Homeಪ್ರಪಂಚಬ್ರೆಜಿಲ್‌ನಲ್ಲಿ ಕಾರ್ಮಿಕ ಪಕ್ಷದ ಆಡಳಿತದ ಅವಧಿ

ಬ್ರೆಜಿಲ್‌ನಲ್ಲಿ ಕಾರ್ಮಿಕ ಪಕ್ಷದ ಆಡಳಿತದ ಅವಧಿ

- Advertisement -
- Advertisement -

ಭರತ್ ಹೆಬ್ಬಾಳ್ |

ಎರಡನೇ ಮಹಾಯುದ್ಧದ ನಂತರ ಶುರುವಾದ ಶೀತಲ ಸಮರದ ಸಮಯದಲ್ಲಿ ಬಂಡವಾಳವಾದ ಪ್ರತಿಪಾದಿಸುವ ಅಮೆರಿಕ ಮತ್ತು ಸಮಾಜವಾದ ಸಾರುವ ಸೋವಿಯಟ್ ಒಕ್ಕೂಟಗಳ ನಡುವೆ, ಇಡೀ ಪ್ರಪಂಚವೇ ರಣರಂಗವಾಗಿತ್ತು. ಅದರಲ್ಲೂ ಫಿಡೆಲ್ ಕ್ಯಾಸ್ಟ್ರೋ ನೇತೃತ್ವದಲ್ಲಿ ಕ್ಯೂಬಾದಲ್ಲಾದ ಕ್ರಾಂತಿ ದಕ್ಷಿಣ ಅಮೆರಿಕ ರಾಷ್ಟ್ರಗಳಲ್ಲಿ ಒಂದು ಸಂಚಲನವನ್ನೇ ಉಂಟು ಮಾಡಿತ್ತು.. ಹರಡುತ್ತಿದ್ದ ಸಮಾಜವಾದವನ್ನು ಹತ್ತಿಕ್ಕಲು ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ದಕ್ಷಿಣ ಅಮೆರಿಕಾದ ಒಂದರ ನಂತರ ಒಂದು ರಾಷ್ಟ್ರಗಳಲ್ಲಿ ತನ್ನ ಆರ್ಥಿಕ ಭಯೋತ್ಪಾದನೆ ಮತ್ತು ನೇರ ಮಿಲಿಟರಿ ಕ್ಷಿಪ್ರ ಕ್ರಾಂತಿಗಳ ಮೂಲಕ ಮಿಲಿಟರಿ ಸರ್ವಾಧಿಕಾರವನ್ನು ಸ್ಥಾಪಿಸುತ್ತಿತ್ತು. ಇದಕ್ಕೆ ಅದು `ಆಪರೇಶನ್ ಕೊಂಡೋರ್’ ಎಂದು ಹೆಸರಿಟ್ಟಿತ್ತು. ಆಪರೇಶನ್ ಕೊಂಡೋರ್‌ನ ಮುಖ್ಯ ಉದ್ದೇಶವೇ ಸಮಾಜದಲ್ಲಿ ಎಡಪಂಥೀಯ ಚಿಂತನೆಗಳನ್ನು ಕಿತ್ತೊಗೆಯುವುದು. ಈ ಕಾರ್ಯಾಚರಣೆಗಳು ಮಿಲಿಟರಿ ಆಡಳಿತದ ವಿರುದ್ದ ದನಿಯೆತ್ತುತ್ತಿದ್ದ ಪ್ರಜೆಗಳು, ರಾಜಕೀಯ ಭಿನ್ನಮತೀಯರು, ಯೂನಿಯನ್ ನಾಯಕರು, ವಿದ್ಯಾರ್ಥಿಗಳು, ಸಂಘಟಕರು, ಪತ್ರಕರ್ತರು, ಪಾದ್ರಿಗಳ ಅಪಹರಣ, ಚಿತ್ರಹಿಂಸೆ, ಜೈಲು, ಹತ್ಯೆಗಳಲ್ಲಿ ಮುಗಿಯುತ್ತಿತ್ತು ಮತ್ತು ಅವರೇ ಅಚ್ಚು ಹಾಕಿದ ಹಾಗೆ ಇವರನ್ನೆಲ್ಲಾ ಆಕ್ಟಿವಿಸ್ಟ್, ಲೆಫ್ಟಿಸ್ಟ್ ಮತ್ತು ಟೆರರಿಸ್ಟ್ ಎಂದು ಬಿಂಬಿಸಲಾಗುತ್ತಿತ್ತು. ಎಲ್ಲಾ ದಕ್ಷಿಣ ರಾಷ್ಟ್ರಗಳ ಹಾಗೆ, ಐತಿಹಾಸಿಕವಾಗಿ ಬ್ರೆಜಿಲ್ ದೇಶವನ್ನು ಕೂಡ ಕೆಲವೇ ಕೆಲವು ಆಸ್ತಿವಂತರಾದ ಒಂದು ಸಣ್ಣ ಗುಂಪು ಆಳುತ್ತಿತ್ತು. ಈ ಗುಂಪು ಬಹುಮುಖ್ಯವಾಗಿ ಕೃಷಿ ವ್ಯವಹಾರ(ಅಗ್ರಿ ಬಿಸ್ನೆಸ್ BEEF), ಮಿಲಿಟರಿ (BULLET) ಮತ್ತು ಕ್ರಿಶ್ಚಿಯನ್ ಮಿಷನರಿ ಬೋಧಕರ(BIBLE) ಗುಂಪಾಗಿತ್ತು. ಇದನ್ನು ಬ್ರೆಜಿಲ್‌ನಲ್ಲಿ BBB ಲಾಬಿ (ಬೀಫ್, ಬುಲೆಟ್ ಮತ್ತು ಬೈಬಲ್ ಎಂದು ಕರೆಯುತ್ತಾರೆ). ಎಲ್ಲಾ ಸ್ಥಾಪಿತ ಹಿತಾಸಕ್ತಿಗಳ ಸಂಗಮವೇ ಈ BBB ಲಾಬಿ (ಬ್ರೆಜಿಲ್ ಹೆಚ್ಚಾಗಿ, ದನದ ಮಾಂಸ, ಕೋಳಿ ಮಾಂಸ, ಕಬ್ಬಿಣದ ಅದಿರು, ಆರೆಂಜ್ ರಸ, ಸಕ್ಕರೆ, ಕಾಫಿ ಮತ್ತು ತಂಬಾಕು ರಫ್ತು ಮಾಡುತ್ತದೆ).

ಬ್ರೆಜಿಲ್ ದಕ್ಷಿಣ ಅಮೆರಿಕಾದಲ್ಲೇ ಅತ್ಯಂತ ಜನಸಂಖ್ಯೆಯುಳ್ಳ ದೇಶ. ಪ್ರಪಂಚದ 15% ಕುಡಿಯುವ ನೀರು ಬ್ರೆಜಿಲ್‌ನಲ್ಲಿದೆ. ದಕ್ಷಿಣ ಅಮೆರಿಕಾದ 41 ಕೋಟಿ ಜನಸಂಖ್ಯೆಯಲ್ಲಿ ಸುಮಾರು 21 ಕೋಟಿ ಜನಸಂಖ್ಯೆ ಬ್ರೆಜಿಲ್‌ನಲ್ಲಿದೆ ಮತ್ತು ದಕ್ಷಿಣ ಅಮೆರಿಕಾದ ಬೇರೆಲ್ಲ ದೇಶಗಳು ಸ್ಪಾನಿಷ್ ಭಾಷೆಯಲ್ಲಿ ಮಾತನಾಡಿದರೆ ಬ್ರೆಜಿಲ್‌ನಲ್ಲಿ ಮಾತ್ರ ಪೋರ್ಚುಗೀಸ್ ಮಾತಾಡುತ್ತಾರೆ. ಏಕೆಂದರೆ ಯುರೋಪಿನ ಪೋರ್ಚುಗಲ್ ಬ್ರೆಜಿಲ್‌ನನ್ನು ಆಳಿದ್ದು.

