Homeಪ್ರಪಂಚ'ಮಿಸ್ಟರ್ ಮೋದಿ ಮೌನ ಮುರಿಯಬೇಕಿದೆ' - ನ್ಯೂಯಾರ್ಕ್ ಟೈಮ್ಸ್

‘ಮಿಸ್ಟರ್ ಮೋದಿ ಮೌನ ಮುರಿಯಬೇಕಿದೆ’ – ನ್ಯೂಯಾರ್ಕ್ ಟೈಮ್ಸ್

- Advertisement -
(2018 ಏಪ್ರಿಲ್ 16ರಂದು ಪ್ರಕಟವಾದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಸಂಪಾದಕೀಯದ ಆಯ್ದ ಭಾಗ)
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಿರಂತರವಾಗಿ ಟ್ವೀಟ್ ಮಾಡುತ್ತ ತಮ್ಮನ್ನು ತಾವು ಒಬ್ಬ ಪ್ರತಿಭಾವಂತ ವಾಗ್ಮಿ ಎಂದು ಸಾಬೀತುಪಡಿಸುತ್ತಲೇ ಇದ್ದಾರೆ. ಆದರೆ ಭಾರತೀಯ ಜನತಾ ಪಕ್ಷದ ಅಡಿಪಾಯದಲ್ಲಿ ಸದಾ ಸನ್ನದ್ಧವಾಗಿರುವ ಅದರ ಅಂಗಸಂಸ್ಥೆಗಳಾದ ಕೋಮುವಾದಿ ಸಂಘಟನೆಗಳು, ಉಗ್ರ ರಾಷ್ಟ್ರೀಯವಾದಿಗಳು ಅಲ್ಲಿನ ಅಲ್ಪಸಂಖ್ಯಾತರನ್ನು ಮಹಿಳೆಯರನ್ನು ಕ್ರೂರವಾಗಿ ಹಿಂಸಿಸುತ್ತಿರುವಾಗ ಮಾತ್ರ ಮೋದಿಯವರ ಬಾಯಿ ಕಟ್ಟಿಬಿಡುತ್ತದೆ, ಅವರ ಧ್ವನಿ ಹೊರಡುವುದೇ ಇಲ್ಲ. ಕಳೆದ ಜನವರಿಯಲ್ಲಿ ಜಮ್ಮುವಿನ ಎಂಟು ವರ್ಷದ ಬಾಲಕಿಯನ್ನು ಆರು ಜನ ಅತ್ಯಾಚಾರ ಮಾಡಿ ಕೊಂದು ಹಾಕಿದ್ದರು… ಇಂಥಾ ಭಯಾನಕ ಘಟನೆಗೆ ಕಾರಣರಾದವರನ್ನು ಸಮರ್ಥಿಸಲು ನರೇಂದ್ರ ಮೋದಿಯವರ ಪಕ್ಷದ ಮಂತ್ರಿಗಳೇ ಮೆರವಣಿಗೆ ಹೊರಟರು. ಭಾರತದ ಜನ ತಮ್ಮದೇ ಸರಕಾರದ ಈ ಕಠೋರ ನಿಲುವನ್ನು ಖಂಡಿಸಿ ಈಗ ಬೀದಿಗಿಳಿದಿದ್ದಾರೆ. ಆದರೆ ಮಿಸ್ಟರ್ ಮೋದಿ ಮಾತ್ರ ಈ ಹೀನ ಪ್ರಕರಣಗಳ ಹಿಂದಿರುವ ತಮ್ಮದೇ ಬೆಂಬಲರಿಗರ ಕುರಿತು ಮಾತನಾಡುತ್ತಲೇ ಇಲ್ಲ.
…. ಅಲೆಮಾರಿ ಕುರಿಗಾಹಿ ಸಮುದಾಯವನ್ನು ಹೆದರಿಸಿ ಓಡಿಸಲು ಆ ಎಂಟು ವರ್ಷದ ಬಾಲಕಿ ಆಸೀಫಾಳನ್ನು ಜನವರಿಯಲ್ಲಿ ಅಪಹರಿಸಲಾಗಿತ್ತು. ಆಕೆಯನ್ನು ಒಂದು ಹಿಂದೂ ದೇವಾಲಯದಲ್ಲಿ ಅನೇಕ ದಿನಗಳವರೆಗೆ ಕೂಡಿ ಹಾಕಿ ಅತ್ಯಾಚಾರ ಮಾಡಿ ನಂತರ ಕೊಂದು ಹಾಕಲಾಯಿತು. ಈ ಕೃತ್ಯ ಮಾನವನ ನೈತಿಕ ಭ್ರಷ್ಟತೆಯ ಅಧಃಪತನವನ್ನು ಸಂಕೇತಿಸುತ್ತದೆ. ಇಷ್ಟೆಲ್ಲ ನಡೆದರೂ, ಜನ ಬೀದಿಗೆ ಇಳಿಯುವವರೆಗೂ ಮೋದಿ ಈ ಭಯಾನಕ ಕೃತ್ಯದ ಕುರಿತು ಬಾಯಿಬಿಡಲು ಸಿದ್ಧರಿರಲಿಲ್ಲ.
…. ಜಮ್ಮು ಕಾಶ್ಮೀರದ ಸಮ್ಮಿಶ್ರ ಸರ್ಕಾರದಲ್ಲಿ ಬಿಜೆಪಿ ಪಕ್ಷದ ಇಬ್ಬರು ಮಂತ್ರಿಗಳು ಈ ಬಂಧಿತ ಆಪಾದಿತರ ಪರವಾಗಿ ನಡೆದ ರ್ಯಾಲಿಗಳಲ್ಲಿ ಪಾಲ್ಗೊಂಡು ಬೀದಿಗಿಳಿದರು. ಆಪಾದಿತರ ಪರವಾದ ಈ ರ್ಯಾಲಿಗಳ ಮುಖ್ಯ ಉದ್ದೇಶ, ಈ ಪ್ರಕರಣದ ತನಿಖೆಯನ್ನ ಸ್ಥಳೀಯ ಆಡಳಿತದಲ್ಲಿರುವ ಮುಸ್ಲಿಂ ಅಧಿಕಾರಿಗಳಿಗೆ ವಹಿಸದೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಸಿಬಿಐಗೆ ವಹಿಸಬೇಕು ಎಂಬುದೇ ಆಗಿತ್ತು. ಪೊಲೀಸರು ಸದರಿ ಪ್ರಕರಣದ ಪ್ರಥಮ ಮಾಹಿತಿ ವರದಿಯನ್ನು ಮತ್ತು ಕೋರ್ಟಿನಲ್ಲಿ ಚಾರ್ಜ್‍ಷೀಟ್ ಹಾಕುವುದನ್ನೂ ಅಲ್ಲಿನ ಹಿಂದೂ ವಕೀಲರು ತಡೆದಿದ್ದರು….
ತನ್ನದೇ ಪಕ್ಷದ ಸರ್ಕಾರ ಅಧಿಕಾರದಲ್ಲಿರುವ ಇನ್ನೊಂದು ಪ್ರಭಾವಿ ರಾಜ್ಯವಾದ ಉತ್ತರ ಪ್ರದೇಶದ ಉನ್ನಾವೋದಲ್ಲಿ ತನ್ನದೇ ಪಕ್ಷದ ಶಾಸಕನೊಬ್ಬ ಅತ್ಯಾಚಾರದ ಗಂಭೀರ ಪ್ರಕರಣದಲ್ಲಿ ಆಪಾದಿತನಾಗಿದ್ದರೂ ಮಿಸ್ಟರ್ ಮೋದಿ ಮಾತನಾಡಲು ಬಯಸಲಿಲ್ಲ…. ತನ್ನ ಮೇಲೆ ಸದರಿ ಶಾಸಕ ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂದು ಆ ಪುಟ್ಟ ಹುಡುಗಿ ಪೊಲೀಸರಿಗೆ ದೂರು ನೀಡಲು ಹೋದರೂ ಸಂಬಂಧಿಸಿದ ಠಾಣಾಧಿಕಾರಿ ಆ ಶಾಸಕನ ವಿರುದ್ಧದ  ದೂರನ್ನು ದಾಖಲಿಸಿಕೊಳ್ಳದೆ ನಿರ್ಲಕ್ಷಿಸಿದ. ಇಷ್ಟೇ ಅಲ್ಲದೆ ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ತಂದೆಯನ್ನು ಸುಳ್ಳು ಕೇಸಿನ ಮೇಲೆ ಅರೆಸ್ಟ್ ಮಾಡಲಾಯಿತು. ಪೊಲೀಸ್ ಕಸ್ಟಡಿಯಲ್ಲಿದ್ದ ಬಾಲಕಿಯ ತಂದೆಯನ್ನು ಅತ್ಯಾಚಾರಿ ಶಾಸಕ ಮತ್ತು ಅವನ ತಮ್ಮ ಹೊಡೆದು ಸಾಯಿಸಿದರು.
