Homeಮುಖಪುಟಶಾಮಣ್ಣ ಮತ್ತು ಇಬ್ರಾಹಿಂ ಸಾಹೇಬರು

ಶಾಮಣ್ಣ ಮತ್ತು ಇಬ್ರಾಹಿಂ ಸಾಹೇಬರು

- Advertisement -
- Advertisement -

| ಬಿ. ಚಂದ್ರೇಗೌಡ |

ಮರಿ ಹಾಕಿದ್ದ ಬೆಕ್ಕಿನಂತೆ ಓಡಾಡುತ್ತಿದ್ದ ಶಾಮಣ್ಣನವರಲ್ಲಿ ಲವಲವಿಕೆ ಸ್ವಲ್ಪ ತಗ್ಗಿದೆ. ಆದ್ದರಿಂದ ಶ್ರೀದೇವಕ್ಕನವರು ಶಾಮಣ್ಣನವರ ಬಗ್ಗೆ ಹಿಂದಿಗಿಂತ ಹೆಚ್ಚು ಕಾಳಜಿವಹಿಸಿ ಯಾವುದೇ ಸಭೆ ಸಮಾರಂಭಕ್ಕೆ ಜೊತೆಯಲ್ಲೇ ಬಂದು ಜೋಪಾನವಾಗಿ ಕರೆದುಕೊಂಡು ಹೋಗುತ್ತಿದ್ದಾರೆ. ಹಾಗಾಗಿ ದಿನಾಂಕ 14ರಂದು ನಡೆದ ಶಿವಮೊಗ್ಗದ ಕೊಡುಗೈದಾನಿ ಇಬ್ರಾಹಿಂ ಸಾಹೇಬರ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮಕ್ಕೆ ಶಾಮಣ್ಣ ಶ್ರೀದೇವಕ್ಕ ಜೊತೆಯಾಗೆ ಬಂದಿದ್ದರು. ಇಬ್ರಾಹಿಂ ಸಾಹೇಬರು ಕನ್ನಡದ ಸಾಂಸ್ಕøತಿಕ ಲೋಕದಲ್ಲಿ ಅಚ್ಚಳಿಯದ ನೆನಪನ್ನ ಬಿಟ್ಟು ಹೋಗಿದ್ದಾರೆ. 1992ರಲ್ಲಿ ಬೆಂಗಳೂರಲ್ಲಿ ನಡೆದ ಲಂಕೇಶ್-ಕಂಬಾರ, ಗಿರೀಶ್ ಕಾರ್ನಾಡರ ನಾಟಕೋತ್ಸವಕ್ಕೆ ಧನಸಹಾಯ ಮಾಡಿದವರು ಇಬ್ರಾಹಿಂ ಸಾಹೇಬರು. ಅಷ್ಟೇ ಅಲ್ಲ ಶಿವಮೊಗ್ಗದ ಅವರ ಮನೆ ಆವರಣ ಯಾಚಕರಿಂದ ತುಂಬಿರುತ್ತಿತ್ತು.

ಮದುವೆ, ಮುಂಜಿ, ದೇವಸ್ಥಾನಕ್ಕೆ ಬಣ್ಣ, ಗಣಪತಿ ಹಬ್ಬದ ಖರ್ಚು ಇದಲ್ಲದೆ ಪುಸ್ತಕ ಪ್ರಕಟಿಸುವ ಸಾಹಿತಿಗಳು, ರಾಜಕಾರಣಿ ನಾನಾ ತರದ ಸಂಸ್ಕøತಿಯವರು ಇಬ್ರಾಹಿಂ ಸಾಹೇಬರನ್ನು ಹೀರಿ ಬಿಸಾಡಿದರು. ಇವರ ಹೊಡೆತ ತಾಳಲಾರದೆ ತೀರ್ಥಹಳ್ಳಿಗೆ ಹೋಗಿ ನೆಲೆಸಿದರು. ಯಾಚಕರು ಅಲ್ಲಿಗೂ ದಾಳಿಯಿಟ್ಟರು. ಅಲ್ಲಿಂದ ಅವರು ತಮ್ಮ ಹುಟ್ಟೂರಾದ ಬಳ್ಳಾರಿ ಜಿಲ್ಲೆಯ ಹಿರೇಹಾಳಕ್ಕೆ ಹೋಗಿ ನೆಲೆಸಿದರು. ಅಲ್ಲಿ ಈ ಕೊಡುಗೈ ಕರ್ಣ ದಾನಮಾಡದ ಸ್ಥಿತಿಗೆ ಬಂದಿದ್ದರು. ಆದರೇನು ಇಬ್ರಾಹಿಂ ಸಾಹೇಬರ ಮನೆಗೆ ಹೋದವರು ಬರಿಗೈಲಿ ಹೋಗುವುದು ಅವರಿಗೇ ಅವಮಾನವೆಂದು ಭಾವಿಸಿ ಸಾಲಮಾಡಿ ದಾನ ಮಾಡತೊಡಗಿದರು. ಇಂತಹ ದಾನಶೂರ ಕರ್ಣನ ನೆನಪಿನ ಸಭೆಗೆ ಮೂವತ್ತು ಜನ ಬಂದರು. ಮನುಷ್ಯರು ಉಪಕಾರ ಸ್ಮರಣೆಯಿಲ್ಲದ ನೀಚರೆಂದು ಲಂಕೇಶ್ ಹೇಳಿದ್ದರು. ಆದರೆ ಇಬ್ರಾಹಿಂ ಸಾಹೇಬರು ಅದರ ಅರಿವಿದ್ದೂ ನಗುತ್ತಲೇ ಸಹಾಯ ಮಾಡಿದರು, ಮಾಡುತ್ತಲೇ ಹೊರಟುಹೋದರು.

