Homeಅಂಕಣಗಳುಮೋದಿಯ ಅವಸಾನ ಕರ್ನಾಟಕದಿಂದ ಆರಂಭವಾಗಲಿದೆ

ಮೋದಿಯ ಅವಸಾನ ಕರ್ನಾಟಕದಿಂದ ಆರಂಭವಾಗಲಿದೆ

- Advertisement -
- Advertisement -

ಎಚ್.ಎಸ್.ದೊರೆಸ್ವಾಮಿ |

ರಾಜಕೀಯದಲ್ಲಿ chaotic meltdown ಆಗುತ್ತಿದೆ. ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವದ ಉಳಿವಿಗಾಗಿ ಹೋರಾಡುತ್ತಿವೆ. ಈ ಹೋರಾಟ ಸ್ವಪ್ರತಿಷ್ಠೆಗೆ, ಅನಾಗರಿಕ ನಡವಳಿಕೆಗೆ ಎಡೆಮಾಡಿದೆ. ರಾಜಕೀಯ ವ್ಯಕ್ತಿಗಳು ಪ್ರಾಥಮಿಕ ಮಾನವೀಯ instinctಗಳನ್ನು ಗಾಳಿಗೆ ತೂರಿವೆ. ಅನಾಗರಿಕರಿಗಿಂತ ಕೀಳುಮಟ್ಟದಲ್ಲಿ ಚುನಾವಣಾ ಪ್ರಚಾರ ನಡೆಯುತ್ತಿದೆ. ಚುನಾವಣೆಗೆ ನಿಲ್ಲುವ ಅಭ್ಯರ್ಥಿ ಸಮಾಜಕ್ಕೆ ತನ್ನಿಂದ ಆಗಬೇಕಾಗಿರುವ ಸೇವೆಯ ಬಗೆಗೆ ಆಲೋಚನೆ ಮಾಡುತ್ತಿಲ್ಲ. ಸ್ವಲಾಭದ ಕಡೆಗೇ ಅವನ ಗಮನವೆಲ್ಲ ರಾಜಕೀಯ ನಾಯಕರು ರಾಜಕೀಯ ಮೌಲ್ಯಗಳನ್ನು ಕುರಿತು ಮಾತನಾಡುತ್ತಿಲ್ಲ. ವಕೀಲರು ಕಾನೂನನ್ನು ಎತ್ತಿ ಹಿಡಿಯುವವರಾಗಿ ಉಳಿದಿಲ್ಲ. ನ್ಯಾಯಾಧಿಪತಿಗಳು ಕೇಂದ್ರ ಸರ್ಕಾರದ ರಕ್ಷಣೆಗೆ ನಿಲ್ಲುತ್ತಿದ್ದಾರೆ. ಸರ್ಕಾರ ಸಿಬಿ, ಆದಾಯ ತೆರಿಗೆ ಇಲಾಖೆ ಮುಂತಾದವನ್ನು ತನ್ನ ಕೈಗೊಂಬೆ ಮಾಡಿಕೊಂಡು ತಮ್ಮ ರಾಜಕೀಯ ವಿರೋಧಿಗಳನ್ನು ಹಣ್ಣು ಮಾಡಲು ಬಳಸುತ್ತಿದೆ. ಶಾಸಕರು, ಪಾರ್ಲಿಮೆಂಟ್ ಸದಸ್ಯರು ಶಾಸನ ರೂಪಿಸುವ ಕೆಲಸ ಬಿಟ್ಟು ತಮ್ಮ ಕರ್ತವ್ಯಗಳನ್ನು ಮರೆತು, ಶಾಸನಸಭೆ ಮತ್ತು ಪಾರ್ಲಿಮೆಂಟ್ ಸಭೆಗಳು, ಕಾರ್ಯಕಲಾಪಗಳನ್ನು ನಡೆಸಲು ಬಿಡದೆ, ಜನದ್ರೋಹದ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ಹಿಂದೆಂದೂ ಕೇಳರಿಯದ ಮಟ್ಟದಲ್ಲಿ ಭಾರತದ ಎಲ್ಲ ಕಡೆಗಳಲ್ಲಿ ಹಿಂಸಾಚಾರ, ಗೂಂಡಾಗಿರಿ, ಮಹಿಳೆಯರ ಹಾಗೂ ಮಕ್ಕಳ ಮೇಲಿನ ಅತ್ಯಾಚಾರ, ಕೊಲೆ ನಡೆಯುತ್ತಲೇ ಇವೆ. ದೇಶ ಇಂತಹ ಘೋರ ವಿಪತ್ತುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಚುನಾವಣೆ ಬಂದಿದೆ.

