು ಸಾರಿ ಇಣುಕಿ ನೋಡಿದರೆ ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರಾಟ ದರ್ಶನವಾಗುತ್ತದೆ. ಕೇವಲ ದಾಖಲಾಗುವ ಪ್ರಕರಣಗಳ ಸಂಖ್ಯೆಯೇ ಬೆಟ್ಟ ಬೀಳಿಸುವ ಹಾಗಿದ್ದರೆ, ದಾಖಲಾಗದೇ ಪೊಲೀಸ್ ಠಾಣೆಯಲ್ಲಿಯೇ ಮುಚ್ಚಿಹೋಗುವ ಪ್ರಕರಣಗಳ ಸಂಖ್ಯೆ ಇನ್ನೆಷ್ಟಿರಬಹುದು ಎಂಬುದು ಗೊತ್ತಾಗುತ್ತದೆ. ತಮ್ಮ ಮೇಲಿನ ದೌರ್ಜನ್ಯಗಳನ್ನು ಪ್ರಶ್ನಿಸಿ ದೂರು ದಾಖಲಿಸಲು ಪೊಲೀಸ್ ಠಾಣೆಯ ಬಾಗಿಲು ತಟ್ಟಿದರೆ ದಲಿತರಿಗೆ ಎದುರಾಗುವ ಸಂಕಷ್ಟಗಳನ್ನು ನಿವಾರಿಸಲೆಂದೇ ಪ್ರತ್ಯೇಕ ಕಾಯ್ದೆಯನ್ನು ರೂಪಿಸಬೇಕಾದಷ್ಟು ಭೀಕರ ಸ್ಥಿತಿ ನಮ್ಮಲ್ಲಿದೆ. ದೌರ್ಜನ್ಯ ಪ್ರಕರಣ ದಾಖಲಿಸಲು ಬರುವ ದಲಿತರ ಮೇಲೆಯೇ ಕಳ್ಳತನ, ವಂಚನೆ, ಕೊಲೆ, ದರೋಡೆ ಇನ್ನೂ ಮುಂದುವರೆದು ನಕ್ಸಲರು, ಡಕಾಯಿತರು ಎಂದು ಆರೋಪಿಸಿ ಸುಳ್ಳು ಮೊಕದ್ದಮೆ ದಾಖಲಿಸಿ ತಮ್ಮ ಮೇಲಿನ ದೌರ್ಜನ್ಯಗಳ ಬಗ್ಗೆ ಮಾತನಾಡದೇ ಇರುವಂತೆ ಮಾಡಬಲ್ಲ ವ್ಯವಸ್ಥಿತ ಕ್ರೌರ್ಯ ನಿರಂತರವಾಗಿ ಕೆಲಸ ಮಾಡುತ್ತಿವೆ. … ಯಲ್ಲಿನ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ. ಆದರೆ ಅದೇ ಕಾಲದಲ್ಲಿ ಈ ರೀತಿ ಏರಿಕೆಯಾದ ದೌರ್ಜನ್ಯ ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗುತ್ತಿರುವ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ. ಮೇಲೆ ಹೇಳಿದ ಅಂಶಗಳು ಈ ರೀತಿ ಇಳಿಕೆಯಾಗಲು ಕಾರಣ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅಧ್ಯಯನಗಳ ಪ್ರಕಾರ ಇದಕ್ಕೆ ಉದಾಹರಣೆಯಾಗಿ 2016ರಲ್ಲಿ ದೇಶದ ನ್ಯಾಯಾಲಯಗಳಲ್ಲಿ ದಾಖಲಾದ ಪರಿಶಿಷ್ಟ ಜಾತಿಗಳ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಶೇ89.7 ರಷ್ಟು ಪ್ರಕರಣಗಳನ್ನು ಇನ್ನೂ ವಿಚಾರಣೆಗೆ ತೆಗೆದುಕೊಂಡಿಲ್ಲ. ಇನ್ನು ಪರಿಶಿಷ್ಟ ಪಂಗಡಗಳಲ್ಲಿ ಶೇ 87.2ರಷ್ಟು ಪ್ರಕರಣಗಳು ವಿಚಾರಣೆ ಆಗದೇ ಹಾಗೆಯೇ ಉಳಿದಿದೆ. ಶೇ80ಕ್ಕಿಂತ ಹೆಚ್ಚು ಪ್ರಕರಣಗಳನ್ನು ವಿಚಾರಣೆಯೇ ನಡೆಸುತ್ತಿಲ್ಲ ಎಂದಾಗ ದಲಿತರಿಗೆ ನ್ಯಾಯ ಸಿಗುತ್ತದೆ ಎಂದಾಗಲೀ ಮೇಲ್ಜಾತಿಯವರಿಗೆ ಶಿಕ್ಷೆ ಆಗುತ್ತಿದೆ ಎಂದಾಗಲಿ ಹೇಗೆ ಅರ್ಥಮಾಡಿಕೊಳ್ಳುವುದು. ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡದೇ ಕೊಳೆಯುತ್ತಿರುವ ಪ್ರಕರಣಗಳ ಕಥೆ ಹೀಗಿದ್ದರೆ ಪ್ರತಿ ಗಂಟೆಗೆ ಹತ್ತರಂತೆ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಜರುಗುತ್ತಿವೆ.
ಪ್ರತಿಯೊಂದಕ್ಕೂ ಸಾಕ್ಷಿ, ಪುರಾವೆಗಳನ್ನು ಕೇಳುವ ನ್ಯಾಯಾಲಯಗಳಿಗೆ ಖೈರ್ಲಾಂಜಿ ಕಂಬಾಲದಲ್ಲಿಲರುವಂತಹ ಭೀಕರ ಕ್ರೌರ್ಯದ ಉದಾಹರಣೆಗಳಲ್ಲಿ ಜಾತಿಯ ಕಾರಣಕ್ಕೆ ದೌರ್ಜನ್ಯ ಎಸಗಿರುವಂತೆ ಕಾಣುವ ಸಾಕ್ಷ್ಯಾಧಾರಗಳು ಸಿಕ್ಕುವುದಿಲ್ಲ ಎಂದರೆ ಈ ದೇಶ ನ್ಯಾಯಾಂಗ ದಲಿತರಿಗೆ ಎಷ್ಟರಮಟ್ಟಿಗೆ ನ್ಯಾಯ ನೀಡಲು ನಿಂತಿರಬಹುದು ಎನ್ನುವುದು ಅರ್ಥವಾಗುತ್ತಿದೆ. ಖೈರ್ಲಾಂಜಿ,ಕಂಬಾಪಲ್ಲಿಯಲ್ಲಿನ ಘಟನೆಗಳಲ್ಲಿ ಶೋಷಣೆಗೊಳಗಾದವರು ಮತ್ತು ಶೋಷಣೆಯ ಸಾಕ್ಷಿನುಡಿಯುತ್ತಿದ್ದವರು ಪ್ರತಿಕೂಲ ಹೇಳಿಕೆ ನೀಡುವ ಮಟ್ಟಕ್ಕೆ ಹೋಗುತ್ತಾರೆ ಎಂದರೆ ದಲಿತರ ಮೇಲೆ ದËರ್ಜನ್ಯಗಳನ್ನು ತಡೆಗಟ್ಟಲು ಇನ್ನು ಹೆಚ್ಚು ಕಠಿಣವಾದ ಕಾಯ್ದೆಗಳನ್ನು ರೂಪಿಸುವ ಅವಶ್ಯಕತೆ ಇದೆಯೇ ಹೊರತು ಇರುವ ಕಾಯ್ದೆಗಳನ್ನು ದುರ್ಬಲಗೊಳಿಸುವುದಲ್ಲ. ಇಷ್ಟೆಲ್ಲ ಪ್ರತಿಕೂಲ ಪರಿಸ್ಥಿತಿಗಳಿದ್ದರೂ ದಲಿತರಿಗೆ ತಮ್ಮ ಮೇಲಿನ ದೌರ್ಜನ್ಯಗಳ ವಿರುದ್ಧ ಹೋರಾಡುವುದಕ್ಕೆ ಇರುವ ಏಕೈಕ ಅಸ್ತ್ರವು ದುರುಪಯೋಗದ ಹೆಸರಲ್ಲಿ ಕಿತ್ತುಕೊಳ್ಳಲು ಬಯಸುವ ಸುಪ್ರೀಂಕೋರ್ಟ್ ದಲಿತರಿಗೆ ಶಿಕ್ಷಣ ನೀಡಲು, ಭೂಮಿ ನೀಡಲು, ವಸತಿ ನೀಡಲು, ಉದ್ಯೋಗ ನೀಡಲು ಇರುವ ಎಷ್ಟೋ ಕಾನೂನುಗಳು ಸಮರ್ಪಕವಾಗಿ ಜಾರಿಯಾಗದೇ ದಲಿತರಿಗೆ ಮೀಸಲಿಟ್ಟ ಹಣ ಉಪಯೋಗವಾಗದೇ ಇರುವುದು ಕಾನೂನಿನ ದುರುಪಯೋಗ ಎನ್ನಿಸುವುದಿಲ್ಲವೇ…? ಬಹುತೇಕ ಮೇಲ್ಜಾತಿಗಳ ಅಡಿತದಲ್ಲೇ ಇರುವ ಸರ್ಕಾರ ಮತ್ತು ಆಡಳಿತಶಾಹಿಗಳು ದಲಿತರ ಅಭಿವೃಧ್ಧಿ ಇರುವ ಕಾನೂನುಗಳನ್ನು ಉದ್ದೇಶಪೂರ್ವಕವಾಗಿ ನಿಷ್ಕ್ರಿಯಗೊಳಿಸುತ್ತಿರುವುದು ಸಂವಿಧಾನದ ದುರುಪಯೋಗ ಅಲ್ಲವೇ..?
ದಲಿತನೊಬ್ಬ ಒಳ್ಳೆಯ ಬಟ್ಟೆ ಹಾಕಿದ ಕಾರಣಕ್ಕೆ ಮದುವೆ ಸಂದರ್ಭದಲ್ಲಿ ಕುದುರೆ ಸವಾರಿ ಮಾಡಿದ್ದಕ್ಕೆ, ದಪ್ಪನಾಗಿ ಮೀಸೆ ಬಿಟ್ಟಿದ್ದಕ್ಕೆ, ಹಿಡಿದು ಚಚ್ಚಿ ಸಾಯಿಸಿದ ಘಟನೆಗಳು ದಿನಬೆಳಗಾದರೆ ಬೆಳಕಿಗೆ ಬರುತ್ತಿರುವುದು ನಮ್ಮ ನ್ಯಾಯಾಲಯಗಳ ಕಣ್ಣಿಗೆ ಕಾಣುವುದಿಲ್ಲವೇಕೆ..? ಇವೆಲ್ಲವನ್ನು ಮೀರಿ ದಲಿತನನ್ನು ಮದುವೆಯಾದ ಕಾರಣಕ್ಕೆ ತಮ್ಮ ಮಕ್ಕಳನ್ನೇ ಮರ್ಯಾದೆಯ ಹೆಸರಿನಲ್ಲಿ ಭೀಕರವಾಗಿ ಕೊಲೆ ಮಾಡುತ್ತಿರುವ ದಲಿತ ಹುಡುಗರನ್ನು ಕೊಂದು ಅವನ ಕುಟುಂಬವನ್ನು ಬಹಿಷ್ಕಾರ ಹಾಕುತ್ತಿರುವ ಘಟನೆಗಳು ದಿನನಿತ್ಯದ ಸುದ್ದಿಗಳಾಗಿ ಹೋಗುತ್ತಿರುವಾಗ ದಲಿತರ ಮೇಲಿನ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಿಸುತ್ತಿರುವುದರ ಹಿಂದಿನ ಮರ್ಮವೇನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಅದರ ಪಾಂಡಿತ್ಯದ ಅವಶ್ಯಕತೆ ಇಲ್ಲ.
