Homeಸಿನಿಮಾಸಿನಿ ಸುದ್ದಿಮಗನಿಗೆ ಅಂಬಿಯ ಆ ಕಿವಿಮಾತು ಮತ್ತು ಪುಟ್ಟಣ್ಣನ ತಮಿಳು ಸಿಟ್ಟು

ಮಗನಿಗೆ ಅಂಬಿಯ ಆ ಕಿವಿಮಾತು ಮತ್ತು ಪುಟ್ಟಣ್ಣನ ತಮಿಳು ಸಿಟ್ಟು

- Advertisement -
- Advertisement -
  • ಗಿರೀಶ್ ತಾಳಿಕಟ್ಟೆ |

ಮಂಡ್ಯದ ಗಂಡು ಅಂಬಿ ಈಗ ಫುಲ್ ರಿಲೀಫ್ ಮೂಡ್‍ನಲ್ಲಿದ್ದಾರೆ. ತನಗೆ ಆಗಿಬರದ ಪೊಲಿಟಿಕ್ಸ್‍ನ ಸುಳಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ಅಂಬರೀಷ್, ಆ ಜೇಡರಬಲೆಯಿಂದ ಆಚೆ ಬಂದ ನಂತರ ಸಿಕ್ಕಾಪಟ್ಟೆ ಜಾಲಿ ಮೂಡಿನಲ್ಲಿರುವಂತಿದೆ. ತನ್ನನ್ನೇ ತಾನು ಗೇಲಿ ಮಾಡಿಕೊಳ್ಳುತ್ತಾ, ತಮಾಷೆಗೆ ಎದುರಿನವರ ಕಾಲೆಳೆಯುತ್ತಾ ಹಳೇ ಅಂಬರೀಷ್ ಆಗಿ ಸ್ಯಾಂಡಲ್‍ವುಡ್‍ನಲ್ಲಿ ಹಗುರಾಗುತ್ತಿರೋದು ಅವರ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯ ಬೆಳವಣಿಗೆ. ಈ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಕಾಂಗ್ರೆಸ್ ಪಕ್ಷ ಅಂಬಿಗೆ ಟಿಕೇಟ್ ಘೋಷಿಸಿದರೂ, ಹಳೆ ಮುನಿಸುಗಳನ್ನು ಮುಂದೆಮಾಡಿ ಗೌಡಿಕೆ ಗತ್ತಿನಲ್ಲಿ ಗುಟುರು ಹಾಕಿದ ಅಂಬಿ ಸದ್ಯದ ಮಟ್ಟಿಗೆ ರಾಜಕಾರಣದಿಂದ ಹೊರಗುಳಿಯುವ ನಿರ್ಧಾರ ಕೈಗೊಂಡದ್ದು ಅವರ ವೈಯಕ್ತಿಕ ಬದುಕಿನ ದೃಷ್ಟಿಯಿಂದ ಬಹಳ ಆರೋಗ್ಯಕರ ನಿರ್ಧಾರ ಅಂತಲೇ ಹೇಳಬೇಕು. ಯಾಕೆಂದರೆ ಒಬ್ಬ ನಟನಾಗಿ ಅಂಬಿ ಅದೆಷ್ಟು ಅಭಿಮಾನಿಗಳನ್ನು, ಜನರ ಪ್ರೀತಿಯನ್ನು ಗಳಿಸಿಕೊಂಡಿದ್ದರೋ, ಒಬ್ಬ ರಾಜಕಾರಣಿಯಾಗಿ, ಜನಪ್ರತಿನಿಧಿಯಾಗಿ ಅಷ್ಟೇ ಮೂದಲಿಕೆಗೆ ಗುರಿಯಾಗುತ್ತಾ ಬಂದಿದ್ದರು. ಶಾಸಕ, ಸಚಿವರಾಗಿ ಅಂಬಿ ಜನರ ಕೈಗೆ ಸಿಗುವುದೇ ಇಲ್ಲವೆನ್ನುವ ಆಪಾದನೆಗಳು ದಂಡಿಯಾಗಿ ಕೇಳಿಬರುತ್ತಿದ್ದವು. ಹಾಗೆ ನೋಡಿದರೆ, ಅಂಬಿಯ ವ್ಯಕ್ತಿತ್ವಕ್ಕೆ ಇವತ್ತಿನ ಈ ಹಾಳು ಪೊಲಿಟಿಕ್ಸ್ ಒಗ್ಗುವಂತದ್ದೇ ಆಗಿರಲಿಲ್ಲ. ಮುಂದೆ ಹೇಗೋ, ಏನೋ, ಸದ್ಯಕ್ಕೆ ಎಲೆಕ್ಷನ್ ರಾಜಕಾರಣದ ಜಂಜಡದಿಂದ ಹೊರಬಂದ ತರುವಾಯ ಸಿನಿಮಾಗಳಲ್ಲಿ, ಸಿನಿಮಾ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗುತ್ತಾ ತನ್ನ ಹಳೆಯ ಕೀಟಲೆ ದಿನಗಳತ್ತ ಅಂಬಿ ಮರುಪಯಣಿಸುತ್ತಿರೋದು Really a Good Sign!