ಚುನಾವಣೆ ಕರ್ನಾಟಕ ವಿಧಾನಸಭೆಗೆ ನಡೆಯುತ್ತಿರುವುದರಿಂದ, ಸೀಟು ಸಿಕ್ಕದವರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುತ್ತಿದ್ದಾರೆ. ಇವರಿಗೆ ನಾಚಿಕೆಯೂ ಇಲ್ಲ, ಮತದಾರರ ಭಯವೂ ಇಲ್ಲ. ಪಕ್ಷ ಇರುವುದು ಇವರ ದೃಷ್ಟಿಯಲ್ಲಿ ತಮ್ಮ ಸ್ವಾರ್ಥಸಾಧನೆಗೆ ಅವಕಾಶ ಮಾಡಿಕೊಡಲು ಮಾತ್ರ. ಮತದಾರನೂ ಕೂಡ ಇಂಗುತಿಂದ ಮಂಗನಂತೆ ಈ ಸಮಯಸಾಧಕ ಸ್ವಾರ್ಥಿಗಳ ಹುಚ್ಚಾಟವನ್ನು ಮೂಕಪ್ರೇಕ್ಷಕನಂತೆ ನೋಡುತ್ತಾ ಕೂತಿದ್ದಾನೆ.

ಸೀಟು ಆಕಾಂಕ್ಷಿಗಳ ಅನೀತಿಯುತ ಗೆಯ್ಮೆಯನ್ನು ತಡೆಗಟ್ಟಬೇಕಾದ ರಾಜಕೀಯ ಪಕ್ಷಗಳು, ಅವರಿಗೆ ಮಣೆ ಹಾಕಿ ಬರಮಾಡಿಕೊಳ್ಳುತ್ತಿವೆ. ಹೀಗೆ ಅನೀತಿಯನ್ನು ಪ್ರೋತ್ಸಾಹಿಸುವ ರಾಜಕೀಯ ಪಕ್ಷಗಳು ನಮಗೆ ಬೇಕೇ ಎಂದು ಮತದಾರ ವಿಚಾರ ಮಾಡಬೇಕು. ರಾಜಕೀಯ ಪಕ್ಷಗಳಿಗೆ ಸರಿಯಾದ ಪಾಠ ಕಲಿಸಬೇಕು. ಆದರೆ ನಮ್ಮ ಮತದಾರ ಗರಬಡಿದವನಂತೆ ಇದ್ದಾನೆ. ನಡೆಯುತ್ತಿರುವ ವಿದ್ಯಮಾನಗಳನ್ನು ವಿಶ್ಲೇಷಣೆ ಮಾಡಲಾರದಷ್ಟು ಜಡವಾಗಿ ಬಿಟ್ಟಿದ್ದಾನೆ.

ಯಶ್ವಂತ್‍ಸಿನ್ಹಾ, ಶತ್ರುಘ್ನಸಿನ್ಹಾ ಮೊದಲಾದ ನಿಷ್ಠಾವಂತ ಬಿಜೆಪಿ ನಾಯಕರು ಮೋದಿಯ ಹುಚ್ಚಾಟಗಳಿಗೆ ರೋಸಿಹೋಗಿ, ಪಕ್ಷವನ್ನು ಬಿಟ್ಟುಹೋಗುವ ನಿರ್ಧಾರಕ್ಕೆ ಬಂದಿದ್ದಾರೆ. ಅಷ್ಟೇ ಅಲ್ಲ, ಪಕ್ಷವನ್ನು ಸರಿದಾರಿಗೆ ತರಲು ಶಾಂತಿಯುತ ಹೋರಾಟ ನಡೆಸಲೂ ನಿರ್ಧರಿಸಿದ್ದಾರೆ.

