Homeಕರ್ನಾಟಕಪಕ್ಷಾಂತರ ನಿಷೇಧ ಕಾಯ್ದೆ: ಸ್ಪೀಕರ್ v/s ಸುಪ್ರೀಂ ಕೋರ್ಟ್

ಪಕ್ಷಾಂತರ ನಿಷೇಧ ಕಾಯ್ದೆ: ಸ್ಪೀಕರ್ v/s ಸುಪ್ರೀಂ ಕೋರ್ಟ್

- Advertisement -
- Advertisement -

| ರಾಜಲಕ್ಷ್ಮಿ ಅಂಕಲಗಿ |
ವಕೀಲರು, ಕರ್ನಾಟಕ ಹೈಕೋರ್ಟ್

ಬಹುಶಃ ಈ ಲೇಖನ ಪ್ರಕಟವಾಗುವಷ್ಟರಲ್ಲಿ ಕರ್ನಾಟಕದ ರಾಜಕೀಯದ ರಮ್ಮಿ ಆಟ ಒಂದು ಹಂತಕ್ಕೆ ಬಂದಿರುತ್ತದೆ. ಅದ್ಯಾಕೋ ‘ರಾಜಕೀಯ ದೊಂಬರಾಟ’ ಎಂದು ಕರೆದು, ಪ್ರಾಣ ಒತ್ತೆಯಿಟ್ಟು ಹೊಟ್ಟೆಪಾಡಿಗಾಗಿ ದೊಂಬರಾಟ ಮಾಡುವವರನ್ನು ಅವಮಾನಿಸಲು ಮನಸ್ಸು ಬರುತ್ತಿಲ್ಲ. ಕೆಲವೊಂದು ಟಿ.ವಿ ಚಾನೆಲ್‍ಗಳು ಹಾಗೂ ಪತ್ರಿಕೆಗಳು ಇವರನ್ನು ರೆಬೆಲ್ ನಾಯಕರು ಎಂದು ಕರೆದಾಗ ಆ ರೆಬೆಲ್ ಎಂಬ ಶಬ್ದಕ್ಕೇನಾದರೂ ಮಾತು ಬರುತ್ತಿದ್ದರೆ ಮಾನಹಾನಿ ಕೇಸು ಹಾಕುತ್ತಿತ್ತು. ಈ ಕೋಟ್ಯಾಧಿಪತಿ ಎಂಎಲ್‍ಎಗಳನ್ನು ಕುರಿಗಳಂತೆ ಕೂಡಿಹಾಕಿ ಕಾಯುತ್ತಿರುವುದನ್ನು ನೋಡಿದ ಜನ ಅಸಹ್ಯಪಡುವುದರ ಜೊತೆಗೆ ನೂರಾರು ಪ್ರಶ್ನೆ ಕೇಳುತ್ತಿದ್ದಾರೆ. ಅದ್ಯಾವ ಪ್ರಲೋಭನೆ ಅಥವಾ ಭಯ ಇವರನ್ನು ಹೀಗೆ ಮಾಡಲು ಪ್ರೇರೇಪಿಸಿರಬಹುದು ಎಂಬುದು ಗೂಢವಾಗಿದೆ. ಒಟ್ಟಿನಲ್ಲಿ ಒಂದು ದೇಶ ಒಂದು ಪಕ್ಷ ಎಂಬ ಸಿದ್ಧಾಂತ ತಂದು ವ್ಯವಸ್ಥಿತವಾಗಿ ವಿರೋಧ ಪಕ್ಷಗಳನ್ನು ನಿರ್ನಾಮಗೊಳಸಿ ಪ್ರಜಾತಂತ್ರವನ್ನು ಅಣುಕು ಯಂತ್ರವನ್ನಾಗಿ ಮಾಡುವ ಹುನ್ನಾರ ನಿಚ್ಚಳವಾಗಿದೆ.