ಈ ಸಮಯದಲ್ಲಿ ಕಡಿದಾಳು ಶಾಮಣ್ಣನವರು ಕುತೂಹಲ ಸಂಗತಿಯೊಂದನ್ನ ಹೇಳಿದರು. ಜೆ.ಹೆಚ್.ಪಟೇಲರು ಹಂಪಿ ಯೂನಿವರ್ಸಿಟಿಗೆ ಇಬ್ರಾಹಿಂ ಸಾಹೇಬರು ಮತ್ತು ಕಡಿದಾಳು ಶಾಮಣ್ಣನವರನ್ನ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಿದರು. ಸತತ ನಾಲ್ಕು ವರ್ಷಗಳ ಕಾಲ ಒಂದು ಸಭೆಗೂ ತಪ್ಪಿಸದಂತೆ ಇಬ್ರಾಹಿಂ ಸಾಹೇಬರು ಶಾಮಣ್ಣನವರನ್ನ ತಮ್ಮ ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಶಾಮಣ್ಣ ಸಂಗೀತ ಪ್ರೇಮಿಯೆಂದು ಗೊತ್ತಿದ್ದ ಇಬ್ರಾಹಿಂ ಸಾಹೇಬರು ತಮ್ಮ ಕಾರಿನಲ್ಲಿ ಸಂಗೀತದ ಸೀಡಿಗಳನ್ನು ತುಂಬಿಕೊಂಡು. ಅಲ್ಲದೆ ರಾಗಗಳ ಪರಿಚಯವನ್ನ ಮಾಡಿಸಿದರಂತೆ. ನಾಲ್ಕು ವರ್ಷದ ಹಂಪಿ ಪ್ರಯಾಣ ಅದೊಂದು ಸಂಗೀತದ ರಸದೌತಣದ ಪ್ರಯಾಣವಾಗಿತ್ತಂತೆ. ಮರುದಿನ ಶಾಮಣ್ಣನವರ ಸಹೋದರ ಗೋಪಾಲ್ ಮನೆಯಲ್ಲಿ ಸಿಕ್ಕ ಶಾಮಣ್ಣ ಹಿಂದಿನ ದಿನವನ್ನು ಮುಂದುವರಿಸಿದರು.