ಸುಪ್ರೀಂಕೋರ್ಟ್‍ನ ಪ್ರಸ್ತುತ ತೀರ್ಪನ್ನು ವಿರೋಧಿಸಿ ದೇಶದ ವಿರುಧ್ಧ ಕಡೆಗಳಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ 8 ಜನ ದಲಿತ ಪ್ರತಿಭಟನಾಕಾರರನ್ನು ಗುಂಡಿಟ್ಟು ಸಾಯಿಸುವ ಸರ್ಕಾರಗಳು ಈ ತೀರ್ಪನ್ನು ಜಾರಿಗೆ ತಂದು ಆದಷ್ಟು ಬೇಗ ಕಾಯ್ದೆಯನ್ನು ದುರ್ಬಲಗೊಳಿಸಿ ಎಂದು ಆಗ್ರಹಿಸಿ ನಡೆದ ಸಮಾವೇಶ, ರ್ಯಾಲಿಗಳಿಗೆ ಬೆರಗಿ ತಾವು ಆದಷ್ಟು ಬೇಗ ಈ ಕ್ರಾಂತಿಯನ್ನು ದುರ್ಬಲಗೊಳಿಸುತ್ತೇವೆ ಎಂದು ಹೇಳಿಕೆ ನೀಡುವುದು ಈ ದೇಶದ ಸಂವಿಧಾನಿಕ ವ್ಯವಸ್ಥೆ ಎಷ್ಟು ಮಾತ್ರ ದಲಿತರ ಪರವಿದೆ ಎನ್ನುವುದನ್ನು ಸೂಚಿಸುತ್ತಿದೆ. ಸ್ವಾತಂತ್ರ್ಯ ನಂತರದ ಇಷ್ಟೂ ವರ್ಷಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಹೊರತುಪಡಿಸಿ ಬೇರೆ ಕಾಯ್ದೆಯೂ ದುರುಪಯೋಗವಾಗಿಲ್ಲವೇ..? ಆಗಿದ್ದರೆ ಅವೆಲ್ಲವನ್ನು ಬಿಟ್ಟು ಕ್ಷುಲ್ಲಕ ಕಾರಣ ನೀಡಿ ಸುಪ್ರೀಂಕೋರ್ಟ್ ಈ ಕಾಯ್ದಯಲ್ಲಿ ಸಂಪೂರ್ಣವಾಗಿ ದುರ್ಬಲಗೊಳಿಸುತ್ತಿರುವುದನ್ನು ಹೇಳುತ್ತಿದೆ..? ಇಷ್ಟುದಿನ ದಲಿತರ ಮೇಲಿನ ದೌರ್ಜನ್ಯಗಳಿಗೆ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದ ದಲಿತರಿಗೆ ಇಂದು ನ್ಯಾಯಾಲಯವೇ ದೌರ್ಜನ್ಯ ಎಸಗುತ್ತಿರುವುದರಿಂದ ಸುಪ್ರೀಂಕೋರ್ಟ್‍ನ ಈ ನಡೆಯನ್ನು ದಲಿತರ ಮೇಲೆ ನ್ಯಾಯಾಂಗದ ದೌರ್ಜನ್ಯ ಎಂದು ಕರೆಯಬಹುದಲ್ಲವೇ..? ಸರಿ ಈಗ ನ್ಯಾಯ ಅರಸಿ ಹೋಗುವುದೆಲ್ಲಿಗೆ…?

– ನರಸಿಂಹಮೂರ್ತಿ ವಡ್ಡನಹಳ್ಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...