ಯಡಿಯೂರಪ್ಪನವರಿಗೆ ಚುನಾವಣೆ ವಿಷಯದಲ್ಲಿ ಸಂಪೂರ್ಣ ಜವಾಬ್ದಾರಿ ವಹಿಸಲು ತೀರ್ಮಾನಿಸಿದ್ದ ಹೈಕಮಾಂಡ್, ಸೀಟು ಹಂಚಿಕೆಯಲ್ಲಿ ಪ್ರಮಾದವೆಸಗಿದ್ದ ಯಡಿಯೂರಪ್ಪನವರ ಅಧಿಕಾರವನ್ನೂ ಮೊಟಕು ಮಾಡಿ, ಯಡಿಯೂರಪ್ಪನವರ ಮಗನಿಗೆ, ಕರಂದ್ಲಾಜೆಯವರಿಗೆ ಸೀಟು ಕೊಡಲು ನಿರಾಕರಿಸಿದೆ. ಮೊದಲು ಎಲ್ಲಾ ಸೀಟುಗಳನ್ನು ಹಂಚಲು ಯಡಿಯೂರಪ್ಪನವರಿಗೆ ಸಂಪೂರ್ಣ ಅಧಿಕಾರ ಕೊಟ್ಟಿದ್ದ ಹೈಕಮಾಂಡ್ ಅದನ್ನು 40ಕ್ಕೆ ಇಳಿಸಿ, ಈಗ 16 ಸೀಟುಗಳನ್ನು ಮಾತ್ರ ತಮಗೆ ಬೇಕಾದವರಿಗೆ ನೀಡಲು ಅವಕಾಶ ಕೊಟ್ಟು ಉಳಿದದ್ದನ್ನು ತಾನೇ ಭರ್ತಿ ಮಾಡಿದೆ.

ಬಳ್ಳಾರಿ ಜನಾರ್ದನ ರೆಡ್ಡಿಯನ್ನು ಯಡಿಯೂರಪ್ಪನವರು ಬಿಜೆಪಿ ಚುನಾವಣಾ ಪ್ರಚಾರಕ್ಕೆ ಕರೆದಿದ್ದಕ್ಕಾಗಿ ಮೋದಿ ಮತ್ತು ಶಾ ಮುನಿಸಿಕೊಂಡಿದ್ದಾರೆ. ಮೋದಿ ಬಿಜೆಪಿ ಪರವಾಗಿ ಪ್ರಚಾರಕ್ಕೆ ಹೋಗುವ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ.

ಈ chaotic situation ನಲ್ಲಿ, ಮತದಾರ ತಾನೇನು ಮಾಡಬೇಕು ಎಂದು ತಿಳಿಯದೆ ದಿಗ್ಭ್ರಾಂತನಾಗಿದ್ದಾನೆ. ಮತದಾರನಿಗೆ ದಿಕ್ಸೂಚಿ ಮಾಡುವ ಕೆಲಸವನ್ನು ಯಾರೂ ಮಾಡುತ್ತಿಲ್ಲ.

ಈ ಕೆಲಸವನ್ನು ಈಗ ಕೋಮು ಸೌಹಾರ್ದ ವೇದಿಕೆಯಂತಹ ಸಂಸ್ಥೆ ಇತರ ಎಲ್ಲ ಪ್ರಗತಿಪರ ಕೋಮು ವಿರೋಧಿ ಶಕ್ತಿಗಳನ್ನೂ ಕೂಡಿಕೊಂಡು, ಸಂವಿಧಾನ ವಿರೋಧಿಗಳನ್ನು ಕೊಟ್ಟ ಮಾತಿನಂತೆ ನಡೆದುಕೊಳ್ಳದ ಮೋದಿಯನ್ನೂ ಪರಾಭವಗೊಳಿಸಲು ನಿರ್ಧರಿಸಿದ್ದಾರೆ.