ಹಾಗೆ ನೋಡಿದರೆ ಶಾಮಣ್ಣನವರ ಬದುಕಿನಲ್ಲಿ ಸಂಗೀತ ಅಧಿಕೃತವಾಗಿ ಪ್ರವೇಶ ಪಡೆದದ್ದು ಮೈಸೂರಲ್ಲಿ ನಡೆದ ರವಿಶಂಕರ್ ಸಿತಾರ್ ಮತ್ತು ಅಲಿ ಅಕ್ಬರ್ ಖಾನ್‍ರವರ ಜುಗಲ್‍ಬಂದಿ ಕಾರ್ಯಕ್ರಮ ಕೇಳಿದ ನಂತರ. ಅದೇ ದಿನ ರಾಜೀವ ತಾರಾನಾಥ್ ಕೂಡ ಆ ಕಛೇರಿ ಕೇಳಿ ಸಂಗೀತದ ಭಾವಸಮಾದಿಗೆ ಒಳಗಾಗಿ ಜೊತೆಯಲ್ಲಿ ಬಂದವರನ್ನ ಮರೆತದ್ದು ಮತ್ತು ನಂತರ ಸರೋದ್ ಮಾಂತ್ರಿಕನಾದ ಆಲಿ ಅಕ್ಬರ್ ಖಾನ್ ಹುಡುಕುತ್ತ ಬಾಂಬೆಗೆ ಹೋದದ್ದು. ಆಶ್ಚರ್ಯವೆಂದರೆ ಶಾಮಣ್ಣನವರೂ ಹೋಗಿಬಿಟ್ಟರು. ಅದಾಗಲೇ ಸರೋದ್ ಮತ್ತು ಸಿತಾರ್‍ನ ನಾದಮೋಹದೊಳಗೆ ಸಿಲುಕಿದ ತೇಜಸ್ವಿಯವರು ನಾನು ಸಿತಾರ್ ಕಲಿಯುತ್ತೇನೆ, ನೀವು ಸರೋದ್ ಕಲಿಯಿರೆಂದು ಶಾಮಣ್ಣನವರಿಗೆ ಹೇಳಿದ್ದು ಕಾರಣವಾಗಿ ಶಾಮಣ್ಣ ಬಾಂಬೆಗೆ ಹೋದರು. ಅಲ್ಲಿಗೋಗಿ ನೋಡಿದರೆ ಚಿಕ್ಕಮನೆಯೊಂದರಲ್ಲಿ ಮಧ್ಯೆ ಒಂದು ಗೋಡೆ. ಆ ಕಡೆ ಅಡಿಗೆ ಮನೆ ಈ ಕಡೆ ಪುಟ್ಟ ಹಾಲು. ಅದಕ್ಕೆ ಅಟ್ಯಾಚ್ ಆದಂತೆ ಟಾಯ್ಲೆಟ್. ಆ ಮನೆಯಲ್ಲಿ ಆಲಿ ಅಕ್ಬರ್ ಖಾನ್‍ರವರಿಂದ ಸಂಗೀತ ಹೇಳಿಸಿಕೊಳ್ಳಲು ಹುಡುಗರು ಬರುತ್ತಿದ್ದರು. ಅವರೆಲ್ಲಾ ಹೊರಟುಹೋದರೆ ಶಾಮಣ್ಣ ಅಲ್ಲೇ ಉಳಿಯುತ್ತಿದ್ದರು. ತಮ್ಮ ಜಾತಿಯವನಲ್ಲ, ಕಳ್ಳುಬಳ್ಳಿಯವನೂ ಅಲ್ಲದ ಹುಡುಗ ಸಂಗೀತದ ಬೆನ್ನು ಹತ್ತಿ ಬಂದಿದ್ದಾನೆ, ಸರಿಯಾಗಿ ಭಾಷೆಯೂ ಬರುತ್ತಿಲ್ಲ. ಅಂತಹ ಶಾಮಣ್ಣನನ್ನ ತಮಗೇ ಮಲಗಲು ಜಾಗವಿಲ್ಲದ ಮನೆಯಲ್ಲಿ ಆಶ್ರಯ ಕೊಟ್ಟು ಸರೋದ್ ಹೇಳಿಕೊಟ್ಟ ಆಲಿ ಅಕ್ಬರ್‍ಖಾನ್ ಮತ್ತು ಅವರ ಶ್ರೀಮತಿಯವರ ಉದಾತ್ತ ನಡವಳಿಕೆ ನೆನಸಿಕೊಂಡರೆ ಈ ಭರತ ಖಂಡದಲ್ಲಿ ಎಂತೆಂತಹ ಮೇಧಾವಿಗಳು ಆಗಿಹೋದರು ಅನ್ನಿಸುತ್ತದೆ. ಸುದೈವಕ್ಕೆ ಆಲಿ ಅಕ್ಬರ್‍ಖಾನ್‍ರಿಗೆ ಎರಡು ಗಂಡುಮಕ್ಕಳಿದ್ದು, ಅವು ಶಾಮಣ್ಣನವರಿಗೆ ಅಂಟಿಕೊಂಡವು. ಶಾಮಣ್ಣನವರಿಗೆ ಡ್ರೈವಿಂಗ್ ಬರುತ್ತಿದ್ದುದು ಅನುಕೂಲವಾಗಿತ್ತು. ಆಗಾಗ್ಗೆ ರವಿಶಂಕರ್ ಮತ್ತು ಅವರ ಶ್ರೀಮತಿ ಅನ್ನಪೂರ್ಣದೇವಿಯವರನ್ನ ಅವರ ಮನೆಗೆ ತಲುಪಿಸಲು, ಕರೆದುಕೊಂಡು ಬರಲು ಶಾಮಣ್ಣ ಬೇಕಾಗಿತ್ತು. ಅಲ್ಲಾವುದ್ದೀನ್ ಖಾನ್, ಅಲಿ ಅಕ್ಬರ್ ಖಾನರ ತಂದೆ. ತಮ್ಮ ಮಗಳಿಗೆ ಅನ್ನಪೂರ್ಣ ಎಂದು ಹೆಸರಿಟ್ಟು ರವಿಶಂಕರ್‍ಗೆ ಮದುವೆ ಮಾಡಿಕೊಟ್ಟಿದ್ದರು. ಹಾಗೇ ತಮ್ಮ ಮಗ ಅಲಿ ಅಕ್ಬರ್ ಖಾನ್ ಹಿಂದೂ ಹುಡುಗಿಯನ್ನ ಮದುವೆಯಾಗಿದ್ದರು. ಇವರನ್ನೆಲ್ಲಾ ಬಂಧಿಸಿದ್ದು ಸಂಗೀತ. ಹಾಗೆನೋಡಿದರೆ ಈ ಸಂಗೀತ ಲೋಕದಲ್ಲಿ ಮುಳುಗಿದವರಿಗೆ ದೇಶ, ಅದರ ಆಡಳಿತ, ಪ್ರಧಾನಮಂತ್ರಿ, ದೇಶದ ಆಗುಹೋಗು ಇದಾವುದು ಅರಿವಿಗೇ ಬರುವುದಿಲ್ಲ.