ಸದ್ಯ, ಗುರುದತ್ ಗಾಣಿಗ ನಿರ್ದೇಶಿಸುತ್ತಿರುವ `ಅಂಬಿ ನಿಂಗ್ ವಯಸ್ಸಾಯ್ತೊ’ ಸಿನಿಮಾದ ಶೂಟಿಂಗ್‍ನಲ್ಲಿ ಅಂಬಿ ಫುಲ್ ಬ್ಯುಸಿಯಾಗಿದ್ದಾರೆ. ತಮಿಳಿನ `ಪಾ ಪಾಂಡಿ’ ಸಿನಿಮಾದ ರೀಮೇಕ್ ಆಗಿರುವ ಈ ಸಿನಿಮಾದಲ್ಲಿ ಅಂಬಿ ಪಾತ್ರದ ಯೌವ್ವನದ ದಿನಗಳ ರೂಪದಲ್ಲಿ ಸುದೀಪ್ ನಟಿಸುತ್ತಿದ್ದರೆ, ಅಂಬಿಗೆ ಜೋಡಿಯಾಗಿ 14 ವರ್ಷಗಳ ನಂತರ ನಟಿ ಸುಹಾಸಿನಿ ಹೆಜ್ಜೆ ಹಾಕಿದ್ದಾರೆ. ಇದರ ನಡುವೆ ಹೊಸಬರ ಚಿತ್ರಗಳ ಮುಹೂರ್ತ, ಸಿನಿಮಾ ಕಾರ್ಯಕ್ರಮಗಳು, ಪ್ರಶಸ್ತಿ ಸಮಾರಂಭಗಳಲ್ಲೂ ಅಂಬಿ ದಿಲ್‍ಖುಷ್ ಆಗಿ ಭಾಗವಹಿಸುತ್ತಿದ್ದಾರೆ. ಮೊನ್ನೆಮೊನ್ನೆಯಷ್ಟೇ, ನಟ ಯಶ್‍ಗೆ ಅಡ್ಡ ಹಾಕಿಕೊಂಡು `ಬಡ್ಡೇತದೆ, ನಿನ್ನ ಮುಖದ ಮೇಲೆ ಗಡ್ಡ ಸರಿ ಕಾಣಕ್ಕಿಲ್ಲ, ಗಡ್ಡ ಯಾವಾಗ್ಲಾ ತಗೀತೀಯಾ?’ ಅಂತ ಆತ್ಮೀಯವಾಗಿ ಗದರಿಕೊಂಡಿದ್ದ ಅಂಬಿ ಇತ್ತೀಚೆಗೆ ನಡೆದ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಬಿಗ್‍ಬಾಸ್ ಬಾರ್ಬಿ ಡಾಲ್ ನಿವೇದಿತಾ ಗೌಡಳ ಜೊತೆಗೆ ಅವಳದೇ ಧಾಟಿಯಲ್ಲಿ ಮಾತಾಡಿ, ಕಾಲೆಳೆದು ಕಿಚಾಯಿಸಿದ್ದರು. ಪಕ್ಕಾ ಪೊಲಿಟಿಷಿಯನ್ ಅವತಾರದಲ್ಲಿದ್ದಾಗ ಇಂಥಾ ಕಾರ್ಯಕ್ರಮಗಳಿಗಿರಲಿ, ಸರ್ಕಾರಿ ಸಮಾರಂಭಗಳಿಗೇ ಚಕ್ಕರ್ ಹೊಡೆಯುತ್ತಿದ್ದ ಅವರು ಈಗ ಕೊಂಚ ಬದಲಾಗಿದ್ದಾರೆ, ಬದಲಾಗುತ್ತಿದ್ದಾರೆ.