ಹಲವು ವಾರಗಳ ನಂತರ, ಮೊನ್ನೆ ಶುಕ್ರವಾರ ಮೋದಿ `ಈ ಪ್ರಕರಣಗಳು ದೇಶಕ್ಕೆ ಒಳ್ಳೆಯ ಹೆಸರನ್ನು ತರುವುದಿಲ್ಲ, ಇವು ಅತ್ಯಂತ ನಾಚಿಕೆಗೇಡಿನ ಪ್ರಕರಣಗಳು, ನಮ್ಮ ಹೆಣ್ಣುಮಕ್ಕಳಿಗೆ ನ್ಯಾಯ ಸಿಕ್ಕೇ ಸಿಗುತ್ತದೆ’ ಎಂಬ ಲೋಕಾಭಿರಾಮದ ಮಾತುಗಳನ್ನು ಆಡಿದ್ದಾರೆ. ಗಾಳಿಯಲ್ಲಿ ಕಡ್ಡಿಯಾಡಿಸಿದಂತಹ ಮೋದಿಯ ಮಾತುಗಳು ಈ ಕ್ರೂರ ಹಿಂಸೆಯ ಪ್ರಕರಣಗಳನ್ನು ಸಾಮಾನ್ಯ ಕ್ರೈಮ್ ಮಟ್ಟಕ್ಕೆ ಇಳಿಸಿದ್ದವು. ಬಿಜೆಪಿ ಪಕ್ಷದ ಅಂಗಸಂಘಟನೆಗಳಾದ ಹಿಂದೂ ಮಿಲಿಟಂಟ್ ಗುಂಪುಗಳಿಗೆ ಸೇರಿದ ಹಂತಕರು, ತಾವು ಪವಿತ್ರವೆಂದು ಭಾವಿಸುವ ಹಸುಗಳನ್ನು ಕೊಂದು ತಿಂದಿದ್ದಾರೆ ಎಂದು ಭಾರತದ ಶ್ರೇಣೀಕರಣದ ಕೆಳಹಂತದಲ್ಲಿರುವ ದಲಿತರ ಮೇಲೆ ಮತ್ತು ಮುಸ್ಲಿಮರ ಮೇಲೆ ಸುಳ್ಳು ಆರೋಪ ಹೊರಿಸಿ ಅನೇಕರನ್ನು ಕೊಂದು ಹಾಕಿದ್ದಾರೆ. ಇಂತಹ ಭೀಕರ ಹಿಂಸಾ ಕೃತ್ಯಗಳು ನಡೆದರೂ ಮೋದಿ ತಮ್ಮ ದಿವ್ಯ ಮೌನದ ಆಚೆಗೆ ಬರುವುದಿಲ್ಲ.
ಮೋದಿಯ ಈ ಮೌನ ಅತ್ಯಂತ ಗೊಂದಲಮಯ ಮತ್ತು ಅವರ ಶೋಚನೀಯ ಮನಃಸ್ಥಿತಿಯ ದ್ಯೋತಕ. 2012-13ರಲ್ಲಿ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಮೋದಿಗಿಂತ ಹಿಂದೆ ಆಡಳಿತ ನಡೆಸುತ್ತಿದ್ದ ಸರ್ಕಾರದ ಮುಖ್ಯಸ್ಥರು ಜನ ಬೀದಿಗಿಳಿಯುವ ಮುನ್ನವೇ ಘಟನೆಯನ್ನು ಖಂಡಿಸಿದ್ದರು ಮತ್ತು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಂಡಿದ್ದರು. ತಮ್ಮ ಹಿಂದಿನ ಸರ್ಕಾರದ ಒಳ್ಳೆಯ ನಡವಳಿಕೆಗಳನ್ನು ಮಿಸ್ಟರ್ ಮೋದಿ ಅನುಸರಿಸಲು ಮುಂದಾದ ಉದಾಹರಣೆಗಳೇ ಇಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರ ತಾನು ಮಾಡಿದ ಅನೇಕ ತಪ್ಪುಗಳಿಂದ ಅಧಿಕಾರ ಕಳೆದುಕೊಂಡಿತು ಮತ್ತು ಮೋದಿಯ ಬಿಜೆಪಿ ಪಕ್ಷ 2014ರ ಚುನಾವಣೆಯಲ್ಲಿ ಹಿಂದೆಂದೂ ಪಡೆಯದಷ್ಟು ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬಂದಿತು. ಹಿಂದಿನ ಸರ್ಕಾರದ ಹೊಣೆಗೇಡಿತನ, ಪ್ರಚ್ಛನ್ನ ಭ್ರಷ್ಟಾಚಾರಗಳನ್ನು ಟೀಕಿಸುತ್ತಲೇ ಮೋದಿ ಚುನಾವಣಾ ಪ್ರಚಾರ ಮಾಡಿದರು. ಮತ್ತು ಸಾಮಾನ್ಯ ಜನರ ಉತ್ತರದಾಯಿತ್ವವನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಕಳೆದುಕೊಂಡಿದೆ ಎನ್ನುತ್ತಲೇ ಮಿಸ್ಟರ್ ಮೋದಿ ಅಧಿಕಾರಕ್ಕೆ ಬಂದರು.
ಆದರೆ ಇಂದು ಮಿಸ್ಟರ್ ಮೋದಿಯವರು ಒಂದು ಬಗೆಯ ಆತ್ಮವಂಚಕ ಮೌನಕ್ಕೆ ಮರೆಹೋಗಿದ್ದಾರೆ. ಜಗತ್ತಿನ ಬಹುದೊಡ್ಡ ಪ್ರಜಾತಂತ್ರ ದೇಶದ ಆರೋಗ್ಯವನ್ನು ಬಯಸುವ ಎಲ್ಲರೂ ಈ ಕಾರಣಕ್ಕಾಗಿ ಚಿಂತಿತರಾಗಿದ್ದಾರೆ.
ಮಿಸ್ಟರ್ ಮೋದಿ ತನ್ನ ಬೆಂಬಲಿಗರು ನಡೆಸುವ ಎಲ್ಲ ಅಪರಾಧಗಳ ಕುರಿತು ಮಾತಾಡಲೇಬೇಕೆಂದೇನೂ ಇಲ್ಲ. ಆದರೆ ಇತ್ತೀಚೆಗೆ ನಡೆಯುತ್ತಿರುವ ಹಿಂಸಾಕೃತ್ಯಗಳು ಮತ್ತು ಅತ್ಯಾಚಾರಗಳು ವೈಯಕ್ತಿಕ ದ್ವೇಷಗಳಿಂದ ನಡೆದಂತವುಗಳಲ್ಲ ಮತ್ತು ನಿತ್ಯ ನಡೆಯಬಹುದಾದ ಮಾಮೂಲು ಕ್ರಿಮಿನಲ್ ಕೃತ್ಯಗಳೂ ಅಲ್ಲ. ಈ ಹಿಂಸಾಚಾರಗಳು ಯೋಜನಾಬದ್ಧ ಸಂಘಟಿತ ಅಪರಾಧ ಕೃತ್ಯಗಳು. ಈ ಕೃತ್ಯಗಳ ಹಿಂದೆ ಉಗ್ರ ರಾಷ್ಟ್ರವಾದಿ ಗುಂಪುಗಳ ಸ್ಪಷ್ಟ ಕೈವಾಡಗಳಿವೆ. ಈ ಸಂಘಟಿತ ಜನವಿರೋಧಿ ಗುಂಪುಗಳು ಮಹಿಳೆಯರಲ್ಲಿ, ದಲಿತರಲ್ಲಿ, ಮುಸ್ಲಿಮರಲ್ಲಿ ಮತ್ತು ಬಡವರಲ್ಲಿ ಭಯದ ವಾತಾವರಣವನ್ನು ಮೂಡಿಸಲೆಂದೇ ಕಾರ್ಯಾಚರಣೆಗಿಳಿದಿವೆ.
ಮಿಸ್ಟರ್ ಪ್ರಧಾನ ಮಂತ್ರಿಯವರು ಸುತ್ತಲು ನೆರೆದಿರುವ ತನ್ನ ರಾಜಕೀಯ ಬೆಂಬಲಿಗರ ಕೃತ್ಯಗಳನ್ನು ನೋಡಿ ಸುಮ್ಮನಿರುವುದಲ್ಲ, ದೇಶದ ಎಲ್ಲ ಜನರ ಹಿತ ಕಾಪಾಡಲು ಮಾತಾಡಬೇಕಿದೆ ಮತ್ತು ಮುಂದಾಗಬೇಕಿದೆ.
ಸಂಪಾದಕೀಯ ಮಂಡಳಿ
ನ್ಯೂಯಾರ್ಕ್ ಟೈಮ್ಸ್, ಅಮೆರಿಕ
ಅನುವಾದ: ಎ ಎಸ್ ಪ್ರಭಾಕರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...