ಸ್ವಾತಂತ್ರ್ಯನಂತರ ಈ ಪಕ್ಷಾಂತರ ಮಾಡುವ ಅವಕಾಶವಾದಿ ರಾಜಕಾರಣಿಗಳು ಹಾಗೂ ನಿರಂತರ ಅಸ್ಥಿರ ಸರ್ಕಾರಗಳು ಇವನ್ನು ಒಂದು ನಿಯಂತ್ರಣದಲ್ಲಿಡುವ ಉದ್ದೇಶದಿಂದ 1985ರಲ್ಲಿ ರಾಜೀವ್‍ಗಾಂಧಿ ಸರ್ಕಾರ ಸಂವಿಧಾನಿಕ ತಿದ್ದುಪಡಿ ಮಾಡುವ ಮೂಲಕ ಹತ್ತನೇ ಶೆಡ್ಯೂಲನ್ನು ಸೇರಿಸಿ ‘ಪಕ್ಷಾಂತರ ನಿಷೇಧ ಕಾಯ್ದೆ’ಯನ್ನು ಜಾರಿಗೆ ತಂದಿತು. ಅದರ ಉದ್ದೇಶ ನಿಚ್ಚಳವಾಗಿತ್ತು.
* ಸಂಸದರ ರಾಜಕೀಯ ಪಕ್ಷಾಂತರ ತಡೆಯುವುದು ಹಾಗೂ ಎರಡು ಕಾರಣಗಳಿಗಾಗಿ ಅವರ ಸದಸ್ಯತ್ವವನ್ನು ರದ್ದುಗೊಳಿಸುವುದು.
* ಅಕಸ್ಮಾತ್ ಸದಸ್ಯರು ತಮ್ಮ ಇಚ್ಛೆಯಿಂದ ತಮ್ಮ ಪಕ್ಷದ ಸದಸ್ಯತ್ವವನ್ನು ಬಿಟ್ಟುಕೊಟ್ಟರೆ
* ಸಂಸದ ತನ್ನ ಪಕ್ಷದ ನಿರ್ದೇಶನಗಳನ್ನು ಉಲ್ಲಂಘಿಸಿ ಮತದಾನ ಮಾಡಿದರೆ