ಈ ದೇಶದ ಈಶಾನ್ಯ ಭಾಗದ ಒಂದು ಬಡ ಕುಟುಂಬದ 7ನೇ ಮಗನಾಗಿ ಹುಟ್ಟಿದ ಲೂಲಾ ಅಷ್ಟು ಹೆಚ್ಚಾಗಿ ಓದದೆ ತನ್ನ ಮನೆಯವರೊಂದಿಗೆ ಕೆಲಸಕ್ಕಾಗಿ ದೇಶದ ದಕ್ಷಿಣದಲ್ಲಿರುವ ದೊಡ್ಡ ನಗರ ಸಾಒ ಪಾಲೊಗೆ ಬಂದು ನೆಲೆಸುತ್ತಾರೆ. 14ನೇ ವಯಸ್ಸಿನಲ್ಲಿ ಒಂದು ಕಾರ್ ಕಂಪನಿ ಲೋಹದ ಕಾರ್ಮಿಕನಾಗಿ ಕೆಲಸ ಮಾಡುತ್ತಾರೆ. ಈ ಕಾರ್ಖಾನೆಗಳಲ್ಲಿ ರಾಜಕೀಯ ಮತ್ತು ಎಡಪಂಥೀಯ ವಿಚಾರಗಳನ್ನು ಕಲಿತ ಲೂಲಾ 1975ರ ವೇಳೆಗೆ ಈ ಲೋಹ ಕಾರ್ಮಿಕರ ಸಂಘಟನೆಯ ಮುಖಂಡರಾಗಿರುತ್ತಾರೆ. ಬ್ರೆಜಿಲ್‌ನ ಇತಿಹಾಸದಲ್ಲೇ ಕಂಡ ಅತ್ಯಂತ ದೊಡ್ಡ ದೊಡ್ಡ ಕಾರ್ಮಿಕ ಹೋರಾಟಗಳನ್ನು ರೂಪಿಸಿ ಮಿಲಿಟರೀ ಸರ್ವಾಧಿಕಾರದ ಕೆಂಗಣ್ಣಿಗೆ ಗುರಿಯಾಗಿ ತಿಂಗಳವರೆಗೂ ಸೆರೆವಾಸ ಮತ್ತು ಚಿತ್ರಹಿಂಸೆ ಅನುಭವಿಸಿ ಹೊರಬಂದ ನಂತರ 1980ರಲ್ಲಿ ಕಾರ್ಮಿಕ ಪಾರ್ಟಿಯ ಇನ್ನೂ ಇತರರೊಂದಿಗೆ ಸೇರಿ ಕಟ್ಟುತ್ತಾರೆ.. ಕಾರ್ಮಿಕ ಪಕ್ಷ ಬ್ರೆಜಿಲ್‌ನ ಇತಿಹಾಸದಲ್ಲೇ ಮೊದಲ ನೈಜ ಸಮಾಜವಾದಿ ಪಕ್ಷವಾಗಿ ಟ್ರೇಡ್ ಯೂನಿಯನ್, ಬುದ್ಧಿಜೀವಿಗಳು ಮತ್ತು ಆಕ್ಟಿವಿಸ್ಟ್ಗಳನ್ನು ತನ್ನತ್ತ ಸೆಳೆಯುತ್ತದೆ. ಮೊದಲಿನಿಂದಲೂ ಭೂಸುಧಾರಣೆಯನ್ನೇ ಕಾಣದ ಬ್ರೆಜಿಲ್‌ನಲ್ಲಿ 46% ಭೂಮಿ 1%ಕ್ಕಿಂತಲೂ ಕಡಿಮೆ ಇರುವ ಜನರಲ್ಲಿದೆ.

ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ಕೆಲಸಕ್ಕಾಗಿ ಹಳ್ಳಿಗಾಡಿನಿಂದ ಪಟ್ಟಣಕ್ಕೆ ಸೇರಿದ ಬ್ರೆಜಿಲ್ಲಿಯನ್ನರ ಜನಸಂಖ್ಯೆ ಎರಡು ಕೋಟಿಗೂ ಮೇಲು. ಇವರಲ್ಲಿ ಒಂದೂವರೆ ಕೋಟಿಗೂ ಹೆಚ್ಚಿನ ಗ್ರಾಮೀಣ ಕಾರ್ಮಿಕರು ಭೂಮಿ ಮತ್ತು ವಸತಿ ವಂಚಿತರು. ಇವರೆಲ್ಲರು ಸೇರಿ ‘ಖಾಲಿ ಇರುವ ಭೂಮಿಯಲ್ಲಿ ನೆಲೆಸುವುದೇ ನಮ್ಮೆಲ್ಲರ ಪರಿಹಾರ’ ಎಂಬ ಘೋಷಣೆಯೊಂದಿಗೆ 1984ರಲ್ಲಿ ಭೂಮಿ ಮತ್ತು ವಸತಿವಂಚಿತ ಕಾರ್ಮಿಕ ಆಂದೋಲನವನ್ನು ಶುರು ಮಾಡುತ್ತಾರೆ. ಇದು ಅಮೆರಿಕ ಖಂಡದಲ್ಲಿಯೇ ಅತ್ಯಂತ ದೊಡ್ಡ ಹೋರಾಟ ಸಮಿತಿ. ಇದರಲ್ಲಿ ಒಂದೂವರೆ ಕೋಟಿಗೂ ಹೆಚ್ಚು ಜನ ಸದಸ್ಯರಿದ್ದಾರೆ. ಇವೆಲ್ಲಾ ಹೋರಾಟಗಳ ಫಲವಾಗಿ 1985ರ ಮಾರ್ಚ್ 31ರಂದು ಮಿಲಿಟರೀ ಆಡಳಿತ ಕೊನೆಗೊಂಡು ಪ್ರಜಾಪ್ರಭುತ್ವದ ಕಡೆಗೆ ಬ್ರೆಜಿಲ್ ಹೆಜ್ಜೆಯಿಡುತ್ತದೆ. ಪ್ರಜಾಪ್ರಭುತ್ವದಡಿಯಲ್ಲಿ ನಡೆದ ಚುನಾವಣೆಗಳಲ್ಲಿ ಕೂಡ ನಡುಪಂಥೀಯರು ಅಥವಾ ನಡು-ಬಲಪಂಥೀಯರು ಅಧಿಕಾರ ಹಿಡಿದಿರುತ್ತಾರೆ ಮತ್ತು ನವ ಉದಾರೀಕರಣದ ರಾಜಕೀಯವನ್ನು ಚಾಚೂತಪ್ಪದೆ ಮಾಡಿಕೊಂಡು ಬರುತ್ತಿರುತ್ತಾರೆ. 70 ಮತ್ತು 80ರ ದಶಕದಲ್ಲಿ ಬ್ರೆಜಿಲ್ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ದುಡಿಯುವ ವರ್ಗವಿದ್ದ ರಾಷ್ಟ್ರ. ಕಾರ್ಮಿಕ ಪಕ್ಷ 80 ಮತ್ತು 90ರ ದಶಕದಲ್ಲಿ ತುಂಬಾ ಜನಾಂದೋಲನಗಳು ಮತ್ತು ಜನಸಂಪರ್ಕ ಯೋಜನೆಗಳನ್ನು ರೂಪಿಸುತ್ತದೆ. ಇದರ ನಡುವೆ ಲೂಲಾ ಮೂರು ಬಾರಿ (1989, 1994 ಮತ್ತು 1998) ಚುನಾವಣೆಗಳಲ್ಲಿ ನಿಂತು ಸೋತಿರುತ್ತಾರೆ. ಮುಂದೆ 2002ರಲ್ಲಿ ನಡೆದ ಚುನಾವಣೆಯಲ್ಲಿ ಜಯಭೇರಿ ಬಾರಿಸುತ್ತಾರೆ.

