Homeನಿಜವೋ ಸುಳ್ಳೋನರೇಂದ್ರ ಮೋದಿಯವರ ಮೀಟ್ ದಿ ಪ್ರೆಸ್ಸೂ, ಕಾರ್ಟೂನ್‍ಗಳೂ

ನರೇಂದ್ರ ಮೋದಿಯವರ ಮೀಟ್ ದಿ ಪ್ರೆಸ್ಸೂ, ಕಾರ್ಟೂನ್‍ಗಳೂ

ನರೇಂದ್ರ ಮೋದಿಯವರ ಪತ್ರಿಕಾಗೋಷ್ಠಿಯಲ್ಲದ ಪತ್ರಿಕಾಗೋಷ್ಠಿಯ ಕುರಿತು ಸೃಜನಶೀಲ ಲೋಕದ ಪ್ರತಿಕ್ರಿಯೆ

- Advertisement -
- Advertisement -

|| ನಾನು ಗೌರಿ ಡೆಸ್ಕ್ ||
ಮೋದಿಯವರು ಪ್ರಧಾನಿಯಾದ ನಂತರ ದೇಶದಲ್ಲಿ ಸೃಜನಶೀಲತೆಯೂ ಉಕ್ಕೇರಿ ಹರಿಯುತ್ತಿದೆ. ಈ ಹೊತ್ತಿನಲ್ಲೇ ಇ-ಹೊತ್ತೂ ಹೆಚ್ಚಾಗಿದ್ದೂ ಇದಕ್ಕೆ ಇಂಬುಕೊಟ್ಟಿರಬಹುದು. ತೀರಾ ಇತ್ತೀಚೆಗಿನ ಉದಾಹರಣೆ ಎಂದರೆ, ಮೋದಿಯವರ ಮೋಡ ಮತ್ತು ರಾಡಾರ್ ಹೇಳಿಕೆಯ ಸಂದರ್ಭ. ಆಗ ನೂರಾರು ಬಗೆಯ ಟ್ವೀಟ್‍ಗಳು ಮತ್ತು ಕಾರ್ಟೂನ್‍ಗಳು ಕೆಲವೇ ಗಂಟೆಗಳಲ್ಲಿ ಎಲ್ಲೆಡೆ ಹರಿದಾಡುತ್ತಿದ್ದವು. ಈಗ ಮೋದಿಯವರ ಪತ್ರಿಕಾಗೋಷ್ಠಿಯಲ್ಲದ ಪತ್ರಿಕಾಗೋಷ್ಠಿಯ ಬಗ್ಗೆ ಕಾರ್ಟೂನುಗಳು ಯಥೇಚ್ಚ ಜಿಗಿದಾಡುತ್ತಿವೆ.

5 ವರ್ಷಗಳ ಹಿಂದೆ ಇಂತಹ ಹಲವು ಚಿತ್ರಗಳು, ಮೆಮೆಗಳು, ಜೋಕುಗಳು ರಾಹುಲ್‍ಗಾಂಧಿಯವರನ್ನು ಪಪ್ಪುವಾಗಿಸುವಲ್ಲಿ ಯಶಸ್ವಿಯಾಗಿದ್ದವು. ಈಗ ಮೋದಿಯವರನ್ನು ಪತ್ರಿಕಾಗೋಷ್ಠಿಯನ್ನು ಎದುರಿಸುವ ಧೈರ್ಯವಿಲ್ಲದ ಪ್ರಧಾನಿಯಾಗಿ ಬಿಂಬಿಸುತ್ತಿವೆ. ಸ್ವತಃ ರಾಹುಲ್‍ಗಾಂಧಿ ಮೋದಿಯವರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಅದು ಹೋಗಲಿ ಎಂದರೆ, ಪತ್ರಕರ್ತರನ್ನೂ ರಾಹುಲ್ ಗೋಳು ಹುಯ್ದುಕೊಳ್ಳಲು ಶುರು ಮಾಡಿದ್ದಾರೆ.

ನಿನ್ನೆ ಅಮಿತ್‍ಷಾ ಪತ್ರಿಕಾಗೋಷ್ಠಿಯಲ್ಲಿ ‘ಹಾಜರಿದ್ದು’ ಒಂದೂ ಪ್ರಶ್ನೆ ಎದುರಿಸದ ಪ್ರಧಾನಿಯವರ ನಡವಳಿಕೆಯ ಕುರಿತು ಬಂದಿರುವ ಕೆಲವು ಕಾರ್ಟೂನುಗಳು, ಚಿತ್ರಗಳು ಏನು ಹೇಳುತ್ತವೆ ನೋಡೋಣ.


ರಾಹುಲ್‍ಗಾಂಧಿಯವರ ಟ್ವೀಟ್‍ನ ಸ್ಕ್ರೀನ್‍ಶಾಟ್ ಎಲ್ಲಕ್ಕಿಂತ ಹೆಚ್ಚು ಷೇರ್ ಆಗಿತ್ತು.  ಮೋದಿಯವರನ್ನು ವ್ಯಂಗ್ಯವಾಗಿ ಅಭಿನಂದಿಸಿದ ಆ ಟ್ವೀಟ್, ‘ಮುಂದಿನ ಬಾರಿ ಅಮಿತ್‍ಷಾ ನಿಮಗೆ ಒಂದೆರಡು ಪ್ರಶ್ನೆಗಳಿಗೆ ಉತ್ತರಿಸಲು ಬಿಡಬಹುದು’ ಎಂದಿತ್ತು.

ಅದರ ನಂತರದ್ದು ಸತೀಶ್ ಆಚಾರ್ಯ ಅವರ ಕಾರ್ಟೂನ್. ಇವರೊಬ್ಬರದ್ದು ಮಾತ್ರವಲ್ಲದೇ, ಇನ್ನೂ ಹಲವು ಕಾರ್ಟೂನ್‍ಗಳು ಬಂದವು.  ಅವು ಮೋದಿಯವರ ಇತ್ತೀಚೆಗಿನ ಮೋಡದ ಮರೆಯಲ್ಲಿ ರಾಡಾರ್ ಕೆಲಸ ಮಾಡುವುದಿಲ್ಲವೆಂಬುದನ್ನು ಇದಕ್ಕೆ ಲಿಂಕ್ ಮಾಡಿಕೊಂಡಿದ್ದವು.


ಇದನ್ನೂ ಓದಿ: ಮೋದಿ ಪ್ರೆಸ್‍ಮೀಟ್ – ಹೇಳಿಕೊಟ್ಟ ಮಾತು, ಕಟ್ಟಿಕೊಟ್ಟ ಬುತ್ತಿ

ಮೋದಿಯವರ ಮೌನವನ್ನು ಅಣಕಿಸುವ ಕೆಲವು ಪೋಸ್ಟರ್‍ಗಳು ಬಂದವು.

 

ಸಾಮಾನ್ಯವಾಗಿ ವಾಚಾಳಿಯಾದ ಮೋದಿಯವರು ದೀರ್ಘಕಾಲ ಮೌನವಾಗಿದ್ದದ್ದು ಇಲ್ಲೇ ಎಂದು ಹೇಳುವ ಟ್ವೀಟ್‍ಗಳೂ ಇದ್ದವು.


ಪತ್ರಿಕಾಗೋಷ್ಠಿ ಮುಗಿದ ಕೆಲವೇ ಸಮಯದಲ್ಲಿ, ಮೋದಿಯವರು ದೀರ್ಘಕಾಲ ಸುಮ್ಮನೇ ಕೇಳಿಸಿಕೊಂಡಿದ್ದನ್ನು ವಿಡಿಯೋ ಮಾಡಿ ಹರಿಬಿಡಲಾಯಿತು.

ಇದನ್ನೂ ಓದಿ: ಒಬ್ಬನೇ ಸಂದರ್ಶಕ, ಮೋದಿ-ರಾಹುಲ್ ಇಬ್ಬರನ್ನೂ ಸಂದರ್ಶಿಸಿದ ಪರಿ

ಮೋದಿಯವರು ಆಯ್ದ ಮಾಧ್ಯಮ ಸಂಸ್ಥೆಗಳಿಗೆ ನೀಡಿದ ಸಂದರ್ಶನದಲ್ಲೂ ಪ್ರಶ್ನೆ ಮತ್ತು ಉತ್ತರಗಳನ್ನು ಮೊದಲೇ ಬರೆದಿಟ್ಟುಕೊಳ್ಳುವುದನ್ನು ಆಕಾಶ್ ಬ್ಯಾನರ್ಜಿ ಟ್ರೋಲ್ ಮಾಡಿದ್ದರು.

 

ಇಂತಹ ಹಲವಾರು ಕಾರ್ಟೂನುಗಳು ಹರಿದಾಡಿದವು.

ಪತ್ರಿಕಾಗೋಷ್ಠಿಯನ್ನು ಎದುರಿಸಲು ಧೈರ್ಯವಿಲ್ಲದ ಮೋದಿಯವರನ್ನು ಅಮಿತ್ ಷಾ ಬಲವಂತದಿಂದ ಕರೆದುಕೊಂಡು ಬಂದಂತೆ ಬರೆಯಲಾಗಿದ್ದ ಕಾರ್ಟೂನ್ ಸಹಾ ಸದ್ದು ಮಾಡಿತು.

ಈ ದಿನ ಬೆಳಿಗ್ಗೆ ಬಂದ ಟೆಲಿಗ್ರಾಫ್ ಪತ್ರಿಕೆಯ ಮುಖಪುಟವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿತ್ತು.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...