ಅಲಿ ಅಕ್ಬರ್ ಖಾನ್ ಸಂಗೀತ ಕಛೇರಿಗೆ ಬಂದರೆ ತಮ್ಮ ಸರೋದ್ ಬಿಟ್ಟು ಇನ್ನೇನೂ ನೋಡುತ್ತಿರಲಿಲ್ಲ. ಬೇರೆ ಮಾತೇ ಆಡದ ಅವರು ಅಗತ್ಯವಿದ್ದಷ್ಟು ಮಾತನಾಡಿ ಒಂದಿಷ್ಟು ಸರೋದ್ ಕಲಿಸಿದರಂತೆ. ಆ ನಂತರ ಅಮೆರಿಕದ ಯೂನಿವರ್ಸಿಟಿಯೊಂದಕ್ಕೆ ಇಂಡಿಯನ್ ಮ್ಯೂಜಿಕ್ ಶಾಖೆಯ ನಿರ್ದೇಶಕರಾಗಿ ಹೊರಟು ಹೋದರು. ಇತ್ತ ಅವರ ಶ್ರೀಮತಿಯವರು ಶಾಮಣ್ಣನವರಿಗೆ ಗುರುಪತ್ನಿಯ ಕಾಣಿಕೆಯಾಗಿ ಎರಡು ಜೊತೆ ಜುಬ್ಬ ಪೈಜಾಮ್ ಹೊಲಿಸಿಕೊಟ್ಟು ನಮ್ಮ ನೆನಪಾಗಿ ಇರಲಿ ಎಂದು ಹೇಳಿ ಊರು ತಲುಪುವಷ್ಟು ಗಾಡಿ ಚಾರ್ಜು ಕೊಟ್ಟು ಕಳಿಸಿದ್ದರು. ಅವರು ಕೊಟ್ಟ ಜುಬ್ಬ ಇನ್ನೂ ಇದೆ ಎಂದು ತಣ್ಣಗೆ ಹೇಳಿದ ಶಾಮಣ್ಣನವರ ಕಣ್ಣು ತೇವವಾದಂತೆ ಕಾಣಿಸಿದವು. ಇಂತಹ ಅನುಭವದ ಮತ್ತು ಶ್ರೀಮಂತಿಕೆಯ ನೆನಪುಗಳನ್ನು ಹೊಂದಿರುವ ಶಾಮಣ್ಣನವರ ಮೇಲೆ ಮೂರು ಪುಸ್ತಕ, ಒಂದು ನಾಟಕ ಬಂದಿದ್ದರೂ ಅವರ ಪಕ್ಕ ಕುಳಿತು ಆಲಿಸಿದರೆ ಇನ್ನಷ್ಟು ಅಪೂರ್ಣ ನೆನಪುಗಳು ಅನಾವರಣಗೊಳ್ಳಬಹುದು. ನ್ಯಾಯಪಥ ಪತ್ರಿಕೆಗೆ ಎರಡು ವರ್ಷದ ಚಂದಾ ಹಣದ ಚೆಕ್ಕನ್ನು ಶ್ರೀದೇವಕ್ಕ ಕೈಗಿತ್ತಾಗ ಶಾಮಣ್ಣ ಮತ್ತು ನಾನು ವಾಸ್ತವಕ್ಕಿಳಿದೆವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...