ಭಾರತೀಯ ಜನತಾ ಪಕ್ಷಕ್ಕೆ ಈಗ ಮೋದಿ ಒಬ್ಬನೇ ನಾಯಕ. ಆ ನಾಯಕನ ಪರಿಸ್ಥಿತಿ ಏನಾಗಿದೆ ನೋಡಿ 2014ರ ಲೋಕಸಭೆ ಚುನಾವಣೆಗೆ ಮೋದಿ ಹಠಾತ್ತನೆ ಇಳಿದರು. ಅಂದಿನ ದಿನಗಳಲ್ಲಿ ಕಾಂಗ್ರೆಸ್ ಅನೇಕ ಹಗರಣಗಳಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಮತದಾರರಿಗೂ ಇದು ಬೇಸರ ತಂದಿತ್ತು. ಮೋದಿ ಕಾಂಗ್ರೆಸ್ಸಿನ ಹಗರಣಗಳನ್ನೆಲ್ಲ ಬಿಚ್ಚಿ ಮತ್ತು ಅದನ್ನು ಪ್ರಬಲ ಅಸ್ತ್ರವಾಗಿ ಚುನಾವಣೆಗೆ ಬಳಸಿಕೊಂಡರು. ರೋಸಿದ್ದ ಜನ ಕಾಂಗ್ರೆಸ್ಸಿನ ವಿರುದ್ಧವಾಗಿ ಮೋದಿಗೆ ಮತಹಾಕಿ ಗೆಲ್ಲಿಸಿದರು.

ಮೋದಿ ಆಡಳಿತವನ್ನು 4 ವರ್ಷಗಳಿಂದ ನೋಡುತ್ತಿರುವ ಮತದಾರನಿಗೆ ಭ್ರಮನಿರಸನ ಆಗಿದೆ. ಮೋದಿ ಹೆಜ್ಜೆಹೆಜ್ಜೆಗೂ ಮಾತು ತಪ್ಪಿದ್ದಾರೆ. ಕಾಳಹಣವನ್ನು 100 ದಿನಗಳ ಒಳಗೆ ಸ್ವಿಸ್‍ಬ್ಯಾಂಕಿನಿಂದ ತಂದು ಪ್ರತಿ ಬಡವನ ಹೆಸರಿನಲ್ಲೂ ಒಂದು ಉಳಿತಾಯ ಖಾತೆ ತೆರೆದು ಬ್ಯಾಂಕಿನಲ್ಲಿ ಅವರ ಹೆಸರಿಗೆ 15 ಲಕ್ಷ ರೂಪಾಯಿ ಹಾಕುವುದಾಗಿ ಹೇಳಿ ಬಡವರ ಮತ ಕಿತ್ತುಕೊಂಡರು. ಭಾರತದಲ್ಲಿ ಒಂದು ವರ್ಷದಲ್ಲಿ 5 ಲಕ್ಷ ಹುದ್ದೆಗಳನ್ನು ಸೃಷ್ಟಿ ಮಾಡಿ ಯುವಕರಿಗೆ ನೀಡುವುದಾಗಿ ಬೊಗಳೆಬಿಟ್ಟರು. ಅದೂ ಕೈಗೂಡಲಿಲ್ಲ. 1000 ಹಾಗೂ ಐದು ನೂರು ರೂಪಾಯಿ ನೋಟುಗಳನ್ನು ಅಪಮೌಲ್ಯ ಮಾಡಿ ಕಾಳಧನವನ್ನು ಹೊರತೆಗೆಯುವುದಾಗಿ ಹೇಳಿದರು. ಈ ಅಪಮೌಲ್ಯ ಮಾಡಿ ಹೊಸ 2000 ಹಾಗೂ 500 ರೂ.ಗಳ ನೋಟುಗಳನ್ನು ಪ್ರಿಂಟ್ ಮಾಡಿದ್ದು. ಕಾಳಹಣ ಸಂಗ್ರಹಿಸಿದ್ದ ಖದೀಮರು, ಕಪ್ಪುಹಣವನ್ನೆಲ್ಲ ಬಿಳಿಯ ಹಣ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಯಿತು. ರಾಷ್ಟ್ರೀಕೃತ ಬ್ಯಾಂಕುಗಳು ಈ ಕಾಳಹಣದ ಖದೀಮರಿಗೆ ತಮ್ಮ ಬಳಿ ಇದ್ದ ಕಪು ್ಪಹಣವನ್ನು ಬಿಳಿ ಹಣ ಮಾಡಿಕೊಳ್ಳುವುದಕ್ಕೆ ನೆರವಾದವು.