80ರಲ್ಲಿ ಭಾರೀ ದೊಡ್ಡ ಕಾರ್ಮಿಕ ಒಕ್ಕೂಟದ ಬಂಡಾಯದಿಂದ ಸ್ಥಾಪನೆಯಾಗಿದ್ದ ಕಾರ್ಮಿಕ ಪಕ್ಷ, ತೀವ್ರಗಾಮಿ ಪ್ರಗತಿಪರತೆ ಮತ್ತು ಕ್ರಾಂತಿಕಾರಿ ವಿದ್ಯಾರ್ಥಿ ಚಳುವಳಿಗಳ ದೆಸೆಯಿಂದ ಅಧಿಕಾರವನ್ನು ಪಡೆದಿತ್ತು. ಕಾರ್ಮಿಕ ಪಕ್ಷವು 2002ರಿಂದ 2010ರವರೆಗೂ ಲೂಲಾ ನಾಯಕತ್ವದಲ್ಲಿ ಮತ್ತು 2010ರಿಂದ 2016ರವರೆಗೂ ದಿಲ್ಮ ರೌಸೆಫ್ಫ್ ನಾಯಕತ್ವದಲ್ಲಿ 2010ರಿಂದ 2016ರವರೆಗೆ ಅಧಿಕಾರ ಹಿಡಿದಿತ್ತು. ಲೂಲಾ ರಾಷ್ಟ್ರಪತಿಯಾದ ದಿನದಿಂದಲೇ ದೇಶದ ಸಿರಿವಂತರ ಮೂರ್ನಾಲ್ಕು ಕುಟುಂಬಗಳೇ ನಡೆಸುವ ಬ್ರೆಜಿಲ್ ಮಾಧ್ಯಮಗಳ ಮೂಲಕ ‘ದೇಶವು ಅದರಲ್ಲೂ ಬಡವರು, ನಮ್ಮನ್ನು ಅವಮಾನಿಸಲೆಂದೇ ಒಬ್ಬ ಓದಿಲ್ಲದ ಕಾರ್ಮಿಕನನ್ನು ದೇಶದ ನಾಯಕನನ್ನಾಗಿಸಿದೆ’ ಎಂದು ಜರಿಯುತ್ತಾರೆ. ಪಕ್ಷದಲ್ಲಿಯೇ ಇದ್ದ ಕ್ರಾಂತಿಕಾರಿ ಸಂಘಟಕರು ಚುನಾವಣೆ ಗೆಲ್ಲಲು ಪಕ್ಷದ ಕ್ರಾಂತಿಕಾರಿ ಸಿದ್ಧಾಂತದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆಪಾದಿಸುತ್ತಾರೆ. ಇವೆಲ್ಲದರ ನಡುವೆ ಲೂಲಾ ತನ್ನ ಅಧಿಕಾರದ 8 ವರ್ಷ ಪೂರೈಸುತ್ತಾರೆ. ಜನಪ್ರಿಯ ಜನಕಲ್ಯಾಣ ಯೋಜನೆಗಳನ್ನು ರೂಪಿಸುತ್ತಾರೆ. ಬೊಳ್ಸೋ ಕುಟುಂಬ ಯೋಜನೆ ಪ್ರಸಿದ್ಧಿ ಪಡೆಯುತ್ತದೆ. ಈ ಯೋಜನೆಯ ಅಡಿಯಲ್ಲಿ ಯಾರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿರುತ್ತಾರೋ ಮತ್ತು ಸಮಯಕ್ಕೆ ಸರಿಯಾಗಿ ಲಸಿಕೆಗಳನ್ನು ಹಾಕಿಸುತ್ತಾರೋ ಅವರಿಗೆ ತಿಂಗಳಿಗೆ 115 ಡಾಲರ್ ಸರ್ಕಾರದಿಂದ ನೇರ ಸಂದಾಯವಾಗುತ್ತದೆ. ಬಡತನದಿಂದ ಸ್ವಲ್ಪ ಜನ ಮಧ್ಯಮ ವರ್ಗಕ್ಕೆ ಸೇರುತ್ತಾರೆ. ಗ್ರಾಮೀಣ ಆರೋಗ್ಯ, ವಿದ್ಯುತ್ ಸಂಪರ್ಕ ಎಲ್ಲರಿಗೂ ಸಿಗುವ ಹಾಗೆ ಮಾಡುತ್ತಾರೆ. ಬಡ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯಕ್ಕೆ ಸೇರುವ ಹಾಗೆ ಮೀಸಲಾತಿ ತರುತ್ತಾರೆ. ಬ್ರೆಜಿಲ್ ಹಿಂದೆಂದೂ ಕಂಡರಿಯದ ಆರ್ಥಿಕ ಪ್ರಗತಿಯನ್ನು ಕಾಣುತ್ತದೆ (2008ರ ಆರ್ಥಿಕ ಕುಸಿತದ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಎದುರಿಸದೆ). ಅಮೆರಿಕ ವಾಣಿಜ್ಯಕ್ಕೆ ಸೀಮಿತವಾಗಿದ್ದ ಬ್ರೆಜಿಲ್ ಮಾರುಕಟ್ಟೆ ಸ್ವಂತ ವಿದೇಶಿ ನೀತಿ ಮತ್ತು ಬ್ರಿಕ್ಸ್ (ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಒಕ್ಕೂಟ) ವತಿಯಿಂದ ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತದೆ. ಲೂಲಾ ಅಧಿಕಾರದ ಕೊನೆಯಲ್ಲಿ ಅವರ ಜನಪ್ರಿಯತೆ 80%ರಷ್ಟು ಇತ್ತು. ಇದು ಯಾವುದೇ ದೇಶದ ನಾಯಕರಿಗೆ ಇರಲಿಲ್ಲ. ಬಡವರೇ ಅಲ್ಲದೆ ಶ್ರೀಮಂತರು ಸಹಾ ಲೂಲಾರನ್ನು ಪ್ರೀತಿಸುತ್ತಿದ್ದರು. ಲೂಲಾ ನಂತರ ಲೂಲರ ಸ್ವಂತ ಆಯ್ಕೆಯಾದ ದಿಲ್ಮ ರೌಸೆಫ್ಫ್ (ಮಿಲಿಟರೀ ಸರ್ವಾಧಿಕಾರದಲ್ಲಿ 3 ವರ್ಷ ಜೈಲುಪಾಲಾಗಿ ಚಿತ್ರಹಿಂಸೆ ಅನುಭವಿಸಿದ್ದ ಸವೊ ಪಾಲೊ ನಗರದ ಯುವತಿ) ಬ್ರೆಜಿಲ್‌ನ ನಾಯಕಿಯಾಗುತ್ತಾರೆ. ನಾಲ್ಕು ಬಾರೀ ಸೋತು ಇಲ್ಲಿಯವರೆಗೂ ತೆರೆಮರೆಯಲ್ಲಿ ಯೋಜನೆಗಳನ್ನು ರೂಪಿಸುತ್ತಿದ್ದ ದೊಡ್ಡ ದೊಡ್ಡ ಸ್ಥಾಪಿತ ಹಿತಾಸಕ್ತಿಗಳು, ಪ್ರತಿಗಾಮಿ ಶಕ್ತಿಗಳ ಕುತಂತ್ರದಿಂದ ಮತ್ತು ತನ್ನದೇ ತಪ್ಪುಗಳಿಂದ ಆಕೆಯು 2016ರಲ್ಲಿ ಇಲ್ಲ-ಸಲ್ಲದ ಕ್ಷುಲ್ಲಕ ದೋಷಾರೋಪಗಳಿಂದ ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ ಮತ್ತು 2018ರ ಚುನಾವಣೆಯ ಹೊತ್ತಿಗೆ ಸ್ಥಾಪಿತ ಹಿತಾಸಕ್ತಿಗಳ (ಬಿಬಿಬಿ ಲಾಬಿ) ಕಾರ್ಯಾಚರಣೆಯು ಚುರುಕುಗೊಳ್ಳುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....