ಇದೀಗ ಅಂಬಿಯ ಮಗ ಅಭಿಷೇಕ್ ಗೌಡ ಕೂಡಾ `ಅಮರ್’ ಸಿನಿಮಾದ ಮೂಲಕ ಹೀರೋ ಆಗಲು ಸಜ್ಜಾಗಿದ್ದಾನೆ. ನಾಗಶೇಖರ್ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಅಭಿಷೇಕ್‍ಗೆ ನಾಯಕಿಯಾಗಿ ತಾನ್ಯ ನಟಿಸುತ್ತಿದ್ದಾರೆ. ಜೆಪಿ ನಗರದ ದೇವಸ್ಥಾನದಲ್ಲಿ ಮುಹೂರ್ತವೂ ಮುಗಿದಿದೆ. ಇನ್ನೇನು ಚಿತ್ರೀಕರಣ ಶುರುವಾಗಬೇಕು ಅಷ್ಟೇ. ಅಂದಹಾಗೆ, ಹೀರೊ ಆಗಲು ಹೊರಟಿರುವ ಮಗನಿಗೆ ಅಂಬಿ ಒಂದು ಕಿವಿಮಾತು ಹೇಳಿದ್ದಾರೆ. ಅದೇನು ಗೊತ್ತಾ, `ನನ್ನ ಥರಾ ಯಾವತ್ತೂ ಸೆಟ್‍ಗೆ ಲೇಟಾಗಿ ಹೋಗ್ಬೇಡ’ ಅಂತ! ಅಂಬಿ ಶೂಟಿಂಗ್ ಸ್ಪಾಟ್‍ಗೆ ಲೇಟಾಗಿ ಬರೋದ್ರಲ್ಲಿ ಸಿಕ್ಕಾಪಟ್ಟೆ ಫೇಮಸ್ಸು. ಅದು ಇವತ್ತು ನಿನ್ನೆಯ ಅಭ್ಯಾಸವಲ್ಲ, ಮೊದಲ ಸಿನಿಮಾದ ಮೊದಲ ದಿನದಿಂದಲೇ ಅಂತದ್ದೊಂದು ಅದ್ಭುತ ಸಂಪ್ರದಾಯವನ್ನ ಪಾಲಿಸಿಕೊಂಡು ಬರ್ತಿದಾರೆ. ನಾಗರಹಾವು ಸಿನಿಮಾದ ಶೂಟಿಂಗ್‍ನ ಮೊದಲ ದಿನ ಅಂಬಿ ಸೆಟ್‍ಗೆ ತಡವಾಗಿ ಬಂದಿದ್ದರಂತೆ. ಆಗ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಸಿಟ್ಟಿನಿಂದ ಯಾಕಯ್ಯ ಲೇಟು ಅಂತ ಕೇಳಿದಾಗ, ಅಂಬಿ ಗುರುವಿನ ಎದುರು ನುಲಿದಾಡುತ್ತಾ `ದಾರೀಲಿ ಟೈರ್ ಪಂಕ್ಚರ್ ಆಗ್ಬಿಟ್ಟಿತ್ತು, ಸಾರ್, ಅದ್ಕೆ ಒಸಿ ಲೇಟಾಯ್ತು’ ಅಂತ ಏನೋ ಕಥೆ ಕಟ್ಟಲು ಹೋದರಂತೆ. ಆಗ ಪುಟ್ಟಣ್ಣ ಪಕ್ಕದಲ್ಲಿದ್ದ ತನ್ನ ತಮಿಳು ಅಸಿಸ್ಟೆಂಟ್ ಕಡೆ ತಿರುಗಿ ಅದೇ ಸಿಟ್ಟಿನಲ್ಲಿ `ನಾ ಕಥೆ ಏಡಕ್ಕೆ ವಂದಿರ್ಕೆ, ಕೇಕ್ಕೆ ವಂದಿಲ್ಲೈ’ (ನಾ ಕಥೆ ಹೇಳ್ಲಿಕ್ಕೆ ಬಂದಿದೀನಿ, ಕಥೆ ಕೇಳಕ್ಕೆ ಅಲ್ಲ!) ಎಂದು ಶೂಟಿಂಗ್‍ನಲ್ಲಿ ಬ್ಯುಸಿಯಾದರಂತೆ. ಅವತ್ತಿಂದ ಇಲ್ಲಿಯವರೆಗೂ ಅಂಬಿ ಶೂಟಿಂಗ್ ಸ್ಪಾಟ್‍ಗೆ ಆನ್‍ಟೈಂ ಬಂದಿದ್ದೇ ಅಪರೂಪ. ಅಂಥಾ ತನ್ನ ಗುಣವನ್ನು ನೀನು ಕಲೀಬೇಡ ಎಂದು ಮಗನಿಗೆ ಟಿಪ್ಸ್ ಕೊಟ್ಟಿದ್ದಾರೆ ಮಂಡ್ಯದ ಗಂಡು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...