ಹೀಗಾಗಿ ಮೋದಿಯವರ ವರ್ಚಸ್ಸು ಕ್ಷೀಣವಾಯಿತು. ಅವರು ಬರೀ ಬಾಯ್ಬಡಕ ಎಂಬುದು ಜನತೆಗೆ ಈ ನಾಲ್ಕು ವರ್ಷದಲ್ಲಿ ಅರಿವಾಯಿತು.
ಮೋದಿ ಮೇಲಿನ ಪ್ರತೀಕಾರ ಕರ್ನಾಟಕದಿಂದ ಆರಂಭವಾಗಲಿದೆ. ಮೋದಿಗೆ ಇದು ಫೈನಲ್ಸ್. 2019ರಲ್ಲಿ ನಡೆಯುವ ಲೋಕಸಭೆ ಚುನಾವಣೆ ಅವರ ಭಾಗಕ್ಕೆ ಫೈನಲ್ಸ್. ಮೋದಿಯವರ ವಿರೋಧವಾಗಿ ರಾಜಕೀಯ ಪಕ್ಷಗಳ ಧ್ರುವೀಕರಣ ಈಗಾಗಲೇ ಆರಂಭವಾಗಿದೆ.

ಈ ಫೈನಲ್ಸ್‍ಗೆ ಮುಂಚೆಯೇ ಕರ್ನಾಟಕದಲ್ಲಿ ನಡೆಯುವ ವಿಧಾನಸಭೆಯ ಚುನಾವಣೆಯಲ್ಲಿ ಮೋದಿಗೆ ಶಾಕ್ ಕೊಡಲು ಕರ್ನಾಟಕ ಜನ ಸಂಕಲ್ಪ ಮಾಡಿದ್ದಾರೆ.

ಮೋದಿಯ ಅಲೆಯ ಅಬ್ಬರ ಇಳಿದು ಎಷ್ಟೋ ದಿನಗಳಾದವು. ಈಗ ಜನ ಅವರ ಬೊಗಳೆ ಮಾತುಗಳಿಗೆ ಬೇಸರಗೊಂಡಿದ್ದಾರೆ. ಬಿಜೆಪಿ ವಿರೋಧದ ಅಲೆ ಕರ್ನಾಟಕದ ಬಿಜೆಪಿಯನ್ನು ಅಪ್ಪಳಿಸಲು ಸನ್ನದ್ಧವಾಗಿದೆ.

ಮೋದಿ, ಅಮಿತ್ ಶಾ ಹೋದಲ್ಲೆಲ್ಲ ಕಪ್ಪುಬಾವುಟ ಪ್ರದರ್ಶನ ಆಗುತ್ತಿದೆ. ಜನಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಬಿಜೆಪಿಗೆ ವಿರುದ್ಧವಾಗಿ ಮತ ಹಾಕಲು ಬಡವರು, ಶ್ರಮಿಕರು, ಕಾರ್ಮಿಕರು, ದಲಿತರು, ನಿರುದ್ಯೋಗಿ ಯುವಕರು, ಸ್ತ್ರೀಯರು, ಮುಸ್ಲಿಮರು, ಕ್ರಿಶ್ಚಿಯನ್ನರು ಮತಾಂಧ ಬಿಜೆಪಿ ಹಿಂದುಗಳನ್ನುಳಿದು ಇತರ ಹಿಂದುಗಳು ಒಮ್ಮತದಿಂದ ಮೋದಿ ಹಠಾವ್ ಮಾಡಬೇಕೆಂದು ಸಂಕಲ್ಪ ಮಾಡಿದ್ದಾರೆ.

ಒಟ್ಟಿನಲ್ಲಿ ಹೇಳುವುದಾದರೆ ಕರ್ನಾಟಕದಲ್ಲಿ ಮೋದಿಯ ಮೋಡಿಗೆ ಒಳಗಾಗುವ ಜನರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಈ ಸಾರಿ ನಡೆಯುವ ಚುನಾವಣೆಯಲ್ಲಿ ಅದು ಪ್ರಕಟವಾಗಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...