ಇಲ್ಲಿ ಪಕ್ಷದ ಸದಸ್ಯತ್ವವನ್ನು ತೊರೆಯುವುದನ್ನು ರಾಜೀನಾಮೆ ಯೊಂದಿಗೆ ಹೋಲಿಸಲು ಬರುವುದಿಲ್ಲ. ಅವೆರಡೂ ಬೇರೆಯದು. ಆದರೆ ಇದನ್ನು ಹೊರತುಪಡಿಸಿಯೂ ಸಂಸದರ ನಡತೆಯನ್ನು ನೋಡಿ ಸ್ಪೀಕರ್ ತನ್ನ ವಿವೇಚನೆಯನ್ನು ಬಳಸಿ ಅಂತಹ ನಡೆಯನ್ನು ಪಕ್ಷ ವಿರೋಧಿ ಎಂದು ಪರಿಗಣಿಸಿದರೆ ಅವರ ಸದಸ್ಯತ್ವವನ್ನು ರದ್ದುಗೊಳಿಸಬಹುದು. ಆದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕೇವಲ ಶಿಸ್ತಿನ ಹೆಸರಿನಲ್ಲಿ ಯಾರ ಅಭಿಪ್ರಾಯಗಳನ್ನೂ ಕಟ್ಟಿಹಾಕಲು ಆಗದು. ಆದ್ದರಿಂದಲೇ ಕಾಯ್ದೆಯಲ್ಲಿ ಭಿನ್ನಾಭಿಪ್ರಾಯಗಳನ್ನೂ ಪರಿಗಣಿಸಿ ಅದಕ್ಕೆ ದಾರಿಯನ್ನು ಒದಗಿಸಲಾಗಿದೆ. ಅಕಸ್ಮಾತ್ ಒಂದು ರಾಜಕೀಯ ಪಕ್ಷದ 2/3ರಷ್ಟು ಸದಸ್ಯರು ಒಟ್ಟಾರೆಯಾಗಿ ಪಕ್ಷತೊರೆದು ಮತ್ತೊಂದು ಪಕ್ಷದೊಂದಿಗೆ ವಿಲೀನ ಹೊಂದಲು ಅವಕಾಶ ಮಾಡಿಕೊಡಲಾಗಿದೆ. ‘ಸ್ಪೀಕರ್ ತನ್ನ ವಿವೇಚನೆ ಬಳಸಿ’ ಎಂದ ಕೂಡಲೇ ಅವರ ತೀರ್ಮಾನದ ಬಗ್ಗೆ ಪರ ವಿರೋಧ ನಿಲುವುಗಳು ಬರುವುದಕ್ಕೆ ಪ್ರಾರಂಭಿಸುತ್ತವೆ. ಒಂದು ಸಾಂವಿಧಾನಿಕ ಹುದ್ದೆ ಅಲಂಕರಿಸಿದ ಮೇಲೆ ತಮ್ಮ ಮಾತೃ ಪಕ್ಷವನ್ನು ಮರೆತು ನಿಷ್ಪಕ್ಷವಾಗಿ ನಡೆದುಕೊಂಡ ಉದಾಹರಣೆಗಳು ವಿರಳವಾಗಿರುವಾಗ ಈ ಸಂಶಯಗಳು ಸಹಜ. ಹಾಗಾದರೆ ಸ್ಪೀಕರ್ ವಿವೇಚನೆ ಸರಿಯೋ ತಪ್ಪೋ ಎಂದು ತೀರ್ಮಾನಿಸುವ ಅಧಿಕಾರ ಯಾರಿಗೆ ಇದೆ ಎಂಬ ಪ್ರಶ್ನೆ ಸಹಜ. ಈ ವಿಷಯಕ್ಕೆ ಕುರಿತಂತೆ ಸುಪ್ರೀಂಕೋರ್ಟ್ ಆಗಾಗ ನೀಡಿದ ತೀರ್ಮಾನಗಳ ಮುಖಾಂತರ ಇದು ಸ್ಪೀಕರ್ ಅವರಿಗೆ ಮಾತ್ರ ಸೇರಿದ ವಿಚಾರ ಎಂದು ಸಾರಿ ಹೇಳಿದೆ. ಆದರೆ ಸ್ಪೀಕರ್ ತಮ್ಮ ಕಾರಣಗಳನ್ನು ಸರಿಯಾಗಿ ವಿವರಿಸಬೇಕು.

ಈ ಕಾಯ್ದೆ ಬಂದ ನಂತರ ಸಣ್ಣಪ್ರಮಾಣದ ಪಕ್ಷಾಂತರ ಹಾಗೂ ರಾಜಕೀಯ ಅಸ್ಥಿರತೆಗಳು ಕಡಿಮೆ ಆಗಿವೆಯಾದರೂ ಸಾಮೂಹಿಕ ಗುಳೆ ನಿಂತಿಲ್ಲ. ಈ ನಿಟ್ಟಿನಲ್ಲಿ ನೋಡಿದರೆ ಕಾಯ್ದೆಯು ಸಫಲತೆ ಕಂಡಿದೆ ಎನ್ನಬಹುದು.

ಸುಪ್ರೀಂ ಕೋರ್ಟ್ ಸದಸ್ಯರ ಸದಸ್ಯತ್ವ ಅಮಾನ್ಯಗೊಳಿಸುವ ವಿಷಯಗಳಲ್ಲಿ ಬಹುತೇಕ ನಿರ್ಲಿಪ್ತ ಧೋರಣೆ ಹೊಂದಿದೆ. ಇನ್ನು ಕೆಲವು ಸಲ ಕೆಲವೊಂದು ನಿರ್ದೇಶನಗಳನ್ನು ಮಾತ್ರ ನೀಡಿ ತೀರ್ಪು ನೀಡುವುದರಿಂದ ಹೊರಗುಳಿದಿದೆ. ಇದು ಸಂವಿಧಾನ ಬದ್ಧವಾದ ನಡೆಯೂ ಹೌದು. ಏಕೆಂದರೆ ಸಂವಿಧಾನದಲ್ಲಿ ಸ್ಪೀಕರ್ ಅವರ ಅಧಿಕಾರ ಹಾಗೂ ಕಾರ್ಯವ್ಯಾಪ್ತಿಯನ್ನು ನಿರ್ದಿಷ್ಟವಾಗಿ ವಿವರಿಸಿದಾಗ ಆ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂಬ ಕೋರ್ಟಿನ ನಿಲುವು ಸರಿ. ಆದರೆ ಸುಪ್ರೀಕೋರ್ಟ್‍ನ ಮುಂದೆ ಆಗಾಗ್ಗೆ ಅನೇಕ ದ್ವಂದ್ವಗಳು ಎದುರಾಗುತ್ತಿರುತ್ತವೆ.

ತಮಿಳುನಾಡಿನ ಎಐಡಿಎಂಕೆಯ ಇ.ಪಳನಿಸ್ವಾಮಿ ಸರ್ಕಾರಕ್ಕೆ ಬೆಂಬಲಿಸಲು ನಿರಾಕರಿಸಿದ 18 ಸದಸ್ಯರನ್ನು ರಾಜ್ಯಪಾಲರು ಅಮಾನ್ಯ ಮಾಡಿದಾಗ ಆ ವಿಷಯ ಹೈಕೋರ್ಟಿನ ಮುಂದೆ ಬಂತು. ಆಗ ಕೋರ್ಟು, ಒಂದು ಪಕ್ಷದ ನಾಯಕನೆಂದರೆ ಅವನೊಬ್ಬ ವ್ಯಕ್ತಿ ಮಾತ್ರವೇ ಅಥವಾ ಅವನೇ ಪಕ್ಷವೇ? ಎಂಬ ಪ್ರಶ್ನೆ ಎತ್ತಿತ್ತು. ಇನ್ನು ಕೇವಲ ತಮ್ಮ ಪಕ್ಷದ ಕಾರ್ಯವೈಖರಿಯನ್ನು ಪ್ರಶ್ನಿಸಿದ ಮಾತ್ರಕ್ಕೆ ಅವನನ್ನು ಶಿಸ್ತಿನ ಹೆಸರಿನಲ್ಲಿ ಅಮಾನ್ಯ ಮಾಡುವುದು ಎಷ್ಟು ಸರಿ? ಈ ಪ್ರಶ್ನೆಗಳು ನೈಜವಾದರೂ ನಾವು ದಿನನಿತ್ಯ ನೋಡುವ ಈ ಪಕ್ಷಾಂತರಿಗಳಿಗೆ ಇವು ಅನ್ವಯಿಸುತ್ತವಾ ಎಂಬುದು ಬಹುದೊಡ್ಡ ಪ್ರಶ್ನೆ.

ಬಹುಶಃ ಸೈದ್ಧಾಂತಿಕ ಕಾರಣಗಳಿಗಾಗಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ ಹೊರನಡೆದ, ಇಲ್ಲವೇ ರಾಜೀನಾಮೆ ನೀಡಿದ ರಾಜಕಾರಣಿಗಳನ್ನು ಈಗ ಸಿನಿಮಾಗಳಲ್ಲಿ ಮಾತ್ರ ನೋಡಬಹುದು.

ನಮಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲ ಬಿಡುತ್ತಿಲ್ಲ ಎಂದು ಎಂಎಲ್‍ಎಗಳು ನೆಪ ಹೇಳುವಾಗ ‘ಯಾರ ಅಭಿವೃದ್ಧಿ’ ಎಂದು ಜನ ಮಾತಾಡುವುದು ಸರಿಯಾಗೇ ಇದೆ. ಮುಲಾಯಂ ಸಿಂಗ್ ಪಕ್ಷದ ಸದಸ್ಯನೊಂದಿಗೆ ಸೇರಿ 2007ರಲ್ಲಿ ಮಾಯಾವತಿ ಸರ್ಕಾರದ ವಿರುದ್ಧ ಕೆಲ ಸದಸ್ಯರು ರಾಜ್ಯಪಾಲರನ್ನು ಭೇಟಿ ಮಾಡಿ ಬಿಎಸ್‍ಪಿ ಸರ್ಕಾರವನ್ನು ವಜಾಗೊಳಿಸುವಂತೆ ಕೇಳಿದಾಗ ಅಂಥ ಸದಸ್ಯರನ್ನು ಪಕ್ಷದಿಂದ ಹೊರಹಾಕಲಾಯಿತು. ಆ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‍ಗೆ ಸದಸ್ಯರು ಹೋದಾಗ ‘ಅವರ ನಡೆ ಐಚ್ಛಿಕವಾಗಿ ಪಕ್ಷದ ಸದಸ್ಯತ್ವವನ್ನು ತೊರೆದಿದ್ದಕ್ಕೆ ಸಮ’ ಎಂದು ಹೇಳಿ ಕೋರ್ಟು ರಾಜ್ಯಪಾಲರ ತೀರ್ಪನ್ನು ಎತ್ತಿ ಹಿಡಿದಿತ್ತು. ಆದರೆ 2011ರಲ್ಲಿ ಬಿ.ಎಸ್.ಯಡಿಯೂರಪ್ಪ ಕೇಸಿನಲ್ಲಿ ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಅನೇಕರ ಸದಸ್ಯತ್ವ ಅಮಾನ್ಯ ಮಾಡಿದ ರಾಜ್ಯಪಾಲರ ತೀರ್ಪನ್ನು ತಳ್ಳಿಹಾಕಿತ್ತು. ಹಾಗೆ ಮಾಡುವಾಗ ಪಕ್ಷದಲ್ಲಿನ ಸ್ವಜನಪಕ್ಷಪಾತ, ದುರಾಡಳಿತ ಯಾವುದನ್ನು ಅವರು ನಿರಾಕರಿಸದೆ ಇದ್ದುದರಿಂದ ಪ್ರತಿಕೂಲ ಅನುಮಾನ (adverse inference) ವ್ಯಕ್ತಪಡಿಸಿ ತೀರ್ಮಾನ ಕೈಗೊಂಡಿತ್ತು. ಇನ್ನು ಮುಖ್ಯವಾಗಿ 2/3 ಸದಸ್ಯರು ಒಂದು ಪಕ್ಷ ತೊರೆದು ಮತ್ತೊಂದು ಪಕ್ಷದೊಂದಿಗೆ ವಿಲೀನ ಹೊಂದಿದಾಗ ಅದು ಪಕ್ಷದ ತೀರ್ಮಾನವಾಗಿರದೆ ಕೇವಲ ಹೊರನಡೆದ ಸದಸ್ಯರ ತೀರ್ಮಾನ ಮಾತ್ರ ಆದಾಗ ಅದನ್ನು ಪಕ್ಷದ ವಿಲೀನ ಎನ್ನಲು ಬರುವುದಿಲ್ಲ. ಅದು ಕೇವಲ ಆ ಸದಸ್ಯರ ವಿಲೀನ ಮಾತ್ರ. ಹಾಗಿದ್ದಾಗ ಇಂತಹ ಸನ್ನಿವೇಶವನ್ನು ಹೇಗೆ ಅರ್ಥೈಸುತ್ತಾರೆ ಎಂಬುದು ಕೂಡ ಒಂದು ದ್ವಂದ್ವವೇ.

ಒಂದು ಸ್ಥಿರತೆ ಹಾಗೂ ಶಿಸ್ತು ತರಲು ಜಾರಿಗೆ ಬಂದ ಈ ಕಾಯ್ದೆ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂಬುದು ಜನರ ಎದುರಿಗೆ ಇದೆ. ಒಟ್ಟಿನಲ್ಲಿ ಈ ರಾಜಕೀಯ ರಮ್ಮಿ ಆಟದಲ್ಲಿ ಆಗಬಹುದಾದ ಸಂಯೋಜನೆಗಳಿಗೆ ಅಂತ್ಯವೇ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...